ExpEYES/C3/Characteristics-of-Sound-Waves/Kannada

From Script | Spoken-Tutorial
Revision as of 11:40, 18 September 2017 by Pratik kamble (Talk | contribs)

Jump to: navigation, search
Time Narration
00:01 ನಮಸ್ಕಾರ. Characteristics of Sound Waves (ಕ್ಯಾರೆಕ್ಟರಿಸ್ಟಿಕ್ಸ್ ಆಫ್ ಸೌಂಡ್ ವೇವ್ಸ್) ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:08 ಈ ‘ಟ್ಯುಟೋರಿಯಲ್’ನಲ್ಲಿ, ನಾವು:
ಶಬ್ದ ತರಂಗವನ್ನು ಹೇಗೆ ರಚಿಸುವುದು
ಒಂದು ಶಬ್ದಮೂಲದ ಫ್ರಿಕ್ವೆನ್ಸಿ ರಿಸ್ಪಾನ್ಸ್ (ಆವರ್ತನ ಪ್ರತಿಕ್ರಿಯೆ)
ಶಬ್ದದ ವೇಗವನ್ನು ಹೇಗೆ ಕಂಡುಹಿಡಿಯುವುದು 
ಶಬ್ದತರಂಗಗಳ 'ಇಂಟರ್ಫೆರೆನ್ಸ್' (Interference) ಮತ್ತು 'ಬೀಟ್ಸ್' (Beats) 
ಒಂದು ಶಬ್ದ ಮೂಲದ ಬಲವಂತದ ಹೊಯ್ದಾಡುವಿಕೆ (Forced oscillations) 

ಇವುಗಳನ್ನು ಮಾಡಿತೋರಿಸಲು ಕಲಿಯುವೆವು.

00:29 ಮತ್ತು ನಮ್ಮ ಪ್ರಯೋಗಗಳಿಗಾಗಿ:
'Xmgrace ಪ್ಲಾಟ್' ಗಳು 
'ಫೋರಿಯರ್ ಟ್ರಾನ್ಸ್ಫಾರ್ಮ್ಸ್' (Fourier Transforms) ಹಾಗೂ 
ಸರ್ಕೀಟ್ ಡೈಗ್ರಾಮ್ ಗಳನ್ನು ತೋರಿಸುವೆವು.
00:38 ಇಲ್ಲಿ ನಾನು:

ExpEYES ಆವೃತ್ತಿ 3.1.0

Ubuntu Linux OS (ಉಬಂಟು ಲಿನಕ್ಸ್ ಒ ಎಸ್) ಆವೃತ್ತಿ 14.10 ಇವುಗಳನ್ನು ಬಳಸುತ್ತಿದ್ದೇನೆ.

00:49 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು ExpEYES Junior ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
01:01 ನಾವು ಮೊದಲು ಶಬ್ದದ (sound) ವ್ಯಾಖ್ಯಾನದೊಂದಿಗೆ ಆರಂಭಿಸೋಣ.

ಶಬ್ದವು ಒತ್ತಡ ಹಾಗೂ ಸ್ಥಳಾಂತರಗಳ ಒಂದು ಕಂಪನ ಆಗಿದೆ. ಇದು ಕೇಳಬಹುದಾದ ಒಂದು ಯಾಂತ್ರಿಕ ತರಂಗದಂತೆ ಪ್ರಸಾರವಾಗುತ್ತದೆ.

01:13 ಇದು ಪ್ರಸಾರವಾಗಲು ಒಂದು ಮಾಧ್ಯಮದ ಅಗತ್ಯವಿದೆ. ಈ ಮಾಧ್ಯಮವು ಗಾಳಿ, ನೀರು ಅಥವಾ ಯಾವುದೇ ಲೋಹದ ಮೇಲ್ಮೈ ಆಗಿರಬಹುದು.
01:22 ಈ ‘ಟ್ಯುಟೋರಿಯಲ್’ನಲ್ಲಿ, ಶಬ್ದತರಂಗಗಳ ಗುಣಲಕ್ಷಣಗಳನ್ನು ತೋರಿಸಲು, ನಾವು ವಿವಿಧ ಪ್ರಯೋಗಗಳನ್ನು ಮಾಡುವೆವು.
01:30 ಶಬ್ದ ತರಂಗಗಳ ಫ್ರಿಕ್ವೆನ್ಸಿ (ಆವರ್ತನ) ಯನ್ನು ತೋರಿಸಲು ನಾವು ಒಂದು ಪ್ರಯೋಗವನ್ನು ಮಾಡೋಣ.
01:35 ಈ ಪ್ರಯೋಗದಲ್ಲಿ, ಗ್ರೌಂಡ್ (GND) ಅನ್ನು 'Piezo buzzer (PIEZO)' ಗೆ ಜೋಡಿಸಲಾಗಿದೆ.

