Linux-Old/C2/Desktop-Customization-14.04/Kannada

From Script | Spoken-Tutorial
Revision as of 10:49, 23 August 2017 by Glorianandihal (Talk | contribs)

Jump to: navigation, search
Time Narration
00:01 ಎಲ್ಲರಿಗೂ ನಮಸ್ಕಾರ. Desktop Customization in Ubuntu Linux OS ಎನ್ನುವ ಸ್ಪೋಕನ್-ಟ್ಯುಟೋರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ, ನಾವು:
* Launcher  (ಲಾಂಚರ್) ನ ಬಗ್ಗೆ 
* Launcher ನಲ್ಲಿ ಅಪ್ಲಿಕೇಶನ್ಗಳನ್ನು ತೆಗದುಹಾಕುವುದು ಮತ್ತು ಸೇರಿಸುವುದು 
* ಒಂದಕ್ಕಿಂತ ಹೆಚ್ಚು ಡೆಸ್ಕ್ಟಾಪ್ ಗಳನ್ನು  ಬಳಸುವುದು
* Internet connectivity (ಇಂಟರ್ನೆಟ್ ನ ಸಂಪರ್ಕ)
* Sound settings (Sound ಸೆಟ್ಟಿಂಗ್ ಗಳು)
* Time and Date  ಸೆಟ್ಟಿಂಗ್ಗಳು ಮತ್ತು ಇತರ user accounts  ಗಳಿಗೆ ಬದಲಾಯಿಸುವುದು ಇವುಗಳ ಬಗ್ಗೆ ಕಲಿಯುವೆವು.
00:27 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu Linux OS 14.04 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ.
00:34 ನಾವು Launcher ನೊಂದಿಗೆ ಆರಂಭಿಸೋಣ.
00:36 Launcher , Ubuntu Linux desktop ನಲ್ಲಿ ಡೀಫಾಲ್ಟ್ ಆಗಿ ಎಡಭಾಗದಲ್ಲಿರುವ ಪ್ಯಾನೆಲ್ ಆಗಿದೆ. ಇದು ಕೆಲವು ಡೀಫಾಲ್ಟ್ ಅಪ್ಲಿಕೇಶನ್ಗಳನ್ನು ಹೊಂದಿದೆ.
00:44 Launcher , ಮೇಲಿಂದ ಮೇಲೆ ಬಳಸಿದ ಅಪ್ಲಿಕೇಶನ್ಗಳನ್ನು ಆಕ್ಸೆಸ್ ಮಾಡುವುದನ್ನು ಸುಲಭಗೊಳಿಸುತ್ತದೆ.
00:49 ಆದ್ದರಿಂದ, ನಾವು Launcher ನಲ್ಲಿ ಅದರ desktop shortcut (ಡೆಸ್ಕ್ಟಾಪ್ ಶಾರ್ಟ್ಕಟ್) ಅನ್ನು ಕ್ಲಿಕ್ ಮಾಡುವುದರ ಮೂಲಕ ಪ್ರೋಗ್ರಾಂ ಅನ್ನು ಪ್ರಾರಂಭಿಸಬಹುದು.
00:56 ಡೀಫಾಲ್ಟ್ ಆಗಿ, Launcher ಕೆಲವು ಅಪ್ಲಿಕೇಶನ್ಗಳನ್ನು ಹೊಂದಿದೆ.
01:00 ನಮ್ಮ ಅವಶ್ಯಕತೆಗಳಿಗೆ ತಕ್ಕಂತೆ Launcher ಅನ್ನು ಕಸ್ಟಮೈಜ್ ಮಾಡಲು ನಾವು ಕಲಿಯೋಣ.
01:06 ನನ್ನ ಕೆಲಸಕ್ಕೆ, ನನಗೆ Terminal , LibreOffice Writer , Gedit ಇತ್ಯಾದಿ ಅಪ್ಪ್ಲಿಕೇಶನ್ ಗಳ ಅಗತ್ಯವಿದೆ.
01:15 Launcher ನಲ್ಲಿ ನಾವು ಈ ಅಪ್ಲಿಕೇಶನ್ಗಳನ್ನು ಸೇರಿಸೋಣ.
