LibreOffice-Suite-Math/C2/Introduction/Kannada
From Script | Spoken-Tutorial
Time | Narration |
00:02 | ಲಿಬ್ರೆ ಆಫೀಸ್ ಮ್ಯಾತ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದೆನೆಂದರೆ, ಲಿಬ್ರೆ ಆಫೀಸ್ ಮ್ಯಾತ್ ನ ಪರಿಚಯ ಮತ್ತು ಫಾರ್ಮುಲಾ ಎಡಿಟರ್. |
00:12 | ನಾವು ಈ ಕೆಳಗಿನ ವಿಷಯಗಳನ್ನು ಕಲಿಯುತ್ತೇವೆ. |
00:15 | ಲಿಬ್ರೆ ಆಫೀಸ್ ಮ್ಯಾತ್ ಎಂದರೆ ಏನು? |
00:18 | ಫಾರ್ಮುಲಾ ಎಡಿಟರ್ ಗಳನ್ನೊಳಗೊಂಡ ಲಿಬ್ರೆ ಆಫಿಸ್ ಮ್ಯಾತ್ ನ್ನು ಬಳಸಲು ಸಿಸ್ಟಂ ಗೆ ಬೇಕಾದ ಅವಶ್ಯಕತೆಗಳು. |
00:23 | ಸರಳವಾದ ಫಾರ್ಮುಲಾವನ್ನು ಬರೆಯುವುದು. |
00:26 | ಲಿಬ್ರೆ ಆಫೀಸ್ ಮ್ಯಾತ್ ಎಂದರೆ ಏನು? |
00:29 | ಲಿಬ್ರೆ ಆಫಿಸ್ ಮ್ಯಾತ್ ಮ್ಯಾತಮೆಟಿಕಲ್ ಫಾರ್ಮುಲಾಗಳನ್ನು ರಚಿಸಲು ಮತ್ತು ಎಡಿಟ್ ಮಾಡಲು ವಿನ್ಯಾಸಗೊಳಿಸಿದ ಒಂದು ಸಾಫ್ಟ್ ವೇರ್ application ಆಗಿದೆ. |
00:39 | ಅದು ಲಿಬ್ರೆ ಆಫಿಸ್ ಸೂಟ್ ನಲ್ಲಿ ಇರುತ್ತದೆ ಆದ್ದರಿಂದ ಇದು ಒಂದು open source ಸಾಫ್ಟ್ ವೇರ್ ಆಗಿದ್ದು, ಅದನ್ನು ಉಚಿತವಾಗಿ ಬಳಸಬಹುದು ಹಾಗೂ ಹಂಚಬಹುದು. |
00:47 | ಮ್ಯಾತ್ ಬಳಸಿ ತಯಾರಿಸಿದ ಫಾರ್ಮುಲಾಗಳು ಹಾಗೂ ಸಮೀಕರಣಗಳು ಸ್ವತಂತ್ರ |
00:53 | ಅಥವಾ ಲಿಬ್ರೆ ಆಫಿಸ್ ನ ಉಳಿದ ಡಾಕ್ಯುಮೆಂಟ್ ಗಳಲ್ಲಿ ಬಳಸಬಹುದು. |
00:58 | ಫಾರ್ಮುಲಾ ಗಳು ರೈಟರ್ ಅಥವಾ ಕ್ಯಾಲ್ಕ್ ನಲ್ಲಿ ಡಾಕ್ಯುಮೆಂಟ್ ಆಗಿ ಅಳವಡಿಸಲ್ಪಟ್ಟಿರುತ್ತವೆ. |
01:05 | ಫಾರ್ಮುಲಾಗಳ ಕೆಲವು ಉದಾಹರಣೆಗಳು ,ಫ್ರ್ಯಾಕ್ಶನ್ ಗಳು, ಇಂಟಿಜರ್ ಗಳು, ಸಮೀಕರಣಗಳು, ಮತ್ತು ಮೆಟ್ರಿಕ್ಸ್ ಗಳು. |
01:13 | ಈಗ ನಾವು ಮ್ಯಾತ್ ಗೆ ಬೇಕಾಗಿರುವ ಸಿಸ್ಟಂ ಅವಶ್ಯಕತೆಗಳನ್ನು ನೋಡೋಣ. |