Piezo buzzer (PIEZO) ಅನ್ನು SQR1 ಗೆ ಜೋಡಿಸಲಾಗಿದೆ.

01:44 Microphone (MIC) ಅನ್ನು A1 ಗೆ ಜೋಡಿಸಲಾಗಿದೆ. ಇಲ್ಲಿ, Piezo buzzer (PIEZO) ಶಬ್ದದ ಒಂದು ಮೂಲವಾಗಿದೆ.

ಇದು ಸರ್ಕೀಟ್ ಡೈಗ್ರಾಮ್ ಆಗಿದೆ.

01:55 ನಾವು 'ಪ್ಲಾಟ್ ವಿಂಡೋ' ದ ಮೇಲೆ ಇದರ ಪರಿಣಾಮವನ್ನು ನೋಡೋಣ.
01:59 'ಪ್ಲಾಟ್ ವಿಂಡೋ'ದಲ್ಲಿ, 'Setting Square waves' ನ ಅಡಿಯಲ್ಲಿ, ಫ್ರಿಕ್ವೆನ್ಸಿ ಯನ್ನು (ಆವರ್ತನ) 3500 Hz ಎಂದು ಸೆಟ್ ಮಾಡಿ.
02:07 SQR1 ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. SQR1ನ ಫ್ರಿಕ್ವೆನ್ಸಿ ಯನ್ನು 3500 Hz ಎಂದು ಸೆಟ್ ಮಾಡಲಾಗಿದೆ. ಒಂದು ಡಿಜಿಟೈಜ್ಡ್ (digitized) ಶಬ್ದತರಂಗವು ರಚಿತವಾಗಿದೆ.
02:20 ತರಂಗದ ಸ್ವರೂಪವನ್ನು ಬದಲಾಯಿಸಲು, 'ಫ್ರಿಕ್ವೆನ್ಸಿ' ಸ್ಲೈಡರ್ ಅನ್ನು ಜರುಗಿಸಿ.
02:27 SQ1 ಮೇಲೆ ಕ್ಲಿಕ್ ಮಾಡಿ ಮತ್ತು CH2 ಗೆ ಎಳೆಯಿರಿ. SQ1 ನ 'ಇನ್ಪುಟ್ ಡೇಟಾ'ಅನ್ನು CH2 ಗೆ ಅಸೈನ್ ಮಾಡಲಾಗಿದೆ. ಒಂದು ಚೌಕ ತರಂಗವನ್ನು ರಚಿಸಲಾಗಿದೆ.
02:40 'ಕಂಪ್ರೆಶನ್ಸ್' ಮತ್ತು 'ರೆರಿಫ್ಯಾಕ್ಶನ್' (rarefaction =ವಿರಳಗೊಳಿಸುವಿಕೆ) ಅನ್ನು ಹೊಂದಿಸಲು 'mSec/div' ಸ್ಲೈಡರ್ ಅನ್ನು ಎಳೆಯಿರಿ.
02:48 CH2 ದ ಮೇಲೆ ಕ್ಲಿಕ್ ಮಾಡಿ ಮತ್ತು FIT ಗೆ ಎಳೆಯಿರಿ. SQ1 ದ ವೋಲ್ಟೇಜ್ ಮತ್ತು 'ಫ್ರಿಕ್ವೆನ್ಸಿ' ಗಳನ್ನು ಬಲಭಾಗದಲ್ಲಿ ತೋರಿಸಲಾಗಿದೆ.
02:59 ಶಬ್ದತರಂಗಗಳನ್ನು ಹೊಂದಿಸಲು 'ಫ್ರಿಕ್ವೆನ್ಸಿ' ಸ್ಲೈಡರ್ ಅನ್ನು ಕದಲಿಸಿ.
03:04 'ಪೀಝೋ ಬಝರ್' (Piezo buzzer) ನಿಂದ ಉಂಟಾದ ಶಬ್ದ ತರಂಗವನ್ನು ಕಪ್ಪುಬಣ್ಣದಲ್ಲಿ ತೋರಿಸಲಾಗಿದೆ.
