Drupal/C2/Displaying-Contents-using-Views/Kannada
From Script | Spoken-Tutorial
Revision as of 18:22, 14 October 2016 by PoojaMoolya (Talk | contribs)
Time | Narration |
00:01 | Views ಅನ್ನು ಬಳಸಿ ವಿಷಯಗಳನ್ನು (ಕಂಟೆಟ್ಸ್) ಗಳನ್ನು ಪ್ರದರ್ಶಿಸುವುದನ್ನು ತಿಳಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ . |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು: “ವ್ಯೂಸ್”, “ಟೀಸರ್” ಅನ್ನು ಬಳಸಿ ಪೇಜ್ ನಿರ್ಮಾಣ ಮತ್ತು, ಸರಳವಾದ “ಬ್ಲಾಕ್ ವ್ಯೂವ್” ಅನ್ನು ಕಲಿಯಲಿದ್ದೇವೆ. |
00:15 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು: ಉಬಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್, ಡ್ರುಪಲ್ 8 ಮತ್ತು, ಫೈರ್ ಫಾಕ್ಸ್ ವೆಬ್ ಬ್ರೌಸರ್ ಅನ್ನು ಬಳಸಿದ್ದೇನೆ.ನಿಮ್ಮ ಅನುಕೂಲತೆಗೆ ತಕ್ಕಂತೆ ನೀವು ಯಾವುದೇ ವೆಬ್ ಬ್ರೌಸರ್ ಅನ್ನು ಬಳಸಬಹುದು. |
00:31 | ಮೊದಲಿಗೆ ವ್ಯೂಸ್ ಬಗ್ಗೆ ತಿಳಿದುಕೊಳ್ಳೋಣ. ವ್ಯೂಸ್ ಅನ್ನು ಸದೃಶ ವಿಷಯಗಳನ್ನು(ಕಂಟೆಂಟ್) ಪ್ರದರ್ಶಿಸಲು ಬಳಸುತ್ತೇವೆ.ವ್ಯೂಸ್ ಅನೇಕ ಸ್ವರೂಪಗಳಲ್ಲಿ ಪ್ರದರ್ಶಿತವಾಗುತ್ತದೆ. |
00:43 | ಟೇಬಲ್ಸ್, ಲಿಸ್ಟ್ಸ್,ಗ್ಯಾಲರಿ ಮುಂತಾದುವುಗಳು. |
00:49 | ಇದು ವಿಷಯಗಳನ್ನು ನಾವು ವ್ಯಾಖ್ಯಾನಿಸಿದ ಮಾನದಂಡಗಳಿಗೆ ಅನುಸಾರವಾಗಿ “ಆಯ್ಕೆ, ವ್ಯವಸ್ಥಾಪನೆ, ಶೋಧನೆ” ಮತ್ತು “ಪ್ರಸ್ತುತ” ಮಾಡಬಲ್ಲದು. ಬೇರೆ ತಂತ್ರಾಂಶಗಳಲ್ಲಿ (ಸಾಫ್ಟ್ ವೇರ್)ವ್ಯೂಸ್ ಮೂಲಭೂತವಾಗಿ ವರದಿ (ರಿಪೋರ್ಟ್) ಅಥವಾ ಪ್ರಶ್ನೆಗಳ ಫಲಿತಾಂಶವಾಗಿ(ಕ್ವ್ಯಾರಿ ರಿಸಲ್ಟ್ಸ್) ಪರಿಗಣಿತವಾಗಿದೆ. |
