GChemPaint/C3/Analysis-of-compounds/Kannada
From Script | Spoken-Tutorial
Revision as of 16:11, 17 March 2017 by Pratik kamble (Talk | contribs)
Time | Narration |
00:01 | ನಮಸ್ಕಾರ. GChemPaint (ಜಿ-ಕೆಮ್-ಪೇಂಟ್) ನಲ್ಲಿಯ Analysis of Compounds (ಅನಾಲಿಸಿಸ್ ಆಫ್ ಕಂಪೌಂಡ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:07 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
00:10 | * ಅಣುಗಳ ಸಂದರ್ಭೋಚಿತ ಮೆನ್ಯು (ಮೊಲೆಕ್ಯುಲರ್ ಕಾಂಟೆಕ್ಸ್ಚುಅಲ್ ಮೆನ್ಯು) |
00:12 | * ಅಣುವನ್ನು '.mol' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವುದು |
00:15 | * ಒಂದು ಪ್ರತಿಕ್ರಿಯೆಯನ್ನು ಸೇರಿಸುವುದು ಹಾಗೂ ಎಡಿಟ್ ಮಾಡುವುದು |
00:18 | * ಪ್ರತಿಕ್ರಿಯೆಯ ‘ಆರೋ’ದ ಮೇಲೆ ಪ್ರತಿಕ್ರಿಯೆಯ ಪರಿಸ್ಥಿತಿಗಳು ಮತ್ತು ಕಾರಕಗಳನ್ನು ಸೇರಿಸುವುದು |
00:22 | * ಪ್ರತಿಕ್ರಿಯೆಯ ಅಣುಗಳನ್ನು 3D ಗೆ ಪರಿವರ್ತಿಸುವುದು ಇತ್ಯಾದಿಗಳನ್ನು ಕಲಿಯುವೆವು. |
00:26 | ಈ ‘ಟ್ಯುಟೋರಿಯಲ್’ಗಾಗಿ ನಾನು, |
00:28 | Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ |
00:32 | GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ. |
00:37 | ನಿಮಗೆ ‘ಇಂಟರ್ನೆಟ್ ಕನೆಕ್ಟಿವಿಟೀ’ ಸಹ ಅಗತ್ಯವಿದೆ. |
00:41 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು 'GChemPaint' (‘ಜೀ-ಕೆಮ್-ಪೇಂಟ್’) ಅನ್ನು ತಿಳಿದಿರಬೇಕು. |
00:46 | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್ ಗೆ ಹೋಗಿ. http://spoken-tutorial.org |
00:52 | ನಾನು ಹೊಸ GChemPaint ವಿಂಡೋ ಅನ್ನು ತೆರೆದಿದ್ದೇನೆ. |
00:55 | Use or manage templates ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
00:59 | ಕೆಳಗೆ Templates ಟೂಲ್ ಪ್ರಾಪರ್ಟೀ ಪೇಜ್ ತೆರೆದುಕೊಳ್ಳುತ್ತದೆ. |
01:02 | Templates (ಟೆಂಪ್ಲೇಟ್ಸ್) ನ ಡ್ರಾಪ್-ಡೌನ್ ಬಟನ್ ನ ಮೇಲೆ Amino Acids (ಅಮೈನೋ ಆಸಿಡ್ಸ್) ನ ಮೇಲೆ ಕ್ಲಿಕ್ ಮಾಡಿ. |
01:07 | ಲಿಸ್ಟ್ ನಿಂದ Alanine (ಅಲನೈನ್) ಅನ್ನು ಆಯ್ಕೆಮಾಡಿ. |
01:11 | ‘ಅಲನೈನ್’ನ ರಚನೆಯು ‘ಟೆಂಪ್ಲೇಟ್ಸ್’ನ ಪ್ರಾಪರ್ಟೀ ಪೇಜ್ ನ ಮೇಲೆ ಲೋಡ್ ಆಗಿದೆ. |
01:16 | ರಚನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಲೋಡ್ ಮಾಡಲು ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
01:21 | ‘ಅಲನೈನ್’ ಅಣುವಿನ ಸಂದರ್ಭೋಚಿತ ಮೆನ್ಯುವಿನ (ಕಾಂಟೆಕ್ಸ್ಚುಅಲ್ ಮೆನ್ಯು) ಬಗ್ಗೆ ನಾನು ವಿವರಿಸುವೆನು. |
01:26 | ಅಣುವಿನ ಮೇಲೆ ರೈಟ್ ಕ್ಲಿಕ್ ಮಾಡಿ. |
01:29 | ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. |
01:31 | Molecule ಅನ್ನು ಆಯ್ಕೆಮಾಡಿ, ಜೊತೆಯಲ್ಲಿ ಒಂದು ‘ಕಾಂಟೆಕ್ಸ್ಚುಅಲ್ ಮೆನ್ಯು’ ತೆರೆದುಕೊಳ್ಳುತ್ತದೆ. |
01:36 | ‘ಕಾಂಟೆಕ್ಸ್ಚುಅಲ್ ಮೆನ್ಯು’ ವಿಭಿನ್ನ ಮೆನ್ಯು ಐಟಂಗಳನ್ನು ಒಳಗೊಂಡಿದೆ. ಅವುಗಳಲ್ಲಿ ನಾನು, |
01:43 | * NIST WebBook page for this molecule (ಎನ್-ಐ-ಎಸ್-ಟಿ ವೆಬ್‌ಬುಕ್ ಪೇಜ್ ಫಾರ್ ಧಿಸ್ ಮೊಲೆಕ್ಯುಲ್) |
01:46 | * PubChem page for this molecule (ಪಬ್-ಕೆಮ್ ಪೇಜ್ ಫಾರ್ ಧಿಸ್ ಮೊಲೆಕ್ಯುಲ್) |
01:48 | * Open in Calculator ಗಳ ಬಗ್ಗೆ ಚರ್ಚಿಸುವೆನು. |
01:51 | NIST Web page for this molecule ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
01:55 | ‘ಅಲನೈನ್’ನ NIST (ಎನ್-ಐ-ಎಸ್-ಟಿ) ವೆಬ್ ಪೇಜ್ ತೆರೆದುಕೊಳ್ಳುತ್ತದೆ. |
01:59 | ವೆಬ್-ಪೇಜ್, ‘ಅಲನೈನ್’ನ ಬಗ್ಗೆ ಎಲ್ಲ ವಿವರಗಳನ್ನು ತೋರಿಸುತ್ತದೆ. |
02:03 | GChemPaint (ಜಿ-ಕೆಮ್-ಪೇಂಟ್) ಎಡಿಟರ್ ಗೆ ಹಿಂತಿರುಗಿ. |
02:06 | PubChem page for this molecule (ಪಬ್-ಕೆಮ್ ಪೇಜ್ ಫಾರ್ ಧಿಸ್ ಮೊಲೆಕ್ಯುಲ್) ಅನ್ನು ಓಪನ್ ಮಾಡಲು Alanine ನ ಮೇಲೆ ರೈಟ್-ಕ್ಲಿಕ್ ಮಾಡಿ. |
02:12 | ಈ ವೆಬ್-ಪೇಜ್ ಮೇಲಿನ Alanine ನ ರಚನೆಯ ಮೇಲೆ ಕ್ಲಿಕ್ ಮಾಡಿ. |
02:16 | 2D Structure ಹಾಗೂ 3D Conformer ಎನ್ನುವ ಟ್ಯಾಬ್ ಗಳೊಂದಿಗೆ ಒಂದು ಹೊಸ ವೆಬ್-ಪೇಜ್ ಕಾಣಿಸುತ್ತದೆ. |
02:22 | ‘ಅಲನೈನ್’ಅನ್ನು 3 ಡೈಮೆನ್ಶನ್ ಗಳಲ್ಲಿ ವೀಕ್ಷಿಸಲು, 3D Conformer ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
02:28 | ತೋರಿಸಲ್ಪಟ್ಟ 3D ರಚನೆಯ ಮೇಲೆ ಕ್ಲಿಕ್ ಮಾಡಿ. |
02:31 | ಮೇಲ್ಭಾಗದಲ್ಲಿ ಮತ್ತು ಎಡಗಡೆಗೆ ಕೆಲವು ಕಂಟ್ರೋಲ್ ಗಳನ್ನು ಹೊಂದಿರುವ ಬೇರೊಂದು ವಿಂಡೋನಲ್ಲಿ ಇದು ರಚನೆಯನ್ನು ತೆರೆಯುತ್ತದೆ. |
02:37 | ರಚನೆಯನ್ನು ಹಲವು ದಿಕ್ಕುಗಳಲ್ಲಿ ತಿರುಗಿಸಲು Rotation ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
02:43 | ‘ಹೈಡ್ರೋಜನ್’ಗಳನ್ನು ತೋರಿಸಲು, ಅದೇ ಪೇಜ್ ನಲ್ಲಿ 'H' ನ ಮೇಲೆ ಕ್ಲಿಕ್ ಮಾಡಿ. |
02:48 | ಇವು ‘ಹೈಡ್ರೋಜನ್’ಗಳಾಗಿವೆ. |
02:51 | ಮತ್ತೆ ನಾವು GChemPaint (ಜಿ-ಕೆಮ್-ಪೇಂಟ್) ವಿಂಡೋ ಗೆ ಬದಲಾಯಿಸೋಣ. |
02:53 | Alanine ನ ಮೇಲೆ ರೈಟ್-ಕ್ಲಿಕ್ ಮಾಡಿ; Open in Calculator ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ. |
03:00 | Chemical calculator ಎನ್ನುವ ವಿಂಡೋ ತೆರೆದುಕೊಳ್ಳುತ್ತದೆ. |
03:03 | ಇಲ್ಲದಿದ್ದರೆ, Overview ಟ್ಯುಟೋರಿಯಲ್ ನಲ್ಲಿ ಮಾಡಿದಂತೆ Synaptic Package Manager (ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್) ಅನ್ನು ಬಳಸಿ ದಯವಿಟ್ಟು ಅದನ್ನು ಇನ್ಟಾಲ್ ಮಾಡಿ. |
03:10 | ಈ ವಿಂಡೋ, ಅಡಿಯಲ್ಲಿ Composition (ಕಂಪೋಜಿಶನ್) ಮತ್ತುIsotopic Pattern (ಐಸೋಟೋಪಿಕ್ ಪ್ಯಾಟರ್ನ್) ಎನ್ನುವ ಎರಡು ಟ್ಯಾಬ್ ಗಳನ್ನು ಹೊಂದಿದೆ. |
03:16 | ‘ಕಂಪೋಜಿಶನ್’ ಟ್ಯಾಬ್, ಈ ಕೆಳಗಿನ ಘಟಕಗಳನ್ನು ಹೂಂದಿದೆ. |
03:19 | * Formula (ಫಾರ್ಮುಲಾ) |
03:21 | * Raw formula (ರಾ ಫಾರ್ಮುಲಾ ) |
03:23 | * Molecular weight in g.mol-1 (ಮೊಲೆಕ್ಯುಲರ್ ವೇಟ್ ಇನ್ ಗ್ರಾಂ ಮೋಲ್ ಇನ್ವರ್ಸ್) |
03:26 | * ಸಂಯುಕ್ತದ elemental mass percentage(%) (ಎಲಿಮೆಂಟಲ್ ಮಾಸ್ ಪರ್ಸೆಂಟೇಜ್) ಅನಾಲಿಸಿಸ್. |
03:32 | Isotopic Pattern ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
03:35 | ಅದು, ಸಂಯುಕ್ತದ (compound) ‘ಮೊಲೆಕ್ಯುಲರ್ ವೇಟ್’ ಇರುವಲ್ಲಿ ಪೀಕ್ ಅನ್ನು ಹೊಂದಿರುವ, ‘ಮಾಸ್ ಸ್ಪೆಕ್ಟ್ರಮ್’ನ ಒಂದು ಗ್ರಾಫನ್ನು ತೋರಿಸುತ್ತದೆ. |
03:42 | ಒಂದು ಅಸೈನ್ಮೆಂಟ್ ಎಂದು, |
03:43 | 1. ‘ಟೆಂಪ್ಲೇಟ್ಸ್’ ಲಿಸ್ಟ್ ನಿಂದ ಇತರ ‘ಅಮೈನೋ ಆಸಿಡ್’ಗಳನ್ನು ಆಯ್ಕೆಮಾಡಿ. |
03:46 | 2. ಅವುಗಳ ‘ಕಂಪೋಜಿಶನ್’ ಮತ್ತು ‘ಐಸೋಟೋಪಿಕ್ ಪ್ಯಾಟರ್ನ್’ಗಳನ್ನು ಪಡೆದುಕೊಳ್ಳಿ. |
03:51 | ನಾನು ಹೊಸ GChemPaint (ಜಿ-ಕೆಮ್-ಪೇಂಟ್) ವಿಂಡೋ ಅನ್ನು ಓಪನ್ ಮಾಡಿದ್ದೇನೆ. |
03:54 | ನಾವು 1,3-butadiene (1,3-ಬ್ಯೂಟಾಡಾಈನ್) ರಚನೆಯನ್ನು ಡ್ರಾ ಮಾಡೋಣ. |
03:58 | Add a chain ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
04:01 | ಚೈನ್ ಅನ್ನು ಕ್ಲಿಕ್ ಮಾಡಿ, 4 ಕಾರ್ಬನ್ ಗಳೆಡೆಗೆ ಎಳೆಯಿರಿ. |
04:04 | Add a bond ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. ‘ಡಬಲ್ ಬಾಂಡ್’ಗಳನ್ನು ರೂಪಿಸಲು, ಮೊದಲನೆಯ ಹಾಗೂ ಮೂರನೆಯ ‘ಬಾಂಡ್’ಗಳ ಸ್ಥಾನಗಳ ಮೇಲೆ ಕ್ಲಿಕ್ ಮಾಡಿ. |
04:13 | ಪರಮಾಣುಗಳನ್ನು ತೋರಿಸಲು ಪ್ರತಿಯೊಂದು ಸ್ಥಾನದ ಮೇಲೆ ರೈಟ್-ಕ್ಲಿಕ್ ಮಾಡಿ. |
04:17 | Atom ನ ಮೇಲೆ ಕ್ಲಿಕ್ ಮಾಡಿ. ಆಮೇಲೆ Display symbol ನ ಮೇಲೆ ಕ್ಲಿಕ್ ಮಾಡಿ. |
04:22 | ‘1,3-ಬ್ಯೂಟಾಡಾಈನ್’ನ 2D ರಚನೆಯನ್ನು 3D ರಚನೆಗೆ ಪರಿವರ್ತಿಸಲು, ಟೂಲ್ ಬಾರ್ ಮೇಲಿನ Save ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
04:30 | Save as ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:33 | File type ಫೀಲ್ಡ್ ನಲ್ಲಿ, MDL Molfile Format ( ಎಮ್-ಡಿ-ಎಲ್ ಮೋಲ್ ಫೈಲ್ ಫಾರ್ಮ್ಯಾಟ್) ಅನ್ನು ಆಯ್ಕೆಮಾಡಿ. |
04:39 | ಫೈಲ್ ನ ಹೆಸರನ್ನು 1,3-butadiene ಎಂದು ಟೈಪ್ ಮಾಡಿ. |
04:42 | ಡೆಸ್ಕ್ಟಾಪ್ ಮೇಲೆ ಫೈಲ್ ಅನ್ನು ಸೇವ್ ಮಾಡಲು Desktop ಅನ್ನು ಆಯ್ಕೆಮಾಡಿ. |
04:47 | ಆಮೇಲೆ Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:50 | ಪರ್ಯಾಯವಾಗಿ, ನೀವು ಫೈಲ್ ಅನ್ನು '.mol' ಅಥವಾ '.mdl' ಎಕ್ಸ್ಟೆನ್ಶನ್ ನೊಂದಿಗೆ ಸಹ ನೇರವಾಗಿ ಸೇವ್ ಮಾಡಬಹುದು. |
04:56 | ಉದಾಹರಣೆಗೆ, ಫೈಲ್ ನ ಹೆಸರನ್ನು 1,3butadiene.mol ಅಥವಾ '.mdl' ಎಂದು ಟೈಪ್ ಮಾಡಿ. |
05:06 | Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:09 | ರಚನೆಯನ್ನು 3D ಯಲ್ಲಿ ವೀಕ್ಷಿಸಲು, ಅಣುವಿನ ಮೇಲೆ ರೈಟ್-ಕ್ಲಿಕ್ ಮಾಡಿ. |
05:12 | Open With Molecules viewer ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ. |
05:17 | ಇದು 3D ಯಲ್ಲಿ, '1,3 ಬ್ಯೂಟಾಡಾಈನ್' ಆಗಿದೆ. |
05:20 | ನಾವು ರಚನೆಯಲ್ಲಿ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ದಯವಿಟ್ಟು ಗಮನಿಸಿ. |
05:23 | ರಚನೆಯನ್ನು ತಿರುಗಿಸಲು, ಕರ್ಸರನ್ನು ಅದರ ಮೇಲೆ ಇರಿಸಿ, ಮೌಸನ್ನು ಹಿಡಿದು ಎಳೆಯಿರಿ. |
05:31 | ಒಂದು ಅಸೈನ್ಮೆಂಟ್ ಎಂದು, ‘ಬೆಂಜೀನ್’ನ ರಚನೆಯನ್ನು 2D ಯಿಂದ 3D ಗೆ ಪರಿವರ್ತಿಸಿ. |
05:36 | ಈಗ, ರಾಸಾಯನಿಕ ಪ್ರತಿಕ್ರಿಯೆಗಳನ್ನು ಮತ್ತು ಪ್ರತಿಕ್ರಿಯೆಯ ಕಂಡಿಶನ್ ಗಳನ್ನು ‘ಡ್ರಾ’ ಮಾಡಲು ನಾವು ಕಲಿಯೋಣ. |
05:41 | ಇದು, ‘ಇಥೈಲ್ ಕ್ಲೋರೈಡ್’, ‘ಅಲ್ಕೋಹಾಲಿಕ್ ಪೊಟ್ಯಾಶಿಯಂ ಹೈಡ್ರೊಕ್ಸೈಡ್’ ಮತ್ತು ‘ಅಕ್ವೆಯಸ್ ಪೊಟ್ಯಾಶಿಯಂ ಹೈಡ್ರೊಕ್ಸೈಡ್’ ಗಳೊಂದಿಗೆ ಕ್ರಮವಾಗಿ ‘ಇಥೀನ್’ ಹಾಗೂ ‘ಇಥೆನಾಲ್’ಗಳನ್ನು ಉತ್ಪಾದಿಸುವ ಒಂದು ರಾಸಾಯನಿಕ ಪ್ರತಿಕ್ರಿಯೆಯಾಗಿದೆ. |
05:52 | ನಾನು ಹೊಸ GChemPaint (ಜಿ-ಕೆಮ್-ಪೇಂಟ್) ವಿಂಡೋ ಅನ್ನು ಓಪನ್ ಮಾಡಿದ್ದೇನೆ. |
05:55 | ಮೊದಲು, ನಾವು ‘ಇಥೈಲ್ ಕ್ಲೋರೈಡ್’ ರಚನೆಯನ್ನು ‘ಡ್ರಾ’ ಮಾಡೋಣ. |
05:59 | Add a chain ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
06:01 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
06:04 | ಮೊದಲನೆಯ ಹಾಗೂ ಎರಡನೆಯ ‘ಬಾಂಡ್’ನ ಸ್ಥಾನಗಳಲ್ಲಿ ಪರಮಾಣುಗಳನ್ನು ತೋರಿಸಲು, ಚೈನ್ ನ ಮೇಲೆ ರೈಟ್-ಕ್ಲಿಕ್ ಮಾಡಿ. |
06:10 | Current element ನ ‘ಡ್ರಾಪ್-ಡೌನ್ ಆರೋ ಬಟನ್’ನ ಮೇಲೆ ಕ್ಲಿಕ್ ಮಾಡಿ. |
06:13 | ಟೇಬಲ್ ನಿಂದ ‘Cl’ ಅನ್ನು ಆಯ್ಕೆಮಾಡಿ. |
06:16 | Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
06:20 | ಮೂರನೆಯ ‘ಬಾಂಡ್’ನ ಸ್ಥಾನದ ಮೇಲೆ ಕ್ಲಿಕ್ ಮಾಡಿ. |
06:23 | ‘ಇಥೈಲ್ ಕ್ಲೋರೈಡ್’ನ ರಚನೆಯು ‘ಡ್ರಾ’ ಮಾಡಲ್ಪಟ್ಟಿದೆ. |
06:26 | Add or modify a group of atoms ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
06:31 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. Alc.KOH (ಎ-ಎಲ್-ಸಿ ಡಾಟ್ ಕೆ-ಒ-ಎಚ್) ಎಂದು ಟೈಪ್ ಮಾಡಿ. |
06:37 | ಇನ್ನೊಮ್ಮೆ ಕ್ಲಿಕ್ ಮಾಡಿ ಮತ್ತು Aq.KOH (ಎ-q- ಡಾಟ್ ಕೆ-ಒ-ಎಚ್) ಎಂದು ಟೈಪ್ ಮಾಡಿ. |
06:42 | Add an arrow for an irreversible reaction ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
06:47 | ಇಲ್ಲಿಯ ಸ್ಕ್ರೋಲರ್ ಅನ್ನು ಬಳಸಿ ನೀವು Arrow length ಅನ್ನು ಬದಲಾಯಿಸಬಹುದು. |
06:51 | ನಾನು Arrow length ಅನ್ನು 280 ಕ್ಕೆ (ಇನ್ನೂರೆಂಭತ್ತು) ಹೆಚ್ಚಿಸುವೆನು. |
06:54 | Ethyl Chloride ನ ಬದಿಯಲ್ಲಿ, ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
06:58 | ‘ಇಥೈಲ್ ಕ್ಲೋರೈಡ್’ನ ಕೆಳಗೆ ಕ್ಲಿಕ್ ಮಾಡಿ. |
07:01 | ಕೆಳಮುಖವಾಗಿ ತೋರಿಸಲು ಮೌಸನ್ನು ಹಿಡಿದುಕೊಂಡು ‘ಆರೋ’ವನ್ನು ತಿರುಗಿಸಿ. |
07:05 | Selection ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
07:08 | ‘ಅಲ್ಕೋಹಾಲಿಕ್ ಪೊಟ್ಯಾಶಿಯಂ ಹೈಡ್ರೊಕ್ಸೈಡ್’ (Alc.KOH) ಅನ್ನು ಮೊದಲನೆಯ ‘ಆರೋ’ದ ಮೇಲ್ಗಡೆ ಇರಿಸಿ. |
07:13 | ‘ಅಕ್ವೆಯಸ್ ಪೊಟ್ಯಾಶಿಯಂ ಹೈಡ್ರೊಕ್ಸೈಡ್’ (Aq.KOH) ಅನ್ನು ಎರಡನೆಯ ‘ಆರೋ’ದ ಹತ್ತಿರದಲ್ಲಿ ಇರಿಸಿ. |
07:18 | ‘ಅಲ್ಕೋಹಾಲಿಕ್ ಪೊಟ್ಯಾಶಿಯಂ ಹೈಡ್ರೊಕ್ಸೈಡ್’ (Alc.KOH) ಅನ್ನು ಆಯ್ಕೆಮಾಡಿ. |
07:22 | ‘ಆರೋ’ದ ಮೇಲೆ ರೈಟ್-ಕ್ಲಿಕ್ ಮಾಡಿ. ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. |
07:25 | Arrow ಅನ್ನು ಆಯ್ಕೆಮಾಡಿ ಮತ್ತು Attach selection to arrow ದ ಮೇಲೆ ಕ್ಲಿಕ್ ಮಾಡಿ. |
07:29 | Arrow associated ಎನ್ನುವ ತಲೆಬರಹವಿರುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
07:34 | Role ನ ಡ್ರಾಪ್-ಡೌನ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ. |
07:37 | ಲಿಸ್ಟ್ ನಿಂದ Catalyst ಅನ್ನು ಆಯ್ಕೆಮಾಡಿ. Close ನ ಮೇಲೆ ಕ್ಲಿಕ್ ಮಾಡಿ. |
07:42 | ‘ಅಲ್ಕೋಹಾಲಿಕ್ ಪೊಟ್ಯಾಶಿಯಂ ಹೈಡ್ರೊಕ್ಸೈಡ್’ (Alc.KOH), ‘ಕ್ಯಾಟಾಲಿಸ್ಟ್’ನ ಹಾಗೆ ‘ಆರೋ’ಗೆ ಜೋಡಿಸಿಕೊಳ್ಳುತ್ತದೆ ಎಂದು ಪರಿಶೀಲಿಸಲು ,‘ಆರೋ’ವನ್ನು ಎಳೆಯಿರಿ. |
07:49 | ‘ಅಕ್ವೆಯಸ್ ಪೊಟ್ಯಾಶಿಯಂ ಹೈಡ್ರೊಕ್ಸೈಡ್’ (Aq.KOH) ಗಾಗಿ ನಾವು ಈ ಪ್ರಕ್ರಿಯೆಯನ್ನು ಪುನಃ ಮಾಡೋಣ. |
07:58 | ಜೋಡಣೆಯನ್ನು ‘ಕ್ಯಾಟಾಲಿಸ್ಟ್’ನ ಹಾಗೆ ನೋಡಲು ಎಳೆಯಿರಿ. |
08:02 | ‘ಇಥೈಲ್ ಕ್ಲೋರೈಡ್’ ರಚನೆಯನ್ನು ಆಯ್ಕೆಮಾಡಲು Selection ಟೂಲ್ನ ಮೇಲೆ ಕ್ಲಿಕ್ ಮಾಡಿ. |
08:06 | ಕಾಪಿ ಮಾಡಲು Ctrl +C ಒತ್ತಿ ಹಾಗೂ ರಚನೆಗಳನ್ನು ಪೇಸ್ಟ್ ಮಾಡಲು Ctrl +V ಯನ್ನು ಎರಡು ಸಲ ಒತ್ತಿ. |
08:11 | ರಚನೆಗಳನ್ನು ಎಳೆದು ಸರಿಯಾದ ಸ್ಥಾನಗಳಲ್ಲಿ ಇರಿಸಿ. |
08:15 | ಪ್ರತಿಕ್ರಿಯೆಗಳಲ್ಲಿ, ‘ಇಥೈಲ್ ಕ್ಲೋರೈಡ್, ‘ಇಥೀನ್’ಅನ್ನು ಕೊಡಲು ‘ಅಲ್ಕೋಹಾಲಿಕ್ ಪೊಟ್ಯಾಶಿಯಂ ಹೈಡ್ರೊಕ್ಸೈಡ್’ ನೊಂದಿಗೆ ಪ್ರತಿಕ್ರಿಯೆ ಮಾಡುತ್ತದೆ. |
08:21 | ‘ಇಥೈಲ್ ಕ್ಲೋರೈಡ್’, ‘ಇಥೆನಾಲ್’ಅನ್ನು ಕೊಡಲು ‘ಅಕ್ವೆಯಸ್ ಪೊಟ್ಯಾಶಿಯಂ ಹೈಡ್ರೊಕ್ಸೈಡ್’ ನೊಂದಿಗೆ ಪ್ರತಿಕ್ರಿಯೆ ಮಾಡುತ್ತದೆ. |
08:27 | ‘ಇಥೀನ್’ಅನ್ನು ಪಡೆಯಲು, Eraser ಟೂಲ್ನ ಮೇಲೆ ಕ್ಲಿಕ್ ಮಾಡಿ ಮತ್ತು ‘ಇಥೈಲ್ ಕ್ಲೋರೈಡ್’ನ ‘Cl’ ‘ಬಾಂಡ್’ಅನ್ನು ತೆಗೆದುಹಾಕಿ. |
08:34 | ‘ಇಥೇನ್’ ರೂಪುಗೊಂಡಿದೆ. |
08:37 | ಟೂಲ್ ಬಾಕ್ಸ್ ನಲ್ಲಿ, Current element ‘ಕಾರ್ಬನ್’ ಆಗಿದೆ ಎಂದು ಖಚಿತಪಡಿಸಿಕೊಳ್ಳಿ. |
08:42 | Add a bond ಟೂಲ್ನ ಮೇಲೆ ಕ್ಲಿಕ್ ಮಾಡಿ ಮತ್ತು ‘ಡಬಲ್ ಬಾಂಡ್’ಅನ್ನು ಪಡೆಯಲು ‘ಬಾಂಡ್’ನ ಮೇಲೆ ಕ್ಲಿಕ್ ಮಾಡಿ. |
08:48 | ‘ಇಥೀನ್’ ರೂಪುಗೊಂಡಿದೆ. |
08:50 | ‘ಇಥೆನಾಲ್’ಅನ್ನು ಪಡೆಯಲು, ಕೀಬೋರ್ಡ್ ಮೇಲಿನ ‘O’ ಒತ್ತಿ. |
08:54 | Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
08:58 | ಆಮೇಲೆ ‘ಇಥೈಲ್ ಕ್ಲೋರೈಡ್’ನ, ‘Cl’ ಮೇಲೆ ಕ್ಲಿಕ್ ಮಾಡಿ. |
09:02 | ಈಗ ನಾವು ಕಾರಕಗಳನ್ನು ಹಾಗೂ ಉತ್ಪನ್ನಗಳನ್ನು 2D ಯಿಂದ 3D ಗೆ ಪರಿವರ್ತಿಸೋಣ. |
09:07 | ಒಂದು ಹೊಸ ಫೈಲ್ ಅನ್ನು ಓಪನ್ ಮಾಡಿ. ‘ಇಥೈಲ್ ಕ್ಲೋರೈಡ್’ಅನ್ನು ‘ಕಾಪಿ’ ಮಾಡಿ ಮತ್ತು ಅದನ್ನು ಹೊಸ ಫೈಲ್ ನಲ್ಲಿ ಪೇಸ್ಟ್ ಮಾಡಿ. |
09:15 | Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:17 | Save as ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
09:20 | ಫೈಲ್ ನ ಹೆಸರನ್ನು ethylchloride.mol ಎಂದು ಟೈಪ್ ಮಾಡಿ. |
09:24 | ನಿಮ್ಮ ಫೈಲ್ ಅನ್ನು ನಿಮ್ಮ ಡೆಸ್ಕ್ಟಾಪ್ ಮೇಲೆ ಸೇವ್ ಮಾಡಲು, Desktop ನ ಮೇಲೆ ಕ್ಲಿಕ್ ಮಾಡಿ. |
09:28 | Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:31 | ಹೀಗೆಯೇ, ‘ಇಥೀನ್’ಅನ್ನು ಒಂದು ಹೊಸ ಫೈಲ್ ನಲ್ಲಿ ‘ಕಾಪಿ’ ಮಾಡಿ. |
09:34 | Ethene.mol ಎಂದು ಸೇವ್ ಮಾಡಿ. |
09:37 | ‘ಇಥೆನಾಲ್’ಅನ್ನು ಒಂದು ಹೊಸ ಫೈಲ್ ನಲ್ಲಿ ‘ಕಾಪಿ’ ಮಾಡಿ. |
09:39 | Ethanol.mol ಎಂದು ಸೇವ್ ಮಾಡಿ. |
09:42 | ನಾನು ಫೈಲ್ ಗಳನ್ನು ಆಗಲೇ ನನ್ನ ‘ಡೆಸ್ಕ್ಟಾಪ್’ ಮೇಲೆ ಸೇವ್ ಮಾಡಿದ್ದೆ. |
09:46 | ನಾನು ಈಗಿನ ವಿಂಡೋ ಅನ್ನು ಚಿಕ್ಕದಾಗಿಸುತ್ತೇನೆ. |
09:49 | ಮತ್ತು ನಾನು ನನ್ನ ಫೈಲ್ ಗಳನ್ನು ಸೇವ್ ಮಾಡಿದ Desktop ಫೋಲ್ಡರ್ ಗೆ ಹೋಗುವೆನು. |
09:54 | ಸಂಯುಕ್ತವನ್ನು 3D ಯಲ್ಲಿ ವೀಕ್ಷಿಸಲು, ಫೈಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ, Open with Molecules viewer ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ. |
10:02 | ಹೀಗೆಯೇ, ನಾನು ಎಲ್ಲ ಫೈಲ್ ಗಳನ್ನು Molecules viewer ನಲ್ಲಿ ಓಪನ್ ಮಾಡುವೆನು. |
10:07 | ಸಂಯುಕ್ತಗಳನ್ನು 3D ಯಲ್ಲಿ ಗಮನಿಸಿ. |
10:11 | ನಾವು ಕಲಿತಿರುವುದನ್ನು ಸಾರಾಂಶಗೊಳಿಸೋಣ. |
10:14 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
10:16 | * NIST WebBook page for the molecule (ಎನ್-ಐ-ಎಸ್-ಟಿ ವೆಬ್‌ಬುಕ್ ಪೇಜ್ ಫಾರ್ ದ ಮೊಲೆಕ್ಯುಲ್) |
10:19 | * PubChem page for the molecule (ಪಬ್-ಕೆಮ್ ಪೇಜ್ ಫಾರ್ ದ ಮೊಲೆಕ್ಯುಲ್) |
10:22 | * ‘ಕೆಮಿಕಲ್ ಕ್ಯಾಲ್ಕ್ಯುಲೇಟರ್’ಅನ್ನು ಬಳಸಿ ಸಂಯುಕ್ತದ ಅಣುತೂಕವನ್ನು (molecular weight) ಕಂಡುಹಿಡಿಯುವುದು. |
10:25 | * ಅಣುವಿನ ‘ಮಾಸ್ ಸ್ಪೆಕ್ಟ್ರಮ್’ನ ಗ್ರಾಫನ್ನು ಪಡೆಯುವುದು |
10:29 | * ಅಣುವನ್ನು '.mol' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವುದು |
10:32 | * ಪ್ರತಿಕ್ರಿಯೆಯ ‘ಕಂಡಿಶನ್’ಗಳನ್ನು ಹಾಗೂ ಕಾರಕಗಳನ್ನು (reagents) ಪ್ರತಿಕ್ರಿಯೆಯ ‘ಆರೋ’ದ ಮೇಲೆ ಸೇರಿಸುವುದು |
10:36 | * ಒಂದು ಪ್ರತಿಕ್ರಿಯೆಯನ್ನು ಸೇರಿಸುವುದು ಹಾಗೂ ಎಡಿಟ್ ಮಾಡುವುದು |
10:39 | * ಪ್ರತಿಕ್ರಿಯೆಯ ಅಣುಗಳನ್ನು 3D ರಚನೆಗಳನ್ನಾಗಿ ಪರಿವರ್ತಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ. |
10:42 | ಒಂದು ಅಸೈನ್ಮೆಂಟ್ ಎಂದು, |
10:44 | ಕೆಳಗಿನವುಗಳ ರಾಸಾಯನಿಕ ಪ್ರತಿಕ್ರಿಯೆಯನ್ನು ‘ಡ್ರಾ’ ಮಾಡಿ: 1) 'ಕಾರ್ಬನ್ ಟೆಟ್ರಾ ಕ್ಲೋರೈಡ್' (CCl4) ಅನ್ನು ‘ಕ್ಯಾಟಾಲಿಸ್ಟ್' ಆಗಿ ಹೊಂದಿರುವ 'ಪ್ರೊಪೀನ್' (C3H6) ಮತ್ತು 'ಬ್ರೋಮಿನ್'(Br-Br) ಅಣುಗಳು. |
10:51 | 'ಅನ್-ಹೈಡ್ರಸ್ ಅಲ್ಯೂಮಿನಿಯಂ ಕ್ಲೋರೈಡ್' (AlCl3) ಅನ್ನು ‘ಕ್ಯಾಟಾಲಿಸ್ಟ್' ಆಗಿ ಹೊಂದಿರುವ ‘ಬೆಂಜೀನ್’(C6H6) ಮತ್ತು ‘ಕ್ಲೋರಿನ್’ (Cl-Cl) ಅಣುಗಳು. |
10:57 | ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಿಸಬೇಕು. |
11:01 | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial |
11:05 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
11:08 | ಒಳ್ಳೆಯ ‘ಬ್ಯಾಂಡ್‌ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
11:12 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
11:17 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
11:20 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
11:27 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
11:31 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
11:36 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
11:41 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .
ವಂದನೆಗಳು. |