Git/C2/The-git-checkout-command/Kannada

From Script | Spoken-Tutorial
Revision as of 12:10, 28 August 2017 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:01 git checkout command (ಗಿಟ್ ಚೆಕ್-ಔಟ್ ಕಮಾಂಡ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು: * ಒಂದಕ್ಕಿಂತ ಹೆಚ್ಚು ಫೈಲ್ ಗಳನ್ನು ‘ಗಿಟ್ ರಿಪಾಸಿಟರಿ’ಗೆ ಸೇರಿಸುವುದು
00:12 'ಗಿಟ್ ರಿಪಾಸಿಟರಿ'ಯಿಂದ ಫೈಲನ್ನು ತೆಗೆದುಹಾಕುವುದು
00:16 ತೆಗೆದುಹಾಕಿದ ಫೈಲನ್ನು ಪುನಃ ಸೇರಿಸುವುದು
00:18 ಫೈಲ್ ನಲ್ಲಿ ಮಾಡಿದ ಬದಲಾವಣೆಗಳನ್ನು ತ್ಯಜಿಸುವುದು ಮತ್ತು
00:21 ಹಿಂದಿನ ಪರಿಷ್ಕರಣೆಗೆ (ರಿವಿಜನ್) ಹಿಂದಿರುಗುವುದು ಇತ್ಯಾದಿಗಳ ಬಗ್ಗೆ ಕಲಿಯುವೆವು.
00:25 ಈ ಟ್ಯುಟೋರಿಯಲ್ ಗಾಗಿ, ನಾನು: 'Ubuntu Linux' (ಉಬಂಟು ಲಿನಕ್ಸ್) 14.04
00:31 'Git' 2.3.2. ಮತ್ತು 'gedit' ಟೆಕ್ಸ್ಟ್ ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ.
00:36 ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು.
00:40 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಟರ್ಮಿನಲ್ ನ ಮೇಲೆ ಲಿನಕ್ಸ್ ಕಮಾಂಡ್ ಗಳನ್ನು ರನ್ ಮಾಡಲು ತಿಳಿದಿರಬೇಕು.
00:47 ಇಲ್ಲದಿದ್ದಲ್ಲಿ, ಸಂಬಂಧಿತ 'Linux' ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
00:52 ಈಗ, ನಾವು ಒಂದಕ್ಕಿಂತ ಹೆಚ್ಚು ಫೈಲ್ ಗಳನ್ನು ‘ಗಿಟ್ ರಿಪೊಸಿಟರಿ’ಗೆ ಹೇಗೆ ಸೇರಿಸುವುದು ಎಂಬುದನ್ನು ನೋಡೋಣ.
00:58 ಟರ್ಮಿನಲ್ ಅನ್ನು ಓಪನ್ ಮಾಡಲು 'Ctrl+Alt+T' ಕೀಗಳನ್ನು ಒಟ್ಟಿಗೇ ಒತ್ತಿ.
01:02 ನಾವು ಈಮೊದಲು ಕ್ರಿಯೇಟ್ ಮಾಡಿದ "mywebpage" ಎಂಬ ನಮ್ಮ ‘ಗಿಟ್ ರಿಪಾಸಿಟರಿ’ಯ ಒಳಗೆ ಹೋಗುವೆವು.
01:09 ಹೀಗೆ ಟೈಪ್ ಮಾಡಿ: 'cd space mywebpage' ಮತ್ತು 'Enter' ಅನ್ನು ಒತ್ತಿ.
01:14 ಇಲ್ಲಿ ಪ್ರದರ್ಶಿಸಲು, ನಾನು 'html' ಫೈಲ್ ಗಳನ್ನು ಬಳಸುವುದನ್ನು ಮುಂದುವರೆಸುವೆನು.
01:19 ನೀವು, ನಿಮಗೆ ಇಷ್ಟವಾದ ಯಾವುದೇ ಪ್ರಕಾರದ ಫೈಲನ್ನು ಬಳಸಬಹುದು.
01:23 ನಾವು ಈಗ ಎರಡು 'html' (ಎಚ್ ಟಿ ಎಮ್ ಎಲ್) ಫೈಲ್ ಗಳನ್ನು ಕ್ರಿಯೇಟ್ ಮಾಡುವೆವು.
01:27 ಆದ್ದರಿಂದ, ಹೀಗೆ ಟೈಪ್ ಮಾಡಿ: 'gedit space mystory.html space mynovel.html space ampersand'.
01:37 ಪ್ರಾಂಪ್ಟ್ ಅನ್ನು ಮುಕ್ತಗೊಳಿಸಲು ನಾವು & (ಆಂಪರ್ಸಂಡ್) ಅನ್ನು ಬಳಸುತ್ತೇವೆ. 'Enter' ಅನ್ನು ಒತ್ತಿ.