01:04 | ಉದಾಹರಣೆಗಾಗಿ ಗ್ರಂಥಾಲಯಕ್ಕೆ ಹೋಗಿ ನೀವು ಗ್ರಂಥಪಾಲಕನಿಗೆ ಈ ಕೆಳಗಿನ ಮಾನದಂಡಗಳಲ್ಲಿ ಪುಸ್ತಕಗಳನ್ನು ಕೇಳಿದಿರಿ ಎಂದಿಟ್ಟುಕೊಳ್ಳಿ; ಅವುಗಳೆಂದರೆ: 1905 ಗಿಂತ ಹಿಂದೆ ಪ್ರಕಾಶಿತವಾದವುಗಳು, “ಎಮ್” ನಿಂದ ಆರಂಭವಾಗುವ ಹೆಸರುಳ್ಳ ಲೇಖಕನಿಂದ ಬರೆಯಲ್ಪಟ್ಟವು, |
01:19 | ನೂರಕ್ಕಿಂತ ಹೆಚ್ಚು ಪುಟಗಳನ್ನು ಹೊಂದಿರುವವು ಮತ್ತು ಕೆಂಪು ಬಣ್ಣದ ಮುಖ ಪುಟವನ್ನು ಹೊಂದಿರುವವು. |
01:25 | ಈ ಪ್ರಶ್ನೆಗಳನ್ನು ಕೇಳುವುದರಿಂದ ನೀವು ಗ್ರಂಥಾಲಯದಿಂದ ಹೊರ ದೂಡಲ್ಪಡುವುದು ನಿಶ್ಚಿತ. ಆದರೆ ಡ್ರುಪಲ್ ನಲ್ಲಿ ವ್ಯೂಸ್ ಅನ್ನು ಬಳಸಿ ಈ ಅನ್ವೇಷಣೆಗಳನ್ನುಸರಳವಾಗಿ ಮಾಡಬಹುದು. |
01:34 | ನಮ್ಮ “ವ್ಯೂಸ್” ಅನ್ನು ಸೆಟ್ ಮಾಡಲು ಸರಳವಾದ 5 ಹಂತಗಳ ಪ್ರಕ್ರಿಯೆಯನ್ನು ಅನುಸರಿಸಬೇಕಾಗಿದೆ. ವ್ಯೂಸ್ ನ ಸೆಟ್ ಮಾಡುವ ಪ್ರಕ್ರಿಯೆ ಹೀಗಿದೆ-ನಿಮ್ಮ ಡಿಸ್ಪ್ಲೇ ಅನ್ನು ಆಯ್ಕೆ ಮಾಡಿ. ನಿಮ್ಮಫಾರ್ಮೇಟ್ ಅನ್ನು ಸಿದ್ಧಪಡಿಸಿ. |
01:45 | ನಿಮ್ಮ ಕ್ಷೇತ್ರಗಳನ್ನು ಗುರುತಿಸಿಕೊಳ್ಳಿ.ಶೋಧಕವನ್ನು(ಫಿಲ್ಟರ್) ಅನ್ನು ಅನ್ವಯಿಸಿ ಮತ್ತು ಫಲಿತಾಂಶವನ್ನುಸಾರ್ಟ್ ಮಾಡಿರಿ. |
01:53 | ಈಗ, ಡ್ರುಪಲ್ ಸೈಟ್ ನಲ್ಲಿ ಪ್ರಮಾಣಿತ ವ್ಯೂಸ್ ಅನ್ನು ರಚಿಸುವುದನ್ನು ಕಲಿಯೋಣ. |
01:53 | ಈಗ, ನಾವು ಈ ಹಿಂದೆ ರಚಿಸಿರುವ ವೆಬ್ ಸೈಟ್ ತೆರೆಯೋಣ. |
01:58 | ಡ್ರುಪಲ್ ಸೈಟ್ ನಲ್ಲಿ “ವ್ಯೂಸ್” ಅನ್ನು ರಚಿಸುವುದನ್ನು ಕಲಿಯೋಣ. |
02:04 | “ಸ್ಟ್ರಕ್ಚರ್” ಅನ್ನು ಕ್ಲಿಕ್ ಮಾಡಿ, ನಂತರ ವ್ಯೂಸ್ ನ ಮೇಲೆ ಕ್ಲಿಕ್ಕಿಸಿ. |
02:09 | ಡ್ರುಪೆಲ್ ನಲ್ಲಿ ಹಲವು ಅಂತರ್ನಿರ್ಮಿತ ವ್ಯೂಸ್ ಗಳಿದ್ದಾವೆ. ಉದಾಹರಣೆಗಾಗಿ - ಕಂಟೆಂಟ್ ವ್ಯೂವ್ ನಿರ್ವಾಹಕರಿಗೆ(ಅಡ್ಮಿನಿಸ್ಟ್ರೇಟರ್) ನಿರ್ವಹಿಸುವ ಅವಕಾಶವನ್ನು ನೀಡುತ್ತದೆ. |
02:20 | ಇದೇ ರೀತಿಯಲ್ಲಿ “ಕಸ್ಟಮ್ ಬ್ಲಾಕ್ ಲೈಬ್ರರಿ, ಫೈಲ್ಸ್, ಫ್ರಂಟ್ ಪೇಜ್, ಪೀಪಲ್, ರೀಸೆಂಟ್ ಕಮೆಂಟ್ಸ್, ರೀಸೆಂಟ್ ಕಂಟೆಂಟ್, ಟ್ಯಾಕ್ಸಿನೋಮಿ ಟರ್ಮ್ಸ್, ಹೂ ಈಸ್ ನ್ಯೂ” ಮತ್ತು “ಹೂ ಈಸ್ ಆನ್ ಲೈನ್” ವ್ಯೂಸ್ ಗಳನ್ನು ನಿರ್ವಹಿಸಬಹುದು. |
02:37 | ಇವುಗಳು ಡ್ರುಪೆಲ್ ನಲ್ಲಿ ದೊರಕುವ ಅಪ್ ಡೇಟ್ ಮಾಡಬಹುದಾದ ಅಥವಾ ಬದಲಿಸಬಹುದಾದ ವ್ಯೂಸ್ ಗಳು. |
02:44 | ಮೊದಲು ಟೀಸರ್ ಅನ್ನು ಬಳಸಿ ಸರಳವಾದ ಪುಟವೊಂದನ್ನು (ಪೇಜ್) ನಿರ್ಮಿಸೋಣ. ಇದು ನಮ್ಮ ಈವೆಂಟ್ಸ್ ಕಂಟೆಂಟ್ ಟೈಪ್ ಆಧಾರಪುಟವಾಗುವುದು. |
02:54 | “ಆಡ್ (Add)ನ್ಯೂ ವ್ಯೂಸ್ ಅನ್ನು” ಕ್ಲಿಕ್ ಮಾಡಿ ಮತ್ತು ಇದಕ್ಕೆ " ಈವೆಂಟ್ಸ್ ಸ್ಪೋನ್ಸರ್ಡ್" ಎಂದು ಹೆಸರಿಸಿ. |
03:02 | ಕಂಟೆಂಟ್ “ಆಫ್ ಟೈಪ್” ಅನ್ನು “ಆಲ್” ನಿಂದ “ಈವೆಂಟ್ಸ್” ಗೆ ಹಾಗು “ಸೊರ್ಟೆಡ್ ಬೈ” ಅನ್ನು “ನ್ಯೂಯೆಸ್ಟ್ ಫಸ್ಟ್” ಎಂದು ಬದಲಿಸಿ. |
03:11 | “ಕ್ರಿಯೇಟ್ ಪೇಜ್” ಅನ್ನು ಕ್ಲಿಕ್ ಮಾಡಿ. “ಡಿಸ್ಪ್ಲೇ ಫಾರ್ಮೆಟ್” ಅನ್ನು “ಅನ್ ಫಾರ್ಮೆಟೆಡ್ ಲಿಸ್ಟ್ ಆಫ್ ಟೀಸರ್ಸ್” ಎಂದಿರಿಸಿ. |
03:20 | ಇದು ಯಾಕೆಂದರೆ ನಾವೀಗಾಗಲೇ ನಮ್ಮ ಮ್ಯಾನೇಜಿಂಗ್ ಡಿಸ್ಪ್ಲೇ ನಲ್ಲಿ“ಟೀಸರ್ ಮೋಡ್” ಅನ್ನು ನಿರ್ಧರಿಸಿದ್ದೇವೆ. |
03:26 | “ಕ್ರಿಯೇಟ್ ಅ ಮೆನು ಲಿಂಕ್” ಅನ್ನು ಗುರುತಿಸಿರಿ. ಮೆನು ಡ್ರಾಪ್ ಡೌನ್ ನ ಕೆಳಗಿನ “ಮೈನ್ ನೇವಿಗೇಶನ್” ಅನ್ನು ಆಯ್ಕೆ ಮಾಡಿಕೊಳ್ಳಿ. |
03:35 | ಇದು ನಮ್ಮ ತಾಣಕ್ಕೆ ಸೇರಿಸಿರುವ ಎಲ್ಲಾ ಈವೆಂಟ್ಸ್ ನೋಡಲು ನಮಗೆ ಸಹಕಾರಿಯಾಗುತ್ತದೆ. |
03:41 | “ಸೇವ್ ಎಂಡ್ ಎಡಿಟ್” ಅನ್ನು ಕ್ಲಿಕ್ ಮಾಡಿ. ಈಗ ನಾವು ಆರಂಭದಲ್ಲಿ ತಿಳಿಸಿದ ಸ್ಕ್ರೀನ್ ಅನ್ನು ಉಪಯೋಗಿಸಲು ಶಕ್ತರಾಗಿದ್ದೇವೆ. |
03:51 | ಈ ಸ್ಕ್ರೀನ್ ಪೇಜ್ ಒಂದನ್ನು ಪ್ರದರ್ಶಿಸುತ್ತದೆ, ಇಲ್ಲಿಟೀಸರ್ ,“ಅನ್ ಫಾರ್ಮೆಟೆಡ್ ಲಿಸ್ಟ್” ಎನ್ನುವ ಫಾರ್ಮೆಟ್ ಅನ್ನು ಹೊಂದಿದೆ. |
03:59 | ನಾವು ನಮ್ಮ ಟೀಸರ್ ಮೋಡ್ ಅನ್ನು ಸ್ಥಾಪಿಸಿರುವುದರಿಂದ ನಮಗಿಲ್ಲಿ ಯಾವುದೇ ಫೀಲ್ಡ್ ನ ಅಗತ್ಯತೆ ಇರುವುದಿಲ್ಲ. |
04:05 | “ಫಿಲ್ಟರ್ ಕ್ರೈಟೇರಿಯ”, ಈವೆಂಟ್ ಗಳನ್ನು ಪ್ರದರ್ಶಿಸಿದೆ ಮತ್ತು “ಸಾರ್ಟ್ ಕ್ರೈಟೇರಿಯ” ನಲ್ಲಿ ಅವರೋಹಣ ಕ್ರಮದಲ್ಲಿ ಪ್ರಕಾಶನದ ದಿನಾಂಕ ಪ್ರದರ್ಶಿತವಾಗುತ್ತದೆ. |
04:16 | ಪರೆದೆಯ ಕೆಳ ಭಾಗದಲ್ಲಿ ನಾವು ಪ್ರೀವ್ಯೂವ್ ಮಾಡಬಹುದು. |
04:21 | ನಿಮಗಿದು ಇಷ್ಟವಾಗದೇ ಇದ್ದಲ್ಲಿ, ಸರಳವಾಗಿ ಇದನ್ನು ಬದಲಿಸಬಹುದು ಕೂಡ. ಇದನ್ನು ನಾವು ಇನ್ನೊಂದು ಟ್ಯುಟೋರಿಯಲ್ ನಲ್ಲಿ ತಿಳಿಯೋಣ. |
04:28 | ಸಧ್ಯ,“ಸೇವ್” ಅನ್ನು ಕ್ಲಿಕ್ ಮಾಡಿ. ನಂತರ “ಬ್ಯಾಕ್ ಟು ಸೈಟ್” ಅನ್ನು ಕ್ಲಿಕ್ಕಿಸಿ. |
04:35 | ಮುಖ್ಯ ಮೆನುವಿನಲ್ಲಿ ನಮ್ಮೆಲ್ಲಾ ಈವೆಂಟ್ ಗಳ ಪಟ್ಟಿಯಿರುವ “ಈವೆಂಟ್” ಎನ್ನುವ ಟ್ಯಾಬ್ ಅನ್ನು ಹೊಂದಿದ್ದೇವೆ. |
04:44 | ಇಲ್ಲಿ ವಿಭಿನ್ನ ಆಕಾರ ಮತ್ತು ಗಾತ್ರಗಳನ್ನು ಹೊಂದಿರುವ ಎಲ್ಲಾಈವೆಂಟ್ ಲೋಗೋ ಗಳನ್ನು ನಾವು ಕಾಣಬಹುದು. |
04:50 | ಇಲ್ಲಿ “ಈವೆಂಟ್ ವೆಬ್ ಸೈಟ್” ಮತ್ತು ಈವೆಂಟ್ ಡೇಟ್ ಗಳನ್ನು ಕಾಣಬಹುದು. |
04:55 | ಇದನ್ನು ಬದಲಿಸಬೇಕಾದಲ್ಲಿ ನಮ್ಮ ಟೀಸರ್ ಮೋಡ್ ನಲ್ಲಿ ಈವೆಂಟ್ ಕಂಟೆಂಟ್ ಮಾದರಿಗಳನ್ನು ಬದಲಿಸಿಕೊಳ್ಳಬಹುದು. |
05:04 | ಇಷ್ಟೇ! ಇದು ನಮ್ಮೆಲ್ಲಾ ಈವೆಂಟ್ ಗಳಿಗೆ ಆಧಾರ ಪುಟವಾಗಿದೆ. |
05:09 | ಮಾಹಿತಿಗಳನ್ನು ಬ್ಲಾಕ್ ರೀಜನ್ ಅಥವಾ ಸೈಡ್ ಬಾರ್ ನಲ್ಲಿ ತೋರಿಸಬಹುದಾದುದು ಡ್ರುಪಲ್ ನ ಪ್ರಮುಖ ವಿಶೇಷತೆಯಾಗಿದೆ. |
05:19 | ಈ ಹಿಂದೆ ನಾವು ಹೊಸ ಈವೆಂಟ್ ಅನ್ನು ಸೇರಿಸಿದಲ್ಲಿ , ಆ ಈವೆಂಟ್ ಇರುವ ಪ್ರತಿ ಪುಟದ ಸೈಡ್ ಬಾರ್ ಅನ್ನು ಅಪ್ ಡೇಟ್ ಮಾಡಬೇಕಿತ್ತು. |
05:31 | ಆದರೀಗ ವ್ಯೂಸ್, ವಿಷಯಗಳನ್ನು ಸ್ವತಃ ಅಪ್ ಡೇಟ್ ಮಾಡುತ್ತದೆ. |
05:36 | “ಸ್ಟ್ರಕ್ಚರ್” ಅನ್ನು ಕ್ಲಿಕ್ಕಿಸಿ. ನಂತರದಲ್ಲಿ “ವ್ಯೂಸ್” ಅನ್ನು ಕ್ಲಿಕ್ ಮಾಡಿ. |
05:41 | ಇದನ್ನು ಪುನಃ ಪುನಃ ಬಳಸುತ್ತಿರುವುದರಿಂದ , ಸ್ಟಾರ್ ಅನ್ನು ಕ್ಲಿಕ್ ಮಾಡಿ ನೇರ ಉಪಯೋಗಕ್ಕೆ (ಶಾರ್ಟ್ ಕಟ್) ಅನುವು ಮಾಡಿಕೊಳ್ಳೋಣ. ಈಗ “ಆಡ್ ನ್ಯೂ ವ್ಯೂವ್” ಅನ್ನು ಕ್ಲಿಕ್ ಮಾಡಿ. |
05:53 | “ವ್ಯೂವ್ ನೇಮ್” ಕ್ಷೇತ್ರದಲ್ಲಿ “ರೀಸೆಂಟ್ ಈವೆಂಟ್ಸ್ ಆಡೆಡ್” ಎಂದು ಟೈಪ್ ಮಾಡಿರಿ. ಇದು ನಮ್ಮ ಸೈಟ್ ಗೆ ಸೇರಿಸಲ್ಪಟ್ಟ ಹೊಸ ಈವೆಂಟ್ಸ್ ಗಳ ಪಟ್ಟಿಯಾಗಿರುತ್ತದೆ. |
06:04 | ಈಗ ಕಂಟೆಂಟ್ ಟೈಪ್ ಅನ್ನು ವಿಷಯದ ಮಾದರಿಯನ್ನು ಆಲ್ ನಿಂದ ಈವೆಂಟ್ಸ್ ಗೆ ಬದಲಿಸಿ. |
06:09 | “ಕ್ರಿಯೇಟ್ ಬ್ಲಾಕ್” ಅನ್ನು ಆಯ್ಕೆ ಮಾಡಿ. “ಸಾರ್ಟೆಡ್ ಬೈ” ಅನ್ನು “ನ್ಯೂಯೆಸ್ಟ್ ಫಸ್ಟ್” ಎಂದು ಇರಿಸಿಕೊಳ್ಳಿ. |
06:18 | ನಾವು ಬೇರೆ ಹೆಸರು ಮತ್ತು ಶೀರ್ಷಿಕೆಯನ್ನು ಹೊಂದಬಹುದೆಂದು ತಿಳಿಯಲು , “ಬ್ಲಾಕ್ ಟೈಟಲ್” ನಲ್ಲಿ“ರೀಸೆಂಟ್ಲಿ ಆಡೆಡ್ ಈವೆಂಟ್ಸ್” ಎಂದು ಟೈಪ್ ಮಾಡಿ. |
06:28 | ಡ್ರುಪಲ್ ನಮಗೆ ವ್ಯೂಸ್ ನಲ್ಲಿ ವಿಭಿನ್ನ ಶೈಲಿಗಳನ್ನು ರಚಿಸಲು ಕೂಡ ಅನುವು ಮಾಡಿಕೊಡುತ್ತದೆ. ಇದನ್ನು ನಾವು “ಅನ್ ಫಾರ್ಮೆಟೆಡ್ ಲಿಸ್ಟ್ ಆಫ್ ಟೈಟಲ್ಸ್” ಎಂದೂ “ಐಟಮ್ಸ್ ಪರ್ ಬ್ಲಾಕ್” ಅನ್ನು 5 ಎಂದೂ ಇರಿಸಿಕೊಳ್ಳೋಣ. |