03:10 'ಪೀಝೋ ಬಝರ್' ಅನ್ನು ಸಮೀಪಕ್ಕೆ ತಂದಹಾಗೆ ಮತ್ತು 'MIC' (ಮೈಕ್) ನಿಂದ ದೂರ ಸರಿಸಿದಂತೆ ತರಂಗದ 'ಆಂಪ್ಲಿಟ್ಯೂಡ್' (Amplitude) ಬದಲಾಯಿಸುತ್ತದೆ.
03:19 ಈಗ, ನಾವು 'ಪೀಝೋ ಬಝರ್' ನ 'ಫ್ರಿಕ್ವೆನ್ಸಿ ರಿಸ್ಪಾನ್ಸ್' ಅನ್ನು ಮಾಡಿ ತೋರಿಸುವೆವು.
03:24 'ಪ್ಲಾಟ್ ವಿಂಡೋ' ದಲ್ಲಿ, 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. 'Select Experiment' ಎಂಬ ಲಿಸ್ಟ್ ತೆರೆದುಕೊಳ್ಳುತ್ತದೆ. ಈ ಲಿಸ್ಟ್ ನಲ್ಲಿ, 'Frequency Response' ನ ಮೇಲೆ ಕ್ಲಿಕ್ ಮಾಡಿ.
03:39 'Audio Frequency response Curve' ಮತ್ತು 'Schematic' ಎಂಬ ಎರಡು ಹೊಸ ವಿಂಡೋಗಳು ತೆರೆದುಕೊಳ್ಳುತ್ತದೆ. 'Schematic' ವಿಂಡೋ, ಪ್ರಯೋಗದ ಸರ್ಕೀಟ್ ಡೈಗ್ರಾಮ್ ಅನ್ನು ತೋರಿಸುತ್ತದೆ.
03:52 'Audio Frequency response Curve' ವಿಂಡೋದಲ್ಲಿ, 'START' ಬಟನ್ ನ ಮೇಲೆ ಕ್ಲಿಕ್ ಮಾಡಿ.
03:59 ‘ಪೀಝೋ ಬಝರ್’ ನ 'ಫ್ರಿಕ್ವೆನ್ಸಿ ರಿಸ್ಪಾನ್ಸ್', ಸ್ಥಾಪಿತವಾಗಿದೆ. '3700Hz' ಗೆ 'ಫ್ರಿಕ್ವೆನ್ಸಿ ರಿಸ್ಪಾನ್ಸ್', ಗರಿಷ್ಠ 'ಆಂಪ್ಲಿಟ್ಯೂಡ್' ಅನ್ನು ಹೊಂದಿದೆ.
04:11 ಇದೇ ವಿಂಡೋದಲ್ಲಿ, 'Grace' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. 'Frequency response Curve' ಅನ್ನು ತೋರಿಸುತ್ತಿರುವ 'Grace' ವಿಂಡೋ ತೆರೆದುಕೊಳ್ಳುತ್ತದೆ.
04:22 ಈಗ, ನಾವು ಶಬ್ದದ ವೇಗವನ್ನು ಅಳೆಯುವೆವು.
04:27 'ಪ್ಲಾಟ್ ವಿಂಡೋ' ದಲ್ಲಿ, 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.

