C-and-Cpp/C2/Arithmetic-Operators/Kannada

From Script | Spoken-Tutorial
Revision as of 17:43, 17 March 2017 by PoojaMoolya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಸಿ ಮತ್ತು ಸಿ ಪ್ಲಸ್ ಪ್ಲಸ್(C++) ನಲ್ಲಿಅರಿಥ್ಮೆಟಿಕ್ ಆಪರೇಟರ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವ ಅಂಶಗಳು
00:10 ಅರಿಥ್ಮೆಟಿಕ್ ಆಪರೇಟರ್ ಗಳು : ಸಂಕಲನ ಉದಾಹರಣೆಗೆ a+b
00:14 ವ್ಯವಕಲನ ಉದಾಹರಣೆಗೆ a-b
00:18 ಭಾಗಾಕಾರ: ಉದಾಹರಣೆಗೆ : aಬೈb
00:20 ಗುಣಾಕಾರ ಉದಾಹರಣೆಗೆ a ಇಂಟು b
00:24 ಮಾಡ್ಯೂಲಸ್ಉದಾಹರಣೆಗೆ a ಪರ್ಸೆಂಟ್ b
00:27 ಈ ಟ್ಯುಟೋರಿಯಲ್ ಗಾಗಿ ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ನ ಆವೃತ್ತಿ 11.10 ಮತ್ತು gcc ಮತ್ತು g++ ಕಂಪೈಲರ್ನ ಆವೃತ್ತಿ 4.6.1 ಅನ್ನುಉಪಯೋಗಿಸಿದ್ದೇನೆ.
00:38 ನಾನೀಗ , ಅರಿಥ್ಮೆಟಿಕ್ ಆಪರೇಟರ್ ಗಳನ್ನು ಉಪಯೋಗಿಸುವ ಬಗೆಯನ್ನು c ಪ್ರೋಗ್ರಾಮ್ ನ ಸಹಾಯದಿಂದ ವಿವರಿಸುತ್ತೇನೆ.
00:44 ನಾನಿಗಾಗಲೇ ಪ್ರೋಗ್ರಾಮ್ ಅನ್ನು ಬರೆದಿದ್ದೇನೆ.
00:47 ಹಾಗಾಗಿ ನಾನು ಎಡಿಟರ್ ಅನ್ನು ಒಪನ್ ಮಾಡಿ, ಕೋಡ್ ಅನ್ನು ವಿವರಿಸುತ್ತೇನೆ.
00:49 ಅರಿಥ್ಮೆಟಿಕ್ ಆಪರೇಟರ್ ಗಳಿಗೆ c ಪ್ರೋಗ್ರಾಮ್ ಇಲ್ಲಿದೆ.
00:56 ಮೊದಲ ಎರಡು ಸ್ಟೇಟ್ಮೆಂಟ್ ಗಳಲ್ಲಿ ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಿ ಡಿಫೈನ್ ಮಾಡಲಾಗಿದೆ.
01:02 ಮುಂದಿನ ಎರಡು ಸ್ಟೇಟ್ಮೆಂಟ್ ಗಳಲ್ಲಿ a ಗೆ ಐದು ಎಂದೂ, ಮತ್ತು b ಗೆ ಎರಡು ಎಂದು ಮೌಲ್ಯವನ್ನು ಕೊಡಲಾಗಿದೆ.
01:10 ಈಗ, ಸಂಕಲನ ದ ಆಪರೇಟರ್ ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ.
01:14 a ಮತ್ತು b ಗಳ ಮೊತ್ತವು c ಯಲ್ಲಿ ಇರುತ್ತದೆ.
01:19 ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್ a ಮತ್ತು b ಯ ಮೊತ್ತವನ್ನು ಸ್ಕ್ರೀನ್ ನ ಮೇಲೆ ತೋರಿಸುತ್ತದೆ.
01:28 ಇಲ್ಲಿ, ಪರ್ಸೆಂಟ್ ಡಾಟ್ ಟು ಎಫ್ ಎಂಬುದು, ಡೆಸಿಮಲ್ ನ ನಂತರ ಎರಡು ಡಿಜಿಟ್ ಗಳ ಪ್ರಿಸಿಶನ್ ಅನ್ನು ಕೊಡುತ್ತದೆ.
