C-and-Cpp/C3/Arrays/Kannada

From Script | Spoken-Tutorial
Revision as of 18:05, 17 March 2017 by PoojaMoolya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 c ಮತ್ತು c++ ನಲ್ಲಿ ಅರೇಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು :
00:09 ಅರೇ ಎಂದರೇನು?
00:11 ಅರೇ ಯನ್ನು ಡಿಕ್ಲೇರ್ ಮಾಡುವ ಬಗೆ
00:13 ಅರೇ ಯ ಇನಿಶಿಯಲೈಸೇಶನ್
00:16 ಅರೇ ಗೆ ಉದಾಹರಣೆಗಳು
00:18 ನಾವು ಕೆಲವು ಸಾಮಾನ್ಯವಾಗಿ ಆಗುವ ಎರರ್ ಗಳನ್ನೂ, ಅವುಗಳ ಪರಿಹಾರವನ್ನೂ ನೋಡೋಣ.
00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.04 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.
00:36 ಅರೇ ಗೆ ಪೀಠಿಕೆಯೊಂದಿಗೆ ಪ್ರಾರಂಭಿಸೋಣ.
00:39 ಅರೇ ಎಂಬುದು ಡೇಟಾ ಅಥವಾ ಒಂದೇ ರೀತಿಯ ಡೇಟಾ ಟೈಪ್ ನ ಅಂಶಗಳ ಸಂಗ್ರಹವಾಗಿದೆ.
00:44 ಅರೇ ಯ ಇಂಡೆಕ್ಸ್, ಸೊನ್ನೆಯಿಂದ ಪ್ರಾರಂಭವಾಗುತ್ತದೆ.
00:48 ಮೊದಲನೇ ಡೇಟಾ, ಸೊನ್ನೆ ಇಂಡೆಕ್ಸ್ ನಲ್ಲಿ ಇರುತ್ತದೆ.
00:52 ಅರೇಗಳಲ್ಲಿ ಮೂರು ವಿಧ.
00:55 ಒಂದೇ ಆಯಾಮದ ಅರೇ
00:57 ಎರಡು ಆಯಾಮದ ಅರೇ ಮತ್ತು
00:59 ಬಹು ಆಯಾಮದ ಅರೇ
01:01 ನಾವು ಈ ಟ್ಯುಟೋರಿಯಲ್ ನಲ್ಲಿ ಒಂದು ಆಯಾಮದ ಅರೇ ಯ ಬಗೆಗೆ ಚರ್ಚೆ ಮಾಡಲಾಗುವುದು.
01:06 ಒಂದು ಆಯಾಮದ ಅರೇ ಯನ್ನು ಡಿಕ್ಲೇರ್ ಮಾಡುವುದು ಹೇಗೆಂದು ನೋಡೋಣ.
01:09 ಇದರ ಸಿಂಟ್ಯಾಕ್ಸ್ ಹೀಗಿದೆ
01:11 ಡೇಟಾ ಟೈಪ್, ಅರೇ ಯ ಹೆಸರು ಮತ್ತು ಅರೇಯ ಸೈಸ್
01:16 ಉದಾಹರಣೆಗೆ, ಇಲ್ಲಿ ನಾವು ಐದು ಎಲಿಮೆಂಟ್ ಗಳ, star ಎಂಬ ಇಂಟಿಜರ್ ಅರೇ ಯನ್ನು ಡಿಕ್ಲೇರ್ ಮಾಡಿದ್ದೇವೆ.
01:24 star ಅರೇ ಯ ಇಂಡೆಕ್ಸ್ ಸೊನ್ನೆಯಿಂದ ಆರಂಭವಾಗಿ ನಾಲ್ಕರವರೆಗೆ ಇರುತ್ತದೆ.
01:29 ನಾವು ಅರೇ ಯ ಡಿಕ್ಲೇರೇಶನ್ ಅನ್ನು ನೋಡಿದೆವು.
01:32 ಈಗ, ನಾವು ಅರೇ ಯನ್ನು ಇನಿಶಿಯಲೈಸ್ ಮಾಡುವುದನ್ನು ನೋಡೋಣ.