'Select Experiment' ಎಂಬ ಲಿಸ್ಟ್ ತೆರೆದುಕೊಳ್ಳುತ್ತದೆ. ಈ ಲಿಸ್ಟ್ ನಲ್ಲಿ 'Velocity of Sound' ನ ಮೇಲೆ ಕ್ಲಿಕ್ ಮಾಡಿ.

04:41 'EYES Junior: Velocity of Sound' ಹಾಗೂ 'Schematic' ಎಂಬ ಎರಡು ಹೊಸ ವಿಂಡೋಗಳು ತೆರೆದುಕೊಳ್ಳುತ್ತವೆ. 'Schematic' ವಿಂಡೋ, ಈ ಪ್ರಯೋಗದ ಸರ್ಕೀಟ್ ಡೈಗ್ರಾಮ್ ಅನ್ನು ತೋರಿಸುತ್ತದೆ.
04:55 'EYES Junior: Velocity of Sound' ವಿಂಡೋದಲ್ಲಿ, 'Measure Phase' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
05:02 'MIC' ಹಾಗೂ 'ಪೀಝೋ ಬಝರ್' ಗಳ ನಡುವಿನ ದೂರವನ್ನು ಬದಲಾಯಿಸುವುದರ ಮೂಲಕ ನಾವು ವಿಭಿನ್ನ 'Phase' (ಫೇಜ್) ವ್ಯಾಲ್ಯೂಗಳನ್ನು ಪಡೆಯಬಹುದು.
05:11 ವಿಭಿನ್ನ 'Phase' ವ್ಯಾಲ್ಯೂಗಳನ್ನು ಪಡೆಯಲು, 'Measure Phase' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
05:16 ಶಬ್ದದ ವೇಗವನ್ನು ಕಂಡುಹಿಡಿಯಲು, ವಿವಿಧ 'Phase' ವ್ಯಾಲ್ಯೂಗಳಿಂದ ನಾವು 178 deg ಹಾಗೂ 106 deg ಗಳನ್ನು ಬಳಸುವೆವು.
05:28 'Piezo' ಅನ್ನು ಹತ್ತಿರದಲ್ಲಿಟ್ಟು ಹಾಗೂ 'MIC' ನಿಂದ 2 cm ದೂರದಲ್ಲಿದ್ದಾಗ ಈ ವ್ಯಾಲ್ಯೂಗಳನ್ನು ನಾವು ಪಡೆಯಬಹುದು.
05:37 ನಿಖರವಾದ ಪರಿಣಾಮಗಳನ್ನು ಪಡೆಯಲು, 'MIC' ಮತ್ತು ‘ಪೀಝೋ ಬಝರ್’ ಗಳನ್ನು ಒಂದೇ ಆಕ್ಸಿಸ್ ನ (axis) ಮೇಲೆ ಇಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
05:45 ಶಬ್ದದ ವೇಗದ ವ್ಯಾಲ್ಯೂಅನ್ನು ಕಂಡುಹಿಡಿಯಲು, ನಾವು ಈ ಸೂತ್ರವನ್ನು ಬಳಸುತ್ತೇವೆ. ಈ ಪ್ರಯೋಗದಿಂದ ಪಡೆದ ಶಬ್ದದ ವೇಗ 350 m/sec ಆಗಿದೆ.
05:59 ಒಂದು ಅಸೈನ್ಮೆಂಟ್-

ಶಬ್ದದ ತರಂಗಾಂತರದ (wavelength) ವ್ಯಾಲ್ಯೂಅನ್ನು ಕಂಡುಹಿಡಿಯಿರಿ. ಸೂತ್ರ: λ= v/f (ಲ್ಯಾಂಬ್ಡಾ = v / f).

06:09 ಈಗ, ನಾವು:

'ಇಂಟರ್ಫೆರೆನ್ಸ್'

'ಬೀಟ್ಸ್'

Xmgrace ಪ್ಲಾಟ್ ಮತ್ತು

ಶಬ್ದದ ಎರಡು ಮೂಲಗಳ 'ಫೋರಿಯರ್ ಟ್ರಾನ್ಸ್ಫಾರ್ಮ್ಸ್' ಗಳನ್ನು ಮಾಡಿತೋರಿಸುವೆವು.

06:20 ಪ್ರಯೋಗಗಳಲ್ಲಿ 'Grace' ಪ್ಲಾಟ್ ಗಳನ್ನು ತೋರಿಸಲು,
06:23 ನೀವು ನಿಮ್ಮ ಸಿಸ್ಟಂ ನ ಮೇಲೆ -

python-imaging-tk

grace

scipy ಮತ್ತು

python-pygrace ಇವುಗಳನ್ನು ಇನ್ಸ್ಟಾಲ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.

