GChemPaint/C3/Charts-in-GChemTable/Kannada
From Script | Spoken-Tutorial
Revision as of 16:39, 17 March 2017 by Pratik kamble (Talk | contribs)
Time | Narration |
00:01 | ನಮಸ್ಕಾರ. Charts in GChemTable ಎನ್ನುವ ಈ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:09 | * ಎಲಿಮೆಂಟಲ್ ಚಾರ್ಟ್ ಗಳು ಮತ್ತು |
00:11 | * ‘ಕಸ್ಟಂ ಚಾರ್ಟ್’ಅನ್ನು ಹೇಗೆ ತಯಾರಿಸುವುದು, ಇವುಗಳ ಬಗ್ಗೆ ಕಲಿಯುವೆವು. |
00:15 | ಈ ‘ಟ್ಯುಟೋರಿಯಲ್’ಗಾಗಿ ನಾನು, |
00:18 | Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು), |
00:21 | GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಹಾಗೂ |
00:25 | GChemTable (ಜಿ-ಕೆಮ್-ಟೇಬಲ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ. |
00:31 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು |
00:35 | * Periodic table of the elements (ಮೂಲವಸ್ತುಗಳ ‘ಪೀರಿಯಾಡಿಕ್ ಟೇಬಲ್’) ಹಾಗೂ |
00:37 | * GChemPaint (ಜೀ-ಕೆಮ್-ಪೇಂಟ್) ಗಳನ್ನು ತಿಳಿದಿರಬೇಕು. |
00:40 | ಸಂಬಂಧಿತ GChemPaint ನ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. http://spoken-tutorial.org |
00:44 | ನಾವು ಒಂದು ಹೊಸ ‘GChemTable ವಿಂಡೋ’ಅನ್ನು ತೆರೆಯೋಣ. |
00:49 | Dash Home ನ ಮೇಲೆ ಕ್ಲಿಕ್ ಮಾಡಿ. |
00:51 | ಈಗ ಕಾಣಿಸಿಕೊಳ್ಳುವ ‘ಸರ್ಚ್-ಬಾರ್’ನಲ್ಲಿ gchemtable ಎಂದು ಟೈಪ್ ಮಾಡಿ. |
00:55 | Periodic table of the elements ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
01:00 | View ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, Elements Charts ಅನ್ನು ಆಯ್ಕೆಮಾಡಿ. |
01:05 | ಆಯ್ಕೆಗಳ ಲಿಸ್ಟ್ ಅನ್ನು ತೊರಿಸುತ್ತಿರುವ ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. |
01:10 | Electro-negativity ಯ ಮೇಲೆ ಕ್ಲಿಕ್ ಮಾಡಿ. |
01:13 | Pauling Electro-negativity (ಪೌಲಿಂಗ್ ಎಲೆಕ್ಟ್ರೋ-ನೆಗೆಟಿವಿಟಿ) ವರ್ಸಸ್ Atomic number(Z) (ಅಟೋಮಿಕ್ ನಂಬರ್) ಗಳ ಒಂದು ಚಾರ್ಟ್ ಅನ್ನು ಪ್ರದರ್ಶಿಸಲಾಗುತ್ತದೆ. |
01:18 | ಈ ಚಾರ್ಟ್ ನಲ್ಲಿ, ಅತಿ ಹೆಚ್ಚಿನ Electro-negativity ವ್ಯಾಲ್ಯು '4' ಎಂದು ಇದೆ. |
01:23 | Electro-negativity ಚಾರ್ಟ್ ಅನ್ನು ನಾನು ‘ಕ್ಲೋಸ್’ ಮಾಡುತ್ತೇನೆ. |
01:26 | ಹೀಗೆಯೇ, View ಮೆನ್ಯುನ |
01:29 | Element charts (ಎಲಿಮೆಂಟ್ ಚಾರ್ಟ್ಸ್) ನ ಅಡಿಯಲ್ಲಿ ವಿವಿಧ ಚಾರ್ಟ್ ಗಳು ದೊರಕುತ್ತವೆ. |
01:32 | ನಾನು Melting Temperature (ಮೆಲ್ಟಿಂಗ್ ಟೆಂಪರೇಚರ್) ಚಾರ್ಟ್ ಅನ್ನು ಆಯ್ಕೆಮಾಡುವೆನು. |
01:35 | Melting point ವರ್ಸಸ್ Atomic number(Z) ಗಳ ಒಂದು ಚಾರ್ಟ್ ಅನ್ನು ಪ್ರದರ್ಶಿಸಲಾಗುತ್ತದೆ. |
01:41 | ಈ ಚಾರ್ಟ್ ನಲ್ಲಿ, ‘ಕಾರ್ಬನ್’, ಅತೀ ಹೆಚ್ಚಿನ ‘ಮೆಲ್ಟಿಂಗ್ ಪಾಯಿಂಟ್’ಅನ್ನು ಹೊಂದಿದೆ. |
01:46 | ನಾನು Melting point ಚಾರ್ಟ್ ಅನ್ನು ‘ಕ್ಲೋಸ್’ ಮಾಡುತ್ತೇನೆ. |
01:50 | ಈಗ, ‘ಕಸ್ಟಂ ಚಾರ್ಟ್’ ಅನ್ನು ಹೇಗೆ ತಯಾರಿಸುವುದು ಎಂದು ನಾವು ತಿಳಿಯೋಣ. |
01:54 | View ಎನ್ನುವಲ್ಲಿಗೆ ಹೋಗಿ. Element Charts ಅನ್ನು ಆಯ್ಕೆಮಾಡಿ ಹಾಗೂ Custom ಮೇಲೆ ಕ್ಲಿಕ್ ಮಾಡಿ. |
02:01 | ಸ್ಕ್ರೀನ್ ನ ಮೇಲೆ Customize Chart ವಿಂಡೋ ಹಾಗೂ GChemTable Graph ವಿಂಡೋಗಳು ಕಾಣಿಸಿಕೊಳ್ಳುತ್ತವೆ. |
02:07 | Customize Chart ವಿಂಡೋ, ಎಡಭಾಗದಲ್ಲಿ Graph hierarchy tree (ಗ್ರಾಫ್ ಹೈರಾರ್ಕೀ ಟ್ರೀ) ಯನ್ನು ಹಾಗೂ |
02:11 | ಬಲಭಾಗದಲ್ಲಿ Graph preview (ಗ್ರಾಫ್ ಪ್ರಿವ್ಯೂ) ಅನ್ನು ಹೊಂದಿದೆ. |
02:13 | Graph hierarchy tree, ಈಗಿನ ಗ್ರಾಫ್ ನ ಘಟಕಗಳನ್ನು ಹಾಗೂ ಅವುಗಳ ಕ್ರಮಾನುಗತವನ್ನು (ಹೈರಾರ್ಕೀ) ತೋರಿಸುತ್ತದೆ. |
02:20 | ಪ್ಯಾನೆಲ್ ನಲ್ಲಿ ಕೊಟ್ಟಿರುವ ಬಟನ್ ಗಳನ್ನು ಬಳಸಿ ಹೈರಾರ್ಕೀಯನ್ನು ಮಾರ್ಪಡಿಸಬಹುದು. |
02:25 | Graph preview,ಗ್ರಾಫ್ ನಲ್ಲಿಯ ಮಾರ್ಪಾಟುಗಳ ‘ಸ್ಕೇಲ್ಡ್ ವರ್ಷನ್’ಅನ್ನು ತೋರಿಸುತ್ತದೆ. |
02:31 | Graph hierarchy tree ಯಲ್ಲಿ, Graph ಹಾಗೂ Chart1 ಗಳನ್ನು ನೀವು ನೋಡಬಹುದು. |
02:36 | ಡೀ-ಫಾಲ್ಟ್ ಆಗಿ, Graph ಆಯ್ಕೆಯಾಗಿದೆ. |
02:39 | ಈಗ ನಾವು ಕೆಳಗಿನ ಪ್ಯಾನೆಲ್ ಗೆ ನಡೆಯೋಣ. |
02:42 | ಇಲ್ಲಿ, Style ಮತ್ತು Theme ಎನ್ನುವ ಎರಡು ಟ್ಯಾಬ್ ಗಳಿವೆ. |
02:46 | ಡೀ-ಫಾಲ್ಟ್ ಆಗಿ, Style ಟ್ಯಾಬ್ ಆಯ್ಕೆಯಾಗಿದೆ. |
02:51 | ಇಲ್ಲಿ, ನಾವು Outline ಹಾಗೂ Fill ಎನ್ನುವ ಎರಡು ಶೀರ್ಷಿಕೆಗಳನ್ನು ಪಡೆದಿದ್ದೇವೆ. |
02:55 | Outline ಶೀರ್ಷಿಕೆಯು, |
02:59 | Style, Color ಮತ್ತು Size ಗಳೆನ್ನುವ 3 ಡ್ರಾಪ್-ಡೌನ್ ಗಳನ್ನು ಹೊಂದಿದೆ. |
03:04 | ಗ್ರಾಫ್ ನ ರೂಪುರೇಖೆಯ ಲಕ್ಷಣಗಳನ್ನು (outline properties) ಬದಲಾಯಿಸಲು ಈ ಡ್ರಾಪ್-ಡೌನ್ ಗಳು ಸಹಾಯಮಾಡುತ್ತವೆ. |
03:09 | Style ಡ್ರಾಪ್-ಡೌನ್ ನ ಮೇಲೆ ಕ್ಲಿಕ್ ಮಾಡಿ ಹಾಗೂ ತೋರಿಸಲಾದ ಯಾವುದೇ ‘ಲೈನ್ ಸ್ಟೈಲ್’ಅನ್ನು ಆಯ್ಕೆಮಾಡಿ. |
03:15 | ಉದಾಹರಣೆಗೆ, ನಾನು Long dash ಅನ್ನು ಆಯ್ಕೆಮಾಡುವೆನು. |
03:20 | ಲಭ್ಯವಿರುವ ಎಲ್ಲ ಬಣ್ಣಗಳನ್ನು ವೀಕ್ಷಿಸಲು, Color ‘ಡ್ರಾಪ್-ಡೌನ್ ಆರೋ’ದ ಮೇಲೆ ಕ್ಲಿಕ್ ಮಾಡಿ. |
03:25 | ನಾನು ‘ಹಸಿರು’ (green) ಬಣ್ಣವನ್ನು ಆಯ್ಕೆಮಾಡುವೆನು. |
03:28 | Size ನ ‘ಸ್ಕ್ರೋಲರ್ ಆರೋ’ದ ಮೇಲೆ ಕ್ಲಿಕ್ ಮಾಡಿ ಹಾಗೂ ಸೈಜನ್ನು “3.0” pts. ಗೆ ಹೆಚ್ಚಿಸಿರಿ. |
03:34 | ‘ಗ್ರಾಫ್ ಪ್ರಿವ್ಯೂ’ ಏರಿಯಾದಲ್ಲಿ ಎಲ್ಲ ಬದಲಾವಣೆಗಳನ್ನು ನೋಡಬಹುದು. |
03:38 | ಆನಂತರ, Fill ಎನ್ನುವುದರತ್ತ ನೋಡೋಣ. |
03:41 | Fill ನ ಅಡಿಯಲ್ಲಿ, Type ಎನ್ನುವ ‘ಡ್ರಾಪ್-ಡೌನ್ ಬಟನ್’ಅನ್ನು ನಾವು ನೋಡಬಹುದು. |
03:45 | Type ನ ‘ಡ್ರಾಪ್-ಡೌನ್ ಬಟನ್’ನ ಮೇಲೆ ಕ್ಲಿಕ್ ಮಾಡಿ ಹಾಗೂ Pattern ಅನ್ನು ಆಯ್ಕೆಮಾಡಿ. |
03:50 | Pattern ದ ಗುಣಲಕ್ಷಣಗಳು (attributes) ಕೆಳಗೆ ಕಾಣಿಸಿಕೊಳ್ಳುತ್ತವೆ. |
03:52 | ಇವು Pattern, Foreground ಹಾಗೂ Background ಗಳನ್ನು ಒಳಗೊಂಡಿವೆ. |
03:58 | ಪ್ರತಿಯೊಂದು ಗುಣಲಕ್ಷಣವು, ಆಯ್ದುಕೊಳ್ಳಲು ಆಯ್ಕೆಗಳನ್ನು ತೋರಿಸುವ ಒಂದು ‘ಡ್ರಾಪ್-ಡೌನ್’ಅನ್ನು ಹೊಂದಿದೆ. |
04:03 | ನಿಮಗೆ ಬೇಕಾದ ಪ್ಯಾಟರ್ನ್ ಆರಿಸಿಕೊಳ್ಳಲು, Pattern ನ ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ. |
04:08 | Foreground ನ ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ ಅಲ್ಲಿ ‘ಆರೇಂಜ್ ಕಲರ್’ಅನ್ನು ಆರಿಸಿ. |
04:13 | Background ನ ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ ಅಲ್ಲಿ ‘ಬ್ಲ್ಯಾಕ್ ಕಲರ್’ಅನ್ನು ಆರಿಸಿ. |
04:18 | ‘ಗ್ರಾಫ್ ಪ್ರಿವ್ಯೂ’ ಏರಿಯಾದಲ್ಲಿ ಎಲ್ಲ ಬದಲಾವಣೆಗಳನ್ನು ಗಮನಿಸಿ. |
04:22 | Theme ಟ್ಯಾಬ್ ನ ಆಯ್ಕೆಗಳನ್ನು ನೀವೇ ಸ್ವತಃ ಪರಿಶೋಧಿಸಿ. |
04:27 | ‘ಗ್ರಾಫ್ ಹೈರಾರ್ಕೀ ಟ್ರೀ’ (Graph hierarchy tree) ಯಲ್ಲಿ ಈಗ ನಾವು Chart1 ಅನ್ನು ಆಯ್ಕೆಮಾಡೋಣ. |
04:31 | Add ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:34 | ಆಯ್ಕೆಗಳ ಲಿಸ್ಟ್ ನಿಂದ Title to Chart1 ಅನ್ನು ಆಯ್ಕೆಮಾಡಿ. |
04:39 | ಕೆಳಭಾಗದಲ್ಲಿ, ಟ್ಯಾಬ್ ಗಳ ಒಂದು ಹೊಸ ಸೆಟ್ ತೆರೆದುಕೊಳ್ಳುತ್ತದೆ. |
04:42 | ಡೀ-ಫಾಲ್ಟ್ ಆಗಿ, Data ಟ್ಯಾಬ್ ಆಯ್ಕೆಯಾಗಿದೆ. |
04:46 | Text ಫೀಲ್ಡ್ ನಲ್ಲಿ, ಚಾರ್ಟ್ ನ ಶೀರ್ಷಿಕೆಯನ್ನು (ಟೈಟಲ್) ಟೈಪ್ ಮಾಡಿ. |
04:49 | ನಾನು Atomic mass – Fusion Temperature ಎಂದು ಟೈಪ್ ಮಾಡುವೆನು. |
04:55 | Font ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
04:58 | ಇಲ್ಲಿ ನೀವು ‘ಫೊಂಟ್ ಟೈಪ್’, ‘ಫೊಂಟ್ ಸ್ಟೈಲ್’, ‘ಫೊಂಟ್ ಸೈಜ್’ ಹಾಗೂ ‘ಫೊಂಟ್ ಕಲರ್’ಗಳನ್ನು ಬದಲಾಯಿಸಬಹುದು. |
05:05 | ನಾನು Font size ಅನ್ನು 14 (ಹದಿನಾಲ್ಕು) ಕ್ಕೆ ಹೆಚ್ಚಿಸುವೆನು ಹಾಗೂ Font Color ಅನ್ನು ‘ಮರೂನ್’ಗೆ ಬದಲಾಯಿಸುವೆನು. |
05:13 | ಆಮೇಲೆ, Text ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
05:15 | ಇಲ್ಲಿ ನೀವು ಟೆಕ್ಸ್ಟ್ ನ Orientation (ಓರಿಯಂಟೇಶನ್) ಅನ್ನು ಬದಲಾಯಿಸಬಹುದು. |
05:19 | ಇದನ್ನು ಎರಡು ವಿಧದಲ್ಲಿ ಮಾಡಬಹುದು- |
05:21 | 1. ನೇರವಾಗಿ ಪ್ರಿವ್ಯೂ ಎರಿಯಾದಲ್ಲಿ ಕ್ಲಿಕ್ ಮಾಡುವುದರ ಮೂಲಕ ಅಥವಾ |
05:24 | 2. ಸ್ಕ್ರೋಲರ್ ಬಳಸಿ Angle ಫೀಲ್ಡನ್ನು ಬದಲಾಯಿಸುವುದರ ಮೂಲಕ. |
05:31 | Position ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
05:34 | ಡೀ-ಫಾಲ್ಟ್ ವ್ಯಾಲ್ಯುಗಳನ್ನು ನಾನು ಮೊದಲು ಇದ್ದ ಹಾಗೆಯೇ ಇಡುವೆನು. |
05:38 | ನಾವು ಮರಳಿ Graph hierarchy tree ಯಲ್ಲಿ ಹೋಗಿ, |
05:41 | Chart1 ನ ಮೇಲೆ ಕ್ಲಿಕ್ ಮಾಡೋಣ. |
05:43 | ಕೆಳಗಿನ ಪ್ಯಾನೆಲ್ ನಲ್ಲಿ ಮೂರು ಟ್ಯಾಬ್ ಗಳು ಕಂಡುಬರುತ್ತವೆ. |
05:46 | Style, Position ಹಾಗೂ Plot area. |
05:50 | ಡೀ-ಫಾಲ್ಟ್ ಆಗಿ, Style ಟ್ಯಾಬ್ ಆಯ್ಕೆಯಾಗಿದೆ. |
05:54 | ನಾವು Fill ಎನ್ನುವಲ್ಲಿಗೆ ಹೋಗೋಣ. |
05:56 | Type ‘ಡ್ರಾಪ್-ಡೌನ್’ನಲ್ಲಿ Unicolor gradient ಅನ್ನು ಆಯ್ಕೆಮಾಡಿ. |
06:01 | Direction ‘ಡ್ರಾಪ್-ಡೌನ್’ಅನ್ನು ಆಯ್ಕೆಮಾಡಿ ಮತ್ತು |
06:04 | ನಿಮಗೆ ಬೇಕಾದ ‘ಡೈರೆಕ್ಶನ್’ಅನ್ನು ಆಯ್ಕೆಮಾಡಿ. |
06:08 | End ‘ಡ್ರಾಪ್-ಡೌನ್’ಅನ್ನು ಆಯ್ಕೆಮಾಡಿ ಹಾಗೂ ನಿಮಗೆ ಬೇಕಾದ ‘ಕಲರ್’ಅನ್ನು ಆಯ್ಕೆಮಾಡಿ. |
06:14 | ‘ಗ್ರೇಡಿಯಂಟ್’ನ ಹೊಳಪನ್ನು ಹೆಚ್ಚಿಸಲು, Brightness ಸ್ಲೈಡರ್ ಅನ್ನು ಎಳೆಯಿರಿ. |
06:19 | Position ಹಾಗೂ |
06:21 | Plot area ಟ್ಯಾಬ್ ಗಳಲ್ಲಿಯ ಆಯ್ಕೆಗಳನ್ನು ನೀವೇ ಸ್ವತಃ ಪರಿಶೋಧಿಸಿ. |
06:25 | ಈಗ ನಾವು Add ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
06:28 | Plot to Chart1 ಅನ್ನು ಆಯ್ಕೆಮಾಡಿ. |
06:31 | XY, Bubble, ColoredXY ಹಾಗೂ DropBar ಮುಂತಾದ ವಿವಿಧ ಪ್ರಕಾರದ ಚಾರ್ಟ್ ಗಳೊಂದಿಗೆ ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. |
06:40 | ಪ್ರತಿಯೊಂದು ವಿಧದ ಚಾರ್ಟ್, ವಿವಿಧ ಸಬ್-ಚಾರ್ಟ್ ಆಯ್ಕೆಗಳನ್ನು ಹೊಂದಿದೆ. |
06:45 | ನಾವು XY ಹಾಗೂ XY Lines ಎನ್ನುವ ಚಾರ್ಟ್ ಆಯ್ಕೆಗಳನ್ನು ಆರಿಸಿಕೊಳ್ಳೋಣ. |
06:51 | ಟ್ಯಾಬ್ ಗಳ ಒಂದು ಹೊಸ ಸೆಟ್, ಕೆಳಭಾಗದಲ್ಲಿ ತೆರೆದುಕೊಳ್ಳುತ್ತದೆ. ಡೀ-ಫಾಲ್ಟ್ ಆಗಿ, Style ಟ್ಯಾಬ್ ಆಯ್ಕೆಯಾಗಿದೆ. |
06:58 | Interpolation ಎನ್ನುವಲ್ಲಿಗೆ ಹೋಗಿ. |
07:00 | Type ನ ಸ್ಕ್ರೋಲರ್ ನ ಮೇಲೆ ಕ್ಲಿಕ್ ಮಾಡಿ ಹಾಗೂ Bezier cubic spline (ಬೇಝಿಯರ್ ಕ್ಯೂಬಿಕ್ ಸ್ಪ್ಲೈನ್) ಅನ್ನು ಆಯ್ಕೆಮಾಡಿ. |
07:06 | Fill ಗೆ ಹೋಗಿ.Type ನ ಸ್ಕ್ರೋಲರ್ ನಲ್ಲಿ Bicolor gradient (ಬೈಕಲರ್ ಗ್ರೇಡಿಯಂಟ್) ಅನ್ನು ಆಯ್ಕೆಮಾಡಿ. |
07:12 | Data ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. ಚಾರ್ಟ್ ನ ಹೆಸರನ್ನು |
07:15 | Atomic-mass Vs Fusion temperature ಎಂದು ಟೈಪ್ ಮಾಡಿ. |
07:20 | X: ನಾನು X ಆಕ್ಸಿಸ್ ನ ಮೇಲೆ Atomic mass ಅನ್ನು ಆಯ್ಕೆಮಾಡುವೆನು. |
07:25 | Y: ನಾನು Y ಆಕ್ಸಿಸ್ ನ ಮೇಲೆ Fusion temperature ಅನ್ನು ಆಯ್ಕೆಮಾಡುವೆನು. |
07:30 | Markers ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
07:33 | ಚಾರ್ಟ್ ನ ಮೇಲೆ ಪಾಯಿಂಟ್ ಗಳನ್ನು ಗುರುತಿಸಲು Marker ಗಳನ್ನು ಬಳಸಲಾಗುತ್ತದೆ. |
07:37 | Marker ಶೀರ್ಷಿಕೆಯಡಿಯಲ್ಲಿ, ನಾವು |
07:40 | Shape, Fill, Outline ಹಾಗೂ Size ಗಳನ್ನು ಹೊಂದಿದ್ದೇವೆ. |
07:44 | Shape ನಲ್ಲಿ, Circle ಅನ್ನು ಆಯ್ಕೆಮಾಡಿ, |
07:48 | Fill ಕಲರ್ ನಲ್ಲಿ ‘ಬ್ರೌನ್’ಅನ್ನು ಆಯ್ಕೆಮಾಡಿ, |
07:51 | ಉಳಿದವುಗಳನ್ನು ಡೀ-ಫಾಲ್ಟ್ ಎಂದು ಬಿಟ್ಟುಬಿಡೋಣ. |
07:54 | ಈಗ ನಾವು Apply ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
07:57 | ಬೇಕಾಗಿರುವ ಚಾರ್ಟ್ಅನ್ನು |
08:00 | GChemTable Graph ವಿಂಡೋದಲ್ಲಿ ತೋರಿಸಲಾಗಿದೆ. |
08:03 | ಈಗ ಈ ಚಾರ್ಟನ್ನು, ಒಂದು ಇಮೇಜ್ ನ ಹಾಗೆ ನಾವು ಸೇವ್ ಮಾಡೋಣ. |
08:06 | ಮೊದಲು, GChemTable Graph ವಿಂಡೋದ ಮೇಲೆ ಕ್ಲಿಕ್ ಮಾಡಿ. |
08:10 | File ಅನ್ನು ಆಯ್ಕೆಮಾಡಿ ಮತ್ತು. Save As Image ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
08:14 | Save As Image ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
08:18 | File type ಅನ್ನು PS document ಎಂದು ಆಯ್ಕೆಮಾಡಿ. |
08:22 | ನಿಮಗೆ ಇಷ್ಟವಾದ ಫೈಲ್ ನ ಹೆಸರನ್ನು ಟೈಪ್ ಮಾಡಿ. |
08:24 | ನಾನು, “my-custom-chart” ಎಂದು ಟೈಪ್ ಮಾಡುವೆನು. |
08:27 | ನನ್ನ ಫೈಲ್ ಅನ್ನು ಸೇವ್ ಮಾಡಲು, ಲೊಕೇಶನ್ ಗಾಗಿ ನಾನು Desktop ಅನ್ನು ಆಯ್ಕೆಮಾಡುವೆನು. |
08:32 | Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:35 | ಇಲ್ಲಿ ನನ್ನ ‘ಸೇವ್’ ಮಾಡಿದ ಡಾಕ್ಯುಮೆಂಟ್ ಇದೆ. |
08:38 | ಫೈಲ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು |
08:40 | Open with Document Viewer ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ. |
08:44 | ಇಲ್ಲಿ ನನ್ನ ಗ್ರಾಫ್ ಇದೆ. |
08:47 | ನಾವು ಸಾರಾಂಶಗೊಳಿಸೋಣ. |
08:48 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
08:51 | 1. ‘ಎಲೆಕ್ಟ್ರೋನೆಗೆಟಿವಿಟಿ’ |
08:53 | 2. ‘ಮೆಲ್ಟಿಂಗ್ ಪಾಯಿಂಟ್’ ಇವುಗಳ ‘ಎಲಿಮೆಂಟಲ್ ಚಾರ್ಟ್’ಗಳ ಬಗ್ಗೆ ಹಾಗೂ |
08:55 | ‘ಕಸ್ಟಂ ಚಾರ್ಟ್’ಅನ್ನು ಹೇಗೆ ತಯಾರಿಸುವುದು ಎನ್ನುವುದರ ಬಗ್ಗೆ ಕಲಿತಿದ್ದೇವೆ. |
08:58 | ನಿಮಗಾಗಿ ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
09:00 | ಈ ಕೆಳಗಿನವುಗಳನ್ನು ಪರಿಶೋಧಿಸಿ: |
09:01 | 1. ವಿಭಿನ್ನ ‘ಎಲಿಮೆಂಟ್ ಚಾರ್ಟ್’ಗಳು.2. ಇತರ XY ಚಾರ್ಟ್ ನ ವಿಧಗಳು |
09:05 | 3. Bubble, ColoredXY ಹಾಗೂ DropBar ಚಾರ್ಟ್ ನ ವಿಧಗಳು ಮತ್ತು |
09:10 | 4. SVG ಹಾಗೂ PDF ಫೈಲ್ ಫಾರ್ಮ್ಯಾಟ್ ನಲ್ಲಿ ಚಾರ್ಟ್ ಗಳನ್ನು ‘ಸೇವ್’ ಮಾಡುವುದು. |
09:16 | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial |
09:20 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
09:23 | ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:28 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: |
09:30 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:33 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:36 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
09:44 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
09:48 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
09:55 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
10:01 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ . |
10:04 | ವಂದನೆಗಳು. |