Advanced-Cpp/C2/Inheritance/Kannada
From Script | Spoken-Tutorial
Revision as of 12:49, 17 March 2017 by PoojaMoolya (Talk | contribs)
Time | Narration |
00:01 | C++ ನಲ್ಲಿಯ Inheritance in C++ (ಇನ್ಹೆರಿಟೆನ್ಸ್ ಇನ್ C++) ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:09 | ಇನ್ಹೆರಿಟೆನ್ಸ್ ಮತ್ತು, ಇನ್ಹೆರಿಟೆನ್ಸ್ ನಲ್ಲಿನ ಪ್ರಕಾರಗಳನ್ನು ಕಲಿಯುವೆವು, |
00:12 | ನಾವು ಇದನ್ನು ಉದಾಹರಣೆಗಳ ಸಹಾಯದಿಂದ ಮಾಡುವೆವು. |
00:16 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, |
00:19 | Ubuntu ಆಪರೇಟಿಂಗ್ ಸಿಸ್ಟಮ್ ನ 11.10 ಆವೃತ್ತಿ ಹಾಗೂ, |
00:24 | g++ ಕಂಪೈಲರ್ನ 4.6.1 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ. |
00:28 | ನಾವು ಇನ್ಹೆರಿಟೆನ್ಸ್ ಎನ್ನುವುದರ ಪರಿಚಯದೊಂದಿಗೆ ಆರಂಭಿಸೋಣ. |
00:32 | ಒಂದು ಒಬ್ಜೆಕ್ಟ್, ಇನ್ನೊಂದು ಒಬ್ಜೆಕ್ಟ್ ನ ಗುಣಗಳನ್ನು ತನ್ನದಾಗಿಸಿಕೊಂಡಾಗ ಅದನ್ನು ಇನ್ಹೆರಿಟೆನ್ಸ್ ಎಂದು ಕರೆಯಲಾಗುತ್ತದೆ. |
00:38 | ಇದು, ಈಗಿರುವ ಕ್ಲಾಸನ್ನು ಮಾರ್ಪಡಿಸದೇ ಮರುಬಳಕೆ ಮಾಡುವ ಕ್ರಿಯೆಯಾಗಿರುತ್ತದೆ. |
00:44 | ಇನ್ಹೆರಿಟೆನ್ಸ್ ನಲ್ಲಿಯ ಪ್ರಕಾರಗಳು: ಸಿಂಗಲ್ ಲೆವೆಲ್ ಇನ್ಹೆರಿಟೆನ್ಸ್, |
00:48 | ಮಲ್ಟಿಪಲ್ ಲೆವೆಲ್ ಇನ್ಹೆರಿಟೆನ್ಸ್, |
00:50 | ಹೈರಾರ್ಕಿಕಲ್ ಇನ್ಹೆರಿಟೆನ್ಸ್, |
00:52 | ಮಲ್ಟಿಲೆವೆಲ್ ಇನ್ಹೆರಿಟೆನ್ಸ್, |
00:55 | ಹೈಬ್ರಿಡ್ ಇನ್ಹೆರಿಟೆನ್ಸ್ ಇತ್ಯಾದಿ. |
00:57 | ಮೊದಲು, ಬೇಸ್ ಕ್ಲಾಸ್ ಮತ್ತು ಡಿರೈವ್ಡ್ ಕ್ಲಾಸ್ ಗಳೆಂದರೇನು ಎಂದು ನಾವು ತಿಳಿಯೋಣ. |
01:02 | ಬೇಸ್ ಕ್ಲಾಸ್ ಎನ್ನುವುದು ತನ್ನದೇ ಆದ ಗುಣಗಳನ್ನು ಮತ್ತು ಕ್ರಿಯಾತ್ಮಕತೆಯನ್ನು ಹೊಂದಿದೆ. |
01:06 | ಇದನ್ನು ಪೇರೆಂಟ್ ಕ್ಲಾಸ್ ಎಂದು ಸಹ ಕರೆಯಲಾಗುತ್ತದೆ. |
01:09 | ಎಲ್ಲ ಒಬ್ಜೆಕ್ಟ್ ಗಳು ಪರಂಪರೆಯಾಗಿ ಪಡೆಯಬಹುದಾದ ಸಾಮಾನ್ಯವಾದ ಗುಣಗಳನ್ನು ಇದು ಹೊಂದಿದೆ. |
01:14 | ಡಿರೈವ್ಡ್ ಕ್ಲಾಸ್ ಎನ್ನುವುದು ಚೈಲ್ಡ್ ಕ್ಲಾಸ್ ಆಗಿದೆ. |
01:18 | ಡಿರೈವ್ಡ್ ಕ್ಲಾಸ್ ಎನ್ನುವುದು ಬೇಸ್ ಕ್ಲಾಸ್ ನ ಗುಣಗಳನ್ನು ಮತ್ತು ಕ್ರಿಯಾತ್ಮಕತೆಯನ್ನು ಪಾರಂಪರ್ಯವಾಗಿ (ಇನ್ಹೆರಿಟ್) ಪಡೆಯುತ್ತದೆ. |
01:23 | ಸಿಂಗಲ್ ಲೆವೆಲ್ ಇನ್ಹೆರಿಟೆನ್ಸ್ ಏನು ಆಗಿದೆ ಎಂಬುದನ್ನು ನಾವು ನೋಡೋಣ. |
01:27 | ಸಿಂಗಲ್ ಲೆವೆಲ್ ಇನ್ಹೆರಿಟೆನ್ಸ್ ನಲ್ಲಿ ಒಂದೇ ಒಂದು ಬೇಸ್ ಕ್ಲಾಸ್ ಮತ್ತು ಒಂದು ಡಿರೈವ್ಡ್ ಕ್ಲಾಸ್ ಗಳ ಅಗತ್ಯವಿದೆ. |
01:34 | ಮಲ್ಟಿಪಲ್ ಇನ್ಹೆರಿಟೆನ್ಸ್: |
01:37 | ಮಲ್ಟಿಪಲ್ ಇನ್ಹೆರಿಟೆನ್ಸ್ ನಲ್ಲಿ ಡಿರೈವ್ಡ್ ಕ್ಲಾಸ್, ಒಂದಕ್ಕಿಂತ ಹೆಚ್ಚು ಬೇಸ್ ಕ್ಲಾಸ್ ಗಳಿಂದ ಇನ್ಹೆರಿಟ್ ಮಾಡುತ್ತದೆ. |
01:44 | ಹೈರಾರ್ಕಿಕಲ್ ಇನ್ಹೆರಿಟೆನ್ಸ್: |
01:47 | ಹೈರಾರ್ಕಿಕಲ್ ಇನ್ಹೆರಿಟೆನ್ಸ್ ನಲ್ಲಿ ಅನೇಕ ಡಿರೈವ್ಡ್ ಕ್ಲಾಸ್ ಗಳು ಒಂದೇ ಬೇಸ್ ಕ್ಲಾಸ್ ನಿಂದ ಇನ್ಹೆರಿಟ್ ಮಾಡುತ್ತವೆ. |
01:55 | ಮಲ್ಟಿಲೆವೆಲ್ ಇನ್ಹೆರಿಟೆನ್ಸ್: |
01:57 | ಮಲ್ಟಿಲೆವೆಲ್ ಇನ್ಹೆರಿಟೆನ್ಸ್ ನಲ್ಲಿ ಸಬ್ ಕ್ಲಾಸ್, ಬೇರೆ ಕ್ಲಾಸ್ಗಳಿಗೆ ಬೇಸ್ ಕ್ಲಾಸ್ ನ ಹಾಗೆ ವರ್ತಿಸುತ್ತದೆ. |
02:05 | ಮತ್ತು, ಹೈಬ್ರಿಡ್ ಇನ್ಹೆರಿಟೆನ್ಸ್: |
02:08 | ಹೈಬ್ರಿಡ್ ಇನ್ಹೆರಿಟೆನ್ಸ್ ನಲ್ಲಿ ಒಂದಕ್ಕಿಂತ ಹೆಚ್ಚು ಬಗೆಯ ಇನ್ಹೆರಿಟೆನ್ಸ್ ಗಳು ಸೇರಿಕೊಂಡಿವೆ. |
02:14 | ಈಗ, ಸಿಂಗಲ್ ಲೆವೆಲ್ ಇನ್ಹೆರಿಟೆನ್ಸ್ನ ಒಂದು ಉದಾಹರಣೆಯನ್ನು ನಾವು ನೋಡೋಣ. |
02:18 | ನಾನು ಕೋಡನ್ನು ಈಗಾಗಲೇ ಎಡಿಟರ್ನಲ್ಲಿ ಟೈಪ್ ಮಾಡಿದ್ದೇನೆ. |
02:21 | ನಾನು ಇದನ್ನು ವಿವರಿಸುವೆನು. |
02:23 | ನಮ್ಮ ಫೈಲ್ ನ ಹೆಸರು exam_inherit.cpp ಆಗಿದೆ ಎಂಬುದನ್ನು ಗಮನಿಸಿರಿ. |
02:28 | ಈ ಉದಾಹರಣೆಯು ವಿದ್ಯಾರ್ಥಿಯ ಹೆಸರು, ರೋಲ್ ನಂ. ಮತ್ತು ಮಾರ್ಕ್ಸ್ ಗಳನ್ನು ತೋರಿಸುವುದನ್ನು ಒಳಗೊಂಡಿದೆ. |
02:35 | iostream ಎನ್ನುವುದು ನಮ್ಮ ಹೆಡರ್ ಫೈಲ್ ಆಗಿದೆ. |
02:38 | ಇಲ್ಲಿ ನಾವು std namespace ಎನ್ನುವುದನ್ನು ಬಳಸುತ್ತಿದ್ದೇವೆ. |
02:42 | ಇಲ್ಲಿ ನಾವು student ಎನ್ನುವ class ಅನ್ನು ಹೊಂದಿದ್ದೇವೆ. |
02:44 | ಆಮೇಲೆ, roll_no ಎನ್ನುವ ಒಂದು ಇಂಟೀಜರ್ ವೇರಿಯಬಲ್ ಹಾಗೂ name ಎನ್ನುವ ಕ್ಯಾರೆಕ್ಟರ್ ಆರೇಯನ್ನು ಮತ್ತು |
02:50 | student ಎನ್ನುವ ಕ್ಲಾಸಿನ ಪ್ರೈವೇಟ್ ಮೆಂಬರ್ ಗಳಾಗಿ ಹೊಂದಿದ್ದೇವೆ. |
02:53 | input ಮತ್ತು display, ಇವುಗಳು student ಎನ್ನುವ ಕ್ಲಾಸಿನ ಪಬ್ಲಿಕ್ ಫಂಕ್ಶನ್ ಗಳಾಗಿವೆ. |
02:59 | ಇಲ್ಲಿ ವಿದ್ಯಾರ್ಥಿಯ ರೋಲ್ ನಂ. ಮತ್ತು ಹೆಸರು ಗಳನ್ನು ಪಡೆಯಲು ನಾವು input ಎನ್ನುವ ಫಂಕ್ಶನ್ ಅನ್ನು ಬಳಸುತ್ತಿದ್ದೇವೆ. |
03:06 | ಆಮೇಲೆ, ರೋಲ್ ನಂ. ಮತ್ತು ಹೆಸರು ಗಳನ್ನು ತೋರಿಸಲು display ಎನ್ನುವ ಫಂಕ್ಶನ್ ಅನ್ನು ನಾವು ಹೊಂದಿದ್ದೇವೆ. |
03:11 | ಇಲ್ಲಿ exam_inherit ಎನ್ನುವ ಇನ್ನೊಂದು ಕ್ಲಾಸನ್ನು ಪಡೆದಿದ್ದೇವೆ. |
03:16 | ಇದು ಡಿರೈವ್ಡ್ ಕ್ಲಾಸ್ ಆಗಿದೆ. |
03:18 | ಇದು student ಕ್ಲಾಸ್ ನ ಫಂಕ್ಶನ್ ಹಾಗೂ ಡೇಟಾಗಳನ್ನು ಇನ್ಹೆರಿಟ್ ಮಾಡುತ್ತದೆ. |
03:23 | ಆಮೇಲೆ ನಾವು sub1, sub2, sub3 ಮತ್ತು total ಗಳನ್ನು |
03:28 | exam_inherit ಎನ್ನುವ ಕ್ಲಾಸ್ ನ ಪ್ರೈವೇಟ್ ವೇರಿಯಬಲ್ ಗಳೆಂದು ಡಿಕ್ಲೇರ್ ಮಾಡಿದ್ದೇವೆ. |
03:33 | ಇಲ್ಲಿ input_exam ಮತ್ತು display_exam ,ಇವುಗಳು ಪಬ್ಲಿಕ್ ಫಂಕ್ಶನ್ ಗಳಾಗಿವೆ. |
03:41 | ಇಲ್ಲಿ ನಾವು exam_inherit ಎನ್ನುವ ಕ್ಲಾಸ್ ಅನ್ನು ಕ್ಲೋಸ್ ಮಾಡುತ್ತೇವೆ. |
03:44 | ಮೂರು ವಿಷಯಗಳ ಮಾರ್ಕ್ಸಗಳನ್ನು ಸ್ವೀಕರಿಸಲು ನಾವು input_exam ಎನ್ನುವ ಫಂಕ್ಶನ್ ಅನ್ನು ಬಳಸುತ್ತಿದ್ದೇವೆ. |
03:52 | ಇಲ್ಲಿ, ಮೂರು ವಿಷಯಗಳ ಮೊತ್ತವನ್ನು ಕಂಡುಹಿಡಿಯಲು ನಾವು display_exam ಎನ್ನುವ ಫಂಕ್ಶನ್ ಅನ್ನು ಬಳಸುತ್ತಿದ್ದೇವೆ. |
03:59 | ಆಮೇಲೆ ನಾವು ಮೊತ್ತವನ್ನು (total) ಪ್ರಿಂಟ್ ಮಾಡುತ್ತೇವೆ. |
04:01 | ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ. |
04:03 | ಇಲ್ಲಿ, exam_inherit ಎನ್ನುವ ಕ್ಲಾಸ್ನ ex ಎನ್ನುವ ಒಬ್ಜೆಕ್ಟ್ ಅನ್ನು ನಾವು ಕ್ರಿಯೇಟ್ ಮಾಡುತ್ತೇವೆ. |
04:10 | ನಂತರ ಈ ex ಎನ್ನುವ ಒಬ್ಜೆಕ್ಟ್ ಅನ್ನು ಬಳಸಿ ನಾವು ಎಲ್ಲ ಫಂಕ್ಶನ್ ಗಳನ್ನು ಕಾಲ್ ಮಾಡುತ್ತೇವೆ. |
04:15 | ಮತ್ತು ಇದು ನಮ್ಮ return ಸ್ಟೇಟಮೆಂಟ್ ಆಗಿದೆ. |
04:18 | ನಾವು ಈ ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ. |
04:20 | ನಿಮ್ಮ ಕೀಬೋರ್ಡ್ ಮೇಲಿನ Ctrl, Alt ಮತ್ತು T ಎನ್ನುವ ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ವಿಂಡೋವನ್ನು ಓಪನ್ ಮಾಡಿರಿ. |
04:30 | ಕಂಪೈಲ್ ಮಾಡಲು, g++ (ಸ್ಪೇಸ್) exam_inherit.cpp (ಸ್ಪೇಸ್) ಹೈಫನ್ o (ಸ್ಪೇಸ್) exam ಎಂದು ಟೈಪ್ ಮಾಡಿರಿ, |
04:41 | Enter ಅನ್ನು ಒತ್ತಿರಿ. ನಂತರ |
04:43 | ./exam (ಡಾಟ್ ಸ್ಲ್ಯಾಷ್ ಎಕ್ಸಾಮ್) ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿರಿ. |
04:46 | ಇಲ್ಲಿ ಅದು ಹೀಗೆ ಕಾಣಿಸುತ್ತದೆ,Enter Roll no.: |
04:49 | ನಾನು 1 ಎಂದು ಕೊಡುವೆನು. |
04:51 | Enter Name: ನಾನು Arya ಎಂದು ಎಂಟರ್ ಮಾಡುವೆನು. |
04:55 | Enter marks of subject1 |
04:57 | ನಾನು 60 ಎಂದು ಕೊಡುವೆನು. |
05:00 | subject 2 ನ್ನು 70 ಎಂದು |
05:02 | ಮತ್ತು subject 3 ನ್ನು 80 ಎಂದು ಕೊಡುತ್ತೇನೆ. |
05:06 | ಔಟ್ಪುಟ್, ಹೀಗೆ ಕಾಣಿಸುತ್ತದೆ: |
05:08 | Roll no is: 1. Name is: Arya ಮತ್ತು, |
05:11 | Total is: 210 |
05:13 | ಈಗ ನಾವು ಇದೇ ಉದಾಹರಣೆಯಲ್ಲಿ ಮಲ್ಟಿಲೆವೆಲ್ ಇನ್ಹೆರಿಟೆನ್ಸ್ ಎನ್ನುವುದನ್ನು ನೋಡುವೆವು. |
05:18 | ನಾನು ಕೋಡನ್ನು ಈಗಾಗಲೇ ಟೈಪ್ ಮಾಡಿದ್ದೇನೆ. |
05:20 | ನಾವು ನಮ್ಮ ಎಡಿಟರ್ ಗೆ ಮತ್ತೆ ಬದಲಾಯಿಸೋಣ. |
05:22 | ನಮ್ಮ ಫೈಲ್ ನ ಹೆಸರು multilevel.cpp ಆಗಿದೆ ಎಂಬುದನ್ನು ಗಮನಿಸಿರಿ. |
05:28 | ಇಲ್ಲಿ ನಾವು total ಎನ್ನುವ ವೇರಿಯಬಲ್ ಅನ್ನು, |
05:32 | exam_inherit ಎನ್ನುವ ಕ್ಲಾಸ್ನ ಪಬ್ಲಿಕ್ ವೇರಿಯಬಲ್ ಎಂದು ಡಿಕ್ಲೇರ್ ಮಾಡಿದ್ದೇವೆ. |
05:38 | ಇದು ಏಕೆಂದರೆ ಪ್ರೈವೇಟ್ ಮೆಂಬರ್ಸ್ ಗಳು ಡಿರೈವ್ಡ್ ಕ್ಲಾಸ್ನಿಂದ ಆಕ್ಸೆಸ್ ಮಾಡಲ್ಪಡುವದಿಲ್ಲ. |
05:44 | ಇಲ್ಲಿ ನಾವು grade ಎನ್ನುವ ಇನ್ನೊಂದು ಕ್ಲಾಸ್ ಅನ್ನು ಹೊಂದಿದ್ದೇವೆ. |
05:49 | ಇದು exam_inherit ಎನ್ನುವ ಕ್ಲಾಸ್ ಅನ್ನು ಇನ್ಹೆರಿಟ್ ಮಾಡುತ್ತದೆ. |
05:53 | grade ಎನ್ನುವುದು ಡಿರೈವ್ಡ್ ಕ್ಲಾಸ್ ಆಗಿದೆ. |
05:56 | ಮತ್ತು grade ಎನ್ನುವ ಕ್ಲಾಸ್ ಗೆ exam_inherit ಎನ್ನುವುದು ಬೇಸ್ ಕ್ಲಾಸ್ ಆಗಿದೆ. |
06:02 | exam_inherit ಎನ್ನುವ ಕ್ಲಾಸ್ನ ಎಲ್ಲ ಫಂಕ್ಶನ್ ಮತ್ತು ಡೇಟಾಗಳು grade ಎನ್ನುವ ಕ್ಲಾಸ್ ಗೆ ಇನ್ಹೆರಿಟ್ ಆಗುತ್ತವೆ. |
06:11 | ಇಲ್ಲಿ ನಾವು Avg ಎನ್ನುವುದನ್ನು grade ಎನ್ನುವ ಕ್ಲಾಸ್ ನ ಪ್ರೈವೇಟ್ ಮೆಂಬರ್ ಎಂದು, |
06:17 | ಮತ್ತು average ಎನ್ನುವ ಫಂಕ್ಶನ್ ಅನ್ನು ಪಬ್ಲಿಕ್ ಫಂಕ್ಶನ್ ಎಂದು ಡಿಕ್ಲೇರ್ ಮಾಡಿದ್ದೇವೆ. |
06:21 | ಆಮೇಲೆ ನಾವು ಕ್ಲಾಸ್ ಅನ್ನು ಕ್ಲೋಸ್ ಮಾಡುತ್ತೇವೆ. |
06:23 | ಇಲ್ಲಿ ನಾವು average ಎನ್ನುವ ಫಂಕ್ಶನ್ ಅನ್ನು ಸರಾಸರಿಯನ್ನು (ಎವರೇಜ್) ಕಂಡುಹಿಡಿಯಲು ಉಪಯೋಗಿಸುತ್ತೇವೆ. |
06:27 | ನಂತರ average ಅನ್ನು ನಾವು ಪ್ರಿಂಟ್ ಮಾಡುತ್ತೇವೆ. |
06:30 | grade ಕ್ಲಾಸ್ನ gd ಎನ್ನುವ ಒಂದು ಒಬ್ಜೆಕ್ಟ್ ಅನ್ನು main ಫಂಕ್ಶನ್ ನ ಒಳಗಡೆ ನಾವು ಕ್ರಿಯೇಟ್ ಮಾಡುತ್ತೇವೆ. |
06:36 | ಈ gd ಎನ್ನುವ ಒಬ್ಜೆಕ್ಟ್ ಅನ್ನು ಬಳಸಿ ನಾವು ಎಲ್ಲ ಫಂಕ್ಶನ್ ಗಳನ್ನು ಕಾಲ್ ಮಾಡುತ್ತೇವೆ. |
06:40 | gd.input(), |
06:42 | input_exam, |
06:44 | display, display_exam |
06:46 | ಮತ್ತು ಫಂಕ್ಶನ್ average. |
06:49 | ಮತ್ತು ಇದು ನಮ್ಮ return ಸ್ಟೇಟಮೆಂಟ್ ಆಗಿದೆ. |
06:52 | ಈಗ grade ಎನ್ನುವುದು ಡಿರೈವ್ಡ್ ಕ್ಲಾಸ್ ಆಗಿರುವುದನ್ನು ನೀವು ನೋಡಬಹುದು. |
06:56 | ಮತ್ತು exam_inherit ಎನ್ನುವುದು grade ನ ಬೇಸ್ ಕ್ಲಾಸ್ ಆಗಿದೆ. |
07:01 | ಮತ್ತು ಇಲ್ಲಿ exam_inherit ಎನ್ನುವುದು ಡಿರೈವ್ಡ್ ಕ್ಲಾಸ್ ಆಗಿದೆ. |
07:06 | ಮತ್ತು student ಎನ್ನುವುದು exam_inherit ಎನ್ನುವುದಕ್ಕೆ ಬೇಸ್ ಕ್ಲಾಸ್ ಆಗಿದೆ. |
07:12 | ನಾವು ಈ ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ. |
07:14 | ನಮ್ಮ ಟರ್ಮಿನಲ್ ಗೆ ಹಿಂದಿರುಗಿರಿ. |
07:17 | ಕಂಪೈಲ್ ಮಾಡಲು, g++ (ಸ್ಪೇಸ್) multilevel.cpp (ಸ್ಪೇಸ್) ಹೈಫನ್ o (ಸ್ಪೇಸ್) mul ಎಂದು ಟೈಪ್ ಮಾಡಿರಿ, |
07:26 | Enter ಅನ್ನು ಒತ್ತಿರಿ../mul (ಡಾಟ್ ಸ್ಲ್ಯಾಷ್ ಮಲ್) ಎಂದು ಟೈಪ್ ಮಾಡಿರಿ. |
07:30 | Enter ಅನ್ನು ಒತ್ತಿರಿ. |
07:32 | ಇಲ್ಲಿ ನಾವು ಹೀಗೆ ನೋಡುತ್ತೇವೆ, Enter Roll no.: |
07:34 | ನಾನು 2 ನ್ನು ಎಂಟರ್ ಮಾಡುತ್ತೇನೆ. |
07:36 | Enter Name: |
07:38 | ನಾನು Pratham ಎಂದು ಎಂಟರ್ ಮಾಡುತ್ತೇನೆ. |
07:41 | Enter marks of subject1 |
07:43 | ನಾನು 65 ಎಂದು, |
07:46 | subject2 ಅನ್ನು 67 ಎಂದು ಮತ್ತು |
07:48 | subject3 ಅನ್ನು 82 ಎಂದು ಕೊಡುವೆನು. |
07:52 | ಔಟ್ಪುಟ್ ಹೀಗೆ ಕಾಣಿಸುತ್ತದೆ: |
07:54 | Roll no is: 2 |
07:56 | Name is: Pratham. Total is: 214 ಮತ್ತು |
07:59 | Average is: 71 |
08:01 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
08:05 | ನಾವು ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ. |
08:07 | ನಾವು ಸಂಕ್ಷಿಪ್ತಗೊಳಿಸೋಣ. ಈ ಟ್ಯುಟೋರಿಯಲ್ ನಲ್ಲಿ, |
08:10 | ಇನ್ಹೆರಿಟೆನ್ಸ್ ಮತ್ತು, ಇನ್ಹೆರಿಟೆನ್ಸ್ ನಲ್ಲಿಯ ಪ್ರಕಾರಗಳನ್ನು ನಾವು ಕಲಿತೆವು. |
08:14 | ಒಂದು ಅಸೈನ್ಮೆಂಟ್ ಎಂದು, Shape ಎನ್ನುವ ಕ್ಲಾಸನ್ನು ಕ್ರಿಯೇಟ್ ಮಾಡಲು ಒಂದು ಪ್ರೊಗ್ರಾಮನ್ನು ಬರೆಯಿರಿ. |
08:18 | ಆಮೇಲೆ ಈ ಕ್ಲಾಸ್ ನಲ್ಲಿ Area ಮತ್ತು Perimeter ಎನ್ನುವ ಎರಡು ಫಂಕ್ಶನ್ ಗಳನ್ನು ಕ್ರಿಯೇಟ್ ಮಾಡಿರಿ. |
08:23 | ನಂತರ ಚೌಕೋನ, ಆಯತಾಕಾರ ಮತ್ತು ವರ್ತುಲಗಳಂತಹ ವಿವಿಧ ಆಕಾರಗಳ ವಿಸ್ತೀರ್ಣ (ಏರಿಯಾ) ಹಾಗೂ ಪರಿಧಿ (ಪೆರಿಮೀಟರ್) ಗಳನ್ನು ಕಂಡುಹಿಡಿಯಿರಿ. |
08:31 | ಈ ಕೆಳಗಿನ ಲಿಂಕ್ನಲ್ಲಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial |
08:34 | ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
08:37 | ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು. |
08:42 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು |
08:44 | ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:47 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:51 | ಹೆಚ್ಚಿನ ವಿವರಗಳಿಗೆ ದಯವಿಟ್ಟು ಈ ಈ-ಮೇಲ್ ಗೆ ಬರೆಯಿರಿ. |
08:53 | contact [at] spoken hyphen tutorial dot org |
08:58 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ. |
09:02 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ. |
09:09 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro |
09:13 | ಇದರ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಧನ್ಯವಾದಗಳು. |