Firefox/C2/Introduction/Kannada
From Script | Spoken-Tutorial
Time | Narration |
00:00 | Mozilla Firefox ನ ಪರಿಚಯದ ವಾಕ್ ಭೋದನಾ ತರಗತಿಗೆ ಸ್ವಾಗತ |
00:05 | ಈ ಭೋದನಾ ತರಗತಿಗಯಲ್ಲಿ ಕೆಳಕಂಡ ವಿಷಯಗಳು ಒಳಗೊಂಡಿರುತ್ತದೆ. |
00:10 | Mozilla Firefox ಎಂದರೇನು ? |
00:12 | Firefox ಏಕೆ ? |
00:14 | ಆವೃತ್ತಿಗಳು, ವ್ಯವಸ್ಥೆಯ ಅವಶ್ಯಕತೆಗಳು,ಡೌನ್ಲೋಡ್ ಮತ್ತು Firefox ಇನ್ಸ್ಟಾಲೇಶನ್, ವೆಬ್ಸೈಟ್ಗೆ ಭೇಟಿ |
00:21 | Mozilla Firefox ಅಥವಾ Firefox ಉಚಿತ ಮತ್ತು ಮುಕ್ತವಾಗಿ ದೊರಕುವ ವೆಬ್ ಬ್ರೌಸರ್ ಆಗಿದೆ. |
00:27 | ಇದು ಉಬುಂಟು ಲಿನಕ್ಸ್ಗೆ ಪೂರ್ವನಿಯೋಜಿತವಾದ ವೆಬ್ಬ್ರೌಸರ್ ಆಗಿದ್ದು ವಿಂಡೋನಂತೆ ಕಾರ್ಯನಿರ್ವಹಿಸುತ್ತದೆ |
00:33 | ಇದು ಇಂಟರ್ನೆಟ್ನ ವೆಬ್ ಹಾಳೆಗಳನ್ನು ನೋಡಲು ಮತ್ತು ವೆಬ್ಹಾಳೆಗಳ ಮೂಲಕ ಸಂಚರಿಸಿಲು
ಸಹಕರಿಸುತ್ತದೆ. |
00:39 | ಇಷ್ಟೇ ಅಲ್ಲದೆ ಗೂಗಲ್,ಯಾಹೂ ಸರ್ಚ್, ಬಿಂಗ್ ಮುಂತಾದ ಸರ್ಚ್ ಎಂಜಿನ್ಗಳ ಮೂಲಕ ವೆಬ್ ಹಾಳೆಗಳನ್ನು ಸಹ ಹುಡುಕುತ್ತದೆ |
00:47 | Firefox ಲಾಭೋದ್ದೇಶತಿತ ಸಂಸ್ಥೆ Mozilla Foundation ನ ಸ್ವಯಂಸೇವಕ ತಂತ್ರಾಂಶಕಾರರಿಂದ ಅಭಿವೃದ್ಧಿಸಲ್ಪಟ್ಟಿದೆ |
00:54 | Mozilla ದ ಸಂಪೂರ್ಣ ಮಾಹಿತಿಗೆ mozilla.org ಅನ್ನು ಸಂಪರ್ಕಿಸಿ |
00:59 | Firefox ವಿಂಡೋಸ್,ಮ್ಯಾಕ್ ಓಎಸ್ಎಕ್ಸ್ ಮತ್ತು ಲಿನಕ್ಸ್ ಆಪರೇಟಿಂಗ್ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತದೆ |
01:05 | ಉಬುಂಟುವಿನ ಬೇರೆ ಜನಪ್ರಿಯ ವೆಬ್ಬ್ರೌಸರ್ಗಳೆಂದರೆ ಕೊಂಕ್ಯೂರರ್, ಗೂಗಲ್ ಕ್ರೊಮ್ ಮತ್ತು ಒಪೆರ |
01:12 | ಈ ತರಗತಿಯಲ್ಲಿ ನಾವು Ubuntu 10.04 ಗೆ Firefox ನ ವರ್ಷನ್ 7.0 ನ್ನು ಬಳಸುತ್ತೇವೆ |
01:20 | Firefox ಬ್ರೌಸಿಂಗನ್ನು ಉತ್ತಮಗೊಳಿಸುವುದರ ಜೊತೆಗೆ ವೇಗ, ಗೌಪ್ಯತೆ ಮತ್ತು ಇತ್ತೀಚಿನ ತಂತ್ರಜ್ಞಾನವನ್ನೂ ಒದಗಿಸುತ್ತದೆ |
01:27 | ಇದು ವಿವಿಧ ಬಗೆಯ ಸ್ವರೂಪಗಳಾದ ಟ್ಯಾಬ್ಡ್ ವಿಂಡೋಸ್, ಅಂತರ್ ನಿರ್ಮಿತ ಸ್ಪೆಲ್ ಚೆಕ್, ಪಾಪಪ್ ಬ್ಲಾಕರ್, ಎಕೀಕೃತ ವೆಬ್ಸರ್ಚ್, ಫಿಶಿಂಗ್ ಸುರಕ್ಷತೆಯನ್ನು ಒಳಗೊಂಡಿದೆ. |
01:39 | Firefox, ಶೀಘ್ರ ವೆಬ್ಬ್ರೌಸಿಂಗ್ನ ಜೊತೆಗೆ ಗ್ರಾಫಿಕ್ಸ್ನ ಕ್ಷಿಪ್ರ ರೆಂಡರಿಂಗ್, ಮುಂದುವರಿದ ಪುಟದ ಲೋಡಿಂಗನ್ನು ಒದಗಿಸುತ್ತದೆ |
01:45 | ಅಲ್ಲದೆ ವಿವಿಧ ಬಗೆಯ ವಂಚಕ ತಾಣಗಳು, ಸ್ಪೈವೇರ್ ಮತ್ತು ವೈರಸ್ಗಳು, ಟ್ರೋಜನ್ ಅಥವಾ ಇತರ ಮಾಲ್ವೇರ್ ವಿರುದ್ಧ ಸುರಕ್ಷತೆ ಮತ್ತು ಗೌಪ್ಯತೆಯನ್ನು ಸಹ ಒದಗಿಸುತ್ತದೆ |
01:56 | ಬಳಕೆದಾರರಿಂದ ಸೃಷ್ಟಿಸಲ್ಪಟ್ಟ ಆಡ್ ಆನ್ಗಳು ಮತ್ತು ಸರಳವಾಗಿ ಇನ್ಸ್ಟಾಲ್ ಮಾಡಬಲ್ಲ ಸಾವಿರಾರು ಥೀಮ್ಸ್ಗಳನ್ನು ಗ್ರಾಹಕರ ಇಚ್ಚೆಗನುಗುಣವಾಗಿ ನೀಡುತ್ತದೆ |
02:06 |
Firefox ಅನ್ನು ಲಿನಕ್ಸ್ ಓಎಸ್ ಅಂದರೆ ಫೆಡೋರ, ಉಬುಂಟು,ರೆಡ್ ಹ್ಯಾಟ್, ಡೆಬಿಯನ್ ಮತ್ತು ಸುಸಿ ನಲ್ಲಿ ಚಾಲನೆಗೊಳಿಸಲು ಬೇಕಾದ ಸಿಸ್ಟಂನ ಅಗತ್ಯಗಳು ಇಲ್ಲಿದೆ. |
02:16 | ನಿಮಗೆ Firefox ಅನ್ನು Ubuntu 10.04ನಲ್ಲಿ ಚಾಲನೆಗೊಳಿಸಲು ಮುಂದೆಕಾಣುವ ಲೈಬ್ರರೀಸ್ ಅಥವಾ ಪ್ಯಾಕೇಜಸ್ ಬೇಕಾಗುತ್ತದೆ |
02:24 | GTK+ 2.10 ಅಥವಾ ಹೆಚ್ಚಿನದ್ದು |
02:29 | GLib 2.12 ಅಥವಾ ಹೆಚ್ಚಿನದ್ದು |
02:32 | libstdc++ 4.3 ಅಥವಾ ಹೆಚ್ಚಿನದ್ದು |
02:37 | Pango 1.14 ಅಥವಾ ಹೆಚ್ಚಿನದ್ದು |
02:40 | X.Org 1.7 ಅಥವಾ ಹೆಚ್ಚಿನದ್ದು |
02:44 | ಮತ್ತು ಬೇಕಾಗಿರುವ ಹಾರ್ಡ್ವೇರ್, ಪೆಂಟಿಯಂ ೪ ಅಥವಾ ಮೇಲ್ಪಟ್ಟದ್ದು ೫೧೨ಎಮ್ಬಿ ರಾಮ್ ೨೦೦ ಎಮ್ಬಿಯಷ್ಟು ಹಾರ್ಡ್ಡ್ರೈವ್ ಜಾಗ |
02:55 | ಸಿಸ್ಟಂನ ಅಗತ್ಯಗಳ ಸಂಪೂರ್ಣ ಮಾಹಿತಿಗೆ ಪರದೆಯಲ್ಲಿ ತೋರಿಸಿರುವ Firefox ವೆಬ್ಸೈಟ್ಗೆ ಭೇಟಿಕೊಡಿ |
03:32 | ಈಗ ಪರದೆಯಲ್ಲಿ ತೋರಿಸಿರುವ mozilla.com ನ ಅಧಿಕೃತ ವೆಬ್ಸೈಟ್ಗೆ ಭೇಟಿಕೊಟ್ಟು Mozilla Firefox ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡೋಣ |
03:11 | ಇಲ್ಲಿ ನಾವು ಯಾವಾಗ ಬೇಕಾದರೂ Firefox ನ ಇತ್ತೀಚಿನ ಆವೃತ್ತಿಯನ್ನು ಕಂಡುಕೊಳ್ಳಬಹುದಾಗಿದೆ |
03:15 | ಅಥವಾ ಕೆಳಗಿನ ಹಸಿರು ಪ್ರದೇಶದ ‘All Systems and Languages” ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಹೆಚ್ಚಿನ ಆಯ್ಕೆಗಳನ್ನು ಪಡೆಯಬಹುದು |
03:23 | Mozilla ಸುಮಾರು ೭೦ ಭಾಷೆಗಳಲ್ಲಿ Firefox ಅನ್ನು ನೀಡುತ್ತಿದೆ ಎಂದು ಗಮನಿಸಿ. |
03:28 | ಇಲ್ಲಿ ನಾವು ಹಿಂದಿ ಅಥವಾ ಬಂಗಾಳಿಯಂತಹ ಸ್ಥಳೀಯ ಆವೃತ್ತಿಗಳನ್ನೂ ಡೌನ್ಲೋಡ್ ಮಾಡಬಹುದು |
03:33 | ನಾವು ವಿವಿಧ ಐಕಾನ್ಗಳ ಮೇಲೆ ಕ್ಲಿಕ್ ಮಾಡುವುದರಿಂದ Windows, Mac ಅಥವಾ Linux ಆಪರೇಟಿಂಗ್ ಸಿಸ್ಟಂಗಳನ್ನೂ ಸಹ ಆರಿಸಿಕೊಳ್ಳಬಹುದಾಗಿದೆ |
03:42 | Ubuntu Linuxನಲ್ಲಿ ಫೈಲ್ ಸೇವ್ ಮಾಡಲು ಮೊದಲು ಜಾಗವನ್ನು ಆರಿಸಿಕೊಳ್ಳಿ (ಪೂರ್ವನಿಯೋಜಿತವಾಗಿ ನಿಮ್ಮ ಹೋಮ್ ಫೋಲ್ಡರ್ನಲ್ಲಿನ ಡೌನ್ಲೋಡ್ ಡೈರೆಕ್ಟರಿಯು ಆಯ್ಕೆಯಾಗಿರುತ್ತದೆ) |
03:51 | ಈಗ ನೀವು ಪುಟಿದೇಳುವ ವಿಂಡೋನಲ್ಲಿ ಕಾಣಿಸುತ್ತಿರುವ “Save File” ಆಯ್ಕೆಯನ್ನು ಆರಿಸಿಕೊಂಡು “Ok” ಬಟ್ಟನ್ ಮೇಲೆ ಕ್ಲಿಕ್ ಮಾಡಬಹುದು |
03:58 | ಇದು Firefox ದಾಖಲೆಯನ್ನು ಹೋಮ್ ಡೈರೆಕ್ಟರಿಯ ಕೆಳಗಿನ ಡೌನ್ಲೋಡ್ಸ್ ಡೈರೆಕ್ಟರಿಯಲ್ಲಿ ರಕ್ಷಿಸುತ್ತದೆ |
04:06 | ಟರ್ಮಿನಲ್ ವಿಂಡೋ ತೆರೆಯಿರಿ ಮತ್ತು ನಿಮ್ಮ ಡೌನ್ಲೋಡ್ಸ್ ಡೈರೆಕ್ಟರಿಗೆ ಹೋಗಲು ಮುಂದಿನ ಆದೇಶವನ್ನು ಟೈಪ್ ಮಾಡಿ :cd ~/Downloads |
04:17 | ಈಗ ಎಂಟರ್ ಕೀಯನ್ನು ಒತ್ತಿ |
04:19 | ಡೌನ್ಲೋಡ್ ಮಾಡಿರುವ ವಿಷಯವನ್ನು ಎಕ್ಸ್ಟ್ರ್ಯಾಕ್ಟ್ ಮಾಡಲು ಮುಂದಿನ ಆದೇಶವನ್ನು ಟೈಪ್ ಮಾಡಿ :tar xjf firefox-7.0.1.tar.bz2 |
04:35 | ಈಗ ಎಂಟರ್ ಕೀಯನ್ನು ಒತ್ತಿ |
04:38 | ಇದು Firefox 7.0ಅನ್ನು ಚಾಲನೆಗೊಳಿಸಲು ಬೇಕಾದ ಫೈಲ್ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಲು ಪ್ರಾರಂಭಿಸುತ್ತದೆ |
04:44 | ಟರ್ಮಿನಲ್ ವಿಂಡೋನಲ್ಲಿ cd firefox ಆದೇಶವನ್ನು ಟೈಪ್ ಮಾಡುವ ಮೂಲಕ Firefox directory ಹೋಗಿ |
04:52 | ಈಗ ಎಂಟರ್ ಕೀಯನ್ನು ಒತ್ತಿ |
04:54 | ಇದು ನಿಮ್ಮನ್ನು Firefox directory ಕೊಂಡೊಯ್ಯುತ್ತದೆ |
04:58 | Firefox ಬ್ರೌಸರನ್ನು ಆರಂಭ ಮಾಡಲು ಆದೇಶ /firefox ಅಂತ ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ |
05:06 | ಪ್ರಸ್ತುತ ಡೈರೆಕ್ಟರಿ ನಿಮ್ಮ ಹೋಮ್ ಡೈರೆಕ್ಟರಿ ಆಗಿಲ್ಲದಿದ್ದ ಪಕ್ಷದಲ್ಲಿ ಬದಲಿಯಾಗಿ ನೀವು ಮುಂದೆಕಾಣಿಸುವ ಆದೇಶವನ್ನು ಬಳಸಿ Firefox ನ್ನು ಆರಂಭಿಸಿ |
05:15 | Downloads/firefox/firefox ವರೆಗೂ |
05:21 |
ಪೂರ್ವನಿಯೋಜಿತವಾಗಿ ಹೋಮ್ಪೇಜನ್ನು ಹೇಗೆ ಸ್ಥಾಪಿಸುವುದು ಎಂದು ನಾವು ಆಮೇಲೆ ನೋಡುತ್ತೇವೆ |
05:25 | ಈಗ ಸಧ್ಯಕ್ಕೆ ಉದಾಹರಣೆಗಾಗಿ ನಾವು ಇತ್ತೀಚಿನ ವಿಷಯ ಮತ್ತು ಮಾಹಿತಿಗಳನ್ನು ಒಳಗೊಂಡಿರುವಂತ Rediff.com ವೆಬ್ಸೈಟ್ ಗೆ ಹೋಗೊಣ |
05:33 | www.rediff.com <http://www.rediff.com> ಅಂತ ಮೆನುಬಾರ್ನ ಕೆಳಗಿನ ಅಡ್ರೆಸ್ಬಾರ್ನಲ್ಲಿ ಟೈಪ್ ಮಾಡಿ |
05:40 | Rediff.com ವೆಬ್ಸೈಟ್ ಹೋಂಪೇಜ್ನ ವಿಷಯ ತೋರಿಸಲ್ಪಟ್ಟಿದೆ |
05:47 | ಈಗ, ಈ ಪುಟದಿಂದ ನಾವು ವಿವಿಧ ಲಿಂಕ್ಸ್ಗಳಿಗೆ ಸಂಚರಿಸಿ ಅಲ್ಲಿನ ಪುಟಗಳ ವಿಷಯವನ್ನು ನೋಡಬಹುದು |
05:53 | ಈಗ ಮೊದಲು ಹೆಡ್ಲೈನ್ಸ್ ಟ್ಯಾಬ್ನ ಕೆಳಗಿರುವ ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡೋಣ |
05:58 | ಹೀಗೆ ನಾವು Firefox ಅನ್ನು ಬಳಸಿಕೊಂಡು ವೆಬ್ಸೈಟ್ಗಳಿಗೆ ಭೇಟಿಕೊಟ್ಟು ನಂತರ ಅಲ್ಲಿಂದ ಇತರ ಪುಟಗಳಲ್ಲಿ ಸಂಚರಿಸಿಬಹುದು |
06:05 | ಮುಂದಿನ ತರಗತಿಗಳಲ್ಲಿ ನಾವು Firefox interface ಮತ್ತು ಇತರ ಹಲವು ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ಕಲಿಯುತ್ತೇವೆ |
06:12 | <http://spoken-tutorial.org/What_is_a_Spoken_Tutorial> ನಲ್ಲಿ ಲಭ್ಯವಿರುವ ವೀಡಿಯೊ ನೋಡಿ |
06:16 | ಇದು ವಾಕ್ ಬೋಧನಾ ಯೋಜನೆಯನ್ನು ಕ್ರೂಢೀಕರಿಸುತ್ತದೆ |
06:19 | ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು |
06:24 | ವಾಕ್ ಭೋದನಾ ಯೋಜನಾ ತಂಡ ವಾಕ್ ಭೋದನೆಯ ಮೂಲಕ ವರ್ಕ್ಶಾಪ್ಗಳನ್ನು ಆಯೋಜಿಸುತ್ತದೆ |
06:29 | ಆನ್ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ |
06:33 | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ contact@spoken-tutorial.org |
06:39 | ಈ ವಾಕ್ ಭೊದನಾ ಯೋಜನೆ ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ನ ಒಂದು ಭಾಗವಾಗಿದೆ |
06:44 | ಈ ಶಿಕ್ಷಣದ ಮೇಲಿನ ರಾಷ್ಟ್ರೀಯ ಯೋಜನೆ ಭಾರತ ಸರ್ಕಾರದ ಐಸಿಟಿ, ಎಮ್ಹೆಚ್ಆರ್ಡಿ ಮುಖಾಂತರ ಉತ್ತೇಜಿಸಲ್ಪಟ್ಟಿದೆ. |
06:51 | ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯವಿದೆ <http://spoken-tutorial.org/NMEICT-Intro> |
07:02 | ಈ ತರಗತಿ ದೇಸಿಕ್ರ್ಯೂ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ನಿಂದ ನೀಡಲ್ಪಟ್ಟಿದೆ |
07:08 | ಸೇರಿದಕ್ಕೆ ಧನ್ಯವಾದಗಳು. |