GChemPaint/C2/Introduction-to-GChemPaint/Kannada

From Script | Spoken-Tutorial
Revision as of 15:37, 17 March 2017 by Pratik kamble (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಎಲ್ಲರಿಗೂ ನಮಸ್ಕಾರ.
00:02 Introduction to GChemPaint (ಇಂಟ್ರೊಡಕ್ಶನ್ ಟು ಜೀ-ಕೆಮ್-ಪೇಂಟ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:07 ಈ ‘ಟ್ಯುಟೋರಿಯಲ್’ನಲ್ಲಿ ನಾವು,
00:11 GChemPaint (ಜೀ-ಕೆಮ್-ಪೇಂಟ್),
00:13 ಉಪಯೋಗಗಳು ಮತ್ತು ಪ್ರಯೋಜನಗಳು,
00:16 ‘ಇನ್ಸ್ಟಾಲ್’ ಮಾಡುವುದು, ಹೊಸ ‘ಫೈಲ್’ಅನ್ನು ಓಪನ್ ಮಾಡುವುದು,
00:20 ‘ಮೆನ್ಯೂ ಬಾರ್’, ‘ಟೂಲ್ ಬಾರ್’ ಮತ್ತು ಸ್ಟೇಟಸ್ ಬಾರ್ ಇವುಗಳ ಬಗ್ಗೆ ಕಲಿಯುವೆವು.
00:25 ನಾವು
00:28 ‘ಡಿಸ್ಪ್ಲೇ ಏರಿಯಾ’,
00:30 ‘ಡಾಕ್ಯೂಮೆಂಟ್ ಪ್ರಾಪರ್ಟೀಸ್’,
00:32 ‘ಟೂಲ್ ಬಾಕ್ಸ್’ಅನ್ನು ಬಳಸುವುದು ಮತ್ತು
00:34 ‘ಡ್ರಾಯಿಂಗ್’ಅನ್ನು '.gchempaint' ಎಕ್ಸ್ಟೆನ್ಶನ್ ನೊಂದಿಗೆ ಸೇವ್ ಮಾಡುವುದು ಇತ್ಯಾದಿಗಳ ಬಗ್ಗೆ ಸಹ ಕಲಿಯುವೆವು.
00:40 ಇಲ್ಲಿ ನಾನು,
00:42 Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು)
00:47 GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ.
00:53 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು ನಿಮಗೆ,
00:59 VIII ನೇ ತರಗತಿಯವರೆಗಿನ ‘ಕೆಮಿಸ್ಟ್ರಿ’ಯ ಪರಿಚಯ ಇರಬೇಕು.
01:04 Ubuntu Software Center (ಉಬಂಟು ಸಾಫ್ಟ್ವೇರ್ ಸೆಂಟರ್) ಅನ್ನು ಬಳಸಿ GChemPaint ಅನ್ನು ಬಹಳ ಸುಲಭವಾಗಿ ಇನ್ಸ್ಟಾಲ್ ಮಾಡಬಹುದು.
01:12 Ubuntu Software Center ನ ಕುರಿತು ಹೆಚ್ಚಿನ ಮಾಹಿತಿಗಾಗಿ,
01:16 ದಯವಿಟ್ಟು ನಮ್ಮ ವೆಬ್ಸೈಟ್ ಮೇಲಿನ Linux ಟ್ಯುಟೋರಿಯಲ್ ಅನ್ನು ನೋಡಿ.
01:23 GChemPaint (ಜೀ-ಕೆಮ್-ಪೇಂಟ್) ಎಂದರೇನು?
01:26 ‘ಜೀ-ಕೆಮ್-ಪೇಂಟ್’, ಎರಡು ‘ಡೈಮೆನ್ಶನ್’ಗಳ chemical structure editor (ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಆಗಿದೆ.
01:32 ಇದು ‘ಮಲ್ಟಿಪಲ್ ಡಾಕ್ಯುಮೆಂಟ್ ಇಂಟರ್ಫೇಸ್’ಅನ್ನು ಹೊಂದಿದೆ.
