C-and-Cpp/C3/String-Library-Functions/Kannada
From Script | Spoken-Tutorial
Revision as of 18:19, 17 March 2017 by PoojaMoolya (Talk | contribs)
Time | Narration | |
00:01 | c ಯಲ್ಲಿ ಸ್ಟ್ರಿಂಗ್ ಲೈಬ್ರರಿ ಫಂಕ್ಷನ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. | |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು ಸ್ಟ್ರಿಂಗ್ ಲೈಬ್ರರಿ ಫಂಕ್ಷನ್ ಗಳ ಬಗ್ಗೆ ತಿಳಿಯುವೆವು. | |
00:11 | ಇದನ್ನು ನಾವು ಕೆಲವು ಉದಾಹರಣೆಯೊಂದಿಗೆ ಮಾಡೋಣ. | |
00:15 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. | |
00:27 | ಸ್ಟ್ರಿಂಗ್ ಲೈಬ್ರರಿ ಫಂಕ್ಷನ್ ಗಳನ್ನು ಪೀಠಿಕೆಯೊಂದಿಗೆ ಆರಂಭಿಸೋಣ. | |
00:31 | ಇದು, ಸ್ಟ್ರಿಂಗ್ ಗಳನ್ನುಪಯೋಗಿಸಿ ಕಾರ್ಯ ಸಾಧಿಸಲು ಇರುವ ಫಂಕ್ಷನ್ ಗಳ ಸಮೂಹ. | |
00:36 | ಹಲವಾರು ಸಾಮಾನ್ಯ ಕಾರ್ಯಗಳಾದ, ನಕಲು(copying), ಪೋಣಿಸುವಿಕೆ(concatenation), ಹುಡುಕುವುದು(searching) ಮುಂತಾದವುಗಳನ್ನು ಮಾಡಬಹುದು. | |
00:44 | ಕೆಲವು ಸ್ಟ್ರಿಂಗ್ ಲೈಬ್ರರಿ ಫಂಕ್ಷನ್ ಗಳನ್ನು ನೋಡೋಣ. | |
00:48 | ಇಲ್ಲಿ ನಾವು ಎಸ್ ಟಿ ಆರ್ ಎನ್ ಸಿ ಪಿ ವೈ(strncpy) ಫಂಕ್ಷನ್ ಅನ್ನು ನೋಡೋಣ. | |
00:52 | ಇದರ ಸಿಂಟ್ಯಾಕ್ಸ್ ಹೀಗಿದೆ : strncpy ಕೇರ್(char) ಎಸ್ ಟಿ ಆರ್ ಒನ್(str1) char str2 ಮತ್ತು ಇಂಟ್(int) n | |
01:02 | ಇದು str2 ನ ಮೊದಲ n ಅಕ್ಷರಗಳನ್ನು str1 ಗೆ ನಕಲು ಮಾಡುತ್ತದೆ. | |
01:09 | ಉದಾಹರಣೆಗೆ, char strncpy char ಹಲೋ(hello) char ವರ್ಲ್ಡ್(world) ಕೊಮ ಎರಡು(2) | |
01:16 | ಇದರ ಔಟ್ ಪುಟ್ ಡಬ್ಲು ಒ ಎಲ್ ಎಲ್ ಒ. | |
01:21 | ಇಲ್ಲಿ, ಡಬ್ಲು ಒ ಎಂಬುದು ಸ್ಟ್ರಿಂಗ್ ಟು ಇಂದ ಮತ್ತು ಉಳಿದ ಅಕ್ಷರಗಳು ಸ್ಟ್ರಿಂಗ್ ಒನ್ ಇಂದ ಇವೆ. | |
01:29 | ಈಗ ನಾವು, ಎಸ್ ಟಿ ಆರ್ ಎನ್ ಸಿ ಎಮ್ ಪಿ(strncmp) ಫಂಕ್ಷನ್ ಅನ್ನು ನೋಡೋಣ. ಇದರ ಸಿಂಟ್ಯಾಕ್ಸ್ ಹೀಗಿದೆ, strncmp, char str1, char str2 ಮತ್ತು int n. | |
01:42 | ಇದು, ಸ್ಟ್ರಿಂಗ್ ಟು ವಿನ ಮೊದಲ ಎನ್ ಕ್ಯಾರೆಕ್ಟರ್ ಗಳನ್ನು ಸ್ಟ್ರಿಂಗ್ ಒನ್ ನೊಂದಿಗೆ ಹೋಲಿಸುತ್ತದೆ. | |
01:48 | ಉದಾಹರಣೆಗೆ, int strncmp, char ಐಸ್(ice), char ಐಸ್ಕ್ರೀಮ್ (icecream), ಮತ್ತು ಎರಡು. | |
01:55 | ಇದರ ಔಟ್ ಪುಟ್ ಸೊನ್ನೆ. | |
01:58 | ಈಗ ನಾವು, ಈ ಲೈಬ್ರರಿ ಫಂಕ್ಷನ್ ಗಳನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ. | |
02:02 | ನಾನೀಗ, ಕೆಲವು ಸಾಮಾನ್ಯವಾಗಿ ಉಪಯೋಗಿಸುವ ಸ್ಟ್ರಿಂಗ್ ಫಂಕ್ಷನ್ ಗಳನ್ನು ತೋರಿಸುತ್ತೇನೆ. | |
02:07 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ. | |
02:10 | ಅದನ್ನು ಒಪನ್ ಮಾಡುತ್ತೇನೆ. | |
02:12 | ಇಲ್ಲಿ ಸ್ಟ್ರಿಂಗ್ ನ ಉದ್ದವನ್ನು ಕಂಡುಹಿಡಿಯಲು ಫಂಕ್ಷನ್ ಅನ್ನು ನೋಡೋಣ. | |
02:15 | ನಮ್ಮ ಫೈಲ್ ನ ಹೆಸರು ಎಸ್ ಟಿ ಆರ್ ಎಲ್ ಇ ಎನ್ ಡಾಟ್ ಸಿ (strlen.c) ಎಂಬುದನ್ನು ಗಮನದಲ್ಲಿಡಿ. | |
02:20 | ಇಲ್ಲಿ, ನಾವು ಸ್ಟ್ರಿಂಗ್ ನ ಉದ್ದವನ್ನು ಕಂಡುಹಿಡಿಯೋಣ. | |
02:23 | ಎಸ್ ಟಿ ಡಿ ಐ ಒ ಡಾಟ್ ಹೆಚ್ ಮತ್ತು ಸ್ಟ್ರಿಂಗ್ ಡಾಟ್ ಹೆಚ್, ಇವು ನಮ್ಮ ಹೆಡರ್ ಫೈಲ್ ಗಳು. | |
02:29 | ಇದು ನಮ್ಮ ಮೈನ್ ಫಂಕ್ಷನ್. | |
02:31 | ಇಲ್ಲಿ ಎ ಆರ್ ಆರ್ (arr) ಎಂದು, ಒಂದು ಕ್ಯಾರೆಕ್ಟರ್ ವೇರಿಯೇಬಲ್ ಇದೆ. | |
02:35 | ಇದು ಅಶ್ವಿನಿ ಎಂದು ಮೌಲ್ಯವನ್ನು ಹೊಂದಿದೆ. | |
02:38 | ಲೆನ್ ಒನ್ ಎಂದು ಒಂದು ಇಂಟಿಜರ್ ವೇರಿಯೇಬಲ್ ಇದೆ. | |
02:42 | ಇಲ್ಲಿ, ಸ್ಟ್ರಿಂಗ್ ನ ಉದ್ದವನ್ನು strlen ಎಂಬ ಫಂಕ್ಷನ್ ಇಂದ ಪಡೆಯಬಹುದು. | |
02:48 | ಇದರ ಫಲಿತಾಂಶವು ಲೆನ್ ಒನ್ (len1) ನಲ್ಲಿ ಇರುತ್ತದೆ. | |
02:52 | ನಂತರ, ನಾವು ಸ್ಟ್ರಿಂಗ್ ಅನ್ನು ಮತ್ತು ಅದರ ಉದ್ದವನ್ನು ಪ್ರಿಂಟ್ ಮಾಡುತ್ತೇವೆ, | |
02:56 | ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. | |
02:59 | ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. | |
03:01 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. | |
03:09 | ಕಂಪೈಲ್ ಮಾಡಲು, gcc ಸ್ಪೇಸ್ strlen.c (ಎಸ್ ಟಿ ಆರ್ ಎಲ್ ಇ ಎನ್ ಡಾಟ್ ಸಿ) ಸ್ಪೇಸ್ –o (ಹೈಫನ್ ಒ) ಸ್ಪೇಸ್ str1(ಎಸ್ ಟಿ ಆರ್ ಒನ್) ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. | |
03:19 | ./ str1( ಡಾಟ್ ಸ್ಲ್ಯಾಶ್ ಎಸ್ ಟಿ ಆರ್ ಒನ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | |
03:24 | ಔಟ್ ಪುಟ್ ಹೀಗೆ ತೋರಿಸುತ್ತದೆ, | |
03:26 | string = Ashwini Length = 7(ಸ್ಟ್ರಿಂಗ್ ಈಸ್ ಈಕ್ವಲ್ ಟು ಅಶ್ವಿನಿ ಲೆಂತ್ ಈಸ್ ಈಕ್ವಲ್ ಟು ಸೆವೆನ್) | |
03:30 | ಇಲ್ಲಿ ನೀವು ಎಣಿಸಬಹುದು, ಒಂದು, ಎರಡು, ಮೂರು, ನಾಲ್ಕು, ಐದು, ಆರು ಮತ್ತು ಏಳು. | |
03:37 | ಮತ್ತೊಂದು ಸ್ಟ್ರಿಂಗ್ ಫಂಕ್ಷನ್ ಅನ್ನು ನೋಡೋಣ. | |
03:40 | ಇಲ್ಲಿ, ನಾವು ಸ್ಟ್ರಿಂಗ್ ಅನ್ನು ನಕಲು ಮಾಡಲು ಫಂಕ್ಷನ್ ಅನ್ನು ನೋಡೋಣ. | |
03:43 | ನಮ್ಮ ಫೈಲ್ ನ ಹೆಸರು strcpy.c (ಎಸ್ ಟಿ ಆರ್ ಸಿ ಪಿ ವೈ ಡಾಟ್ ಸಿ) ಎಂಬುದನ್ನು ಗಮನದಲ್ಲಿಡಿ. | |
03:48 | ಇಲ್ಲಿ, ನಾವು ಮೂಲ ಸ್ಟ್ರಿಂಗ್ ಅನ್ನು ಉದ್ದೇಶಿತ ಸ್ಟ್ರಿಂಗ್ ಗೆ ನಕಲು ಮಾಡುತ್ತದೆ. | |
03:53 | ಇಲ್ಲಿ, ಸೋರ್ಸ್ ಸ್ಟ್ರಿಂಗ್ ನಲ್ಲಿ ಐಸ್ ಎಂದಿದೆ, ಇದು ಟಾರ್ಗೆಟ್ ಸ್ಟ್ರಿಂಗ್ ಗೆ ನಕಲು ಆಗುತ್ತದೆ. | |
03:59 | ಇದು ನಮ್ಮ ಎಸ್ ಟಿ ಆರ್ ಸಿ ಪಿ ವೈ ಫಂಕ್ಷನ್. | |
04:02 | ಇಲ್ಲಿ ನಾವು ಸೋರ್ಸ್ ಸ್ಟ್ರಿಂಗ್ ಮತ್ತು ಟಾರ್ಗೆಟ್ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುತ್ತೇವೆ. | |
04:07 | ಇದನ್ನು ಎಕ್ಸಿಕ್ಯೂಟ್ ಮಾಡಿ ನೋಡೋಣ. | |
04:09 | ಟರ್ಮಿನಲ್ ಗೆ ಹಿಂದಿರುಗಿ. | |
04:11 | ಕಂಪೈಲ್ ಮಾಡಲು, gcc ಸ್ಪೇಸ್ strcpy.c(ಎಸ್ ಟಿ ಆರ್ ಸಿ ಪಿ ವೈ ಡಾಟ್ ಸಿ) ಸ್ಪೇಸ್ –o(ಹೈಫನ್ ಒ) ಸ್ಪೇಸ್ str2(ಎಸ್ ಟಿ ಆರ್ ಟು)ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | |
04:20 | (ಡಾಟ್ ಸ್ಲ್ಯಾಶ್) ./ str2 ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | |
04:24 | ಈ ರೀತಿಯಲ್ಲಿ ಔಟ್ ಪುಟ್ ತೋರುತ್ತದೆ, | |
04:26 | source string = Ice (ಸೋರ್ಸ್ ಸ್ಟ್ರಿಂಗ್ ಈಸ್ ಈಕ್ವಲ್ ಟು ಐಸ್) | |
04:29 | target string = Ice (ಟಾರ್ಗೆಟ್ ಸ್ಟ್ರಿಂಗ್ ಈಸ್ ಈಕ್ವಲ್ ಟು ಐಸ್) | |
04:32 | ಈಗ ಮತ್ತೊಂದು ಸ್ಟ್ರಿಂಗ್ ಫಂಕ್ಷನ್ ಅನ್ನು ನೋಡೋಣ. | |
04:34 | ಈಗ ನಾವು ಸ್ಟ್ರಿಂಗ್ ಅನ್ನು ಹೋಲಿಸುವ ಫಂಕ್ಷನ್ ಅನ್ನು ನೋಡೋಣ. | |
04:37 | ನಮ್ಮ ಫೈಲ್ ನ ಹೆಸರು strcmp.c (ಎಸ್ ಟಿ ಆರ್ ಸಿ ಎಮ್ ಪಿ ಡಾಟ್ ಸಿ) ಎಂದು ಗಮನದಲ್ಲಿಡಿ. | |
04:42 | ಇಲ್ಲಿ, ನಾವು ಎರಡು ಸ್ಟ್ರಿಂಗ್ ಗಳನ್ನು ಹೋಲಿಸುತ್ತೇವೆ. | |
04:46 | ಇಲ್ಲಿ, str1 ಮತ್ತು str2 ಎಂದು ಎರಡು ಕ್ಯಾರೆಕ್ಟರ್ ವೇರಿಯೇಬಲ್ ಗಳಿವೆ. | |
04:52 | str1 ನಲ್ಲಿ ಐಸ್ ಎಂದು ಮೌಲ್ಯವಿದೆ, ಮತ್ತು str2 ನಲ್ಲಿ ಕ್ರೀಮ್ ಎಂದಿದೆ. | |
04:58 | ಇಲ್ಲಿ, i ಮತ್ತು j ಎಂದು ಇಂಟಿಜರ್ ವೇರಿಯೇಬಲ್ ಗಳಿವೆ. | |
05:03 | ಇಲ್ಲಿ, ನಾವು strcmp ಎಂಬ ಫಂಕ್ಷನ್ ಉಪಯೋಗಿಸಿ, ಸ್ಟ್ರಿಂಗ್ ಗಳನ್ನು ಹೋಲಿಸುತ್ತೇವೆ. | |
05:08 | ಇಲ್ಲಿ, str1 ಅನ್ನು ಅಂದರೆ ice ಅನ್ನು cream(ಕ್ರೀಮ್) ನೊಂದಿಗೆ ಹೋಲಿಸುತ್ತಿದ್ದೇವೆ. | |
05:14 | ಇದರ ಫಲಿತಾಂಶವನ್ನು i ನಲ್ಲಿ ಇಡುತ್ತೇವೆ. | |
05:16 | ಇಲ್ಲಿ, ಸ್ಟ್ರಿಂಗ್ ಟು ಅನ್ನು ಅಂದರೆ, ಕ್ರೀಮ್ ಅನ್ನು ಕ್ರೀಮ್ ನೊಂದಿಗೆ, ಹೋಲಿಸುತ್ತೇವೆ. | |
05:23 | ಇದರ ಫಲಿತಾಂಶವನ್ನು, j ಯಲ್ಲಿಡುತ್ತೇವೆ. | |
05:25 | ನಂತರ ನಾವು ಎರಡೂ ಫಲಿತಾಂಶವನ್ನು ಪ್ರಿಂಟ್ ಮಾಡುತ್ತೇವೆ, | |
05:28 | ಮತ್ತು, ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. | |
05:31 | ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. | |
05:33 | ನಮ್ಮ ಟರ್ಮಿನಲ್ ಗೆ ಹಿಂದಿರುಗಿ. | |
05:35 | ಕಂಪೈಲ್ ಮಾಡಲು, gcc ಸ್ಪೇಸ್ strcmp.c ಸ್ಪೇಸ್ ಹೈಫನ್ ಒ(-o) ಸ್ಪೇಸ್ str3 ಎಂದು ಟೈಪ್ ಮಾಡಿ. | |
05:46 | Enter ಕೀಯನ್ನು ಒತ್ತಿ.(ಡಾಟ್ ಸ್ಲ್ಯಾಶ್) ./ str3 ಟೈಪ್ ಮಾಡಿ. | |
05:50 | 1,0 ಎಂದು ಔಟ್ ಪುಟ್ ತೋರಿಸುತ್ತದೆ. | |
05:54 | ಪ್ರೊಗ್ರಾಮ್ ಗೆ ಹಿಂತಿರುಗಿ. | |
05:56 | ಇಲ್ಲಿ ಒಂದು ಮತ್ತು ಇಲ್ಲಿ ಸೊನ್ನೆ ಎಂದು ಪಡೆಯುತ್ತೇವೆ. | |
06:01 | ನಮ್ಮ ಸ್ಲೈಡ್ ಗೆ ಹಿಂತಿರುಗೋಣ. | |
06:04 | ಸಾರಾಂಶ ತಿಳಿಯೋಣ. | |
06:06 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು :ಸ್ಟ್ರಿಂಗ್ ಲೈಬ್ರರಿ ಫಂಕ್ಷನ್ ಗಳು | |
06:09 | strlen(ಎಸ್ ಟಿ ಆರ್ ಎಲ್ ಇ ಎನ್) | |
06:11 | strcpy(ಎಸ್ ಟಿ ಆರ್ ಸಿ ಪಿ ವೈ) | |
06:13 | strcmp(ಎಸ್ ಟಿ ಆರ್ ಸಿ ಎಮ್ ಪಿ), strncpy(ಎಸ್ ಟಿ ಆರ್ ಎನ್ ಸಿ ಪಿ ವೈ) | |
06:16 | ಮತ್ತು strncmp(ಎಸ್ ಟಿ ಆರ್ ಎನ್ ಸಿ ಎಮ್ ಪಿ) | |
06:19 | ಸ್ಟ್ರಿಂಗ್ ಬೆಸ್ಟ್(best) ಅನ್ನು ಸ್ಟ್ರಿಂಗ್ ಬಸ್(bus) ಜೊತೆಗೆ ಜೋಡಿಸಲು ಒಂದು ಸಿ ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. | |
06:25 | ಸಲಹೆ: strcat (ಎಸ್ ಟಿ ಆರ್ ಸಿ ಎ ಟಿ )char str1(ಕ್ಯಾರ್ ಎಸ್ ಟಿ ಆರ್ ಒನ್) char str2(ಕ್ಯಾರ್ ಎಸ್ ಟಿ ಆರ್ ಟು) | |
06:32 | ಮತ್ತು, ಸ್ಟ್ರಿಂಗ್ ಲೈಬ್ರರಿ ಯ ಇನ್ನಿತರ ಫಂಕ್ಷನ್ ಗಳನ್ನು ಉಪಯೋಗಿಸಲು ಪ್ರಯತ್ನಿಸಿ. | |
06:36 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. | |
06:39 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. | |
06:42 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. | |
06:46 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. | |
06:52 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. | |
06:56 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. | |
07:03 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. | |
07:08 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. | |
07:15 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. | |
07:20 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | |
07:24 | ಧನ್ಯವಾದಗಳು. |