LibreOffice-Suite-Calc/C2/Basic-Data-Manipulation/Kannada

From Script | Spoken-Tutorial
Revision as of 14:34, 16 March 2013 by Udaya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search



TIME NARRATION
00:00 ಲಿಬ್ರೆ ಆಫೀಸ್ ಕ್ಯಾಲ್ಕ್ ನ ಡಾಟಾ ಮನಿಪ್ಯುಲೆಶನ್ ನ ಬೇಸಿಕ್ ಗಳ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ.
00:09 ಫಾರ್ಮುಲಾಗಳ ಬೇಸಿಕ್ ಗಳ ಬಗ್ಗೆ ಪರಿಚಯ.
00:12 ಕಾಲಂಗಳನ್ನು ಜೋಡಿಸುವುದು.
00:15 ಡಾಟಾ ವನ್ನು ಫಿಲ್ಟರ್ ಮಾಡುವುದು.
00:17 ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ಅನ್ನು ನಮ್ಮ ಒಪರೆಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4.
00:27 ಈಗ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ನ ಬೇಸಿಕ್ ಫಾರ್ಮುಲಾಗಳನ್ನು ಕಲಿಯುವುದರ ಮೂಲಕ ಟ್ಯುಟೋರಿಯಲ್ ಅನ್ನು ಶುರು ಮಾಡೋಣ.
00:35 ಫಾರ್ಮುಲಾಗಳು ಸಂಖ್ಯೆಗಳನ್ನು ಮತ್ತು ವೇರಿಯೇಬಲ್ ಗಳನ್ನು ಬಳಸಿಕೊಳ್ಳುವ ಸಮೀಕರಣಗಳು. ಅವುಗಳು ಫಲಿತಾಂಶವನ್ನು ಕೊಡುತ್ತವೆ.
00:41 ಸ್ಪ್ರೆಡ್ ಶೀಟ್ ನಲ್ಲಿ ವೇರಿಯೇಬಲ್ ಎಂದರೆ ಸೆಲ್ ಲೊಕೇಶನ್ ಅದು ಸಮೀಕರಣಕ್ಕೆ ಬೇಕಾದ ಡಾಟಾವನ್ನು ಹಿಡಿದಿಟ್ಟುಕೊಂಡಿರುತ್ತದೆ.
00:47 ಇಲ್ಲಿ ಮಾಡಬಹುದಾದ ಮೂಲಭೂತ ಅಂಕಗಣಿತದ ಕಾರ್ಯಾಚರಣೆಗಳೆoದರೆ ಕೂಡಿಸುವುದು, ಕಳೆಯುವುದು, ಗುಣಿಸುವುದು ಹಾಗೂ ಭಾಗಿಸುವುದು.
00:56 ಈಗ ಮೊದಲು ನಮ್ಮ “Personal-Finance-Tracker.ods” ಫೈಲ್ ನ್ನು ಓಪನ್ ಮಾಡೋಣ.
01:02 ಈಗ ನಾವು ನಮ್ಮ “personal finance tracker.ods” ನಲ್ಲಿ “Cost” ಹೆಡಿಂಗ್ ನ ಕೆಳಗೆ ಕೊಟ್ಟಿರುವ ಎಲ್ಲಾ ಖರ್ಚುಗಳ ವಿವರಗಳನ್ನು ಹೇಗೆ ಸೇರಿಸುವುದು ಎಂದು ನೋಡೋಣ.
01:13 ಈಗ ನಾವು “Miscellaneous” ನ ಕೆಳಗೆ “SUM TOTAL” ಎಂಬ ಇನ್ನೊಂದು ಹೆಡಿಂಗ್ ನ್ನು ಕೊಡೋಣ.
01:19 ನಂತರ A8 ಸೆಲ್ ಮೇಲೆ ಕ್ಲಿಕ್ ಮಾಡೋಣ ಮತ್ತು “7” ಎಂದು ಕ್ರಮ ಸಂಖ್ಯೆಯನ್ನು ಹಾಕೋಣ.
01:25 ಈಗ ನಾವು “c8” ಸೆಲ್ ಮೇಲೆ ಕ್ಲಿಕ್ ಮಾಡೋಣ. ಅಲ್ಲಿ ನಾವು ಖರ್ಚುಗಳ ಒಟ್ಟು ಮೊತ್ತವನ್ನು ತೋರಿಸುತ್ತೇವೆ.
01:32 ಎಲ್ಲಾ ಖರ್ಚುಗಳನ್ನು ಸೇರಿಸಲು ನಾವು “is equal to SUM” ಎಂದು ಟೈಪ್ ಮಾಡಬೇಕು ಮತ್ತು ಆವರಣದ ಒಳಗೆ ಕಾಲಂಗಳ ಸಾಲನ್ನು ಸೇರಿಸಬೇಕು. ಅದು, ”C3 colon C7”.
01:44 ಈಗ ಕೀ ಬೋರ್ಡ್ ನಲ್ಲಿ ಎಂಟರ್ ಒತ್ತಿ.
01:47 “Cost” ಕೆಳಗೆ ಎಲ್ಲಾ ಐಟಂ ಗಳು ಸೇರಿರುವುದನ್ನು ನೀವು ಕಾಣಬಹುದು.
01:51 ಈಗ ನಾವು ಕ್ಯಾಲ್ಕ್ ನಲ್ಲಿ ಕಳೆಯುವುದು ಹೇಗೆ ಎಂದು ಕಲಿಯೋಣ.
01:55 ನಮಗೆ “House Rent” ನ ಮತ್ತು “ Electricity Bill” ನ ಖರ್ಚನ್ನು ಕಳೆಯಬೇಕಿದ್ದರೆ, ಮತ್ತು ಅದನ್ನು A9 ರೆಫೆರೆನ್ಸ್ ಇರುವ ಸೆಲ್ ನಲ್ಲಿ ತೋರಿಸಬೇಕೆನ್ದಿದ್ದರೆ, ಮೊದಲು A9 ಸೆಲ್ ಮೇಲೆ ಕ್ಲಿಕ್ ಮಾಡಿ.
02:06 ಈಗ ಈ ಸೆಲ್ ನಲ್ಲಿ “is equal to” ಎಂದು ಟೈಪ್ ಮಾಡಿ ಮತ್ತು ಆವರಣದ ಒಳಗೆ ಸಂಬಂಧಪಟ್ಟ ಸೆಲ್ ರೆಫೆರೆನ್ಸ್ ಗಳನ್ನು ಟೈಪ್ ಮಾಡಿ. ಅದು, “C3 minus C4”.
02:17 ಈಗ ಕೀ ಬೋರ್ಡ್ ನಲ್ಲಿ ಎಂಟರ್ ಒತ್ತಿ.
02:20 ಎರಡು ಸೆಲ್ ನಲ್ಲಿರುವ ಖರ್ಚುಗಳು ಕಳೆದು ಅದರ ಫಲಿತಾಂಶ ಸೆಲ್ ನಂಬರ್ A9 ನಲ್ಲಿ ಕಾಣಿಸುವುದನ್ನು ನಾವು ನೋಡಬಹುದು.
02:29 ಈಗ ನಾವು ಮಾಡಿದ ಬದಲಾವಣೆಗಳನ್ನು ಅಂಡು ಮಾಡೋಣ.
02:32 ಅಂತೆಯೇ ಇದರಲ್ಲಿ ನಮಗೆ ಬೇರೆ ಬೇರೆ ಸೆಲ್ ಗಳಲ್ಲಿರುವ ಡಾಟಾವನ್ನು ಭಾಗಿಸಬಹುದು ಮತ್ತು ಗುಣಿಸಬಹುದು.
02:37 ಸ್ಪ್ರೆಡ್ ಶೀಟ್ ನ ಇನ್ನೊಂದು ಮೂಲಭೂತವಾದ ಕಾರ್ಯವೇನೆಂದರೆ, ಸಂಖ್ಯೆಗಳ “Average” ನ್ನು ಕಂಡುಹಿಡಿಯುವುದು.
02:43 ಈಗ ನಾವು ಅದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ.
02:45 ಈಗ ನಾವು “SUM TOTAL” ನ ಸ್ವಲ್ಪ ಕೆಳಗೆ “Average” ಎಂದು ಹೆಡಿಂಗ್ ಕೊಡೋಣ.
02:50 ಇದರಲ್ಲಿ ನಮಗೆ ಒಟ್ಟು ಖರ್ಚಿನ ಸರಾಸರಿಯನ್ನು ತೋರಿಸಬೇಕಿದೆ.
02:55 ಹಾಗಾಗಿ ಈಗ ನಾವು “C9” ಸೆಲ್ ಮೇಲೆ ಕ್ಲಿಕ್ ಮಾಡೋಣ.
02:58 ಈಗ ನಾವು ಆವರಣದ ಒಳಗೆ “is equal to” ಸರಾಸರಿ ಮತ್ತು ಕ್ರಯ ಎಂದು ಬರೆಯುತ್ತೇವೆ.
03:04 ಕೀ ಬೋರ್ಡ್ ನಲ್ಲಿ ಎಂಟರ್ ಒತ್ತಿ.
03:07 ಈಗ ಸೆಲ್ ನಲ್ಲಿ “Cost” ಕಾಲಂನ ಸರಾಸರಿ ಬಂದಿರುವುದನ್ನು ನೀವು ಕಾಣಬಹುದು.
03:11 ಈಗ ನಾವು ಮಾಡಿದ ಬದಲಾವಣೆಗಳನ್ನು ಅಂಡು ಮಾಡೋಣ.
03:15 ಅಂತೆಯೇ, ನೀವು ಅಡ್ಡ ಸಾಲುಗಳಲ್ಲಿ ಇರುವ ಅಂಶಗಳ ಸರಾಸರಿ ಅನ್ನು ಕೂಡ ಕಂಡುಹಿಡಿಯಬಹುದು.
03:20 ನಾವು ಫಾರ್ಮುಲಾಗಳ ಮತ್ತು ಒಪರೇಟರ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಇನ್ನೂ ಮುಂಬರುವ ಟ್ಯುಟೋರಿಯಲ್ ನಲ್ಲಿ ಕಲಿಯುತ್ತೇವೆ.
03:25 ಈಗ ನಾವು ಕ್ಯಾಲ್ಕ್ ನ ಸ್ಪ್ರೆಡ್ ಶೀಟ್ ನಲ್ಲಿ ಡಾಟಾವನ್ನು ಹೇಗೆ “Sort” ಮಾಡುವುದು ಎಂದು ಕಲಿಯೋಣ.
03:30 ಸೋರ್ಟಿಂಗ್ ಬಳಸಿ ಸೆಲ್ ಗಳನ್ನು ಶೀಟ್ ನಲ್ಲಿ ನಮಗೆ ಇಷ್ಟ ಬಂದ ರೀತಿಯಲ್ಲಿ ಜೋಡಿಸಬಹುದು.
03:35 ಕ್ಯಾಲ್ಕ್ ನಲ್ಲಿ ನಿಮಗೆ ಡಾಟಾ ವನ್ನು ಮೂರು ರೀತಿಯಲ್ಲಿ ಸೋರ್ಟ್ ಮಾಡಬಹುದು.
03:43 ನೀವು ಒಂದು ನಿರ್ದಿಷ್ಟವಾದ ಐಟಂ ನ್ನು ಹುಡುಕುತ್ತಿರುವಾಗ ಇವುಗಳು ತುಂಬಾ ಉಪಯೋಗಕ್ಕೆ ಬರುತ್ತವೆ.
03:51 ಈಗ ನಮಗೆ “Costs” ಹೆಡಿಂಗ್ ನ ಅಡಿಯಿರುವ ಡಾಟಾವನ್ನು ಏರಿಕೆ ಕ್ರಮದಲ್ಲಿ ಜೋಡಿಸಬೇಕು ಎನ್ನಿ.
03:57 ಹಾಗಾಗಿ ಜೋಡಿಸಬೇಕಾದ ಸೆಲ್ ಗಳನ್ನು ಮೊದಲು ಸೆಲೆಕ್ಟ್ ಮಾಡಬೇಕು. ಅದಕ್ಕೆ, “Cost” ಸೆಲ್ ಮೇಲೆ ಕ್ಲಿಕ್ ಮಾಡಬೇಕು.
04:03 ಈಗ ಲೆಫ್ಟ್ ಮೌಸ್ ಬಟನ್ ನ್ನು ಒತ್ತಿ ಹಿಡಿದು, “2000” ಎಂದು ಬರೆದಿರುವ ಕೊನೆಯ ಸೆಲ್ ವರೆಗೂ ಡ್ರಾಗ್ ಮಾಡಿ.
04:12 ಇದು ನಾವು ಸೋರ್ಟ್ ಮಾಡಬೇಕಿರುವ ಕಾಲಂನ್ನು ಸೆಲೆಕ್ಟ್ ಮಾಡುತ್ತದೆ.
04:15 ಈಗ ಮೆನು ಬಾರ್ ನಲ್ಲಿ “Data” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “Sort” ನ್ನು ಕ್ಲಿಕ್ ಮಾಡಿ.
04:21 ನಂತರ “Current Selection” ನ್ನು ಸೆಲೆಕ್ಟ್ ಮಾಡಿ.
04:24 ಈಗ “Sort criteria” ಮತ್ತು “Options” ಟ್ಯಾಬ್ ಗಳಿರುವ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
04:31 “Sort criteria” ಟ್ಯಾಬ್ ನಲ್ಲಿ “Sort by” ಫೀಲ್ಡ್ ನಲ್ಲಿ “Cost” ನ್ನು ಸೆಲೆಕ್ಟ್ ಮಾಡಿ.
04:37 “Cost” ಅನ್ನು “Ascending” ಕ್ರಮದಲ್ಲಿ ಜೋಡಿಸಲು ಅದರ ಪಕ್ಕ ಇರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ .
04:44 ಈಗ “OK” ಬಟನ್ ಕ್ಲಿಕ್ ಮಾಡಿ.
04:47 ಈಗ ಕಾಲಂ ಏರಿಕೆ ಕ್ರಮದಲ್ಲಿರುವುದನ್ನು ನೀವು ನೋಡಬಹುದು.
04:51 ಹಾಗೆಯೇ, ಇಳಿಕೆ ಕ್ರಮದಲ್ಲಿ ಜೋಡಿಸಲು “Descending” ನ್ನು ಕ್ಲಿಕ್ ಮಾಡಿ ನಂತರ “OK” ಬಟನ್ ಕ್ಲಿಕ್ ಮಾಡಿ.
04:59 ಈಗ ನಾವು ಮಾಡಿದ ಬದಲಾವಣೆಗಳನ್ನು ಅಂಡು ಮಾಡೋಣ.
05:02 ಎಲ್ಲಾ ಕಾಲಂ ಗಳನ್ನು ಒಟ್ಟಿಗೆ ಸೆಲೆಕ್ಟ್ ಮಾಡಿ ನಂತರ ಸೋರ್ಟ್ ಆಯ್ಕೆಯನ್ನು ಕ್ಲಿಕ್ ಮಾಡುವುದರಿಂದ ಹೆಚ್ಚಿನ ಕಾಲಂ ಗಳನ್ನು ಒಟ್ಟಿಗೆ ಸೋರ್ಟ್ ಮಾಡಬಹುದು.
05:09 ಈಗ ನಮಗೆ ಕ್ರಮ ಸಂಖ್ಯೆಯನ್ನೂ ಕೂಡ ಕಾಸ್ಟ್ ನಂತೆಯೇ ಸೋರ್ಟ್ ಮಾಡಬೇಕು ಎಂದುಕೊಳ್ಳಿ.
05:14 ಹಾಗಾಗಿ ಮೇಲೆ ಮಾಡಿದಂತೆಯೇ ಮೊದಲು ಈ ಕಾಲಂಗಳನ್ನು ಸೆಲೆಕ್ಟ್ ಮಾಡಿ.
05:18 ಈಗ ಮೆನು ಬಾರ್ ನಲ್ಲಿ “Data” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Sort” ನ್ನು ಕ್ಲಿಕ್ ಮಾಡಿ.
05:24 ಈಗ ಕಾಣಿಸುವ ಡೈಲಾಗ್ ಬಾಕ್ಸ್ ನಲ್ಲಿ “Sort by” ಫೀಲ್ಡ್ ನಲ್ಲಿ “Cost” ನ್ನು ಸೆಲೆಕ್ಟ್ ಮಾಡಿ.
05:30 ಇನ್ನು “Then by” ಫೀಲ್ಡ್ ನಲ್ಲಿ “SN” ಸೆಲೆಕ್ಟ್ ಮಾಡಿ.
05:35 ಅವುಗಳ ಬಳಿ ಇರುವ ಎರಡೂ ಆಯ್ಕೆಗಳಲ್ಲಿ “ Descending” ನ್ನು ಕ್ಲಿಕ್ ಮಾಡಿ ನಂತರ “OK” ಕ್ಲಿಕ್ ಮಾಡಿ.
05:43 ಈಗ ಎರಡೂ ಹೆಡಿಂಗ್ ಗಳೂ ಇಳಿಕೆ ಕ್ರಮದಲ್ಲಿರುವುದನ್ನು ನೀವು ಕಾಣಬಹುದು.
05:47 ಈಗ ನಾವು ಮಾಡಿದ ಬದಲಾವಣೆಗಳನ್ನು ಅಂಡು ಮಾಡೋಣ.
05:49 ಈಗ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ಹೇಗೆ ಡಾಟಾ ವನ್ನು ಫಿಲ್ಟರ್ ಮಾಡುವುದು ಎಂದು ತಿಳಿಯೋಣ.
05:53 ಫಿಲ್ಟರ್ ಎಂದರೆ ಕಂಡೀಶನ್ ಗಳ ಒಂದು ಲಿಸ್ಟ್ ಆಗಿದೆ. ಪ್ರತೀ ಎಂಟ್ರಿಯು ಇದನ್ನು ತಲುಪಿದ ಮೇಲೆಯೇ ಡಿಸ್ಪ್ಲೇ ಆಗಬೇಕು.
06:00 ಸ್ಪ್ರೆಡ್ ಶೀಟ್ ನಲ್ಲಿ ಫಿಲ್ಟರ್ ನ್ನು ಹಾಕಲು ಈಗ ನಾವು “Item” ಹೆಸರಿನ ಸೆಲ್ ನ್ನು ಕ್ಲಿಕ್ ಮಾಡೋಣ.
06:07 ಈಗ ಮೆನು ಬಾರ್ ನಲ್ಲಿ “Data” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Filter” ನ್ನು ಕ್ಲಿಕ್ ಮಾಡಿ.
06:12 ಈಗ ಪಾಪ್ ಅಪ್ ಮೆನುವಲ್ಲಿ “AutoFilter” ಆಯ್ಕೆಯನ್ನು ಕ್ಲಿಕ್ ಮಾಡಿ.
06:16 ಈಗ ಹೆಡಿಂಗ್ ನ ಮೇಲೆ ಒಂದು ಬಾಣದ ಗುರುತು ಗೋಚರಿಸುವುದನ್ನು ನೀವು ಗಮನಿಸಬಹುದು.
06:20 ಈಗ “Item” ಹೆಸರಿನ ಸೆಲ್ ಮೇಲೆ ಡೌನ್ ಏರೋ ಕ್ಲಿಕ್ ಮಾಡಿ .
06:24 ಈಗ ಒಂದು ವೇಳೆ ನಿಮಗೆ “Electricity Bill” ಗೆ ಸಂಬಂಧಪಟ್ಟ ಡಾಟಾವನ್ನು ಮಾತ್ರ ತೋರಿಸಬೇಕು ಎಂದುಕೊಳ್ಳಿ.
06:29 ಹಾಗಾದರೆ “Electricity Bill” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:34 ಈಗ ಶೀಟ್ ನಲ್ಲಿ “Electricity Bill” ಗೆ ಸಂಬಂಧಿಸಿದ ಡಾಟಾ ಮಾತ್ರ ಡಿಸ್ಪ್ಲೇ ಆಗಿರುವುದನ್ನು ನೀವು ಕಾಣಬಹುದು.
06:40 ಉಳಿದ ಆಯ್ಕೆಗಳು ಶೋಧಿಸಿ ಹೋಗುತ್ತವೆ.
06:43 ಈಗ ಎಲ್ಲಾ ಡಾಟಾಗಳನ್ನು ನೋಡಲು ಪುನಃ ”Item” ಹೆಸರಿನ ಸೆಲ್ ಮೇಲೆ ಕ್ಲಿಕ್ ಮಾಡಿ ನಂತರ “All” ಮೇಲೆ ಕ್ಲಿಕ್ ಮಾಡಿ.
06:52 ಈಗ ನಮಗೆ ನಾವು ಮೊದಲು ಬರೆದ ಎಲ್ಲಾ ಡಾಟಾಗಳನ್ನು ನೋಡಲು ಸಾಧ್ಯವಿದೆ.
06:59 “AutoFilter” ನ್ನು ಹೊರತುಪಡಿಸಿ “Standard Filter” ಮತ್ತು “Advanced Filter” ಎಂಬ ಇನ್ನೆರಡು ಫಿಲ್ಟರ್ ಆಯ್ಕೆಗಳಿವೆ. ಅವುಗಳನ್ನು ಈ ಸರಣಿಯ ಮುಂದಿನ ಹಂತಗಳಲ್ಲಿ ಕಲಿಯುತ್ತೇವೆ.
07:11 ಇದು ನಮ್ಮ ನ್ನು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ.
07:15 ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು,
07:18 ಫಾರ್ಮುಲಾಗಳ ಬೇಸಿಕ್ ಗಳ ಬಗ್ಗೆ ಪರಿಚಯ.
07:21 ಕಾಲಂಗಳಿಗನುಗುಣವಾಗಿ ಸೋರ್ಟ್ ಮಾಡುವುದು.
07:23 ಡಾಟಾವನ್ನು ಫಿಲ್ಟರ್ ಮಾಡುವ ಬಗ್ಗೆ
07:26 ಈ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ.
07:30 ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಕೊಡುತ್ತದೆ.
07:33 ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್ ಲೋಡ್ ಮಾಡಿ ವೀಕ್ಕ್ಷಿಸಿ.
07:37 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ
07:40 ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್ ಶಾಪ್ ನಡೆಸುತ್ತದೆ.
07:43 ಆನ್ ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ಒದಗಿಸುತ್ತದೆ
07:47 ಹೆಚ್ಚಿನ ಮಾಹಿತಿಗಾಗಿ ಇದಕ್ಕೆ ಬರೆಯಿರಿ : contact@spoken-tutorial.org
07:53 ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
07:58 ಅದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐ ಸಿ ಟಿ.ನ ಬೆಂಬಲಿತವಾಗಿದೆ.
08:06 ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ.
08:08 *spoken hyphen tutorial dot org slash NMEICT hyphen Intro
08:16 ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದೆ.
08:20 ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು.

Contributors and Content Editors

Gaurav, Udaya, Vasudeva ahitanal