Git/C2/Merging-and-Deleting-branches/Kannada

From Script | Spoken-Tutorial
Revision as of 10:51, 8 September 2017 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:01 Merging and deleting branches (ಮರ್ಜಿಂಗ್ ಆಂಡ್ ಡಿಲೀಟಿಂಗ್ ಬ್ರಾಂಚಸ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು: 'ಮರ್ಜಿಂಗ್',
00:10 ‘ಮರ್ಜಿಂಗ್’ ಅನ್ನು ರಿವರ್ಟ್ ಮಾಡುವುದು (ಪೂರ್ವಸ್ಥಿತಿಗೆ ಹಿಂದಿರುಗುವುದು) ಮತ್ತು ಬ್ರಾಂಚ್ ಗಳನ್ನು ತೆಗೆದುಹಾಕುವುದು ಇವುಗಳ ಬಗ್ಗೆ ಕಲಿಯುವೆವು.
00:14 ಈ ಟ್ಯುಟೋರಿಯಲ್ ಗಾಗಿ ನಾನು: Ubuntu Linux (ಉಬಂಟು ಲಿನಕ್ಸ್) 14.04
00:20 Git (ಗಿಟ್) 2.3.2 ಹಾಗೂ gedit Text Editor (ಜಿ-ಎಡಿಟ್ ಟೆಕ್ಸ್ಟ್-ಎಡಿಟರ್) ಇವುಗಳನ್ನು ಬಳಸುತ್ತಿದ್ದೇನೆ.
00:26 ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು.
00:29 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'ಗಿಟ್ ಕಮಾಂಡ್' ಗಳನ್ನು ಮತ್ತು ಗಿಟ್ ನಲ್ಲಿ 'ಬ್ರಾಂಚಿಂಗ್' ಅನ್ನು ತಿಳಿದಿರಬೇಕು.
00:37 ಇಲ್ಲದಿದ್ದರೆ, ಸಂಬಂಧಿತ Linux ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
00:42 ಈ ಸರಣಿಯಲ್ಲಿ, ಈಗಾಗಲೇ ನಾವು ಬ್ರಾಂಚ್ ಗಳನ್ನು ಕ್ರಿಯೇಟ್ ಮಾಡಲು ಕಲಿತಿದ್ದೇವೆ.
00:47 ಈಗ, ನಾವು ಎರಡು ಬ್ರಾಂಚ್ ಗಳನ್ನು ಮರ್ಜ್ ಮಾಡುವುದನ್ನು ಕಲಿಯುವೆವು.
00:51 “new-module” ಎಂಬ ಬ್ರಾಂಚ್ ಅನ್ನು “master” ಬ್ರಾಂಚ್ ನೊಂದಿಗೆ ಹೇಗೆ ಮರ್ಜ್ ಮಾಡಲಾಗುತ್ತದೆ ಎಂಬುದನ್ನು ಈ ಚಿತ್ರವು ವಿವರಿಸುತ್ತದೆ.
00:58 ಇದನ್ನು 'C9' ಕಮಿಟ್ ನಲ್ಲಿ ಮಾಡಲಾಗುತ್ತದೆ.
01:01 ಮರ್ಜ್ ಮಾಡಿದ ನಂತರ, “new-module” ನ ಕಮಿಟ್ ಗಳನ್ನು “master” ಬ್ರಾಂಚ್ ಗೆ ಸೇರಿಸಲಾಗುತ್ತದೆ.
01:06 ಇದು ಕೆಲಸಮಾಡುವ ರೀತಿಯನ್ನು ನಾನು ವಿವರಿಸುತ್ತೇನೆ.
01:09 ಮೊದಲು, ನಾವು ಆಗಲೇ ಕ್ರಿಯೇಟ್ ಮಾಡಿದ 'mywebpage' ಎಂಬ ನಮ್ಮ ಗಿಟ್ ರಿಪಾಸಿಟರಿಯನ್ನು ತೆರೆಯುವೆವು.