01:43 ನಾನು ಮೊದಲು ಸೇವ್ ಮಾಡಿದ ನನ್ನ 'Writer' ಡಾಕ್ಯೂಮೆಂಟ್ ನಿಂದ ಸ್ವಲ್ಪ ಕೋಡ್ ಅನ್ನು ಈ ಫೈಲ್ ಗಳಲ್ಲಿ ಕಾಪಿ ಮತ್ತು ಪೇಸ್ಟ್ ಮಾಡುವೆನು.
01:50 ನಾವು ಈ ಫೈಲ್ ಗಳನ್ನು ಸೇವ್ ಮಾಡೋಣ.
01:53 'ಟರ್ಮಿನಲ್' ನಲ್ಲಿ, 'git space status' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ ಮತ್ತು ಮೊದಲು 'Git ಸ್ಟ್ಯಾಟಸ್' ಅನ್ನು ನೋಡಿ.
02:03 ಅದು ಎರಡು ಅನ್ಟ್ರ್ಯಾಕ್ಡ್ (untracked) ಫೈಲ್ ಗಳನ್ನು ತೋರಿಸುತ್ತದೆ.
02:06 ನಾವು ಈಗ ಅನ್ಟ್ರ್ಯಾಕ್ಡ್ ಫೈಲ್ ಗಳನ್ನು ಟ್ರ್ಯಾಕಿಂಗ್ ಗಾಗಿ ಸೇರಿಸುವೆವು.
02:10 ಹೀಗೆ ಟೈಪ್ ಮಾಡಿ: 'git space add space dot' ಮತ್ತು 'Enter' ಅನ್ನು ಒತ್ತಿ.
02:17 'git add dot' ಕಮಾಂಡ್, ಎಲ್ಲ ಅನ್ಟ್ರ್ಯಾಕ್ಡ್ ಫೈಲ್ ಗಳನ್ನು 'ಸ್ಟೇಜಿಂಗ್ ಏರಿಯಾ'ಗೆ ಸೇರಿಸುವುದು.
02:23 ಹೀಗಾಗಿ, "mystory.html" ಹಾಗೂ "mynovel.html" ಈ ಎರಡು ಫೈಲ್ ಗಳನ್ನು ‘ಸ್ಟೇಜಿಂಗ್ ಏರಿಯಾ’ ಗೆ ಸೇರಿಸಲಾಗಿದೆ.
02:32 'git space status' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತುವುದರ ಮೂಲಕ ನಾವು 'Git ಸ್ಟ್ಯಾಟಸ್' ಅನ್ನು ಮತ್ತೊಮ್ಮೆ ಪರೀಕ್ಷಿಸೋಣ.
02:40 ಈಗ, ‘ಗಿಟ್ ರಿಪಾಸಿಟರಿ’ಯ ‘ಸ್ಟೇಜಿಂಗ್ ಏರಿಯಾ’ಗೆ ನಮ್ಮ ಎರಡೂ ಫೈಲ್ ಗಳು ಸೇರಿಸಲ್ಪಟ್ಟಿವೆ ಎಂಬುದನ್ನು ನಾವು ನೋಡಬಹುದು.
02:47 ನಾವು 'mystory.html' ಹಾಗೂ 'mynovel.html' ಎಂಬ ನಮ್ಮ ಫೈಲ್ ಗಳಿಗೆ ಹಿಂದಿರುಗೋಣ.
02:54 ಈಗ, ನಾವು ಈ ಎರಡು ಫೈಲ್ ಗಳಿಗೆ ಇನ್ನೂ ಕೆಲವು ಸಾಲು ಕೋಡ್ ಅನ್ನು ಸೇರಿಸುವೆವು.
03:00 ಹಿಂದಿನಂತೆ, ನನ್ನ 'Writer' ಡಾಕ್ಯೂಮೆಂಟ್ ನಿಂದ ನಾನು ಕಾಪಿ-ಪೇಸ್ಟ್ ಮಾಡುವೆನು.
03:05 ಮತ್ತೊಮ್ಮೆ ಫೈಲ್ ಗಳನ್ನು ಸೇವ್ ಮಾಡಿ ಹಾಗೂ ಮುಚ್ಚಿ.
03:08 'git space status' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತುವುದರ ಮೂಲಕ ನಾವು 'Git ಸ್ಟ್ಯಾಟಸ್'ಅನ್ನು ಮತ್ತೊಮ್ಮೆ ಪರೀಕ್ಷಿಸೋಣ.
03:16 ಇದು “Changes not staged for commit” ಹಾಗೂ “modified: mynovel.html" ಮತ್ತು "mystory.html” ಎಂದು ತೋರಿಸುತ್ತದೆ.
03:26 ನಾವು ಮಾಡಿದ ಬದಲಾವಣೆಗಳನ್ನು ‘ಸ್ಟೇಜಿಂಗ್ ಏರಿಯಾ’ಗೆ ಸೇರಿಸಲಾಗಿಲ್ಲ ಎಂದು ಇದರ ಅರ್ಥ.
