Scilab/C2/Getting-Started/Kannada

From Script | Spoken-Tutorial
Revision as of 14:39, 1 September 2017 by Anjana310312 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search


Time Narration
00:02 ಸೈಲ್ಯಾಬ್ ನಲ್ಲಿ Getting Started ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು-
00:09 * ಸೈಲ್ಯಾಬ್ ಅನ್ನು ಕ್ಯಾಲ್ಕ್ಯುಲೇಟರ್ ನಂತೆ ಉಪಯೋಗಿಸುವುದು
00:12 * ಒಂದು ವೇರಿಯೇಬಲ್ ನಲ್ಲಿ ವ್ಯಾಲ್ಯುಅನ್ನು ಹೇಗೆ ಸ್ಟೋರ್ ಮಾಡುವುದು
00:15 * ಆ ವೇರಿಯೇಬಲ್ ಗಳನ್ನು ಉಪಯೋಗಿಸಿ ವಿವಿಧ ಗಣಿತೀಯ ಕ್ರಿಯೆಗಳನ್ನು ಹೇಗೆ ಮಾಡುವುದು
00:21 * ಕರೆಂಟ್ ವರ್ಕಿಂಗ್ ಡೈರಕ್ಟರಿಯಲ್ಲಿ, ಫೈಲ್ ಅನ್ನು ಹೇಗೆ ರಚಿಸುವುದು, ಸೆಶನ್ ನಲ್ಲಿ ಎಕ್ಸಿಕ್ಯೂಟ್ ಮಾಡಲಾದ ಕಮಾಂಡ್ ಗಳನ್ನು ಹೇಗೆ ಸ್ಟೋರ್ ಮಾಡುವುದು
00:29 * ಕಾಂಪ್ಲೆಕ್ಸ್ ಸಂಖ್ಯೆಗಳನ್ನು ಹೇಗೆ ಡಿಫೈನ್ ಮಾಡುವುದು
00:31 *ಸಂಖ್ಯೆಗಳ ಮೇಲೆ ಎಕ್ಸ್ಪೋನೆನ್ಷಿಯಲ್, ಲೊಗೆರಿದಮಿಕ್ ಮತ್ತು ಟ್ರಿಗ್ನೋಮೆಟ್ರಿಕ್ ಕ್ರಿಯೆಗಳನ್ನು ಹೇಗೆ ಮಾಡುವುದು – ಇವುಗಳನ್ನು ಕಲಿಯುತ್ತೇವೆ.
00:38 ಈ ಟ್ಯುಟೋರಿಯಲ್ ಅನ್ನು ಅಭ್ಯಾಸಮಾಡಲು, ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿರಬೇಕು.
00:44 ನಾನು ವಿವರಣೆಗಾಗಿ Scilab 5.2.0 ಮತ್ತು Mac OS/X ಗಳನ್ನು ಉಪಯೋಗಿಸುತ್ತಿದ್ದೇನೆ.
00:51 ಇಲ್ಲಿ ಈ ಟ್ಯುಟೋರಿಯಲ್ ಗಾಗಿ ಫ್ಲೋ ಚಾರ್ಟ್ ಇದೆ.
00:55 ನಿಮ್ಮ ಡೆಸ್ಕ್ಟಾಪ್ ನಲ್ಲಿ Scilab ಶಾರ್ಟ್ಕಟ್ ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು ಸೈಲ್ಯಾಬ್ ಅನ್ನು ಪ್ರಾರಂಭಿಸಿ.
01:01 ಇದು ಸೈಲ್ಯಾಬ್ ಕನ್ಸೋಲ್ ವಿಂಡೋ ಆಗಿದೆ. ಕರ್ಸರ್, ಕಮಾಂಡ್ ಪ್ರಾಂಪ್ಟ್ ನ ಮೇಲಿರುವುದನ್ನು ಗಮನಿಸಿ.
01:07 ವೀಡಿಯೋಅನ್ನು ಆಗಾಗ ತಾತ್ಕಾಲಿಕವಾಗಿ ನಿಲ್ಲಿಸಿ (pause ಮಾಡಿ), ಸೈಲ್ಯಾಬ್ ನ ಈ ಟ್ಯುಟೋರಿಯಲ್ ಅನ್ನು ನೀವು ಜೊತೆಜೊತೆಗೆ ಅಭ್ಯಾಸ ಮಾಡಿ ಎಂದು ನಾನು ಸಲಹೆ ಮಾಡುತ್ತೇನೆ.
01:16 ಸೈಲ್ಯಾಬ್ ಅನ್ನು ಕ್ಯಾಲ್ಕ್ಯುಲೇಟರ್ ನಂತೆ ಉಪಯೋಗಿಸಬಹುದು.
01:19 ಇದು ಮಾಡಬಹುದಾದ ಕೆಲವು ಸಾಮಾನ್ಯ ಕ್ರಿಯೆಗಳನ್ನು ನಾವು ನೋಡೋಣ.
01:25 ಹೀಗೆ ಟೈಪ್ ಮಾಡಿ: 42 plus 4 multiplied by 4 minus 64 divided by 4 ಮತ್ತು Enter ಅನ್ನು ಒತ್ತಿ.