01:37 ಮುಂದಿನ ಸ್ಟೇಟ್ಮೆಂಟ್ನಲ್ಲಿ a ಮತ್ತು b ಯ ಪ್ರೊಡಕ್ಟ್ ಅನ್ನು c ಯು ಹೊಂದಿರುತ್ತದೆ.
01:43 ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್ a ಮತ್ತು b ಯ ಪ್ರೊಡಕ್ಟ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸುತ್ತದೆ.
01:48 ಈ ಎರಡು ಆಪರೇಟರ್ ಗಳು ಹೇಗೆ ಕೆಲಸ ಮಾಡುತ್ತವೆ ಎಂದು ನೋಡೋಣ.
01:52 ಕೆಳಗಿನ ಸಾಲುಗಳನ್ನು ಕಮೆಂಟ್ ಮಾಡೋಣ.
01:55 ಸ್ಲ್ಯಾಶ್ ಆಸ್ಟರಿಕ್ಸ್ ಆಸ್ಟರಿಕ್ಸ್ ಸ್ಲ್ಯಾಶ್ ಎಂದು ಟೈಪ್ ಮಾಡಿ.
02:05 ಸೇವ್ ಅನ್ನು ಒತ್ತಿ.
02:07 ಫೈಲ್ ಅನ್ನು ಡಾಟ್ ಸಿ ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ.
02:10 ನಾನು ನನ್ನ ಫೈಲ್ ಅನ್ನು ಅರಿಥ್ಮೆಟಿಕ್ ಡಾಟ್ ಸಿ ಎಂದು ಸೇವ್ ಮಾಡಿದ್ದೇನೆ.
02:15 ನಿಮ್ಮ ಕೀಬೋರ್ಡ ನಲ್ಲಿCtrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
02:22 ಕಂಪೈಲ್ ಮಾಡಲು, ಹೀಗೆ ಟರ್ಮಿನಲ್ ನಲ್ಲಿ ಟೈಪ್ ಮಾಡಿ.
02:27 gcc space arithmetic.c space -0 space arith (Gccಸ್ಪೇಸ್ ಅರಿಥ್ಮೆಟಿಕ್ಡಾಟ್ ಸಿ ಸ್ಪೇಸ್ ಮೈನಸ್ ಒ ಸ್ಪೇಸ್ ಎ ಆರ್ ಐ ಟಿ ಎಚ್).
02:38 Enter ಕೀಯನ್ನು ಒತ್ತಿ.
02:40 ಕೋಡ್ ಅನ್ನು ಏಕ್ಸೆಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಎ ಆರ್ ಐ ಟಿ ಎಚ್ ಎಂದು ಟೈಪ್ ಮಾಡಿ,
02:48 Enter ಕೀಯನ್ನು ಒತ್ತಿ.
02:50 ಔಟ್ ಪುಟ್ ಸ್ಕ್ರೀನ್ ನ ಮೇಲೆ ಹೀಗೆ ಕಾಣುತ್ತದೆ .
02:54 Sum of 5 and 2 is 7.00 (ಸಮ್ ಆಫ್ ಫೈವ್ ಎಂಡ್ ಟು ಈಸ್ ಸೆವೆನ್ ಪಾಯಿಂಟ್ ಝಿರೋ ಝಿರೋ) ಮತ್ತು
02:59 Product of 5 and 2 is 10.00 (ಪ್ರಾಡಕ್ಟ್ ಆಫ್ ಫೈವ್ ಎಂಡ್ ಟು ಈಸ್ಟೆನ್ ಪಾಯಿಂಟ್ ಝಿರೋ ಝಿರೋ)
03:03 ಈಗ ವ್ಯವಕಲನದ ಆಪರೇಟರ್ ಅನ್ನು ನೀವೇ ಪ್ರಯತ್ನಿಸಬೇಕು.
03:08 ಸಂಕಲನದ ಆಪರೇಟರ್ ನ ಬದಲು ವ್ಯವಕಲನದ ಆಪರೇಟರ್ಅನ್ನು ಟೈಪ್ ಮಾಡಿ.
03:13 ಫಲಿತಾಂಶವು ಮೂರು ಎಂದು ಬರಬೇಕು.
03:18 ನಮ್ಮ ಪ್ರೋಗ್ರಾಮ್ ನ ಕೊನೆಯ ಸಾಲುಗಳಿಗೆ ಹಿಂತಿರುಗೋಣ.
03:23 ಈಗ, ನಾನು ಭಾಗಾಕಾರಕ್ಕೆ ಕೋಡ್ ಅನ್ನು ವಿವರಿಸುತ್ತೇನೆ.
03:26 ಇಲ್ಲಿ ಮತ್ತು ಇಲ್ಲಿಂದ ಮಲ್ಟಿ ಲೈನ್ ಕಾಮೆಂಟ್ ಅನ್ನು ತೆಗೆಯಿರಿ.
03:34 ಈ ಸ್ಟೇಟ್ಮೆಂಟ್ ಗಳಲ್ಲಿ c ಯು, a ಮತ್ತು b ಯ ಇಂಟಿಜರ್ ಡಿವಿಷನ್ ನ ಮೌಲ್ಯವನ್ನು ಹೊಂದಿರುತ್ತದೆ.
03:40 ಇಂಟಿಜರ್ ಡಿವಿಷನ್ ನಲ್ಲಿ ಫ್ರ್ಯಾಕ್ಷ್ಟನಲ್ ಭಾಗವು ಟ್ರಂಕೇಟ್ ಆಗಿರುತ್ತದೆ ಎಂಬುದನ್ನು ಗಮನಿಸಿ.
03:47 ಪ್ರಿಂಟ್ ಎಫ್ ಸ್ಟೇಟ್ಮೆಂಟ್, ಭಾಗಾಕಾರದ ಫಲಿತಾಂಶವನ್ನು ಸ್ಕ್ರೀನ್ ನ ಮೇಲೆ ತೋರಿಸುತ್ತದೆ.
03:57 ಇಲ್ಲಿ, ನಾವು ರಿಯಲ್ ಡಿವಿಶನ್ ಅನ್ನು ಮಾಡುತ್ತಿದ್ದೇವೆ.
04:02 ಇಲ್ಲಿ, ಎರಡರಲ್ಲಿ ಒಂದು ಆಪರಂಡ್ ಅನ್ನು ಫ್ಲೋಟ್ ಗೆ ಕಾಸ್ಟ್ ಮಾಡಬೇಕು.
04:10 ನಾವು ವೇರಿಯೇಬಲ್ a ಅನ್ನು ಟೈಪ್ ಕಾಸ್ಟ್ ಮಾಡಿದ್ದೇವೆ.
04:13 ಈಗ, ಒಂದು ಆಪರೇಶನ್ ನಲ್ಲಿ, a ಫ್ಲೋಟ್ ನಂತೆ ವರ್ತಿಸುತ್ತದೆ.
04:22 ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಸರಿಯಾದ ಭಾಗಾಕಾರದ ಫಲಿತಾಂಶವನ್ನು ಸ್ಕ್ರೀನ್ ನ ಮೇಲೆ ತೋರಿಸುತ್ತದೆ.
04:30 ರಿಟರ್ನ್ ಝೀರೋ ಎಂದು ಟೈಪ್ ಮಾಡಿ ಕರ್ಲಿ ಬ್ರಾಕೆಟ್ ಅನ್ನು ಕ್ಲೋಸ್ ಮಾಡಿ.
04:37 SAVE ಅನ್ನು ಒತ್ತಿ.
04:40 ಕೋಡ್ ಅನ್ನು ಕಂಪೈಲ್ ಮತ್ತು ಏಕ್ಸಿಕ್ಯೂಟ್ ಮಾಡಲು ಟರ್ಮಿನಲ್ ಗೆ ಹಿಂದಿರುಗಿ.