01:17 | ವಿಂಡೋಸ್ ಗೆ ನಿಮಗೆ, ಮೈಕ್ರೋಸಾಫ್ಟ್ ವಿಂಡೋಸ್ 2000 ( ಸರ್ವಿಸ್ ಪ್ಯಾಕ್ 4 ಅಥವಾ ಹೆಚ್ಚಿನದು), XP, ವಿಸ್ತಾ ಅಥವಾ ವಿಂಡೋಸ್ 7. |
01:28 | ಪೆಂಟಿಯಂ ಗೆ ಸರಿಹೊಂದುವ PC, 256 Mb RAM (512 Mb RAM ಇದ್ದರೆ ಒಳ್ಳೆಯದು ); |
01:36 | ಉಬುಂಟುವಿಗೆ, ಲಿನಕ್ಸ್ ಕರ್ನಲ್ ವರ್ಶನ್ 2.6.18 ಅಥವಾ ಹೆಚ್ಚಿನದು, ಪೆಂಟಿಯಂ ಗೆ ಸರಿಹೊಂದುವ PC, 512 Mb RAM ಇದ್ದರೆ ಒಳ್ಳೆಯದು. |
01:51 | ಸಿಸ್ಟಂ ಅವಶ್ಯಕತೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಲಿಬ್ರೆ ಆಫಿಸ್ ವೆಬ್ ಸೈಟ್ ಗೆ ಭೇಟಿ ಕೊಡಿ. |
01:58 | ನೀವು ಈಗಾಗಲೇ ಲಿಬ್ರೆ ಆಫಿಸ್ ಸೂಟ್ ನ್ನು ಇನ್ ಸ್ಟಾಲ್ ಮಾಡಿದ್ದರೆ, ನೀವು ಮ್ಯಾತ್ ನ್ನು ಪ್ರೊಗ್ರಾಮ್ ನಲ್ಲಿರುವ ಲಿಬ್ರೆ ಆಫಿಸ್ ಸೂಟ್ ನಿಂದ ಪಡೆಯಬಹುದು. |
02:06 | ನೀವು ಲಿಬ್ರೆ ಆಫಿಸ್ ಸೂಟ್ ನ್ನು ಇನ್ ಸ್ಟಾಲ್ ಮಾಡಿರದಿದ್ದಲ್ಲಿ, ಅದನ್ನು ಆಫಿಸಿಯಲ್ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಬಹುದು. |
02:14 | ಲಿನಕ್ಸ್ ನಲ್ಲಿ ನಿಮಗೆ ಅದನ್ನು ಸಿನೇಪ್ಟಿಕ್ ಪ್ಯಾಕೇಜ್ ಮೇನೇಜರ್ ಮೂಲಕ ಇನ್ ಸ್ಟಾಲ್ ಮಾಡಬಹುದು. |
02:18 | ನಾನು ಲಿಬ್ರೆ ಆಫಿಸ್ ವರ್ಶನ್ 3.3.3 ನ್ನು ಇನ್ ಸ್ಟಾಲ್ ಮಾಡಿದ್ದೇನೆ. |
02:24
ಮ್ಯಾತ್ application ಅನ್ನು ಓಪನ್ ಮಾಡೋಣ. | |
02:28 | ವಿಂಡೋಸ್ ನಲ್ಲಿ ಸ್ಟಾರ್ಟ್ ಮೆನುಗೆ ಹೋಗಿ. ಆಲ್ ಪ್ರೊಗ್ರಮ್ಸ್ ಕ್ಲಿಕ್ ಮಾಡಿ >> ಲಿಬ್ರೆ ಆಫಿಸ್ ಸೂಟ್ >> ಲಿಬ್ರೆ ಆಫಿಸ್ ಮ್ಯಾತ್ |
02:39 | ನಾವು ಇದನ್ನು ಲಿಬ್ರೆ ಆಫಿಸ್ ರೈಟರ್ ಡಾಕ್ಯುಮೆಂಟ್ ಒಳಗಡೆ ಕರೆಯಬಹುದು. |
02:46 | ಈಗ ನಾವು ಲಿಬ್ರೆ ಆಫಿಸ್ ರೈಟರ್ ಮೇಲೆ ಕ್ಲಿಕ್ ಮಾಡಿ ಒಂದು ಹೊಸ ಟೆಕ್ಸ್ಟ್ ಡಾಕ್ಯುಮೆಂಟ್ ನ್ನು ಓಪನ್ ಮಾಡೋಣ. |
02:53 | ಈಗ ರೈಟರ್ ವಿಂಡೋದಲ್ಲಿ ನಾವು ಮ್ಯಾತ್ ನ್ನು ಕರೆಯುವ . |
02:57 | ಈಗ ನಾವು main ಮೆನು ಬಾರ್ ನಲ್ಲಿ Insert ಮೆನು ಕ್ಲಿಕ್ ಮಾಡೋಣ ನಂತರ ಕೆಳಗಡೆ ಇರುವ Object ಕ್ಲಿಕ್ ಮಾಡೋಣ ನಂತರ ಫಾರ್ಮುಲಾ ಕ್ಲಿಕ್ ಮಾಡೋಣ. |
03:09 | ಈಗ ನಾವು ರೈಟರ್ ವಿಂಡೋ ದಲ್ಲಿ ಮೂರು ಜಾಗಗಳನ್ನು ನೋಡಬಹುದು. |
03:14 | ಮೊದಲನೆಯದು ಮೇಲ್ಗಡೆ ಇರುವ ರೈಟರ್ ವಿಂಡೋ. |
03:18 | ಇಲ್ಲಿರುವ ಸಣ್ಣ ಗ್ರೇ ಬಾಕ್ಸ್ ನ್ನು ಗಮನಿಸಿ. |
03:22 | ಇಲ್ಲಿ ನಾವು ಬರೆಯುವ ಸಮೀಕರಣ ಅಥವಾ ಫಾರ್ಮುಲಾಗಳು ಮ್ಯಾತಮೆಟಿಕಲ್ ರೂಪದಲ್ಲಿ ಕಾಣಿಸುತ್ತದೆ. |
03:30 | ಎರಡನೆಯದು ಕೆಳಗಡೆ ಇರುವ ಫಾರ್ಮುಲಾ ಎಡಿಟರ್ ವಿಂಡೋ. |
03:37 | ಇಲ್ಲಿ ನಾವು ಮ್ಯಾತಮೆಟಿಕಲ್ ಫಾರ್ಮುಲಾಗಳನ್ನು ವಿಶೇಷವಾದ ಮಾರ್ಕ್ ಅಪ್ ಭಾಷೆಯಲ್ಲಿ ಬರೆಯಬಹುದು. |
03:44 | ಮತ್ತು ಮೂರನೆಯದು, ಬಲಗಡೆ ತೇಲುತ್ತಿರುವ ಎಲಿಮೆಂಟ್ಸ್ ವಿಂಡೋ. |
03:50 | ನಿಮಗೆ ಎಲಿಮೆಂಟ್ಸ್ ವಿಂಡೋ ಕಾಣಿಸದಿದ್ದರೆ ವೀವ್ ಮೆನುವನ್ನು ಕ್ಲಿಕ್ ಮಾಡಿ ಎಲಿಮೆಂಟ್ಸ್ ನ್ನು ಆಯ್ಕೆ ಮಾಡಿ ಎಲಿಮಂತ್ಸ್ ವಿಂಡೋ ವನ್ನು ಪಡೆಯಬಹುದು. |
04:01 | ಈ ವಿಂಡೋ ನಮಗೆ ವಿವಿಧ ಮ್ಯಾತಮೆಟಿಕಲ್ ಚಿಹ್ನೆಗಳ ಮತ್ತು ಸಂಕೇತಗಳ ಒಂದು ಶ್ರೇಣಿಯನ್ನು ಕೊಡುತ್ತದೆ. |
04:08 | ನಾವು ರೈಟರ್ ಪ್ರದೇಶದಲ್ಲಿ ಗ್ರೇ ಬಾಕ್ಸ್ ಹೊರಗೆ ಒಮ್ಮೆ ಕ್ಲಿಕ್ ಮಾಡಿದರೆ ಮ್ಯಾತ್ ವಿಂಡೋ ಕಣ್ಮರೆಯಾಗುತ್ತದೆ. |
04:17 | ಮ್ಯಾತ್ ಫಾರ್ಮುಲಾ ಎಡಿಟರ್ ವಿಂಡೋ ಮತ್ತು ಎಲಿಮೆಂಟ್ ವಿಂಡೋ ಗಳನ್ನು ಹಿಂತಿರುಗಿ ಪಡೆಯಲು ಗ್ರೇ ಬಾಕ್ಸ್ ಮೇಲೆ ಡಬಲ್ ಕ್ಲಿಕ್ ಮಾಡಿ. |
04:24 | ಸರಿ, ಈಗ ನಾವು ಒಂದು ಸರಳವಾದ ಗುಣಾಕಾರದ ಫಾರ್ಮುಲಾವನ್ನು ಬರೆಯೋಣ. 4x3 ಅಂದರೆ 12. |
04:37 | ಈಗ ಎಲಿಮೆಂಟ್ಸ್ ವಿಂಡೋದಲ್ಲಿ ಟಾಪ್ ನಲ್ಲಿನ ಸಿಂಬಲ್ ಗಳು ಹಾಗೂ ಬಾಟಮ್ ನಲ್ಲಿರುವ ಸಿಂಬಲ್ ಗಳೆಂಬ ಕೆಟಗರಿಗಳಿವೆ. |
04:46 | .ಈಗ ಮೇಲಿನ ಎಡ ಐಕಾನ್ ಮೇಲೆ ಒಮ್ಮೆ ಕ್ಲಿಕ್ ಮಾಡಿ ಇಲ್ಲಿ ಟೂಲ್ ಟಿಪ್ Unary ಅಥವಾ ಬೈನರಿ ಆಪರೇಟರ್ಸ್ ಹೇಳುತ್ತದೆ. |
04:57 | ಮತ್ತು ಕೆಳಗಡೆ ಕೆಲವು ಬೇಸಿಕ್ ಮ್ಯಾತಮೆಟಿಕಲ್ ಒಪರೇಟರ್ ಗಳಾದ ಕೂಡಿಸು, ಕಳೆ, ಗುಣಾಕಾರ ಹಾಗೂ ಭಾಗಾಕಾರಗಳನ್ನು ನಾವು ನೋಡಬಹುದು. |
05:08 | ಈಗ ನಾವು ಗುಣಾಕಾರವನ್ನು ಗುರುತಿಸುವ ಎರಡನೇ ರೋನಲ್ಲಿ ‘a into b’ ನ್ನು ಕ್ಲಿಕ್ ಮಾಡೋಣ. |
05:17 | ಈಗ ಫಾರ್ಮುಲ ಎಡಿಟರ್ ವಿಂಡೋವನ್ನು ಗಮನಿಸಿ. |
05:20 | ‘Times’ ಪದದಿಂದ ಬೇರ್ಪಟ್ಟಿರುವ ಎರಡು ಪ್ಲೇಸ್ ಹೋಲ್ಡರ್ ಗಳನ್ನು ತೋರಿಸುತ್ತದೆ. |
05:27 | ಮತ್ತು ಮೇಲ್ಗಡೆ ಇರುವ ರೈಟರ್ ನ ಗ್ರೇ ಬಾಕ್ಸ್ ಜಾಗದಲ್ಲಿ ಗುಣಾಕಾರ ಚಿಹ್ನೆಯಿಂದ ಬೇರ್ಪಟ್ಟಿರುವ ಎರಡು ಚೌಕಗಳನ್ನು ಗಮನಿಸಿ. |
05:37 | ಫಾರ್ಮುಲಾ ಎಡಿಟರ್ ನಲ್ಲಿರುವ ಮೊದಲ ಪ್ಲೇಸ್ ಹೋಲ್ಡರ್ ನ್ನು ಡಬಲ್ ಕ್ಲಿಕ್ ಮಾಡಿ ಅದನ್ನು ಹೈ ಲೈಟ್ ಮಾಡಿ ನಂತರ ಅದರ ಮೇಲೆ 4 ಎಂದು ಟೈಪ್ ಮಾಡಿ. |
05:46 | ಈಗ ನಾವು ಫಾರ್ಮುಲಾ ಎಡಿಟರ್ ವಿಂಡೋ ನಲ್ಲಿರುವ ಎರಡನೇ ಪ್ಲೇಸ್ ಹೋಲ್ಡರ್ ನ್ನು ಹೈ ಲೈಟ್ ಮಾಡಿ 3 ಎಂದು ಟೈಪ್ ಮಾಡೋಣ. |
05:54 | ರೈಟರ್ ಗ್ರೇ ಬಾಕ್ಸ್ ತಾನಾಗಿಯೇ ರಿಫ್ರೆಶ್ ಆಗಿ, ‘4 into 3’ ಎಂದು ತೋರಿಸುವುದನ್ನು ಗಮನಿಸಿ. |
06:03 | ನಾವು ಮೇಲಿರುವ ವೀವ್ ಮೆನುವಿನಲ್ಲಿ ಕ್ಲಿಕ್ ಮಾಡಿ ಅಪ್ಡೇಟ್ ಮಾಡಬಹುದು. |
06:10 | ಅಥವಾ ನಾವು ವಿಂಡೋ ರಿಫ್ರೆಶ್ ಮಾಡಲು ಕೀಬೋರ್ಡ್ ಶಾರ್ಟ್ಕಟ್ F9 ಬಳಸಬಹುದು. |
06:16 | ನಂತರ ನಾವು ಫಾರ್ಮುಲಾವನ್ನು ಪೂರ್ಣಗೊಳಿಸೋಣ ಮತ್ತು ಅದಕ್ಕೆ ‘is equal to12’ ನ್ನು ಸೇರಿಸೋಣ. |
06:24 | ಇದಕ್ಕಾಗಿ ನಾವು ಎರಡನೇ ಐಕಾನ್ ನನ್ನು ಕ್ಲಿಕ್ ಮಾಡೋಣ. ಅದು, ಎಲಿಮೆಂಟ್ಸ್ ವಿಂಡೋವಿನ ಕೆಟಗರಿ ವಿಭಾಗದಲ್ಲಿ ‘Relations’ ನ್ನು ಹೇಳುತ್ತದೆ. |
06:35 | ಇಲ್ಲಿ ವಿವಿಧ ರಿಲೇಶನ್ ಎಲಿಮೆಂಟ್ ಗಳನ್ನು ಗಮನಿಸಿ. |
06:38 | ನಾವು ಮೊದಲನೆಯದನ್ನು ಆಯ್ಕೆ ಮಾಡೋಣ , ‘a is equal to b’ |
06:44 | ನಾವು ಮೊದಲ ಪ್ಲೇಸ್ ಹೋಲ್ಡರ್ ಅನ್ನು ಅಳಿಸಿ ನಂತರ ಎರಡನೇ ಪ್ಲೇಸ್ ಹೋಲ್ಡರ್ ಅಲ್ಲಿ 12 ಎಂದು ಬರೆಯುತ್ತೇವೆ |
06:53 | ಮತ್ತು ರೈಟರ್ ಜಾಗದಲ್ಲಿ ನಮ್ಮ ಮೊದಲ ಸರಳವಾದ ಫಾರ್ಮುಲಾ ಇದೆ. : ‘4 times 3 is equal to 12’. |
07:01 | ಈಗ ನಾವು ಎಲಿಮೆಂಟ್ಸ್ ವಿಂಡೋದಲ್ಲಿ ಬಹಳ ಸುಲಭ ರೀತಿಯಲ್ಲಿ ಫಾರ್ಮುಲಾವನ್ನು ಬರೆಯಲು ಕಲಿತೆವು. |
07:09 | ನಾವು ಫಾರ್ಮುಲಾ ಎಡಿಟರ್ ವಿಂಡೋ ಮೇಲೆ ರೈಟ್ ಕ್ಲಿಕ್ ಮಾಡಿ ಸಿಂಬಲ್ ಗಳನ್ನು ಸೆಲೆಕ್ಟ್ ಮಾಡಿ ಕೂಡಾ ಫಾರ್ಮುಲಾವನ್ನು ಬರೆಯಬಹುದು. |
07:19 | ಕಾಂಟೆಕ್ಸ್ಟ್ ಮೆನು ಎಲಿಮೆಂಟ್ ವಿಂಡೋದಂತೆ ಒಂದೇ ರೀತಿಯ ಸಿಂಬಲ್ ಸ್ ಕೆಟಗರಿಗಳನ್ನು ತೋರಿಸುತ್ತದೆ. |
07:26 | ಯಾವುದೇ ವಿಭಾಗವನ್ನು ಆರಿಸುವುದರಿಂದ ಆ ವಿಭಾಗದಲ್ಲಿ ಲಭ್ಯವಿರುವ ಚಿಹ್ನೆಗಳು ಕಾಣಿಸುತ್ತವೆ. |
07:33 | ಫಾರ್ಮುಲಾವನ್ನು ಪ್ರವೇಶಿಸಲು ಮೂರನೇ ರೀತಿ ಇದೆ. |
07:37 | ನಾವು ನೇರವಾಗಿ ಫಾರ್ಮುಲಾ ಎಡಿಟರ್ ವಿಂಡೋದಲ್ಲಿ ಫಾರ್ಮುಲಾವನ್ನು ಬರೆಯಬಹುದು. |
07:42 | ಇಲ್ಲಿ ನಾವು ಮ್ಯಾತ್ application ಗೆ ಅರ್ಥವಾಗುವ ವಿಶೇಷವಾದ ಮಾರ್ಕ್ ಅಪ್ ಭಾಷೆಯನ್ನೂ ಬಳಸುತ್ತೇವೆ. |
07:50 | ನಾವು ಈಗಾಗಲೇ ಮಾರ್ಕ್ ಅಪ್ ಭಾಷೆಯ ಒಂದು ಸರಳ ಉದಾಹರಣೆಯನ್ನು ನೋಡಿದ್ದೇವೆ. |
07:56 | 4 ಬಾರಿ 3 , 12 ಕ್ಕೆ ಸಮಾನವಾಗುತ್ತದೆ. |
07:59 | ಇಲ್ಲಿ ‘times’ ಪದವನ್ನು ಗಮನಿಸಿ. |
08:03 | ಹಾಗೆಯೇ 4 ರಿಂದ 4 ನ್ನು ಬಾಗಿಸಿದರೆ ಅದು 1ದಕ್ಕೆ ಸಮಾನಾಗಿದೆ ಆಗ ಮಾರ್ಕ್ ಅಪ್ 4 ರ ಮೇಲೆ 4 , 1ದಕ್ಕೆ ಸಮಾನವಾಗುತ್ತದೆ. |
08:15 | ಈಗ ನಾವು ಅದನ್ನು ಮಾಡಿದ್ದೇವೆ ಇಲ್ಲಿ ನಿಮಗೆ ಒಂದು ಅಸೈನ್ಮೆಂಟ್ ಇದೆ: |
08:20 | ರೈಟರ್ ವಿಂಡೋದಲ್ಲಿ, ಕೆಳಗಿನ ಫಾರ್ಮುಲಾಗಳನ್ನು ಬರೆಯಿರಿ |
08:24 | 4 ರಿಂದ 4 ನ್ನು ಬಾಗಿಸಿದರೆ =1 |
08:29 | ನಿಮ್ಮ ಸೂತ್ರಗಳ ನಡುವಿನ ಒಂದು ಖಾಲಿ ಲೈನ್ ಬರೆಯಲು ‘newline’ ಗುರುತು ಬಳಸಬೇಕು. |
08:37 | A ಬೂಲಿಯನ್ ಮತ್ತು b
|
08:40 | 3 ಕ್ಕಿಂತ 4 ಹೆಚ್ಚಾಗಿರುತ್ತದೆ |
08:43 | x ಸುಮಾರಾಗಿ y ಗೆ ಸಮನಾಗಿರುತ್ತದೆ. |
08:47 | ಮತ್ತು 4 ಗೆ 3 ಸಮನಾಗಿರುವುದಿಲ್ಲ |
08:51 | ಇದು ನಮ್ಮ ನ್ನು ಲಿಬ್ರೆ ಆಫಿಸ್ ಮ್ಯಾತ್ ನ ಪರಿಚಯ ಮತ್ತು ಫಾರ್ಮುಲಾ ಎಡಿಟರ್ ಟ್ಯುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ. |
08:59 | ಸಾರಾಂಶವಾಗಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು, |
09:03 | ಲಿಬ್ರೆ ಆಫಿಸ್ ಮ್ಯಾತ್ ಎಂದರೇನು? |
09:06 | ಮ್ಯಾತ್ ಬಳಸಲು ಬೇಕಾಗಿರುವ ಸಿಸ್ಟಂ ಅಗತ್ಯತೆಗಳ ಬಗ್ಗೆ. |
09:10 | ಫಾರ್ಮುಲಾ ಎಡಿಟರ್ ನ್ನು ಬಳಸುವ ಬಗ್ಗೆ |
09:13 | ಒಂದು ಸರಳ ಫಾರ್ಮುಲಾ ಬರೆಯುವ ಬಗ್ಗೆ |
09:16 | ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
ಅದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐ ಸಿ ಟಿ.ನ ಬೆಂಬಲಿತವಾಗಿದೆ. |
09:28 | ಈ ಪ್ರಾಜೆಕ್ಟ್ http://spoken-tutorial.org .ಗೆ ಸಂಬಂಧಿಸಿದ್ದಾಗಿದೆ. |
09:33 | ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ. |
09:39 | ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದೆ. |
09:58 | ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು. |