01:36 ನಿರೀಕ್ಷಿಸಿದಂತೆ ಫಲಿತಾಂಶವು 42 ಆಗಿದೆ.
01:39 ಡಿಫಾಲ್ಟ್ ವೇರಿಯೇಬಲ್ "a n s" ನಲ್ಲಿ, ಉತ್ತರ 42 ಸ್ಟೋರ್ ಆಗಿರುವುದನ್ನು ಗಮನಿಸಿ.
01:45 ನಾವು ಹೆಸರಿಸಿದ ವೇರಿಯೇಬಲ್ ಗಳನ್ನು ಸಹ ರಚನೆ ಮಾಡಬಹುದು.
01:49 ಹೀಗೆ ಟೈಪ್ ಮಾಡಿ: a equals 12, b=21 , c=33 ಮತ್ತು Enter ಅನ್ನು ಒತ್ತಿ.
02:00 ಇದು 12, 21 ಮತ್ತು 33 ಇವುಗಳನ್ನು ಕ್ರಮವಾಗಿ a, b ಮತ್ತು c ಗಳಲ್ಲಿ ಸಂಗ್ರಹಿಸುತ್ತದೆ.
02:08 ಇಲ್ಲಿ ನಾನು clc ಕಮಾಂಡ್ ಅನ್ನು ಉಪಯೋಗಿಸಿ, ಸೈಲ್ಯಾಬ್ ಕನ್ಸೋಲ್ ಅನ್ನು ಖಾಲಿ ಮಾಡುತ್ತೇನೆ.
02:13 ಈಗ ನಾವು ಈ ವೇರಿಯೇಬಲ್ ಗಳನ್ನು ಉಪಯೋಗಿಸಿ ಕೆಲವು ಗಣಿತೀಯ ಕ್ರಿಯೆಗಳನ್ನು ಮಾಡುವೆವು.
02:19 ಉದಾಹರಣೆಗೆ,
02:21 a+b+c ಇದು 66 ಎಂಬ ಉತ್ತರವನ್ನು ಕೊಡುತ್ತದೆ;
02:29 ಮತ್ತು, a times into bracket b plus c
02:35 ಇದು 648 ಎಂಬ ಉತ್ತರವನ್ನು ಕೊಡುತ್ತದೆ.
02:41 ನಾವು ಈ ಉತ್ತರವನ್ನು 'd' ಎಂಬ ಇನ್ನೊಂದು ವೇರಿಯೇಬಲ್ ಗೆ ಬೇಕಾದರೂ ಅಸೈನ್ ಮಾಡಬಹುದು. ಇದನ್ನು ಮಾಡಲು ಹೀಗೆ ಟೈಪ್ ಮಾಡಿ: d = bracket a+b close the bracket multiplied by c.
02:58 ಇದು d = 1089 ಎಂಬ ಉತ್ತರವನ್ನು ಕೊಡುತ್ತದೆ.
03:01 ನಾವು ವೇರಿಯೇಬಲ್ ಗಳ ಹೆಸರುಗಳನ್ನು ಕಾಮಾದಿಂದ ಬೇರ್ಪಡಿಸಿ ಟೈಪ್ ಮಾಡುವುದರ ಮೂಲಕ, ವೇರಿಯೇಬಲ್ ಗಳಲ್ಲಿರುವ ವ್ಯಾಲ್ಯುಗಳನ್ನು ಪರೀಕ್ಷಿಸಬಹುದು.
03:09 ಕಮಾಂಡ್ ಲೈನ್ ನಲ್ಲಿ a,b,c,d ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
03:16 ನಾನು ಇಲ್ಲಿ clc ಕಮಾಂಡ್ ಅನ್ನು ಉಪಯೋಗಿಸಿ ಕನ್ಸೋಲ್ ಅನ್ನು ಖಾಲಿ ಮಾಡುವೆನು.
03:21 ಘಾತಾಂಕವನ್ನು ಪಡೆಯಲು, “raised to” ಚಿಹ್ನೆಯನ್ನು ಉಪಯೋಗಿಸಿ. ಅದು ನಿಮ್ಮ ಕೀಬೋರ್ಡ್ ನಲ್ಲಿ 6 ರ ಕೀಯ ಮೇಲಿರುತ್ತದೆ.
03:29 ಈ ಚಿಹ್ನೆಯನ್ನು ಉಪಯೋಗಿಸಲು 'Shift' ಕೀಯನ್ನು ಒತ್ತಿ, ಸಂಖ್ಯೆ 6 ರ ಕೀಯನ್ನು ಒತ್ತಿ.
03:34 ಉದಾಹರಣೆಗೆ, 7 ರ ವರ್ಗವನ್ನು ಕಂಡುಹಿಡಿಯಲು 7 “raised to” 2 ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
03:43 ಒಂದು ಸಂಖ್ಯೆಯ ವರ್ಗಮೂಲವನ್ನು ಕಂಡುಹಿಡಿಯಲು, ಉದಾಹರಣೆಗೆ 17 ಎಂದುಕೊಳ್ಳಿ , ನಾವು  : sqrt ಆಫ್ 17 ಎಂಬ ಸ್ಟೇಟ್-ಮೆಂಟ್ ಅನ್ನು ಉಪಯೋಗಿಸುತ್ತೇವೆ.