01:35 ಇದಕ್ಕೆ ಸಿಂಟ್ಯಾಕ್ಸ್ ಹೀಗಿದೆ :
01:38 ಡೇಟಾ ಟೈಪ್, ಅರೇ ಯ ಹೆಸರು, ಸೈಸ್ ಈಸ್ ಈಕ್ವಲ್ ಟು ಎಲಿಮೆಂಟ್ಸ್
01:44 ಉದಾಹರಣೆಗೆ, ಇಲ್ಲಿ ನಾವು ಇಂಟಿಜರ್ ಅರೇ star ಮತ್ತು ಅದರ ಸೈಸ್ ಮೂರು ಎಂದು ಡಿಕ್ಲೇರ್ ಮಾಡಿದ್ದೇವೆ. ಅರೇ ಯ ಎಲಿಮೆಂಟ್ ಗಳು ಒಂದು, ಎರಡು ಮತ್ತು ಮೂರು.
01:54 ಇಲ್ಲಿ, star ನ ಇಂಡೆಕ್ಸ್, ಸೊನ್ನೆಯಿಂದ ಎರಡರವರೆಗೆ ಇರುತ್ತದೆ.
01:59 ಈಗ ಉದಾಹರಣೆಗಳನ್ನು ನೋಡೋಣ.
02:01 ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ.
02:04 ಹಾಗಾಗಿ, ಅದನ್ನು ಓಪನ್ ಮಾಡುತ್ತೇನೆ.
02:06 ನಮ್ಮ ಫೈಲ್ ನ ಹೆಸರು array.c ಎಂದು ಗಮನದಲ್ಲಿಡಿ.
02:10 ಈ ಪ್ರೊಗ್ರಾಮ್ ನಲ್ಲಿ, ನಾವು ಅರೇಯಲ್ಲಿ ಇಡಲಾದ ಎಲಿಮೆಂಟ್ ಗಳ ಮೊತ್ತವನ್ನು ಕಂಡುಹಿಡಿಯುತ್ತೇವೆ.
02:16 ಈಗ, ಕೋಡ್ ಅನ್ನು ವಿವರಿಸುತ್ತೇನೆ.
02:18 ಇದು ನಮ್ಮ ಹೆಡರ್ ಫೈಲ್.
02:20 ಇದು ನಮ್ಮ ಮೈನ್ ಫಂಕ್ಷನ್.
02:22 ಇಲ್ಲಿ, ನಾವು star ಎಂಬ ಅರೇಯನ್ನು ಸೈಸ್ ಮೂರು ಎಂದು ಡಿಕ್ಲೇರ್ ಮಾಡಿ, ಇನಿಶಿಯಲೈಸ್ ಮಾಡಿದ್ದೇವೆ.
02:28 ಅರೇಯ ಎಲಿಮೆಂಟ್ ಗಳು ನಾಲ್ಕು, ಐದು ಮತ್ತು ಆರು.
02:33 ನಂತರ, ನಾವು sum ಎಂದು ಒಂದು ಇಂಟಿಜರ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
02:36 ಇಲ್ಲಿ, ನಾವು ಅರೇಯ ಎಲಿಮೆಂಟ್ ಗಳನ್ನು ಕೂಡಿಸಿ, ಮೊತ್ತವನ್ನು sum ನಲ್ಲಿ ಇಡುತ್ತೇವೆ.
02:41 ನಾಲ್ಕು ಇಂಡೆಕ್ಸ್ ಸೊನ್ನೆಯಲ್ಲಿರುತ್ತದೆ, ಐದು ಇಂಡೆಕ್ಸ್ ಒಂದರಲ್ಲಿರುತ್ತದೆ ಮತ್ತು ಆರು ಇಂಡೆಕ್ಸ್ ಎರಡರಲ್ಲಿರುತ್ತದೆ ಎಂಬುದನ್ನು ಗಮನದಲ್ಲಿಡಿ.
02:50 ನಂತರ ನಾವು sum ಅನ್ನು ಪ್ರಿಂಟ್ ಮಾಡುತ್ತೇವೆ.
02:52 ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
02:54 ಈಗ save ಅನ್ನು ಒತ್ತಿ.
02:57 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
02:59 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
03:09 ಕಂಪೈಲ್ ಮಾಡಲು, gcc array.c -o array (gcc ಸ್ಪೇಸ್ ಅರೇ ಡಾಟ್ ಸಿ ಸ್ಪೇಸ್ ಹೈಫನ್ ಒ ಅರೇ) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
03:19 ಎಕ್ಸಿಕ್ಯೂಟ್ ಮಾಡಲು, ./array (ಡಾಟ್ ಸ್ಲ್ಯಾಶ್ ಅರೇ) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
03:24 ಇಲ್ಲಿ ಔಟ್ ಪುಟ್ ಹೀಗೆ ತೋರಿಸುತ್ತದೆ,
03:26 The sum is 15 (ದ ಸಮ್ ಈಸ್ ಫಿಫ್ಟೀನ್)
03:28 ಈಗ ಕೆಲವು ಸಾಮನ್ಯ ಎರರ್ ಗಳನ್ನು, ಮತ್ತು ಅವುಗಳನ್ನು ಸರಿಪಡಿಸುವ ವಿಧಾನವನ್ನು ನೋಡೋಣ.
03:32 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
03:34 ಇಲ್ಲಿ, ಲೈನ್ ನಂಬರ್ ನಾಲ್ಕರಲ್ಲಿ ಕರ್ಲಿ ಬ್ರಾಕೆಟ್ ಅನ್ನು ಬಿಡುತ್ತೇವೆ ಎಂದೆಣಿಸಿ.
03:39 Save ಅನ್ನು ಒತ್ತಿ, ಈಗ ಏನಾಗುತ್ತದೆ ಎಂಬುದನ್ನು ನೋಡೋಣ.
03:42 ಟರ್ಮಿನಲ್ ಗೆ ಹಿಂದಿರುಗಿ.
03:44 ಮೊದಲಿನಂತೆ ಕಂಪೈಲ್ ಮಾಡೋಣ.
03:47 ನಾವು ಒಂದು ಎರರ್ ಅನ್ನು ನೋಡಬಹುದು.
03:49 Invalid initializer and Expected identifier or bracket before numeric constant. (ಇನ್ವ್ಯಾಲೀಡ್ ಇನಿಶಿಯಲೈಸರ್ ಎಂಡ್ ಎಕ್ಸ್ಪೆಕ್ಟೆಡ್ ಐಡೆಂಟಿಫೈರ್ ಆರ್ ಬ್ರಾಕೆಟ್ ಬಿಫೊರ್ ನ್ಯುಮರಿಕ್ ಕಾಂಸ್ಟಂಟ್).
03:56 ಏಕೆಂದರೆ, ಅರೇ ಗಳನ್ನು ಕರ್ಲಿ ಬ್ರಾಕೆಟ್ ನ ಒಳಗೆ ಮಾತ್ರ ಇನಿಶಿಯಲೈಸ್ ಮಾಡಬೇಕು.
04:01 ಪ್ರೊಗ್ರಾಮ್ ಗೆ ಹಿಂತಿರುಗಿ. ಈ ಎರರ್ ಅನ್ನು ಸರಿಪಡಿಸೋಣ.
04:04 ಇಲ್ಲಿ, ಲೈನ್ ನಂಬರ್ ನಾಲ್ಕರಲ್ಲಿ ಕರ್ಲಿ ಬ್ರಾಕೆಟ್ ಅನ್ನು ಟೈಪ್ ಮಾಡಿ.
04:09 ಈಗ save ಅನ್ನು ಒತ್ತಿ.
04:12 ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂದಿರುಗಿ.
04:15 ಮೊದಲಿನಂತೆ ಕಂಪೈಲ್ ಮಾಡೋಣ. ಮೊದಲಿನಂತೆ ಎಕ್ಸಿಕ್ಯೂಟ್ ಮಾಡೋಣ.
04:19 ಹೌದು, ಇದು ಕೆಲಸ ಮಾಡುತ್ತಿದೆ.
04:21 ಈಗ, ನಾವು ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಎಕ್ಸಿಕ್ಯೂಟ್ ಮಾಡೋಣ.
04:25 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
04:28 ಇಲ್ಲಿ ಕೆಲವು ಕೋಡ್ ಅನ್ನು ಬದಲಾಯಿಸುತ್ತೇನೆ.
04:30 ಮೊದಲು ನಿಮ್ಮ ಕೀ ಬೋರ್ಡ್ ನಲ್ಲಿ Shift , Ctrl ಮತ್ತು S ಕೀಗಳನ್ನು ಒಮ್ಮೆಗೇ ಒತ್ತಿ.
04:38 ಈಗ, ಫೈಲ್ ಅನ್ನು ಡಾಟ್ ಸಿಪಿಪಿ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ, save ಅನ್ನು ಒತ್ತಿ.
04:44 ಹೆಡರ್ ಫೈಲ್ ಅನ್ನು iostream(ಐ ಒ ಸ್ಟ್ರೀಮ್) ಎಂದು ಬದಲಾಯಿಸೋಣ.
04:49 ಈಗ ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಸೇರಿಸಿ.
04:55 ಅರೇ ಯ ಡಿಕ್ಲೇರೇಶನ್ ಮತ್ತು ಇನಿಶಿಯಲೈಸೇಶನ್ c++ ನಲ್ಲಿಯೂ ಅದೇ ರೀತಿ ಇರುತ್ತದೆ.
05:01 ಹಾಗಾಗಿ ಇಲ್ಲಿ ಏನನ್ನೂ ಬದಲಾಯಿಸುವ ಅಗತ್ಯವಿಲ್ಲ.
05:04 ಈಗ ಪ್ರಿಂಟ್ ಎಫ್ ಸ್ಟೇಟ್ಮೆಂಟ್ ನ ಬದಲು ಸಿಔಟ್ ಸ್ಟೇಟ್ಮೆಂಟ್ ಟೈಪ್ ಮಾಡಿ.
05:09 ಫಾರ್ಮ್ಯಾಟ್ ಸ್ಪೆಸಿಫೈರ್ ಮತ್ತು ಬ್ಯಾಕ್ ಸ್ಲ್ಯಾಶ್ ಎನ್ ಅನ್ನು ಡಿಲೀಟ್ ಮಾಡಿ, ಈಗ comma ಅನ್ನು ಡಿಲೀಟ್ ಮಾಡಿ, ಎರಡು ಓಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
05:17 ಇಲ್ಲಿ ಬ್ರಾಕೆಟ್ ಅನ್ನು ಡಿಲೀಟ್ ಮಾಡಿ. ಪುನಃ ಎರಡು ಓಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ ಮತ್ತು ಡಬಲ್ ಕೋಟ್ಸ್ ನ ಒಳಗೆ ಬ್ಯಾಕ್ ಸ್ಲ್ಯಾಶ್ ಎನ್ ಅನ್ನು ಟೈಪ್ ಮಾಡಿ.
05:26 ಈಗ save ಅನ್ನು ಒತ್ತಿ.
05:29 ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ.
05:32 ಕಂಪೈಲ್ ಮಾಡಲು, g++ array.cpp -o array1(g++ ಸ್ಪೇಸ್ ಅರೇ ಡಾಟ್ ಸಿಪಿಪಿ ಸ್ಪೇಸ್ ಹೈಫನ್ ಒ ಸ್ಪೇಸ್ ಅರೇ ಒನ್) ಎಂದು ಟೈಪ್ ಮಾಡಿ.
05:42 array.c (ಅರೇ ಡಾಟ್ ಸಿ) ಫೈಲ್ ನ ಔಟ್ ಪುಟ್ ಪಾರಾಮೀಟರ್ ಅನ್ನು ಉಳಿಸಿಕೊಳ್ಳಲು, ಇಲ್ಲಿ ನಾವು array1 (ಅರೇ ಒನ್) ಎಂದು ಟೈಪ್ ಮಾಡಿದ್ದೇವೆ.
05:51 ಈಗ Enter ಒತ್ತಿ.
05:54 ಎಕ್ಸಿಕ್ಯೂಟ್ ಮಾಡಲು, ./array1(ಡಾಟ್ ಸ್ಲ್ಯಾಶ್ ಅರೇ ಒನ್ ) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
05:59 The sum is 15 (ದ ಸಮ್ ಈಸ್ ಫಿಫ್ಟೀನ್) ಎಂದು ಔಟ್ ಪುಟ್ ತೋರಿಸುತ್ತದೆ.
06:02 ಇದು ನಮ್ಮ ಸಿ ಕೋಡ್ ನಂತೆಯೇ ಇರುವುದನ್ನು ನಾವು ಗಮನಿಸಬಹುದು.
06:07 ಈಗ, ನಾವು ಇನ್ನೊಂದು ಸಾಮಾನ್ಯ ಎರರ್ ಅನ್ನು ನೋಡೋಣ.
06:10 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
06:12 ಇಲ್ಲಿ, ಲೈನ್ ನಂಬರ್ ಏಳರಲ್ಲಿ, star ಒನ್ star ಟು ಮತ್ತು star ಥ್ರೀ ಎಂದು ಟೈಪ್ ಮಾಡುತ್ತೇನೆ ಎಂದೆಣಿಸಿ.
06:23 save ಅನ್ನು ಒತ್ತಿ.ಎಕ್ಸಿಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಹಿಂತಿರುಗಿ.
06:28 ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡುತ್ತೇನೆ.
06:30 ಮೊದಲಿನಂತೆ ಕಂಪೈಲ್ ಮಾಡೋಣ.
06:33 ಮೊದಲಿನಂತೆ ಎಕ್ಸಿಕ್ಯೂಟ್ ಮಾಡೋಣ.
06:36 ನಾವು ಅನಿರೀಕ್ಷಿತ ಔಟ್ ಪುಟ್ ಅನ್ನು ಪಡೆಯುತ್ತೇವೆ.
06:39 ಏಕೆಂದರೆ, ಅರೇ ಯ ಇಂಡೆಕ್ಸ್ ಸೊನ್ನೆಯಿಂದ ಆರಂಭವಾಗುತ್ತದೆ.
06:43 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. ಇಲ್ಲಿ ಅರೇ ಯ ಇಂಡೆಕ್ಸ್ ಒಂದರಿಂದ ಆರಂಭವಾಗಿರುವುದನ್ನು ನೋಡಬಹುದು.
06:49 ಹಾಗಾಗಿ, ಇದು ಎರರ್ ಕೊಡುತ್ತಿದೆ. ಈ ಎರರ್ ಅನ್ನು ಸರಿಪಡಿಸೋಣ.
06:54 ಇಲ್ಲಿ ಸೊನ್ನೆ, ಒಂದು, ಎರಡು ಎಂದು ಟೈಪ್ ಮಾಡಿ, save ಅನ್ನು ಒತ್ತಿ.
07:02 ಎಕ್ಸಿಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಹಿಂತಿರುಗಿ.
07:05 ಮೊದಲಿನಂತೆ ಕಂಪೈಲ್ ಮಾಡೋಣ. ಮೊದಲಿನಂತೆ ಎಕ್ಸಿಕ್ಯೂಟ್ ಮಾಡೋಣ.
07:09 ಹೌದು, ಇದು ಕೆಲಸ ಮಾಡುತ್ತಿದೆ.
07:12 ಈಗ, ನಮ್ಮ ಸ್ಲೈಡ್ ಗೆ ಹಿಂದಿರುಗೋಣ.
07:14 ಸಾರಾಂಶ ತಿಳಿಯೋಣ.
07:16 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು :
07:19 ಅರೇ ಗಳು, ಒಂದು ಆಯಾಮದ ಅರೇ ಯನ್ನು ಡಿಕ್ಲೇರ್ ಮಾಡುವುದು.
07:23 ಒಂದು ಆಯಾಮದ ಅರೇ ಯನ್ನು ಇನಶಿಯಲೈಸ್ ಮಾಡುವುದು.
07:26 ಉದಾಹರಣೆಗೆ, int(ಇಂಟ್) star ಥ್ರೀ ಈಸ್ ಈಕ್ವಲ್ ಟು ಫೋರ್ ಫೈವ್ ಸಿಕ್ಸ್
07:31 ಅರೇಯ ಎಲಿಮೆಂಟ್ ಗಳನ್ನು ಕೂಡಿಸುವುದು, ಉದಾಹರಣೆಗೆ, sum ಈಸ್ ಈಕ್ವಲ್ ಟು star[0](ಸ್ಟಾರ್ ಝೀರೋ) ಪ್ಲಸ್ star[1]( ಸ್ಟಾರ್ ಒನ್) ಪ್ಲಸ್ star[2](ಸ್ಟಾರ್ ಟು).
07:40 ಅರೇ ಯ ಎಲಿಮೆಂಟ್ ಗಳ ಡಿಫರೆನ್ಸ್ ಅನ್ನು ಕಂಡುಹಿಡಿಯಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ.
07:47 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
07:50 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
07:53 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
07:57 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
08:03 ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
08:06 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
08:13 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
08:17 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
08:25 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು spoken-tutorial.org/nmeict-intro (ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ) ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
08:30 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Chetana, PoojaMoolya, Vasudeva ahitanal