01:37 ‘ಜೀ-ಕೆಮ್-ಪೇಂಟ್’,
01:40 ಎರಡು ‘ಡೈಮೆನ್ಶನ್’ಗಳ ರಾಸಾಯನಿಕ ರಚನೆಗಳನ್ನು ‘ಡ್ರಾ’ ಮತ್ತು ‘ಡಿಸ್ಪ್ಲೇ’ ಮಾಡಲು,
01:46 ‘ಟೆಂಪ್ಲೇಟ್’ಗಳನ್ನು ‘ಡ್ರ್ಯಾಗ್’ ಮತ್ತು ‘ಡ್ರಾಪ್’ ಮಾಡಲು,
01:50 ‘ಬಾಂಡ್’ಗಳ ಉದ್ದ, ಕೋನ ಹಾಗೂ ಅಗಲಗಳನ್ನು ಬದಲಾಯಿಸಲು,
01:55 ಮತ್ತು ಸಂಯುಕ್ತ (compound) ಗಳ ‘ಮೊಲೆಕ್ಯುಲರ್ ವೇಟ್’ಅನ್ನು ಕಂಡುಹಿಡಿಯಲು ‘ಕೆಮಿಕಲ್ ಕ್ಯಾಲ್ಕುಲೇಟರ್'ಅನ್ನು ಬಳಸಲು ನಿಮಗೆ ಅನುಮತಿಸುತ್ತದೆ.
02:03 ‘ಜೀ-ಕೆಮ್-ಪೇಂಟ್’,
02:05 ರಾಸಾಯನಿಕ ರಚನೆಗಳ ಸುಲಭ ದೃಶ್ಯೀಕರಣ (Easy visualization),
02:11 ಎರಡು ‘ಡೈಮೆನ್ಶನ್’ಗಳ ರಚನೆಗಳನ್ನು ಮೂರು ‘ಡೈಮೆನ್ಶನ್’ಗಳ ರಚನೆಗಳನ್ನಾಗಿ ಪರಿವರ್ತಿಸಲು,
02:17 ‘ಸ್ಟ್ರಕ್ಚರ್’ಗಳ ‘ಮ್ಯಾಗ್ನಿಫಿಕೇಶನ್’(ವರ್ಧನೆ),
02:21 ಮತ್ತು ಅಣುಗಳ ‘ಆಟೋಮ್ಯಾಟಿಕ್’ ಹಾಗೂ ‘ಮ್ಯಾನ್ಯೂವಲ್’ ನಿಯೋಜನೆಯನ್ನು (assignment) ಮಾಡಲು ಸಹಾಯ ಮಾಡುತ್ತದೆ.
02:26 ಹೊಸ ‘ಜೀ-ಕೆಮ್-ಪೇಂಟ್ ಅಪ್ಪ್ಲಿಕೇಶನ್’ಅನ್ನು ಹೇಗೆ ಓಪನ್ ಮಾಡುವುದೆಂದು ನೋಡೋಣ.
02:33 Dash Home ನ ಮೇಲೆ ಕ್ಲಿಕ್ ಮಾಡಿ >> ಸರ್ಚ್-ಬಾರ್ ಕಾಣಿಸಿಕೊಳ್ಳುತ್ತದೆ >> ಸರ್ಚ್-ಬಾರ್ ನಲ್ಲಿ gchempaint ಎಂದು ಟೈಪ್ ಮಾಡಿ.
02:41 ‘GChemPaint ಐಕಾನ್’ನ ಮೇಲೆ ಕ್ಲಿಕ್ ಮಾಡಿ.
02:46 ‘ಜೀ-ಕೆಮ್-ಪೇಂಟ್’ ಅಪ್ಪ್ಲಿಕೇಶನ್ ಅನ್ನು ಟರ್ಮಿನಲ್ ನಿಂದ ಸಹ ನಾವು ಓಪನ್ ಮಾಡಬಹುದು.
02:52 ‘ಟರ್ಮಿನಲ್’ಅನ್ನು ಓಪನ್ ಮಾಡಲು Ctrl, Alt ಮತ್ತುT ಕೀಗಳನ್ನು ಒಟ್ಟಿಗೇ ಒತ್ತಿ.
02:58 gchempaint ಎಂದು ಟೈಪ್ ಮಾಡಿ Enter ಒತ್ತಿ.
03:04 GChemPaint ಅಪ್ಪ್ಲಿಕೇಶನ್, ಓಪನ್ ಆಗುತ್ತದೆ.
03:08 ಒಂದು ಮಾದರಿ GChemPaint ವಿಂಡೋ ಹೀಗೆ ಕಾಣುತ್ತದೆ.
03:13 ಇದು Menubar ಆಗಿದೆ.