01:16 ಟರ್ಮಿನಲ್ ಅನ್ನು ಓಪನ್ ಮಾಡಲು, 'Ctrl+Alt+T' ಕೀಗಳನ್ನು ಒತ್ತಿ.
01:20 ನಮ್ಮ ಗಿಟ್ ರಿಪಾಸಿಟರಿಯ ಒಳಗೆ ಹೋಗಲು, 'cd space mywebpage' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
01:29 ಪ್ರದರ್ಶಿಸಲು, ನಾನು 'html' ಫೈಲ್ ಗಳನ್ನು ಬಳಸುವುದನ್ನು ಮುಂದುವರೆಸುವೆನು.
01:33 ನೀವು ನಿಮಗಿಷ್ಟವಾದ ಯಾವುದೇ ಪ್ರಕಾರದ ಫೈಲನ್ನು ಬಳಸಬಹುದು.
01:38 ಇನ್ನುಮುಂದೆ, ಟರ್ಮಿನಲ್ ನ ಮೇಲೆ ಪ್ರತಿಯೊಂದು ಕಮಾಂಡನ್ನು ಟೈಪ್ ಮಾಡಿದ ನಂತರ ದಯವಿಟ್ಟು 'Enter' ಕೀಯನ್ನು ಒತ್ತಲು ನೆನಪಿಡಿ.
01:45 ನಾವು 'git space branch' ಎಂದು ಟೈಪ್ ಮಾಡಿ 'ಗಿಟ್ ಬ್ರಾಂಚ್-ಲಿಸ್ಟ್' ಅನ್ನು ಪರಿಶೀಲಿಸೋಣ.
01:51 'master' ಮತ್ತು 'new-chapter' ಎಂಬ ಹೆಸರಿನ ಎರಡು ಬ್ರಾಂಚ್ ಗಳು ಇರುವುದನ್ನು ನಾವು ನೋಡಬಹುದು.
01:57 'new-chapter' ಬ್ರಾಂಚ್ ಅನ್ನು ಈ ಸರಣಿಯಲ್ಲಿ ಹಿಂದೆಯೇ ಕ್ರಿಯೇಟ್ ಮಾಡಲಾಗಿತ್ತು ಮತ್ತು 'master', ಡೀಫಾಲ್ಟ್ ಬ್ರಾಂಚ್ ಆಗಿದೆ.
02:05 ಸಧ್ಯಕ್ಕೆ ನಾವು ಮಾಸ್ಟರ್ ಬ್ರಾಂಚ್ ನಲ್ಲಿ ಇದ್ದೇವೆ.
02:08 'git space log space hyphen hyphen oneline' ಎಂದು ಟೈಪ್ ಮಾಡಿ, ನಾವು 'ಗಿಟ್-ಲಾಗ್' ಅನ್ನು ಪರಿಶೀಲಿಸುವೆವು.
02:17 ನಾವು 'new-chapter' ಬ್ರಾಂಚ್ ಗೆ ಹೋಗೋಣ ಹಾಗೂ 'ಗಿಟ್ ಲಾಗ್' ಅನ್ನು ಪರಿಶೀಲಿಸೋಣ.
02:21 ಹೀಗೆ ಟೈಪ್ ಮಾಡಿ: 'git space checkout space new-chapter'
02:27 ಹೀಗೆ ಟೈಪ್ ಮಾಡಿ: 'git space log space hyphen hyphen oneline'
02:33 ಈಗ, ನಾವು ಮಾಸ್ಟರ್ ಹಾಗೂ 'ನ್ಯೂ-ಚಾಪ್ಟರ್' ಬ್ರಾಂಚ್ ಗಳ 'ಕಮಿಟ್ ಗಳನ್ನು ಹೋಲಿಸುವೆವು.
02:38 ಈ ನಾಲ್ಕು ಕಮಿಟ್ ಗಳು ಎರಡೂ ಬ್ರಾಂಚ್ ಗಳಿಗೆ ಸಾಮಾನ್ಯವಾಗಿವೆ.
02:42 “Added story.html in new-chapter branch”- ಇದು, 'ನ್ಯೂ-ಚಾಪ್ಟರ್' ಬ್ರಾಂಚ್ ನಲ್ಲಿ ಇರುತ್ತದೆ.
02:48 ಮತ್ತು “Added chapter two in history.html”- ಇದು, ಮಾಸ್ಟರ್- ಬ್ರಾಂಚ್ ನಲ್ಲಿ ಇರುತ್ತದೆ.
02:54 ಮರ್ಜ್ ಮಾಡಿದ ನಂತರ, “Added story.html in new-chapter branch”- ಈ ಕಮಿಟ್ ಅನ್ನು ' ಮಾಸ್ಟರ್- ಬ್ರಾಂಚ್' ನಲ್ಲಿ ಸೇರಿಸಲಾಗುವುದು.
03:02 ಈಗ, ಮರ್ಜ್ ಮಾಡುವ ವಿಧಾನವನ್ನು ನಾನು ತೋರಿಸುತ್ತೇನೆ.
03:05 ಹೀಗೆ ಟೈಪ್ ಮಾಡಿ: 'git space merge space master'
03:09 'ಕಮಿಟ್ ಮೆಸೇಜ್'ನ್ನು ಪಡೆಯಲು, 'ಜಿ-ಎಡಿಟ್' (Gedit) ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತದೆ.
03:14 ನಾವು 'ಜಿ-ಎಡಿಟ್' ಅನ್ನು ಗಿಟ್ ನ 'ಕೋರ್ ಎಡಿಟರ್' ಎಂದು ಸಂರಚಿಸಿದ್ದೇವೆ (ಕಾನ್ಫಿಗರ್) ಎಂಬುದನ್ನು ನೆನಪಿಸಿಕೊಳ್ಳಿ.
03:20 ಒಂದುವೇಳೆ, ನೀವು ಬೇರೊಂದು ಎಡಿಟರ್ ಅನ್ನು ಕಾನ್ಫಿಗರ್ ಮಾಡಿದ್ದರೆ, ಆಗ ಆ ಎಡಿಟರ್ ತೆರೆದುಕೊಳ್ಳುತ್ತದೆ.
03:26 ನೀವು 'Git' 1.9 ಕ್ಕಿಂತ ಕೆಳಗಿನ ಆವೃತ್ತಿಯನ್ನು ಬಳಸುತ್ತಿದ್ದರೆ, ಆಗ ಎಡಿಟರ್ ತೆರೆದುಕೊಳ್ಳದೇ ಇರಬಹುದು.
03:33 ಹೀಗಾಗಿ, ನೀವು ಮುಂದಿನ ಹಂತವನ್ನು ಬಿಟ್ಟುಬಿಡಬಹುದು.
03:36 ನಾನು ಡೀಫಾಲ್ಟ್ 'ಕಮಿಟ್ ಮೆಸೇಜನ್ನು' ಇದ್ದಂತೆಯೇ ಬಳಸುತ್ತೇನೆ.
03:40 ‘ಮರ್ಜಿಂಗ್’ ಗೆ ಸಂಬಂಧಿಸಿದಂತೆ ಬೇರೆ ಯಾವುದೇ ಮೆಸೇಜನ್ನು ನಿಮಗೆ ಕೊಡಬೇಕಾಗಿದ್ದರೆ, ಅದನ್ನು ಇಲ್ಲಿ ಟೈಪ್ ಮಾಡಿ.
03:46 ಈಗ ಎಡಿಟರ್ ಅನ್ನು ಸೇವ್ ಮಾಡಿ ಮತ್ತು ಕ್ಲೋಸ್ ಮಾಡಿ.
03:50 ನಾವು ಗಿಟ್-ಲಾಗ್ ಅನ್ನು ಮತ್ತೊಮ್ಮೆ ಪರಿಶೀಲಿಸುವೆವು.
03:54 ಮಾಸ್ಟರ್ ಬ್ರಾಂಚ್ ನ ಕಮಿಟ್ ಗಳನ್ನು 'ನ್ಯೂ-ಚಾಪ್ಟರ್' ಬ್ರಾಂಚ್ ನೊಂದಿಗೆ ಮರ್ಜ್ ಮಾಡಿರುವುದನ್ನು ನೀವು ನೋಡಬಹುದು.
04:00 ‘ಮರ್ಜಿಂಗ್’ ಗಾಗಿ ಒಂದು ಕಮಿಟ್ ಮೆಸೇಜನ್ನು ಸಹ ನೀವು ನೋಡಬಹುದು.
04:04 ಆಮೇಲೆ, ನಾವು ಮಾಸ್ಟರ್ ಬ್ರಾಂಚ್ ಗೆ ಹೋಗುವೆವು ಹಾಗೂ ಕಮಿಟ್ ಗಳನ್ನು ಪರಿಶೀಲಿಸುವೆವು.
04:09 ಹೀಗೆ ಟೈಪ್ ಮಾಡಿ: 'git space checkout space master'
04:14 ನಾವು ಗಿಟ್-ಲಾಗ್ ಅನ್ನು ಪರಿಶೀಲಿಸೋಣ.
04:17 ಇಲ್ಲಿ ನಮಗೆ 'ನ್ಯೂ-ಚಾಪ್ಟರ್' ಕಮಿಟ್ ಗಳೊಂದಿಗೆ, ಮಾಸ್ಟರ್-ಬ್ರಾಂಚ್ ಕಮಿಟ್ ಗಳು ಕಾಣಿಸಿಕೊಳ್ಳಬೇಕು.
04:22 ಆದರೆ ಗಿಟ್-ಲಾಗ್, ಮಾಸ್ಟರ್-ಬ್ರಾಂಚ್ ಕಮಿಟ್ ಗಳನ್ನು ಮಾತ್ರ ತೋರಿಸುತ್ತದೆ.
04:27 ನಿಜವಾಗಿ, ನಾವು 'ನ್ಯೂ-ಚಾಪ್ಟರ್' ಬ್ರಾಂಚ್ ಅನ್ನು, ಮಾಸ್ಟರ್-ಬ್ರಾಂಚ್ ಗೆ ಮರ್ಜ್ ಮಾಡಬೇಕಾಗಿತ್ತು.
04:32 ಆದರೆ ನಾವು ಅದನ್ನು ಬೇರೆ ರೀತಿಯಲ್ಲಿ ಮರ್ಜ್ ಮಾಡಿದ್ದೇವೆ.
04:36 ಆದ್ದರಿಂದ ನಾವು, ‘ಮರ್ಜಿಂಗ್’ ಕಮಿಟ್ ಅನ್ನು ಮಾಸ್ಟರ್-ಬ್ರಾಂಚ್ ನಲ್ಲಿ ನೋಡಲು ಸಾಧ್ಯವಿಲ್ಲ.
04:41 ಈ ‘ಮರ್ಜಿಂಗ್’ ಅನ್ನು ನಾವು ಹೇಗೆ ಮೊದಲಿನ ಸ್ಥಿತಿಗೆ ತರಬಹುದು?
04:45 ಇದಕ್ಕಾಗಿ, ನಾವು 'ನ್ಯೂ-ಚಾಪ್ಟರ್'ಬ್ರಾಂಚ್ ಗೆ ಹಿಂದಿರುಗಬೇಕಾಗುವುದು.
04:50 ಹೀಗೆ ಟೈಪ್ ಮಾಡಿ: 'git space checkout space new-chapter'.
04:54 ಮರ್ಜ್ ಅನ್ನು ರಿವರ್ಟ್ ಮಾಡಲು, ಹೀಗೆ ಟೈಪ್ ಮಾಡಿ: 'git space reset space hyphen hyphen hard space HEAD tilde'.
05:04 ಇತ್ತೀಚಿನ ರಿವಿಜನ್ ಯಾವಾಗಲೂ 'HEAD' ಆಗಿರುತ್ತದೆ ಮತ್ತು ಅದರ ಹಿಂದಿನ ರಿವಿಜನ್, 'HEAD ಟಿಲ್ಡಾ' ಆಗಿರುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ.
05:12 ಆದ್ದರಿಂದ, ‘ಮರ್ಜಿಂಗ್’ ನ ಹಿಂದಿನ ರಿವಿಜನ್ ಅನ್ನು ಪಡೆಯಲು, ನಾವು 'HEAD ಟಿಲ್ಡಾ' ಅನ್ನು ಬಳಸಿದ್ದೇವೆ.
05:18 ಮತ್ತೊಮ್ಮೆ ನಾವು 'ಗಿಟ್ ಲಾಗ್' ಅನ್ನು ಪರಿಶೀಲಿಸೋಣ.
05:22 ಈಗ ‘ಮರ್ಜಿಂಗ್’ ಅನ್ನು ಅಲಕ್ಷಿಸಲಾಗಿರುವುದನ್ನು ನಾವು ನೋಡಬಹುದು.
05:26 ನಾವು ಈಗ 'ನ್ಯೂ-ಚಾಪ್ಟರ್' ಬ್ರಾಂಚ್ ಅನ್ನು ಮಾಸ್ಟರ್-ಬ್ರಾಂಚ್ ಗೆ ಮರ್ಜ್ ಮಾಡುವೆವು.
05:31 ನಾವು 'git space checkout space master' ಎಂದು ಟೈಪ್ ಮಾಡಿ, ಮೊದಲು ಮಾಸ್ಟರ್-ಬ್ರಾಂಚ್ ಗೆ ಹೋಗುವೆವು.
05:38 ನಾವು ಇನ್ನೊಮ್ಮೆ 'ಗಿಟ್-ಲಾಗ್' ಅನ್ನು ಪರಿಶೀಲಿಸೋಣ.
05:42 ಮರ್ಜ್ ಮಾಡಲು, ನಾವು ಹೀಗೆ ಟೈಪ್ ಮಾಡುವೆವು: 'git space merge space new-chapter'.
05:48 ನಿಮ್ಮ ‘ಮರ್ಜಿಂಗ್’ ಕಮಿಟ್ ಮೆಸೇಜನ್ನು ಜಿ-ಎಡಿಟ್ ನಲ್ಲಿ ಕೊಡಿ.
05:52 ಆಮೇಲೆ ಎಡಿಟರ್ ಅನ್ನು ಸೇವ್ ಮಾಡಿ ಕ್ಲೋಸ್ ಮಾಡಿ.
05:55 ಮತ್ತೊಮ್ಮೆ, 'ಗಿಟ್-ಲಾಗ್' ಅನ್ನು ಪರಿಶೀಲಿಸಿ.
05:58 ನಮ್ಮ 'ನ್ಯೂ-ಚಾಪ್ಟರ್' ಬ್ರಾಂಚ್ ಅನ್ನು, ಮಾಸ್ಟರ್-ಬ್ರಾಂಚ್ ಗೆ ಯಶಸ್ವಿಯಾಗಿ ಮರ್ಜ್ ಮಾಡಲಾಗಿರುವುದನ್ನು ನಾವು ನೋಡಬಹುದು.
06:05 ನಾವು ಇದನ್ನು ಮತ್ತೊಮ್ಮೆ ಮರ್ಜ್ ಮಾಡಲು ಪ್ರಯತ್ನಿಸೋಣ.
06:08 ಹೀಗೆ ಟೈಪ್ ಮಾಡಿ: 'git space merge space new-chapter'.
06:13 ಈಗ, ನಾವು “Already up-to-date” ಎನ್ನುವ ಒಂದು ಮೆಸೇಜನ್ನು ನೋಡುತ್ತೇವೆ.
06:17 ನಾವು ಮರ್ಜ್ ಮಾಡಿದ್ದೇವೆ ಅಥವಾ ಇಲ್ಲ ಎಂಬುದನ್ನು ಪರೀಕ್ಷಿಸಲು ಇದು ಒಂದು ಉತ್ತಮವಾದ ವಿಧಾನವಾಗಿದೆ.
06:22 ‘ಮರ್ಜಿಂಗ್’ನ ನಂತರ, 'ನ್ಯೂ-ಚಾಪ್ಟರ್' ಬ್ರಾಂಚ್ ಅನ್ನು, ಗಿಟ್ ರಿಪಾಸಿಟರಿಯಿಂದ ಡಿಲೀಟ್ ಮಾಡಬಹುದು.
06:28 ಬ್ರಾಂಚ್ ಅನ್ನು ಡಿಲೀಟ್ ಮಾಡಲು, ಹೀಗೆ ಟೈಪ್ ಮಾಡಿ: 'git space branch space hyphen d space new-chapter'.
06:36 'git space branch' ಎಂದು ಟೈಪ್ ಮಾಡಿ ನಾವು ಬ್ರಾಂಚ್ ಲಿಸ್ಟ್ ಅನ್ನು ಮತ್ತೊಮ್ಮೆ ಪರಿಶೀಲಿಸೋಣ.
06:43 'ನ್ಯೂ-ಚಾಪ್ಟರ್' ಬ್ರಾಂಚ್ ಅನ್ನು ತೆಗೆದುಹಾಕಲಾಗಿದೆ. ಆದ್ದರಿಂದ, ಇನ್ನುಮುಂದೆ ನಾವು ಅದನ್ನು ನೋಡಲು ಸಾಧ್ಯವಿಲ್ಲ.
06:48 ‘ಮರ್ಜಿಂಗ್’ ಮಾಡದೇ ಒಂದು ಬ್ರಾಂಚ್ ಅನ್ನು ತೆಗೆದುಹಾಕಲು, ಸಣ್ಣಕ್ಷರದ 'hyphen d' ಗೆ ಬದಲಾಗಿ ದೊಡ್ಡಕ್ಷರದಲ್ಲಿ 'ಹೈಫನ್ D' ಯನ್ನು ಬಳಸಿ.
06:56 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
07:00 ಸಂಕ್ಷಿಪ್ತವಾಗಿ,
07:02 ಈ ಟ್ಯುಟೋರಿಯಲ್ ನಲ್ಲಿ, ನಾವು: ‘ಮರ್ಜಿಂಗ್’, ‘ಮರ್ಜಿಂಗ್’ ಅನ್ನು ಹಿಂದಿರುಗಿಸುವುದು ಹಾಗೂ ಬ್ರಾಂಚ್ ಗಳನ್ನು ಡಿಲೀಟ್ ಮಾಡುವುದರ ಬಗ್ಗೆ ಕಲಿತಿದ್ದೇವೆ.
07:09 ಒಂದು ಅಸೈನ್ಮೆಂಟ್- ಹಿಂದಿನ ಅಸೈನ್ಮೆಂಟ್ ನಲ್ಲಿ ನಾವು ಕ್ರಿಯೇಟ್ ಮಾಡಿದ 'ಚಾಪ್ಟರ್-ಟು' ಬ್ರಾಂಚ್ ನ ಕಮಿಟ್ ಗಳನ್ನು ಪರಿಶೀಲಿಸಿ.
07:16 ಅದನ್ನು ಮಾಸ್ಟರ್ ಬ್ರಾಂಚ್ ನೊಂದಿಗೆ ಮರ್ಜ್ ಮಾಡಿ ಹಾಗೂ 'ಚಾಪ್ಟರ್-ಟು' ಬ್ರಾಂಚ್ ಅನ್ನು ತೆಗೆದುಹಾಕಿ.
07:22 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
07:27 ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
07:30 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:38 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

07:41 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
07:48 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:

[1]

07:53 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14