01:19 ಇದನ್ನು ಮಾಡುವ ಮೊದಲು, ನನಗೆ ಬೇಡವಾದ ಕೆಲವು ಅಪ್ಲಿಕೇಶನ್ಗಳನ್ನು ನಾನು ತೆಗೆದುಹಾಕುತ್ತೇನೆ.
01:25 ಒಂದು ವೇಳೆ, ನನಗೆ VLC ಅಪ್ಲಿಕೇಶನ್ ಅನ್ನು ತೆಗೆದುಹಾಕಬೇಕಾಗಿದೆ ಎಂದುಕೊಳ್ಳಿ.
01:30 ಆದ್ದರಿಂದ, VLC ಅಪ್ಲಿಕೇಶನ್ ಐಕಾನ್ ನ ಮೇಲೆ ರೈಟ್- ಕ್ಲಿಕ್ ಮಾಡಿ ಮತ್ತು Unlock from Launcher ಅನ್ನು ಆಯ್ಕೆಮಾಡಿ.
01:37 Launcher ನಿಂದ VLC ಅಪ್ಲಿಕೇಶನ್ ಐಕಾನ್ ಅನ್ನು ತೆಗೆದುಹಾಕಿರುವುದನ್ನು ನೀವು ಇಲ್ಲಿ ನೋಡಬಹುದು.
01:43 ಅದೇ ರೀತಿ, ನಾವು ಆಗಾಗ ಬಳಸದೆ ಇರುವ ಎಲ್ಲ ಶಾರ್ಟ್ಕಟ್ಗಳನ್ನು ತೆಗೆದುಹಾಕಬಹುದು..
01:49 ನೀವು ಇಲ್ಲಿ ನೋಡುವಂತೆ, ನನ್ನ ಡೆಸ್ಕ್ಟಾಪ್ Launcher ನಿಂದ ಕೆಲವು ಅಪ್ಲಿಕೇಶನ್ಗಳನ್ನು ತೆಗೆದುಹಾಕಿದ್ದೇನೆ.
01:55 ಈಗ, ನಾನು Launcher ಗೆ Terminal ಶಾರ್ಟ್ಕಟ್ ಅನ್ನು ಸೇರಿಸುತ್ತೇನೆ.
02:00 Dash Home ಅನ್ನು ಕ್ಲಿಕ್ ಮಾಡಿ.
02:02 'Search Bar ನಲ್ಲಿ, Terminal ಎಂದು ಟೈಪ್ ಮಾಡಿ.
02:05 Terminal ಅನ್ನು ತೆರೆಯಲು, Terminal ಐಕಾನ್ ಅನ್ನು ಕ್ಲಿಕ್ ಮಾಡಿ.
02:09 Launcher ನಲ್ಲಿ ನೀವು Terminal ಐಕಾನ್ ಅನ್ನು ನೋಡಬಹುದು.
02:13 Launcher ನಲ್ಲಿ Terminal ಐಕಾನ್ ಅನ್ನು ಇರಿಸಲು, ಮೊದಲು ಅದರ ಮೇಲೆ ರೈಟ್-ಕ್ಲಿಕ್ ಮಾಡಿ.
02:18 ನಂತರ Lock to Launcher ಅನ್ನು ಕ್ಲಿಕ್ ಮಾಡಿ.
02:21 Launcher ನಲ್ಲಿ ಅಪ್ಲಿಕೇಶನ್ ಶಾರ್ಟ್ಕಟ್ಗಳನ್ನು ಇರಿಸುವ ಇನ್ನೊಂದು ವಿಧಾನ, ಡ್ರ್ಯಾಗ್-ಅಂಡ್-ಡ್ರಾಪ್ ಮಾಡುವುದು. ನಾನು ಈಗ ಇದನ್ನು ಮಾಡಿತೋರಿಸುತ್ತೇನೆ.
02:30 '’'Dash Home ಅನ್ನು ತೆರೆಯಿರಿ ಮತ್ತು search bar ನಲ್ಲಿ, libreOffice ಎಂದು ಟೈಪ್ ಮಾಡಿ.
02:37 libreOffice ಐಕಾನ್ ಅನ್ನು Launcher ನ ಒಳಗೆ ಎಳೆಯಿರಿ.
02:42 ನಾವು ಇದನ್ನು ಮಾಡುತ್ತಿದ್ದಂತೆ , Drop to Add application ಎಂಬ ಹೆಲ್ಪ್ ಟೆಕ್ಸ್ಟ್ ಕಾಣಿಸಿಕೊಳ್ಳಬಹುದು. ಯಾವುದೇ ಹೆಲ್ಪ್ ಟೆಕ್ಸ್ಟ್ ಕಾಣಿಸದಿದ್ದರೆ ಚಿಂತಿಸಬೇಡಿ.
02:51 ಈಗ, Launcher ನಲ್ಲಿ LibreOffice ಐಕಾನ್ ಅನ್ನು ಡ್ರಾಪ್ ಮಾಡಿ .
02:55 ಶಾರ್ಟ್ಕಟ್ ಅನ್ನು ಈಗ Launcher ಗೆ ಸೇರಿಸಿರುವುದನ್ನು ನೀವು ನೋಡಬಹುದು.
03:00 ಈ ರೀತಿಯಾಗಿ ನಾವು Launcher ನಲ್ಲಿ ಶಾರ್ಟ್ಕಟ್ಗಳನ್ನು ಸೇರಿಸಬಹುದು.
03:04 Ubuntu Linux OS ನಲ್ಲಿರುವ ಮುಂದಿನ ಪ್ರಮುಖ ವೈಶಿಷ್ಟ್ಯವೆಂದರೆ multiple desktop ಅಥವಾ Workspace Switcher.
03:12 ಕೆಲವೊಮ್ಮೆ ನಾವು ಒಂದಕ್ಕಿಂತ ಹೆಚ್ಚು ಅಪ್ಲಿಕೇಶನ್ಗಳಲ್ಲಿ ಕೆಲಸ ಮಾಡುತ್ತಿರಬಹುದು .
03:17 ಮತ್ತು ಒಂದು ಅಪ್ಲಿಕೇಶನ್ನಿಂದ ಇನ್ನೊಂದಕ್ಕೆ ಬದಲಾಯಿಸಲು ನಮಗೆ ಕಷ್ಟವಾಗಬಹುದು.
03:22 ಇದನ್ನು ಹೆಚ್ಚು ಅನುಕೂಲಕರಗೊಳಿಸಲು, ನಾವು Workspace Switcher ಅನ್ನು ಬಳಸಬಹುದು.
03:27 Launcher ಗೆ ಹಿಂತಿರುಗೋಣ.
03:30 Launcher ನಲ್ಲಿ, Workspace Switcher ಐಕಾನ್ ಅನ್ನು ಹುಡುಕಿ . ಅದರ ಮೇಲೆ ಕ್ಲಿಕ್ ಮಾಡಿ.
03:36 ಇದು 4 Desktop ಗಳೊಂದಿಗೆ 4 ಕ್ವಾಡ್ರಂಟ್ಗಳನ್ನು ತೋರಿಸುತ್ತದೆ.
03:40 ಡೀಫಾಲ್ಟ್ ಆಗಿ , ಟಾಪ್-ಲೆಫ್ಟ್ ಡೆಸ್ಕ್ಟಾಪ್ ಅನ್ನು ಆಯ್ಕೆಮಾಡಲಾಗಿದೆ.
03:44 ಇದು, ನಾವು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಡೆಸ್ಕ್ಟಾಪ್ ಆಗಿದೆ .
03:48 ಈಗ, ಅದರ ಮೇಲೆ ಕ್ಲಿಕ್ ಮಾಡಿ , ಎರಡನೇ ಡೆಸ್ಕ್ಟಾಪ್ ಅನ್ನು ಆಯ್ಕೆ ಮಾಡೋಣ.
03:53 Launcher ನಲ್ಲಿನ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ , ನಾನು ಇಲ್ಲಿ Terminal ಅನ್ನು ತೆರೆಯುತ್ತೇನೆ.
03:59 ಈಗ, Workspace Switcher ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಿ.
04:02 ಎರಡನೆಯ Workspace Switcher ನಲ್ಲಿ 'Terminal ಅನ್ನು ಮತ್ತು ಮೊದಲನೆಯದರಲ್ಲಿ ನಮ್ಮ ಡೆಸ್ಕ್ಟಾಪ್ ಅನ್ನು ನೀವು ನೋಡಬಹುದು.
04:09 ಈ ರೀತಿಯಲ್ಲಿ, ನೀವು ಒಂದ್ಕಿಂಥ ಹೆಚ್ಚು ಡೆಸ್ಕ್ಟಾಪ್ ಗಳಲ್ಲಿ  ಕೆಲಸ ಮಾಡಬಹುದು.
04:12 ನಾವು ಮೊದಲನೆಯ ಡೆಸ್ಕ್ಟಾಪ್ ಗೆ ಹಿಂದಿರುಗೋಣ .
04:15 Trash , Launcher ನಲ್ಲಿ ಇರುವ ಮತ್ತೊಂದು ಪ್ರಮುಖ ಐಕಾನ್ ಆಗಿದೆ .
04:19 Trash ,ಡಿಲೀಟ್ ಮಾಡಿದ್ ಎಲ್ಲ ಫೈಲ್ಗಳು ಮತ್ತು ಫೋಲ್ಡರ್ಗಳನ್ನು ಒಳಗೊಂಡಿದೆ.
04:23 ನಾವು ಆಕಸ್ಮಿಕವಾಗಿ file ಅನ್ನು ಡಿಲೀಟ್ ಮಾಡಿದರೆ , ಅದನ್ನು Trash ನಿಂದ ಮರಳಿ ಪಡೆಯಬಹುದು .
04:28 ಇದನ್ನು ಪ್ರದರ್ಶಿಸಲು, ನಾನು ಡೆಸ್ಕ್ಟಾಪ್ ನಲ್ಲಿರುವ ನನ್ನ DIW ಫೈಲ್ ಅನ್ನು ಡಿಲೀಟ್ ಮಾಡುತ್ತೇನೆ .
04:33 ಫೈಲ್ ಮೇಲೆ ರೈಟ್ - ಕ್ಲಿಕ್ ಮಾಡಿ, ಮತ್ತು Move to Trash ಅನ್ನು ಕ್ಲಿಕ್ ಮಾಡಿ.
04:38 ಅದನ್ನು ಮರಳಿಪಡೆಯಲು, Launcher ನಲ್ಲಿನ Trash icon ಅನ್ನು ಒತ್ತಿ .
04:43 Trash ಫೋಲ್ಡರ್ ತೆರೆಯುತ್ತದೆ.
04:46 File ಅನ್ನು ಆಯ್ಕೆಮಾಡಿ, ಅದರ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Restore ಅನ್ನು ಕ್ಲಿಕ್ ಮಾಡಿ.
04:50 Trash ವಿಂಡೋವನ್ನು ಮುಚ್ಚಿ ಮತ್ತು ಡೆಸ್ಕ್ಟಾಪ್ ಗೆ ಹಿಂತಿರುಗಿ.
04:54 ನಾವು ಮೊದಲು ಡಿಲೀಟ್ ಮಾಡಿದ ಫೈಲ್ ಅನ್ನು ಈಗ ಮರಳಿ ಪಡೆಯಲಾಗಿದೆ ಎಂದು ನೋಡಬಹುದು.
04:59 ನಿಮ್ಮ ಸಿಸ್ಟಮ್ ನಿಂದ ಫೈಲ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಲು , ಮೊದಲು ಅದನ್ನು ಆಯ್ಕೆ ಮಾಡಿ ಮತ್ತು Shift + Delete ಅನ್ನು ಒತ್ತಿರಿ.
05:07 “Are you sure you want to permanently delete DIW” ಎಂದು ಕೇಳುತ್ತಿರುವ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ. Delete ಅನ್ನು ಕ್ಲಿಕ್ ಮಾಡಿ.
05:15 ಮತ್ತೊಮ್ಮೆ Trash ಐಕಾನ್ ಮೇಲೆ ಕ್ಲಿಕ್ ಮಾಡಿ.
05:18 ಫೈಲ್ ಅನ್ನು ನಮ್ಮ ಸಿಸ್ಟಮ್ ನಿಂದ ಶಾಶ್ವತವಾಗಿ ಡಿಲೀಟ್ ಮಾಡಿರುವ ಕಾರಣ್, Trash ಫೋಲ್ಡರ್ನಲ್ಲಿ ನಮಗೆ ಅದು ಕಾಣುವುದಿಲ.
05:24 ಈಗ, ಡೆಸ್ಕ್ಟಾಪ್ ನ ಮೇಲ್ತುದಿಯ ಬಲಮೂಲೆಯಲ್ಲಿ ಕೆಲವು ಅಪ್ಲಿಕೇಶನ್ಗಳು ಲಭ್ಯವಿರುವುದನ್ನು ನಾವು ನೋಡುತ್ತೇವೆ.
05:31 ಮೊದಲನೆಯದು, Internet connectivity ಆಗಿದೆ .
05:34 ನೀವು ಯಾವುದೇ Lan ಅಥವಾ Wifi network ನ ಸಂಪರ್ಕ ಹೊಂದಿದ್ದರೆ, ಕನೆಕ್ಷನ್ ಅನ್ನು ಸ್ಥಾಪಿಸಲಾಗುತ್ತದೆ .
05:39 ನೀವು ಇವುಗಳನ್ನು ಇಲ್ಲಿ ನೋಡಬಹುದು.
05:42 ನಿಮಗೆ ಆಕ್ಸೆಸ್ ಇರುವ network ಅನ್ನು ನೀವು ಆಯ್ಕೆ ಮಾಡಬಹುದು.
05:46 ನೆಟ್ವರ್ಕ್ ಅನ್ನು Enable/ Disable ಮಾಡಲು, Enable Networking ಆಯ್ಕೆಯನ್ನು ಗುರುತು ಮಾಡಿ/ರದ್ದುಗೊಲಿಸಿ.
05:52 Edit Connections ಆಯ್ಕೆಯನ್ನು ಬಳಸಿಕೊಂಡು ನಾವು ನೆಟ್ವರ್ಕ್ ಗಳನ್ನು ಎಡಿಟ್ ಮಾಡಬಹುದು.
05:57 ಮುಂದಿನ ಆಯ್ಕೆ ಯು ,Sound ಆಗಿದೆ . ಅದರ ಮೇಲೆ ಕ್ಲಿಕ್ ಮಾಡಿ.
06:00 ನೀವು ಇಲ್ಲಿ ಒಂದು ಸ್ಲೈಡರ್ ಅನ್ನು ನೋಡಬಹುದು. ನಮಗೆ ಬೇಕಾದ್ ಹಾಗೆ , ಆಡಿಯೊ ಮಟ್ಟವನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಇದು ನಮಗೆ ಸಹಾಯ ಮಾಡುತ್ತದೆ.
06:07 Sound Settings ಅನ್ನು ಕ್ಲಿಕ್ ಮಾಡುವುದರ ಮೂಲಕ ನಮ್ಮ ಸಿಸ್ಟಮ್ನ ಧ್ವನಿ ಮಟ್ಟವನ್ನು ನಾವು ಮತ್ತಷ್ಟು ಹೊಂದಿಸಬಹುದು.
06:14 ಈ ವಿಂಡೋದಲ್ಲಿಯ ಸೆಟ್ಟಿಂಗ್ಗಳನ್ನು ನಿಮಷ್ಟಕೆ ನೀವೇ ಎಕ್ಸ್ಪ್ಲೋರ್ ಮಾಡಿ.
06:17 ಮುಂದಿನ ಐಕಾನ್ Time & Date ಆಗಿದೆ .
06:20 ನಾವು ಈ ಐಕಾನ್ ಅನ್ನು ಕ್ಲಿಕ್ ಮಾಡಿದರೆ, ಕ್ಯಾಲೆಂಡರ್ ತೆರೆಯುತ್ತದೆ. ನಾವು ಪ್ರಸ್ತುತ ದಿನಾಂಕ, ತಿಂಗಳು ಮತ್ತು ವರ್ಷವನ್ನು ಇಲ್ಲಿ ನೋಡಬಹುದು.
06:29 ಆರೋ ಬಟನ್ಗಳು ನಮಗೆ ಬೇಕಾದ ಹಾಗೆ ಇತರ ತಿಂಗಳುಗಳು ಮತ್ತು ವರ್ಷಗಳನ್ನು ಆಯ್ಕೆಮಾಡಲು ಅನುವು ಮಾಡಿಕೊಡುತ್ತವೇ.
06:35 Time & Date Settings 'ಮೇಲೆ ಕ್ಲಿಕ್ ಮಾಡುವ ಮೂಲಕ ನಾವು ದಿನಾಂಕ ಮತ್ತು ಸಮಯವನ್ನು ಎಡಿಟ್ ಮಾಡ ಬಹುದು. ಈ ಆಯ್ಕೆಯನ್ನು ನಿಮ್ಮಷ್ಟಕ್ಕೆ ನೀವೇ ಕಲಿಯರಿ .
06:44 ಮುಂದೆ, Wheel ಐಕಾನ್ ಅನ್ನು ಕ್ಲಿಕ್ ಮಾಡಿ.
06:47 ಇಲ್ಲಿ ನಾವು Log out ಮತ್ತು Shutdown ಆಯ್ಕೆಗಳೊಂದಿಗೆ ಕೆಲವು ಶಾರ್ಟ್ಕಟ್ ಆಯ್ಕೆಗಳನ್ನು ನೋಡಬಹುದು.
06:53 ನಮ್ಮ ಸಿಸ್ಟಮ್ನಲ್ಲಿ ಲಭ್ಯವಿರುವ ಎಲ್ಲ User accounts ' ಸಹ ನಾವು ನೋಡಬಹುದು.
06:59 ನಿರ್ದಿಷ್ಟ ಯೂಸರ್ ನ ಮೇಲೆ ಕ್ಲಿಕ್ ಮಾಡುವ ಮೂಲಕ ನಾವು ಬಯಸುವ ಯಾವುದೇ ಯೂಸರ್ ಅಕೌಂಟ್ ಗೆ ನಾವು ಬದಲಾಯಿಸಬಹುದು.
07:05 ಸಂಕ್ಷಿಪ್ತವಾಗಿ ,
07:07 ಈ ಟ್ಯುಟೋರಿಯಲ್ ನಲ್ಲಿ, ನಾವು:
 ಲಾಂಚರ್ ನ  ಬಗ್ಗೆ
 ಲಾಂಚರ್  ನಲ್ಲಿ ಅಪ್ಲಿಕೇಶನ್ಗಳನ್ನು ತೆಗದುಹಾಕಲು  ಮತ್ತು ಸೇರಿಸಲು 
 ಮಲ್ಟಿಪಲ್ ಡೆಸ್ಕ್ಟಾಪ್ಸ್  ಗಳನ್ನೂ  ಬಳಸಿವುದು 
 ಇಂಟರ್ನೆಟ್ ಕನೆಕ್ಟಿವಿಟಿ 
 ಸೌಂಡ್ ಸೆಟ್ಟಿಂಗ್ಸ್ 
 ಟೈಮ್ ಮತ್ತು ಡೇಟ್  ಸೆಟ್ಟಿಂಗ್ಗಳು ಮತ್ತು 
 ಇತರ ಉಸೆರ್ ಅಕೌಂಟ್ಸ್   ಗೆ ಬದಲಾಯಿಸುವುದನ್ನು  ಕಲಿತಿದ್ದೇವೆ 
07:26 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
07:32 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. .
07:39 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org
07:42 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

07:53 ಈ ಟ್ಯುಟೋರಿಯಲ್ ಗೌರವ್ ಶಿಂದೆ ಮತ್ತು ಪ್ರವೀಣ್ ಸ್ ಅವರ ಕೊಡುಗೆಯಾಗಿದೆ . IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕ ಲೋಹಿತ್ ಪಿ ಮತ್ತು ಪ್ರವಾಚಕಿ ಗ್ಲೋರಿಯಾ ನಾಂದಿಹಾಳ್ .

ಧನ್ಯವಾದಗಳು.|

Contributors and Content Editors

Glorianandihal, Nancyvarkey, Sandhya.np14