03:32 ನಾವು ಈಗ ನಮ್ಮ ಕೆಲಸವನ್ನು ಈ ಹಂತದಲ್ಲಿ 'ಕಮಿಟ್' ಮಾಡೋಣ.
03:36 ಆದ್ದರಿಂದ, ಹೀಗೆ ಟೈಪ್ ಮಾಡಿ: ‘git space commit space hyphen a space hyphen m space’ ಡಬಲ್ ಕೋಟ್ಸ್ ನಲ್ಲಿ “Added two files” ಮತ್ತು 'Enter' ಅನ್ನು ಒತ್ತಿ.
03:50 ಕಮಿಟ್ ಮಾಡುವ ಮೊದಲು, ನಾವು ಮಾರ್ಪಡಿಸಿದ ಫೈಲ್ ಗಳನ್ನು ‘ಸ್ಟೇಜಿಂಗ್ ಏರಿಯಾ’ಗೆ ಸೇರಿಸಲಿಲ್ಲ ಮತ್ತು
03:57 ನಾವು ಹಿಂದಿನ ಟ್ಯುಟೋರಿಯಲ್ ನಲ್ಲಿ ನೋಡಿದಂತೆ, 'ಕಮಿಟಿಂಗ್ ಮೆಸೇಜ್' ಗಾಗಿ ಎಡಿಟರ್ ಸಹ ತೆರೆದುಕೊಳ್ಳಲಿಲ್ಲ ಎಂಬುದನ್ನು ಗಮನಿಸಿ.
04:03 ಏಕೆಂದರೆ, ಇಲ್ಲಿ ನಾವು 'ಹೈಫನ್ a' ಮತ್ತು 'ಹೈಫನ್ m' ಫ್ಲ್ಯಾಗ್ ಗಳನ್ನು ಬಳಸಿದ್ದೇವೆ.
04:10 ಈ ಫ್ಲ್ಯಾಗ್ ಗಳು ಇರುವದು ಏತಕ್ಕಾಗಿ?
04:13 ನಮ್ಮ ಸ್ಲೈಡ್ ಗಳಿಗೆ ಹಿಂತಿರುಗಿ.
04:15 ಎಲ್ಲ ಮಾರ್ಪಡಿಸಿದ ಫೈಲ್ ಗಳನ್ನು ‘ಸ್ಟೇಜಿಂಗ್ ಏರಿಯಾ’ಗೆ ಸೇರಿಸಲು 'ಹೈಫನ್ a' ಫ್ಲ್ಯಾಗ್ ಅನ್ನು ಬಳಸಲಾಗುವುದು.
04:21 ನಾವು 'ಹೈಫನ್ a' ಫ್ಲ್ಯಾಗ್ ಅನ್ನು ಬಳಸಿದಾಗ, ಮಾರ್ಪಡಿಸಿದ ಫೈಲ್ ಗಳನ್ನು ‘ಸ್ಟೇಜಿಂಗ್ ಏರಿಯಾ’ ಗೆ ಸೇರಿಸಲು ನಮಗೆ ಮತ್ತೆ 'git add' ಕಮಾಂಡ್ ಅನ್ನು ಬಳಸುವ ಅವಶ್ಯಕತೆ ಇಲ್ಲ.
04:30 'ಕಮಾಂಡ್ ಲೈನ್' ನಲ್ಲಿ 'ಕಮಿಟ್ ಮೆಸೇಜ್' ಅನ್ನು ಕೊಡಲು, 'ಹೈಫನ್ m' ಫ್ಲ್ಯಾಗ್ ಅನ್ನು ಬಳಸಲಾಗುತ್ತದೆ.
04:36 ನಾವು 'ಹೈಫನ್ a' ಮತ್ತು 'ಹೈಫನ್ m' ಫ್ಲ್ಯಾಗ್ ಗಳನ್ನು 'ಹೈಫನ್ am' ಎಂದು ಬಳಸಬಹುದು.
04:42 'ಟರ್ಮಿನಲ್'ಗೆ ಹಿಂದಿರುಗಿ.
04:45 'git space log' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ ಮತ್ತು 'Git log' ಅನ್ನು ನೋಡಿ.
04:52 'ಕಮಿಟ್' ಗಳ ಪಟ್ಟಿಯನ್ನು ನೀವು ನೋಡಬಹುದು.
04:54 ಇತ್ತೀಚಿನ 'ಕಮಿಟ್' ಗಳನ್ನು ಮೊದಲು ಪಟ್ಟಿ ಮಾಡಲಾಗಿದೆ ಎಂಬುದನ್ನು ಗಮನಿಸಿ.
04:58 ಎಂದರೆ, ಕಮಿಟ್ ಗಳನ್ನು ಕಾಲಾನುಕ್ರಮದಲ್ಲಿ ಪಟ್ಟಿ ಮಾಡಲಾಗಿದೆ.
