Java/C2/Arithmetic-Operations/Kannada

From Script | Spoken-Tutorial
Revision as of 18:20, 22 February 2017 by Pratik kamble (Talk | contribs)

Jump to: navigation, search
Time Narration
00:01 ಜಾವಾದಲ್ಲಿನ ಅಂಕಗಣಿತೀಯ ಪ್ರಕ್ರಿಯೆ ಗಳ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ, ನೀವು ವಿವಿಧ ಅಂಕಗಣಿತದ ಪ್ರಕ್ರಿಯೆಗಳನ್ನು ಕಲಿಯಲಿದ್ದೀರಿ. ಅವು –

ಕೂಡಿಸುವುದು ಕಳೆಯುವುದು ಗುಣಾಕಾರ ಭಾಗಾಕಾರ ಮತ್ತು ಇವನ್ನು ಹೇಗೆ ಉಪಯೋಗಿಸುವುದು?

00:16 ಈ ಟ್ಯುಟೋರಿಯಲ್ ನಲ್ಲಿ ನಾವು

ಉಬುಂಟು 11.10 (ಹನ್ನೊಂದು ಬಿಂದು ಹತ್ತು), ಜೆಡಿಕೆ 1.6 (ಒಂದು ಬಿಂದು ಆರು) ಮತ್ತು ಎಕ್ಲಿಪ್ಸ್ 3.7 (ಮೂರು ಬಿಂದು ಏಳು) ಅನ್ನು ಉಪಯೋಗಿಸುತ್ತಿದ್ದೇವೆ.

00:24 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನಿಮ್ಮ ಸಿಸ್ಟಮ್ ನಲ್ಲಿ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಿರಬೇಕು.
00:28 ಮತ್ತು ನೀವು ಎಕ್ಲಿಪ್ಸ್ ನಲ್ಲಿ ಫೈಲನ್ನು ಕ್ರಿಯೇಟ್ ಮಾಡಿ, ಸೇವ್ ಮತ್ತು ರನ್ ಮಾಡುವುದನ್ನು ತಿಳಿದಿರಬೇಕು.
00:32 ತಿಳಿಯದಿದ್ದಲ್ಲಿ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ.
00:42 ಇಲ್ಲಿ ಆಪರೇಟರ್ ಗಳ ಮತ್ತು ಅವುಗಳು ಮಾಡುವ ಗಣಿತದ ಆಪರೇಷನ್ ಗಳ ಪಟ್ಟಿ ಕೊಟ್ಟಿದೆ.

ಕೂಡಿಸುವುದಕ್ಕಾಗಿ ಪ್ಲಸ್ ಚಿಹ್ನೆ ಕಳೆಯಲು ಮೈನಸ್ ಗುಣಿಸಲು ಆಸ್ಟೆರಿಕ್ ಮತ್ತು ಭಾಗಿಸಲು ಸ್ಲ್ಯಾಶ್ ಚಿಹ್ನೆ

00:54 ಪ್ರತಿಯೊಂದನ್ನು ಸವಿಸ್ತಾರವಾಗಿ ನೋಡೋಣ
01:05 ಇಲ್ಲಿ ಎಕ್ಲಿಪ್ಸ್ ಐಡಿಇ ಮತ್ತು ಉಳಿದ ಸಂಕೇತಗಳಿಗೆ ಬೇಕಾದ ಸ್ಕೆಲಿಟನ್ ಅನ್ನು ಹೊಂದಿದ್ದೇವೆ.
01:10 ನಾವು ”’ಅರಿತ್ಮೆಟಿಕ್ ಆಪರೇಷನ್”’ನ ಹೆಸರಿನ ಪಾಠವನ್ನು ತಯಾರಿಸಿದ್ದೇವೆ, ಮತ್ತು ”’ಮೈನ್”’ ವಿಧಾನವನ್ನು ಸೇರಿಸಿದ್ದೇವೆ.
01:17 ಕೆಲವು ವೇರಿಯೇಬಲ್ಸ್ ಅನ್ನು ಸೇರಿಸೋಣ.
01:22 (ಇಂಟ್) int x = 5; (ಎಕ್ಸ್ ಸಮ ಐದು )
01:26 (ಇಂಟ್) int y = 10; (ವೈ ಸಮ ಹತ್ತು) ,

(ಇಂಟ್)int result; (ರಿಸಿಲ್ಟ್)

01:35 x ಮತ್ತು y ಅಪರೆಂಡ್ಸ್ ಗಳು ಮತ್ತು result ಎಂಬುದು ಕ್ರಿಯೆಯ ಔಟ್ ಪುಟ್ ಅನ್ನು ಸಂಗ್ರಹಿಸುತ್ತದೆ.
01:41 ಅವನ್ನು ಕೂಡಿಸಿ ಫಲಿತಾಂಶವನ್ನು ಪ್ರಿಂಟ್ ಮಾಡೋಣ. (ರಿಸಲ್ಟ್)Result= x+y; (ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ ಎಲ್ಎನ್ ಆವರಣದಲ್ಲಿ ರಿಸಲ್ಟ್ ) system. out. println ''in parantesis result
02:10 ಸೇವ್ ಮಾಡಲು “Ctrl s” ಮತ್ತು ರನ್ ಮಾಡಲು “Ctrl F11”ನ್ನು ಒತ್ತಿ.
02:17 ಕೂಡಿದುದರ ಔಟ್ ಪುಟ್ ರಿಸಲ್ಟ್ ನಲ್ಲಿ ಸಂಗ್ರಹಗೊಂಡು ಅದರ ಮೌಲ್ಯ ಪ್ರಿಂಟ್ ಆಗಿರುವುದನ್ನು ನಾವು ನೋಡುತ್ತಿದ್ದೇವೆ.
02:24 ನಾವೀಗ ಮೌಲ್ಯಗಳನ್ನು ಬದಲಿಸೋಣ. x=75(ಎಕ್ಸ್ ಸಮ ಎಪ್ಪತ್ತೈದು),y = 15 (ವೈ ಸಮ ಹದಿನೈದು)
02:37 ಸೇವ್ ಮಾಡಿ, ರನ್ ಮಾಡಿ
02:42 ಮೌಲ್ಯಕ್ಕೆ ತಕ್ಕಹಾಗೆ ಔಟ್ ಪುಟ್ ಬದಲಾಗಿರುವುದನ್ನು ನೋಡುತ್ತಿದ್ದೇವೆ.
02:48 ನಾವೀಗ ಋಣಾತ್ಮಕ ಮೌಲ್ಯದೊಂದಿಗೆ ಪ್ರಯತ್ನಿಸೋಣ. 'y = -25. (ವೈ ಸಮ ಮೈನಸ್ ಇಪ್ಪತ್ತೈದು)
02:57 ಸೇವ್, ರನ್
03:02 75 (ಎಪ್ಪತ್ತೈದು ) ಕೂಡಿಸು -25(ಮೈನಸ್ ಇಪ್ಪತ್ತೈದ) ರ ಔಟ್ ಪುಟ್ ಬದಲಾಗಿ ಪ್ರಿಂಟ್ ಆಗಿರುವುದನ್ನು ನೋಡುತ್ತೇವೆ
03:10 ನಾವೀಗ ಕಳೆಯುವುದನ್ನು ಪ್ರಯತ್ನಿಸೋಣ. ”’y=5 (ವೈ ಸಮ ಐದು) ಮತ್ತು x+y (ಎಕ್ಸ್ ಕೂಡಿಸು ವೈ) ಅನ್ನು x-y (ಎಕ್ಸ್ ಕಳೆ ವೈ) ಗೆ ಬದಲಿಸಿ
03:25 ಸೇವ್ ಮಾಡಿ, ರನ್ ಮಾಡಿ
03:32 75-5(ಎಪ್ಪತ್ತೈದು ಕಳೆ ಐದ) ರ ಔಟ್ ಪುಟ್ ಪ್ರಿಂಟ್ ಆಗಿರುವುದನ್ನು ನೋಡುತ್ತೇವೆ.
03:38 ಈಗ ಗುಣಾಕಾರವನ್ನು ಪ್ರಯತ್ನಿಸೋಣ, ಮೈನಸ್ಅನ್ನು ಆಸ್ಟೆರಿಕ್ಗೆ ಬದಲಿಸಿ
03:46 ”’ಸೇವ್”’ ಮತ್ತು ”’ರನ್”’
03:52 ಆಸ್ಟೆರಿಕ್ ಚಿಹ್ನೆಯನ್ನುಉಪಯೋಗಿಸಿ 75(ಎಪ್ಪತ್ತೈದ) ನ್ನು 5 (ಐದ) ರಿಂದ ಗುಣಿಸುವುದನ್ನು ನೋಡುತ್ತೇವೆ.
03:58 ಈಗ ಭಾಗಾಕಾರವನ್ನು ಪ್ರಯತ್ನಿಸೋಣ, ಆಸ್ಟೆರಿಕ್ ಅನ್ನು ತೆಗೆದು ಸ್ಲ್ಯಾಶ್ ಅನ್ನು ಟೈಪ್ ಮಾಡಿ
04:07 ಸೇವ್ ಮಾಡಿ, ರನ್ ಮಾಡಿ
04:13 ನಿರೀಕ್ಷಿಸಿದಂತೆ ಔಟ್ ಪುಟ್ಅನ್ನು ನೋಡುತ್ತೇವೆ.
04:18 ನಾವೀಗ ನಿರೀಕ್ಷಿಸಿದ ಫಲಿತಾಂಶವು ದಶಮಾಂಶ ಸಂಖ್ಯೆಯಾಗಿದ್ದರೆ ಏನಾಗುತ್ತದೆಂದು ನೋಡೋಣ.
04:24 5 (ಐದ)ನ್ನು 10(ಹತ್ತ) ಕ್ಕೆ ಬದಲಿಸಿ
04:28 ಫಲಿತಾಂಶವು 7.5 (ಏಳು ಬಿಂದು ಐದು) ಆಗಿರಬೇಕು.
04:30 ಹಾಗಾಗಿ result (ರಿಸಲ್ಟ್) ಅನ್ನು float (ಪ್ಲೋಟ್) ಗೆ ಬದಲಾಯಿಸೋಣ.
04:43 ಸೇವ್ ಮಾಡಿ ರನ್ ಮಾಡಿ
04:50 ನಿರೀಕ್ಷಿಸಿದ ಫಲಿತಾಂಶವು 7.5 (ಏಳು ಬಿಂದು ಐದು )ಆದರೂ, ಔಟ್ ಪುಟ್ 7.0 (ಏಳು ಬಿಂದು ಸೊನ್ನೆ) ಯನ್ನು ಪಡೆದಿರುವುದನ್ನು ಗಮನಿಸಿ
04:57 ಇದು ಏಕೆಂದರೆ ಭಾಗಾಕಾರದಲ್ಲಿ ಸೇರಿರುವ ಎರಡೂ ಅಪರೆಂಡ್ಸಗಳು ಪೂರ್ಣಾಂಕಗಳು
05:01 y (ವೈ) ನ್ನು float (ಪ್ಲೋಟ್) ಗೆ ಬದಲಿಸೋಣ. y=10f (ವೈ ಸಮ ಹತ್ತು ಎಫ್)
05:15 ”ಸೇವ್” “ರನ್”.
05:21 ನಾವೀಗ ನಿರೀಕ್ಷಿಸಿದ ಫಲಿತಾಂಶವನ್ನು ನೋಡಬಹುದು.
05:24 ನೆನಪಿನಲ್ಲಿಡಬೇಕಾದುದು ಏನೆಂದರೆ, ನಿರೀಕ್ಷಿಸಿದ ಫಲಿತಾಂಶವು float (ಪ್ಲೋಟ್) ಆಗಿದ್ದಲ್ಲಿ, ನಿರೀಕ್ಷಿಸಿದ ಔಟ್ ಪುಟ್ ಪಡೆಯಲು ಅಪರೆಂಡ್ಸ್ ಗಳಲ್ಲಿ ಒಂದು float (ಪ್ಲೋಟ್) ಆಗಿರಲೇಬೇಕು.
05:32 ಒಂದಕ್ಕಿಂತ ಹೆಚ್ಚು ಆಪರೇಟರ್ ಗಳಿದ್ದರೆ ಏನಾಗುತ್ತದೆಂದು ನೋಡೋಣ. ಎಲ್ಲಾ ಅಪರೆಂಡ್ಸ್ ಗಳನ್ನುತೆಗೆಯಿರಿ.
05:48 (ಇಂಟ್ ರಿಸಲ್ಟ್) int result 8+4-2.( ಎಂಟು ಕೂಡಿಸು ನಾಲ್ಕು ಕಳೆ ಎರಡು). ಇದನ್ನು ಸೇವ್ ಮಾಡಿ ರನ್ ಮಾಡಿ.
06:09 ನಿರೀಕ್ಷಿಸಿದ ಔಟ್ ಪುಟ್ ಬಂದಿರುವುದನ್ನು ನೋಡುತ್ತೇವೆ.
06:12 ಈಗ “’ಮೈನಸ್”’ ಅನ್ನು “’ಸ್ಲ್ಯಾಶ್”’ ಗೆ ಬದಲಿಸಿ
06:19 ಈಗ ಭಾಗಿಸುವದಕ್ಕಿಂತ ಮುಂಚೆ ಕೂಡಿಸಿದ್ದರೆ ಫಲಿತಾಂಶವು 6 ಆಗಿರುತ್ತದೆ.
06:25 ಅಥವಾ ಕೂಡುವ ಮುಂಚೆ ಭಾಗಿಸಿದರೆ ಫಲಿತಾಂಶವು 10 ಆಗಿರುತ್ತದೆ.
06:30 ನಾವೀಗ “ರನ್” ಮಾಡಿ ಫಲಿತಾಂಶವನ್ನು ನೋಡೋಣ.
06:38 ಫಲಿತಾಂಶವು ೧೦ ಎಂದು ಕಾಣುತ್ತಿದೆ ಅಂದರೆ ಕೂಡುವ ಮುಂಚೆ ಭಾಗಿಸಲಾಗಿದೆ ಎಂದರ್ಥ. ಇದು ಏಕೆಂದರೆ ಭಾಗಿಸುವ ಕ್ರಿಯೆಯು ಕೂಡುವ ಕ್ರಿಯೆಗಿಂತ ಹೆಚ್ಚು ಪ್ರಾಧಾನ್ಯತೆಯನ್ನು ಹೊಂದಿದೆ.
06:50 ಈ ರೀತಿಯ ಸಂದರ್ಭಗಳಲ್ಲಿ, ಪ್ರಾಧಾನ್ಯತೆಯನ್ನು ಅತಿಕ್ರಮಿಸಬೇಕೆನಿಸಿದಲ್ಲಿ, ಆವರಣವನ್ನು ಬಳಸುತ್ತೇವೆ.
07:04 ಆವರಣವನ್ನು ಸೇರುಸುವ ಮೂಲಕ, ಭಾಗಿಸುವುದಕ್ಕಿಂತ ಮುಂಚೆ ಕೂಡಿಸಬೇಕೆಂದು ಜಾವಾಕ್ಕೆ ನಾವು ಸೂಚಿಸುತ್ತೇವೆ.
07:10 ನಾವೀಗ ಫೈಲನ್ನು ರನ್ ಮಾಡೋಣ.
07:15 ನಾವೀಗ ನೋಡುವ ಹಾಗೆ, ಮೊದಲು ಕೂಡಿರುವುದರಿಂದ ನಿರೀಕ್ಷಿಸಿದ ಹಾಗೆ ಫಲಿತಾಂಶವು ಸಹ 6 ಆಗಿರುತ್ತದೆ.
07:22 ನಿಯಮದಂತೆ, ಪ್ರಕ್ರಿಯೆಯ ಕ್ರಮ ಸರಿಯಾಗಿ ತಿಳಿಯದಿದ್ದಲ್ಲಿ ಆವರಣವನ್ನು ಉಪಯೋಗಿಸಬೇಕೆಂದು ನೆನಪಿಟ್ಟುಕೊಳ್ಳಿ.
07:36 ಈ ಮೂಲಕ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದೆವು.
07:40 ನಾವೀಗ ಕಲಿತದ್ದು
07:41 ಜಾವಾದಲ್ಲಿ ಸಾಮಾನ್ಯ ಗಣಿತೀಯ ಪ್ರಕ್ರಿಯೆಯನ್ನು ಹೇಗೆ ಮಾಡಬಹುದೆಂದು.
07:44 ಆಪರೇಟರ್ ನ ಪ್ರಾಧಾನ್ಯತೆ, ಮತ್ತು
07:45 ಅದನ್ನು ಅತಿಕ್ರಮಿಸುವುದು ಹೇಗೆ.
07:49 ಈ ಟ್ಯುಟೋರಿಯಲ್ ನ ಅಸೈನ್ಮೆಂಟ್ ರೂಪದಲ್ಲಿ, modulo (ಮೋಡ್ಯುಲೋ) ಆಪರೇಟರ್ ಎಂದರೇನು ಹಾಗು ಅದರ ಕಾರ್ಯವೇನೆಂದು ತಿಳಿಯಿರಿ.
07:57 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
08:02 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
08:05 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
08:10 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
08:14 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
08:18 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08:24 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
08:29 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
08:35 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
08:39 ಈ ಪಾಠದ ಅನುವಾದಕ ಬೆಂಗಳೂರಿನಿಂದ ರುಕ್ಮಾಂಗದ ಆರ್ಯ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Pratik kamble, Vasudeva ahitanal