03:55 ಇದು 17 “raised to” (ರೇಯ್ಸ್ಡ್ ಟು) ದ ಪವರ್ ಆಫ್ 0.5.
04:06 ಇಲ್ಲಿ, ರೂಢಿಯಂತೆ ಕೇವಲ ಧನಾತ್ಮಕ ವ್ಯಾಲ್ಯೂ ಉತ್ತರವಾಗಿ ಸಿಗುತ್ತದೆ.
04:10 ಉದಾಹರಣೆಗೆ, 34 ಟು ದ ಪವರ್ ಆಫ್ (2 by 5) ಇದನ್ನು ಕಂಡುಹಿಡಿಯಲು,
04:15 ಹೀಗೆ ಟೈಪ್ ಮಾಡಿ: 34 raised to bracket 2 divided by 5 close the bracket ಮತ್ತು Enter ಅನ್ನು ಒತ್ತಿ.
04:25 ಋಣಾತ್ಮಕ ಘಾತಗಳನ್ನು ಸಹ ಉಪಯೋಗಿಸಬಹುದು.
04:28 clc ಕಮಾಂಡ್ ಅನ್ನು ಉಪಯೋಗಿಸಿ ಕನ್ಸೋಲ್ ಅನ್ನು ಖಾಲಿ ಮಾಡಿ.
04:33 ಇಲ್ಲಿಯವರೆಗೆ ನೀವು ಕೆಲವು ಸರಳ ಲೆಕ್ಕಾಚಾರಗಳನ್ನು ಹೇಗೆ ಮಾಡುವುದು ಮತ್ತು ಸೈಲ್ಯಾಬ್ ನಲ್ಲಿ ವೇರಿಯೇಬಲ್ ಗಳನ್ನು ಹೇಗೆ ರಚಿಸುವುದು ಎಂದು ನೋಡಿದಿರಿ.
04:40 ಈಗ ಒಂದು ಹೊಸ ಕಮಾಂಡ್ ಅನ್ನು ಪ್ರಾರಂಭಿಸೋಣ.
04:43 ಮೊದಲೇ ಕೊಟ್ಟಿರುವ ಕಮಾಂಡ್ ಗಳನ್ನು ಅವುಗಳ ಔಟ್ಪುಟ್ ಗಳೊಂದಿಗೆ ನೆನಪಿಸಿಕೊಳ್ಳಲು ಇದು ಸಹಾಯಮಾಡುತ್ತದೆ.
04:49 ಮೊದಲು, pwd ಎಂಬ ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
04:55 ಇದು ನನ್ನ ಕಂಪ್ಯೂಟರ್ ನಲ್ಲಿ ಕರೆಂಟ್ ವರ್ಕಿಂಗ್ ಡೈರಕ್ಟರಿ ಆಗಿದೆ.
04:58 ಇದು ನಿಮ್ಮ ಕಂಪ್ಯೂಟರ್ ನಲ್ಲಿ ವಿಭಿನ್ನವಾಗಿರಬಹುದು.
05:01 ‘ಚೇಂಜ್ ಕರೆಂಟ್ ಡೈರಕ್ಟರಿ’ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ, ಕರೆಂಟ್ ವರ್ಕಿಂಗ್ ಡೈರಕ್ಟರಿಯನ್ನು ಬದಲಿಸಬಹುದು. ಇದು ‘ಸೈಲ್ಯಾಬ್ ಕನ್ಸೋಲ್ ವಿಂಡೊ’ ದ ಟೂಲ್ ಬಾರ್ ನಲ್ಲಿದೆ.
05:15 ಈಗ diary ಕಮಾಂಡ್ ಅನ್ನು ಕೊಡಿ. ಅದಕ್ಕಾಗಿ ಹೀಗೆ ಟೈಪ್ ಮಾಡಿ:
05:20 diary bracket, open inverted commas, myrecord.txt close inverted commas, close the bracket ಮತ್ತು Enter ಅನ್ನು ಒತ್ತಿ.
05:40 ಈ ಕಮಾಂಡ್, ಕರೆಂಟ್ ವರ್ಕಿಂಗ್ ಡೈರಕ್ಟರಿಯಲ್ಲಿ "myrecord.txt" ಎಂಬ ಫೈಲ್ ಅನ್ನು ರಚಿಸುತ್ತದೆ.
05:48 ಈಗಿನಿಂದ ಸೈಲ್ಯಾಬ್ ಸೆಷನ್ ನ ಒಂದು ಟ್ರಾನ್ಸ್ಕ್ರಿಪ್ಟ್ ,ಈ ಫೈಲ್ ನಲ್ಲಿ ಸೇವ್ ಆಗುತ್ತದೆ.
05:53 ಇದರ ಉಪಯೋಗವನ್ನು ಈ ಟ್ಯುಟೋರಿಯಲ್ ನ ಮುಂದಿನ ಭಾಗದಲ್ಲಿ ವಿವರಿಸುತ್ತೇನೆ.
06:00 ದಯವಿಟ್ಟು ಈಗ ಟ್ಯುಟೋರಿಯಲ್ ಅನ್ನು ಸ್ವಲ್ಪ ನಿಲ್ಲಿಸಿ (pause ಮಾಡಿ), ವಿಡಿಯೋದಲ್ಲಿ ಕೊಟ್ಟಿರುವ ಮೊದಲ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ.