05:03 ಒಂದುವೇಳೆ ನೀವು ‘ಗಿಟ್ ರಿಪಾಸಿಟರಿ’ ಗೆ ತಪ್ಪು ಫೈಲನ್ನು ಸೇರಿಸಿದ್ದರೆ, ಅದನ್ನು ಸುಲಭವಾಗಿ ತೆಗೆದುಹಾಕಬಹುದು.
05:10 ಉದಾಹರಣೆಗೆ, ನನಗೆ 'mypage.html' ಫೈಲನ್ನು ತೆಗೆದುಹಾಕಬೇಕಾಗಿದೆ.
05:16 ಹೀಗೆ ಟೈಪ್ ಮಾಡಿ: 'git space rm space hyphen hyphen cached space mypage dot html' ಮತ್ತು 'Enter' ಅನ್ನು ಒತ್ತಿ.
05:26 ಈ ಕಮಾಂಡ್, 'mypage.html' ಫೈಲನ್ನು ‘ಸ್ಟೇಜಿಂಗ್ ಏರಿಯಾ’ದಿಂದ ತೆಗೆದುಹಾಕುವುದು.
05:32 'git space status' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತುವುದರ ಮೂಲಕ ನಾವು 'Git ಸ್ಟ್ಯಾಟಸ್'ಅನ್ನು ಈಗ ಪರೀಕ್ಷಿಸುವೆವು.
05:40 'mypage.html' ಫೈಲ್, ಅನ್ಟ್ರ್ಯಾಕ್ಡ್ ಇದೆ ಎಂದು ಇದು ಹೇಳುತ್ತಿದೆ.
05:45 ಈಗ, 'rm space mypage dot html' ಎಂದು ಟೈಪ್ ಮಾಡಿ ಹಾಗೂ 'Enter' ಅನ್ನು ಒತ್ತುವುದರ ಮೂಲಕ
05:49 ನಾವು ಫೈಲ್ ಸಿಸ್ಟಂನಿಂದ ಫೈಲನ್ನು ತೆಗೆದುಹಾಕಬಹುದು.
05:55 ಈ ಕಮಾಂಡ್, 'mywebpage' ಫೋಲ್ಡರ್ ನಿಂದ ಫೈಲನ್ನು ಪೂರ್ತಿಯಾಗಿ ತೆಗೆದುಹಾಕುವುದು.
06:00 ಈಗ, ನಾವು ‘ಗಿಟ್ ರಿಪಾಸಿಟರಿ’ ಯಿಂದ ಫೈಲನ್ನು ತೆಗೆದುಹಾಕಲಾಗಿದೆಯೇ ಎಂದು ಪರೀಕ್ಷಿಸುವೆವು.
06:06 ಆದ್ದರಿಂದ, ಹೀಗೆ ಟೈಪ್ ಮಾಡಿ: 'git space status' ಮತ್ತು 'Enter' ಅನ್ನು ಒತ್ತಿ.
06:12 ಇದು “deleted: mypage.html” ಎಂಬ ಮೆಸೇಜನ್ನು ತೋರಿಸುತ್ತದೆ.
06:16 ಈಗ, "ls" ಎಂದು ಟೈಪ್ ಮಾಡಿ 'Enter' ಅನ್ನು ಒತ್ತಿ ಹಾಗೂ ಫೈಲ್ ಗಳನ್ನು ಲಿಸ್ಟ್ ಮಾಡಿ.
06:21 ಇಲ್ಲಿ, 'mypage.html' ಫೈಲನ್ನು ಡಿಲೀಟ್ ಮಾಡಿರುವುದರಿಂದ ಇನ್ನುಮುಂದೆ ನಾವು ಅದನ್ನು ನೋಡಲು ಸಾಧ್ಯವಿಲ್ಲ.
06:28 ಈ ಹಂತದಲ್ಲಿ, ನಾವು ನಮ್ಮ ಕೋಡ್ ಅನ್ನು ಫ್ರೀಜ್ ಮಾಡೋಣ.
06:32 'ಕಮಿಟ್' ಮಾಡಲು, ಹೀಗೆ ಟೈಪ್ ಮಾಡಿ: 'git space commit space hyphen am space' ಡಬಲ್ ಕೋಟ್ಸ್ ನಲ್ಲಿ “Deleted mypage.html” ಹಾಗೂ 'Enter' ಅನ್ನು ಒತ್ತಿ.
06:45 ನಾವು 'git space log' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ, 'Git log' ಅನ್ನು ನೋಡೋಣ.
06:51 ಹೊರಬರಲು ನಿಮ್ಮ ಕೀಬೋರ್ಡ್ ಮೇಲಿನ 'q' ಕೀಯನ್ನು ಒತ್ತಿ.
06:55 ಇಲ್ಲಿ, ನಾವು ಕಮಿಟ್ ಮೆಸೇಜನ್ನು ಓದಿ ಇತ್ತೀಚೆಗಿನ ಕಮಿಟ್ ಅನ್ನು ನೋಡಬಹುದು.
06:59 ಈಗ, ಒಂದುವೇಳೆ, ಆಕಸ್ಮಿಕವಾಗಿ ನಾವು 'mypage.html' ಅನ್ನು ಡಿಲೀಟ್ ಮಾಡಿದ್ದರೆ ಮತ್ತು ಅದನ್ನು ಈಗ ಮರಳಿ ಪಡೆಯಬೇಕಾಗಿದ್ದರೆ,
07:08 ನಾವು ಏನು ಮಾಡಬಹುದು?
07:09 ಹಿಂದಿನ ಕಮಿಟ್ ಗಳಿಂದ ಡಿಲೀಟ್ ಮಾಡಿದ ಫೈಲನ್ನು ನಾವು ಮರಳಿ ಪಡೆಯಬಹುದು.
07:13 “Added two files” ಎಂಬ 'ಕಮಿಟ್ ಮೆಸೇಜ್' ಅನ್ನು ಹೊಂದಿರುವ ಎರಡನೆಯ 'ಕಮಿಟ್'ನಿಂದ ನಾವು ನಮ್ಮ ಫೈಲನ್ನು ಮರಳಿ ಪಡೆಯೋಣ.
07:20 ಎರಡನೆಯ 'ಕಮಿಟ್ ಹ್ಯಾಶ್' ನ ಮೊದಲ ಐದು ಅಂಕಿಗಳನ್ನು ಆಯ್ಕೆಮಾಡಿ
07:24 ಮತ್ತು ಅವುಗಳನ್ನು ಕಾಪಿ ಮಾಡಲು 'Ctrl + Shift + C' ಕೀಗಳನ್ನು ಒತ್ತಿ.
07:28 ಮೊದಲ ಐದು ಅಂಕಿಗಳು ಇದ್ದರೆ ಸಾಕು.
07:31 ಆದರೆ, ನೀವು ಇಷ್ಟಪಟ್ಟರೆ ಐದಕ್ಕಿಂತ ಹೆಚ್ಚು ಅಂಕಿಗಳನ್ನು ಸಹ ಕಾಪಿ ಮಾಡಬಹುದು.
07:36 ಹೀಗೆ ಟೈಪ್ ಮಾಡಿ: 'git space checkout space' ಹಾಗೂ 'ಕಮಿಟ್ ಹ್ಯಾಶ್' ಅನ್ನು ಪೇಸ್ಟ್ ಮಾಡಲು 'Ctrl + Shift + V' ಕೀಗಳನ್ನು ಒತ್ತಿ.
07:45 ಈಗ, ಫೈಲ್ ನ ಹೆಸರನ್ನು " mypage.html" ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
07:51 'git space status' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ, 'Git status' ಅನ್ನು ನೋಡಿ.
07:58 ಈಗ, ನೀವು 'mypage.html' ಫೈಲನ್ನು ನೋಡಬಹುದು.
08:02 ನಾವು ಈ ಹಂತದಲ್ಲಿ ನಮ್ಮ ಕೆಲಸವನ್ನು 'ಕಮಿಟ್' ಮಾಡೋಣ.
08:05 ನಾವು ಯಾವುದೇ ಫೈಲನ್ನು ಸೇರಿಸಿದಾಗ ಅಥವಾ ತೆಗೆದುಹಾಕಿದಾಗಲೆಲ್ಲ, ನಮ್ಮ ಕೆಲಸವನ್ನು 'ಕಮಿಟ್' ಮಾಡುವುದು ಬಹಳ ಮುಖ್ಯವಾಗಿದೆ ಎಂಬುದನ್ನು ಗಮನಿಸಿ.
08:12 ಹೀಗೆ ಟೈಪ್ ಮಾಡಿ: 'git space commit space hyphen am space “Restored mypage.html” ' ಹಾಗೂ 'Enter' ಅನ್ನು ಒತ್ತಿ.
08:22 ಈಗ “ls” ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ, ಫೈಲ್ ಗಳನ್ನು ಲಿಸ್ಟ್ ಮಾಡಿ.
08:28 ನಮ್ಮ ಫೈಲ್ 'mypage.html' ಅನ್ನು ಹಿಂದಿರುಗಿಸಲಾಗಿದೆ ಎಂದು ನಾವು ನೋಡಬಹುದು.
08:33 ನಂತರ, ಫೈಲ್ ನಲ್ಲಿ ಮಾಡಿದ ಬದಲಾವಣೆಗಳನ್ನು ಹೇಗೆ ತ್ಯಜಿಸುವುದೆಂದು ನಾವು ನೋಡುವೆವು.
08:38 'gedit space mypage.html space mystory.html space ampersand' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ, ಫೈಲ್ ಗಳನ್ನು ತೆರೆಯಿರಿ.
08:50 'mypage.html' ಮತ್ತು 'mystory.html' ಗಳಲ್ಲಿ ನಾವು ಕೆಲವು ಬದಲಾವಣೆಗಳನ್ನು ಮಾಡುವೆವು.
08:58 ಎರಡೂ ಫೈಲ್ ಗಳಲ್ಲಿ ನಾವು ಕೆಲವು ಸಾಲುಗಳನ್ನು ಸೇರಿಸೋಣ ಹಾಗೂ ತೆಗೆದುಹಾಕೋಣ.
09:03 ಆಮೇಲೆ ಫೈಲ್ ಗಳನ್ನು ಸೇವ್ ಮಾಡಿ ಹಾಗೂ ಮುಚ್ಚಿ.
09:06 ಕೆಲವು ಸಂದರ್ಭಗಳಲ್ಲಿ, ನಾವು ಈ ಬದಲಾವಣೆಗಳೊಂದಿಗೆ ಮುಂದುವರಿಯಲು ಬಯಸದೆ ಇರಬಹುದು.
09:11 ನಮ್ಮ ಕೆಲಸದ ಹಿಂದಿನ ಹಂತಕ್ಕೆ ನಮಗೆ ಹಿಂದಿರುಗಬೇಕಾಗಿದೆ ಎಂದು ಇದರ ಅರ್ಥ.
09:16 ಇದನ್ನು ಹೇಗೆ ಮಾಡುವುದು ಎಂಬುದನ್ನು ನಾವು ತಿಳಿಯೋಣ.
09:19 ಮೊದಲು, ನಾವು 'git space status' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ, 'Git status' ಅನ್ನು ನೋಡುವೆವು.
09:27 ಕೆಲವು ಫೈಲ್ ಗಳನ್ನು ಮಾರ್ಪಡಿಸಲಾಗಿದೆ ಎಂದು ಇದು ಹೇಳುತ್ತದೆ.
09:30 ಈಗ, ಹೀಗೆ ಟೈಪ್ ಮಾಡಿ: 'git space checkout space dot' ಮತ್ತು 'Enter' ಅನ್ನು ಒತ್ತಿ.
09:37 ಈ 'ಕಮಾಂಡ್', ನಮ್ಮ ಕೆಲಸದ ಇತ್ತೀಚಿನ ಬದಲಾವಣೆಗಳನ್ನು ಡಿಲೀಟ್ ಮಾಡುವುದು.
09:41 'git space status' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ, 'Git status' ಅನ್ನು ನೋಡಿ.
09:48 ಇದು, “nothing to commit” ಎಂದು ಹೇಳುತ್ತದೆ.
09:51 ಬದಲಾವಣೆಗಳು ಇನ್ನೂ ಇಲ್ಲಿ ಇವೆಯೇ ಎಂದು ನೋಡಲು ನಾವು ಫೈಲ್ ಗಳನ್ನು ಪರಿಶೀಲಿಸೋಣ.
09:57 ಹೀಗೆ ಟೈಪ್ ಮಾಡಿ: 'gedit space mypage.html space mystory.html &' ಹಾಗೂ 'Enter' ಅನ್ನು ಒತ್ತಿ.
10:07 ನಾವು ಮಾಡಿದ ಬದಲಾವಣೆಗಳನ್ನು ತ್ಯಜಿಸಲಾಗಿದೆ ಎಂಬುದನ್ನು ನೋಡಬಹುದು. ಫೈಲ್ ಗಳನ್ನು ಮುಚ್ಚಿಬಿಡಿ.
10:13 ಈಗ, ನಾವು 'git space log' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ, 'Git log' ಅನ್ನು ನೋಡೋಣ.
10:20 ಇದು 'ಕಮಿಟ್' ಗಳ ಪಟ್ಟಿಯನ್ನು ತೋರಿಸುತ್ತದೆ.
10:23 ಇನ್ನೂ ಹೆಚ್ಚು ನೋಡಲು 'ಡೌನ್-ಆರೋ' ಕೀಯನ್ನು ಒತ್ತಿ.
10:26 ಹೊರಬರಲು, ನಿಮ್ಮ ಕೀಬೋರ್ಡ್ ಮೇಲಿನ 'q' ಕೀಯನ್ನು ಒತ್ತಿ.
10:30 ಒಂದುವೇಳೆ ನಿಮಗೆ 'ಕಮಿಟ್' ಗಳ ಪಟ್ಟಿಯನ್ನು ಒಂದೇ ಸಾಲಿನಲ್ಲಿ ನೋಡಬೇಕಾಗಿದ್ದರೆ, ಹೀಗೆ ಟೈಪ್ ಮಾಡಿ: 'git space log space hyphen hyphen oneline' ಮತ್ತು 'Enter' ಅನ್ನು ಒತ್ತಿ.
10:42 ಇಲ್ಲಿ, ಒಂದೇ ಸಾಲಿನಲ್ಲಿ 'ಕಮಿಟ್' ಗಳ 'ಕಮಿಟ್ ಹ್ಯಾಶ್' ಮತ್ತು 'ಕಮಿಟ್ ಮೆಸೇಜ್' ಗಳಿರುವ ಪಟ್ಟಿಯನ್ನು ನೀವು ನೋಡಬಹುದು.
10:48 ನಮ್ಮ ಕೆಲಸದ ಹಿಂದಿನ ರಿವಿಜನ್ ಗೆ ನಾವು ಹೇಗೆ ಹೋಗಬಹುದು?
10:53 ಪ್ರಸ್ತುತ, ನಾವು ರಿಪಾಸಿಟರಿಯಲ್ಲಿ ನಾಲ್ಕು 'ಕಮಿಟ್' ಗಳನ್ನು
10:56 ಎಂದರೆ, ನಮ್ಮ ಕೆಲಸದ ನಾಲ್ಕು ರಿವಿಜನ್ ಗಳನ್ನು (ಪರಿಷ್ಕರಣೆಗಳನ್ನು) ಹೊಂದಿದ್ದೇವೆ.
11:01 ನಮಗೆ “Initial commit” ಹಂತಕ್ಕೆ ಮರಳಿ ಹೋಗಬೇಕಾಗಿದೆ ಎಂದುಕೊಳ್ಳಿ.
11:05 ಆದ್ದರಿಂದ, ಹೀಗೆ ಟೈಪ್ ಮಾಡಿ: 'git space checkout space'. ನಂತರ “Initial commit” ನ 'ಕಮಿಟ್ ಹ್ಯಾಶ್'ಅನ್ನು ಕಾಪಿ-ಪೇಸ್ಟ್ ಮಾಡಿ ಮತ್ತು 'Enter' ಅನ್ನು ಒತ್ತಿ.
11:15 “ls” ಎಂದು ಟೈಪ್ ಮಾಡಿ 'Enter' ಅನ್ನು ಒತ್ತುವುದರ ಮೂಲಕ ಫೈಲ್ ಗಳನ್ನು ಪಟ್ಟಿಮಾಡಿ.
11:19 ಇಲ್ಲಿ, ನಾವು 'mypage.html' ಎಂಬ ಒಂದೇ ಒಂದು ಫೈಲನ್ನು ನೋಡಬಹುದು. ಏಕೆಂದರೆ, ಈ ಹಂತದಲ್ಲಿ ನಮ್ಮ ಹತ್ತಿರ ಈ ಫೈಲ್ ಮಾತ್ರ ಇತ್ತು.
11:28 ಈಗ, 'git space log' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ ಮತ್ತು 'Git log' ಅನ್ನು ನೋಡಿ.
11:34 ನಾವು ಮೊದಲನೆಯ 'ಕಮಿಟ್'ಅನ್ನು ಎಂದರೆ “Initial commit” ಅನ್ನು ಮಾತ್ರ ನೋಡಬಹುದು.
11:39 ಸದ್ಯದ ರಿವಿಜನ್ ಗೆ ಹಿಂದಿರುಗಲು, ಹೀಗೆ ಟೈಪ್ ಮಾಡಿ: 'git space checkout space master' ಮತ್ತು 'Enter' ಅನ್ನು ಒತ್ತಿ.
11:48 ನಾವು 'master' ಎಂಬ ಪದದ ಬಗ್ಗೆ ಮುಂದಿನ ಟ್ಯುಟೊರಿಯಲ್ ಗಳಲ್ಲಿ ಇನ್ನೂ ಹೆಚ್ಚು ತಿಳಿದುಕೊಳ್ಳುವೆವು.
11:53 ನಾವು, 'git space log space hyphen hyphen oneline' ಎಂದು ಟೈಪ್ ಮಾಡಿ,
11:57 'Enter' ಅನ್ನು ಒತ್ತಿ, ಮತ್ತೊಮ್ಮೆ 'Git log' ಅನ್ನು ನೋಡೋಣ.
12:03 ಈಗ ನೀವು ನಾಲ್ಕೂ 'ಕಮಿಟ್' ಗಳನ್ನು ನೋಡಬಹುದು. ಆದ್ದರಿಂದ, ನಾವು ಈಗ ಇತ್ತೀಚಿನ 'ಸ್ಟೇಜ್' ನಲ್ಲಿ ಇದ್ದೇವೆ.
12:10 ನಾವು ಈ ರೀತಿಯಲ್ಲಿ, ನಮ್ಮ ಕೆಲಸದ ಯಾವುದೇ ಹಂತಕ್ಕೆ ಮರಳಿ ಹೋಗಬಹುದು.
12:14 ಹಳೆಯ ರಿವಿಜನ್ ಗೆ ಹೋಗಲು ಇನ್ನೊಂದು ರೀತಿಯಿದೆ.
12:18 ಹೀಗೆ ಟೈಪ್ ಮಾಡಿ: 'git space reset space hyphen hyphen hard'
12:23 ಆಮೇಲೆ, “Initial commit” ನ 'ಕಮಿಟ್ ಹ್ಯಾಶ್'ಅನ್ನು ಕಾಪಿ-ಪೇಸ್ಟ್ ಮಾಡಿ ಮತ್ತು 'Enter' ಅನ್ನು ಒತ್ತಿ.
12:29 'git space log' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ 'Git log' ಅನ್ನು ನೋಡಿ.
12:35 ನಾವು ಈಗ “Initial commit” ಸ್ಟೇಜ್ ನಲ್ಲಿಇದ್ದೇವೆ ಎಂದು ಇದು ತೋರಿಸುತ್ತದೆ.
12:39 ಈಗ, ನಾವು ಇತ್ತೀಚಿನ ರಿವಿಜನ್ ಗೆ ಹಿಂದಿರುಗಲು ಪ್ರಯತ್ನಿಸೋಣ.
12:43 ಮೊದಲಿನಂತೆ, ಹೀಗೆ ಟೈಪ್ ಮಾಡಿ: 'git space checkout space master' ಹಾಗೂ 'Enter' ಅನ್ನು ಒತ್ತಿ.
12:51 ನಮಗೆ ಇತ್ತೀಚಿನ ರಿವಿಜನ್ ಗೆ ಹಿಂದಿರುಗಲು ಸಾಧ್ಯವಾಗುತ್ತಿಲ್ಲ.
12:55 ಬದಲಾಗಿ, ನಮಗೆ “Already on 'master'” ಎಂಬ ಮೆಸೇಜ್ ಸಿಗುತ್ತದೆ.
12:58 ಇದು ನಮ್ಮ ಇತ್ತೀಚಿನ ರಿವಿಜನ್ ಆಗಿದೆ ಎಂದು ಇದರ ಅರ್ಥ.
13:02 ಆದ್ದರಿಂದ, ಗಮನಿಸಿ: ಒಮ್ಮೆ ನಾವು 'git reset hyphen hyphen hard' ಎಂಬ ಕಮಾಂಡ್ ಅನ್ನು ಬಳಸಿದೆವೆಂದರೆ ಇತ್ತೀಚಿನ ಸ್ಟೇಜ್ ಗೆ ನಾವು ಹಿಂದಿರುಗಲು ಸಾಧ್ಯವಿಲ್ಲ.
13:11 ಆದ್ದರಿಂದ, ನಾವು ಈ ಕಮಾಂಡ್ ನೊಂದಿಗೆ ತುಂಬಾ ಎಚ್ಚರಿಕೆಯಿಂದ ಇರಬೇಕು.
13:15 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
13:18 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು: * ಒಂದಕ್ಕಿಂತ ಹೆಚ್ಚು ಫೈಲ್ ಗಳನ್ನು ‘ಗಿಟ್ ರಿಪಾಸಿಟರಿ’ ಗೆ ಸೇರಿಸಲು
13:27 * ‘ಗಿಟ್ ರಿಪೊಸಿಟರಿ’ ಯಿಂದ ಫೈಲನ್ನು ತೆಗೆದುಹಾಕಲು * ತೆಗೆದುಹಾಕಿದ ಫೈಲನ್ನು ಮರಳಿ ಪಡೆಯಲು
13:32 * ಫೈಲ್ ನಲ್ಲಿ ಮಾಡಿದ ಬದಲಾವಣೆಗಳನ್ನು ಅಲಕ್ಷಿಸಲು ಹಾಗೂ * ಮೊದಲಿನ ರಿವಿಜನ್ ಗೆ ಹಿಂದಿರುಗಲು ಕಲಿತಿದ್ದೇವೆ.
13:39 ಒಂದು ಅಸೈನ್ಮೆಂಟ್- ಹಿಂದಿನ ಟ್ಯುಟೋರಿಯಲ್ ನ ಅಸೈನ್ಮೆಂಟ್ ನಲ್ಲಿ ನೀವು ಕ್ರಿಯೇಟ್ ಮಾಡಿದ ನಿಮ್ಮ ‘ಗಿಟ್ ರಿಪಾಸಿಟರಿ’ ಗೆ ಹೋಗಿ.
13:46 ನಿಮ್ಮ ಟೆಕ್ಸ್ಟ್-ಫೈಲ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ.
13:49 ಬದಲಾವಣೆಗಳನ್ನು 'ಕಮಿಟ್' ಮಾಡಿ.
13:52 ನಿಮ್ಮ ಹಳೆಯ ಪರಿಷ್ಕರಣೆಗೆ ಹಿಂದಿರುಗಲು ಪ್ರಯತ್ನಿಸಿ.
13:55 ನಿಮ್ಮ ಟೆಕ್ಸ್ಟ್ ಫೈಲ್ ನಲ್ಲಿ ಮತ್ತೆ ಕೆಲವು ಬದಲಾವಣೆಗಳನ್ನು ಮಾಡಿ ಮತ್ತು ಈ ಬದಲಾವಣೆಗಳನ್ನು ಅಲಕ್ಷಿಸಲು ಪ್ರಯತ್ನಿಸಿ.
14:02 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
14:11 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡಲಾಗುತ್ತದೆ.
14:18 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
14:22 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ.
14:29 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:

[1]

14:34 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14