04:45 ಕಂಪೈಲ್ ಮಾಡಲು, gcc space arithmetic.c –o space artih (gcc ಸ್ಪೇಸ್ ಅರಿಥ್ಮೆಟಿಕ್ ಡಾಟ್ ಸಿ ಮೈನಸ್ ಓ ಸ್ಪೇಸ್ ಎ ಆರ್ ಐ ಟಿ ಹೆಚ್) ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ.
04:59 ಎಕ್ಸಿಕ್ಯೂಟ್ ಮಾಡಲು, dot slash arith (ಡಾಟ್ ಸ್ಲ್ಯಾಶ್ ಎ ಆರ್ ಐ ಟಿ ಹೆಚ್) ಎಂದು ಟೈಪ್ ಮಾಡಿ, enter ಕೀಯನ್ನು ಒತ್ತಿ.
05:05 ಔಟ್ ಪುಟ್ ಸ್ಕ್ರೀನ್ ನ ಮೇಲೆ ಕಾಣುತ್ತದೆ.
05:08 ಹಿಂದಿನ, ಸಂಕಲನ ಮತ್ತು ಗುಣಾಕಾರ ಗಳ ಔಟ್ ಪುಟ್ಇದೆ,
05:16 ಮತ್ತು ಐದು ಬೈ ಎರಡರ ಇಂಟಿಜರ್ ಡಿವಿಷನ್ ನ ಫಲಿತಾಂಶ ಎರಡು ಎಂಬುದೂ ಇದೆ.
05:22 ಇಂಟಿಜರ್ ಡಿವಿಷನ್ ನಲ್ಲಿ, ಫ್ರ್ಯಾಕ್ಷನಲ್ ಭಾಗವು ಬಿಟ್ಟುಹೊಗಿರುವುದನ್ನು ಗಮನಿಸಬಹುದು.
05:29 ನಂತರ, ಐದು ಬೈ ಎರಡರ ರಿಯಲ್ ಡಿವಿಷನ್ ನ ಫಲಿತಾಂಶ ಎರಡು ಪಾಯಿಂಟ್ ಐದು ಎಂದಿದೆ.
05:35 ರಿಯಲ್ ಡಿವಿಷನ್ ನಲ್ಲಿ, ಫಲಿತಾಂಶ ವು ನಮಗೆ ಬೇಕಾದಂತೆ ಇದೆ.
05:37 ಈ ಫಲಿತಾಂಶವನ್ನು ಪಡೆಯಲು ನಾವು ಟೈಪ್ ಕಾಸ್ಟಿಂಗ್ ಅನ್ನು ಉಪಯೋಗಿಸಿದ್ದೇವೆ.
05:45 ನಾನು ಇದೇ ಪ್ರೋಗ್ರಾಮ್ ಅನ್ನು c++ ನಲ್ಲಿಬರೆಯಬೇಕೆಂದಿರುವೆ ಎಂದೆಣಿಸಿ.
05:50 ಇದೇ ಕೋಡ್ ಅನ್ನು c++ನಲ್ಲಿಯೂ ಉಪಯೋಗಿಸಲು ಸಾಧ್ಯವೇ ಎಂದು ಪ್ರಯತ್ನಿಸೋಣ.
05:56 ಎಡಿಟರ್ ಗೆ ಹಿಂದಿರುಗೋಣ.
06:00 ಇಲ್ಲಿ c++ಕೋಡ್ ಇದೆ.
06:05 ಹೆಡರ್ ಫೈಲ್, c ಯ ಹೆಡರ್ ಫೈಲ್ ಗಿಂತ ಭಿನ್ನವಾಗಿರುವುದನ್ನು ಗಮನಿಸಬಹುದು.
06:12 ಇಲ್ಲಿ, ನೇಮ್ ಸ್ಪೇಸ್ ಅನ್ನು ಕೂಡಾ ಉಪಯೋಗಿಸಿದ್ದೇವೆ,
06:18 ಮತ್ತು, c++ನ ಔಟ್ ಪುಟ್ ಸ್ಟೇಟ್ಮೆಂಟ್, ಸಿ ಔಟ್ ಎಂದಿರುವುದನ್ನು ಕೂಡಾ ಗಮನಿಸಿ.
06:25 ಹಾಗಾಗಿ, ಈ ವ್ಯತ್ಯಾಸಗಳನ್ನು ಹೊರತುಪಡಿಸಿ, ಎರಡೂ ಕೋಡ್ ಗಳೂ ಸಮಾನವಾಗಿವೆ.
06:32 save ಅನ್ನು ಒತ್ತಿ.ನಿಮ್ಮ ಫೈಲ್, ಡಾಟ್ ಸಿಪಿಪಿ ಎಕ್ಸ್ಟೆಂಶನ್ ನೊಂದಿಗೆ ಸೇವ್ ಅಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
06:37 ನನ್ನ ಫೈಲ್ ಅನ್ನು ನಾನು arithmetic.cpp (ಅರಿಥ್ಮೆಟಿಕ್ ಡಾಟ್ ಸಿಪಿಪಿ) ಎಂದು ಸೇವ್ ಮಾಡಿದ್ದೇನೆ.
06:41 ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಿ, ಫಲಿತಾಂಶ ಏನು ಎಂಬುದನ್ನು ನೋಡೋಣ.
06:49 ಟರ್ಮಿನಲ್ ಅನ್ನು ಒಪನ್ ಮಾಡಿ, g++ space arithmetic.cpp space –o arith (g++ ಸ್ಪೇಸ್ ಅರಿಥ್ಮೆಟಿಕ್ ಡಾಟ್ ಸಿಪಿಪಿ ಸ್ಪೇಸ್ ಮೈನಸ್ ಒ ಎ ಆರ್ ಐ ಟಿ ಹೆಚ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
07:09 ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲು, dot slash arith (ಡಾಟ್ ಸ್ಲ್ಯಾಶ್ ಎ ಆರ್ ಐ ಟಿ ಹೆಚ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
07:16 ಇಲ್ಲಿ ಔಟ್ ಪುಟ್ ತೋರಿಸುತ್ತದೆ.
07:19 ಫಲಿತಾಂಶವು ಸಿ ಪ್ರೊಗ್ರಾಮ್ ನಂತೆಯೇ ಇರುವುದನ್ನು ನಾವು ನೋಡಬಹುದು.
07:23 ಔಟ್ ಪುಟ್ ನ ಪ್ರಿಸಿಶನ್ ನಲ್ಲಿ ಮಾತ್ರ ವ್ಯತ್ಯಾಸವಿದೆ.
07:29 ಈಗ, ಟ್ಯುಟೋರಿಯಲ್ ನ ಸಾರಾಂಶ ತಿಳಿಯೋಣ.
07:32 ಈ ಟ್ಯುಟೋರಿಯಲ್ ನಲ್ಲಿ ನಾವು ಅರಿಥ್ಮೆಟಿಕ್ ಆಪರೇಟರ್ ಗಳನ್ನು ಹೇಗೆ ಬಳಸುವುದೆಂದು ಕಲಿತೆವು.
07:36 ಮಾಡ್ಯುಲಸ್ ಆಪರೇಟರ್ ಅನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಸಲು, ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ.
07:42 ಸೂಚನೆ: ಭಾಗಾಕಾರದ ಶೇಷವನ್ನು ಕಂಡುಹಿಡಿಯಲು ಮಾಡ್ಯುಲಸ್ ಆಪರೇಟರ್ ಅನ್ನು ಉಪಯೋಗಿಸಬಹುದು. ಉದಾಹರಣೆಗೆ : ಸಿ ಈಸ್ ಈಕ್ವಲ್ ಟು a ಮಾಡ್ಯುಲಸ್ b.
07:50 ನಿಮಗೆ ಫಲಿತಾಂಶವು ಒಂದು ಎಂದು ಬರಬೇಕು.
07:55 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
07:57 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
08:00 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
08:05 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
08:09 ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
08:14 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
08:20 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
08:25 ಇದುರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
08:30 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
08:41 ಈ ಟ್ಯುಟೋರಿಯಲ್ ನ ಅನುವಾದಕಿಬೆಂಗಳೂರಿನಿಂದ ಚೇತನಾ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal