Firefox/C2/Introduction/Kannada

From Script | Spoken-Tutorial
Revision as of 13:18, 13 March 2013 by Udaya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 Mozilla Firefox ನ ಪರಿಚಯದ ವಾಕ್ ಭೋದನಾ ತರಗತಿಗೆ ಸ್ವಾಗತ
00:05 ಈ ಭೋದನಾ ತರಗತಿಗಯಲ್ಲಿ ಕೆಳಕಂಡ ವಿಷಯಗಳು ಒಳಗೊಂಡಿರುತ್ತದೆ.
00:10 Mozilla Firefox ಎಂದರೇನು ?
00:12 Firefox ಏಕೆ ?
00:14 ಆವೃತ್ತಿಗಳು, ವ್ಯವಸ್ಥೆಯ ಅವಶ್ಯಕತೆಗಳು,ಡೌನ್ಲೋಡ್ ಮತ್ತು Firefox ಇನ್ಸ್ಟಾಲೇಶನ್, ವೆಬ್ಸೈಟ್ಗೆ ಭೇಟಿ
00:21 Mozilla Firefox ಅಥವಾ Firefox ಉಚಿತ ಮತ್ತು ಮುಕ್ತವಾಗಿ ದೊರಕುವ ವೆಬ್ ಬ್ರೌಸರ್ ಆಗಿದೆ.
00:27 ಇದು ಉಬುಂಟು ಲಿನಕ್ಸ್ಗೆ ಪೂರ್ವನಿಯೋಜಿತವಾದ ವೆಬ್ಬ್ರೌಸರ್ ಆಗಿದ್ದು ವಿಂಡೋನಂತೆ ಕಾರ್ಯನಿರ್ವಹಿಸುತ್ತದೆ
00:33 ಇದು ಇಂಟರ್ನೆಟ್ನ ವೆಬ್ ಹಾಳೆಗಳನ್ನು ನೋಡಲು ಮತ್ತು ವೆಬ್ಹಾಳೆಗಳ ಮೂಲಕ ಸಂಚರಿಸಿಲು

ಸಹಕರಿಸುತ್ತದೆ.

00:39 ಇಷ್ಟೇ ಅಲ್ಲದೆ ಗೂಗಲ್,ಯಾಹೂ ಸರ್ಚ್, ಬಿಂಗ್ ಮುಂತಾದ ಸರ್ಚ್ ಎಂಜಿನ್ಗಳ ಮೂಲಕ ವೆಬ್ ಹಾಳೆಗಳನ್ನು ಸಹ ಹುಡುಕುತ್ತದೆ
00:47 Firefox ಲಾಭೋದ್ದೇಶತಿತ ಸಂಸ್ಥೆ Mozilla Foundation ನ ಸ್ವಯಂಸೇವಕ ತಂತ್ರಾಂಶಕಾರರಿಂದ ಅಭಿವೃದ್ಧಿಸಲ್ಪಟ್ಟಿದೆ
00:54 Mozilla ದ ಸಂಪೂರ್ಣ ಮಾಹಿತಿಗೆ mozilla.org ಅನ್ನು ಸಂಪರ್ಕಿಸಿ
00:59 Firefox ವಿಂಡೋಸ್,ಮ್ಯಾಕ್ ಓಎಸ್ಎಕ್ಸ್ ಮತ್ತು ಲಿನಕ್ಸ್ ಆಪರೇಟಿಂಗ್ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತದೆ
01:05 ಉಬುಂಟುವಿನ ಬೇರೆ ಜನಪ್ರಿಯ ವೆಬ್ಬ್ರೌಸರ್ಗಳೆಂದರೆ ಕೊಂಕ್ಯೂರರ್, ಗೂಗಲ್ ಕ್ರೊಮ್ ಮತ್ತು ಒಪೆರ
01:12 ಈ ತರಗತಿಯಲ್ಲಿ ನಾವು Ubuntu 10.04 ಗೆ Firefox ನ ವರ್ಷನ್ 7.0 ನ್ನು ಬಳಸುತ್ತೇವೆ
01:20 Firefox ಬ್ರೌಸಿಂಗನ್ನು ಉತ್ತಮಗೊಳಿಸುವುದರ ಜೊತೆಗೆ ವೇಗ, ಗೌಪ್ಯತೆ ಮತ್ತು ಇತ್ತೀಚಿನ ತಂತ್ರಜ್ಞಾನವನ್ನೂ ಒದಗಿಸುತ್ತದೆ
01:27 ಇದು ವಿವಿಧ ಬಗೆಯ ಸ್ವರೂಪಗಳಾದ ಟ್ಯಾಬ್ಡ್ ವಿಂಡೋಸ್, ಅಂತರ್ ನಿರ್ಮಿತ ಸ್ಪೆಲ್ ಚೆಕ್, ಪಾಪಪ್ ಬ್ಲಾಕರ್, ಎಕೀಕೃತ ವೆಬ್ಸರ್ಚ್, ಫಿಶಿಂಗ್ ಸುರಕ್ಷತೆಯನ್ನು ಒಳಗೊಂಡಿದೆ.
01:39 Firefox, ಶೀಘ್ರ ವೆಬ್ಬ್ರೌಸಿಂಗ್ನ ಜೊತೆಗೆ ಗ್ರಾಫಿಕ್ಸ್ನ ಕ್ಷಿಪ್ರ ರೆಂಡರಿಂಗ್, ಮುಂದುವರಿದ ಪುಟದ ಲೋಡಿಂಗನ್ನು ಒದಗಿಸುತ್ತದೆ
01:45 ಅಲ್ಲದೆ ವಿವಿಧ ಬಗೆಯ ವಂಚಕ ತಾಣಗಳು, ಸ್ಪೈವೇರ್ ಮತ್ತು ವೈರಸ್ಗಳು, ಟ್ರೋಜನ್ ಅಥವಾ ಇತರ ಮಾಲ್ವೇರ್ ವಿರುದ್ಧ ಸುರಕ್ಷತೆ ಮತ್ತು ಗೌಪ್ಯತೆಯನ್ನು ಸಹ ಒದಗಿಸುತ್ತದೆ
01:56 ಬಳಕೆದಾರರಿಂದ ಸೃಷ್ಟಿಸಲ್ಪಟ್ಟ ಆಡ್ ಆನ್ಗಳು ಮತ್ತು ಸರಳವಾಗಿ ಇನ್ಸ್ಟಾಲ್ ಮಾಡಬಲ್ಲ ಸಾವಿರಾರು ಥೀಮ್ಸ್ಗಳನ್ನು ಗ್ರಾಹಕರ ಇಚ್ಚೆಗನುಗುಣವಾಗಿ ನೀಡುತ್ತದೆ
02:06

Firefox ಅನ್ನು ಲಿನಕ್ಸ್ ಓಎಸ್ ಅಂದರೆ ಫೆಡೋರ, ಉಬುಂಟು,ರೆಡ್ ಹ್ಯಾಟ್, ಡೆಬಿಯನ್ ಮತ್ತು ಸುಸಿ ನಲ್ಲಿ ಚಾಲನೆಗೊಳಿಸಲು ಬೇಕಾದ ಸಿಸ್ಟಂನ ಅಗತ್ಯಗಳು ಇಲ್ಲಿದೆ.

02:16 ನಿಮಗೆ Firefox ಅನ್ನು Ubuntu 10.04ನಲ್ಲಿ ಚಾಲನೆಗೊಳಿಸಲು ಮುಂದೆಕಾಣುವ ಲೈಬ್ರರೀಸ್ ಅಥವಾ ಪ್ಯಾಕೇಜಸ್ ಬೇಕಾಗುತ್ತದೆ
02:24 GTK+ 2.10 ಅಥವಾ ಹೆಚ್ಚಿನದ್ದು
02:29 GLib 2.12 ಅಥವಾ ಹೆಚ್ಚಿನದ್ದು
02:32 libstdc++ 4.3 ಅಥವಾ ಹೆಚ್ಚಿನದ್ದು
02:37 Pango 1.14 ಅಥವಾ ಹೆಚ್ಚಿನದ್ದು
02:40 X.Org 1.7 ಅಥವಾ ಹೆಚ್ಚಿನದ್ದು
02:44 ಮತ್ತು ಬೇಕಾಗಿರುವ ಹಾರ್ಡ್ವೇರ್, ಪೆಂಟಿಯಂ ೪ ಅಥವಾ ಮೇಲ್ಪಟ್ಟದ್ದು ೫೧೨ಎಮ್ಬಿ ರಾಮ್ ೨೦೦ ಎಮ್ಬಿಯಷ್ಟು ಹಾರ್ಡ್ಡ್ರೈವ್ ಜಾಗ
02:55 ಸಿಸ್ಟಂನ ಅಗತ್ಯಗಳ ಸಂಪೂರ್ಣ ಮಾಹಿತಿಗೆ ಪರದೆಯಲ್ಲಿ ತೋರಿಸಿರುವ Firefox ವೆಬ್ಸೈಟ್ಗೆ ಭೇಟಿಕೊಡಿ
03:32 ಈಗ ಪರದೆಯಲ್ಲಿ ತೋರಿಸಿರುವ mozilla.com ನ ಅಧಿಕೃತ ವೆಬ್ಸೈಟ್ಗೆ ಭೇಟಿಕೊಟ್ಟು Mozilla Firefox ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡೋಣ
03:11 ಇಲ್ಲಿ ನಾವು ಯಾವಾಗ ಬೇಕಾದರೂ Firefox ನ ಇತ್ತೀಚಿನ ಆವೃತ್ತಿಯನ್ನು ಕಂಡುಕೊಳ್ಳಬಹುದಾಗಿದೆ
03:15 ಅಥವಾ ಕೆಳಗಿನ ಹಸಿರು ಪ್ರದೇಶದ ‘All Systems and Languages” ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಹೆಚ್ಚಿನ ಆಯ್ಕೆಗಳನ್ನು ಪಡೆಯಬಹುದು
03:23 Mozilla ಸುಮಾರು ೭೦ ಭಾಷೆಗಳಲ್ಲಿ Firefox ಅನ್ನು ನೀಡುತ್ತಿದೆ ಎಂದು ಗಮನಿಸಿ.
03:28 ಇಲ್ಲಿ ನಾವು ಹಿಂದಿ ಅಥವಾ ಬಂಗಾಳಿಯಂತಹ ಸ್ಥಳೀಯ ಆವೃತ್ತಿಗಳನ್ನೂ ಡೌನ್ಲೋಡ್ ಮಾಡಬಹುದು
03:33 ನಾವು ವಿವಿಧ ಐಕಾನ್ಗಳ ಮೇಲೆ ಕ್ಲಿಕ್ ಮಾಡುವುದರಿಂದ Windows, Mac ಅಥವಾ Linux ಆಪರೇಟಿಂಗ್ ಸಿಸ್ಟಂಗಳನ್ನೂ ಸಹ ಆರಿಸಿಕೊಳ್ಳಬಹುದಾಗಿದೆ
03:42 Ubuntu Linuxನಲ್ಲಿ ಫೈಲ್ ಸೇವ್ ಮಾಡಲು ಮೊದಲು ಜಾಗವನ್ನು ಆರಿಸಿಕೊಳ್ಳಿ (ಪೂರ್ವನಿಯೋಜಿತವಾಗಿ ನಿಮ್ಮ ಹೋಮ್ ಫೋಲ್ಡರ್ನಲ್ಲಿನ ಡೌನ್ಲೋಡ್ ಡೈರೆಕ್ಟರಿಯು ಆಯ್ಕೆಯಾಗಿರುತ್ತದೆ)
03:51 ಈಗ ನೀವು ಪುಟಿದೇಳುವ ವಿಂಡೋನಲ್ಲಿ ಕಾಣಿಸುತ್ತಿರುವ “Save File” ಆಯ್ಕೆಯನ್ನು ಆರಿಸಿಕೊಂಡು “Ok” ಬಟ್ಟನ್ ಮೇಲೆ ಕ್ಲಿಕ್ ಮಾಡಬಹುದು
03:58 ಇದು Firefox ದಾಖಲೆಯನ್ನು ಹೋಮ್ ಡೈರೆಕ್ಟರಿಯ ಕೆಳಗಿನ ಡೌನ್ಲೋಡ್ಸ್ ಡೈರೆಕ್ಟರಿಯಲ್ಲಿ ರಕ್ಷಿಸುತ್ತದೆ
04:06 ಟರ್ಮಿನಲ್ ವಿಂಡೋ ತೆರೆಯಿರಿ ಮತ್ತು ನಿಮ್ಮ ಡೌನ್ಲೋಡ್ಸ್ ಡೈರೆಕ್ಟರಿಗೆ ಹೋಗಲು ಮುಂದಿನ ಆದೇಶವನ್ನು ಟೈಪ್ ಮಾಡಿ :cd ~/Downloads
04:17 ಈಗ ಎಂಟರ್ ಕೀಯನ್ನು ಒತ್ತಿ
04:19 ಡೌನ್ಲೋಡ್ ಮಾಡಿರುವ ವಿಷಯವನ್ನು ಎಕ್ಸ್ಟ್ರ್ಯಾಕ್ಟ್ ಮಾಡಲು ಮುಂದಿನ ಆದೇಶವನ್ನು ಟೈಪ್ ಮಾಡಿ :tar xjf firefox-7.0.1.tar.bz2
04:35 ಈಗ ಎಂಟರ್ ಕೀಯನ್ನು ಒತ್ತಿ
04:38 ಇದು Firefox 7.0ಅನ್ನು ಚಾಲನೆಗೊಳಿಸಲು ಬೇಕಾದ ಫೈಲ್ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಲು ಪ್ರಾರಂಭಿಸುತ್ತದೆ
04:44 ಟರ್ಮಿನಲ್ ವಿಂಡೋನಲ್ಲಿ cd firefox ಆದೇಶವನ್ನು ಟೈಪ್ ಮಾಡುವ ಮೂಲಕ Firefox directory ಹೋಗಿ
04:52 ಈಗ ಎಂಟರ್ ಕೀಯನ್ನು ಒತ್ತಿ
04:54 ಇದು ನಿಮ್ಮನ್ನು Firefox directory ಕೊಂಡೊಯ್ಯುತ್ತದೆ
04:58 Firefox ಬ್ರೌಸರನ್ನು ಆರಂಭ ಮಾಡಲು ಆದೇಶ /firefox ಅಂತ ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ
05:06 ಪ್ರಸ್ತುತ ಡೈರೆಕ್ಟರಿ ನಿಮ್ಮ ಹೋಮ್ ಡೈರೆಕ್ಟರಿ ಆಗಿಲ್ಲದಿದ್ದ ಪಕ್ಷದಲ್ಲಿ ಬದಲಿಯಾಗಿ ನೀವು ಮುಂದೆಕಾಣಿಸುವ ಆದೇಶವನ್ನು ಬಳಸಿ Firefox ನ್ನು ಆರಂಭಿಸಿ
05:15 Downloads/firefox/firefox ವರೆಗೂ
05:21

ಪೂರ್ವನಿಯೋಜಿತವಾಗಿ ಹೋಮ್ಪೇಜನ್ನು ಹೇಗೆ ಸ್ಥಾಪಿಸುವುದು ಎಂದು ನಾವು ಆಮೇಲೆ ನೋಡುತ್ತೇವೆ

05:25 ಈಗ ಸಧ್ಯಕ್ಕೆ ಉದಾಹರಣೆಗಾಗಿ ನಾವು ಇತ್ತೀಚಿನ ವಿಷಯ ಮತ್ತು ಮಾಹಿತಿಗಳನ್ನು ಒಳಗೊಂಡಿರುವಂತ Rediff.com ವೆಬ್ಸೈಟ್ ಗೆ ಹೋಗೊಣ
05:33 www.rediff.com <http://www.rediff.com> ಅಂತ ಮೆನುಬಾರ್ನ ಕೆಳಗಿನ ಅಡ್ರೆಸ್ಬಾರ್ನಲ್ಲಿ ಟೈಪ್ ಮಾಡಿ
05:40 Rediff.com ವೆಬ್ಸೈಟ್ ಹೋಂಪೇಜ್ನ ವಿಷಯ ತೋರಿಸಲ್ಪಟ್ಟಿದೆ
05:47 ಈಗ, ಈ ಪುಟದಿಂದ ನಾವು ವಿವಿಧ ಲಿಂಕ್ಸ್ಗಳಿಗೆ ಸಂಚರಿಸಿ ಅಲ್ಲಿನ ಪುಟಗಳ ವಿಷಯವನ್ನು ನೋಡಬಹುದು
05:53 ಈಗ ಮೊದಲು ಹೆಡ್ಲೈನ್ಸ್ ಟ್ಯಾಬ್ನ ಕೆಳಗಿರುವ ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡೋಣ
05:58 ಹೀಗೆ ನಾವು Firefox ಅನ್ನು ಬಳಸಿಕೊಂಡು ವೆಬ್ಸೈಟ್ಗಳಿಗೆ ಭೇಟಿಕೊಟ್ಟು ನಂತರ ಅಲ್ಲಿಂದ ಇತರ ಪುಟಗಳಲ್ಲಿ ಸಂಚರಿಸಿಬಹುದು
06:05 ಮುಂದಿನ ತರಗತಿಗಳಲ್ಲಿ ನಾವು Firefox interface ಮತ್ತು ಇತರ ಹಲವು ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ಕಲಿಯುತ್ತೇವೆ
06:12 <http://spoken-tutorial.org/What_is_a_Spoken_Tutorial> ನಲ್ಲಿ ಲಭ್ಯವಿರುವ ವೀಡಿಯೊ ನೋಡಿ
06:16 ಇದು ವಾಕ್ ಬೋಧನಾ ಯೋಜನೆಯನ್ನು ಕ್ರೂಢೀಕರಿಸುತ್ತದೆ
06:19 ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು
06:24 ವಾಕ್ ಭೋದನಾ ಯೋಜನಾ ತಂಡ ವಾಕ್ ಭೋದನೆಯ ಮೂಲಕ ವರ್ಕ್ಶಾಪ್ಗಳನ್ನು ಆಯೋಜಿಸುತ್ತದೆ
06:29 ಆನ್ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ
06:33 ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ contact@spoken-tutorial.org
06:39 ಈ ವಾಕ್ ಭೊದನಾ ಯೋಜನೆ ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ನ ಒಂದು ಭಾಗವಾಗಿದೆ
06:44 ಈ ಶಿಕ್ಷಣದ ಮೇಲಿನ ರಾಷ್ಟ್ರೀಯ ಯೋಜನೆ ಭಾರತ ಸರ್ಕಾರದ ಐಸಿಟಿ, ಎಮ್ಹೆಚ್ಆರ್ಡಿ ಮುಖಾಂತರ ಉತ್ತೇಜಿಸಲ್ಪಟ್ಟಿದೆ.
06:51 ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯವಿದೆ <http://spoken-tutorial.org/NMEICT-Intro>
07:02 ಈ ತರಗತಿ ದೇಸಿಕ್ರ್ಯೂ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ನಿಂದ ನೀಡಲ್ಪಟ್ಟಿದೆ
07:08 ಸೇರಿದಕ್ಕೆ ಧನ್ಯವಾದಗಳು.

Contributors and Content Editors

PoojaMoolya, Pratik kamble, Udaya, Vasudeva ahitanal