03:15 ಇತರ ವಿಂಡೋ ಆಧರಿತ ‘ಅಪ್ಪ್ಲಿಕೇಶನ್’ಗಳಂತೆ ‘ಜೀ-ಕೆಮ್-ಪೇಂಟ್’, ‘ಸ್ಟ್ಯಾಂಡರ್ಡ್ ಮೆನ್ಯೂ ಬಾರ್’ಅನ್ನು ಹೊಂದಿದೆ.
03:22 ‘ಮೆನ್ಯೂ ಬಾರ್’, File, Edit, View, Tools, Windows and Help ಆಯ್ಕೆಗಳಂತಹ ಮೆನ್ಯೂ ಐಟಂಗಳನ್ನು ಒಳಗೊಂಡಿದೆ.
03:34 ಟೂಲ್ ಬಾರ್, ಪದೇ ಪದೇ ಬಳಸುವ ‘ಕಮಾಂಡ್’ಗಳನ್ನು ಐಕಾನ್ ಗಳಾಗಿ ಹೊಂದಿದೆ.
03:41 ಇಲ್ಲಿ Open a New file (ಓಪನ್ ಎ ನ್ಯೂ ಫೈಲ್),
03:45 Open existing file (ಓಪನ್ ಎಗ್ಸಿಸ್ಟಿಂಗ್ ಫೈಲ್) ,
03:48 Save a file ಮತ್ತು Print a file ಗಳಿಗಾಗಿ ಐಕಾನ್ ಗಳಿವೆ.
03:53 ಇದು ‘ಡಿಸ್ಪ್ಲೇ ಏರಿಯಾ’ ಆಗಿದೆ.
03:56 ನಾವು ಡ್ರಾ ಹಾಗೂ ಎಡಿಟ್ ಮಾಡುವ ‘ಫೈಲ್’ನ ರಚನೆ (structures) ಮತ್ತು ವಿಷಯಗಳನ್ನು ‘ಡಿಸ್ಪ್ಲೇ ಏರಿಯಾ’ ತೋರಿಸುತ್ತದೆ.
04:06 ಟೂಲ್ ಬಾಕ್ಸ್ ನಿಂದ ಟೂಲ್ಗಳನ್ನು ‘ಡಿಸ್ಪ್ಲೇ ಏರಿಯಾ’ದಲ್ಲಿ ನಾವು ‘ಡ್ರ್ಯಾಗ್’ ಮತ್ತು ‘ಡ್ರಾಪ್’ ಮಾಡಬಹುದು.
04:14 ‘ಜೀ-ಕೆಮ್-ಪೇಂಟ್’ನ ಈಗಿನ ಚಟುವಟಿಕೆಯ ಬಗ್ಗೆ ಮಾಹಿತಿಯನ್ನು ‘ಸ್ಟೇಟಸ್ ಬಾರ್’ ತೋರಿಸುತ್ತದೆ.
04:20 ಮೆನ್ಯೂ ಐಟಂಗಳ ಬಗ್ಗೆ ‘ಕಾಂಟೆಕ್ಸ್ಚುಯೆಲ್’ (ಸಾಂದರ್ಭಿಕ) ಮಾಹಿತಿಯನ್ನು ಸಹ ಅದು ತೋರಿಸುತ್ತದೆ.
04:28 ಈಗ ನಾನು ‘ಡಾಕ್ಯೂಮೆಂಟ್ ಪ್ರಾಪರ್ಟೀಸ್’ ಬಗ್ಗೆ ವಿವರಿಸುವೆನು.
04:33 Document Properties ವಿಂಡೋವನ್ನು ಓಪನ್ ಮಾಡಲು,
04:37 File ಮೆನ್ಯೂ ನ ಮೇಲೆ ಕ್ಲಿಕ್ ಮಾಡಿ.
04:39 Properties ಗೆ ಹೋಗಿ, ಅದರ ಮೇಲೆ ಕ್ಲಿಕ್ ಮಾಡಿ.
04:43 Document Properties ವಿಂಡೋ ಓಪನ್ ಆಗುತ್ತದೆ.
04:47 ‘ಡಾಕ್ಯೂಮೆಂಟ್ ಪ್ರಾಪರ್ಟೀಸ್’ ವಿಂಡೋವನ್ನು ಗರಿಷ್ಠಗೊಳಿಸಲು ನಾನು ಅದನ್ನುಎಳೆಯುವೆನು.
