LibreOffice-Suite-Calc/C2/Formatting-Data/Kannada
From Script | Spoken-Tutorial
Time | NARRATION |
00:00 | ಲಿಬ್ರೆ ಆಫೀಸ್ ಕ್ಯಾಲ್ಕ್ ನ ಫಾರ್ಮ್ಯಾಟಿಂಗ್ ಡಾಟಾದ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದೇನೆಂದರೆ: ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದು, ಹಿಂಬದಿಯ ಬಣ್ಣ, ಇತ್ಯಾದಿಗಳು. |
00:12 | ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಟೆಕ್ಸ್ಟ್ ನ ಹೆಚ್ಚಿನ ಸಾಲನ್ನು ಒಂದೇ ಬಾರಿಗೆ ಫಾರ್ಮೆಟ್ ಮಾಡುವುದು. |
00:18 | ಸೆಲ್ ಗಳನ್ನು ಒಂದುಗೂಡಿಸುವುದು, ಹಾಗೂ ಸೆಲ್ ನ ಒಳಗೆ ಫಿಟ್ ಆಗುವಂತೆ ಟೆಕ್ಸ್ಟ್ ನ್ನು ಒತ್ತೊತ್ತಾಗಿ ಇಡುವುದು. |
00:22 | ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ನ್ನು ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4. |
00:33 | ಈಗ ನಾವು ಮೊದಲು ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ, ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದರ ಬಗ್ಗೆ ಕಲಿಯೋಣ. |
00:39 | ನಮ್ಮ “personal finance tracker.ods” ಫೈಲ್ ಅನ್ನು ಓಪನ್ ಮಾಡೋಣ. |
00:45 | ಬಾರ್ಡರ್ ಗಳನ್ನು ಒಂದು ಗೊತ್ತಾದ ಸೆಲ್ ನಲ್ಲಿ ಅಥವಾ ಒಂದು ಸೆಲ್ ಗಳ ಗುಂಪಿನಲ್ಲಿ ಫಾರ್ಮೆಟ್ ಮಾಡಬಹುದು. |
00:50 | ಉದಾಹರಣೆಗೆ, “Serial Number”, “Item”, “Cost”, “Spent”, ”Received”, ”Date” ಮತ್ತು ”Account” ಎಂಬ ಹೆಡ್ಡಿಂಗ್ ಗಳಿರುವ ಸೆಲ್ ಗಳನ್ನು ಫಾರ್ಮ್ಯಾಟ್ ಮಾಡೋಣ. |
01:01 | ಅದ್ದರಿಂದ ಮೊದಲು ಸೀರಿಯಲ್ ನಂಬರ್, “SN” ಎಂದು ಹೆಡ್ಡಿಂಗ್ ಇರುವ ಸೆಲ್ ಕ್ಲಿಕ್ ಮಾಡಿ. |
01:08 | ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು, ಅದನ್ನು ಹೆಡ್ಡಿಂಗ್ ಹೊಂದಿರುವ ಸೆಲ್ಸ್ ನ ಮೇಲೆ ಡ್ರ್ಯಾಗ್ ಮಾಡಿ. |
01:14 | ಹೆಡ್ಡಿಂಗ್ಸ್ ಅನ್ನು ಹೊಂದಿರುವ ಇಡೀ ಅಡ್ಡ ಸಾಲನ್ನು ಸೆಲೆಕ್ಟ್ ಮಾಡಿದ ನಂತರ, ಫಾರ್ಮ್ಯಾಟಿಂಗ್ ಟೂಲ್ಬಾರ್ನಲ್ಲಿ " Borders " ಐಕಾನ್ ಮೇಲೆ ಕ್ಲಿಕ್ ಮಾಡಿ. |
01:23 | ಹಲವಾರು ಬೋರ್ಡರ್ ಶೈಲಿಗಳನ್ನು ಹೊಂದಿರುವ ಡ್ರಾಪ್ ಡೌನ್ ಪಟ್ಟಿ ಓಪನ್ ಆಗುತ್ತದೆ. |
01:28 | ಅದರಲ್ಲಿ ನೀವು ಬಾರ್ಡರ್ ಮೇಲೆ ಬಳಸಲು ಬಯಸುವ ಒಂದು ಸ್ಟೈಲ್ ನ್ನು ಕ್ಲಿಕ್ ಮಾಡಿ. |
01:33 | ನಾನು ಕೊನೆಯ ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ. |
01:34 | ನಾವು ಸೆಲೆಕ್ಟ್ ಮಾಡಿದ ಸ್ಟೈಲ್ ನ ಪ್ರಕಾರ ಬಾರ್ಡರ್ ಗಳು ಫಾರ್ಮೆಟ್ ಆಗಿರುವುದನ್ನು ನೋಡಬಹುದು. |
01:39 | ಈಗ ಈ ಬದಲಾವಣೆಯನ್ನು ಅಂಡು ಮಾಡೋಣ. |
01:45 | ಸೆಲೆಕ್ಟ್ ಮಾಡಿದ ಸೆಲ್ಸ್ ಗಳು ಇನ್ನೂ ಹೈಲೈಟ್ ಆಗಿವೆ. ಸೆಲೆಕ್ಟ್ ಮಾಡಿದ ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Format Cells” ಆಯ್ಕೆ ಮಾಡಿ. |
01:54 | ಈಗ ಬೋರ್ಡರ್ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
01:56 | ಇಲ್ಲಿ ನೀವು “Line arrangement”, “Line”, “Spacing to contents” ಮತ್ತು “Shadowstyle”.ಆಯ್ಕೆಗಳನ್ನು ನೋಡಬಹುದು. |
02:05 | ಹೀಗೆ ಪ್ರತಿಯೊಂದರಲ್ಲೂ ಡಿಸ್ಪ್ಲೇ ಆಗಿರುವ ಇವುಗಳು ಕ್ಯಾಲ್ಕ್ ನ ಡೀಫಾಲ್ಟ್ ಸೆಟಿಂಗ್ ಆಗಿದೆ. |
02:10 | ಆದರೆ ಅದನ್ನು ನಮ್ಮ ಅವಶ್ಯಕತೆ ಗೆ ತಕ್ಕಂತೆ ಬದಲಾಯಿಸಬಹುದು. |
02:14 | “User-defined” ನ ಕೆಳಗೆ ನಿಮಗೆ ಒಂದು ಸಣ್ಣ ಪ್ರಿವೀವ್ ವಿಂಡೋ ಕಾಣಿಸುತ್ತದೆ, ಅದು ನಾವು ಸೆಲೆಕ್ಟ್ ಮಾಡಿರುವುದನ್ನು ಡಿಸ್ಪ್ಲೇ ಮಾಡುತ್ತದೆ. |
02:22 | ನಾನು "ಡೀಫಾಲ್ಟ್" ಅಡಿಯಲ್ಲಿ ಮೂರನೇ ಆಯ್ಕೆಯನ್ನು ಆಯ್ಕೆ ಮಾಡುತ್ತೇನೆ ಮತ್ತು ನೀವು ಅದು ಪ್ರಿವಿವ್ ವಿಂಡೋವಲ್ಲಿ ರಿಫ್ಲೆಕ್ಟ್ ಆಗುವುದನ್ನು ನೋಡಬಹುದು. |
02:29 | ನಾನು “Style”, “Width” ಮತ್ತು “Color” ಕೂಡ ಬದಲಾಯಿಸುತ್ತೇನೆ. |
02:33 | ಪುನಃ ಪ್ರಿವಿವ್ ವಿಂಡೋವಲ್ಲಿ ಬದಲಾವಣೆ ಗಮನಿಸಿ. |
02:38 | Spacing ಕಂಟೆಂಟ್ ಗಳ ಸ್ಪೇಸಿಂಗ್ “Synchronize” ಆಯ್ಕೆ ಚೆಕ್ ಆಗಿದೆ. |
02:42 | ಇದರ ಅರ್ಥ ಒಂದೇ ತರಹದ ಸ್ಪೇಸಿಂಗ್ ಅನ್ನು ಎಲ್ಲಾ ಮಾರ್ಜಿನ್ಸ್ ಗೆ ಹಾಕಲಾಗಿದೆ. |
02:47 | ಅದನ್ನು ಅನ್ ಚೆಕ್ ಮಾಡಬಹುದು ಮತ್ತು ಅವಶ್ಯಕತೆ ಇದ್ದರೆ ಮಾರ್ಜಿನ್ ಸ್ಪೇಸಿಂಗ್ ಅನ್ನು ಬದಲಾಯಿಸಬಹುದು . |
02:53 | ನಾನು “Top” ಮತ್ತು “Bottom” ಮಾರ್ಜಿನ್ ಅನ್ನು 1.4pt ಗೆ ಬದಲಾಯಿಸುತ್ತೇನೆ. |
03:00 | ನಾನು ನಿಮಗೆ, ನಿಮ್ಮದೇ ಆದಂತಹ ವಿವಿಧ ಶ್ಯಾಡೊ ಶೈಲಿಗಳನ್ನು ಅನ್ವೇಷಣೆ ಮಾಡಲು ಬಿಡುತ್ತೇನೆ. |
03:04 | ಓಕೆ ಕ್ಲಿಕ್ ಮಾಡಿ. |
03:06 | ಈಗ ಆಯ್ಕೆಮಾಡಿದ ಶೈಲಿ ಸೆಲ್ಸ್ ಗೆ ಅನ್ವಯವಾಗುತ್ತವೆ. |
03:11 | ಬಾರ್ಡರ್ ಗಳನ್ನು ಅನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂಬುದರ ಬಗ್ಗೆ ಕಲಿತ ನಂತರ, ಈಗ ಸೆಲ್ಸ್ ಗೆ ಹಿನ್ನೆಲೆ ಬಣ್ಣಗಳನ್ನು ಹೇಗೆ ನೀಡುವುದು ಎಂದು ಕಲಿಯೋಣ. |
03:18 | ಸೆಲ್ಸ್ ಗೆ ಹಿನ್ನೆಲೆ ಬಣ್ಣ ನೀಡುವುದರ ಸಲುವಾಗಿ, ಕ್ಯಾಲ್ಕ್ ಫಾರ್ಮ್ಯಾಟಿಂಗ್ ಟೂಲ್ಬಾರ್ ನಲ್ಲಿ “Background Color”, ಎಂಬ ಆಯ್ಕೆ ಇದೆ. |
03:27 | ಈಗ ಅದನ್ನು ಹೇಗೆ ಅಳವಡಿಸಲಾಗಿದೆ ಎಂದು ನೋಡೋಣ. |
03:30 | ಉದಾಹರಣೆಗೆ, ಹೆಡಿಂಗ್ ನ್ನು ಹೊಂದಿರುವ ಸೆಲ್ ಗಳಿಗೆ ಹಿನ್ನೆಲೆ ಬಣ್ಣವನ್ನು ನೀಡೋಣ. |
03:36 | ಅದ್ದರಿಂದ ಮೊದಲು ಸೀರಿಯಲ್ ನಂಬರ್ ಎಂದು ಹೆಡ್ಡಿಂಗ್ ಹೊಂದಿರುವ ಸೆಲ್ ಅನ್ನು ಕ್ಲಿಕ್ ಮಾಡಿ, ಅದನ್ನು "SN" ಮೂಲಕ ಸೂಚಿಸಲಾಗಿದೆ. |
03:44 | ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು ಹೆಡ್ಡಿಂಗ್ ಗಳನ್ನು ಹೊಂದಿರುವ ಸೆಲ್ಸ್ ಗಳ ಜೊತೆಗೆ ಅದನ್ನು ಡ್ರ್ಯಾಗ್ ಮಾಡಿ. |
03:50 | ಹೆಡ್ಡಿಂಗ್ಸ್ ಗಳನ್ನು ಹೊಂದಿರುವ ಇಡೀ ಅಡ್ಡ ಸಾಲು ಸೆಲೆಕ್ಟ್ ಮಾಡಿದ ನಂತರ, ಫಾರ್ಮ್ಯಾಟಿಂಗ್ ಟೂಲ್ಬಾರ್ನಲ್ಲಿ ರಲ್ಲಿ “Background Color” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
04:00 | ಒಂದು ಪೋಪ್ ಅಪ್ ಮೆನು ಓಪನ್ ಆಗುತ್ತದೆ, ಇಲ್ಲಿ ನೀವು ಒಂದು ಹಾಕಲು ಬಯಸುವ ಹಿನ್ನೆಲೆ ಬಣ್ಣವನ್ನು ಆಯ್ಕೆ ಮಾಡಬಹುದು. |
04:08 | " Grey " ಕಲರ್ ನ ಮೇಲೆ ಕ್ಲಿಕ್ ಮಾಡಿ. |
04:11 | ನೀವು ನೋಡಬಹುದು ಸೆಲ್ ನ ಹಿನ್ನೆಲೆ ಬೂದು ಬಣ್ಣಕ್ಕೆ ಬದಲಾಗಿದೆ. |
04:17 | ಟೆಕ್ಸ್ಟ್ ನ ಅನೇಕ ಸಾಲುಗಳನ್ನು ಫಾರ್ಮೆಟ್ ಮಾಡಲು ಕ್ಯಾಲ್ಕ್ ವಿವಿಧ ಆಯ್ಕೆಗಳನ್ನು ಒದಗಿಸುತ್ತದೆ. |
04:22 | ಮೊದಲನೆಯದನ್ನು “Automatic Wrapping” ಬಳಸುವುದರಿಂದ ಮಾಡಬಹುದು. |
04:26 | “Automatic Wrapping” ಒಂದು ಯುಸೆರ್ ಗೆ ಸಿಂಗಲ್ ಸೆಲ್ ನಲ್ಲಿ ಮಲ್ಟಿಪಲ್ ಟೆಕ್ಸ್ಟ್ ಸಾಲುಗಳನ್ನು ಒಳಬಿಡಲು ಅನುಮತಿಸುತ್ತದೆ. |
04:33 | ಈಗ ಇದನ್ನು ಹೇಗೆ ಕಾರ್ಯಗತಗೊಳಿಸಲಾಗಿದೆ ಎಂದು ನೋಡೋಣ. |
04:37 | ಈಗ ನಮ್ಮ “personal finance tracker.ods” ಶೀಟ್ ನಲ್ಲಿ, ಒಂದು ಖಾಲಿ ಸೆಲ್ ಕ್ಲಿಕ್ ಮಾಡೋಣ. |
04:44 | ಉದಾಹರಣೆಗೆ, ಸೆಲ್ ನಂಬರ್ " B12" ಮೇಲೆ ಕ್ಲಿಕ್ ಮಾಡೋಣ. |
04:49 | ಈಗ ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ. ನಂತರ ಫಾರ್ಮಾಟ್ ಸೆಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
04:54 | ಈಗ ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
04:58 | ಡೈಲಾಗ್ ಬಾಕ್ಸ್ ಕೆಳಗೆ “Wrap text automatically” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “OK” ಬಟನ್ ಅನ್ನು ಕ್ಲಿಕ್ ಮಾಡಿ. |
05:08 | ಈಗ ನಾವು “THIS IS A PERSONAL FINANCE TRACKER. IT IS VERY USEFUL” ಎಂದು ಟೈಪ್ ಮಾಡೋಣ. |
05:11 | ಅನೇಕ ಹೇಳಿಕೆಗಳನ್ನು ಒಂದೇ ಸೆಲ್ ನಲ್ಲಿ ವ್ರಾಪ್ ಆಗಿರುವುದನ್ನು ನೀವು ನೋಡಬಹುದು. |
05:19 | ಬದಲಾವಣೆಗಳನ್ನು ಅಂಡು ಮಾಡೋಣ. |
05:21 | "“Automatic Wrapping” ತಿಳಿದ ನಂತರ, ನಾವು ಈಗ ಕ್ಯಾಲ್ಕ್ ನಲ್ಲಿ ಸೆಲ್ಸ್ ಗಳನ್ನು ಹೇಗೆ ಒಂದುಗೂಡಿಸುವುದು ಅಥವಾ ಮರ್ಜ್ ಮಾಡುವುದು ಎಂದು ತಿಳಿಯೋಣ. |
05:29 | ನಮ್ಮ “personal finance tracker.ods” ಫೈಲ್ ನಲ್ಲಿ, ನೀವು ಸೀರಿಯಲ್ ನಂಬರ್, “SN” ಹೆಡ್ಡಿಂಗ್ ಹೊಂದಿರುವ ಸೆಲ್ಸ್ ಮತ್ತು ಅದರ ಸರಿ ಹೊಂದುವ ಐಟಂಗಳನ್ನು ಮರ್ಜ್ ಮಾಡಲು, ಮೊದಲು “SN” ಹೆಡ್ಡಿಂಗ್ ಕೆಳಗೆ ಇರುವ ಡಾಟಾ ಎಂಟ್ರಿ '1'ಕ್ಲಿಕ್ ಮಾಡಿ. |
05:46 | ಈಗ ಕೀ ಬೋರ್ಡ್ ನಲ್ಲಿ “Shift” ಕೀ ಹಿಡಿದಿಟ್ಟುಕೊಳ್ಳಿ ಮತ್ತು “Salary” ಗೆ ಸಂಬಂಧಿಸಿದ ಸೆಲ್ ನ ಮೇಲೆ ಕ್ಲಿಕ್ ಮಾಡಿ. |
05:55 | ಈಗ ಮರ್ಜ್ ಆಗಬೇಕಿರುವ ಎರಡು ಸೆಲ್ ಗಳು ಹೈಲೈಟ್ ಆಗುತ್ತವೆ. |
05:59 | ನಂತರ ಮೆನು ಬಾರ್ನಲ್ಲಿ " Format " ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು " Merge Cells " ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:07 | ಸೈಡ್ ಬಾರ್ ನ ಪೋಪ್ ಅಪ್ ಗಳಲ್ಲಿ, “Merge Cells” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:12 | ಎರಡು ಸೆಲ್ ಗಳ ಕಂಟೆಂಟ್ ಗಳನ್ನು ಒಂದೇ ಸೆಲ್ ಗೆ ಮೂವ್ ಮಾಡಲು, ಕಾಣಿಸಿಕೊಳ್ಳುವ ಡೈಲಾಗ್ ಬಾಕ್ಸ್ ನಲ್ಲಿ “Yes” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:21 | ಆಯ್ಕೆಮಾಡಿದ ಸೆಲ್ಸ್ ಗಳು ಒಂದೇ ಸೆಲ್ ನಲ್ಲಿ ಮರ್ಜ್ ಆಗಿರುದನ್ನು ಮತ್ತು ಕಂಟೆಂಟ್ಸ್ ಕೂಡ ಅದೇ ಸೆಲ್ ನ ಒಳಗೆ ಮರ್ಜ್ ಆಗಿರುದನ್ನು ಈಗ ನೀವು ನೋಡಬಹುದು. |
06:31 | ಈಗ ಟೂಲ್ಬಾರ್ ನಲ್ಲಿ “undo” ಆಯ್ಕೆಯ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಥವಾ "CTRL + Z" ಪ್ರೆಸ್ ಮಾಡುವುದರ ಮೂಲಕ ಮರ್ಜ್ ಅನ್ನು ಅಂಡು ಮಾಡಬಹುದು. |
06:37 | ಮುಂದೆ ನಾವು, ಸೆಲ್ ನ ಒಳಗೆ ಸರಿಯಾಗಿ ಹೊಂದಿಕೊಳ್ಳುವಂತೆ ಟೆಕ್ಸ್ಟ್ ನ್ನು ಒತ್ತೊತ್ತಾಗಿ ಇರಿಸುವುದು ಹೇಗೆ ಎಂದು ಕಲಿಯೋಣ. |
06:41 | ಒಂದು ಸೆಲ್ ನಲ್ಲಿನ ಡಾಟಾದ ಫಾಂಟ್ ಗಾತ್ರವು ಸ್ವಯಂಚಾಲಿತವಾಗಿ ಸೆಲ್ ನ ಗಾತ್ರಕ್ಕೆ ಅನುಗುಣವಾಗಿ ಹೊಂದಿಕೊಂಡಿರುತ್ತದೆ. |
06:49 | ಇದನ್ನು ಹೇಗೆ ಮಾಡುವುದೆಂದು ಕಲಿಯೋಣ. |
06:50 | B14 ಸೆಲ್ ನಲ್ಲಿ “This is for the month of January” ಎಂದು ಟೈಪ್ ಮಾಡಿ. |
07:00 | ಟೆಕ್ಸ್ಟ್ ಸೆಲ್ ನ ಒಳಗೆ ಫಿಟ್ ಆಗದೇ ಇರುವುದನ್ನು ನೀವು ನೋಡಬಹುದು. |
07:03 | ಟೆಕ್ಸ್ಟ್ ಸೆಲ್ ನ ಒಳಗೆ ಫಿಟ್ ಆಗಲು ಅದನ್ನು ಶ್ರಿಂಕ್ ಮಾಡುವ ಸಲುವಾಗಿ, ಮೊದಲು B14 ಸೆಲ್ ಮೇಲೆ ಕ್ಲಿಕ್ ಮಾಡಿ. |
07:11 | ಈಗ ಮೆನು ಬಾರ್ನಲ್ಲಿ “Format” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Cells” ಮೇಲೆ ಕ್ಲಿಕ್ ಮಾಡಿ. |
07:18 | ಪರ್ಯಾಯವಾಗಿ, ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Format Cells” ಮೇಲೆ ಕ್ಲಿಕ್ ಮಾಡಿ. |
07:24 | “Format Cells” ಡೈಲಾಗ್ ಬಾಕ್ಸ್ ತೆರೆಯಲ್ಪಡುವುದನ್ನು ನೀವು ನೋಡಬಹುದು. |
07:28 | ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
07:31 | ಡೈಲಾಗ್ ಬಾಕ್ಸ್ ನ ಕೆಳಗೆ “Shrink to fit cell size” ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ನಂತರ " OK " ಬಟನ್ ಅನ್ನು ಕ್ಲಿಕ್ ಮಾಡಿ. |
07:41 | ನೀವು ನೋಡಬಹುದು ಎಲ್ಲಾ ಟೆಕ್ಸ್ಟ್ ಗಳೂ ಫಾಂಟ್ ಸೈಜ್ ಕಡಿಮೆ ಮಾಡಿಕೊಂಡು ತನ್ನಷ್ಟಕ್ಕೆ ಶ್ರಿಂಕ್ ಆಗುತ್ತದೆ ಹೀಗೆ ಟೆಕ್ಸ್ಟ್ B14 ಸೆಲ್ ನ ಒಳಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. |
07:54 | ಬದಲಾವಣೆಗಳನ್ನು ಅಂಡು ಮಾಡುವ |
07:57 | ಇದು ನಮ್ಮನ್ನು ನ ಲಿಬ್ರೆ ಆಫೀಸ್ ಕ್ಯಾಲ್ಕ್ ಸ್ಪೋಕನ್ ಟ್ಯುಟೋರಿಯಲ್ ನ ಮುಕ್ತಾಯಕ್ಕೆ ತರುತ್ತದೆ. |
08:02 | ನಾವು ಕಲಿತ, ಸಾರಾಂಶ: ಕ್ಯಾಲ್ಕ್ ನಲ್ಲಿ ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದು, ಬ್ಯಾಗ್ರೌಂಡ್ ವ್ರಾಪಿಂಗ್. |
08:09 | ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಮಲ್ಟಿಪಲ್ ಲೈನ್ ಟೆಕ್ಸ್ಟ್ ಅನ್ನು ಫಾರ್ಮ್ಯಾಟಿಂಗ್ ಮಾಡುವುದು. |
08:14 | ಸೆಲ್ಸ್ ಅನ್ನು ಮರ್ಜ್ ಮಾಡುವುದು. ಸೆಲ್ ನ ಒಳಗೆ ಟೆಕ್ಸ್ಟ್ ಫಿಟ್ ಆಗಲು ಶ್ರಿಂಕ್ ಮಾಡುವುದು. |
08:19 | ಸಮಗ್ರ ಅಭ್ಯಾಸಗಳು |
08:21 | “spreadsheet practice.ods” ಶೀಟ್ ಓಪನ್ ಮಾಡಿ. |
08:25 | ಎಲ್ಲಾ ಹೆಡ್ಡಿಂಗ್ಸ್ ಗಳನ್ನೂ ಸೆಲೆಕ್ಟ್ ಮಾಡಿ. |
08:27 | ಹೆಡ್ಡಿಂಗ್ ನ ಹಿನ್ನೆಲೆಗೆ ನೀಲಿ ಬಣ್ಣವನ್ನು ಕೊಡಿ. |
08:31 | “Automatic Wrapping” ಬಳಸಿಕೊಂಡು “This is a Department Spreadsheet” ಎಂದು ಟೆಕ್ಸ್ಟ್ ಟೈಪ್ ಮಾಡಿ. |
08:37 | ಸೆಲ್ ಗೆ ಸರಿಹೊಂದುವಂತೆ ಟೆಕ್ಸ್ಟ್ ಶ್ರಿಂಕ್ ಮಾಡಿ. |
08:40 | ಈ ಲಿಂಕ್ ನಲ್ಲಿ ಸಿಗುವ ವೀಡಿಯೋನ್ನು ನೋಡಿ. |
08:43 | ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಕೊಡುತ್ತದೆ. |
08:46 | ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್ ಲೋಡ್ ಮಾಡಿ ವೀಕ್ಸಿಸಿ. |
08:51 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್ ಶಾಪ್ ನಡೆಸುತ್ತದೆ. |
08:56 | ಆನ್ ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ವದಗಿಸುತ್ತದೆ. |
09:00 | ಹೆಚ್ಚಿನ ಮಾಹಿತಿಗಾಗಿ ಇದಕ್ಕೆ ಬರೆಯಿರಿ : contact@spoken-tutorial.org |
09:06 | ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
09:11 | ಇದು ಭಾರತ ಸರ್ಕಾರದ ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, ಎಂಎಚ್ಆರ್ ಡಿ ಯಿಂದ ಸ್ಪೂರ್ತಿಗೊಂಡಿದೆ. |
09:18 | ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ: ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ org ಸ್ಲಾಶ್ NMEICT ಹೈಫನ್ ಇಂಟ್ರೋ. |
09:29 | ಈ ಟ್ಯುಟೋರಿಯಲ್ ದೇಸಿಕ್ರೂ ಸೋಲುಶನ್ ಪ್ರೈವೇಟ್ ಲಿಮಿಟೆಡ್ ನ ಕೊಡುಗೆಯಾಗಿದೆ. |
09:35 | ಸೇರಿರುವುದಕ್ಕಾಗಿ ವಂದನೆಗಳು. |