Firefox/C2/Tabbed-Browsing-Blocking-Pop-ups/Kannada

From Script | Spoken-Tutorial
Revision as of 13:22, 13 March 2013 by Udaya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 Mozilla Firefox ನ ವಾಕ್ ಭೋದನಾ ತರಗತಿಗೆ ಸ್ವಾಗತ.
00:04 ಈ ಭೋದನಾ ತರಗತಿಯಲ್ಲಿ, ನಾವು ಟ್ಯಾಬ್ಡ್ ಬ್ರೌಸಿಂಗ್ ಸ್ಟೋರಿಂಗ್ ಕಂಟೆಂಟ್ ಅಫ್ಲೈನ್ ಬ್ಲಾಕಿಂಗ್ ಪಾಪ್ -ಅಪ್ಸ್ ಬಗ್ಗೆ ಕಲಿಯುವೆವು.
00:13 ಈ ಭೋದನಾ ತರಗತಿಯಲ್ಲಿ, ನಾವು Firefox version 7.0 ಅನ್ನು Ubuntu 10.04 ನಲ್ಲಿಬಳಸುವೆವು.
00:21 ಒಂದೇ ಬ್ರೌಸರ್ ವಿಂಡೊವಿನ ಬೇರೆ ಬೇರೆ ಟಾಬ್ಸ್ ಗಳಲ್ಲಿ ಬಹುತೇಕ ವೆಬ್ ಪೇಜ್ಗಳನ್ನು ಹೊರೆಯಲು Mozilla Firefox ಬಿಡುತ್ತದೆ.
00:29 ಟ್ಯಾಬ್ಡ್ ಬ್ರೌಸಿಂಗ್ ನ ಬಹುದೊಡ್ಡ ಪ್ರಯೋಜನ ಏನಂದರೆ, ಬಹುತೇಕ ಬ್ರೌಸರ್ ವಿಂಡೊಗಳನ್ನು ತೋರುವ ಅವಶ್ಯಕತೆಯನ್ನು ತೆಗೆದುಹಾಕುತ್ತದೆ.
00:36 ಹೀಗೆ ಇದು ನಿಮ್ಮ desktop ಅನ್ನು ಗೊಂದಲ-ರಹಿತವಾಗಿಡುವುದರಲ್ಲಿ ಸಹಾಯ ಮಾಡುತ್ತದೆ.
00:40 ಪ್ರತಿ ಟ್ಯಾಬ್, ಬ್ರೌಸರ್ ಅನ್ನು ತೋರಿಸಿದಾಗ ಕಾಣುವ ಹಿಡಿ ಪರಿಧಿಯನ್ನು ವ್ಯಾಪಿಸುತ್ತದೆ.
00:45 ಇದು ತೆರೆದಿರುವ ಬ್ರೌಸರ್ ವಿಂಡೊಗಳ ಮೇಲ್ಲಿಂದ ಮೇಲೆ ಗಾತ್ರ ಮತ್ತು ಸ್ಥಾನವನ್ನು ಬದಲಾಯಿಸುವ ಅವಶ್ಯಕತೆಯನ್ನು ತೆಗೆದುಹಾಕುತ್ತದೆ.
00:52 ಟೈಲ್ಡ್-ವಿಂಡೊ ಬ್ರೌಸಿಂಗ್ ಗಿಂತ ಟ್ಯಾಬ್ಡ್ ಬ್ರೌಸಿಂಗ್ ಕಡಿಮೆ ಮೆಮೊರಿ ಮತ್ತು ಆಪರೇಟಿಂಗ್ ಸಿಸ್ಟಮ್ ಸಂಪನ್ಮೊಲವನ್ನು ಬಳಸುತ್ತದೆ,
01:00 ಹಾಗೆಯೇ ಬಳೆಕೆದಾರ ಒಂದೇ ಸಲ ಬಹುತೇಕ ಟ್ಯಾಬ್ಸ್ ಗಳನ್ನು ತೆರೆಯಬಾರದೆಂಬ ಷರತ್ತಿಲ್ಲ.
01:05 ಉದಾಹರಣೆಗೆ, ನೀವು ಒಂದು ನಿರ್ದಿಷ್ಟ ವೆಬ್-ಪೇಜ್ ನಲ್ಲಿದ್ದೀರ.
01:08 ಇಲ್ಲೊಂದು ಲಿಂಕ್ - “ಫೈರ್ಫಾಕ್ಸ ಫಾರ್ ಡೆಸ್ಕಟಾಪ್”
01:11 ನೀವು ಈ ಲಿಂಕ್ ಅನ್ನು ಹೊಸ ಟ್ಯಾಬ್ ನಲ್ಲಿ ತೆರೆಯಬಹುದು.
01:14 ಇದನ್ನು ಮಾಡಲು, ಲಿಂಕ್ ನ ಮೇಲೆ ಬಲಭಾಗದಲ್ಲಿ ಒತ್ತಿರಿ.
01:17 ಕಂಟೆಕ್ಸ್ಟ್ ಮೆನುವಿನಲ್ಲಿ, ‘ಒಪೆನ್ ಲಿಂಕ್ ಇನ್ ನ್ಯೂ ಟ್ಯಾಬ್’ ಮೇಲೆ ಒತ್ತಿರಿ.
01:21 ನೀವು, ಅದೇ ಬ್ರೌಸರ್ ವಿಂಡೊನಲ್ಲಿ, ಪ್ರಸ್ತುತ ಇರುವ ಟ್ಯಾಬ್ನ ಬಲ ಭಾಗದಲ್ಲಿ ಒಂದು ಹೊಸ ಟ್ಯಾಬ್ ತೆರೆಯುವುದನ್ನು ಗಮನಿಸಿ.
01:28 ಹೀಗೆ, ನಿಮ್ಮ ವಿಂಡೊವನ್ನು ಮುಚ್ಚದೆ ಅಥವಾ ಕದಲಿಸದೆ, ನೀವು ಇನ್ನೊಂದು ವೆಬ್-ಪೇಜನ್ನು ಅದೇ ವಿಂಡೊದಲ್ಲಿ ತೆರೆಯಬಹುದು.
01;34 ನೀವು ಫೈಲ್ ಮತ್ತು ಹೊಸ ಟ್ಯಾಬ್ ಮೇಲೆ ಒತ್ತಿ ಸಹ ಹೊಸ ಟ್ಯಾಬ್ ಅನ್ನು ತೆರೆಯಬಹುದು.
01:40 ಇದರ ಕಿರುದಾರಿಯ ಕೀ CTRL+T.
01:40 ನೀವು ನ್ಯೂ ಟ್ಯಾಬ್ ತೆರೆದಾಗ, ಹೊಸ ಟ್ಯಾಬ್ ತಕ್ಷಣ ಸಕ್ರಿಯಗೊಳ್ಳುವುದನ್ನು ಗಮನಿಸಿ.
01:50 ಈಗ URL ಬಾರ್ ಗೆ ಹೋಗಿ ಮತ್ತು ‘www.google.com’ ಎಂದು ಟೈಪ್ ಮಾಡಿ.
01:56 ಈಗ ನಿಮ್ಮಲ್ಲಿ, ಪ್ರತಿಯೊಂದರಲ್ಲು ಬೇರೆ ಬೇರೆ ವೆಬ್-ಪೇಜ್ ಇರುವಂತಹ 3 ಟ್ಯಾಬ್ ಗಳಿವೆ!
02:01 ನೀವು ಅತ್ಯಂತಬಲಗಡೆ ಟ್ಯಾಬ್ನ ಬಲಗಡೆಯಲ್ಲಿರುವ ‘+’ ಬಟ್ಟನ್ ನನ್ನು ಒತ್ತಿಯೂ ಸಹ, ಹೊಸ ಟ್ಯಾಬ್ ಅನ್ನು ತೆರೆಯಬಹುದು
02:08 ನಾವು ಟ್ಯಬ್ ಗಳನ್ನು ನಮಗೆ ಅಗತ್ಯವಾಗುವ ಹಾಗೆ ಕ್ರಮಪಡಿಸಬಹುದು.
02:11 ಸುಮ್ಮನೆ ಟ್ಯಾಬ್ ಮೇಲೆ ಒತ್ತಿ ಮತ್ತು ಮೌಸ್ ಬಟ್ಟನ್ ಅನ್ನು ಬಿಡದೆ, ಬೇಕಾದ ಜಾಗಕ್ಕೆ ತೆರಳಿಸಿ.
02:17 ಈಗ ಮೌಸ್ ಬಟ್ಟನ್ ಅನ್ನು ಬಿಡಿ.
02:20 ಈಗ ಟ್ಯಾಬ್ ಬೇಕಾದ ಲೊಕೇಷನ್ ನಲ್ಲಿದೆ.
02:23 Mozilla Firefox, ನಮಗೆ ನಿರ್ವಹಿಸಲು ಬಿಡುವಂತಹ ಕೆಲವು ಬೇಸಿಕ್ ಆಪರೇಷನ್ಸ್ ಅನ್ನು ನೋಡೊಣ.
02:29 ಹುಡುಕುವ ಸಾಧನವನ್ನು “google” ಗೆ ಬದಲಾಯಿಸೊಣ.
02:32 ಸರ್ಚ್ ಬಾರ್ ನಲ್ಲಿ ‘ಇ-ಮೈಲ್ ವಿಕಿಪೀಡಿಯ’ ಎಂದು ಟೈಪ್ ಮಾಡಿ, ಸರ್ಚ್ ಬಾರ್ ನ ಬಲಕ್ಕೆ ಇರುವ ಬೂತಕನ್ನಡಿಯ ಮೇಲೆ ಒತ್ತಿರಿ.
02:40 ಪ್ರಸಕ್ತವಾದ ವಿಕಿಪಿಡಿಯ ಪೇಜ್ ಇದರ ಮೊದಲ ಹುಡುಕುವ ಫಲಿತಾಂಶ.
02:44 ಲಿಂಕ್ ಮೇಲೆ ಒತ್ತಿ ಈ ಪುಟವನ್ನು ತೆರೆಯೊಣ.
02:48 ಈಗ, ಫೈಲ್ ಮೇಲೆ ಒತ್ತಿ ಆ ನಂತರ ‘ಸೇವ್ ಪೇಜ್ ಆಸ್’ ಮೇಲೆ ಒತ್ತಿರಿ.
02:52 ‘search.html’ ಹೆಸರಲ್ಲಿ Desktop ಮೇಲೆ ಫೈಲ್ ಅನ್ನು ಸೇವ್ ಮಾಡೋಣ.
02:59 ಈಗ ಫೈಲ್ ಮತ್ತು ನ್ಯೂ ಟ್ಯಾಬ್ ಮೇಲೆ ಒತ್ತಿ, ಬ್ರೌಸರ್ ವಿಂಡೊದಲ್ಲಿ ಹೊಸ ಟ್ಯಾಬ್ ಅನ್ನು ತೆರೆಯೊಣ.
03:05 ಈಗ ನಾವು ಸೇವ್ ಮಾಡಿದಂತಹ ಪುಟವನ್ನು ಈ ಹೊಸ ಟ್ಯಾಬ್ ವಿಂಡೊದಲ್ಲಿ ತೆರೆಯೋಣ.
03:10 ಫೈಲ್ ಮತ್ತು ಓಪನ್ ಫೈಲ್ ಮೇಲೆ ಒತ್ತಿರಿ.
0312 ಬ್ರೌಸ್ ಮಾಡಿ ಮತ್ತು ಸೇವ್ ಆದ ಫೈಲ್ ಅನ್ನು ತೆಗೆಯಿರಿ.
03:17 URL ಬಾರ್ ನಲ್ಲಿರುವ ಅಡ್ರೆಸ್, ಇಂಟರ್ನೆಟ್ ಆಡ್ರೆಸ್ ಅಲ್ಲ ಅದು ಕಂಪ್ಯೂಟರ್ ನಲ್ಲಿರುವ ಸ್ಥಳಿಯ ಜಾಗ ಎಂದು ಕಾಣುವಿರಿ.
03:25 ಈಗ ನೀವು ಈ ಪುಟವನ್ನು, ನೀವು ಆಫ್ಲೈನ್ ಆಗಿದ್ದರು ಓದಬಹುದು.
03:29 ಪಾಪ್-ಅಪ್ಸ್ ಅಂದರೆ ನಿಮ್ಮ ಅನುಮತಿ ಇಲ್ಲದೇ ಯಾಂತ್ರಿಕವಾಗಿ ಕಾಣಿಸಿಕೊಳ್ಳುವ ವಿಂಡೊಗಳು.
03:34 Firefox ನಮಗೆ ಪ್ರಿಫರೆನ್ಸಸ್ ವಿಂಡೊ ಒಳಗಿರುವ ಕಂಟೆಂಟ್ ಟ್ಯಾಬ್ ಮೂಲಕ ಪಾಪ್-ಅಪ್ಸ್ ಮತ್ತು ಪಾಪ್-ಅಂಡರ್ಸ್ ಗಳನ್ನು ನಿಯಂತ್ರಿಸುವುದಕ್ಕೆ ಬಿಡುತ್ತದೆ.
03:42 Windows ನಲ್ಲಿ, ಇದು ಆಪ್ಷನ್ಸ್ ವಿಂಡೊ ಒಳಗಿರುತ್ತದೆ.
03:46 ಪೂರ್ವನಿಯೋಜಿತವಾಗಿ, ಪಾಪ್-ಅಪ್ ನಿಯಂತ್ರಣ ಆನ್ ಆಗಿರುತ್ತದೆ.
03:50 ಎಡಿಟ್ ಮತ್ತು ಪ್ರಿಫರೆನ್ಸಸ್ ಮೇಲೆ ಒತ್ತಿರಿ.
03:52 ವಿಂಡೊಸ್ ಬಳಕೆದಾರರು ದಯವಿಟ್ಟು ಟೂಲ್ಸ್ ಮತ್ತು ಆಪ್ಷನ್ಸ್ ಮೇಲೆ ಒತ್ತಿರಿ.
03:56 ಕಂಟೆಂಟ್ ಟ್ಯಾಬ್ ನಲ್ಲಿ, ಮೊದಲ ಆಯ್ಕೆ, ‘ಬ್ಲಾಕ್ ಪಾಪ್-ಅಪ್ ವಿಂಡೊಸ್’ ಪೂರ್ವನಿಯೋಜಿತವಾಗಿ ಗುರುತಿಸಿರುತ್ತದೆ.
04:02 ಇಲ್ಲದಿದ್ದಲ್ಲಿ, ದಯವಿಟ್ಟು ಈ ಆಪ್ಷನ್ ಮೇಲೆ ಗುರುತನ್ನು ಹಾಕಿ.
04:05 ಡಯಲಾಗ್ ಬಾಕ್ಸ್ ನ ವಿವಿಧ ಆಯ್ಕೆಗಳ ಬಗ್ಗೆ ಇನ್ನೊಂದು ಭೋದನಾ ತರಗತಿಯಲ್ಲಿ ಚರ್ಚಿಸಲಾಗುತ್ತದೆ.
04:11 ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
04:13 ಇದು ನಮ್ಮನ್ನು ಈ ಭೋದನಾ ತರಗತಿಯ ಕೊನೆಯ ಹಂತಕ್ಕೆ ತಂದಿದೆ.
04:16 ಇದು ನಾವು ಕಲಿತ ಬಗ್ಗೆ ಲಘು ಸಾರಾಂಶ.
04:19 ಟ್ಯಾಬ್ಡ್ ಬ್ರೌಸಿಂಗ್ ಸ್ಟೊರಿಂಗ್ ಕಂಟೆಂಟ್ ಆಫ್ಲೈನ್ ಬ್ಲಾಕಿಂಗ್ ಪಾಪ್-ಅಪ್ಸ್
04:25 ಈ ವಿಷಯಗ್ರಹಣ ಹಂಚಿಕೆಯ ಪರೀಕ್ಷೆಯನ್ನು ಪ್ರಯತ್ನಿಸಿ.
04:29 ಹೊಸ ಟ್ಯಾಬ್ ಅನ್ನು ತೆಗೆಯಿರಿ.
04:30 ಹುಡುಕುವ ಸಾಧಕವನ್ನು ‘google’ ಗೆ ಬದಲಾಯಿಸಿ.
04:33 ‘ದ ಹಿಸ್ಟರಿ ಅಫ್ ಇಮೈಲ್’ ಅನ್ನು ಹುಡುಕಿ.
04:36 ಮೊದಲ ಫಲಿತಾಂಶವನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡುಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ.
04:43 ಹುಡುಕುವ ಸಾಧಕವನ್ನು ‘ಬಿಂಗ್’ಗೆ ಬದಲಾಯಿಸಿ.
04:46 ಮತ್ತೆ ‘ದ ಹಿಸ್ಟರಿ ಅಫ್ ಇಮೈಲ್’ ಅನ್ನು ಹುಡುಕಿ.
04:49 ‘‘ದ ಹಿಸ್ಟರಿ ಅಫ್ ಇಮೈಲ್ ಮತ್ತು ರೇ ಟಾಮಲಿನ್ಸನ್’ ಲಿಂಕ್ ಅನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡುಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ.
04:58 <http://spoken-tutorial.org/What_is_a_Spoken_Tutorial> ನಲ್ಲಿ ಲಭ್ಯವಿರುವ ವಿಡಿಯೊ ಅನ್ನು ವೀಕ್ಷಿಸಿ.
05:02 ಇದು ವಾಕ್ ಬೋಧನಾ ಯೋಜನೆಯನ್ನು ಕ್ರೂಢೀಕರಿಸುತ್ತದೆ.
05:04 ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು.
05:09 ವಾಕ್ ಭೋದನಾ ಯೋಜನಾ ತಂಡ ವಾಕ್ ಭೋದನೆಯ ಮೂಲಕ ವರ್ಕ್ಶಾಪ್ಗಳನ್ನು ಆಯೋಜಿಸುತ್ತದೆ
05:14 ಆನ್ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
05:18 ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ contact@spoken-tutorial.org
05:25 ಸ್ಪೊಕನ್ ಟುಟೊರಿಯಲ್ ಪ್ರಾಜೆಕ್ಟ್, ಟಾಕ್ ಟು ಅ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
05:29 ಈ ಶಿಕ್ಷಣದ ಮೇಲಿನ ರಾಷ್ಟ್ರೀಯ ಯೋಜನೆ ಭಾರತ ಸರ್ಕಾರದ ಐಸಿಟಿ, ಎಮ್ಹೆಚ್ಆರ್ಡಿ ಮುಖಾಂತರ ಉತ್ತೇಜಿಸಲ್ಪಟ್ಟಿದೆ.
05:37 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿ <http://spoken-tutorial.org/NMEICT-Intro> ನಲ್ಲಿ ಲಭ್ಯವಿದೆ.
05:48 ಈ ತರಗತಿ ದೇಸಿಕ್ರ್ಯೂ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ನಿಂದ ನೀಡಲ್ಪಟ್ಟಿದೆ
05:53 ಸೇರಿದಕ್ಕೆ ಧನ್ಯವಾದಗಳು.

Contributors and Content Editors

Nancyvarkey, PoojaMoolya, Pratik kamble, Udaya, Vasudeva ahitanal