Drupal/C2/Creating-Basic-Content/Kannada

From Script | Spoken-Tutorial
Revision as of 14:56, 17 October 2016 by PoojaMoolya (Talk | contribs)

Jump to: navigation, search
Time Narration
00:01 ಡ್ರುಪಲ್ ನಲ್ಲಿ Creating Basic Content ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಅಂಶಗಳ ಬಗ್ಗೆ ಕಲಿಯಲಿದ್ದೇವೆ Content ನ ವಿಧಗಳು, article ನ ರಚನೆ ಹಾಗೂ ಸಾಮಾನ್ಯವಾದ ಪೇಜ್ ನ ರಚನೆ
00:15 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು Ubuntu Operating System, Drupal 8 ಮತ್ತು Firefox ವೆಬ್ ಬ್ರೌಸರ್ ಅನ್ನು ಉಪಯೋಗಿಸುತ್ತಿದ್ದೇನೆ.
00:25 ನೀವು ನಿಮಗಿಷ್ಟದ ಯಾವುದೇ ಬ್ರೌಸರ್ ಅನ್ನು ಉಪಯೋಗಿಸಬಹುದಾಗಿದೆ.
00:29 ಮೊದಲಿಗೆ Content type ನ ಬಗ್ಗೆ ಕಲಿಯೋಣ. 'ದ್ರುಪಲ್' ನಲ್ಲಿ, Content type ಎಂಬುದು content management system ನ ಮುಖ್ಯಾಂಶವಾಗಿದೆ.
00:39 ಇದು ಸೈಟ್ ನ ಬೆನ್ನೆಲುಬಿದ್ದಂತೆ.
00:42 ಇದು ಡ್ರುಪಲ್ ಅನ್ನು ಬೇರೆ CMS ಗಳಿಗಿಂತ ಬೇರೆಯಾಗಿಸುತ್ತದೆ.
00:48 ಹೆಚ್ಚಿನ ಎಲ್ಲಾ CMS ಗಳಲ್ಲಿ ಕೇವಲ ಶೀರ್ಷಕೆ ಹಾಗೂ ಬೋಡಿ ಮಾತ್ರವಿರುತ್ತದೆ ಹಾಗಾಗಿ ಇದು ಸಂಪೂರ್ಣವಾಗಿ ಅಸಮರ್ಪಕವಾಗಿರುತ್ತದೆ.
00:57 'ದ್ರುಪಲ್' ನಲ್ಲಿ, ಪ್ರತಿಯೊಂದು ಕಂಟೆಂಟ್ ಅನ್ನು ಕೂಡಾ ನೋಡ್ ಎಂದು ಕರೆಯುತ್ತೇವೆ. ಪ್ರತಿಯೊಂದು node ಕೂಡಾ ಒಂದು Content type ಗೆ ಸೇರಿದ್ದಾಗಿದೆ.
01:06 ಈಗ, ನಾವು Content type ನ ಮಹತ್ವವನ್ನು ತಿಳಿಯೋಣ. Content type ಎಂಬುದು ನೋಡ್ ಗಾಗಿ ವಿವಿಧ ಡೀಫಾಲ್ಟ್ ಸೆಟ್ಟಿಂಗ್ ಗಳನ್ನು ವಿವರಿಸುತ್ತದೆ. ಉದಾಹರಣೆಗಾಗಿ
01:17 node ಎಂಬುದು ತಂತಾನೇ ಪಬ್ಲಿಶ್ ಆಗಿದೆಯೇ? comments ಗಳು ಅನುಮತವಾಗಿವೆಯೇ? ಹಾಗೂ
01:23 ನಮ್ಮ ಸೈಟ್ ಗೆ ಕಂಟೆಂಟ್ ಗಳನ್ನು ಹೇಗೆ ಸೇರಿಸುವುದು? ಇತ್ಯಾದಿ. ಪ್ರತಿಯೊಂದು ಕಂಟೆಂಟ್ ಟೈಪ್ ಗಳೂ ಕೂಡಾ ಫೀಲ್ಡ್ ಗಳನ್ನು ಹೊಂದಿರುತ್ತವೆ.
01:30 ನಮ್ಮಲ್ಲಿ ನಮ್ಮಲ್ಲಿರುವ ಕಂಟೆಂಟ್ ಗಳ ಆಧಾರದ ಮೇಲೆ ನಮಗೆ ಬೇಕಾದ ಮಾಹಿತಿಗಳಿಗಾಗಿ ಫೀಲ್ಡ್ ಗಳಿದ್ದಾವೆ.
01:38 ನಾನಿದನ್ನು ಸ್ಪಷ್ಟಪಡಿಸುತ್ತೇನೆ. ಇದು IMDb.Com, ಇದು ಡ್ರುಪಲ್ ಸೈಟ್ ಆಗಿರಬಹುದು. ಇಲ್ಲಿ ರೆಡ್ ಎಂಬ ಮೂವಿಯ ಬಗ್ಗೆ ಮಾಹಿತಿಯಿದೆ.
01:49 ಸ್ಕ್ರೀನ್ ನಲ್ಲಿ ನೀವು ಪೋಸ್ಟರ್ ಅನ್ನು, ಟೈಟಲ್ ಅನ್ನು, ಬಿಡುಗಡೆಯ ದಿನಾಂಕವನ್ನು,
01:55 ಅದರ ರೇಟಿಂಗ್,ಮೂವಿಯ ಸಮಯಾವಧಿ, ಮೂವಿಯ ಶೈಲಿ,
01:59 ಬೋಡಿ ಅಥವಾ ಮೂವಿಯ ವಿವರಣೆ ಇತ್ಯಾದಿಗಳನ್ನು ನೋಡಬಹುದಾಗಿದೆ.
02:04 ನಾವಿಲ್ಲಿ ಕೆಲವು ಜನರ ಹೆಸರುಗಳನ್ನೂ, ಇತರ ಲಿಂಕ್ ಗಳನ್ನೂ ಬಟನ್ ಗಳನ್ನೂ ಬೇರೆ ವಿಷಯಗಳನ್ನೂ ನೋಡಬಹುದಾಗಿದೆ.
02:09 ಬೇರೆ CMS ಗಳಲ್ಲಾದರೆ, ನಾವು CSS ನಲ್ಲಿ ಇಂತಹ ಲೇಯೌಟ್ ಅನ್ನು ರಚಿಸಲು Dreamweaver ನಂತಹವುಗಳನ್ನು ಉಪಯೋಗಿಸುತ್ತಿದ್ದೆವು.
02:16 ಬ್ರೂಸ್ ವಿಲ್ಸ್ ಹೀರೋ ಆಗಿರುವ, 2010 ನೆ ವರ್ಷದ, PG13 ಅಂಕವಿರುವ ಎಲ್ಲಾ ಮೂವೀ ಗಳನ್ನು ಒಂದು ಪೇಜ್ ನಲ್ಲಿ ಇರಿಸಬೇಕೆನಿಸಿದರೇ ಎನಾಗಬಹುದು?
02:28 ನೀವು ಬೇರೆ CMS ಗಳನ್ನು ಉಪಯೋಗಿಸಿದರೆ ಇವೆಲ್ಲಾ ಕಷ್ಟಕರವಾಗಬಹುದು, ಆದರೆ 'ದ್ರುಪಲ್' ನಲ್ಲಿ ಇವುಗಳು ಬಹಳ ಸುಲಭವಾಗಿ ಮಾಡಬಹುದು.
02:37 ಇದುವೇ Content types ನ ನಿಜವಾದ ಲಾಭವಾಗಿದೆ. ಈಗ ನಾವು ಒಳಗಿನ ಕೆಲವು Content types ಗಳ ಬಗ್ಗೆ ತಿಳಿಯೋಣ.
02:46 ನಂತರ, ನಾವು ಹೊಸ Content types ಅನ್ನು ರಚಿಸುವುದನ್ನೂ ಕಲಿಯೋಣ. ನಾವು ಈ ಮೊದಲೇ ರಚಿಸಿದ Drupal ಸೈಟ್ ಅನ್ನು ಓಪನ್ ಮಾಡೋಣ.
02:54 ಮೊದಲಿಗೆ, ನಾವು Article Content type ನ ಬಗ್ಗೆ ಕಲಿಯೋಣ. Content ನ ಮೇಲೆ ಕ್ಲಿಕ್ ಮಾಡಿ ನಂತರ Add content ನ ಮೇಲೆ ಕ್ಲಿಕ್ ಮಾಡಿ.
03:04 ನೆನಪಿಡಿ, ನಾವು ಈಗಾಗಲೇ ಒಂದು article ಅನ್ನು ರಚಿಸಿದ್ದೇವೆ. ನಾವೀಗ ಇನ್ನೊಂದು ಆರ್ಟಿಕಲ್ ಅನ್ನು ಎಲ್ಲಾ ಅಂಶಗಳೊಂದಿಗೆ ರಚಿಸುತ್ತಿದ್ದೇವೆ.
03:13 Article ನ ಮೇಲೆ ಕ್ಲಿಕ್ ಮಾಡಿ. ಈ ಆರ್ಟಿಕಲ್ ನಲ್ಲಿ Title ಎಂಬುದೊಂದೇ ಕಡ್ಡಾಯವಾಗಿ ತುಂಬಿಸಬೇಕಾದ ಅಂಶವಾಗಿದೆ.
03:21 ನಾವು body ಯಲ್ಲಿ ಟೆಕ್ಸ್ಟ್ ಅನ್ನು ತುಂಬಿಸದಿದ್ದರೆ ಅಲ್ಲಿ ಏನೂ ಇರುವುದಿಲ್ಲ. ಒಂದು Article Content type ಎಂಬುದು Summary ಯ ಜೊತೆ ಬರುತ್ತದೆ.
03:28 ನಾವು Summary ಯಲ್ಲಿ ಏನನ್ನೂ ತುಂಬಿಸದಿದ್ದರೆ 'ದ್ರುಪಲ್' ಎಂಬುದು ಮೊದಲ ಕೆಲವು ಪದಗಳನ್ನು ತೆಗೆದುಕೊಂಡು ಅದನ್ನು ರಚಿಸುತ್ತದೆ. ಇದನ್ನೇ Teaser mode ಎನ್ನುತ್ತಾರೆ.
03:38 ಮುಂದುವರೆಯುತ್ತಾ, ನಾವಿಲ್ಲಿ ಕೆಲವು ಲೈನ್ ಗಳನ್ನು ಟೈಪ್ ಮಾಡೋಣ.
03:43 ನೀವು ನಿಮ್ಮಿಷ್ಟದ ಟೆಕ್ಸ್ಟ್ ಅನ್ನು ಟೈಪ್ ಮಾಡಬಹುದಾಗಿದೆ.
03:45 ಇದು ನನ್ನ ಟೆಕ್ಸ್ಟ್.
03:50 ಇಲ್ಲಿ, ಯಾವ element ಗಳನ್ನು ನಾವು HTML ನಲ್ಲಿ ಹಾಕಬಹುದು ಎಂದು Text format ಹೇಳುತ್ತದೆ.
03:56 ನಮ್ಮಲ್ಲಿ ಬೇಸಿಕ್, ರೆಸ್ಟ್ರಿಕ್ಟೆಡ್ ಹಾಗೂ ಫುಲ್ HTML ಗಳು ಇದ್ದಾವೆ. ಏಕೆಂದರೆ, ನಾವು super user ಗಳಾಗಿದ್ದು ನಾವು ಏನನ್ನಾದರೂ ನೋಡಬಹುದಾಗಿದೆ.
04:05 ಸಾಮಾನ್ಯವಾಗಿ, ಯೂಸರ್ ಎಡಿಟರ್ ಅಥವಾ ಪಬ್ಲಿಷರ್ ರೂಪದಲ್ಲಿ ಲಾಗ್ ಇನ್ ಆದಾಗ ಅವನಿಗೆ ಕೇವಲ Text format ಇರುತ್ತದೆ.ಅವರು ಕೇವಲ ಆ Text format ಅನ್ನು ಉಪಯೋಗಿಸಬಹುದು.
04:17 ಹೆಚ್ಚಿನ ಮಾಹಿತಿಗಾಗಿ About text formats ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
04:22 ಸದ್ಯಕ್ಕೆ, Basic HTML ಅನ್ನು ಆಯ್ಕೆಮಾಡೋಣ.
04:26 Basic HTML ಎಂಬುದು source code ಅನ್ನು ಉಪಯೋಗಿಸಲು ಮತ್ತು ಕೆಲವು basic HTML elements ಗಳನ್ನು ಉಪಯೋಗಿಸಲು ಬಳಸಲಾಗುತ್ತದೆ. ಉದಾಹರಣೆಗೆ
04:33 ಪ್ಯಾರಾಗ್ರಾಫ್ ಟ್ಯಾಗ್, ಸ್ಟ್ರಾಂಗ್ ಇಟಾಲಿಕ್
04:36 ಅನಾರ್ಡರ್ಡ್ ಲಿಸ್ಟ್, ಆರ್ಡರ್ಡ್ ಲಿಸ್ಟ್ ಹಾಗೂ ಇನ್ನೂ ಹಲವು.
04:41 Full HTML ಎಂಬುದು JavaScript ಹಾಗೂ iframes (ಐ ಫ್ರೇಮ್ಸ್) ಅನ್ನು ಒಳಗೊಂಡಂತೆ ಎಲ್ಲಾ HTML ಅನ್ನು ಎಂಬೆಡ್ ಮಾಡಲು ಅನುವುಮಾಡಿಕೊಡುತ್ತದೆ.
04:48 Restricted HTML ನಲ್ಲಿ, ಕೇವಲ paragraph tag ಅಥವಾ line breaks ಗಳನ್ನು ಸೇರಿಸಬಹುದು.
04:57 ವಿಸಿವಿಗ್ ಎಡಿಟರ್ ( WYSIWYG editor ) ಎಂಬುದು ಸಿ ಕೆ ಎಡಿಟರ್ ( CKEditor) ಆಗಿದೆ. ನಾವು ಇದರ ಬಗ್ಗೆ ನಂತರ ಕಲಿಯೋಣ.
05:03 ನಾವಿಲ್ಲಿ, bold, italics, linking, unordered ಮತ್ತು ordered lists, block quote , image
05:11 ವಿಭಿನ್ನ H tags ಗಳನ್ನು ಆಯ್ಕೆ ಮಾಡಲು ಒಂದು formatting drop down ಹಾಗೂ View Source ಇವುಗಳನ್ನು ನೋಡಬಹುದು.
05:18 ನಾನು ಯಾವಾಗ Text format ಅನ್ನು ಬದಲಾಯಿಸುತ್ತೇನೆಯೋ ಆಗ ಹೆಚ್ಚು ಬಟನ್ ಗಳನ್ನು ಹೊಂದುತ್ತೇನೆ. ನಾವು ಇದರ ಬಗ್ಗೆ ನಂತರ ಕಲಿಯೋಣ.
05:25 ಸಧ್ಯಕ್ಕೆ ನಾವು Basic HTML ನ ಹಂತದಲ್ಲೇ ಇರಿಸೋಣ. Continue ಎಂಬಲ್ಲಿ ಕ್ಲಿಕ್ ಮಾಡಿ.
05:32 ನಾವು ನಮ್ಮ article ಅನ್ನು ಮುಗಿಸೋಣ. ಮತ್ತೊಮ್ಮೆ, ನಾವು "introduction" ಮತ್ತು "drupal" ಎಂಬ ಟ್ಯಾಗ್ ಗಳನ್ನು ಉಪಯೋಗಿಸೋಣ.
05:40 ನಾವು Image ಅನ್ನು ಖಾಲಿ ಬಿಡೋಣ. ನಾವೀಗಾಗಲೇ ಅದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡೀದ್ದೇವೆ.
05:47 ಇಲ್ಲಿ, ಬಲಬದಿಯಲ್ಲಿ, ನಾವು visibility ಹಾಗೂ publication ಗಾಗಿ ಸೆಟ್ಟಿಂಗ್ ಗಳನ್ನು ಕಾಣಬಹುದು.
05:52 ಪ್ರಸ್ತುತ ಆರ್ಟಿಕಲ್ ಗಾಗಿ version control ಎಂಬುದನ್ನು ಸಕ್ರಿಯವಾಗಿಸಲು Create new revision ಎಂಬ ಚೆಕ್ ಬಾಕ್ಸ್ ನ ಮೇಲೆ ಟಿಕ್ ಮಾಡಿ.
05:59 ನಾವು article ಅನ್ನು menu link ಗೆ ಸೇರಿಸಲು ಇಚ್ಛಿಸಿದಲ್ಲಿ, Provide a menu link ನ ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. ಡ್ರುಪಲ್ ಎಂಬುದು Main navigation ಗೆ ಒಂದು ಮುಖ್ಯವಾದ ಐಟಮ್ ಅನ್ನು ಸೇರಿಸುತ್ತದೆ.
06:11 ನೀವು ಅದನ್ನು ಮಾಡಿದಲ್ಲಿ, ನಾವು ನೂರಾರು ಮೈಲ್ ಗಳನ್ನು ಪಡೆಯುತ್ತೇವೆ. ಹಾಗಾಗಿ ಚೆಕ್ ಮಾರ್ಕ್ ಅನ್ನು ತೆಗೆದು ಹಾಕೋಣ.
06:17 ನಾವು ನಿರ್ದಿಷ್ಟವಾದ ನೋಡ್ ಗಾಗಿ Comments ಎಂಬುದನ್ನು ಆನ್ ಅಥವಾ ಆಫ್ ಮಾಡಬಹುದು.
06:22 ನಾವಿಲ್ಲಿ URL alias ಅನ್ನು ಕೊಡಬಹುದು.
06:26 ನಾವೆಲ್ಲಾದರೂ ಖಾಲಿ ಬಿಟ್ಟರೆ ಡ್ರುಪಲ್ ಇದನ್ನು ನಮಗಾಗಿ ರಚಿಸುತ್ತದೆ.
06:30 AUTHORING INFORMATION ನ ಅಡಿಯಲ್ಲಿ, ನಾವು ಯಾರು ಇದನ್ನು ರಚಿಸಿದರು ಹಾಗೂ ಯಾವಾಗ ಎಂಬುದನ್ನು ನೋಡಬಹುದು.
06:37 PROMOTION OPTIONS ಕೆಳಗಡೆ, ನಾವು – ಈ ನೋಡ್ ಅನ್ನು ಮುಖಪುಟದಲ್ಲಿ ಇರಿಸಲಾಗುತ್ತದೆಯೇ, ಹಾಗೂ ಇದು ಸೂಚಿಯ ಮೇಲ್ಭಾಗದಲ್ಲಿ sticky ಯ ತರಹ ಇರುತ್ತದೆಯೇ, ಇತ್ಯಾದಿಗಳ ವ್ಯೂ ಸೆಟ್ಟಿಂಗ್ ಗಳನ್ನು ಸೆಟ್ ಮಾಡಬಹುದು.
06:50 ನಾವು ನಮ್ಮ Content type ಅನ್ನು ರಚಿಸಿದಾಗ ಇವುಗಳು ತಂತಾನೆ ಸೆಟ್ ಆಗಿರುತ್ತವೆ ಹಾಗೂ ಎಡಿಟರ್ ಗೆ ಇವುಗಳನ್ನು ಬದಲಾಯಿಸುವ ಅಗತ್ಯವಿಲ್ಲ.
06:56 ಆದರೆ ನಾವಿದನ್ನು ನಮ್ಮ ಆದ್ಯತೆಗನುಸಾರವಾಗಿ ಬದಲಾಯಿಸಬಹುದು.
07:00 ಕೊನೆಯಲ್ಲಿ, ನಮ್ಮ ನೋಡ್ ಅನ್ನು ಸೇವ್ ಮಾಡಲು Save and publish ಎಂಬಲ್ಲಿ ಕ್ಲಿಕ್ ಮಾಡಿ.
07:04 ತಕ್ಷಣ, ನೋಡ್ ಎಂಬುದು ನಮ್ಮ ಸೈಟ್ ನಲ್ಲಿ ಸಕ್ರಿಯವಾಗುತ್ತದೆ. ನಾವಿದನ್ನು ಇಲ್ಲಿ ನೋಡಬಹುದು.
07:10 Home ಪೇಜ್ ನ ಮೇಲೆ ಕ್ಲಿಕ್ ಮಾಡಿ.
07:12 ನಾವಿಲ್ಲಿ Welcome to Drupalville ಮತ್ತು Drupalville's Second Article ಅನ್ನು ನೋಡಬಹುದು.
07:17 Teaser mode ಮೋಡ್ ನಲ್ಲಿ ಇವುಗಳು ಪಬ್ಲಿಷ್ ಆದ ದಿನಾಂಕದ ಆಧಾರದಲ್ಲಿ ಕಾಣಿಸಿಕೊಳ್ಳುತ್ತವೆ.
07:23 Read more ಹಾಗೂ Add new comment ಎಂಬ ಲಿಂಕ್ ಗಳು ಇಲ್ಲಿವೆ.
07:28 ಡ್ರುಪಲ್ ಎಂಬ ಪದದ ಜೊತೆಗೆ ಟ್ಯಾಗ್ ಆದ ಎಲ್ಲಾ ನೋಡ್ ಗಳನ್ನು ನೋಡಬೇಕೆನಿಸಿದಲ್ಲಿ drupal ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
07:35 ಪುನಃ ನೋಡ್ ಗಳು ಪಬ್ಲಿಷ್ ಆದ ದಿನಾಂಕದ ಆಧಾರದ ಮೇಲೆ ಕಾಣಿಸುತ್ತಿವೆ.
07:40 ಇದುವೇ Article Content type ಆಗಿದೆ.
07:43 ನಾವೀಗ Edit ಲಿಂಕ್ ನ ಮೇಲೆ ಕ್ಲಿಕ್ ಮಾಡೋಣ.
07:45 ನಾವಿಲ್ಲಿ ಏನನ್ನು ಬೇಕಾದರೂ ಸೇರಿಸಬಹುದಾಗಿದೆ.
07:48 'ದ್ರುಪಲ್' ಎಂಬುದು ಪೂರ್ವ ನಿಯೋಜಿತವಾಗಿ ಹಲವಾರು ವಿಕಲ್ಪಗಳನ್ನು ಕೊಡುತ್ತದೆ.
07:52 ಈಗ ನಾವು Save and keep published ನ ಮೇಲೆ ಕ್ಲಿಕ್ ಮಾಡೋಣ.
07:56 ನಾವು Content types ಅನ್ನು ಯಾವುದಕ್ಕೆ ಬೇಕಾದರೂ ಉಪಯೋಗಿಸಬಹುದು.
07:58 ನಾವೀಗ ಬೇರೆ ಅಂಶವನ್ನು ಸೇರಿಸೋಣ. ಕ್ರಮವಾಗಿ Shortcuts ಹಾಗೂ Add content ಎಂಬಲ್ಲಿ ಕ್ಲಿಕ್ ಮಾಡಿ.
08:04 ಇಲ್ಲಿ Basic page ಅನ್ನು ಆಯ್ಕೆ ಮಾಡಿ. Basic page ನಲ್ಲಿ Title ಹಾಗೂ Body ಇರುತ್ತವೆ.
08:10 ಇಲ್ಲಿ ಟ್ಯಾಗ್ ಗಳಾಗಲೀ ಇಮೇಜ್ ಗಳಾಗಲೀ ಇಲ್ಲ. ಪೂರ್ವನಿಯೋಜಿತವಾಗಿ ಇದು ಮುಖಪುಟಕ್ಕೆ ಸೇರಲ್ಪಟ್ಟಿಲ್ಲ.
08:17 ಹಾಗೂ ಇಲ್ಲಿ ಕಮೆಂಟ್ ಗಾಗಿ ಅವಕಾಶವಿಲ್ಲ. ಏಕೆಂದರೆ ಇದು ಮುಖಪುಟಕ್ಕಾಗಿ ರಚಿಸಿದ್ದಲ್ಲ ಹಾಗಾಗಿ ಹೊಸ ಮೆನ್ಯು ವಾಗಿ ರಚಿಸುವುದು ಬಹಳ ಸುಲಭ.
08:27 About Drupalville ಎಂದು ಟೈಪ್ ಮಾಡಿ.
08:30 ನಿಮ್ಮಿಷ್ಟದ ಟೆಕ್ಸ್ಟ್ ಅನ್ನು ಟೈಪ್ ಮಾಡಿ.
08:33 ಈಗ, MENU SETTINGS ನ ಕೆಳಗೆ ಇರುವ Provide a menu link ಅನ್ನು ಟಿಕ್ ಮಾಡಿ.
08:38 ನೀವು Title ಎಂಬುದು Menu Title ಆಗಿ ಬದಲಾಗುವುದನ್ನು ನೋಡಬಹುದು.
08:43 ನಾವಿದನ್ನು ಚಿಕ್ಕದಾಗಿಸಬಹುದು. main navigation ಎಂದು ಆಯ್ಕೆ ಮಾಡಿ ಹಾಗೂ Weight ಅನ್ನು ಸೊನ್ನೆ ಎಂದು ಇರಿಸಿ.
08:51 Weight ಎಂಬುದು ಸೂಚಿಯಲ್ಲಿ ಮೆನ್ಯುವಿನ ಸ್ಥಾನವನ್ನು ನಿರ್ಧರಿಸುತ್ತದೆ. ಕಡಿಮೆ ಅಂಕ ಅಥವಾ ಋಣಾತ್ಮಕ ಸಂಖ್ಯೆಯು ಸೂಚಿಯಲ್ಲಿ ಮೆನ್ಯುವಿಗೆ ಮೇಲಿನ ಸ್ಥಾನವನ್ನು ಕೊಡುತ್ತದೆ.
09:03 ಉಳಿದೆಲ್ಲವನ್ನೂ ಹಾಗೆಯೇ ಬಿಡಿ. menu link ಎಂಬುದು ಚೆಕ್ ಆಗಿದೆ ಎಂದು ದೃಢೀಕರಿಸಿ Save and publish ನ ಮೇಲೆ ಕ್ಲಿಕ್ ಮಾಡಿ.
09:11 ನಾವು About Drupalville ಎಂಬ ಲಿಂಕ್ ಅನ್ನು ಪಡೆಯುತ್ತೇವೆ. ಇದನ್ನು ಒತ್ತುವುದರಿಂದ ನಾವು About Drupalville ಎಂಬ ನೋಡ್ ಟೈಟಲ್ ಅನ್ನು ಹೊಂದಿರುವ ಬೇಸಿಕ್ ಪೇಜ್ ಕಂಟೆಂಟ್ ಟೈಪ್ ಅನ್ನು ನೋಡುತ್ತೇವೆ.
09:22 ಇಲ್ಲಿ node ID ಯು 3 ಆಗಿದೆ. ನೀವು ಈ ಮೊದಲೇ ಬೇರೆ ನೋಡ್ ಗಳನ್ನು ಸೇರಿಸಿದ್ದರೆ ನಿಮ್ಮ node ID ಬೇರೆಯಾಗಬಹುದು.
09:32 ಕೆಳಗಡೆ ಬಲಭಾಗದಲ್ಲಿ ನಾವು node ID 3 ಎಂಬುದನ್ನು ನೋಡಬಹುದು. ಬಿಡಿ, ನಿಮಗಿದರ ಅಗತ್ಯ ಬಹಳವಿಲ್ಲ.
09:41 ಇದು ಮೆನ್ಯು ಲಿಂಕ್ ಆಗಿರುವ article ಹಾಗೂ Basic page Content type ಆಗಿದೆ. ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
09:50 ಒಟ್ಟಿನಲ್ಲಿ, ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಅಂಶಗಳನ್ನು ಕಲಿತೆವು Content types ಒಂದು article ನ ರಚನೆ ಹಾಗೂ ಒಂದು ಸಾಮಾನ್ಯ ಪೇಜ್ ನ ರಚನೆ.
10:05 ಈ ವೀಡಿಯೋ Acquia (ಆಕ್ವಿಯಾ) ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ.
10:15 ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ.
10:22 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೊಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
10:30 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
10:44 ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.

Contributors and Content Editors

PoojaMoolya, Sandhya.np14, Vasudeva ahitanal