06:34 ಈ ಪ್ರಯೋಗದಲ್ಲಿ, ನಾವು ಎರಡು ‘ಪೀಝೋ ಬಝರ್’ ಗಳನ್ನು ಶಬ್ದದ ಮೂಲವೆಂದು ಬಳಸುತ್ತೇವೆ.
06:41 ಈ ಪ್ರಯೋಗದಲ್ಲಿ, Piezo 1 ಅನ್ನು SQR1 ಮತ್ತು ಗ್ರೌಂಡ್ (GND) ಗಳಿಗೆ ಜೋಡಿಸಲಾಗಿದೆ. Piezo 2 ಅನ್ನು to SQR2 ಮತ್ತು ಗ್ರೌಂಡ್ (GND) ಗಳಿಗೆ ಜೋಡಿಸಲಾಗಿದೆ. ಇದು ಸರ್ಕೀಟ್ ಡೈಗ್ರಾಮ್ ಆಗಿದೆ.
06:56 ನಾವು 'ಪ್ಲಾಟ್ ವಿಂಡೋ' ದ ಮೇಲೆ ಪರಿಣಾಮವನ್ನು ನೋಡೋಣ.
07:00 'ಪ್ಲಾಟ್ ವಿಂಡೋ' ದಲ್ಲಿ, 'ಫ್ರಿಕ್ವೆನ್ಸಿ' ಯನ್ನು 3500 Hz ಎಂದು ಸೆಟ್ ಮಾಡಿ.
07:06 SQR1 ಮತ್ತು SQR2 ಚೆಕ್-ಬಾಕ್ಸ್ ಗಳ ಮೇಲೆ ಕ್ಲಿಕ್ ಮಾಡಿ. SQR1 ಹಾಗೂ SQR2 ಗಳ 'ಫ್ರಿಕ್ವೆನ್ಸಿ' ಗಳನ್ನು 3500 Hz ಗೆ ಸೆಟ್ ಮಾಡಲಾಗಿದೆ.
07:20 ಒಂದು ಡಿಜಿಟೈಜ್ಡ್ ಶಬ್ದ ತರಂಗವು ರಚಿತವಾಗಿದೆ.
07:24 ತರಂಗಸ್ವರೂಪವನ್ನು ಬದಲಾಯಿಸಲು, 'ಫ್ರಿಕ್ವೆನ್ಸಿ' ಸ್ಲೈಡರ್ ಅನ್ನು ಕದಲಿಸಿ.
07:29 EXPERIMENTS ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ ಮತ್ತು Interference of Sound ಅನ್ನು ಆಯ್ಕೆಮಾಡಿ. EYES: Interference of Sound ಎಂಬ ವಿಂಡೋ ತೆರೆದುಕೊಳ್ಳುತ್ತದೆ.
07:39 ವಿಂಡೋದ ಕೆಳತುದಿಯಲ್ಲಿ, NS ಅನ್ನು, ಅರ್ಥಾತ್, number of samples ನ ವ್ಯಾಲ್ಯೂಅನ್ನು 1000 ಗೆ ಬದಲಾಯಿಸಿ.
07:48 SQR1 ಮತ್ತು SQR2 ಚೆಕ್-ಬಾಕ್ಸ್ ಗಳ ಮೇಲೆ ಕ್ಲಿಕ್ ಮಾಡಿ. START ಬಟನ್ ನ ಮೇಲೆ ಕ್ಲಿಕ್ ಮಾಡಿ. Interference ಮಾದರಿಯು ಕಂಡುಬರುತ್ತದೆ.
08:00 ಈಗ, Xmgrace ಬಟನ್ ನ ಮೇಲೆ ಕ್ಲಿಕ್ ಮಾಡಿ. Grace ಮಾದರಿಯೊಂದಿಗೆ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ.
08:08 ಈಗ, ನಾವು 'Beats' ಮಾದರಿಯನ್ನು ತೋರಿಸುವೆವು.
08:11 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ ಮತ್ತು 'Interference of Sound' ಅನ್ನು ಆಯ್ಕೆಮಾಡಿ.

'EYES: Interference of Sound' ಎಂಬ ವಿಂಡೋ ತೆರೆದುಕೊಳ್ಳುತ್ತದೆ.

08:20 ವಿಂಡೋದ ಕೆಳತುದಿಯಲ್ಲಿ, 'SQR1' ಮತ್ತು 'SQR2' ಎಂಬ ಚೆಕ್-ಬಾಕ್ಸ್ ಗಳ ಮೇಲೆ ಕ್ಲಿಕ್ ಮಾಡಿ.
08:28 'START' ಬಟನ್ ನ ಮೇಲೆ ಕ್ಲಿಕ್ ಮಾಡಿ. 'Beats' ಮಾದರಿಯು ಕಾಣಿಸಿಕೊಳ್ಳುತ್ತದೆ.
08:33 ಈಗ, 'Xmgrace' ಬಟನ್ ನ ಮೇಲೆ ಕ್ಲಿಕ್ ಮಾಡಿ. 'Grace' ಮಾದರಿಯೊಂದಿಗೆ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ.
08:42 'FFT' ಮೇಲೆ ಕ್ಲಿಕ್ ಮಾಡಿ. 'ಫೋರಿಯರ್ ಟ್ರಾನ್ಸ್ಫಾರ್ಮ್ಸ್' ನೊಂದಿಗೆ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ.
08:49 'Fourier Transform' ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ವೆಬ್ಸೈಟ್ ಅನ್ನು ನೋಡಿ.

https://en.wikipedia.org/wiki/Fourier_transform.

