Thunderbird/C2/How-to-Use-Thunderbird/Kannada

From Script | Spoken-Tutorial
Revision as of 16:01, 20 March 2017 by PoojaMoolya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00.00 ಥಂಡರ್ ಬರ್ಡ್ ನ ಬಳಕೆಯನ್ನು ತಿಳಿಸಿಕೊಡುವ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00.05 ಈ ಟ್ಯುಟೋರಿಯಲ್ ನಲ್ಲಿ ನಾವು
00.07 ಥಂಡರ್ ಬರ್ಡ್ ನ ಶಾರ್ಟ್ ಕಟ್ ಅನ್ನು ಲಾಂಚರ್ ಗೆ ಹೇಗೆ ಸೇರಿಸುವುದೆಂದು ತಿಳಿಯಲಿದ್ದೇವೆ.
00.10 ಮೆಸೇಜ್ ಅನ್ನು ಟ್ಯಾಗ್ ಮಾಡಲು,

ಕ್ವಿಕ್ ಫಿಲ್ಟರ್, ಮೆಸೇಜ್ ನ ವರ್ಗೀಕರಣ ಮತ್ತು ಕ್ರಮದಲ್ಲಿ ಜೋಡಣೆಯನ್ನು ಕಲಿಯಲಿದ್ದೇವೆ.

00.17 ಇದರೊಂದಿಗೆ, ಸೇವ್ ಆಸ್( Save As) ಮತ್ತು ಪ್ರಿಂಟ್ ಮೆಸೇಜ್
00.21 ಫೈಲ್ ನ ಲಗತ್ತಿಸುವಿಕೆ (Attach), ಆರ್ಚಿವ್(Archive) ಮೆಸೇಜ್
00.24 ಆಕ್ಟಿವಿಟಿ ಮ್ಯಾನೇಜರ್ ಅನ್ನು ವೀಕ್ಷಿಸುವುದು ಮುಂತಾದವುಗಳನ್ನು ಕಲಿಯಲಿದ್ದೆವೆ.
00.27 ಇಲ್ಲಿ ನಾವು ಉಬಂಟು(Ubuntu) 12.04 ರಲ್ಲಿ ಮೋಜಿಲ್ಲಾ ಥಂಡರ್ ಬರ್ಡ್ (Mozilla Thunderbird) 13.0.1 ಅನ್ನು ಉಪಯೋಗಿಸುತ್ತಿದ್ದೇವೆ.
00.36 ಥಂಡರ್ ಬರ್ಡ್ ಅನ್ನು ಪುನಃ ಪುನಃ ಉಪಯೋಗಿಸುವುದರಿಂದ ಅದರ ಶಾರ್ಟ್ ಕಟ್ ಅನ್ನು ರಚಿಸಿಕೊಳ್ಳೋಣ.
00.43 ಲಾಂಚರ್ ಗೆ Thunderbird ಶಾರ್ಟ್ ಕಟ್ ಐಕಾನ್ ಅನ್ನು ಡ್ರ್ಯಾಗ್ ಮಾಡಿ ಬಿಡೋಣ.
00.49 ಮೊದಲಿಗೆ, Dash Home ಅನ್ನು ಕ್ಲಿಕ್ ಮಾಡಿ.
00.52 ಅಲ್ಲಿ ಕಾಣಿಸುವ ಸರ್ಚ್ ಫೀಲ್ಡ್ ನಲ್ಲಿ Thunderbird ಎಂದು ಟೈಪ್ ಮಾಡಿ.
00.57 Thunderbird ಐಕಾನ್ ಸರ್ಚ್ ಫೀಲ್ಡ್ ನ ಕೆಳಗೆ ಕಾಣಿಸುತ್ತದೆ.
01.01 ಅದನ್ನು ಸೆಲೆಕ್ಟ್ ಮಾಡಿ ಮತ್ತು ಮೌಸ್ ನ ಎಡ ಬಟನ್ ಅನ್ನು ಬಿಡಬೇಡಿ.
01.06 ಮೌಸ್ ನ ಎಡ ಬಟನ್ ಅನ್ನು ಬಳಸಿ ಐಕಾನ್ ಅನ್ನು ಎಳೆದು ಲಾಂಚರ್ ನಲ್ಲಿ ಬಿಡಿ.
01.09 ಈಗ ಮೌಸ್ ನ ಎಡ ಬಟನ್ ಅನ್ನು ಬಿಡಿ.
01.12 ಕ್ಲೋಸ್ ಮಾಡಲು Dash home ಅನ್ನು ಕ್ಲಿಕ್ ಮಾಡಿ.
01.14 ಲಾಂಚರ್ ನಲ್ಲಿರುವ Thunderbird ಐಕಾನ್ ಅನ್ನು ಕ್ಲಿಕ್ ಮಾಡಿ.
01.19 ಥಂಡರ್ ಬರ್ಡ್ ಓಪನ್ ಅಗುತ್ತದೆ.
01.23 STUSERONE at gmail dot com ಐ.ಡಿ ಯ , Inbox ಅನ್ನು ಕ್ಲಿಕ್ ಮಾಡಿ.
01.29 ಕೆಲವು ಮೆಸೇಜ್ ಗಳು ದಪ್ಪ ಅಕ್ಷರದಲ್ಲಿರುವುದನ್ನು ಗಮನಿಸಿ.
01.32 ಇವು ಓದದೇ ಇರುವ ಮೆಸೇಜ್ ಗಳು.
01.35 Get Mail ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು Get All New Messages ಅನ್ನು ಸೆಲೆಕ್ಟ್ ಮಾಡಿ.
01.41 ಜೀಮೇಲ್ ಅಕೌಂಟ್ ನಿಂದ ನಾವು ಮೆಸೇಜ್ ಗಳನ್ನು ಪಡೆದಿದ್ದೇವೆ.
01.45 ಈಗ ಮೆಸೇಜ್ ಗಳನ್ನು ವಿಂಗಡಿಸಲು ಇಚ್ಛಿಸೋಣ.
01.49 ಕಲಮ್ ನ ಹೆಡ್ಡಿಂಗ್ ಆದ From ಅನ್ನು ಕ್ಲಿಕ್ ಮಾಡಿ.
01.52 ವರ್ಣಮಾಲೆಯ ಕ್ರಮದಲ್ಲಿ ಮೆಸೇಜ್ ಗಳು ವರ್ಗೀತಕೃತವಾಗಿವೆ.
01.57 From ಅನ್ನು ಪುನಃ ಕ್ಲಿಕ್ ಮಾಡೋಣ.
02.01 ಈಗ ಮೆಸೇಜ್ ಗಳು ವರ್ಣಮಾಲೆಯ ವಿಪರೀತ ಕ್ರಮದಲ್ಲಿ ವರ್ಗೀಕೃತವಾಗಿವೆ!
02.06 ಈಗ ವಿಷಯಾಧಾರಿತವಾಗಿ ವರ್ಗೀಕರಿಸೋಣ.
02.09 Subject ಅನ್ನು ಕ್ಲಿಕ್ ಮಾಡಿ.
02.12 ಮೆಸೆಜ್ ಗಳು ವಿಷಯಾಧಾರಿತವಾಗಿ ವರ್ಗೀಕರಿಸಲ್ಪಟ್ಟಿವೆ!
02.16 ಟ್ಯುಟೋರಿಯಲ್ ಅನ್ನು ಸ್ವಲ್ಪ ನಿಲ್ಲಿಸಿ ಈ ವಿಷಯಗಳನ್ನು ಮತ್ತೊಮ್ಮೆ ಅಭ್ಯಾಸ ಮಾಡಿ.
02.20 ಮೆಸೇಜ್ ಗಳನ್ನು ಪಡೆದ ದಿನಾಂಕದ ಕ್ರಮದಲ್ಲೂ ವರ್ಗೀಕರಿಸಬಹುದು.
02.24 ನೀವು ಮೆಸೇಜ್ ಗಳನ್ನು ಟ್ಯಾಗ್ ಕೂಡ ಮಾಡಬಹುದು.
02.26 ಈ ರೀತಿಯಲ್ಲಿ ನೀವು ನಿಮಗೆ ಬೆಕಾದ ರೀತಿಯಲ್ಲಿ ಸುಲಭವಾಗಿ ಪುನಃ ಓಪನ್ ಮಾಡುವ ಮೆಸೇಜ್ ಗಳನ್ನು ಗುರುತಿಸಬಹುದು.
02.32 ಸಮಾನವಾದ ಮೆಸೇಜ್ ಗಳನ್ನು ಒಂದೆಡೆ ಇರಿಸಲು ಕೂಡ ಟ್ಯಾಗ್ ಅನ್ನು ಬಳಸಬಹುದು.
02.37 ಈಗ ಒಂದು ಮೇಲ್ ಅನ್ನು ಮುಖ್ಯವಾದ ಮೇಲ್ ಎಂದು ಟ್ಯಾಗ್ ಮಾಡಬೇಕೆಂದುಕೊಳ್ಳೋಣ.
02.40 Inbox ಅನ್ನು ಕ್ಲಿಕ್ ಮಾಡಿ ಮೊದಲ ಮೆಲ್ ಅನ್ನ್ನು ಆಯ್ಕೆ ಮಾಡಿರಿ.
02.44 ಟೂಲ್ ಬಾರ್ ನಿಂದ Tag ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು Important ಅನ್ನು ಆರಿಸಿ.
02.51 ಕೆಂಪು ಬಣ್ಣದಲ್ಲಿ ಕಾಣುತ್ತಿರುವ ಮೇಲ್ ಅನ್ನು ಗಮನಿಸಿ.
02.54 ಕೆಳಗಿನ (bottom) ಪ್ಯಾನಲ್ ಅನ್ನು ನೋಡಿ.
02.57 ಈ ಮೇಲ್ Important ಎಂದು ಟ್ಯಾಗ್ ಆಗಿರುತ್ತದೆ.
03.00 ಟ್ಯಾಗ್ ಅನ್ನು ತೆಗೆಯಲು ಮೊದಲು ಮೇಲ್ ಅನ್ನು ಸೆಲೆಕ್ಟ್ ಮಾಡಿ.
03.04 ಟೂಲ್ ಬಾರ್ ನಿಂದ Tag ಅನ್ನು ಕ್ಲಿಕ್ ಮಾಡಿ ನಂತರ Important ಅನ್ನು ಕ್ಲಿಕ್ ಮಾಡಿ.
03.09 ಈಗ ಇನ್ ಬಾಕ್ಸ್ ನ ಮೊದಲ ಮೆಲ್ ಅನ್ನು Important ಎಂದು ಎರಡನೆಯದನ್ನು Work ಎಂದು ಟ್ಯಾಗ್ ಮಾಡೋಣ.
03.17 ಈಗ ನಾವು ಬಲ ಪ್ಯಾನಲ್ ನಲ್ಲಿ ಟ್ಯಾಗ್ ಆಗಿರುವ ಮೇಲ್ ಗಳನ್ನು ಮಾತ್ರ ನೋಡಲು ಬಯಸುತ್ತೇವೆ.
03.22 ಈ ರೀತಿಯಲ್ಲಿ ನೋಡಲು ಸಾಧ್ಯವೇ ?
03.25 Quick Filter ಟೂಲ್ ಬಾರ್ ಅನ್ನು ಉಪಯೋಗಿಸಿ ಮೆಸೆಜ್ ಗಳನ್ನು ವೇಗವಾಗಿ ಫಿಲ್ಟರ್ ಮಾಡಿ ನೋಡಬಹುದು.
03.31 Quick Filter ಟೂಲ್ ಬಾರ್ ನ ಸಹಾಯದಿಂದ ಟ್ಯಾಗ್ ಆದ ಮೆಸೇಜ್ ಗಳನ್ನು ನೋಡಲು Tagged ಐಕಾನ್ ಅನ್ನು ಕ್ಲಿಕ್ ಮಾಡಿ.
03.37 ಕೇವಲ ಟ್ಯಾಗ್ ಅಗಿರುವ ಮೆಸೇಜ್ ಗಳು ಕಾಣಿಸುತ್ತವೆ!
03.42 Tagged ಐಕಾನ್ ಅನ್ನು ಪುನಃ ಕ್ಲಿಕ್ ಮಾಡಿ.
03.45 ಈಗ ನಾವು ಎಲ್ಲಾ ಮೇಲ್ ಗಳನ್ನು ನೋಡಬಹುದು!
03.49 ಮೆಸೇಜ್ Threads ನ ಬಗ್ಗೆ ತಿಳಿಯೋಣ.
03.52 ಮೆಸೇಜ್ Threads ಎಂದರೇನು? ಪರಸ್ಪರ ಸಂಬಧಪಟ್ಟ ಮೆಸೇಜ್ ಗಳನ್ನು
03.57 ಒಂದು ಕ್ರಮದಲ್ಲಿ ಅಥವಾ ಒಂದು ಸಂಭಾಷಣೆಯ ರೀತಿಯಲ್ಲಿ ಜೋಡಿಸಿರುವುದೇ ಮೆಸೇಜ್ ಥ್ರೆಡ್ಸ್(Threads).
04.02 ಪರಸ್ಪರ ಸಂಬಧಪಟ್ಟ ಮೆಸೇಜ್ ಗಳನ್ನು ಒಂದು ಸಂಭಾಷಣೆಯ ರೀತಿಯಲ್ಲಿ ನೋಡಲು ನಾವು ಮೆಸೇಜ್ threads ಅನ್ನು ಬಳಸುತ್ತೇವೆ.
04.10 ಈಗ ಇದನ್ನು ಹೇಗೆ ಮಾಡುವುದೆಂದು ಕಲಿಯೋಣ.
04.14 ಇನ್ ಬಾಕ್ಸ್ ನ ಎಡ ಮೂಲೆಯಲ್ಲಿರುವ threads ಐಕಾನ್ ಅನ್ನು ಕ್ಲಿಕ್ ಮಾಡಿ.
04.21 ಮೇಲ್ ಗಳು ಸಂಭಾಷಣೆಯ ರೀತಿಯಲ್ಲಿ ಕಾಣುತ್ತವೆ.
04.24 ಸಂಪೂರ್ಣ ಸಂಭಾಷಣೆಯನ್ನು ನೋಡಲು ಅನುಗುಣವಾದ ಥ್ರೆಡ್ ನ ಪಕ್ಕದಲ್ಲಿರುವ Threading ಚಿನ್ಹೆಯನ್ನು ಕ್ಲಿಕ್ ಮಾಡಿ.
04.33 ಮೆಸೇಜ್ ಪ್ರೀವ್ಯೂವ್(message preview) ಪ್ಯಾನಲ್ ನಲ್ಲಿ ಸಂಪೂರ್ಣ ಸಂಭಾಷಣೆ ಕಾಣುತ್ತದೆ.
04.38 ಸಂಭಾಷಣೆಯ ನೋಟದಿಂದ (Thread view) ಹೊರಗೆ ಬರಲು, Thread ಐಕಾನ್ ಅನ್ನು ಪುನಃ ಕ್ಲಿಕ್ ಮಾಡಿ.
04.45 ಈಗ ಮೇಲ್ ಅನ್ನು ಒಂದು ಫೋಲ್ಡರ್ ಗೆ ಸೇವ್ ಮಾಡಲು ಮತ್ತು ಅದನ್ನು ಪ್ರಿಂಟ್ ಮಾಡಲು ಕಲಿಯೋಣ.
04.50 ಈ ಟ್ಯುಟೋರಿಯಲ್ ಗಾಗಿ ನಾವು
04.53 ಡೆಸ್ಕ್ ಟಾಪ್ ನಲ್ಲಿ ಒಂದು ಫೋಲ್ಡರ್ ಅನ್ನು ರಚಿಸಿದ್ದೇವೆ.
04.56 ಮತ್ತು Saved Mails ಎಂದು ಹೆಸರಿಸಿದ್ದೇವೆ.
05.00 ಈಗ ಮೊದಲ ಮೇಲ್ ಅನ್ನು ಆಯ್ಕೆ ಮಾಡಿ ಅದನ್ನು ಸೇವ್ ಮಾಡೋಣ.
05.04 ಮೇಲ್ ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
05.06 ಅದು ಪ್ರತ್ಯೇಕವಾದ ಟ್ಯಾಬ್ ನಲ್ಲಿ ತೆರೆದುಕೊಳ್ಳುತ್ತದೆ.
05.09 ಟೂಲ್ ಬಾರ್ ನಿಂದ File ಮತ್ತು Save As ಅನ್ನು ಕ್ಲಿಕ್ ಮಾಡಿ.
05.15 Save Message As ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
05.19 ಡೆಸ್ಕ್ ಟಾಪ್ ಗೆ ಹೋಗಿ Saved Mails ಫೋಲ್ಡರ್ ಅನ್ನು ಆಯ್ಕೆ ಮಾಡಿ Save ಅನ್ನು ಕ್ಲಿಕ್ ಮಾಡಿ.
05.26 ಮೆಸೇಜ್ ಫೋಲ್ಡರ್ ನಲ್ಲಿ ಸೇವ್ ಆಗಿರುತ್ತದೆ.
05.29 Saved Mails ಫೋಲ್ಡರ್ ಗೆ ಹೋಗೋಣ.
05.33 ಅದನ್ನು ಎರಡು ಸಲ ಕ್ಲಿಕ್ ಮಾಡಿ, ಓಪನ್ ಆಗುತ್ತದೆ.
05.35 Gedit ನಲ್ಲಿ ಮೆಲ್ ಓಂದು ಫೈಲ್ ನ ರೂಪದಲ್ಲಿ ಓಪನ್ ಅಗುತ್ತದೆ.
05.40 ಇದನ್ನು ಕ್ಲೊಸ್ ಮಾಡೋಣ.
05.42 ನೀವು ಮೆಸೇಜ್ ಅನ್ನು ಒಂದು template ಆಗಿ ಕೂಡ ಸೇವ್ ಮಾಡಬಹುದು.
05.46 ಟೂಲ್ ಬಾರ್ ನಲ್ಲಿ file, save as ಮತ್ತು templates ಅನ್ನು ಕ್ಲಿಕ್ ಮಾಡಿ.
05.52 ಮೆಸೇಜ್ ಈಗ ಥಂಡರ್ ಬರ್ಡ್ ನ Templates ಫೋಲ್ಡರ್ ನಲ್ಲಿ ಸೇವ್ ಅಗಿದೆ.
05.56 ಥಂಡರ್ ಬರ್ಡ್ ನ ಎಡ ಪ್ಯಾನಲ್ ನಿಂದ Templates ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
06.01 ಮೇಲ್ ಅನ್ನು ಆಯ್ಕೆ ಮಾಡಿ ಅದರ ಮೇಲ್ ಎರಡು ಬಾರಿ ಕ್ಲಿಕ್ ಮಾಡಿ.
06.04 ಮೂಲ ಮೇಲ್ ನಲ್ಲಿರುವ ವಿಳಾಸಗಳ ಸಹಿತವಾಗಿರುವ ಅಡ್ಡ್ರೆಸ್ ಫೀಲ್ಡ್ ನೊಂದಿಗೆ ಬೇರೆಯ ಟ್ಯಾಬ್ ನಲ್ಲಿ ಮೇಲ್ ಓಪನ್ ಅಗುತ್ತದೆ.
06.13 ಈಗ ನೀವು ಮೇಲ್ ಅನ್ನು ನಿಮಗೆ ಬೆಕಾದ ರೇತಿಯಲ್ಲಿ ಬದಲಾಯಿಸಿಕೊಂಡು, ವಿಳಾಸಗಳನ್ನು ಸೇರಿಸಿ ಅಥವಾ ತೆಗೆದು, ನಿಮಗೆ ಬೇಕಾದ ವಿಳಾಸಗಳಿಗೆ ಕಳಿಸಬಹುದು.
06.20 ಅಂಕೆ 1 ಅನ್ನು ಸಬ್ಜೆಕ್ಟ್ ನಲ್ಲಿ ಸೇರಿಸಿ.
06.23 template ಅನ್ನು ಕ್ಲೋಸ್ ಮಾಡಲು ಟ್ಯಾಬ್ ನ ಮೇಲಿಂದ ಎಡ ಭಾಗದಲ್ಲಿರುವ X ಐಕಾನ್ ಅನ್ನು ಕ್ಲಿಕ್ ಮಾಡಿ.
06.29 Save Message ಡಯಲಾಗ್ ಬಾಕ್ಸ್ ಕಾಣಿಸುತ್ತದೆ, Don’t Save ಅನ್ನು ಕ್ಲಿಕ್ ಮಾಡಿ.
06.36 ಈಗ ಮೆಸೇಜ್ ಅನ್ನು ಪ್ರಿಂಟ್ ಮಾಡಲು ಕಲಿಯೋಣ.
06.39 ಬಲ ಪ್ಯಾನಲ್ ನಲ್ಲಿರುವ Inbox ಅನ್ನು ಕ್ಲಿಕ್ ಮಾಡಿ ಎರಡನೆಯ ಮೇಲ್ ಅನ್ನು ಆಯ್ಕೆ ಮಾಡಿ ಮತ್ತು ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
06.46 ಹೊಸ ಟ್ಯಾಬ್ ನಲ್ಲಿ ಇದು ಓಪನ್ ಅಗುತ್ತದೆ.
06.50 ಮೈನ್ ಮೆನುವಿನಿಂದ File ಗೆ ಹೋಗಿ ಅಲ್ಲಿ Print ಅನ್ನು ಆಯ್ಕೆ ಮಾಡಿ..
06.55 Print ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
06.58 A4 ಅಳತೆಯ ಹಾಳೆಯಲ್ಲಿ ಪೋರ್ಟ್ ರೈಟ್ ನ ಆಕೃತಿಯಲ್ಲಿ ನಾವು ಪ್ರಿಂಟ್ ಮಾಡಿ ಈ ಮೇಲ್ ನ ಎರಡು ಪ್ರತಿಗಳನ್ನು ಗಳಿಸಬೇಕಾಗಿದೆ.
07.08 Page Setup ಟ್ಯಾಬ್ ಅನ್ನು ಕ್ಲಿಕ್ ಮಾಡಿ.
07.11 Paper Size ಫೀಲ್ಡ್ ನಲ್ಲಿ ಕೆಳ ಮುಖದ ಚಿನ್ಹೆಯನ್ನು ಕ್ಲಿಕ್ ಮಾಡಿ ಮತ್ತು A4 ಅನ್ನು ಆಯ್ಕೆ ಮಾಡಿ.
07.16 Orientation ಫೀಲ್ಡ್ ನಲ್ಲಿರುವ ಕೆಳಮುಖದ ಚಿನ್ಹೆಯನ್ನು ಕ್ಲಿಕ್ ಮಾಡಿ ಮತ್ತು Portrait ಅನ್ನು ಆಯ್ಕೆ ಮಾಡಿ.
07.22 ಈಗ General ಟ್ಯಾಬ್ ಅನ್ನು ಕ್ಲಿಕ್ ಮಾಡಿ.
07.25 Copies ಫೀಲ್ಡ್ ನಲ್ಲಿ 2 ಎಂದು ಎಂಟರ್ ಮಾಡಿ ಮತ್ತು Print ಅನ್ನು ಕ್ಲಿಕ್ ಮಾಡಿ.
07.31 ನಿಮ್ಮ ಪ್ರಿಂಟರ್ ವ್ಯವಸ್ಥಿತವಾಗಿದ್ದಲ್ಲಿ ಮೇಲ್ ಎಂಬುದು ಪ್ರಿಂಟ್ ಆಗುತ್ತದೆ.
07.38 Cancel ಅನ್ನು ಕ್ಲಿಕ್ ಮಾಡಿ Print ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋಣ ಮತ್ತು ಮೇಲ್ ಟ್ಯಾಬ್ ಅನ್ನು ಕೂಡ ಕ್ಲೋಸ್ ಮಾಡೋಣ.
07.46 ಯಾಹೂ (Yahoo) ಅಕೌಂಟ್ ಗೆ ಒಂದು ವೀಡಿಯೋ ಅನ್ನು ಸೇರಿಸಿ ಕಳುಹಿಸೋಣ.
07.51 ಹೊಸ ಮೆಸೇಜ್ ಅನ್ನು ಬರೆಯೋಣ.
07.54 ಮೆನು ಬಾರ್ ನಿಂದ Write ಅನ್ನು ಕ್ಲಿಕ್ ಮಾಡಿ, ಮೆಸೇಜ್ ಬರೆಯಲು ಹೊಸ ವಿಂಡೋ ಕಾಣಿಸುತ್ತದೆ.
08.00 To ಫೀಲ್ಡ್ ನಲ್ಲಿ ಯಾಹೂ ಐ.ಡಿ ಯ ಮೊದಲ ಅಕ್ಷರವಾದ ‘S’ ಅನ್ನು ಟೈಪ್ ಮಾಡೋಣ.
08.06 ಯಾಹೂ ಮೇಲ್ ಐ.ಡಿ ಸ್ವತಃ ಪೂರ್ತಿಗೊಳ್ಳುವುದನ್ನು ಗಮನಿಸಿ.
08.11 ಸಬ್ಜೆಕ್ಟ್ ಫೀಲ್ಡ್ ನಲ್ಲಿ Video Attachment ಎಂದು ಟೈಪ್ ಮಾಡಿ.
08.16 ಟೂಲ್ ಬಾರ್ ನಲ್ಲಿನ Attach ಅನ್ನು ಕ್ಲಿಕ್ ಮಾಡಿ, Attach Files ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
08.23 ಡೆಸ್ಕ್ ಟಾಪ್ ನಲ್ಲಿ, What is a Spoken Tutorial ಎಂಬ ಫೈಲ್ ಅನ್ನು ಸೆಲೆಕ್ಟ್ ಮಾಡಿ, ನಂತರ Open ಅನ್ನು ಕ್ಲಿಕ್ ಮಾಡಿ.
08.34 ಈಗ ನಿಮ್ಮ ಫೈಲ್ ಅಟ್ಯಾಚ್ ಆಗಿದೆ ಹಾಗು ಅಟ್ಯಾಚ್ ಆಗಿರುವ ಫೈಲ್ ಮೇಲಿನ ಬಲ ಮೂಲೆಯಲ್ಲಿ ಕಾಣಿಸುತ್ತಿದೆ. ಈಗ Send ಅನ್ನು ಕ್ಲಿಕ್ ಮಾಡಿ..
08.44 ಯಾಹೂ ಅಕೌಂಟ್ ಗೆ ಲಾಗ್ ಇನ್ ಅಗೋಣ.
08.56 ನಾವೀಗ ಅಟ್ಯಾಚ್ ಆಗಿರುವ ಮೆಸೇಜ್ ಅನ್ನು ಪಡೆದಿರುತ್ತೇವೆ.
08.59 ಯಾಹೂ ಅಕೌಂಟ್ ಅನ್ನು ಕ್ಲೋಸ್ ಮಾಡೋಣ.
09.03 ನಾವು ಗಮನಿಸಲು ಇಚ್ಛಿಸುವ ಮುಖ್ಯವಾದ ಮೆಸೇಜ್ ಅನ್ನು ಪಡೆಯಬಹುದು.
09.07 ಆದರೆ ಮೇಲ್ ಬಾಕ್ಸ್ ನಲ್ಲಿ ತುಂಬ ಮೇಲ್ ಗಳು ಇರುವುದರಿಂದ ಅಸ್ತವ್ಯಸ್ತತೆ ಉಂಟಾಗಿರಬಹುದು.
09.12 ಥಂಡರ್ ಬರ್ಡ್ ಆ ರೀತಿಯ ಮೆಸೇಜ್ ಗಳನ್ನು ಸಂಗ್ರಹಿಸಿಡುತ್ತದೆ.
09.16 ಆರ್ಚಿವ್ ಸೆಟ್ಟಿಂಗ್ ಅನ್ನು ನಾವು ಮೊದಲು ಗಮನಿಸಬೇಕು.
09.20 ಎಡ ಪ್ಯಾನಲ್ ನಿಂದ STUSERONE gmail account ಅನ್ನು ಕ್ಲಿಕ್ ಮಾಡಿ.
09.25 ಬಲ ಪ್ಯಾನಲ್ ನಿಂದ, Accounts ನ ಅಡಿಯಲ್ಲಿನ View Settings ಅನ್ನು ಈ ಅಕೌಂಟ್ ಗೆ ಕ್ಲಿಕ್ ಮಾಡಿ.
09.31 Accounts Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
09.35 ಎಡ ಪ್ಯಾನಲ್ ನಿಂದ STUSERONE gmail ಅಕೌಂಟ್ ಅನ್ನು, Copies ಹಾಗು Folders ಅನ್ನು ಕ್ಲಿಕ್ ಮಾಡಿ.
09.43 Message Archives ಆಯ್ಕೆ ಕಾರ್ಯನಿರತವಾಗುತ್ತದೆ.
09.48 ಈ ಆಯ್ಕೆಗಳು ಮೆಸೇಜ್ ಗಳು ಸಂಗ್ರಹಿತವಾದ ಫೋಲ್ಡರ್ ಗಳನ್ನು ನಿರ್ಧರಿಸುತ್ತವೆ.
09.53 ಈ ಅಯ್ಕೆಗಳನ್ನು ಸಮರ್ಥಗೊಳಿಸದಿದ್ದಲ್ಲಿ:
09.57 Keep message archives in ಎಂಬ ಬಾಕ್ಸ್ ಅನ್ನು ಸಮರ್ಥಗೊಳಿಸಿ.
10.01 STUSERONE at gmail.com ನಲ್ಲಿ “Archives” ಫೋಲ್ಡರ್ ಎಂಬ ಅಯ್ಕೆಯನ್ನು ಸೆಲೆಕ್ಟ್ ಮಾಡಿ OK ಕ್ಲಿಕ್ ಮಾಡಿ.
10.10 ಈಗ STUSERONE Gmail ಅಕೌಂಟ್ ನ ಇನ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
10.15 ಇದೀಗ 3 ನೇ ಮೆಸೇಜ್ ಅನ್ನು Archive (ಆರ್ಚಿವ್) ಮಾಡೋಣ.
10.19 ಎಡ ಪ್ಯಾನಲ್ ನಿಂದ ಅದನ್ನು ಆಯ್ಕೆ ಮಾಡಿ.
10.21 ಕಾಂಟೆಕ್ಸ್ಟ್ ಮೆನುವಿನ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು Archive ಅನ್ನು ಆರಿಸಿ.
10.27 STUSERONE Gmail account ನ ಮೆಸೇಜ್, Archives ಫೋಲ್ಡರ್ ಗೆ ವರ್ಗಾಯಿಸಲ್ಪಟ್ಟಿದೆ.
10.36 ಹಾಗಾಗಿ ಇನ್ ಬಾಕ್ಸ್ ನಲ್ಲಿ ಇನ್ನು ಮೆಸೇಜ್ ಕಾಣಿಸಿಕೊಳ್ಳುವುದಿಲ್ಲ.
10.39 ಥಂಡರ್ ಬರ್ಡ್ ಅನ್ನು ಉಪಯೋಗಿಸಿ ಮಾಡಿದ ಕ್ರಿಯಗಳನ್ನು ಪುನಃ ನೋಡಲು ಬಯಸಿದಾದಲ್ಲಿ ನಾವೇನು ಮಾಡಬೇಕು?
10.44 ಇದು ಅತ್ಯಂತ ಸುಲಭ! Activity Manager ನಾವು ಥಂಡರ್ ಬರ್ಡ್ ಅನ್ನು ಉಪಯೋಗಿಸಿ ಮಾಡಿದ ಕ್ರಿಯೆಗಳನ್ನು ತೋರಿಸುತ್ತದೆ.
10.52 ಮೈನ್ ಮೆನುವಿನಿಂದ Tools ಮತ್ತು Activity Manager ಅನ್ನು ಕ್ಲಿಕ್ ಮಾಡಿ.
10.57 Activity Manager ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
11.01 ಈಗ ನೀವು ಎಲ್ಲಾ ಈಮೇಲ್ ಚಟುವಟಿಕೆಗಳ ಪಟ್ಟಿಯನ್ನು ಪರಿಶೀಲಿಸಬಹುದು!
11.05 ಈಗ Activity Manager ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋಣ.
11.09 ಥಂಡರ್ ಬರ್ಡ್ ವಿಂಡೋ ವಿನ ಎಡ ಮೂಲೆಯಲ್ಲಿರುವ ಕೆಂಪು ಕ್ರಾಸ್ ಅನ್ನು ಒತ್ತುವ ಮೂಲಕ ಥಂಡರ್ ಬರ್ಡ್ ನಿಂದ ಹೊರಬರಬಹುದು.
11.16 ಈ ಟ್ಯುಟೋರಿಯಲ್ ನಲ್ಲಿ ನಾವು:
11.20 ಥಂಡರ್ ಬರ್ಡ್ ನ ಶಾರ್ಟ್ ಕಟ್ ಅನ್ನು ಲಾಂಚರ್ ಗೆ ಸೇರಿಸುವುದು,
11.23 ಟ್ಯಾಗ್ ಮೆಸೇಜ್, ಕ್ವಿಕ್ ಫಿಲ್ಟರ್ (Quick Filter),

ಸಾರ್ಟ್ (Sort) ಮತ್ತು ಥ್ರೆಡ್ ಮೆಸೇಜ್ ಗಳನ್ನು ಕಲಿತಿದ್ದೇವೆ.

11.28 ಇದರೊಂದಿಗೆ ನಾವು:
11.30 ಸೇವ್ ಆಸ್(Save As) ಮತ್ತು ಪ್ರಿಂಟ್ ಮೆಸೇಜ್,

ಅಟ್ಯಾಚ್(Attach) ಫೈಲ್,

11.34 ಆರ್ಚಿವ್(Archive)ಮೆಸೇಜ್,

ವ್ಯೂ ದ ಆಕ್ಟಿವಿಟಿ (Activity) ಮ್ಯಾನೇಜರ್ ಅನ್ನು ಕಲಿತಿದ್ದೇವೆ.

11.38 ನಿಮಗೆ ಇಲ್ಲಿ ಒಂದು ಅಸೈನ್ ಮೆಂಟ್ ಕೊಡಲಾಗಿದೆ.
11.41 ಥಂಡರ್ ಬರ್ಡ್ ಗೆ ಲಾಗ್ ಇನ್ ಆಗಿ,
11.44 ಒಂದು ಮೆಸೇಜ್ ಥ್ರೆಡ್ ಅನ್ನು ನೋಡಿ.

ಮೆಸೇಜ ಅನ್ನು ಸೇವ್ ಮತ್ತು ಪ್ರಿಂಟ್ ಮಾಡಿ.

11.48 ಒಂದು ಈಮೇಲ್ ಅನ್ನು ಆಯ್ದುಕೊಳ್ಳಿ, ಕಾಂಟೆಕ್ಸ್ಟ್ ಮೆನುವಿನಲ್ಲಿ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ.
11.53 ಅಲ್ಲಿರುವ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಿ.
11.56 Activity Manager ಡಯಲಾಗ್ ಬಾಕ್ಸ್ ಅನ್ನು ನೋಡಿ.
12.00 ಥಂಡರ್ ಬರ್ಡ್ ಅನ್ನು ಲಾಗ್ ಔಟ್ ಮಾಡಿ.
12.03 Activity Manager ಡಯಲಾಗ್ ಬಾಕ್ಸ್ ಅನ್ನು ಪುನಃ ಲಾಗ್ ಇನ್ ಆಗುವಾಗ ಪರಿಶೀಲಿಸಿ.
12.07 ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ:
12.10 ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ.
12.13 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
12.18 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
12.23 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
12.27 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
12.33 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
12.37 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
12.45 ಈ ಯೋಜನೆಯ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
12.56 ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal