Firefox/C2/Setting-General-Privacy-Options/Kannada

From Script | Spoken-Tutorial
Revision as of 13:24, 13 March 2013 by Udaya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಈ Mozilla Firefox ನ ಭೋದನಾ ತರಗತಿಗೆ ಸ್ವಾಗತ.
00:04 ಈ ಭೋದನಾ ತರಗತಿಯಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದನ್ನು ಕಲಿಯುವೆವು.
00:11 ಈ ಭೋದನಾ ತರಗತಿಯಲ್ಲಿ ನಾವು Ubuntu 10.04 ನಲ್ಲಿ Firefox version 7.0 ಅನ್ನು ಉಪಯೋಗಿಸುವೆವು.
00:18 Mozilla Firefox ಒಳಗಿರುವ ಆಯ್ಕೆಗಳು ನಮಗೆ ಪುನರಾವರ್ತಿಸುವ ಕಾರ್ಯಗಳನ್ನು ಸುಲಭವಾಗಿ ಮಾಡಲು ಅನುಮತಿಸುತ್ತದೆ.
00:24 Windows ಬಳಿಕೆದಾರರಿಗೆ, ಈ ವೈಶಿಷ್ಟ್ಯವನ್ನು Options ಎಂದು ಕರೆಯುತ್ತಾರೆ.
00:29 ಉದಾಹರಣೆ, ನಮ್ಮ ಇ-ಮೈಲ್ ಲಾಗಿನ್ ಪೇಜ್ ಅನ್ನು ನಮ್ಮ ಮುಖ ಪುಟವಾಗಿ ನಿಯಮಿಸಬೇಕು.
00:33 ಅದಕ್ಕೆ ನಾವು ಎಡಿಟ್ ಮತ್ತು ಪ್ರಿಫರೆನ್ಸಸ್ ನ ಮೇಲೆ ಒತ್ತೋಣ.
00:37 windows ಬಳಿಕೆದಾರರು ಟೂಲ್ಸ್ ಮತ್ತು ಆಪ್ಷನ್ಸ್ ಮೇಲೆ ಒತ್ತಬೇಕು.
00:42 ನಿಯಮಿಸುವ ಅಥವಾ ಆಪ್ಷನ್ಸ್ ಡೈಲಾಗ್ ಬಾಕ್ಸ್ ತೆರೆಯುವುದು. ಡೈಲಾಗ್ ಬಾಕ್ಸ್ ನ ಮೇಲೆ, ಅನೇಕ ಟ್ಯಾಬ್ಸ್ ಗಳಿರುತ್ತದೆ.
00:50 ಪ್ರತಿಯೊಂದಕ್ಕು ಬೇರೆ ಬೇರೆ ಫಂಕ್ಷನ್ ಇರುತ್ತದೆ.
00:53 ಜೆನರಲ್ ಪಾನೆಲ್, ಸೆಟ್ಟಿಂಗ್ಸ್ ನಲ್ಲಿ ಅತ್ಯಂತ ಸಾಮಾನ್ಯವಾಗಿ ಬಳಸುವ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ, ಅಂದರೆ: Firefox ಮುಖಪುಟವನ್ನು ಸೆಟ್ ಮಾಡಲು. ಫೈಲ್ ಡೌನ್ ಲೊಡ್ ಲೊಕೇಷನ್ ಸೆಟ್ ಮಾಡಲು.


01:04 Gmail ಅನ್ನು ನಮ್ಮ ಪೂರ್ವನಿಯೋಜಿತವಾದ ಹೋಮ್ ಪೇಜ್ ಆಗಿ ಮಾಡುವುದು ಹೇಗೆ ಎಂದು ಕಲಿಯೋಣ.
01:08 ಸ್ಟಾರ್ಟ್-ಅಪ್ ಕೆಳಗೆ, ‘ವೆನ್ ಫೈರ್ಫಾಕ್ಸ್ ಸ್ಟಾರ್ಟ್ಸ್’ ಡ್ರಾಪ್ ಡೌನ್ ಮೆನುವಿ ನಲ್ಲಿ, ‘ಶೋ ಮೈ ಹೋಮ್ ಪೇಜ್’ ಅನ್ನು ಆರಿಸಿ.
01:16 ಪೂರ್ವನಿಯೋಜಿತವಾಗಿ ‘ಹೋಮ್ ಪೇಜ್’ ಫೀಲ್ಡ್ ‘Mozilla Firefox Start Page’ ಗೆ ನಿಯಮಿಸಿರುತ್ತದೆ.
01:22 ‘ಹೋಮ್ ಪೇಜ್’ ಫೀಲ್ಡ್ನ ಮೇಲೆ ಒತ್ತಿರಿ ಮತ್ತು ‘www.gmail.com’ ಎಂದು ಟೈಪ್ ಮಾಡಿ.
01:29 ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
01:30 ಡೈಲಾಗ್ಬಾಕ್ಸ್ ಮುಚ್ಚಲು ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
001:33 ನಮ್ಮ ಸೆಟ್ಟಿಂಗ್ಸ್ ಯಾಂತ್ರಿಕವಾಗಿ ಸೇವ್ ಆಗಿರುತ್ತದೆ.
01:36 ಈಗ ಈ Firefox ವಿಂಡೊವನ್ನು ಮುಚ್ಚಿರಿ.
01:40 ಮತ್ತು ಹೊಸ Firefox ವಿಂಡೊವನ್ನು ತೆಗೆಯಿರಿ.
01:42 ನೀವು ಹೋಮ್ ಪೇಜ್ ಆಗಿ Gmail ಲಾಗಿನ್ ಪೇಜ್ ಆಗಿರುವುದನ್ನು ಗಮನಿಸುವಿರಿ.
01:46 ಮುಂದೆ, Mozilla Firefox ಡೌನ್ಲೋಡ್ಸ್ ಅನ್ನು ಹೇಗೆ ನಿರ್ವಹಿಸುತ್ತದೆ ಎಂದು ಕಲಿಯೋಣ.
01:51 ಎಡಿಟ್ ಮತ್ತು ಆಯ್ಕೆಗಳ ಮೇಲೆ ಒತ್ತಿರಿ.
01:54 ಯಥಾ ಪ್ರಕಾರ, Windows ಬಳಿಕೆದಾರರು, ದಯವಿಟ್ಟು ಟೂಲ್ಸ್ ಮತ್ತು ಆಪ್ಷನ್ಸ್ ಮೇಲೆ ಒತ್ತಿರಿ.
01:58 ‘ಜನರಲ್’ ಟಾಬ್ ಮೇಲೆ ಒತ್ತಿರಿ.
02:02 ‘ಡೌನ್ಲೋಡ್ಸ್’ ಆಪ್ಷನ್ಸ್ ನಲ್ಲಿರುವ ‘ಶೊ ದ ಡೌನ್ಲೊಡ್ಸ್ ವಿಂಡೊ ವೆನ್ ಡೌನ್ಲೊಡಿಂಗ್ ಅ ಫೈಲ್’ ಎಂಬುವ ಚೆಕ್ ಬಾಕ್ಸ್ ಮೇಲೆ ಗುರುತನ್ನು ಹಾಕಿ.
02:09 ಈಗ ‘ಸೇವ್ ಫೈಲ್ಸ್ ಟು’ ಎಂಬುವ ರೇಡಿಯೊ ಬಟ್ಟನ್ ಅನ್ನು ಪರೀಕ್ಷಿಸಿ.
02:12 ಬ್ರೌಸ್ ಬಟ್ಟನ್ ಅನ್ನು ಒತ್ತಿರಿ ಮತ್ತು ಡೀಫಾಲ್ಟ್ ಫೊಲ್ಡರ್ ಅನ್ನು Desktop ಗೆ ಬದಲಾಯಿಸಿ.
02:18 dialog box ಅನ್ನು ಮುಚ್ಚಲು Close button ಮೇಲೆ ಒತ್ತಿರಿ.
02:24 ಯಥಾ ಪ್ರಕಾರ, ನಮ್ಮ ಸೆಟ್ಟಿಂಗ್ಸ್ ಯಾಂತ್ರಿಕವಾಗಿ ಸೇವ್ ಆಗಿರುತ್ತದೆ.
02:28 ಬ್ರೌಸರ್ನ ಸರ್ಚ್ ಬಾರ್ ನಲ್ಲಿ, ‘ಫ್ಲವರ್ಸ್’ ಎಂದು ಟೈಪ್ ಮಾಡಿ ಮತ್ತು ಬಲಕ್ಕಿರುವ ಭೂತಕನ್ನಡಿಯನ್ನು ಒತ್ತಿರಿ.
02:34 ಹುಡುಕಿದಕ್ಕೆ ಕಾಣಿಸಿಕೊಂಡ ಮೊದಲ ಫಲಿತಾಂಶದ ಮೇಲೆ ಬಲಕ್ಕೆ ಒತ್ತಿರಿ.
02:38 ಮತ್ತು ‘ಸೇವ್ ಲಿಂಕ್ ಆಸ್’ ಮೇಲೆ ಒತ್ತಿರಿ.
02:40 ಪೂರ್ವನಿಯೋಜಿತವಾಗಿ ಲಿಂಕ್ Desktop ಗೆ ಡೌನ್ಲೋಡ್ ಆಗುವುದನ್ನು ನೀವು ಗಮನಿಸುವಿರಿ.
02:46 ‘ಸೇವ್’ ಅನ್ನು ಒತ್ತಿ ಮತ್ತು ಆ ಫೈಲ್ Desktop ನಲ್ಲಿ ಸೇವ್ ಆಗಿರುತ್ತದೆ.
02:51 ಟ್ಯಾಬ್ಸ್ ಪಾನೆಲ್, ಟ್ಯಾಬಡ್ ಬ್ರೌಸಿಂಗ್ನ ವೈಶಿಷ್ಟ್ಯ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
02:56 The Content panel contains preferences related to how websites are displayed.

ಕಂಟೆಂಟ್ ಪಾನೆಲ್, ವೆಬ್ ಸೈಟ್ಸ್ ಹೇಗೆ ತೋರಿಸುತ್ತದೆ ಎಂಬುವ ಬಗ್ಗೆ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.

03:02 ಅಪ್ಲಿಕೇಷನ್ಸ್ ಪಾನೆಲ್, ನಿಮಗೆ Mozilla Firefox ವಿವಿಧ ತರದ ಫೈಲ್ಗಳನ್ನು ಹೇಗೆ ನಿಯಂತ್ರಿಸಬೇಕೆಂಬುವುದನ್ನು ನಿರ್ಧರಿಸಲು ಬಿಡುವುದು.
03:11 ಇದು PDF ಡಾಕ್ಯುಮೆಂಟ್ ಅಥವಾ ಆಡಿಯೊ ಫೈಲ್ ಆಗಿರಬಹುದು.
03:13 ನಿರ್ದೆಶಿಸಿದಂತೆ, ಟ್ಯಾಬ್ಸ್ ಮತ್ತು ಆಪ್ಷನ್ಸ್ ಅನ್ನು ಪರಿಶೋಧಿಸಿ.
03:19 ಪ್ರೈವಸಿ ಪಾನೆಲ್, ನಿಮ್ಮ ವೆಬ್- ಪ್ರೈವಸಿ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
03:25 ಟ್ರಾಕಿಂಗ್ ಕೆಳಗೆ, ‘ಟೆಲ್ ವೆಬ್ ಸೈಟ್ಸ್ ಐ ಡು ನಾಟ್ ವಾಂಟ್ ಟು ಬಿ ಟ್ರಾಕೆಡ್’ ಎಂಬುವುದಕ್ಕೆ ಗುರುತನ್ನು ಇಡೊಣ.
03:30 ಈ ಆಪ್ಷನ್ ಅನ್ನು ಆಯ್ಕೆ ಮಾಡಿದರೆ, ಇದು ವೆಬ್ ಸೈಟ್ ನಲ್ಲಿ ನಿಮ್ಮ ಬ್ರೌಸಿಂಗ್ ಚರ್ಯೆಯ ಮಾಹಿತಿಯನ್ನು ದಾಸ್ತಾನು ಮಾಡುವುದನ್ನು ನಿಲ್ಲಿಸುತ್ತದೆ.
03:37 ಹಿಸ್ಟರಿಯ ಕೆಳಗೆ, ಕರ್ಸರ್ ಅನ್ನು ವಿವಿಧ ಆಪ್ಷನ್ ಗಳ ಮೇಲೆ ಡ್ರಾಗ್ ಮಾಡಿ.
03:41 ‘Firefox ವಿಲ್’ ಫೀಲ್ಡ್ ನಲ್ಲಿ, ‘ನೆವರ್ ರಿಮೆಂಬರ್ ಹಿಸ್ಟರಿ’ ಎಂಬುದನ್ನು ಆರಿಸಿಕೊಳ್ಳಿ.
03:45 ಈ ಆಯ್ಕೆಯನ್ನು ಸಮರ್ಥಗೊಳಿಸುವುದೆಂದರೆ ಅದು ನಿಮ್ಮ ಕಂಪ್ಯೂಟರ್ ನಲ್ಲಿರುವ ಬ್ರೌಸಿಂಗ್ ಹಿಸ್ಟರಿಯನ್ನು ಇಟ್ಟಿರುವುದಿಲ್ಲ.
03:53 ನಾವು ‘ಕ್ಲಿಯರ್ ಆಲ್ ಕರೆಂಟ್ ಹಿಸ್ಟರಿ’ ಅನ್ನು ಕ್ಲಿಕ್ ಮಾಡಿದರೆ ಆಗ ನಿಮ್ಮ ಕಂಪ್ಯೂಟರ್ ನಲ್ಲಿ ಸಂಗ್ರಹಿಸಿದಂತಹ ಎಲ್ಲಾ ಬ್ರೌಸಿಂಗ್ ಹಿಸ್ಟರಿ ಅಳಿಸಿಹೋಗುತ್ತದೆ.
04:01 ‘ವೆನ್ ಯುಸಿಂಗ್ ದ ಲೊಕೇಷನ್ ಬಾರ್, ಸಜ್ಜೆಸ್ಟ್:’ ಫೀಲ್ಡ್ನಲ್ಲಿ, ಡ್ರಾಪ್ ಡೌನ್ ಅನ್ನು ತೆರೆದು ಮತ್ತು ‘ನಥಿಂಗ್’ಅನ್ನು ಆಯ್ಕೆ ಮಾಡಿ.
04:11 ಹೀಗೆ ಮಾಡುವುದರಿಂದ, ಅಡ್ರಸ್ ಬಾರ್ ನಲ್ಲಿ ನೀವು ಯಾವಗಲಾದರು ಹೊಸ URL ಒಡೆದಾಗ, ನಿಮಗೆ ಚುರುಕಾದ ಸಲಹೆಗಳನ್ನು ನೀಡುವುದಿಲ್ಲ.
04:19 ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಒತ್ತಿರಿ.
04:23 ಈಗ ನಿಮ್ಮ ಸ್ವಕೀಯತೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
04:26 ಸೆಕ್ಯೂರಿಟಿ ಪಾನೆಲ್, ಜಾಲ ಬ್ರೌಸಿಂಗ್ ನನ್ನು ಸುರಕ್ಷಿತವಾಗಿ ಇಡುವ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
04:32 ಸಿಂಕ್ ಪಾನೆಲ್ ನಿಮ್ಮನ್ನು “Firefox Sync” ನ ಅಕೌಂಟ್ ಅನ್ನು ನಿಯಮಿಸಲು ಅಥವಾ ನಿರ್ವಹಿಸಲು ಬಿಡುತ್ತದೆ.
04:36 Firefox Sync ನಮ್ಮನ್ನು ಅಡ್ಡಲಾಗಿ ವಿವಿಧ ವಿಧಾನದಲ್ಲಿ ಹಿಸ್ಟರಿ, ಬುಕ್ ಮಾರ್ಕ್ಸ್ ಮತ್ತು ಪಾಸ್ವರ್ಡ್ಸ್ಗಳನ್ನು ಉಪಯೋಗಿಸಲು ಬಿಡುತ್ತದೆ.
04:45 ಆಡ್ವಾನ್ಸ್ಡ್ ಪಾನೆಲ್, Firefox ನ ಕೆಲವು ಮುಖ್ಯ ಸೆಟ್ಟಿಂಗ್ಸ್ ಗಳನ್ನು ಒಳಗೊಂಡಿರುತ್ತದೆ.
04:49 Firefox ನ ಚರ್ಯೆಯನ್ನು ನಿಯಂತ್ರಿಸಲು ಇದರ ಬಳಿ ಬ್ರೌಸಿಂಗ್ ಮತ್ತು ಸಿಸ್ಟಮ್ ಡಿಫಾಲ್ಟ್ನ ಸೆಟ್ಟಿಂಗ್ಸ್ ಗಳಿವೆ.
04:57 ನೆಟ್ವರ್ಕ್ ಆಪ್ಷನ್ ಅನ್ನು ಬಳಸಿ Firefox ಇಂಟರ್ನೆಟ್ ಅನ್ನು ಸಂಪರ್ಕಿಸುವ ವಿಧಾನವನ್ನು ನಾವು ಆಯೋಜಿಸಬಹುದು.
05:03 ನೆಟ್ವರ್ಕ್ ಟಾಬ್ ನ ಒಳಗೆ, ಸಂಪರ್ಕಗಳ ಕೆಳಗೆ, ಸೆಟ್ಟಿಂಗ್ಸ್ ಬಟ್ಟನ್ ಮೇಲೆ ಒತ್ತಿರಿ.
05:09 ಇದು ಕನೇಕ್ಷನ್ ಸೆಟ್ಟಿಂಗ್ಸ್ ಡೈಲಾಗ್ ಬಾಕ್ಸ್ ಅನ್ನು ತೆರೆದಿಡುತ್ತದೆ.
05:11 ಇಲ್ಲಿ ನೀವು ಪ್ರಾಕ್ಸೀಸ್ಗಳನ್ನು ಕಾನ್ಫಿಗರ್ ಮಾಡಬಹುದು.
05:15 ಕಾರ್ಯನಿರ್ವಾಹಣೆಯನ್ನು ಸುಧಾರಿಸಲು ಮತ್ತು ಉತ್ತಮ ತರದಲ್ಲಿ ಸಂರಕ್ಷಿಸಲು ಪ್ರಾಕ್ಸೀಸ್ ಅನ್ನು ಬಳಸುತ್ತಾರೆ.
05:21 ಪೂರ್ವನಿಯೋಜಿತವಾಗಿ, ‘ಯೂಸ್ ಸಿಸ್ಟಮ್ ಪ್ರಾಕ್ಸಿ ಸೆಟ್ಟಿಂಗ್ಸ್’ ರೇಡಿಯೊ ಬಟ್ಟನ್ ಅನ್ನು ನಿರ್ದಿಷ್ಟಿಸಿರುತ್ತಾರೆ.
05:26 ಈ ಆಪ್ಷನ್ ನಾವು ಆಪರೇಟಿಂಗ್ ಸಿಸ್ಟಮ್ ಗೆ ಆಯೋಜಿಸಿದಂತ ನಿಯಮಗಳನ್ನು ಬಳಸುತ್ತದೆ.
05:31 ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ನೀವಾಗಿ ಹೋಗಲು, ಮಾನ್ಯುಅಲ್ ಪ್ರಾಕ್ಸಿ ಕಾನ್ಫಿಘರೇಷನ್ ರೇಡಿಯೊ ಬಟ್ಟನ್ ಮೇಲೆ ಒತ್ತಿರಿ.
05:38 ಈಗ ನೀವು ಈ ಫೀಲ್ಡ್ಸ್ ನಲ್ಲಿ ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ಪ್ರವೇಶಿಸಬಹುದು.
05:42 ಕನೆಕ್ಷೆನ್ ಸೆಟ್ಟಿಂಗ್ಸ್ ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
05:49 ಆಯ್ಕೆಗಳು ಅಥವಾ ಆಪ್ಷನ್ಸ್ ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಮತ್ತೆ ಕ್ಲೋಸ್ ಬಟ್ಟನ್ ಒತ್ತಿರಿ.
05:55 ನಿಮ್ಮ ಸೆಟ್ಟಿಂಗ್ಸ್ ಯಾಂತ್ರಿಕವಾಗಿ ಸೇವ್ ಆಗಿರುತ್ತದೆ.
05:58 ಕೊನೆಯದಾಗಿ, ನೀವು ಆಡ್ವಾನ್ಸ್ಡ್ ಪಾನೆಲ್ ನಲ್ಲಿರುವ ಅಪ್-ಡೇಟ್ ಟಾಬ್ ಅನ್ನು ಬಳಸಿ ನಿಮ್ಮ Firefox ಅನ್ನು ನವೀನಗೊಳಿಸಬಹುದು.
06:05 ಇದು ನಮ್ಮ ಭೋದನಾ ತರಗತಿಯನ್ನು ಕೊನೆಯ ಹಂತಕ್ಕೆ ತಂದಿದೆ.
06:08 ಈ ಭೋದನಾ ತರಗತಿಯಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದು ಹೇಗೆಂದು ಕಲಿತೆವು.
06:15 ಈ ವಿಷಯಗ್ರಹಣ ಹಂಚಿಕೆಯ ಪರೀಕ್ಷೆಯನ್ನು ಪ್ರಯತ್ನಿಸಿ.
06:19 ಹೊಸ ಬ್ರೌಸರ್ ವಿಂಡೊ ಅನ್ನು ತೆರೆಯಿರಿ.
06:21 ನಿಮ್ಮ ಮುಖ ಪುಟವನ್ನು ‘spoken-tutorial.org’ ಗೆ ಬದಲಾಯಿಸಿ.
06:28 ನಿಮ್ಮ ಡಿಫಾಲ್ಟ್ ಡೌನ್ ಲೋಡ್ ಲೊಕೇಷನ್ ನನ್ನು ‘ಹೊಮ್ ಫೋಲ್ಡರ್’ಗೆ ಬದಲಾಯಿಸಿ ಮತ್ತು
06:30 ನಿಮ್ಮ ‘ವೆನ್ ಯುಸಿಂಗ್ ದ ಲೊಕೇಷನ್ ಬಾರ್, ಸಜ್ಜೆಸ್ಟ್:” ಸೆಟ್ಟಿಂಗ್ ಅನ್ನು ಹಿಸ್ಟರಿ ಮತ್ತು ಬುಕ್ ಮಾರ್ಕ್ಸ್ ಗೆ ಬದಲಾಯಿಸಿ.
06:38 <http://spoken-tutorial.org/What_is_a_Spoken_Tutorial> ನಲ್ಲಿ ಲಭ್ಯವಿರುವ ವಿಡಿಯೊ ಅನ್ನು ವೀಕ್ಷಿಸಿ.
06:41 ಇದು ವಾಕ್ ಬೋಧನಾ ಯೋಜನೆಯನ್ನು ಕ್ರೂಢೀಕರಿಸುತ್ತದೆ.
06:45 ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು
06:48 ವಾಕ್ ಭೋದನಾ ಯೋಜನಾ ತಂಡ
06:50 ವಾಕ್ ಭೋದನೆಯ ಮೂಲಕ ವರ್ಕ್ಶಾಪ್ಗಳನ್ನು ಆಯೋಜಿಸುತ್ತದೆ.
06:54 ಆನ್-ಲೈನ್ ಟೆಸ್ಟ್ ನಲ್ಲಿ ತೇರ್ಗಡೆ ಪಡೆದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ.
06:58 ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಲು ದಯವಿಟ್ಟು contact@spoken-tutorial.org ಗೆ ಬರೆಯಿರಿ.
07:04 ಈ ವಾಕ್ ಭೊದನಾ ಯೋಜನೆ ಟಾಕ್ ಟು ಎ ಟೀಚರ್ ಪ್ರಾಜಕ್ಟ್ನ ಒಂದು ಭಾಗವಾಗಿದೆ..
07:07 ಈ ಶಿಕ್ಷಣದ ಮೇಲಿನ ರಾಷ್ಟ್ರೀಯ ಯೋಜನೆ ಭಾರತ ಸರ್ಕಾರದ ಐಸಿಟಿ, ಎಮ್ಹೆಚ್ಆರ್ಡಿ ಮುಖಾಂತರ ಉತ್ತೇಜಿಸಲ್ಪಟ್ಟಿದೆ.
07:12 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿ <http://spoken-tutorial.org/NMEICT-Intro> ನಲ್ಲಿ ಲಭ್ಯವಿದೆ.
07:27 ಈ ತರಗತಿ ದೇಸಿಕ್ರ್ಯೂ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ನಿಂದ ನೀಡಲ್ಪಟ್ಟಿದೆ
07:33 ಸೇರಿದಕ್ಕೆ ಧನ್ಯವಾದಗಳು.

Contributors and Content Editors

PoojaMoolya, Pratik kamble, Udaya, Vasudeva ahitanal