08:55 ಕಡಿಮೆ ಆವರ್ತನದ (frequency) ಶಬ್ದ ತರಂಗವನ್ನು ತೋರಿಸಲು, ನಾವು ಒಂದು ಪ್ರಯೋಗವನ್ನು ಮಾಡೋಣ. ಇದು ಸರ್ಕೀಟ್ ಡೈಗ್ರಾಮ್ ಆಗಿದೆ.
09:03 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ ಮತ್ತು 'Interference of Sound' ಅನ್ನು ಆಯ್ಕೆಮಾಡಿ. 'EYES: Interference of Sound' ಎಂಬ ವಿಂಡೋ ತೆರೆದುಕೊಳ್ಳುತ್ತದೆ.
09:13 ವಿಂಡೋದ ಕೆಳತುದಿಯಲ್ಲಿ, 'SQR1' ನ ವ್ಯಾಲ್ಯೂ ಅನ್ನು 100 ಗೆ ಸೆಟ್ ಮಾಡಿ ಮತ್ತು ಬಾಕ್ಸ್ ಅನ್ನು ಚೆಕ್ ಮಾಡಿ.
09:21 'START' ಬಟನ್ ನ ಮೇಲೆ ಕ್ಲಿಕ್ ಮಾಡಿ. ಕಡಿಮೆ 'ಆಂಪ್ಲಿಟ್ಯೂಡ್' ನ ಒಂದು ತರಂಗವನ್ನು ತೋರಿಸಲಾಗಿದೆ.
09:29 'ಫೋರಿಯರ್ ಟ್ರಾನ್ಸ್ಫಾರ್ಮ್ಸ್' ನ 'Grace' ಪ್ಲಾಟ್ ಅನ್ನು ಪಡೆಯಲು 'FFT' ಮೇಲೆ ಕ್ಲಿಕ್ ಮಾಡಿ.
09:34 ಸಂಕ್ಷಿಪ್ತವಾಗಿ,
09:36 ಈ ಟ್ಯುಟೋರಿಯಲ್ ನಲ್ಲಿ, ನಾವು:

ಶಬ್ದ ತರಂಗವನ್ನು ಹೇಗೆ ರಚಿಸುವುದು

ಒಂದು ಶಬ್ದಮೂಲದ ಫ್ರಿಕ್ವೆನ್ಸಿ ರಿಸ್ಪಾನ್ಸ್

ಶಬ್ದದ ವೇಗವನ್ನು ಹೇಗೆ ಕಂಡುಹಿಡಿಯುವುದು

ಶಬ್ದತರಂಗಗಳ 'ಇಂಟರ್ಫೆರೆನ್ಸ್' ಮತ್ತು 'ಬೀಟ್ಸ್' ಮಾದರಿಗಳು

ಒಂದು ಶಬ್ದ ಮೂಲದ ಬಲವಂತದ ಹೊಯ್ದಾಡುವಿಕೆ

ಇವುಗಳನ್ನು ಮಾಡಿತೋರಿಸಲು ಕಲಿತಿದ್ದೇವೆ.

09:56 ಮತ್ತು:

'Xmgrace ಪ್ಲಾಟ್' ಗಳು

'ಫೋರಿಯರ್ ಟ್ರಾನ್ಸ್ಫಾರ್ಮ್ಸ್' ಮತ್ತು

ನಮ್ಮ ಪ್ರಯೋಗಗಳಿಗಾಗಿ ಸರ್ಕೀಟ್ ಡೈಗ್ರಾಮ್ ಗಳನ್ನು ತೋರಿಸಿದ್ದೇವೆ.

10:04 ಒಂದು ಅಸೈನ್ಮೆಂಟ್ –

'ಸೌಂಡ್ ಬರ್ಸ್ಟ್' (ಧ್ವನಿ ಸ್ಫೋಟ) ಅನ್ನು ಹಿಡಿದಿಡಿ. ಸೂಚನೆ: ಒಂದು ಗಂಟೆ ಅಥವಾ ಚಪ್ಪಾಳೆಯನ್ನು ಶಬ್ದದ ಮೂಲವೆಂದು ಬಳಸಬಹುದು. ಇದು ಸರ್ಕೀಟ್ ಡೈಗ್ರಾಮ್ ಆಗಿದೆ.

10:15 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:24 ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
10:32 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
10:40 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .

ವಂದನೆಗಳು.

Contributors and Content Editors

Pratik kamble, Sandhya.np14