Linux-Old/C2/Ubuntu-Desktop-10.10/Kannada
From Script | Spoken-Tutorial
Revision as of 02:01, 21 April 2013 by Pravin1389 (Talk | contribs)
Time | Narration |
---|---|
0:00 | ಉಬಂಟು ಡೆಸ್ಕ್ಟಾಪ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ. |
0:04 | ಈ ಟ್ಯುಟೋರಿಯಲ್ ಅನ್ನು ಬಳಸಿ ಉಬಂಟು ಡೆಸ್ಕ್ಟಾಪ್ ನ ಬಳಕೆಯಲ್ಲಿ ಪರಿಚಿತರಾಗೋಣ. |
0:12 | ಇದಕ್ಕೋಸ್ಕರ ನಾನು ಉಬಂಟು 10.10 ಅನ್ನು ಬಳಸುತ್ತಿದ್ಧೇನೆ. |
0:19 | ಈಗ ನೀವು ನೋಡುತ್ತಿರುವುದೇ, ಉಬಂಟು ಡೆಸ್ಕ್ಟಾಪ್. |
0:24 | ನೀವು ಮುಖ್ಯ ಪರಿವಿಡಿಯನ್ನು ಮೇಲ್ಗಡೆ ಎಡ ಬದಿಯಲ್ಲಿ ಕಾಣಬಹುದು. |
0:31 | ಇದನ್ನು ಓಪನ್ ಮಾಡಲು Alt + F1 ಅನ್ನು ಒತ್ತಿ ಅಥವಾ ಅಪ್ಲಿಕೇಶನ್ ಗೆ ಹೋಗಿ ಕ್ಲಿಕ್ ಮಾಡಿ. |
0:40 | ಅಪ್ಲಿಕೇಶನ್ ಪರಿವಿಡಿಯು ಸ್ಥಾಪನೆಯಾದ ಎಲ್ಲಾ ಅಪ್ಲಿಕೇಶನ್ ಗಳನ್ನು ಒಳಗೊಂಡಿದ್ದು, ವರ್ಗ್ರಿಕ್ರತಗೊಂಡಿರುತ್ತದೆ. |
0:48 | ಈ ಅಪ್ಲಿಕೇಶನ್ ಪರಿವಿಡಿಯಲ್ಲಿ ಕೆಲವೊಂದು ಮುಖ್ಯ ಅಪ್ಲಿಕೇಶನ್ ಗೆ ಪರಿಚಿತರಾಗುವ. |
0:55 | ಇದಕ್ಕಾಗಿ ಅಪ್ಲಿಕೇಶನ್ -->ಆಕ್ಸಸ್ಸರಿಸ್ -->ಕ್ಯಾಲ್ಕುಲೇಟರ್ ಗೆ ಹೋಗಿ. |
1:04 | ಈ ಕ್ಯಾಲ್ಕುಲೇಟರ್ ಗಣಿತ, ವೈಜ್ಞಾನಿಕ ಅಥವಾ ಹಣಕಾಸಿನ ಲೆಕ್ಕಾಚಾರ ನಿರ್ವಹಿಸಲು ಸಹಾಯ ಮಾಡುತ್ತದೆ. |
1:12 | ಈಗ ಇದನ್ನು ಓಪನ್ ಮಾಡಲು ಕ್ಯಾಲ್ಕುಲೇಟರ್ ಅನ್ನು ಒತ್ತಿ. |
1:18 | ಈಗ ಕೆಲವೊಂದು ಸರಳ ಲೆಕ್ಕಾಚಾರವನ್ನು ಮಾಡುಲು ಪ್ರಯತ್ನಿಸುವ. |
1:22 | 5*(ಗುಣಿಸು)8 ಮತ್ತು = ಕೀ ಅನ್ನು ಒತ್ತಿ. |
1:32 | = ಕೀ ಒತ್ತುದರ ಬದಲಾಗಿ ಎಂಟರ್ ಕೀ ಅನ್ನು ಸಹ ಒತ್ತಬಹುದು. |
1:39 | ಕ್ಲೋಸ್ ಬಟನ್ ಒತ್ತುವುದರ ಮೂಲಕ ಈ ಕ್ಯಾಲ್ಕುಲೇಟರ್ ನಿಂದ ನಿರ್ಗಮಿಸುವ. |
1:46 | ಈಗ ಇನ್ನೊಂದು ಅಪ್ಲಿಕೇಶನ್ ಅನ್ನು ನೋಡುವ. |
1:50 | ಅದಕ್ಕೋಸ್ಕರ ಅಪ್ಲಿಕೇಶನ್ ಗೆ ಹೋಗಿ ಅಲ್ಲಿಂದ ಆಕ್ಸಸ್ಸರಿಸ್ ಗೆ ಹೋಗಿ. |
1:59 | ಆಕ್ಸಸ್ಸರಿಸ್ ನ್ ಅಲ್ಲಿ, ಟೆಕ್ಸ್ಟ್ ಎಡಿಟರ್ ಅನ್ನು ಓಪನ್ ಮಾಡಲು, ಟೆಕ್ಸ್ಟ್ ಎಡಿಟರ್ ಅನ್ನು ಒತ್ತಿ. |
2:09 | ಈಗ ನೀವು ಸ್ಕ್ರೀನ್ ನ ಮೇಲೆ ನೋಡುತ್ತಾ ಇರುವುದೇ Gedit ಟೆಕ್ಸ್ಟ್ ಎಡಿಟರ್. |
2:16 | ಈಗ ನಾವು ಕೆಲವು ಅಕ್ಷರಗಳನ್ನು ಬರೆದು ಸೇವ್ ಮಾಡುವ. "H-e-l-l-o W-o-r-l-d" ಅನ್ನು ಬರೆಯಿರಿ. |
2:28 | ಸೇವ್ ಮಾಡಲು ನಾವು Clt+ s ಅನ್ನು ಬಳಸಬಹುದು ಅಥವಾ ಫೈಲ್ ಮೆನುವಿಗೆ ಹೋಗಿ ಸೇವ್ ಮಾಡಬಹುದು. ಅದಕ್ಕಾಗಿ ಫೈಲ್ ಮೆನುವಿಗೆ ಹೋಗಿ ಸೇವ್ ಬಟನ್ ಒತ್ತಿ. |
2:45 | ಈಗ ಒಂದು ಚಿಕ್ಕ ಡಯಾಲೋಗ್ ಬಾಕ್ಸ್ ಬರುತ್ತದೆ. ಅದು ಫೈಲ್ ಅನ್ನು ಸೇವ್ ಮಾಡಲು ಫೈಲ್ ಹೆಸರು ಮತ್ತು ಲೋಕೆಶನ್ ಕೇಳುತ್ತದೆ. |
2:56 | ಈಗ ಹೆಸರನ್ನು "hello.txt" ಎಂದು ಬರೆಯುವ ಮತ್ತು ಲೋಕೆಶನ್ ಗಾಗಿ ಡೆಸ್ಕ್ಟಾಪ್ ಅನ್ನು ಆಯ್ಕೆ ಮಾಡಿ ಸೇವ್ ಒತ್ತಿ. |
3:15 | ಈಗ Gedit ಅನ್ನು ಕ್ಲೋಸ್ ಮಾಡಿ ಮತ್ತು ನಿಮ್ಮ ಫೈಲ್ ಡೆಸ್ಕ್ಟಾಪ್ ನಲ್ಲಿ ಸೇವ್ ಆಗಿದೆಯಾ ಪರಿಶೀಲಿಸಿ. ನಿಮ್ಮ ಫೈಲ್ ಸೇವ್ ಆಗಿದ್ದಲ್ಲಿ ಕ್ಲೋಸ್ ಮಾಡಿ. |
3:24 | ಈಗ ನಿಮ್ಮ ಡೆಸ್ಕ್ಟಾಪ್ ನಲ್ಲಿ "hello.txt" ಫೈಲ್ ಬಂದಿರುವುದನ್ನು ಗಮನಿಸಿ. |
3:30 | ಈಗ ನಿಮ್ಮ ಟೆಕ್ಸ್ಟ್ ಫೈಲ್ ಸಂಪೂರ್ಣವಾಗಿ ಸೇವ್ ಆಗಿದೆ. |
3:35 | ಈಗ ನಿಮ್ಮ ಫೈಲ್ ಅನ್ನು ಓಪನ್ ಮಾಡಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. |
3:40 | ನಮ್ಮ ಟೆಕ್ಸ್ಟ್ ಫೈಲ್ ಈಗ ನಾವು ಬರೆದ ಅಕ್ಷರಗಳೊಂದಿಗೆ ಓಪನ್ ಆಗಿದೆ. |
3:44 | ಇಂಟರ್ನೆಟ್ ನಲ್ಲಿಯೂ ಕೂಡ Gedit ಟೆಕ್ಸ್ಟ್ ಎಡಿಟರ್ ನ ಕುರಿತಾಗಿ ತುಂಬಾ ಮಾಹಿತಿಯನ್ನು ಪಡೆಯಬಹುದು. |
3:50 | ಈ ವಿಷಯದ ಸ್ಪೋಕೇನ್ ಟ್ಯುಟೋರಿಯಲ್ ಗಳು http://spoken-tutorial.org ಅಲ್ಲಿಯೂ ಇವೆ. |
4:00 | ಈಗ ಟೆಕ್ಸ್ಟ್ ಎಡಿಟರ್ ಅನ್ನು ಕ್ಲೋಸ್ ಮಾಡಿ, ಆಕ್ಸಸ್ಸರಿಸ್ ಅಲ್ಲಿರುವ ಕೆಲವು ಅಪ್ಲಿಕೇಶನ್ ಅನ್ನು ನೋಡುವ. ಅಂದರೆ: ಟರ್ಮಿನಲ್. |
4:12 | ಈಗ ಮರಳಿ ಅಪ್ಲಿಕೇಶನ್ -->ಆಕ್ಸಸ್ಸರಿಸ್ ಮತ್ತು ಟರ್ಮಿನಲ್ ಗೆ ಹೋಗೋಣ. |
4:19 | ಟರ್ಮಿನಲ್ ಅನ್ನು "ಆದೇಶ ರೇಖೆ"ಎಂದೂ ಕರೆಯಲಾಗುತ್ತದೆ, ಏಕೆಂದರೆ ನೀವು ಸಹ ಇಲ್ಲಿಂದ ಕಂಪ್ಯೂಟರ್ ಗೆ ಆದೇಶ ನೀಡಬಹುದು. |
4:25 | ವಾಸ್ತವವಾಗಿ ಇದು GUI ಗಿಂತಲೂ ಪ್ರಬಲವಾಗಿದೆ. |
4:30 | ಈಗ ಟರ್ಮಿನಲ್ ಪರಿಣಾಮವನ್ನು ಕಾಣಲು ಸರಳ ಆದೇಶವನ್ನು ಬರೆಯುವ. |
4:36 | ಈಗ 'LS' ಅನ್ನು ಬರೆದು ಎಂಟರ್ ಒತ್ತುವ. |
4:41 | ಎಲ್ಲಾ ಫೈಲ್ ಮತ್ತು ಫೋಲ್ಡರ್ ಗಳನ್ನು ಸದ್ಯದ ಡೈರಕ್ಟರಿ ಯ ಲಿಸ್ಟ್ ನಲ್ಲಿ ನೋಡಬಹುದು. |
4:48 | ಇಲ್ಲಿ ಇದು ಎಲ್ಲಾ ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ಹೋಂ ಫೋಲ್ಡರ್ ನಿಂದ ತೋರಿಸುತ್ತಿದೆ. |
4:55 | ಈ ಟ್ಯುಟೋರಿಯಲ್ ನಲ್ಲಿ ಹೋಂ ಫೋಲ್ಡರ್ ಏನೆಂಬುದನ್ನು ಆಮೇಲೆ ನೋಡೋಣ. |
5:01 | ಈಗ ನಾವು ಟರ್ಮಿನಲ್ ಅಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯವುದಿಲ್ಲ. http://spoken-tutorial.org ಅಲ್ಲಿರುವ ಲೀನೆಕ್ಸ್ ಸ್ಪೋಕನ್ ಟ್ಯುಟೋರಿಯಲ್ ಅಲ್ಲಿ ಟರ್ಮಿನಲ್ ಆದೇಶಗಳನ್ನು ಉತ್ತಮ ರೀತಿಯಲ್ಲಿ ವಿವರಿಸಲಾಗಿದೆ. |
5:17 | ಟರ್ಮಿನಲ್ ಅನ್ನು ಕ್ಲೋಸ್ ಮಾಡಿ. |
5:20 | ಇನ್ನು ನಾವು ಇನ್ನೊಂದು ಅಪ್ಲಿಕೇಶನ್ ಗೆ ಹೋಗೋಣ. ಅಂದರೆ:ಫೈಯರ್ ಫಾಕ್ಸ್ ವೆಬ್ ಬ್ರೌಸರ್. ಇದನ್ನು ಓಪನ್ ಮಾಡುವ. |
5:27 | ಅದಕ್ಕಾಗಿ ಅಪ್ಲಿಕೇಶನ್-> ಇಂಟರ್ನೆಟ್ -> ಫೈಯರ್ ಫಾಕ್ಸ್ ವೆಬ್ ಬ್ರೌಸರ್ ಅನ್ನು ಒತ್ತಿ. |
5:36 | ಫೈಯರ್ ಫಾಕ್ಸ್ ಅನ್ನು ಅಂತರ್ಜಾಲ ಜಾಲಾಡಲು ಉಪಯೋಗಿಸಲಾಗುತ್ತದೆ. ಈಗ ಫೈಯರ್ ಫಾಕ್ಸ್ ಓಪನ್ ಆಗಿರುವುದನ್ನು ನೋಡಬಹುದು. |
5:43 | ಈಗ ನಾವು ಜಿ ಮೇಲ್ ಸೈಟ್ ಗೆ ಹೋಗೋಣ. ಅದಕ್ಕೆ ಅಡ್ರೆಸ್ ಬಾರ್ ಗೆ ಹೋಗಿ ಅಥವಾ F6 ಒತ್ತಿ. ನಾನೀಗ F6 ಒತ್ತುತ್ತಿದ್ದೇನೆ. |
5:53 | ಹೌದು! ನಾನೀಗ ಅಡ್ರೆಸ್ ಬಾರ್ ನಲ್ಲಿದ್ದೇನೆ ಮತ್ತು ಅಡ್ರೆಸ್ ಬಾರ್ ಅನ್ನು ಕ್ಲಿಯರ್ ಮಾಡಲು ಬ್ಯಾಕ್ ಸ್ಪೇಸ್ ಒತ್ತಿ. |
6:00 | ಇಲ್ಲಿ ನಾನು "www.gmail.com" ಎಂದು ಬರೆಯುತ್ತೇನೆ. |
6:04 | ನಾನು ಬರೆಯುತ್ತಿದ್ದ ಹಾಗೆ ಫೈಯರ್ ಫಾಕ್ಸ್ ಕೆಲವು ಸಾಧ್ಯತೆಗಳ ಸಲಹೆ ನೀಡುತ್ತದೆ. |
6:09 | ನೀವು ಅದರಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಬಹುದು ಅಥವಾ ಸಂಪೂರ್ಣ ಅಡ್ರೆಸ್ ಅನ್ನು ಬರೆದು, ಎಂಟರ್ ಒತ್ತಿ. |
6:15 | ಫೈಯರ್ ಫಾಕ್ಸ್ ನೇರವಾಗಿ ವೆಬ್ಸೈಟ್ ಗೆ ಸಂಪರ್ಕ ಸಾಧಿಸುತ್ತದೆ ಅಥವಾ ಲಾಗಿನ್ ಮತ್ತು ಪಾಸ್ವರ್ಡ್ ಅನ್ನು ಕೇಳುತ್ತದೆ. |
6:22 | ಈಗ ನಾವು ಯುಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಬರೆದು ಎಂಟರ್ ಒತ್ತುವ. |
6:36 | ಈಗ ನಾವು ಜಿ ಮೇಲ್ ವೆಬ್ ಓಪನ್ ಆಗಿರುವುದನ್ನು ನೋಡಬಹುದು. ಈಗ ಇದನ್ನು ಕ್ಲೋಸ್ ಮಾಡಿ ಮುಂದಕ್ಕೆ ಹೋಗುವ. |
6:45 | ಈಗ ಆಫೀಸ್ ಮೆನು ಗೆ ಹೋಗುವ. ಅಂದರೆ : ಅಪ್ಲಿಕೇಶನ್-->ಆಫೀಸ್. |
6:53 | ಅಲ್ಲದೆ ಆಫೀಸ್ ಮೆನುವಿನಲ್ಲಿ ಓಪನ್ ಆಫೀಸ್ ವರ್ಡ್ ಪ್ರೊಸೆಸ್ಸರ್, ಸ್ಪ್ರೆಡ್ ಶೀಟ್ ಮತ್ತು ಪ್ರೆಸನ್ ಟೇಶನ್ ಇದೆ. |
7:03 | ಇಂಟರ್ನೆಟ್ ಅಲ್ಲಿ ಈ ವಿಷಯದ ಕುರಿತು ತುಂಬಾ ಮಾಹಿತಿಗಳು ಇವೆ. |
7:07 | ಭವಿಷ್ಯದಲ್ಲಿ ನಮ್ಮ ವೆಬ್ ಸೈಟ್ ನಿಂದ ಈ ವಿಷಯದ ಕುರಿತು ಸ್ಪೋಕನ್ ಟ್ಯುಟೋರಿಯಲ್ ಅನ್ನು ಪಡೆಯಬಹುದು. |
7:12 | ನಂತರ ಸೌಂಡ್ ಮತ್ತು ವೀಡಿಯೊ ಮೆನು ಅನ್ನು ಪರಿಶೋಧಿಸುವ. ಅದಕ್ಕೆ ಅಪ್ಲಿಕೇಶನ್-> ಸೌಂಡ್ & ವೀಡಿಯೊ ಗೆ ಹೋಗಿ. |
7:21 | ಇದರಲ್ಲಿ ನಾವು ಒಂದು ಮುಖ್ಯ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ. ಅಂದರೆ : ಮೂವಿ ಪ್ಲೇಯರ್. ಇದನ್ನು ವೀಡಿಯೊ ಮತ್ತು ಹಾಡುಗಳನ್ನು ಪ್ಲೇ ಮಾಡಲು ಉಪಯೋಗಿಸಲಾಗುತ್ತದೆ. ಮೂಲವಾಗಿ ಇದು open format ವೀಡಿಯೊ ಅನ್ನು ಮಾತ್ರ ಪ್ಲೇ ಮಾಡುತ್ತದೆ. |
7:35 | ಈಗ ಒಂದು ಸ್ಯಾಂಪಲ್ ಫೈಲ್ ಅನ್ನು ನನ್ನ ಪೆನ್ ಡ್ರೈವ್ ನಿಂದ ಪ್ಲೇ ಮಾಡುವ. ಈಗ ನಾನು ನನ್ನ ಪೆನ್ ಡ್ರೈವ್ ಅನ್ನು usb slot ಗೆ insert ಮಾಡುತ್ತಿದ್ದೇನೆ. ಪೆನ್-ಡ್ರೈವ್ ಓಪನ್ ಆಯಿತು.. |
7:48 | ಒಂದು ವೇಳೆ ಇದು ಓಪನ್ ಆಗದಿದ್ದಲ್ಲಿ, ಇದನ್ನು ಡೆಸ್ಕ್ಟಾಪ್ ಮೂಲಕ ಓಪನ್ ಮಾಡಬಹುದು. |
7:53 | ಎಡ ಬದಿಯ ಮೂಲೆಯಲ್ಲಿರುವ ಕೆಲವು ಐಕಾನ್ ಗಳನ್ನು ಒತ್ತುವ. ಇದನ್ನು ಒತ್ತಿದರೆ ಇದು ಡೆಸ್ಕ್ಟಾಪ್ ಅನ್ನು ಮಾತ್ರ ತೋರಿಸುತ್ತದೆ. ಇನ್ನೊಮ್ಮೆ ಇದನ್ನು ಒತ್ತಿದರೆ ಓಪನ್ ಮಾಡಿರುವ ಫೈಲ್ ನ ಜೊತೆಯಲ್ಲಿ ಡೆಸ್ಕ್ಟಾಪ್ ಅನ್ನು ತೋರಿಸುತ್ತದೆ. |
8:08 | ನಾವು ವಿಂಡೋಸ್ ಮತ್ತು D ಅನ್ನು ಒಟ್ಟಿಗೆ ಒತ್ತುವುದರ ಮೂಲಕ ಡೆಸ್ಕ್ಟೊಪ್ ಅನ್ನು ಓಪನ್ ಮಾಡಬಹುದು. ಹಳೆಯ ಉಬಂಟು version ನಲ್ಲಿ ಡೆಸ್ಕ್ಟಾಪ್ ಅನ್ನು ಓಪನ್ ಮಾಡಲು Clt+Alt+D ಕೀಲಿ ಸಂಯೋಜನೆಯ ಅಗತ್ಯವಿತ್ತು. ಉಪಯೋಗಿಗಳು ಖಂಡಿತವಾಗಿ version ನಿಂದ version ಗೆ ನಿಯಂತ್ರಣ ಸಾಧಿಸಲು ತಯಾರಾಗಿರಬೇಕು. ಈಗ ನಾವು ವಿಂಡೋಸ್ ಕೀಲಿ ಮತ್ತು D ಕೀಲಿಯನ್ನು ಒಟ್ಟಿಗೆ ಒತ್ತುವ. |
8:37 | ಇಲ್ಲಿ ನೀವು ಪೆನ್-ಡ್ರೈವ್ ಡೆಸ್ಕ್ಟಾಪ್ ಅಲ್ಲಿ ಇರುವುದನ್ನು ನೋಡಬಹುದು. |
8:42 | ಇದನ್ನು ಡಬಲ್ ಕ್ಲಿಕ್ ಮಾಡಿ ಓಪನ್ ಮಾಡುವ. |
8:46 |
ಈಗ ನಾನು ಮೂವಿ ಫೈಲ್ ಅನ್ನು ಪ್ಲೇ ಮಾಡಲು ಆಯ್ಕೆ ಮಾಡುತ್ತೇನೆ. ಅಂದರೆ : Ubuntu Humanity.ogv . |
8:57 | ಇಲ್ಲಿ ನನ್ನ ಫೈಲ್ ಇದೆ. ಡಬಲ್ ಕ್ಲಿಕ್ ಮಾಡಿ ಇದನ್ನು ಓಪನ್ ಮಾಡಿ. |
9:09 |
ಇದು ಮೂವಿ ಪ್ಲೇಯರ್ ನಲ್ಲಿ ಡಿಫಾಲ್ಟ್ ಆಗಿ ಓಪನ್ ಆಗುತ್ತದೆ. ಇದನ್ನು ಕ್ಲೋಸ್ ಮಾಡುವ. |
9:13 | ಈಗ ನಾವು ಈ ಡೆಸ್ಕ್ಟಾಪ್ ನಲ್ಲಿರುವ ಕೆಲವು ಮುಖ್ಯವಾದ ಅಂಶಗಳನ್ನು ನೋಡೋಣ. |
9:18 | ಈಗ ನಾವು ಪ್ಲೇಸ್ ಮೆನುವಿಗೆ ಹೋಗೋಣ, ಇದರಲ್ಲಿ ಹೋಂ ಫೋಲ್ಡರ್ ಇದೆ. |
9:27 | ಈಗ ಅದನ್ನು ಓಪನ್ ಮಾಡಲು ಹೋಂ ಫೋಲ್ಡರ್ ಅನ್ನು ಕ್ಲಿಕ್ ಮಾಡಿ. |
9:29 | ಪ್ರತಿಯೊಬ್ಬ ಯುಸರ್ ಕೂಡ ಉಬಂಟು ಸಿಸ್ಟಮ್ ನಲ್ಲಿ ತನ್ನದೇ ಆದಂತಹ ಹೋಂ ಫೋಲ್ಡರ್ ಅನ್ನು ಹೊಂದಿರುತ್ತಾರೆ. |
9:34 | ಹೋಂ ಫೋಲ್ಡರ್ ಅನ್ನು "ನಮ್ಮ ಮನೆ" ಎಂದು ಹೇಳಬಹುದು. ಇಲ್ಲಿ ನಾವು ನಮ್ಮ ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ಸ್ಟೋರ್ ಮಾಡಬಹುದು. |
9:42 | ನಮ್ಮ ಒಪ್ಪಿಗೆ ಇಲ್ಲದೆ ಇತರರು ಅದನ್ನು ನೋಡಲು ಸಾಧ್ಯವಿಲ್ಲ. http://spoken-tutorial.org ಅಲ್ಲಿರುವ ಲೀನೆಕ್ಸ್ ಸ್ಪೋಕನ್ ಟ್ಯುಟೋರಿಯಲ್ ಅಲ್ಲಿ ಫೈಲ್ permission ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. |
9:56 | ನಮ್ಮ ಹೋಂ ಫೋಲ್ಡರ್ ನಲ್ಲಿ, ನಾವು ಬೇರೆ ಫೋಲ್ಡರ್ ಗಳನ್ನು ಸಹ ನೋಡಬಹುದು. ಅವುಗಳೆಂದರೆ ಡೆಸ್ಕ್ಟೊಪ್ , ಡಾಕ್ಯುಮೆಂಟ್ಸ್ , ಡೌನ್ ಲೋಡ್ಸ್ , ವೀಡಿಯೊಸ್ ಇತ್ಯಾದಿಗಳು. |
10:08 | ಲೀನೆಕ್ಸ್ ನಲ್ಲಿ ಎಲ್ಲವೂ ಕೂಡ ಒಂದು ಫೈಲ್ ಆಗಿರುತ್ತದೆ. ಡೆಸ್ಕ್ಟಾಪ್ ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡುವುದರ ಮೂಲಕ ಓಪನ್ ಮಾಡೋಣ. |
10:16 | ಇಲ್ಲಿ ನಾವೀಗ ಈ ಮೊದಲು ಟೆಕ್ಸ್ಟ್ಎಡಿಟರ್ ನಿಂದ ಸೇವ್ ಮಾಡಿದ್ದ "hello.txt" ಫೈಲ್ ಅನ್ನು ಕಾಣಬಹುದು. |
10:25 | ಈ ಫೋಲ್ಡರ್ ಮತ್ತು ಡೆಸ್ಕ್ಟಾಪ್ ಫೋಲ್ಡರ್ ಒಂದೇ ಆಗಿದ್ದು, ಈಗ ಈ ಫೋಲ್ಡರ್ ಅನ್ನು ಕ್ಲೋಸ್ ಮಾಡೋಣ. |
10:31 | ನಿಮಗೆ ಒಂದೇ ರೀತಿಯ ಡೆಸ್ಕ್ಟಾಪ್ ಥೀಮ್ ನೋಡಿ ಬೋರ್ ಆಗಲಿಲ್ಲವೇ ? ಈಗ ಇದನ್ನು ಬದಲಾಯಿಸುವ. |
10:37 | ಅದಕ್ಕಾಗಿ ಸಿಸ್ಟಮ್ --> ಫ್ರಿಫಾರೆನ್ಸ್-->ಅಪಿಯರೆನ್ಸ್ ಗೆ ಹೋಗಿ ಕ್ಲಿಕ್ ಮಾಡಿ. |
10:44 | ಥೀಮ್ ಟ್ಯಾಬ್ ನಲ್ಲಿ ತುಂಬಾ ಈ ಮೊದಲೇ ಸ್ಥಾಪಿಸಿರುವಂತಹ ಥೀಮ್ಸ್ ಗಳಿವೆ. ಅದರಲ್ಲಿ "Clearlooks" ಅನ್ನು ಸೆಲೆಕ್ಟ್ ಮಾಡಿ". |
10:52 | ನೀವು ಅದನ್ನು ಕ್ಲಿಕ್ ಮಾಡಿದಾಗ ನೀವು ನಿಮ್ಮ ಡೆಸ್ಕ್ಟಾಪ್ ನಲ್ಲಿ ಆದ ಬದಲಾವಣೆಯನ್ನು ಗಮನಿಸಬಹುದು. |
10:58 | ಡೆಸ್ಕ್ಟಾಪ್ ನ ಕೆಳಗಡೆ ಎಡ ಬದಿಯಲ್ಲಿ ಇರುವ ಐಕಾನ್ ನನ್ನು ಕ್ಲಿಕ್ ಮಾಡುವುದರ ಮೂಲಕ ನೀವು ಇದನ್ನು ಸರಿಯಾಗಿ ಕಾಣಬಹುದು. ಈ ಐಕಾನ್ ನನ್ನು ಕ್ಲಿಕ್ ಮಾಡುವುದರ ಮೂಲಕ ಹಿಂದಕ್ಕೆ ಹೋಗೋಣ. |
11:10 | ಈ ರೀತಿ ನೀವು ನಿಮಗೆ ಇಷ್ಟ ಬಂದ ಥೀಮ್ ಅನ್ನು ಬದಲಾವಣೆ ಮಾಡುತ್ತ ಇರಬಹುದು. ಹೊರ ಹೋಗಲು ಕ್ಲೋಸ್ ಬಟನ್ ಕ್ಲಿಕ್ ಮಾಡಿ. |
11:18 | ಈ ಮೂಲಕ ನಾವೀಗ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ತಲುಪ್ಪಿದ್ದೇವೆ. |
11:21 | ಈ ಟ್ಯುಟೋರಿಯಲ್ ನಲ್ಲಿ ಉಬಂಟು ಸ್ಕ್ರೀನ್ ನಲ್ಲಿ ಕಾಣುವ ಉಬಂಟು ಡೆಸ್ಕ್ಟಾಪ್, ಮುಖ್ಯ ಮೆನು ಮತ್ತು ಇತರ ಐಕಾನ್ ಗಳ ಬಗ್ಗೆ ಕಲಿತೆವು. |
11:31 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟಾಕ್ ಟು ಎ ಟೀಚರ್ ನ ಒಂದು ವಿಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ ಯಿಂದ ಸ್ಪೂರ್ತಿಗೊಂಡಿದೆ. |
11:41 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು http://spoken-tutorial.org/NMEICT-Intro ಈ ಸೈಟ್ ನಲ್ಲಿ ಲಭ್ಯವಿದೆ. |
11:47 | ಈ ಸ್ಕ್ರಿಪ್ಟ್ ಮಹಾಲಕ್ಷ್ಮಿ ಯ ಕೊಡುಗೆಯಾಗಿದ್ದು , ಇದಕ್ಕಾಗಿ ಕಂಠದಾನ ಮಾಡಿದವರು -------
ಧನ್ಯವಾದಗಳು, ಶುಭವಿದಾಯ. |