06:07 ಈಗ, ಸೈಲ್ಯಾಬ್ ಕಾಂಪ್ಲೆಕ್ಸ್ ಸಂಖ್ಯೆಗಳನ್ನು ಹೇಗೆ ನಿರ್ವಹಿಸುತ್ತದೆ ಎಂದು ನೋಡೋಣ.
06:13 ಸೈಲ್ಯಾಬ್ ನಲ್ಲಿ, ಇಮ್ಯಾಜಿನರಿ ಯುನಿಟ್ i ಅನ್ನು percent i ಎಂದು ವ್ಯಾಖ್ಯಾನಿಸುತ್ತಾರೆ.
06:18 ಉದಾಹರಣೆಗೆ, Five point two multiplied percent i ನಿಮಗೆ 5.2i (five point two i) ಅನ್ನು ಕೊಡುತ್ತದೆ;
06:29 ಅಲ್ಲದೆ, ‘bracket 10 plus 5 into percent i whole multiply by 2 times percent i’ ಇದು -10 + 20i ಎಂಬ ಉತ್ತರವನ್ನು ಕೊಡುತ್ತದೆ.
06:58 ಈಗ ಇಲ್ಲಿ ಕನ್ಸೋಲ್ ಅನ್ನು ಖಾಲಿ ಮಾಡಿ.
07:04 ನಾವು ಸೈಲ್ಯಾಬ್ ನಲ್ಲಿ ಲಭ್ಯವಿರುವ ಇನ್ನೂ ಕೆಲವು ಮೊದಲೇ ಡಿಫೈನ್ ಮಾಡಲಾದ ಸಾಂಖ್ಯಿಕ ಕಾನ್ಸ್ಟೆಂಟ್ ಗಳನ್ನು ನೋಡೋಣ.
07:09 ‘I’ ನಂತೆ, ಅವುಗಳ ಹೆಸರುಗಳು ಸಹ ಪರ್ಸೆಂಟ್ ಚಿಹ್ನೆಯೊಂದಿಗೆ ಪ್ರಾರಂಭವಾಗುತ್ತವೆ.
07:13 ಉದಾಹರಣೆಗೆ, percent pi (%pi).
07:18 pi ನ ವ್ಯಾಲ್ಯು, ನಿರೀಕ್ಷಿಸಿದಂತೆ ಇರುತ್ತದೆ.
07:21 ಈಗ ನಾವು ಕೆಲವು ಬಿಲ್ಟ್-ಇನ್ ಟ್ರಿಗ್ನೋಮೆಟ್ರಿಕ್ ಫಂಕ್ಷನ್ ಗಳನ್ನು ಬಳಸಿ pi ನ ಉಪಯೋಗವನ್ನು ಹೀಗೆ ವಿವರಿಸುವೆವು:
07:27 sine of percent pi by 2 ಫಂಕ್ಷನ್ ನ ಫಲಿತಾಂಶವು 1 ಆಗಿರುತ್ತದೆ.
07:37 ಮತ್ತು, cos of percent pi by 2 ನ ಫಲಿತಾಂಶವು 6.123D-17 ಆಗಿರುತ್ತದೆ.
07:50 ದಯವಿಟ್ಟು ಗಮನಿಸಿ: ಕೋನಗಳನ್ನು ರೇಡಿಯನ್ ಗಳಲ್ಲಿ ಹೇಳಲಾಗಿದೆ ಮತ್ತು
07:54 ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗೆ ಎರಡನೇ ಉತ್ತರವು ಸೊನ್ನೆಯಾಗಿದೆ.
07:59 %eps ಇದು "machine epsilon" ಎಂಬ ಸಂಖ್ಯೆಗೆ ಸಂಬಂಧಿಸಿದೆ.
08:03 ಇದು ಸೈಲ್ಯಾಬ್ ಕೊಡಬಹುದಾದ 'ಮಿನಿಮಮ್ ಡಿಜಿಟ್ ರೆಸೊಲ್ಯುಷನ್' ಆಗಿದೆ.
08:08 ನಿಮ್ಮ ಕಂಪ್ಯೂಟರ್ ನಲ್ಲಿ ಇದರ ವ್ಯಾಲ್ಯೂಅನ್ನು ಕಂಡುಹಿಡಿಯಲು, ಕನ್ಸೋಲ್ ನಲ್ಲಿ %eps ಎಂದು ಟೈಪ್ ಮಾಡಿ.
08:19 ನನ್ನ ಕಂಪ್ಯೂಟರ್ ನಲ್ಲಿ ಇದು 2.220D-16 ಎಂದು ಕೊಡುತ್ತದೆ.
08:24 ಇದು ಸೈಲ್ಯಾಬ್ ನಿಂದ ಬಳಸಲಾದ 'ಫ್ಲೋಟಿಂಗ್ ಪಾಯಿಂಟ್ ಪ್ರಿಸಿಶನ್' ಅನ್ನು ತೋರಿಸುತ್ತದೆ.
08:28 ಈ ಸಂಖ್ಯೆಯು 2.22 ಟೈಮ್ಸ್ 10^(-16) ಅನ್ನು ಸೂಚಿಸುತ್ತದೆ. ಇಲ್ಲಿ ಕನ್ಸೋಲ್ ಅನ್ನು ಖಾಲಿ ಮಾಡಿ.
08:41 ನಿಮಗೆ 0.000456 ಎಂದು ಬರೆಯಬೇಕಾಗಿದ್ದರೆ, ನೀವು ಅದನ್ನು 4.56d-4 ಅಥವಾ 4.56e-4 ಎಂದು ಬರೆಯಬಹುದು.
09:06 ಸೈಲ್ಯಾಬ್ ನ ವೇರಿಯೇಬಲ್ ಮತ್ತು ಫಂಕ್ಷನ್ ಗಳು ಕೇಸ್ ಸೆನ್ಸಿಟಿವ್ ಆಗಿದ್ದರೂ ಸಹ ನಾವು ಇಲ್ಲಿ ಸಣ್ಣ d ಅಥವಾ ಕ್ಯಾಪಿಟಲ್ D, ಸಣ್ಣ e ಅಥವಾ ಕ್ಯಾಪಿಟಲ್ E ಯನ್ನು ಬಳಸಬಹುದು.
09:16 ನ್ಯಾಚುರಲ್ ಲೊಗೆರಿದಮ್ ನ ಬೇಸ್ ಕೂಡ ಇನ್ನೊಂದು ಮುಖ್ಯವಾದ ಪ್ರಿಡಿಫೈನ್ ಮಾಡಿದ ಸಾಂಖ್ಯಿಕ ಕಾನ್ಸ್ಟಂಟ್ ಆಗಿದೆ.
09:22 percent e (%e) ಯು ನಿರೀಕ್ಷಿಸಿದ ಫಲಿತಾಂಶವನ್ನು ಕೊಡುತ್ತದೆ.
09:30 ನಾವು ಇದೇ ಫಲಿತಾಂಶವನ್ನು "e x p" ಎಂಬ ಫಂಕ್ಷನ್ ನಿಂದ ಪಡೆಯಬಹುದು.
09:35 ಉದಾಹರಣೆಗೆ: exp bracket 1 close the bracket ಮತ್ತು Enter ಅನ್ನು ಒತ್ತಿ.
09:44 ಎರಡೂ ಉತ್ತರಗಳು ಒಂದೇ ಆಗಿರುವುದನ್ನು ನೀವು ಗಮನಿಸಬಹುದು.
09:47 ಇಲ್ಲಿ clc ಕಮಾಂಡ್ ಅನ್ನು ಉಪಯೋಗಿಸಿ ಕನ್ಸೋಲ್ ಅನ್ನು ಖಾಲಿ ಮಾಡಿ.
09:55 ಇದೇ ರೀತಿಯಲ್ಲಿ,
09:56  %e ವರ್ಗವು ಕೆಳಗಿನ ಉತ್ತರವನ್ನು ಕೊಡುತ್ತದೆ.
10:04 ಇದನ್ನು 'exp of 2' ಎಂದು ಟೈಪ್ ಮಾಡಿ ಸಹ ಪಡೆಯಬಹುದು.
10:18 log ಕಮಾಂಡ್, ಒಂದು ಸಂಖ್ಯೆಯ 'ನ್ಯಾಚುರಲ್ ಲೊಗ್ಯಾರಿದಮ್' ಅನ್ನು ಎಂದರೆ 'ಬೇಸ್ e' ಹೊಂದಿರುವುದನ್ನು ಸೂಚಿಸುತ್ತದೆ.
10:23 'ಬೇಸ್ 10' ರ ಲೊಗ್ಯಾರಿದಮ್ ಅನ್ನು ಪಡೆಯಲು 'log 10' ಅನ್ನು ಉಪಯೋಗಿಸಿ.
10:29 ಉದಾಹರಣೆಗೆ, log10 bracket 1e minus 23 close bracket ಮತ್ತು Enter ಅನ್ನು ಒತ್ತಿ. ಇದು ನಿಮಗೆ -23 ಎಂದು ನಿರೀಕ್ಷಿಸಿದ ಉತ್ತರವನ್ನು ಕೊಡುತ್ತದೆ.
10:47 ಋಣಾತ್ಮಕ ಸಂಖ್ಯೆಯ ಲೊಗ್ಯಾರಿದಮ್, ಕಾಂಪ್ಲೆಕ್ಸ್ ಸಂಖ್ಯೆ ಯಾಗಿರುತ್ತದೆ.
10:51 ಕಾಂಪ್ಲೆಕ್ಸ್ ಸಂಖ್ಯೆಗಳಿಗಾಗಿ ನೀವೇ ಇದನ್ನು ಪರೀಕ್ಷಿಸಬಹುದು. ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ log of -1 ಅಥವಾ log of %i ಎಂದು ಟೈಪ್ ಮಾಡಿ.
11:01 ನಾವು diary ಕಮಾಂಡ್ ನ ಮೂಲಕ ಟೈಪ್ ಮಾಡಿದ ಎಲ್ಲಾ ಕಮಾಂಡ್ ಗಳನ್ನು myrecord.txt ಫೈಲ್ ನಲ್ಲಿ ಸೇವ್ ಮಾಡುತ್ತಿರುವುದನ್ನು ಈಗ ನೆನಪಿಸಿಕೊಳ್ಳಿ.
11:09 ಈಗ, ಆ ಫೈಲ್ ಅನ್ನು ಹೇಗೆ ಕ್ಲೋಸ್ ಮಾಡುವುದು ಮತ್ತು ನೋಡುವುದು ಎಂದು ನೋಡೋಣ.
11:13 ಫೈಲ್ ಅನ್ನು ಕ್ಲೋಸ್ ಮಾಡಲು,
11:16 diary of zero ಎಂದು ಟೈಪ್ ಮಾಡಿ.
11:21 ಈ ಕಮಾಂಡ್, myrecord.txt ಫೈಲ್ ಅನ್ನು ಸೇವ್ ಮಾಡಿ ಕ್ಲೋಸ್ ಮಾಡುತ್ತದೆ.
11:26 ಅಲ್ಲದೆ, ಈ ಫೈಲ್ ಅನ್ನು ಕರೆಂಟ್ ವರ್ಕಿಂಗ್ ಡೈರಕ್ಟರಿಯಲ್ಲಿ ಕ್ರಿಯೇಟ್ ಮಾಡಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಿ ಮತ್ತು ನನ್ನ ಸಿಸ್ಟಮ್ ನಲ್ಲಿ ಇದು ಡೆಸ್ಕ್-ಟಾಪ್ ಆಗಿದೆ.
11:34 ಈಗ ಆ ಫೈಲ್ ಅನ್ನು ತೆರೆಯೋಣ. ಹೀಗೆ ಮಾಡಲು, ನಿಮ್ಮ ಸೈಲ್ಯಾಬ್ ಕನ್ಸೋಲ್ ವಿಂಡೋ ಟೂಲ್-ಬಾರ್ ನಲ್ಲಿರುವ Open-a-file ಎಂಬ ಶಾರ್ಟಕಟ್ ಐಕಾನ್ ಅನ್ನು ಕ್ಲಿಕ್ ಮಾಡಿ.
11:46 ನಾನು ಫೈಲ್ ಫಾರ್ಮ್ಯಾಟ್ ಅನ್ನು All Files ಗೆ ಬದಲಿಸುತ್ತೇನೆ.
11:51 myrecord.txt ಫೈಲ್ ಅನ್ನು ಆರಿಸಿಕೊಂಡು, Open ನ ಮೇಲೆ ಕ್ಲಿಕ್ ಮಾಡಿ.
11:59 ಗಮನಿಸಿ: ಎಲ್ಲಾ ಚಟುವಟಿಕೆಗಳು, ಅಂದರೆ, ಎಲ್ಲ ಕಮಾಂಡ್ ಗಳು ಮತ್ತು ಸೈಲ್ಯಾಬ್ ಕೊಟ್ಟ ಸಂಬಂಧಿತ ಉತ್ತರಗಳು, ಈ ಫೈಲ್ ನಲ್ಲಿ ಸೇವ್ ಆಗಿದೆ.
12:10 ನಾನು ಈ ಫೈಲ್ ಅನ್ನು ಕ್ಲೋಸ್ ಮಾಡುತ್ತೇನೆ.
12:15 Yes ಅನ್ನು ಕ್ಲಿಕ್ ಮಾಡಿ.
12:21 ಒಂದು ಪ್ರೋಗ್ರಾಮ್ ಅನ್ನು ಡೆವೆಲಪ್ ಮಾಡುವಾಗ, ಸರಿಯಾದ ಕೋಡ್ ಸಿಗುವ ಮೊದಲು ನಾವು ಕೋಡ್ ಗಳೊಂದಿಗೆ ತುಂಬಾ ಪ್ರಯೋಗಗಳನ್ನು ಮಾಡುತ್ತೇವೆ.
12:29 Diary ಕಮಾಂಡ್, ಈ ಎಲ್ಲಾ ಚಟುವಟಿಕೆಗಳ ವಿವರಗಳನ್ನು ಇಡಲು ಸಹಾಯ ಮಾಡುತ್ತದೆ.
12:35 diary of zero ಕಮಾಂಡ್ ಅನ್ನು ಉಪಯೋಗಿಸಿ ನಾವು myrecord.txt ಫೈಲ್ ಅನ್ನು ಕ್ಲೋಸ್ ಮಾಡಿರುವುದನ್ನು ನೀವು ನೆನಪಿಸಿಕೊಳ್ಳಿ.
12:42 ದಯವಿಟ್ಟು ಗಮನಿಸಿ: ಈ ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಿದ ನಂತರ ಯಾವುದೇ ವ್ಯವಹಾರಗಳನ್ನು ಸೇವ್ ಮಾಡಲು ಸಾಧ್ಯವಿಲ್ಲ.
12:48 ಈ ಸೆಷನ್ ಅನ್ನು ಇನ್ನೊಮ್ಮೆ ಸೇವ್ ಮಾಡಲು, ನಾವು ಪುನಃ diary ಕಮಾಂಡ್ ಅನ್ನು ಕೊಡಬೇಕಾಗುತ್ತದೆ.
12:54 ಒಂದುವೇಳೆ ಫೈಲ್ ನಲ್ಲಿ ಉಪಯುಕ್ತ ಮಾಹಿತಿ ಇದ್ದರೆ, ಆಗ diary ಕಮಾಂಡ್ ನಲ್ಲಿ ಬೇರೆ ಫೈಲ್ ಹೆಸರನ್ನು ಉಪಯೋಗಿಸಬೇಕು.
13:03 ಏಕೆಂದರೆ ಅದೇ ಫೈಲ್ ಹೆಸರನ್ನು ಬಳಸಿದರೆ, ಅದು ಈಗಿನ ಫೈಲ್ ನಲ್ಲಿ ಓವರ್-ರೈಟ್ ಮಾಡುತ್ತದೆ.
13:09 ವಿಡಿಯೋವನ್ನು ಇಲ್ಲಿ ಸ್ವಲ್ಪ ನಿಲ್ಲಿಸಿ ಮತ್ತು ವಿಡಿಯೋದಲ್ಲಿ ಕೊಟ್ಟಿರುವ ಎರಡನೆಯ ಅಭ್ಯಾಸವನ್ನು ಮಾಡಿ.
13:15 ಸಮಸ್ಯೆಯ ಉತ್ತರವು ಸೊನ್ನೆ ಅಲ್ಲ ಎಂಬುದನ್ನು ನೀವು ಗಮನಿಸಿರಬಹುದು.
13:21 ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಮಾಹಿತಿಗಾಗಿ, “help clean” ಎಂದು ಟೈಪ್ ಮಾಡಿ.
13:27 ಸಾಮಾನ್ಯವಾಗಿ, ನಿಮಗೆ ಒಂದು ನಿರ್ದಿಷ್ಟ ಕಮಾಂಡ್ ಗೆ ಸಹಾಯ ಬೇಕಿದ್ದಲ್ಲಿ, 'help' ಅಥವಾ ಆರ್ಗ್ಯುಮೆಂಟ್ ನೊಂದಿಗೆ help ಕಮಾಂಡ್ ಅನ್ನು ಉಪಯೋಗಿಸಬಹುದು.
13:37 ಉದಾಹರಣೆಗೆ, ಸೈಲ್ಯಾಬ್ ಕನ್ಸೋಲ್ ನಲ್ಲಿ “help chdir” ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
13:53 ನಾನು Help Browser ನ ಗಾತ್ರವನ್ನು ಹೆಚ್ಚಿಸುತ್ತೇನೆ.
14:01 Help chdir ಇದು, 'ಕರೆಂಟ್ ವರ್ಕಿಂಗ್ ಡೈರಕ್ಟರಿ'ಯನ್ನು ಬದಲಾಯಿಸುವ ವಿಧಾನದ ಬಗ್ಗೆ ವಿವರವಾದ ಮಾಹಿತಿಯನ್ನು ಕೊಡುತ್ತದೆ.
14:10 ಇನ್ನೊಂದು ಆಯ್ಕೆಯೆಂದರೆ, ಇಲ್ಲಿ ಸೈಲ್ಯಾಬ್ ನ ಕನ್ಸೋಲ್ ವಿಂಡೋ ದ ಟೂಲ್-ಬಾರ್ ನಲ್ಲಿರುವ Help Browser ಐಕಾನ್ ಅನ್ನು ಕ್ಲಿಕ್ ಮಾಡುವುದು.
14:20 ಈಗ ನಾನು Help Browser ಅನ್ನು ಕ್ಲೋಸ್ ಮಾಡಿ, ಸ್ಲೈಡ್ ಗಳಿಗೆ ಹಿಂದಿರುಗುತ್ತೇನೆ.
14:31 up - down ಆರೋ ಕೀ ಗಳನ್ನು ಉಪಯೋಗಿಸಿ, ಮೊದಲು ಎಕ್ಸಿಕ್ಯೂಟ್ ಮಾಡಿದ ಕಮಾಂಡ್ ಗಳನ್ನು ನೋಡಬಹುದು.
14:36 up - down ಆರೋ ಕೀ ಗಳನ್ನು ಉಪಯೋಗಿಸುವಾಗ, ಯಾವುದೇ ಕಮಾಂಡ್ ನ್ನು ಎಕ್ಸಿಕ್ಯೂಟ್ ಮಾಡಲು, ಅದನ್ನು ನಿಲ್ಲಿಸಿ ಮತ್ತು ಅದರ ಮೇಲೆ Enter ಅನ್ನು ಒತ್ತಬೇಕು.
14:45 ಅವಶ್ಯವಿದ್ದರೆ ನೀವು ಕಮಾಂಡ್ ಅನ್ನು ಎಡಿಟ್ ಮಾಡಬಹುದು.
14:48 ಒಂದುವೇಳೆ ನೀವು ಮೊದಲು ಟೈಪ್ ಮಾಡಿದ 'e' ಅಕ್ಷರದಿಂದ ಪ್ರಾರಂಭವಾಗುವ ಕಮಾಂಡ್ ಗಾಗಿ ನೀವು ಹುಡುಕುತ್ತಿದ್ದರೆ, ಆಗ e ಎಂದು ಟೈಪ್ ಮಾಡಿ, ನಂತರ 'up arrow key' ಯನ್ನು ಉಪಯೋಗಿಸಿ.
14:59 ಕಮಾಂಡ್, ತಂತಾನೇ ಪೂರ್ಣಗೊಳ್ಳಲು ಟ್ಯಾಬ್ ಕೀಯನ್ನು ಉಪಯೋಗಿಸಿ. ಇದು, ಲಭ್ಯವಿರುವ ಎಲ್ಲ ಆಯ್ಕೆಗಳನ್ನು ಆರಿಸಿಕೊಳ್ಳಲು ನಮಗೆ ಅವಕಾಶ ಕೊಡುತ್ತದೆ.
15:07 ಈ ಟ್ಯುಟೋರಿಯಲ್ ನಲ್ಲಿ ನಾವು:
15:10 * ಸೈಲ್ಯಾಬ್ ಅನ್ನು ಒಂದು ಕ್ಯಾಲ್ಕ್ಯುಲೇಟರ್ ನಂತೆ ಉಪಯೋಗಿಸಲು
15:12 * ಫಲಿತಾಂಶವನ್ನು ಡಿಫಾಲ್ಟ್ ವೇರಿಯೇಬಲ್ ಆದ ans ನಲ್ಲಿ ಸ್ಟೋರ್ ಮಾಡಲು
15:16 * 'equality' ಚಿಹ್ನೆಯನ್ನುಪಯೋಗಿಸಿ, ವೇರಿಯೇಬಲ್ ಗಳಿಗೆ ವ್ಯಾಲ್ಯುಗಳನ್ನು ಅಸೈನ್ ಮಾಡಲು
15:20 * ಕನ್ಸೋಲ್ ನಲ್ಲಿ ವೇರಿಯೇಬಲ್ ಗಳ ಹೆಸರನ್ನು ಕಾಮಾ ದಿಂದ ಬೇರ್ಪಡಿಸಿ ಟೈಪ್ ಮಾಡುವುದರ ಮೂಲಕ ಅವುಗಳ ವ್ಯಾಲ್ಯುಗಳನ್ನು ಪರೀಕ್ಷಿಸಲು
15:28 * pwd ಕಮಾಂಡ್ ಅನ್ನು ಉಪಯೋಗಿಸಿ ಕರೆಂಟ್ ವರ್ಕಿಂಗ್ ಡೈರಕ್ಟರಿಯನ್ನು ಪರೀಕ್ಷಿಸಲು
15:34 * diary ಕಮಾಂಡ್ ಅನ್ನು ಉಪಯೋಗಿಸಿ, ಕನ್ಸೋಲ್ ನಲ್ಲಿ ಟೈಪ್ ಮಾಡಲಾದ ಎಲ್ಲ ಕಮಾಂಡ್ ಗಳನ್ನು ಫೈಲ್ ನಲ್ಲಿ ಸೇವ್ ಮಾಡಲು
15:40 * ಕಾಂಪ್ಲೆಕ್ಸ್ ನಂಬರ್ ಗಳು, ನ್ಯಾಚುರಲ್ ಎಕ್ಸ್ಪೊನೆಂಟ್ ಗಳು, ಮತ್ತು π ಇವುಗಳನ್ನು ಕ್ರಮವಾಗಿ %i, %e ಮತ್ತು %pi ಗಳನ್ನು ಉಪಯೋಗಿಸಿ ವ್ಯಾಖ್ಯಾನಿಸಲು ಹಾಗೂ
15:49 * ಯಾವುದೇ ಕಮಾಂಡ್ ನ ಕುರಿತು ಮಾಹಿತಿಗಾಗಿ help ಕಮಾಂಡ್ ಅನ್ನು ಉಪಯೋಗಿಸಲು ಕಲಿತಿದ್ದೇವೆ.
15:54 ಇದರೊಂದಿಗೆ ನಾವು ಸೈಲ್ಯಾಬ್ ನಲ್ಲಿ Getting Started ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
15:59 ಸೈಲ್ಯಾಬ್ ನಲ್ಲಿ ಇರುವ ಇನ್ನೂ ಹಲವಾರು ಫಂಕ್ಷನ್ ಗಳನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗುವುದು.
16:06 ಈ ಟ್ಯುಟೋರಿಯಲ್ ಅನ್ನು Free and Open Source Software in Science and Engineering Education (FOSSEE) ಇವರಿಂದ ರಚಿಸಲಾಗಿದೆ.
16:14 FOSSEE ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನ ಲಿಂಕ್ ಗಳಲ್ಲಿ ಪಡೆಯಬಹುದು.

http://fossee.in ಅಥವಾ http://scilab.in

16:22 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ.
16:29 ಇದರ ಕುರಿತು ಹೆಚ್ಚಿನ ವಿವರಗಳು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.

spoken-tutorial.org/NMEICT-intro

16:43 ಈ ಸ್ಪೋಕನ್ ಟ್ಯುಟೋರಿಯಲ್, ನಿಮಗೆ ಕಲಿಯಲು ಸಹಾಯ ಮಾಡಿದೆ ಎಂದುಕೊಳ್ಳುತ್ತೇನೆ.
16:47 ಧನ್ಯವಾದಗಳು.
16:48 ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

Contributors and Content Editors

Anjana310312, Sandhya.np14