06:40 | “ಯೂಸ್ ಅ ಪೇಜ್” ಆಯ್ಕೆಯನ್ನು ಗುರುತಿಸದಿರಿ. ಗುರುತಿಸದ ಪಕ್ಷದಲ್ಲಿ ಮೂರನೆಯ ಒಂದು, ಮೂರನೆಯ ಎರಡು ಮುಂತಾದ ರೀತಿಯಲ್ಲಿ ಪುಟ ಸಂಖ್ಯೆಗಳು ದೊರಕುವವು. |
06:53 | “ಸೇವ್ ಎಂಡ್ ಎಡಿಟ್” ಅನ್ನು ಕ್ಲಿಕ್ ಮಾಡಿ. ಇದೀಗ ನಾವು ಪ್ರಿವ್ಯೂ ನೋಡೋಣ. ಇದು ನಮಗೆ ತೀರಾ ಇತ್ತಿಚೆಗೆ ಸೇರಿಸಿದ ಈವೆಂಟ್ ಗಳ ಪಟ್ಟಿಯನ್ನು ತೋರಿಸುತ್ತದೆ. |
07:05 | ಇಲ್ಲಿ ನಾವು ಡಿಸ್ಪ್ಲೇಯನ್ನು“ಬ್ಲಾಕ್” ಆಗಿ, ಫಾರ್ಮೆಟ್ ಅನ್ನು“ಅನ್ ಫಾರ್ಮೆಟೆಡ್ ಲಿಸ್ಟ್” ಆಗಿ, “ಫೀಲ್ಡ್ಸ್” ಅನ್ನು “ಟೈಟಲ್” ಎಂದು ನಿರ್ಧಾರಿತವಾಗಿರುವುದನ್ನು ನೋಡಬಹುದು. |
07:16 | “ಫಿಲ್ಟ್ರರ್ ಕ್ರೈಟೇರಿಯ” ಅವರೋಹಣ ಕ್ರಮದಲ್ಲಿ ಪ್ರಕಾಶನದ ದಿನಾಂಕವನ್ನು ಹೊಂದಿದ “ಪಬ್ಲಿಶ್ ಈವೆಂಟ್ಸ್” ಎಂದು ನಿರ್ಧಾರಿತವಾಗಿದೆ. |
07:24 | “ಸೇವ್” ಅನ್ನು ಕ್ಲಿಕ್ ಮಾಡೋಣ. ನಾವು ಬ್ಲಾಕ್ ಅನ್ನುನಿರ್ಧರಿಸದೇ ಇರುವ ಕಾರಣಕ್ಕೆ ಇದು ನಮಗೆ ಕಾಣಸಿಗುವುದಿಲ್ಲ. |
07:33 | “ಸ್ಟ್ರಕ್ಚರ್” ಮತ್ತು“ಬ್ಲಾಕ್ ಲೇಯೌಟ್” ಅನ್ನು ಕ್ಲಿಕ್ ಮಾಡಿ. ಬ್ಲಾಕ್ ಅನ್ನು “ಸೈಡ್ ಬಾರ್ ಫಸ್ಟ್” ಪ್ರದೇಶದಲ್ಲಿ ಸ್ಥಾಪಿಸೋಣ. |
07:43 | “ಪ್ಲೇಸ್ ಬ್ಲಾಕ್” ಅನ್ನು ಕ್ಲಿಕ್ ಮಾಡಿ. ಪರದೆಯನ್ನು ಕೆಳ ಸರಿಸಿದಾಗ “ರೀಸೆಂಟ್ ಈವೆಂಟ್ಸ್ ಆಡೆಡ್” ಎನ್ನುವ ಬ್ಲಾಕ್ ನಮಗೆ ಗೋಚರಿಸುವುದು. “ಪ್ಲೇಸ್ ಬ್ಲಾಕ್” ಅನ್ನು ಕ್ಲಿಕ್ ಮಾಡಿ. |
07:54 | ಬ್ಲಾಕ್ ನ ಬಗ್ಗೆ ಅಧಿಕ ಮಾಹಿತಿಗಳನ್ನು ತಿಳಿಯದಿರುವುದರಿಂದ, ಕೇವಲ “ಸೇವ್” ಅನ್ನು ಕ್ಲಿಕ್ ಮಾಡಿ. ಇದು ಪ್ರತಿ ಪುಟದಲ್ಲಿ ಕಾಣಸಿಗುವುದು. ಇದನ್ನು ನಂತರದಲ್ಲಿ ಸರಿಪಡಿಸೋಣ. |
08:06 | “ಸರ್ಚ್” ನ ನಂತರದಲ್ಲಿ ಇದು ನಮಗೆ ಕಾಣಸಿಗಲಿದೆ. “ಸೇವ್ ಬ್ಲಾಕ್” ಅನ್ನು ಕ್ಲಿಕ್ ಮಾಡಿ. |
08:13 | “ಬ್ಯಾಕ್ ಟು ಸೈಟ್” ಅನ್ನು ಕ್ಲಿಕ್ ಮಾಡಿ. ಈಗ ನಾವು ಪ್ರತಿ ಪುಟದಲ್ಲಿ ಬ್ಲಾಕ್ ಅನ್ನು ಹೊಂದಿದ್ದೇವೆ. ಇದು ನಮ್ಮ ಸೈಟ್ ನಲ್ಲಿನ ತೀರಾ ಇತ್ತೀಚಿನ ಈವೆಂಟ್ ಗಳನ್ನು ತೋರಿಸುತ್ತದೆ. |
08:24 | ಇದನ್ನು ಮತ್ತೆ ಕಾನ್ ಫಿಗರ್ ಮಾಡುವ ಅಗತ್ಯವಿಲ್ಲ.ಇದನ್ನು ನಿಮಗ ಬೇಕಾದಲ್ಲಿ ಇರಿಸಿರಿ. ಇದು ಯಾವತ್ತೂ ಅಪ್ ಟು ಡೇಟ್ ಇರುತ್ತದೆ. |
08:33 | ಇದು ಪ್ರಕಾಶಿತ ದಿನಾಂಕದ ಕ್ರಮದಲ್ಲಿ ಈವೆಂಟ್ ಕಂಟೆಂಟ್ ಮಾದರಿಯನ್ನು ಬಳಸಿದ “ಬ್ಲಾಕ್ ವ್ಯೂವ್” ಗೆ ಉದಾಹರಣೆಯಾಗಿದೆ. |
08:42 | ಇದರೊಂದಿಗೆ ನಮ್ಮ ಟ್ಯುಟೋರಿಯಲ್ ಮುಕ್ತಾಯವಾಗುವುದು. |
08:46 | ಈ ಟ್ಯುಟೋರಿಯಲ್ ನಲ್ಲಿ ನಾವು: ವ್ಯೂಸ್,ಟೀಸರ್ ಗಳೊಂದಿಗೆ ಪುಟವನ್ನು ರಚಿಸುವುದನ್ನು ಮತ್ತು ಸರಳವಾದಬ್ಲಾಕ್ ವ್ಯೂವ್ ರಚಿಸುವುದನ್ನು ಕಲಿತಿದ್ದೇವೆ. |
09:01 | ಈ ವೀಡಿಯೋ Acquia (ಆಕ್ವಿಯಾ) ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ. |
09:12 | ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ. ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೊಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ. |
09:29 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ, NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ. |
09:42 | ಈ ಟ್ಯುಟೋರಿಯಲ್ ನ ಅನುವಾದಕ ಮಂಗಳೂರಿನಿಂದ ಪ್ರಜ್ವಲ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |