Java/C2/Hello-World-Program-in-Eclipse/Kannada

From Script | Spoken-Tutorial
Revision as of 11:56, 20 March 2017 by PoojaMoolya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 HelloWorld in Java on Eclipse ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ಎಕ್ಲಿಪ್ಸ್ ನ ಉಪಯೋಗದಿಂದ ಜಾವಾ ದಲ್ಲಿ Hello World ಎಂಬ ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದೆಂದು ಕಲಿಯಲಿದೇವೆ.
00:13 ಈ ಟ್ಯುಟೋರಿಯಲ್ ನಲ್ಲಿ ನಾವು Eclipse 3.7.0 ಹಾಗೂ Ubuntu 11.10 ಅನ್ನು ಉಪಯೋಗಿಸುತ್ತಿದ್ದೇವೆ.
00:20 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮ್ಮ ಸಿಸ್ಟಮ್ ನಲ್ಲಿ ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ.
00:25 ಹಾಗೂ, ನೀವು ಎಕ್ಲಿಪ್ಸ್ ನಲ್ಲಿ ಫೈಲ್ ಅನ್ನು ಹೇಗೆ ರಚಿಸುವುದು, ಅದನ್ನು ಹೇಗೆ ಸೇವ್ ಮಾಡುವುದು ಮತ್ತು ಹೇಗೆ ರನ್ ಮಡುವುದು ಎಂದು ತಿಳಿದಿರಬೇಕು.
00:30 ಇಲ್ಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಇಲ್ಲಿ ತೋರಿಸಿರುವ ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
00:36 ಇಲ್ಲಿ ಕಾಣುವ ಜಾವಾ ಕೋಡ್ ನ ಪಂಕ್ತಿಯು Hello World ಎಂಬ ಸಂದೆಶವನ್ನು ಪ್ರಿಂಟ್ ಮಾಡುತ್ತದೆ.
00:44 ಈಗ ಇದನ್ನು ಎಕ್ಲಿಪ್ಸ್ ನಲ್ಲಿ ಪ್ರಯತ್ನಿಸೋಣ.
00:46 Alt, F2 ಒತ್ತಿ ಮತ್ತು ಕಾಣಸಿಗುವ ಡಯಲಾಗ್ ಬಾಕ್ಸ್ ನಲ್ಲಿ eclipse ಎಂದು ಟೈಪ್ ಮಾಡಿ Enter ಒತ್ತಿ.
00:56 Workspace Launcher ಎಂಬ ಡಯಲಾಗ್ ಬಾಕ್ಸ್ ನಲ್ಲಿ Ok ಕ್ಲಿಕ್ ಮಾಡಿ, ಈಗ ನಾವು Eclipse IDE ಎಂಬುದನ್ನು ಹೊಂದಿದ್ದೇವೆ.
01:09 ಈಗ ನಾವು ಹೊಸ ಪ್ರೊಜೆಕ್ಟ್ ಅನ್ನು ಸೇರಿಸೋಣ.
01:12 File ಮೇಲೆ ಕ್ಲಿಕ್ ಮಾಡಿ ಅಲ್ಲಿ New ಎಂಬಲ್ಲಿ Project ಎಂಬುದನ್ನು ಆಯ್ಕೆಮಾಡಿ.
01:19 ಪ್ರೊಜೆಕ್ಟ್ ಗಳ ಸೂಚಿಯಲ್ಲಿ Java Project ಎಂಬುದನ್ನು ಆಯ್ಕೆಮಾಡಿ ನಂತರ Next ಎಂಬುದನ್ನು ಕ್ಲಿಕ್ ಮಾಡಿ.
01:26 Project name ಎಂಬಲ್ಲಿ, DemoProject ಎಂದು ಟೈಪ್ ಮಾಡಿ. (ದಯವಿಟ್ಟು ಗಮನಿಸಿ, Demo ಮತ್ತು Project ಇವುಗಳ ನಡುವೆ ಸ್ಪೇಸ್ ಇಲ್ಲ ಮತ್ತು D ಹಾಗೂ P ಎಂಬುದು ದೊಡ್ಡ ಅಕ್ಷರದಲ್ಲಿದೆ.
01:40 ಬಾಕ್ಸ್ ನ ಕೆಳಗಡೆ ಬಲಮೂಲೆಯಲ್ಲಿರುವ Finish ಬಟನ್ ಅನ್ನು ಕ್ಲಿಕ್ ಮಾಡಿ.
01:46 DemoProject ಎಂಬುದೀಗ ರಚಿತವಾಯಿತು.
01:49 ಈಗ ಪ್ರೊಜೆಕ್ಟ್ ಗೆ ಹೊಸ ಕ್ಲಾಸ್ ಅನ್ನು ಸೇರಿಸೋಣ.
01:52 ಪ್ರೊಜೆಕ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಅಲ್ಲಿ New ಎಂಬಲ್ಲಿ Class ಎಂಬುದನ್ನು ಆಯ್ಕೆಮಾಡಿ.
01:59 ಇಲ್ಲಿ Name ಎಂಬಲ್ಲಿ DemoProgram ಎಂದು ಟೈಪ್ ಮಾಡಿ ಮತ್ತು ಮೆಥಡ್ ಸ್ಟಬ್ಸ್ ನಲ್ಲಿ Public Static Void main ಎಂಬುದನ್ನು ಆಯ್ಕೆಮಾಡಿ.
02:13 ಬಾಕ್ಸ್ ನಲ್ಲಿ ಕೆಳಗಡೆ ಬಲಮೂಲೆಯಲ್ಲಿರುವ Finish ಬಟನ್ ಅನ್ನು ಕ್ಲಿಕ್ ಮಾಡಿ.
02:20 ನಾವಿಲ್ಲಿ ಗಮನಿಸಬಹುದು, DemoProject ಎಂಬುದು ಸೋರ್ಸ್ ಡೈರಕ್ಟರಿಯನ್ನು ಹೊಂದಿದೆ ಹಾಗೂ Demo program.Java ಎಂಬ ಹೆಸರಿನ ಫೈಲ್ ಅನ್ನೂಒ ಹೊಂದಿದೆ.
02:27 ಏಕೆಂದರೆ, ಜಾವಾ ದಲ್ಲಿ ಪ್ರತಿ ಕ್ಲಾಸ್ ಕೂಡಾ ಅದರ ಫೈಲ್ ನಲ್ಲೇ ಇರುತ್ತದೆ, ಹಾಗೆಯೇ, Demo Program ಎಂಬ ಕ್ಲಾಸ್ ಕೂಡಾ Demo program. Java ಎಂಬ ಫೈಲ್ ನಲ್ಲೇ ಇದೆ.
02:40 ಇಲ್ಲಿ ಎಡಿಟರ್ ಗೆ ಇರುವ ಜಾಗವು ತುಂಬಾ ಚಿಕ್ಕದಾಗಿರುವುದನ್ನು ನಾವು ನೋಡಬಹುದು. ಹಾಗಾಗಿ ಬೇರೆ ಪೋರ್ಟ್ಲೆಟ್ ಗಳನ್ನು ಮಿನಿಮೈಸ್ ಮಾಡುವುದರ ಮೂಲಕ ನಾವಿದನ್ನು ದೊಡ್ಡದಾಗಿಸೋಣ.
02:55 ಇಲ್ಲಿ ಗಮನಿಸಿ, ಈ ಪಂಕ್ತಿಯು ಎರಡು ಸ್ಲಾಶ್ ಗಳಿಂದ ಆರಂಭಗೊಳ್ಳುತ್ತದೆ, ಅಂದರೆ ಈ ಪಂಕ್ತಿಯು ಕೇವಲ ಕಮೆಂಟ್ ಆಗಿದ್ದು ಇದು ಕೋಡ್ ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.
03:05 ನಾವು ಈ ಪಂಕ್ತಿಯನ್ನು ತೆಗೆಯೋಣ. ಹಾಗೆಯೇ ಸ್ಲಾಶ್ ಆಸ್ಟ್ರಿಕ್ಸ್ ಹಾಗೂ ಆಸ್ಟ್ರಿಕ್ಸ್ ಸ್ಲಾಶ್ ಗಳ ನಡುವೆ ಇರುವ ಎಲ್ಲವೂ ಕೂಡಾ ಕಮೆಂಟ್ ಗಳೆ ಆಗಿವೆ.
03:17 ಹಾಗಾಗಿ ನಾವು ಈ ಕಮೆಂಟ್ ಗಳನ್ನೂ ತೆಗೆಯೋಣ.
03:22 ಈಗ ಇಲ್ಲಿ ನಾವು ಕೋಡ್ ನ ಮುಖ್ಯವಾದ ಭಾಗವನ್ನು ಹೊಂದಿದ್ದೇವೆ.
03:27 ನಾವೀಗ ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಸೇರಿಸೋಣ. System.
03:35 ಇಲ್ಲಿ ಗಮನಿಸಿ, ನಾವು ಟೈಪ್ ಮಾಡುತ್ತಿದ್ದಂತೆಯೇ ಎಕ್ಲಿಪ್ಸ್ ನಮಗೆ ಮುಂದಿನ ಎಲ್ಲಾ ಸಾಧ್ಯತೆಗಳನ್ನು ಸೂಚಿಸುತ್ತದೆ.
03:38 ನಾವು ಕಮಾಂಡ್ ಅನ್ನು ನಾವೇ ಟೈಪ್ ಮಾಡೋಣ,
03:43 out.println ಬ್ರಾಕೆಟ್ ನಲ್ಲಿ ಕೋಟ್ ನ ಒಳಗೆ HelloWorld ಎಂದು ಟೈಪ್ ಮಾಡಿ.
03:56 ಜಾವಾ ದಲ್ಲಿ ಪ್ರತಿ ಸ್ಟೇಟ್ಮೆಂಟ್ ಕೂಡಾ ಸೆಮಿಕೊಲನ್ ನಿಂದ ಕೊನೆಗೊಳ್ಳುತ್ತವೆ.
03:59 ಹಾಗಾಗಿ, ಸೆಮಿಕೊಲನ್ ಅನ್ನು ಸೇರಿಸೋಣ.
04:03 ಈಗ ಇದು ಜಾವಾದಲ್ಲಿನ ಒಂದು ಸಂಪೂರ್ಣವಾದ HelloWorld ಪ್ರೊಗ್ರಾಮ್ ಆಗಿದೆ.
04:06 ಸೇವ್ ಮಾಡಲು Ctrl + S ಒತ್ತಿ.
04:11 ರೈಟ್ ಕ್ಲಿಕ್ ಮಾಡಿ ಅಲ್ಲಿ Run as ಮತ್ತು java application ಎಂಬುದನ್ನು ಒತ್ತಿ ಕೋಡ್ ಅನ್ನು ರನ್ ಮಾಡಿ.
04:19 ನಾವೀಗ ಔಟ್ಪುಟ್ ಕನ್ಸೋಲ್ ನಲ್ಲಿ HelloWorld ಎಂಬ ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡುತ್ತೇವೆ.
04:24 ಈಗ ನಾವು World ಎಂಬುದನ್ನು Java ಎಂದು ಬದಲಾಯಿಸೋಣ.
04:30 Ctrl + S ಒತ್ತಿ ಸೇವ್ ಮಾಡಿ ಹಾಗೂ Run ಮಾಡಿ.
04:41 ನಾವೀಗ Hello Java ಎಂಬ ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡಬಹುದು.
04:45 ನಾವೀಗ ಕೋಡ್ ನ ಪ್ರತಿ ಭಾಗವು ಏನನ್ನು ಮಾಡುತ್ತದೆ ಎಂಬುದನ್ನು ತಿಳಿಯೋಣ.
04:48 ಮೊದಲನೇಯ ಪಂಕ್ತಿಯು ಕ್ಲಾಸ್ ನ ಹೆಸರು DemoProgram ಎಂದೂ ಹಾಗೂ ಅದು Public class ಎಂದೂ ತಿಳಿಸಿಕೊಡುತ್ತದೆ.
04:55 ಎರಡನೇಯ ಪಂಕ್ತಿಯು ಇದೊಂದು main method ಆಗಿದೆಯೆಂದು ತಿಳಿಸುತ್ತದೆ. ಅಂದರೆ, ಈ ಮೆಥಡ್ ನಿಂದ ಜಾವಾದಲ್ಲಿ ನಿರ್ವಹಣೆಯು ಆರಂಭವಾಗುತ್ತದೆ.
05:04 ನಮಗೆಲ್ಲರಿಗೂ ಗೊತ್ತಿರುವಂತೆ ಇದು ಪ್ರಿಂಟ್ ಸ್ಟೇಟ್ಮೆಂಟ್ ಆಗಿದೆ.
05:07 ಹೀಗೆ ನಾವು ಜಾವಾ ದಲ್ಲಿ HelloWorld ಪ್ರೊಗ್ರಾಮ್ ಅನ್ನು ಬರೆಯುತ್ತೇವೆ.
05:14 ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ.
05:17 ಈ ಟ್ಯುಟೋರಿಯಲ್ ನಲ್ಲಿ ನಾವು HelloWorld ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದು ಮತ್ತು ಕೋಡ್ ನ ಪ್ರತಿಯೊಂದು ಭಾಗವು ಏನನ್ನು ಸೂಚಿಸುತ್ತದೆ ಎಂಬುದನ್ನು ಅರಿತೆವು.
05:27 ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ,
05:29 ನೀವು Greet ಎಂಬ ಹೆಸರಿನ ಜಾವಾ ಕ್ಲಾಸ್ ಅನ್ನು ರಚಿಸಿ ಹಾಗೂ ಔಟ್ಪುಟ್ ನಲ್ಲಿ Program Successful ಎಂದು ಬರುವಂತೆ ಪ್ರೊಗ್ರಾಮ್ ಬರೆಯಿರಿ.
05:37 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು spoken-tutorial.org/What_is_a_Spoken_Tutorial ಎಂಬ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
05:42 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
05:45 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
05:51 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
05:55 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
05:59 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
06:05 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
06:09 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
06:14 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
06:19 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Vasudeva ahitanal