DWSIM-3.4/C2/Overview-of-DWSIM/Kannada
From Script | Spoken-Tutorial
Time | Narration |
00:01 | DWSIM ನ ಅವಲೋಕನದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ , ಇದು open source chemical process simulator ಆಗಿದೆ.
|
00:11 | ಈ ಟ್ಯುಟೋರಿಯಲ್-ನಲ್ಲಿ ನಾವು: * DWSIM ಅನ್ನು ಇನ್ಸ್ಟಾಲ್ ಮಾಡುವುದು |
00:15 | * DWSIM ನ ಪರಿಚಯ ಮಾಡಿಕೊಳ್ಳುವುದು |
00:18 | * ಈಗಾಗಲೇ ಇರುವ DWSIM ಸ್ಪೋಕನ್ ಟ್ಯುಟೋರಿಯಲ್-ಗಳ ನಸುನೋಟವನ್ನು ಪಡೆಯುವುದು ಮತ್ತು |
00:23 | * DWSIM ಗೆ ಬೇಕಾಗುವ ಎಲ್ಲ ರೀತಿಯ ಸಹಾಯ ಪಡೆಯುವ ಬಗೆಯನ್ನು ತಿಳಿಯಲಿದ್ದೇವೆ. |
00:28 | ಬಹುಶಃ, ಎಲ್ಲ ಆಪರೇಟಿಂಗ್ ಸಿಸ್ಟಮ್-ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ನಾನು ಈ ಟ್ಯುಟೋರಿಯಲ್ ಅನ್ನು Windows 7 ನಲ್ಲಿ ರೆಕಾರ್ಡ್ ಮಾಡುತ್ತಿದ್ದೇನೆ. |
00:34 | simulation (ಸಿಮ್ಯುಲೇಶನ್) ಎಂದರೇನು ? |
00:36 | ಭೌತಿಕ ವ್ಯವಸ್ಥೆಯ, ಗಣಿತದ ಮಾದರಿಯ ಮೂಲಕ ಅಧ್ಯಯನ ಮಾಡಿ, ಕಂಪ್ಯೂಟರ್-ನಿಂದ ಪರಿಹಾರವನ್ನು ಹುಡುಕುವುದು. |
00:43 | ಭೌತಿಕ ವ್ಯವಸ್ಥೆಯ ವರ್ತನೆಯನ್ನು ಊಹಿಸಲು ಸಿಮುಲೇಷನ್ ಸಹಾಯ ಮಾಡುತ್ತದೆ. |
00:47 | ಇದು ದುಬಾರಿಯಲ್ಲ, ಸುರಕ್ಷಿತ ಮತ್ತು ತ್ವರಿತವಾಗಿದೆ. |
00:51 | ವಾಸ್ತವಿಕ ವ್ಯವಸ್ಥೆಯಲ್ಲಿ ಇಂತಹ ಅಧ್ಯಯನವನ್ನು ಮಾಡುವ ಆವಶ್ಯಕತೆಯನ್ನು ಇದು ತೊಡೆದುಹಾಕುತ್ತದೆ. |
00:56 | ಭಾರತೀಯ ಬಾಹ್ಯಾಕಾಶ ಯಾತ್ರೆಗಳು ಮಿತವ್ಯಯಕಾರಿಯಾಗಿದ್ದು ಇವುಗಳನ್ನು ತುಲನಾತ್ಮಕವಾಗಿ ಕಡಿಮೆ ಸಮಯದಲ್ಲಿ ಮಾಡಲಾಗಿದೆ. |
01:02 | ಇದಕ್ಕೆ ಮುಖ್ಯ ಕಾರಣವೆಂದರೆ ಸಿಮುಲೇಷನ್. |
01:05 | ರಿಲಾಯನ್ಸ್ ಜಾಮ್-ನಗರ್, ಆರಂಭವಾದಾಗ ಅದು ಜಗತ್ತಿನ ಅತಿದೊಡ್ಡ ಸಿಂಗಲ್ ಸ್ಟ್ರೀಮ್ ಶುದ್ಧೀಕರಣ ಘಟಕವಾಗಿತ್ತು. |
01:11 | ಅದು ಬಹಳ ಕಡಿಮೆ ಸಮಯದಲ್ಲಿ ನಿರ್ಮಾಣವಾಯಿತು, ಇದಕ್ಕಾಗಿ ಮತ್ತೊಮ್ಮೆ ಸಿಮುಲೇಷನ್ ಗೆ ಧನ್ಯವಾದ. |
01:16 | ವಾಣಿಜ್ಯ ಪ್ರಕ್ರಿಯೆಯ ಸಿಮುಲೇಟರ್-ಗಳು ಬಹಳ ಇವೆ. |
01:19 | ಸಾಮಾನ್ಯವಾಗಿ ಬಳಸಲಾಗುವ ಕೆಲವು ಸಿಮುಲೇಟರ್-ಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ. |
01:23 | DWSIM ಎಂದರೇನು? ಅದು ಪ್ರಸ್ತುತ ಬಳಕೆಯಲ್ಲಿರುವ ಒಂದು ಪ್ರೊಸೆಸ್ ಸಿಮುಲೇಟರ್ ಇದ್ದು, ಉಚಿತವಾದ ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ. ಡೆನಿಯಲ್-ರವರು ಇದನ್ನು ಅಭಿವೃದ್ಧಿಪಡಿಸಿದರು ಮತ್ತು ಥರ್ಮೋ-ಡೈನಮಿಕ್ ಸಹಕಾರ ನೀಡಿದವರು ಗ್ರೆಗರ್. ಇದು ವಿಶ್ವದಾದ್ಯಂತ ಬಳಕೆಯಲ್ಲಿದೆ. |
01:39 | Windows 7 ನಲ್ಲಿ DWSIM ಇನ್ಸ್ಟಾಲ್ ಮಾಡುವ ಬಗೆಯನ್ನು ಈಗ ನಾನು ವಿವರಿಸುತ್ತೇನೆ. |
01:45 | ಇಲ್ಲಿ ತೋರಿಸಿರುವ ಲಿಂಕ್-ಗೆ ಹೋಗಿ. |
01:50 | ನಾನು ಈಗಾಗಲೇ ಈ ಲಿಂಕ್-ನಲ್ಲಿ ಇದ್ದೇನೆ. Download ಬಟನ್ ಅನ್ನು ಕ್ಲಿಕ್ ಮಾಡಿ. |
01:55 | ನಾನು ಈಗಾಗಲೇ ಇದನ್ನು ಮಾಡಿದ್ದೇನೆ. |
01:57 | ನಾನು ಈ ಫೈಲ್ ಪಡೆದಿದ್ದೇನೆ. |
02:00 | ಅದು Downloads ಡೈರೆಕ್ಟರಿಯಲ್ಲಿದೆ. |
02:02 | ಇದು ಇಲ್ಲಿದೆ. |
02:04 | ಈ ಫೈಲ್-ನ ಹೆಸರು ಅದರ ಆವೃತ್ತಿಗೆ ಅನುಸಾರವಾಗಿ ಬೇರೆಯಾಗಿರಬಹುದು. |
02:10 | ರೈಟ್ ಕ್ಲಿಕ್ ಮಾಡಿ , Run as an administrator ಎಂದು ಮಾಡಿ. |
02:15 | Next ಕ್ಲಿಕ್ ಮಾಡಿ. |
02:18 | “I agree” ಕ್ಲಿಕ್ ಮಾಡಿ. |
02:20 | ನಿಮಗೆ Chemsep ಮತ್ತು C++ ಈ ಎರಡೂ ಲೈಬ್ರರಿಗಳು ಬೇಕು.
|
02:24 | ಎರಡೂ ಬಾಕ್ಸ್-ಗಳನ್ನು ಚೆಕ್ ಮಾಡಿ. |
02:27 | Enter ಪ್ರೆಸ್ ಮಾಡುತ್ತಿರಿ, DWSIM ಇನ್ಸ್ಟಾಲ್ ಆಗುತ್ತದೆ. |
02:32 | ಈ ಪದ್ಧತಿಯನ್ನು ಬಳಸಿ ನಾನು, DWSIMಅನ್ನು ಈಗಾಗಲೇ ಇನ್ಸ್ಟಾಲ್ ಮಾಡಿದ್ದೇನೆ. |
02:36 | ಆದ್ದರಿಂದ, ಈ ಇನ್ಸ್ಟಾಲ್ಲೇಷನ್ ಪ್ರೊಸೆಸ್ ಅನ್ನು ರದ್ದುಗೊಳಿಸುತ್ತೇನೆ. |
02:41 | yes ಕ್ಲಿಕ್ ಮಾಡಿ. |
02:43 | ನಾನು ಈ ವಿಂಡೋ ಅನ್ನು ಮಿನಿಮೈಸ್ ಮಾಡುತ್ತೇನೆ. |
02:45 | ಡೆಸ್ಕ್-ಟಾಪ್ ನಲ್ಲಿರುವ DWSIM ಐಕಾನ್ ಅನ್ನು ಡಬಲ್-ಕ್ಲಿಕ್ ಮಾಡುವ ಮೂಲಕ ತೆರೆಯಬಲ್ಲೆ. |
02:50 | ನಾನು ಇಲ್ಲಿ ಈಗಾಗಲೇ DWSIM ಅನ್ನು ತೆರೆದಿದ್ದೇನೆ. |
02:54 | ನೀವು ಬಹಳಷ್ಟು ಮೆನುಗಳನ್ನು ಮತ್ತು ಆಸಕ್ತಿದಾಯಕ ಸಾಧ್ಯತೆಗಳನ್ನು ನೋಡಬಹುದು. |
03:02 | DWSIM ಅದ್ಭುತವಾದ Help ವ್ಯವಸ್ಥೆ ಹೊಂದಿದೆ. |
03:06 | F1 ಪ್ರೆಸ್ ಮಾಡುವ ಮೂಲಕ ಅದನ್ನು ನೀವು ತೆರೆಯಬಹುದು. |
03:09 | ನಾನೀಗ F1 ಪ್ರೆಸ್ ಮಾಡುತ್ತೇನೆ. |
03:12 | ನನಗೆ ಈ Help ಪುಟ ಸಿಗುತ್ತದೆ. |
03:14 | ಇದು ಬಹಳ ಮಾಹಿತಿಯನ್ನು ಹೊಂದಿದೆ. |
03:18 | Simulation Objects ಅನ್ನು ಪ್ರೆಸ್ ಮಾಡುತ್ತೇನೆ. |
03:22 | Unit Operations ಅನ್ನು ಪ್ರೆಸ್ ಮಾಡುತ್ತೇನೆ. |
03:25 | Separator ನ ಮೇಲೆ ಡಬಲ್-ಕ್ಲಿಕ್ ಮಾಡುತ್ತೇನೆ. |
03:29 | ಇದು ಈ ಪುಟವನ್ನು ತೆರೆದಿದೆ. |
03:31 | separator ಬಗೆಗೆ ಈ ಪುಟ ಬಹಳ ಮಾಹಿತಿಯನ್ನು ಒಳಗೊಂಡಿದೆ. |
03:36 | ನಾನು ಈ window ಅನ್ನು ಮಿನಿಮೈಸ್ ಮಾಡುತ್ತೇನೆ. |
03:39 | slide ಗೆ ಹೋಗುತ್ತೇನೆ. |
03:42 | DWSIM ನ ಕೆಲವು ಪ್ರಯೋಜನಗಳನ್ನು ತೋರಿಸುತ್ತೇನೆ. |
03:46 | ಇದು ಸಂಪೂರ್ಣ ಉಚಿತವಾಗಿದೆ. |
03:48 | ಇದು ಅತ್ಯುತ್ತಮವಾದ ಥರ್ಮೋಡೈನಮಿಕ್ಸ್ ಮತ್ತು ಸಾಲ್ವರ್-ಗಳನ್ನು ಹೊಂದಿದೆ. |
03:52 | ಈ ಎಲ್ಲ 'ಸೋರ್ಸ್ ಕೋಡ್' ಎಲ್ಲರಿಗೂ ಲಭ್ಯವಿರುತ್ತದೆ. |
03:56 | ಪ್ರತಿಯೊಂದು ಲೆಕ್ಕವನ್ನೂ DWSIM ಮ್ಯಾನ್ಯುಯಲ್-ಗಳು ವಿವರಿಸುತ್ತವೆ. |
04:00 | ಕಮರ್ಷಿಯಲ್ ಸಿಮುಲೇಟರ್-ಗಳು ಇವುಗಳನ್ನು ಬಹಿರಂಗಪಡಿಸುವುದಿಲ್ಲ. |
04:04 | ಬಳಕೆದಾರನು, ಮಾಡೆಲ್-ಗಳ, ಕಾಂಪೌಂಡ್-ಗಳ ಮತ್ತು ಥರ್ಮೋಡೈನಮಿಕ್ಸ್-ಗಳ ಪರಿಚಯ ಮಾಡಿಕೊಳ್ಳಬಹುದು. |
04:09 | DWSIM’ನ ಥರ್ಮೋಡೈನಮಿಕ್ ಲೈಬ್ರರಿಯನ್ನು ಕೂಡ ಇತರೆ ಪ್ರೋಗ್ರಾಮ್-ಗಳ ಜೊತೆಗೆ ಬಳಸಬಹುದು. |
04:15 | ನಾವು DWSIM ಬಗ್ಗೆ ಅತ್ಯುತ್ತಮವಾದ 'ಸ್ಪೋಕನ್ ಟ್ಯುಟೋರಿಯಲ್' ಗಳನ್ನು ಹೊಂದಿದ್ದೇವೆ. |
04:19 | DWSIM ನಲ್ಲಿ material streamಗಳನ್ನು ತಯಾರಿಸುವುದರೊಂದಿಗೆ ನಾವು ಇದನ್ನು ಆರಂಭಿಸುವೆವು. |
04:24 | ನಾನು ಈಗಾಗಲೇ ಎಲ್ಲ 'ಸ್ಪೋಕನ್ ಟ್ಯುಟೋರಿಯಲ್' ಗಳನ್ನು ಡೌನ್-ಲೋಡ್ ಮಾಡಿದ್ದೇನೆ. |
04:29 | ನಾನು ಇವುಗಳನ್ನು ಒಂದೊಂದಾಗಿ play ಮಾಡುತ್ತೇನೆ. |
04:32 | ನಾನು ಇದನ್ನು ಪ್ಲೇ ಮಾಡುತ್ತೇನೆ. Creating a material Stream in DWSIM ನ ವೀಡಿಯೋ ಆಡಿಯೋ ಕ್ಲಿಪ್-ಅನ್ನು ಸೇರಿಸಿ. |
04:40 | ಮುಂದಿನ ಟ್ಯುಟೋರಿಯಲ್, Flowsheeting ನ ಒಂದು ಪ್ರಸ್ತಾವನೆ. |
04:45 | ಇದು flash ಮತ್ತು mixer ಜೊತೆಗೆ ಒಂದು ಸರಳ flowsheet ಅನ್ನು ನಿರ್ಮಿಸುತ್ತದೆ. |
04:50 | ನಾವು ಇದನ್ನು ಕೇಳೋಣ. |
04:53 | Introduction to Flowsheeting in DWSIM ಎಂಬ ವೀಡಿಯೋ ಆಡಿಯೋ ಕ್ಲಿಪ್-ಅನ್ನು ಸೇರಿಸಿ. |
04:59 | shortcutನ ಮುಖಾಂತರ distillation column ಅನ್ನು ಹೇಗೆ ಸಿಮುಲೇಟ್ ಮಾಡುವುದು ಎಂಬುದನ್ನು ಮುಂದಿನ ಟ್ಯುಟೋರಿಯಲ್ ವಿವರಿಸುತ್ತದೆ. |
05:07 | ನಾವು ಇದನ್ನು ಕೇಳೋಣ. |
05:10 | DWSIMನಲ್ಲಿ shortcut distillation column ಅನ್ನು ಸಿಮುಲೇಟ್ ಮಾಡುವ ಈ ವೀಡಿಯೋ ಆಡಿಯೋ ಕ್ಲಿಪ್-ಅನ್ನು ಸೇರಿಸಿ. |
05:17 | rigorous distillation calculations ಮಾಡುವ ಬಗೆಯನ್ನು ಮುಂದಿನ ಟ್ಯುಟೋರಿಯಲ್ ವಿವರಿಸುತ್ತದೆ. |
05:23 | ಇದರ ಆರಂಭದ ಹಂತ shortcut distillation. |
05:27 | ಇದನ್ನು ಕೇಳೋಣ. |
05:30 | DWSIMನಲ್ಲಿ rigorous distillation column ಅನ್ನು ಸಿಮುಲೇಟ್ ಮಾಡುವ ಈ ವೀಡಿಯೋ ಆಡಿಯೋ ಕ್ಲಿಪ್-ಅನ್ನು ಸೇರಿಸಿ. |
05:36 | ನಾನು ತೋರಿಸಲು ಬಯಸುವ ಕೊನೆಯ ಟ್ಯುಟೋರಿಯಲ್, sensitivity analysis ಅನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ. |
05:42 | ಇತರೆ ವೇರಿಯಬಲ್-ಗಳ ಮೇಲೆ ಕೆಲವು ವೇರಿಯಬಲ್ ಗಳ ಸೆನ್ಸಿಟಿವಿಟಿಯ ಬಗ್ಗೆ ಅಭ್ಯಾಸ ಮಾಡಲು ಸಹಾಯ ಮಾಡುತ್ತದೆ. |
05:49 | adjust ಆಪರೇಷನ್, ಇದೇ ಕೆಲಸವನ್ನು ತಾನಾಗಿಯೇ ಮಾಡುತ್ತದೆ. |
05:54 | Sensitivity Analysis, Adjustನ ಈ ವೀಡಿಯೋ ಆಡಿಯೋ ಕ್ಲಿಪ್-ಅನ್ನು ಸೇರಿಸಿ. |
06:04 | ನಾವು ಈಗಷ್ಟೇ ನೋಡಿದ ಟ್ಯುಟೋರಿಯಲ್-ಗಳ ಸಾರಾಂಶ ಇಲ್ಲಿ ಕಾಣುತ್ತದೆ. |
06:10 | DWSIM ಬಳಸಿ, flowsheeting ಸಮಸ್ಯೆಗಳಿಗೆ ತ್ವರಿತ ಪರಿಹಾರವನ್ನು ಹುಡುಕಬಹುದು. |
06:15 | "what if" ಅಭ್ಯಾಸಗಳನ್ನು ನಿರ್ವಹಿಸಿ. |
06:18 | ಅಡಚಣೆಗಳನ್ನು ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಬಗೆಗಳನ್ನು ಗುರುತಿಸಿ. |
06:23 | ವಿದ್ಯಾರ್ಥಿಗಳಿಗೆ DWSIM ಅತ್ಯಂತ ಉಪಯುಕ್ತವಾಗಿದೆ. |
06:27 | ಇದು ಅವರಿಗೆ ಪರಿಕಲ್ಪನೆಗಳನ್ನು ಚೆನ್ನಾಗಿ ತಿಳಿದುಕೊಳ್ಳಲು ಮತ್ತು |
06:29 | ಅವರ ಪರಿಣತಿಯು ಉದ್ಯಮದಲ್ಲಿ ಲಾಭವನ್ನು ಹೆಚ್ಚಿಸಲು ಸಹಾಯಕವಾಗಿದೆ. |
06:34 | ಅವರು ಇನ್ನೂ ಹೆಚ್ಚು ಕೋರ್-ಇಂಜಿನಿಯರಿಂಗ್ ಉದ್ಯೋಗಗಳನ್ನು ಪಡೆಯುವರು. |
06:38 | ಕನ್ಸಲ್ಟಿಂಗ್ ಸಂಸ್ಥೆಯನ್ನು ಆರಂಭಿಸಲು ಬಯಸುವ ವಿದ್ಯಾರ್ಥಿಗಳಿಗೂ ಅದು ಸಹಾಯ ಮಾಡುತ್ತದೆ. |
06:43 | ಇದು ಓಪನ್-ಸೋರ್ಸ್-ಸಾಫ್ಟ್ವೇರ್ ಆದ ಕಾರಣ, ಯಾವ ಸಹಾಯವೂ ದೊರೆಯದು ಎಂದು ನೀವು ಅಂದುಕೊಳ್ಳಬಹುದು. |
06:49 | ಇದು ನಿಜವೇ ? |
06:51 | ಇದು ಸರ್ವಥಾ ನಿಜವಲ್ಲ. |
06:53 | DWSIM ನ ಬಳಕೆದಾರರಿಗೆ ಬಹಳಷ್ಟು ಸಹಾಯ ದೊರೆಯುತ್ತದೆ. |
06:57 | ನಾನು ಅವುಗಳನ್ನು ಒಂದೊಂದಾಗಿ ವಿವರಿಸುತ್ತೇನೆ. |
07:00 | ನಾವು spoken tutorial forum ಅನ್ನು ಹೊಂದಿದ್ದೇವೆ. |
07:03 | ಈ ಲಿಂಕ್-ಗೆ ಹೋಗಿ. ನಾನು ಈಗಾಗಲೇ ಅದನ್ನು ತೆರೆದಿದ್ದೇನೆ. |
07:06 | ಹಾರಿಜಾಂಟಲ್ ಸ್ಕ್ರೋಲ್ ಅನ್ನು ಬಳಸಿ. |
07:10 | View all previous questions ಎಂಬ ಬಟನ್ ಮೇಲೆ ಕೂಡ ನೀವು ಕ್ಲಿಕ್ ಮಾಡಬಹುದು. |
07:14 | ಒಂದು ಸಮಯದಲ್ಲಿ ನೀವು ಒಂದೇ ಸಾಫ್ಟ್ವೇರ್ ಅನ್ನು ನೋಡಲು ಆಸಕ್ತರಿರಬಹುದು. |
07:20 | ಅದರ ಪಕ್ಕದಲ್ಲಿರುವ ಲೆನ್ಸ್-ನ ಮೇಲೆ ಕ್ಲಿಕ್ ಮಾಡಿ. |
07:22 | ಉದಾಹರಣೆಗೆ, ನಾನು Python ಬಗೆಗಿರುವ ಪ್ರಶ್ನೆಗಳನ್ನು ತೋರಿಸುತ್ತೇನೆ. |
07:28 | ನೆನಪಿಡಿ, ಈ ಮುಂಚಿನ ಡಿಸ್ಕಷನ್ ನೋಡಲು ನೀವು ಲಾಗಿನ್ ಮಾಡಬೇಕಾಗಿಲ್ಲ. |
07:34 | Ask Question ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಕೂಡ ಒಂದು ಹೊಸ ಪ್ರಶ್ನೆಯನ್ನು ಕೇಳಬಹುದು. |
07:38 | "login" ನಂತರ ಅದು ಇದೆ. |
07:40 | ನಾನು ಇದನ್ನು ಕ್ಲಿಕ್ ಮಾಡುತ್ತೇನೆ. ಪ್ರಶ್ನೆಯನ್ನು ಕೇಳಲು ನೀವು ಲಾಗಿನ್ ಮಾಡಬೇಕು. |
07:45 | ನೀವು ರಿಜಿಸ್ಟರ್ ಮಾಡಿರದಿದ್ದರೆ, ಒಮ್ಮೆ ಅದನ್ನು ಮಾಡಬೇಕು. |
07:50 | ಈ ಸೈಟ್-ನಲ್ಲಿ ನಾನು ಈಗಾಗಲೇ ರಿಜಿಸ್ಟರ್ ಮಾಡಿದ್ದೇನೆ. |
07:53 | ನಾನು ಇದನ್ನು ಕ್ಲಿಕ್ ಮಾಡಿ ಲಾಗಿನ್ ಮಾಡುತ್ತೇನೆ. |
07:56 | ಒಂದು ಕೆಟಗರಿಯನ್ನು ನಾನು ಆರಿಸಬೇಕು. |
07:59 | DWSIMಅನ್ನು ನಾನು ಆರಿಸುತ್ತೇನೆ. |
08:02 | flowsheeting ಟ್ಯುಟೋರಿಯಲ್-ನಲ್ಲಿ ನಿಮಗೆ ಒಂದು ಪ್ರಶ್ನೆ ಇದೆ ಎಂದುಕೊಳ್ಳೋಣ. |
08:06 | Introduction to flowsheeting ಎಂಬ ಟ್ಯುಟೋರಿಯಲ್ ಅನ್ನು ಆಯ್ಕೆಮಾಡಿ. |
08:11 | ಒಂದುವೇಳೆ ಈ ಪ್ರಶ್ನೆಯು 3 ನಿಮಿಷ 35 ಸೆಕೆಂಡಿಗೆ ಬಂದರೆ, |
08:16 | minuteಅನ್ನು 3-4 ಎಂದು ಆರಿಸಿ. |
08:19 | secondಅನ್ನು 30-40 ಎಂದು ಆರಿಸಿ. |
08:23 | ನಿಮ್ಮ ಪ್ರಶ್ನೆಯನ್ನು ಇಲ್ಲಿ ಬರೆದು, ಈ ಹಸಿರು ಬಟನ್ ಮೂಲಕ ಸಬ್ಮಿಟ್ ಮಾಡಿ. |
08:29 | ನಾನು ಈಗ ಮುಂದಿನ ಸ್ಲೈಡ್-ಗೆ ಹೋಗುತ್ತೇನೆ. |
08:31 | ಒಂದು ವೇಳೆ ನಿಮಗೆ, |
08:34 | ಸ್ಪೋಕನ್ ಟ್ಯುಟೋರಿಯಲ್-ಗೆ ಸಂಬಂಧಿಸದಿರುವ ಸಾಮಾನ್ಯ ಪ್ರಶ್ನೆ ಇದ್ದರೆ, |
08:36 | ಅದಕ್ಕೆ ಮಿನಿಟ್ ಅಥವಾ ಸೆಕೆಂಡ್-ಗಳು ಇರುವುದಿಲ್ಲ. |
08:39 | ಉದಾಹರಣೆಗೆ, ಇದು ನೀವು DWSIM ಅನ್ನು ಬಳಸಿ ಉತ್ತರ ಹುಡುಕುತ್ತಿರುವ ಹೊಸ ಸಮಸ್ಯೆಗಾಗಿಯೇ ಇರಬಹುದು. |
08:46 | ಇದಕ್ಕಾಗಿ, FOSSEE ಗುಂಪಿನ ನೇತೃತ್ವವುಳ್ಳ ಇನ್ನೊಂದು ಫೋರಂ ಇದೆ. |
08:52 | ನಾವು ಅಲ್ಲಿಗೆ ಹೋಗೋಣ. |
08:55 | ಅಡ್ಡಲಾದ ಸ್ಕ್ರೋಲಿಂಗ್ ಮೆನುವಿನಿಂದ, ಒಂದು ಕೆಟಗರಿಯನ್ನು ಆರಿಸಿ. |
08:59 | ನೀವು ಹಿಂದಿನ ಪ್ರಶ್ನೆಗಳನ್ನು ನೋಡಬಹುದು. |
09:02 | ನಾನು ಇದನ್ನು ಕ್ಲಿಕ್ ಮಾಡುತ್ತೇನೆ. |
09:04 | ಉದಾಹರಣೆಗೆ, ನಾವು FOSSEE ಲ್ಯಾಪ್ಟಾಪ್-ನ ಬಗ್ಗೆ ಈ ಡಿಸ್ಕಷನ್ ಅನ್ನು ನೋಡೋಣ. |
09:10 | ಉದಾಹರಣೆಗೆ, ನೀವು ಪ್ರಿಂಟರ್-ಗಳ ಬಗೆಗಿನ ಡಿಸ್ಕಷನ್ ನೋಡಬಹುದು. |
09:14 | ನೀವು ಸಹ DWSIM ಬಗ್ಗೆ ಯಾವುದೇ ಪ್ರಶ್ನೆಯನ್ನು ಕೇಳಬಹುದು. |
09:17 | Ask Question. ಲಿಂಕ್ ಅನ್ನು ನಾನು ಕ್ಲಿಕ್ ಮಾಡುತ್ತೇನೆ. |
09:21 | ನೀವು ಇದನ್ನು ಮಾಡಬೇಕಾದರೆ, ಲಾಗಿನ್ ಮಾಡಬೇಕು. |
09:24 | ಆದರೆ ಮೊದಲು ನೀವು ರಿಜಿಸ್ಟರ್ ಮಾಡಿಕೊಳ್ಳಬೇಕು. |
09:27 | ನಾವು ಲಭ್ಯವಿರುವ ಇನ್ನೊಂದು ವಿಧದ ಸಹಾಯದತ್ತ ಹೋಗೋಣ. |
09:31 | textbook companions ಎಂಬ ಹೆಸರಿನ ಸೌಲಭ್ಯವನ್ನು ನಾವು ಹೊಂದಿದ್ದೇವೆ. |
09:35 | ಪಠ್ಯಪುಸ್ತಕಗಳಿಂದ ಆಯ್ದ ಪ್ರಶ್ನೆಗಳ ಉತ್ತರಗಳಿಗೆ, ಅದು DWSIM ದ ಉತ್ತರಗಳನ್ನು ಕೊಡುತ್ತದೆ. |
09:41 | ಈ ಲಿಂಕ್-ನಲ್ಲಿ ಅದು ಸಿಗುತ್ತದೆ. |
09:44 | FOSSEE’ ಯ DWSIM ಪೇಜ್ ಗೆ ನಾನು ಹೋಗುತ್ತೇನೆ. |
09:49 | Textbook Companion Project ಲಿಂಕ್-ನ ಮೇಲೆ ಕ್ಲಿಕ್ ಮಾಡುತ್ತೇನೆ. |
09:53 | ಅದು ಇಲ್ಲಿಗೆ ನನ್ನನ್ನು ಕರೆತರುತ್ತದೆ. |
09:55 | ನೀವಿಲ್ಲಿ ಈ ಪ್ರೊಜೆಕ್ಟ್-ನ ಬಗ್ಗೆ ಪ್ರಸ್ತಾವನೆಯನ್ನು ಕಾಣುವಿರಿ. |
09:59 | ಪೂರ್ಣಗೊಂಡ DWSIM ಟೆಕ್ಸ್ಟ್-ಬುಕ್ ಕಂಪ್ಯಾನಿಯನ್ ಗಳನ್ನು ನೀವಿಲ್ಲಿ ನೋಡುವಿರಿ. |
10:04 | ನಂತರ, ಈ ಲಿಂಕ್-ನತ್ತ ನೋಡಿ. |
10:07 | ಇದನ್ನು Lab Migration Project. ಎನ್ನುತ್ತಾರೆ. |
10:09 | ಇದನ್ನು ನಾನು ಮುಂದಿನ ಸ್ಲೈಡ್-ನಲ್ಲಿ ವಿವರಿಸುತ್ತೇನೆ. |
10:14 | ಕಮರ್ಷಿಯಲ್ ಸಿಮುಲೇಟರ್ ಆಧರಿತ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ನಾವು ಸಹಾಯ ಮಾಡುತ್ತೇವೆ. |
10:20 | ಈ ಕೆಲಸವನ್ನು ಮಾಡುವವರಿಗೆ ಗೌರವಧನ ಹಾಗೂ ಪ್ರಮಾಣಪತ್ರಗಳನ್ನು ನಾವು ನೀಡುತ್ತೇವೆ. |
10:25 | ಹೆಚ್ಚಿನ ಮಾಹಿತಿಗಾಗಿ, ಈ ಲಿಂಕ್-ಅನ್ನು ನೋಡಿ. |
10:29 | DWSIMಅನ್ನು ಜಗತ್ತಿನಾದ್ಯಂತ ಬಳಸಲಾಗುತ್ತದೆ ಎಂದು ನಾನು ಈ ಮೊದಲು ಹೇಳಿದ್ದೇನೆ. |
10:35 | DWSIMಅನ್ನು ಕ್ರಿಯೇಟ್ ಮಾಡುವವರು ಮತ್ತು ಎಲ್ಲ ಬಳಕೆದಾರರು ನಿಮಗೆ ಸಹಾಯ ಮಾಡಲು ಸಿದ್ಧರಿದ್ದಾರೆ. |
10:40 | ಜಗತ್ತಿನಾದ್ಯಂತ ಇರುವ ಮಿತ್ರರಿಂದ ಸಿಗಬಹುದಾದ ಸಹಾಯವನ್ನು ಈಗ ನಾವು ನೋಡುವೆವು. |
10:45 | unit operations ನ ಬಗ್ಗೆ ಒಂದು ಅತ್ಯುತ್ತಮವಾದ ಮ್ಯಾನ್ಯುಯಲ್ ಲಭ್ಯವಿದೆ. |
10:48 | DWSIM ಅನ್ನು ನೀವು ಇನ್ಸ್ಟಾಲ್ ಮಾಡಿದಾಗ, ನಿಮಗೆ ಅದರ ಪ್ರತಿ ಸಿಗುತ್ತದೆ. |
10:53 | ಅದು DWSIMನ docs ಫೋಲ್ಡರ್-ನಲ್ಲಿ ಸಿಗುತ್ತದೆ. |
10:59 | DWSIMನ ಈಗಿನ ಆವೃತ್ತಿಯು ಅದನ್ನು Unit Ops and Utilities Guide ಎನ್ನುತ್ತದೆ. |
11:05 | ನಾನು ಈಗಾಗಲೇ ಅದನ್ನು ತೆರೆದಿದ್ದೇನೆ. |
11:07 | ಕೆಳಗೆ ಸ್ಕ್ರೋಲ್ ಮಾಡೋಣ. |
11:09 | heat exchanger ಮೇಲೆ ಕ್ಲಿಕ್ ಮಾಡಿ, ಲೆಕ್ಕವನ್ನು ನೋಡೋಣ. |
11:18 | ನೀವು ಲೆಕ್ಕವನ್ನು ಇಲ್ಲಿ ನೋಡುವಿರಿ. |
11:22 | ಈ ಮ್ಯಾನ್ಯುಯಲ್ ಅನ್ನು ಮಿನಿಮೈಸ್ ಮಾಡುತ್ತೇನೆ. |
11:23 | ಮುಂದಿನ ಸ್ಲೈಡ್, ಬೇರೊಂದು ಮ್ಯಾನ್ಯುಯಲ್ ಬಗ್ಗೆ ತಿಳಿಸುತ್ತದೆ. |
11:28 | ಅದೇ ಪೋಲ್ಡರ್-ನಲ್ಲಿ properties manual ಅನ್ನು ಗುರುತಿಸಿ. |
11:31 | ಈ ಆವೃತ್ತಿಯಲ್ಲಿ ಅದನ್ನು tech manual ಎನ್ನುತ್ತಾರೆ. |
11:37 | ನಾನು ಈಗಾಗಲೇ ಅದನ್ನು ತೆರೆದಿದ್ದೇನೆ. fugacity calculation ಅನ್ನು ಹೇಗೆ ಕಾರ್ಯಗತ ಮಾಡಿದ್ದಾರೆ ಎಂಬುದರ ವಿವರಗಳನ್ನು ನೋಡೋಣ. |
11:48 | ನಾನು ಒಂದು ಕೊನೆಯ ಸಹಾಯವನ್ನು ತೋರಿಸುತ್ತೇನೆ. |
11:50 | ಅದು DWSIM ಡಿಸ್ಕಷನ್ ಫೋರಮ್. |
11:54 | ನಾನು ಇಲ್ಲಿ ಅದರ ಲಿಂಕ್ ಕೊಟ್ಟಿದ್ದೇನೆ. ನೀವು ಮುಂಚಿನ ಡಿಸ್ಕಷನ್-ಗಳನ್ನು ನೋಡಬಹುದು. |
11:57 | ನೀವು ನಿಮ್ಮ ಪ್ರಶ್ನೆಗಳನ್ನೂ ಇಲ್ಲಿ ಕಳಿಸಬಹುದು. |
12:01 | ಇದಕ್ಕಾಗಿ ನೀವು ರಿಜಿಸ್ಟರ್ ಮಾಡಬೇಕು. |
12:03 | ನಾನು ಈಗಾಗಲೇ ಈ ಪೇಜ್-ನಲ್ಲಿದ್ದೇನೆ. |
12:07 | ನಾನು ಇಲ್ಲಿಗೆ ನಿಲ್ಲಿಸುತ್ತೇನೆ. |
12:09 | ನಾನು ಈಗ ಸಾರಾಂಶ ಹೇಳುತ್ತೇನೆ. ಈ ಟ್ಯುಟೋರಿಯಲ್-ನಲ್ಲಿ ನಾವು: |
12:13 | DWSIM ಇನ್ಸ್ಟಾಲ್ ಮಾಡುವುದು ಹೇಗೆ, |
12:15 | DWSIM ನ ಬಗ್ಗೆ ಲಭ್ಯವಿರುವ ಸ್ಪೋಕನ್ ಟ್ಯುಟೋರಿಯಲ್-ಗಳು, |
12:19 | ನೀವು DWSIMಅನ್ನು ಏಕೆ ಬಳಸಬೇಕೆಂಬುದರ ಬಗ್ಗೆ ವಿವರಣೆ, |
12:22 | ಸ್ಪೋಕನ್ ಟ್ಯುಟೋರಿಯಲ್ ಮತ್ತು FOSSEE ಪ್ರಾಜೆಕ್ಟ್- ಗಳಿಂದ ಸಿಗುವ ಸಹಾಯ ಮತ್ತು ಯೋಜನೆಗಳು, |
12:28 | ವಿಶ್ವವ್ಯಾಪಿ ಸಮುದಾಯದಿಂದ DWSIM ನ ಬಗ್ಗೆ ಸಿಗುವ ಸಹಾಯ, ಇವುಗಳನ್ನು ತಿಳಿದೆವು. |
12:32 | ನನ್ನ ಹತ್ತಿರ ನಿಮಗಾಗಿ ಹತ್ತು ಅಸೈನ್ಮೆಂಟ್-ಗಳಿವೆ. |
12:35 | DWSIM ಅನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿ. |
12:38 | DWSIM ಓಪನ್ ಆಗುತ್ತದೆಯೇ ನೋಡಿ. |
12:41 | DWSIM interface ಬಗ್ಗೆ ತಿಳಿದುಕೊಳ್ಳಿ. |
12:44 | ಪ್ರತಿಯೊಂದು ಮೆನು ಮತ್ತು ಬಟನ್ ಬಗ್ಗೆ ಕಲಿತುಕೊಳ್ಳಿ. |
12:46 | DWSIM ಏನೆಲ್ಲ ಮಾಡಲು ಸಾಧ್ಯವಿದೆ ಎಂಬುದನ್ನು ಗುರುತಿಸಿ. |
12:51 | ಹಿಂದೆ ತೋರಿಸಿದ ಸ್ಪೋಕನ್-ಟ್ಯುಟೋರಿಯಲ್-ಗಳನ್ನು ಅಭ್ಯಾಸ ಮಾಡಿ. |
12:55 | ಇದಕ್ಕಾಗಿ, ಈ ಟ್ಯುಟೋರಿಯಲ್-ನಲ್ಲಿ ತೋರಿಸಿದ side-by-side ಪದ್ಧತಿಯನ್ನು ಬಳಸಿ. |
13:01 | ನಾನು ಈ ಟ್ಯುಟೋರಿಯಲ್ ಅನ್ನು ಪ್ಲೇ ಮಾಡುತ್ತೇನೆ. |
13:03 | side by side method ಇದರ ವೀಡಿಯೋ ಆಡಿಯೋ ಕ್ಲಿಪ್-ಅನ್ನು ಸೇರಿಸುತ್ತೇನೆ. |
13:10 | ಮುಂದಿನ ಅಸೈನ್ಮೆಂಟ್-ಗೆ ಹೋಗುತ್ತೇನೆ. Spoken Tutorial discussion forumಗೆ ಹೋಗಿ. |
13:15 | ಹಿಂದಿನ ಡಿಸ್ಕಷನ್-ಗಳನ್ನು ನೋಡಿ. |
13:18 | ಟ್ಯುಟೋರಿಯಲ್-ನಲ್ಲಿ ನಿಮಗೆ ಇರಬಹುದಾದ ಪ್ರಶ್ನೆಯನ್ನು ಕೇಳಿ, ಅದರ ಸಮಯವನ್ನು ನಮೂದಿಸಿ. |
13:23 | FOSSEE ಡಿಸ್ಕಷನ್ ಫೋರಂ-ಗೆ ಹೋಗಿ. |
13:25 | DWSIM ಡಿಸ್ಕಷನ್ ನೋಡಿ. |
13:28 | ರಿಜಿಸ್ಟರ್ ಮಾಡಿ, ಲಾಗಿನ್ ಮಾಡಿ, ಪ್ರಶ್ನೆಯನ್ನು ಕೇಳಿ. |
13:32 | DWSIM ಗಾಗಿ ಒಂದು textbook companion ತಯಾರಿಸಿ. |
13:36 | ನಿಮ್ಮ ಸಿಮುಲೇಷನ್ ಲ್ಯಾಬ್-ಅನ್ನು DWSIM ಗೆ ಮೈಗ್ರೇಟ್ ಮಾಡಲು ಸಹಾಯ ಮಾಡಿ. |
13:41 | DWSIM ನೊಂದಿಗೆ ಬರುವ ಮ್ಯಾನ್ಯುಯಲ್-ಗಳನ್ನು ಅಭ್ಯಾಸಮಾಡಿ. |
13:45 | DWSIMನ ವಿಶ್ವವ್ಯಾಪಿ ಸಮುದಾಯದ ಡಿಸ್ಕಷನ್ ಫೋರಂ-ಗೆ ಹೋಗಿ. |
13:50 | ಹಿಂದಿನ ಡಿಸ್ಕಷನ್-ಗಳನ್ನು ನೋಡಿ. |
13:52 | ರಿಜಿಸ್ಟರ್ ಮಾಡಿ, ಲಾಗಿನ್ ಮಾಡಿ, ಪ್ರಶ್ನೆಯನ್ನು ಕೇಳಿ. |
13:56 | ನಾನು ಕೊನೆಯ ಅಸೈನ್ಮೆಂಟ್-ಗೆ ಹೋಗುತ್ತೇನೆ. |
13:59 | DWSIM ಓಪನ್ ಮಾಡಿ ಮತ್ತು F1 ಒತ್ತಿ. |
14:03 | Help ಸೌಲಭ್ಯದ ಬಗ್ಗೆ ತಿಳಿದುಕೊಳ್ಳಿ. |
14:05 | ಮತ್ತು, ಈ ಲಿಂಕ್-ನಲ್ಲಿ ಲಭ್ಯವಿರುವ ಟ್ಯುಟೋರಿಯಲ್-ಗಳನ್ನು ಕೂಡ ನೋಡಿ. |
14:11 | ಹೆಲ್ಪ್ ಸೆಕ್ಷನ್-ನಲ್ಲಿ ನಾನು ಇದನ್ನು ಹೇಳಲು ಮರೆತೆ. |
14:15 | ಈ ಲಿಂಕ್ ನಿಮ್ಮನ್ನು ಈ ಪುಟಕ್ಕೆ ಕರೆದೊಯ್ಯುತ್ತದೆ. |
14:20 | ನಾನು slideಗೆ ಹಿಂದಿರುಗುತ್ತೇನೆ. |
14:23 | ಈ ವೀಡಿಯೋ, Spoken Tutorial ಪ್ರೊಜೆಕ್ಟ್ ನ ಸಾರಾಂಶವಾಗಿದೆ. |
14:27 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್-ಲೋಡ್ ಮಾಡಿ ನೋಡಬಹುದು. |
14:32 | ನಾವು Spoken Tutorial. ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
14:39 | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
14:46 | ಈ ಟುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕ ……... ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು. |