Advanced-Cpp/C2/Polymorphism/Kannada
From Script | Spoken-Tutorial
Revision as of 14:26, 17 March 2017 by PoojaMoolya (Talk | contribs)
Time | Narration |
00:02 | C++ ನಲ್ಲಿಯ Polymorphism (ಪಾಲಿಮಾರ್ಫಿಸಮ್) ಎನ್ನುವುದರ ಕುರಿತು ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, |
00:10 | ಪಾಲಿಮಾರ್ಫಿಸಮ್ ಹಾಗೂ, ವರ್ಚುವಲ್ ಫಂಕ್ಷನ್ ಗಳ ಬಗೆಗೆ ನಾವು ಕಲಿಯುವೆವು, |
00:13 | ನಾವು ಇದನ್ನು ಒಂದು ಉದಾಹರಣೆಯ ಮೂಲಕ ಮಾಡುವೆವು. |
00:16 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು,Ubuntuಆಪರೇಟಿಂಗ್ ಸಿಸ್ಟಮ್ ನ 11.10 ಆವೃತ್ತಿ ಮತ್ತು g++ compiler ನ 4.6.1 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ. |
00:27 | ನಾವು ಪಾಲಿಮಾರ್ಫಿಸಮ್ ಎನ್ನುವುದರ ಪರಿಚಯದೊಂದಿಗೆ ಆರಂಭಿಸೋಣ. |
00:31 | ಪಾಲಿಮಾರ್ಫಿಸಮ್ ಎಂದರೆ ವಿಭಿನ್ನ ರೂಪಗಳನ್ನು ಪಡೆಯಬಲ್ಲ ಸಾಮರ್ಥ್ಯವನ್ನು ಹೊಂದಿರುವುದು. |
00:36 | ಇದು, ಒಂದೇ ಹೆಸರನ್ನು ಹೊಂದಿರುವ ಫಂಕ್ಶನ್ ಅನ್ನು ವಿವಿಧ ರೀತಿಯಲ್ಲಿ ಬಳಸುವ ಯಾಂತ್ರಿಕರಚನೆಯಾಗಿದೆ. |
00:42 | ನಾವು ವರ್ಚುವಲ್ ಫಂಕ್ಷನ್ ಗಳನ್ನು ನೋಡೋಣ. |
00:45 | ವರ್ಚುವಲ್ ಫಂಕ್ಷನ್ ಎನ್ನುವುದು ಕ್ಲಾಸ್ ನ ಮೆಂಬರ್ ಫಂಕ್ಷನ್ ಆಗಿದೆ. |
00:49 | ಇದನ್ನು ಅದರದೇ ಡಿರೈವ್ಡ್ ಕ್ಲಾಸ್ ನಲ್ಲಿ ಓವರ್ ರೈಡ್ ಮಾಡಲು ಸಾಧ್ಯವಿದೆ. |
00:53 | ವರ್ಚುವಲ್ ಎನ್ನುವ ಕೀವರ್ಡನೊಂದಿಗೆ ಇದನ್ನು ಡಿಕ್ಲೇರ್ ಮಾಡಲಾಗುತ್ತದೆ. |
00:57 | ವರ್ಚುವಲ್ ಫಂಕ್ಷನ್ ಕಾಲ್ ಅನ್ನು ರನ್-ಟೈಮ್ ನಲ್ಲಿ ಬಗೆಹರಿಸಲಾಗುತ್ತದೆ. |
01:01 | ಈಗ, ವರ್ಚುವಲ್ ಫಂಕ್ಷನ್ಸ್ ಎನ್ನುವುದರ ಒಂದು ಉದಾಹರಣೆಯನ್ನು ನಾವು ನೋಡೋಣ. |
01:06 | ನಾನು ಕೋಡನ್ನು ಈಗಾಗಲೇ ಬರೆದಿದ್ದೇನೆ. |
01:08 | ನಾವು ಅದನ್ನು ಅನುಸರಿಸೋಣ. |
01:10 | ನಮ್ಮ ಫೈಲ್ ನ ಹೆಸರು virtual.cpp ಆಗಿದೆ ಎಂಬುದನ್ನು ಗಮನಿಸಿರಿ. |
01:15 | ಈ ಪ್ರೊಗ್ರಾಂನಲ್ಲಿ: ಆಯತ, ಸಮಾಂತರ ಚತುರ್ಭುಜ ಹಾಗೂ ತ್ರಿಕೋನಗಳ ವಿಸ್ತೀರ್ಣವನ್ನು ನಾವು ಕಂಡುಹಿಡಿಯುವೆವು. |
01:22 | iostream ಎನ್ನುವುದು ನಮ್ಮ ಹೆಡರ್ ಫೈಲ್ ಆಗಿದೆ. |
01:25 | ಇಲ್ಲಿ ನಾವು std namespace ಅನ್ನು ಬಳಸುತ್ತಿದ್ದೆವೆ. |
01:29 | ನಾವು Parallelogram ಎನ್ನುವ ಕ್ಲಾಸ್ ಒಂದನ್ನು ಹೊಂದಿದ್ದೇವೆ. |
01:33 | ಇದು ಬೇಸ್ ಕ್ಲಾಸ್ ಆಗಿದೆ. |
01:35 | ಇದರಲ್ಲಿ width, height ಮತ್ತು ar ಎನ್ನುವ ಇಂಟೀಜರ್ ವೇರಿಯಬಲ್ ಗಳನ್ನು ಡಿಕ್ಲೇರ್ ಮಾಡಿದ್ದೇವೆ. |
01:42 | ಇವುಗಳನ್ನು ಪ್ರೊಟೆಕ್ಟೆಡ್ ಎಂದು ಡಿಕ್ಲೇರ್ ಮಾಡಲಾಗಿದೆ. |
01:45 | ನಂತರ set_values ಎನ್ನುವ ಪಬ್ಲಿಕ್ ಫಂಕ್ಷನ್ ಪಡೆದಿದ್ದೇವೆ. |
01:50 | ಇಲ್ಲಿ 'a' ಮತ್ತು 'b' ಎನ್ನುವ ಎರಡು ಆರ್ಗ್ಯುಮೆಂಟ್ ಗಳನ್ನು ಪಾಸ್ ಮಾಡಿದ್ದೇವೆ. |
01:55 | ನಂತರ ನಾವು ಪಬ್ಲಿಕ್ ಮೆಂಬರ್ ಗಳನ್ನು ಬಳಸಿ ಪ್ರೊಟೆಕ್ಟೆಡ್ ಮೆಂಬರ್ ಗಳನ್ನು ಆಕ್ಸೆಸ್ ಮಾಡುತ್ತೇವೆ. |
02:00 | ಇದು area ಎನ್ನುವ ವರ್ಚುವಲ್ ಫಂಕ್ಷನ್ ಆಗಿದೆ. |
02:04 | ಇಲ್ಲಿ ನಾವು ಪ್ಯಾರಲೆಲೊಗ್ರ್ಯಾಮ್ ನ ವಿಸ್ತೀರ್ಣವನ್ನು ಕಂಡುಹಿಡಿಯುತ್ತೇವೆ. |
02:07 | ಆಮೇಲೆ, ನಾವು Rectangle ಎನ್ನುವ ಡಿರೈವ್ಡ್ ಕ್ಲಾಸ್ ನ್ನು ಪಡೆದಿದ್ದೇವೆ. |
02:12 | ಇದು, Parallelogram ಎನ್ನುವ ಬೇಸ್ ಕ್ಲಾಸ್ ನ ಗುಣಗಳನ್ನು ಇನ್ಹೆರಿಟ್ ಮಾಡುತ್ತದೆ. |
02:17 | area ಎನ್ನುವ ಫಂಕ್ಷನ್ ಅನ್ನು ಇಲ್ಲಿ ನಾವು ಓವರ್ ರೈಡ್ ಮಾಡುತ್ತೇವೆ. |
02:21 | ನಂತರ ನಾವು ಆಯತಾಕಾರದ ವಿಸ್ತೀರ್ಣವನ್ನು ಕಂಡುಹಿಡಿಯುತ್ತೇವೆ. |
02:23 | ಮತ್ತು ಅದನ್ನು ಪ್ರಿಂಟ್ ಮಾಡುತ್ತೇವೆ. |
02:25 | ಇಲ್ಲಿ ನಾವು triangle ಎನ್ನುವ ಇನ್ನೊಂದು ಡಿರೈವ್ಡ್ ಕ್ಲಾಸ್ ನ್ನು ಪಡೆದಿದ್ದೇವೆ. |
02:29 | ಇದೂ ಸಹ ಬೇಸ್ ಕ್ಲಾಸ್ ಆಗಿರುವ Parallelogram ನ ಗುಣಗಳನ್ನು ಇನ್ಹೆರಿಟ್ ಮಾಡುತ್ತದೆ. |
02:35 | ಇಲ್ಲಿ area ಎನ್ನುವ ಫಂಕ್ಷನ್ ಅನ್ನು ನಾವು ಮತ್ತೊಮ್ಮೆ ಓವರ್ ರೈಡ್ ಮಾಡುತ್ತೇವೆ. |
02:39 | ನಂತರ ನಾವು ತ್ರಿಕೋನದ ವಿಸ್ತೀರ್ಣವನ್ನು ಕಂಡುಹಿಡಿಯುತ್ತೇವೆ. |
02:41 | ಮತ್ತು ಅದನ್ನು ಪ್ರಿಂಟ್ ಮಾಡುತ್ತೇವೆ. |
02:43 | ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ. |
02:46 | ಇಲ್ಲಿ, Parallelogram ಎನ್ನುವ ಕ್ಲಾಸ್ ನ p ಎನ್ನುವ ಒಬ್ಜೆಕ್ಟ್ ಅನ್ನು ನಾವು ಕ್ರಿಯೇಟ್ ಮಾಡುತ್ತೇವೆ. |
02:52 | parallel ಎನ್ನುವ pointer ಅನ್ನು ಇಲ್ಲಿ ನಾವು ನೋಡಬಹುದು. |
02:56 | ಇದು Parallelogram ಎನ್ನುವ ಕ್ಲಾಸ್ ನ pointer ಆಗಿದೆ. |
03:00 | ಇದನ್ನು ಬೇಸ್ ಪಾಯಿಂಟರ್ ಎಂದು ಕರೆಯುತ್ತಾರೆ. |
03:03 | ಬೇಸ್ ಕ್ಲಾಸ್ ನ ಪಾಯಿಂಟರ್, ಡಿರೈವ್ಡ್ ಕ್ಲಾಸ್ ನ ಒಬ್ಜೆಕ್ಟ್ ಅನ್ನು ಪಾಯಿಂಟ್ ಮಾಡಲು ಸಾಧ್ಯವಿದೆ. |
03:08 | ಇಲ್ಲಿ Rectangle ಮತ್ತು Triangle ಕ್ಲಾಸ್ ನ ಒಬ್ಜೆಕ್ಟ್ ಗಳನ್ನು ನಾವು ಕ್ರಿಯೇಟ್ ಮಾಡುತ್ತೇವೆ. |
03:14 | ಇಲ್ಲಿ parallel ಅನ್ನು p ಎನ್ನುವುದರ ಅಡ್ಡ್ರೆಸ್ ಗೆ ನಿಗದಿಪಡಿಸಲಾಗಿದೆ. |
03:18 | ಆಮೇಲೆ ನಾವು 3 ಮತ್ತು 2,ಇವುಗಳನ್ನು ಆರ್ಗ್ಯುಮೆಂಟ್ ಗಳೆಂದು ಪಾಸ್ ಮಾಡುತ್ತೇವೆ. |
03:23 | ಆಮೇಲೆ area ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ. |
03:26 | ಇಲ್ಲಿ, parallel ಅನ್ನು rect ಎನ್ನುವುದರ ಅಡ್ಡ್ರೆಸ್ ಗೆ ನಿಗದಿಪಡಿಸಲಾಗಿದೆ. |
03:30 | rect ಎನ್ನುವುದು Rectangle ಎನ್ನುವ ಕ್ಲಾಸ್ ನ ಒಬ್ಜೆಕ್ಟ್ ಆಗಿದೆ. |
03:33 | ಮತ್ತೊಮ್ಮೆ ನಾವು 4 ಮತ್ತು 5, ಇವುಗಳನ್ನು ಆರ್ಗ್ಯುಮೆಂಟ್ ಗಳೆಂದು ಪಾಸ್ ಮಾಡುತ್ತೇವೆ. |
03:37 | ಮತ್ತು area ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ. |
03:40 | ಮತ್ತು ಕೊನೆಯದಾಗಿ parallel ಅನ್ನು Triangle ಎನ್ನುವುದರ ಅಡ್ಡ್ರೆಸ್ ಗೆ ನಿಗದಿಪಡಿಸಲಾಗಿದೆ. |
03:45 | trgl, |
03:47 | ಇದು Triangle ಎನ್ನುವ ಕ್ಲಾಸ್ ನ ಒಬ್ಜೆಕ್ಟ್ ಆಗಿದೆ. |
03:51 | ಇಲ್ಲಿ ನಾವು 6 ಮತ್ತು 5, ಇವುಗಳನ್ನು ಆರ್ಗ್ಯುಮೆಂಟ್ ಗಳೆಂದು ಪಾಸ್ ಮಾಡುತ್ತೇವೆ. |
03:54 | ಮತ್ತು area ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ. |
03:56 | ಇದು ನಮ್ಮ return ಸ್ಟೇಟಮೆಂಟ್ ಆಗಿದೆ. |
03:59 | ಈಗ ನಾವು ಈ ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ. |
04:02 | ನಿಮ್ಮ ಕೀಬೋರ್ಡ್ ಮೇಲಿನ Ctrl, Alt ಮತ್ತು T ಎನ್ನುವ ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿರಿ. |
04:09 | ಕಂಪೈಲ್ ಮಾಡಲು, g++ space virtual.cpp space hyphen o space vir ಎಂದು
ಟೈಪ್ ಮಾಡಿರಿ. Enter ಅನ್ನು ಒತ್ತಿರಿ. |
04:20 | ./ vir (ಡಾಟ್ ಸ್ಲ್ಯಾಷ್ vir) ಎಂದು ಟೈಪ್ ಮಾಡಿರಿ. Enter ಅನ್ನು ಒತ್ತಿರಿ. |
04:24 | ಔಟ್ಪುಟ್ ಹೀಗೆ ಕಾಣುವುದನ್ನು ನಾವು ನೋಡಬಹುದು: |
04:27 | Area of parallelogram is 6 |
04:29 | Area of rectangle is 20 |
04:31 | ಮತ್ತು Area of triangle is 15. |
04:34 | ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ. |
04:36 | ನಾವು ಸಂಕ್ಶಿಪ್ತಗೊಳಿಸೋಣ. ಈ ಟ್ಯುಟೋರಿಯಲ್ ನಲ್ಲಿ, |
04:39 | ಪಾಲಿಮಾರ್ಫಿಸಮ್, |
04:41 | ವರ್ಚುವಲ್ ಫಂಕ್ಷನ್ ಉದಾ. virtual int area(), ಇವುಗಳನ್ನು ನಾವು ಕಲಿತೆವು. |
04:45 | ಒಂದು ಅಸೈನ್ಮೆಂಟ್ ಎಂದು,ಆಯತಾಕಾರ, ಚೌಕೋನ ಮತ್ತು ತ್ರಿಕೋನಗಳ ಸುತ್ತಳತೆಯನ್ನು ಕಂಡುಹಿಡಿಯಿರಿ. |
04:50 | perimeter ಎನ್ನುವ ವರ್ಚುವಲ್ ಫಂಕ್ಷನ್ ಅನ್ನು ಕ್ರಿಯೇಟ್ ಮಾಡಿರಿ. |
04:54 | ಕೆಳಗೆ ತೋರಿಸಿದ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial |
04:57 | ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
05:00 | ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು. |
05:04 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು, |
05:06 | ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
05:09 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
05:14 | ಹೆಚ್ಚಿನ ವಿವರಗಳಿಗೆ ದಯವಿಟ್ಟು contact [at] spoken hyphen tutorial dot org ಈ ಈ-ಮೇಲ್ ಗೆ ಬರೆಯಿರಿ. |
05:21 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ. |
05:25 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ. |
05:32 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro |
05:37 | ಇದರ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು. |