04:53 ‘ಡಾಕ್ಯೂಮೆಂಟ್ ಪ್ರಾಪರ್ಟೀಸ್’ ವಿಂಡೋ, ಈ ಕೆಳಗಿನ ‘ಫೀಲ್ಡ್’ಗಳನ್ನು ಹೊಂದಿದೆ.
04:59 Title – ‘ಡಾಕ್ಯೂಮೆಂಟ್’ನ ಶೀರ್ಷಿಕೆಯನ್ನು ನಾವು Propane ಎಂದು ಟೈಪ್ ಮಾಡೋಣ.
05:06 Author's Name - ಲೇಖಕರ ಹೆಸರನ್ನು ನಾವು Madhuri ಎಂದು ಟೈಪ್ ಮಾಡೋಣ.
05:14 Email – ಇದನ್ನು ನಾವು ಹಾಗೆಯೇ ಬಿಡೋಣ.
05:17 History- ಈ ‘ಫೀಲ್ಡ್’, ‘ಡಾಕ್ಯೂಮೆಂಟ್’ನ Creation date ಅನ್ನು ತೋರಿಸುತ್ತದೆ.
05:23 ಇದು ‘ಡಾಕ್ಯೂಮೆಂಟ್’ನ Revision date ಅನ್ನು ಸಹ ತೋರಿಸುತ್ತದೆ.
05:28 ಎಂದರೆ, ಆಮೇಲೆ ಎಡಿಟ್ ಮಾಡಿದ ದಿನಾಂಕವನ್ನು ಸಹ ಇದು ತೋರಿಸುತ್ತದೆ.
05:35 Theme – ಈ ‘ಫೀಲ್ಡ್’ಅನ್ನು GChemPaint ಎಂದು ಇಡೋಣ.
05:39 Comments – Comments (ಕಾಮೆಂಟ್ಸ್) ‘ಫೀಲ್ಡ್’ನಲ್ಲಿ ನಾವು ‘ಡಾಕ್ಯೂಮೆಂಟ್’ಗೆ ಸಂಬಂಧಿಸಿದ ವಿಷಯವನ್ನು ಸೇರಿಸಬಹುದು.
05:46 ನಾವು ‘ಕಂಪೌಂಡ್’ನ ಹೆಸರು ಮತ್ತು ಅದರ ಫಾರ್ಮುಲಾವನ್ನು ನಮೂದಿಸೋಣ.
05:51 Propane CH3-CH2-CH3
06:01 ವಿಂಡೋವನ್ನು ಮುಚ್ಚಲು, ನಾವು Close ಬಟನ್ ನ ಮೇಲೆ ಕ್ಲಿಕ್ ಮಾಡೋಣ.
06:05 ನಂತರ ನಾವು ‘ಟೂಲ್ ಬಾಕ್ಸ್’ ನ ಬಗ್ಗೆ ತಿಳಿಯೋಣ.
06:09 ‘ಟೂಲ್ ಬಾಕ್ಸ್’, ವಿವಿಧ ಟೂಲ್ ಗಳಿಗಾಗಿ ಬಟನ್ ಗಳನ್ನು ಒಳಗೊಂಡಿದೆ.
06:14 ‘ಟೂಲ್ ಬಾಕ್ಸ್’, ಸಕ್ರಿಯ ‘ಡಾಕ್ಯೂಮೆಂಟ್ ವಿಂಡೋ’ದೊಂದಿಗೆ ತೋರಿಸಲ್ಪಡುತ್ತದೆ.
06:20 ‘ಟೂಲ್ ಬಾಕ್ಸ್’ನ ‘ಬಟನ್’ಗಳನ್ನು ಬಳಸಿ ನಾವು ಈಗ ‘ಸ್ಟ್ರಕ್ಚರ್’ಗಳನ್ನು ಡ್ರಾ ಮಾಡೋಣ.
06:25 ಮೊದಲು ನಾವು Propane (ಪ್ರೊಪೇನ್) ದ ‘ಸ್ಟ್ರಕ್ಚರ್’ಅನ್ನು ಡ್ರಾ ಮಾಡೋಣ.
06:30 Propane, CH3-CH2-CH3 ಎಂದು ಆಗಿದೆ.
06:36 Carbon (ಕಾರ್ಬನ್) ಚೈನ್ ಅನ್ನು ಡ್ರಾ ಮಾಡಲು, ‘ಟೂಲ್ ಬಾಕ್ಸ್’ನಿಂದ Add a Chain ಎನ್ನುವ ‘ಟೂಲ್’ಅನ್ನು ನಾವು ಬಳಸೋಣ.
06:42 Add a Chain ಟೂಲ್ ನ ಮೇಲೆ ಕ್ಲಿಕ್ ಮಾಡಿ.
06:45 ನಂತರ ‘ಡಿಸ್ಪ್ಲೇ ಏರಿಯಾ’ ದ ಮೇಲೆ ಕ್ಲಿಕ್ ಮಾಡಿ.
06:48 ‘ಡಿಸ್ಪ್ಲೇ ಏರಿಯಾ’ದ ಮೇಲೆ ಒಂದು ‘ಕಾರ್ಬನ್ ಚೈನ್’ ಡ್ರಾ ಮಾಡಲ್ಪಟ್ಟಿದೆ.
06:53 ‘ಚೈನ್’ನ ‘ಓರಿಯೆಂಟೇಶನ್’ಅನ್ನು ಬದಲಾಯಿಸಲು,
06:57 Add a Chain ಟೂಲ್ ನ ಮೇಲೆ ಕ್ಲಿಕ್ ಮಾಡಿ.
07:00 ‘ಚೈನ್’ನ ದಿಕ್ಕನ್ನು ಬದಲಾಯಿಸಲು, ‘ಡಿಸ್ಪ್ಲೇ ಏರಿಯಾ’ದಲ್ಲಿ, ‘ಮೌಸ್’ನ ‘ಲೆಫ್ಟ್ ಬಟನ್’ಅನ್ನು ಕ್ಲಿಕ್ ಮಾಡಿ ಹಿಡಿದುಕೊಳ್ಳಿ.
07:07 ‘ಚೈನ್’ನ ದಿಕ್ಕನ್ನು ಸ್ಥಿರಪಡಿಸುವವರೆಗೆ ‘ಮೌಸ್’ನ ಲೆಫ್ಟ್ ಬಟನ್ ಅನ್ನು ಬಿಡಬೇಡಿ.
07:15 ದಿಕ್ಕನ್ನು ಸ್ಥಿರಪಡಿಸಿದ ನಂತರ ‘ಮೌಸ್’ನ ಲೆಫ್ಟ್ ಬಟನ್ ಅನ್ನು ಬಿಟ್ಟುಬಿಡಿ.
07:20 ‘ಕಾರ್ಬನ್ ಚೈನ್’ ಚಿತ್ರಿಸಿರುವುದನ್ನು ನಾವು ನೋಡುತ್ತೇವೆ.
07:24 ನಾವು ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿದರೆ, ‘ಚೈನ್’ನ ಉದ್ದ ಹಾಗೂ ಓರಿಯಂಟೇಶನ್ ಗಳು ಸ್ಥಿರವಾಗುತ್ತವೆ ಎಂದು ಗಮನಿಸಿ.
07:33 ‘ಚೈನ್’ನ ಮೇಲೆ, ಪ್ರತಿಯೊಂದು ಸ್ಥಾನದಲ್ಲಿ ನಾವು ಈಗ ಅಣುಗಳನ್ನು ತೋರಿಸೋಣ.
07:39 ಇಲ್ಲಿ ಅಣುಗಳನ್ನು ತೋರಿಸಲು 3 ಸ್ಥಾನಗಳಿವೆ.
07:43 ಮೊದಲನೆಯ ಸ್ಥಾನದ ಮೇಲೆ ರೈಟ್ ಕ್ಲಿಕ್ ಮಾಡಿ.
07:47 ಒಂದು ಸಬ್-ಮೆನ್ಯೂ ಓಪನ್ ಆಗುತ್ತದೆ.
07:49 ಈ ಸ್ಥಾನದಲ್ಲಿ ಅಣುಗಳನ್ನು ತೋರಿಸಲು, Atom ಅನ್ನು ಆಯ್ಕೆಮಾಡಿ. ಆಮೇಲೆ Display symbol ನ ಮೇಲೆ ಕ್ಲಿಕ್ ಮಾಡಿ.
07:59 ಹೀಗೆಯೇ, ನಾವು ಅಣುಗಳನ್ನು ಎಲ್ಲ ಸ್ಥಾನಗಳ ಮೇಲೆ ತೋರಿಸೋಣ.
08:04 ರೈಟ್ ಕ್ಲಿಕ್ ಮಾಡಿ. Atom ಅನ್ನು ಆಯ್ಕೆ ಮಾಡಿ.
08:07 Display symbol ದ ಮೇಲೆ ಕ್ಲಿಕ್ ಮಾಡಿ.
08:12 ಇಲ್ಲಿ ‘ಪ್ರೊಪೇನ್’ದ ‘ಸ್ಟ್ರಕ್ಚರ್’ಅನ್ನು ಚಿತ್ರಿಸಲಾಗಿದೆ.
08:17 ನಂತರ ನಾವು, ‘ಪೆಂಟೇನ್’ನ ಸ್ಟ್ರಕ್ಚರ್ ಅನ್ನು ಅದೇ ವಿಂಡೋದಲ್ಲಿ ಡ್ರಾ ಮಾಡೋಣ.
08:23 Add a Chain ಟೂಲ್ ನ ಮೇಲೆ ಕ್ಲಿಕ್ ಮಾಡಿ.
08:26 ಆಮೇಲೆ Display area ದ ಮೇಲೆ ಕ್ಲಿಕ್ ಮಾಡಿ.
08:29 ‘ಚೈನ್’ನ ಉದ್ದವನ್ನು ಹೆಚ್ಚಿಸಲು ‘ಮೌಸ್’ನ ‘ಲೆಫ್ಟ್ ಬಟನ್’ಅನ್ನು ಹಿಡಿದು ಕರ್ಸರನ್ನು ಎಳೆಯಿರಿ.
08:36 ಓರಿಯೆಂಟೇಶನ್ಅನ್ನು ಬೇಕಾಗಿರುವ ದಿಕ್ಕಿನಲ್ಲಿ ಬದಲಾಯಿಸಿ ಮತ್ತು ‘ಮೌಸ್’ನ ‘ಲೆಫ್ಟ್ ಬಟನ್’ಅನ್ನು ಬಿಟ್ಟುಬಿಡಿ.
08:43 ನಾವು ಎಲ್ಲ ಸ್ಥಾನಗಳ ಮೇಲೆ ಅಣುಗಳನ್ನುಪ್ರದರ್ಶಿಸೋಣ.
08:47 ಅಣುಗಳನ್ನುಪ್ರದರ್ಶಿಸಲು ಇಲ್ಲಿ ನಾವು 5 ಸ್ಥಾನಗಳನ್ನು ಹೊಂದಿದ್ದೇವೆ.
08:52 ಮೊದಲನೇ ಸ್ಥಾನದಲ್ಲಿ ಅಣುಗಳನ್ನುಪ್ರದರ್ಶಿಸಲು, ರೈಟ್ ಕ್ಲಿಕ್ ಮಾಡಿ. ಒಂದು ಉಪ ಮೆನ್ಯು ಓಪನ್ ಆಗುತ್ತದೆ.
08:58 Atoms ಅನ್ನು ಆಯ್ಕೆಮಾಡಿ. ನಂತರ Display symbol ನ ಮೇಲೆ ಕ್ಲಿಕ್ ಮಾಡಿ.
09:03 ಹೀಗೆಯೇ ನಾವು ಎಲ್ಲ ಸ್ಥಾನಗಳ ಮೇಲೆ ಅಣುಗಳನ್ನುಪ್ರದರ್ಶಿಸೋಣ.
09:17 ಇಲ್ಲಿ pentane ದ ‘ಸ್ಟ್ರಕ್ಚರ್’ಅನ್ನು ಚಿತ್ರಿಸಲಾಗುತ್ತದೆ.
09:21 ಈಗ ನಾವು ‘ಫೈಲ್’ಅನ್ನು ಸೇವ್ ಮಾಡೋಣ.
09:24 File ಮೆನ್ಯೂದ ಮೇಲೆ ಕ್ಲಿಕ್ ಮಾಡಿ, Save as ಅನ್ನು ಆಯ್ಕೆಮಾಡಿ.
09:27 Save as ನ ‘ಡೈಲಾಗ್ ಬಾಕ್ಸ್’ ಓಪನ್ ಆಗುತ್ತದೆ.
09:30 File type ಗಾಗಿ, ‘ಡ್ರಾಪ್ ಡೌನ್ ಆರೋ’ದ ಮೇಲೆ ಕ್ಲಿಕ್ ಮಾಡಿ.
09:35 ವಿವಿಧ ‘ಸೇವ್ ಫಾರ್ಮ್ಯಾಟ್’ಗಳು ಕಂಡುಬರುತ್ತವೆ.
09:39 2D Chemical structure ಅನ್ನು ಆಯ್ಕೆಮಾಡಿ.
09:43 ಫೈಲ್ Name ಅನ್ನು propane.gchempaint ಎಂದು ಟೈಪ್ ಮಾಡಿ.
09:52 ಮತ್ತು Save ಬಟನ್ ನ ಮೇಲೆ ಕ್ಲಿಕ್ ಮಾಡಿ.
09:55 ಫೈಲ್ '.gchempaint' ಎಕ್ಸ್ಟೆನ್ಶನ್ ನೊಂದಿಗೆ ‘ಸೇವ್’ ಮಾಡಲ್ಪಟ್ಟಿದೆ.
10:00 ಇದರೊಂದಿಗೆ ನಾವು ಈ ‘ಟ್ಯುಟೋರಿಯಲ್’ನ ಕೊನೆಗೆ ಬಂದಿದ್ದೇವೆ.
10:04 ನಾವು ಸಾರಾಂಶಗೊಳಿಸೋಣ.
10:06 ಈ ‘ಟ್ಯುಟೋರಿಯಲ್’ನಲ್ಲಿ ನಾವು,
10:09 GChemPaint (ಜೀ-ಕೆಮ್-ಪೇಂಟ್),ಉಪಯೋಗಗಳು ಮತ್ತು ಪ್ರಯೋಜನಗಳು,
10:12 ‘ಇನ್ಸ್ಟಾಲ್’ ಮಾಡುವುದು,
10:14 ಹೊಸ ‘ಫೈಲ್’ಅನ್ನು ಓಪನ್ ಮಾಡುವುದು,
10:16 ‘ಮೆನ್ಯೂ ಬಾರ್’, ‘ಟೂಲ್ ಬಾರ್’ ಮತ್ತು ಸ್ಟೇಟಸ್ ಬಾರ್ ಇವುಗಳ ಬಗ್ಗೆ ಕಲಿತಿದ್ದೇವೆ.
10:20 ನಾವು,
10:23 ‘ಡಿಸ್ಪ್ಲೇ ಏರಿಯಾ’,
10:25 ‘ಡಾಕ್ಯೂಮೆಂಟ್ ಪ್ರಾಪರ್ಟೀಸ್’, ‘ಟೂಲ್ ಬಾಕ್ಸ್’ಅನ್ನು ಬಳಸುವುದು ಮತ್ತು
10:28 ‘ಡ್ರಾಯಿಂಗ್’ಅನ್ನು '.gchempaint' ಎಕ್ಸ್ಟೆನ್ಶನ್ ನೊಂದಿಗೆ ಸೇವ್ ಮಾಡುವುದು ಇತ್ಯಾದಿಗಳ ಬಗ್ಗೆ ಸಹ ಕಲಿತಿದ್ದೇವೆ.
10:33 ಒಂದು ‘ಅಸೈನ್ಮೆಂಟ್’ ಎಂದು ನೀವು ಈ ಕೆಳಗಿನವುಗಳನ್ನು ಮಾಡಿ.
10:36 1. n-hexane (n-ಹೆಕ್ಸೇನ್) ಮತ್ತು n-octane (n-ಒಕ್ಟೇನ್) ಗಳ ರಚನೆಗಳನ್ನು ಡ್ರಾ ಮಾಡಿ.
10:41 2. ಓರಿಯೆಂಟೇಶನ್ ಅನ್ನು ಬದಲಾಯಿಸಿ.
10:43 3. ಪ್ರತಿಯೊಂದು ಸ್ಥಾನದಲ್ಲಿಯೂ ಅಣುಗಳನ್ನು ಪ್ರದರ್ಶಿಸಿ.
10:47 ಈ ‘ಅಸೈನ್ಮೆಂಟ್’ನ ಔಟ್ಪುಟ್ ಹೀಗೆ ಕಾಣಬೇಕು.
10:53 ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial
10:57 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
11:00 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:05 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು:
11:07 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
11:10 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:14 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
11:21 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
11:26 ಇದು ಭಾರತ ಸರ್ಕಾರದ ICT, MHRD ಮೂಲಕ 'ರಾಷ್ಟ್ರೀಯ ಸಾಕ್ಷರತಾ ಮಿಶನ್'ನ ಆಧಾರವನ್ನು ಪಡೆದಿದೆ.
11:34 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
11:40 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ……………… . ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal