Drupal/C2/Configuration-Management-in-Admin-Interface/Kannada
From Script | Spoken-Tutorial
Revision as of 17:59, 14 October 2016 by PoojaMoolya (Talk | contribs)
Time | Narration |
00:01 | ದ್ರುಪಲ್ ನಲ್ಲಿ Configuration Management in Admin Interface ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನಾವು ಕೆಲವು ಮೆನ್ಯು ಅಂಶಗಳ ಬಗ್ಗೆ ಕಲಿಯಲಿದ್ದೇವೆ. ಅವುಗಳು - |
00:13 | Extend (ಎಕ್ಸ್ಟೆಂಡ್) |
00:15 | Configuration (ಕಾನ್ಫಿಗರೇಶನ್) |
00:16 | People (ಪೀಪಲ್) ಹಾಗೂ |
00:18 | Report (ರಿಪೋರ್ಟ್). |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು - Ubuntu Operating System, Drupal 8 ಮತ್ತು Firefox ವೆಬ್-ಬ್ರೌಸರ್ ಅನ್ನು ಉಪಯೋಗಿಸುತ್ತಿದ್ದೇನೆ. |
00:29 | ನೀವು ನಿಮಗಿಷ್ಟದ ಯಾವುದೇ ಬ್ರೌಸರ್ ಅನ್ನು ಉಪಯೋಗಿಸಬಹುದಾಗಿದೆ. |
00:34 | ನಾವೀಗ ಈಗಾಗಲೇ ರಚಿಸಿದ ನಮ್ಮ ವೆಬ್ಸೈಟ್ ಅನ್ನು ತೆರೆಯೋಣ. |
00:38 | ನಾವು ಈ ಮೊದಲೇ ತಿಳಿಸಿದಂತೆ, 'ದ್ರುಪಲ್' ಎಂಬುದು ಒಂದು ಫ್ರೇಮ್ ವರ್ಕ್ ಇದ್ದಂತೆ. ಹಾಗಾಗಿ, ಇದು ಹೆಚ್ಚೇನೂ ಮಾಡುವುದಿಲ್ಲ. |
00:45 | Administration ಟೂಲ್ ಬಾರ್ ನಲ್ಲಿರುವ Extend ಎಂಬ ಲಿಂಕ್ ನಮ್ಮ ಸೈಟ್ ಅನ್ನು ರಚಿಸಲು ಬಹಳ ಮುಖ್ಯವಾದದ್ದಾಗಿದೆ. |
00:53 | Extend ನ ಮೇಲೆ ಕ್ಲಿಕ್ ಮಾಡಿ. ಇದು ನಮ್ಮ ಸೈಟ್ ನಲ್ಲಿರುವ ಎಲ್ಲಾ Modules ಗಳ ಸಮೀಕ್ಷೆಯನ್ನು ನೀಡುತ್ತದೆ. |
01:00 | Modules ಗಳು ವೈಶಿಷ್ಟ್ಯಗಳಾಗಿವೆ. |
01:02 | ನಾವು ಅವುಗಳನ್ನು ಸವಿಸ್ತಾರವಾಗಿ ನಂತರ ಕಲಿಯೋಣ. |
01:06 | ಇದು 'ದ್ರುಪಲ್' ನ ಜೊತೆಗೆ ಬಂದ ಕೆಲವು Modules ಗಳ ಸೂಚಿಯಾಗಿದೆ. |
01:11 | ನಾವು ಕೇವಲ ಚೆಕ್ ಮಾರ್ಕ್ ಗಳನ್ನು ನೋಡುವುದರಿಂದ ಯಾವುದು ಸಕ್ರಿಯವಾಗಿದೆ ಯಾವುದು ಸಕ್ರಿಯವಾಗಿಲ್ಲ ಎಂಬುದನ್ನು ತಿಳಿಯಬಹುದು. |
01:18 | Extend ಮೆನ್ಯುವಿನಲ್ಲಿ ನಾವು ನಮ್ಮ ಡ್ರುಪಲ್ ಸೈಟ್ ನಲ್ಲಿ ಸಕ್ರಿಯವಿರುವ ಎಲ್ಲಾ ಮೊಡ್ಯೂಲ್ ಗಳನ್ನು, ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ. |
01:26 | ನಾವು ಮುಂದೆ ಹಲವು ಮೊಡ್ಯೂಲ್ ಗಳನ್ನು ನಮ್ಮ ಸೈಟ್ ಗೆ ಸೇರಿಸುವವರಿದ್ದೇವೆ. |
01:32 | ನಾವೀಗ Configuration ಮೆನ್ಯುವಿನತ್ತ ನೋಡೋಣ. ಕೇವಲ site administrator ಗಳು ಈ ಮೆನ್ಯುವನ್ನು ನಿರ್ವಹಿಸಬಹುದಾಗಿದೆ. |
01:41 | ಏಕೆಂದರೆ, ನಾವು ಸೂಪರ್ ಯೂಸರ್ ಗಳು ಅಥವಾ user number 1 ಗಳಾಗಿದ್ದು ನಮ್ಮಲ್ಲಿ ಎಲ್ಲಾ ತರಹದ ಅನುಮತಿಗಳೂ ಇರುತ್ತವೆ. |
01:47 | ಸ್ಕ್ರೀನ್ ಮೇಲೆ ಒಂದು ಕೆಂಪು ಬಣ್ಣದ ಪಾಪ್-ಅಪ್ ಇರುವುದನ್ನು ಗಮನಿಸಿ. |
01:51 | ನೀವು ನಿಮ್ಮ ಸ್ಕ್ರೀನ್ ನಲ್ಲಿ ಇದನ್ನು ನೋಡಬಹುದು, ನೋಡದೇ ಕೂಡಾ ಇರಬಹುದು. |
01:54 | ಇದು, “status report ಎಂಬುದು ರನ್ ಆಗಲಿಲ್ಲ ಹಾಗಾಗಿ ದಯವಿಟ್ಟು ನಿಮ್ಮ 'ದ್ರುಪಲ್' ಸೈಟ್ ಅಪ್-ಟು-ಡೇಟ್ ಆಗಿದೆಯೇ ಎಂದು ಪರಿಶೀಲಿಸಿ” ಎಂದು ಹೇಳುತ್ತಿದೆ. |
02:03 | ಸದ್ಯಕ್ಕೆ ನಾನಿದನ್ನು ಕಡೆಗಣಿಸುತ್ತಿದ್ದೇನೆ ಹಾಗೂ ನಾವು Reports ಸ್ಕ್ರೀನ್ ಗೆ ಬಂದಾಗ ಅದರ ಬಗ್ಗೆ ಯೋಚಿಸೋಣ. |
02:09 | ಈ ನಿರ್ದಿಷ್ಟವಾದ ಮೆನ್ಯು ನಮಗೆ ನಮ್ಮ ಸೈಟ್ ನಲ್ಲಿನ ಎಲ್ಲಾ ವಿವಿಧ ಅಂಶಗಳನ್ನು ಸಂರಚಿಸಲು ಅನುಮತಿಸುತ್ತದೆ. |
02:16 | ಉದಾಹರಣೆಗೆ, Site information, Account settings, Text formats and editors, Performance issues, Maintenance mode, Image styles ಇತ್ಯಾದಿಗಳು. |
02:30 | ನಾವು ಇದರ ಬಗ್ಗೆ ವಿಸ್ತೃತವಾಗಿ ಮುಂದೆ ಕಲಿಯೋಣ. |
02:35 | ಆದರೆ, ನಾವೀಗ ನಮ್ಮ ಸೈಟ್ ನ ಮಾಹಿತಿಯನ್ನು ಅಪ್ಡೇಟ್ ಮಾಡೋಣ. |
02:39 | Site information ಎಂಬಲ್ಲಿ ಕ್ಲಿಕ್ ಮಾಡಿ ಹಾಗೂ ನಮ್ಮ ಸೈಟ್ ನ ಹೆಸರನ್ನು Drupalville (ಡ್ರುಪಲ್ ವಿಲ್) ಎಂದು ಬದಲಾಯಿಸೋಣ ಹಾಗೂ Slogan ಎಂಬಲ್ಲಿ "A Great Place to Learn All About Drupal" ಎಂದು ಟೈಪ್ ಮಾಡಿ. |
02:53 | ನಾವು ಯಾವಾಗ ಈ ತರಹದ ಬದಲಾವಣೆಗಳನ್ನು ಮಾಡುತ್ತೇವೆಯೋ ಆಗೆಲ್ಲಾ ಸಂಪೂರ್ಣ ಸೈಟ್ ಬದಲಾಗುತ್ತದೆ. |
02:58 | ಇದು content management systems ನ ಬಗೆಗಿನ ಪ್ರಮುಖ ಅಂಶಗಳಲ್ಲೊಂದಾಗಿದೆ. |
03:04 | ಹಾಗಾಗಿ, ಈಗ ನಮ್ಮ ಸೈಟ್ ನಲ್ಲಿ ಒಂದು ಪೇಜ್ ಇರಲಿ ಅಥವಾ ಸಾವಿರವಿರಲಿ, ಪ್ರತಿಯೊಂದು ಪೇಜ್ ನಲ್ಲಿನ ಸೈಟ್ ನ ಹೆಸರು Drupalville ಎಂದು ಬದಲಾಗಿರುತ್ತದೆ. |
03:16 | static HTML ನಲ್ಲಿ ಇದೊಂದು ಬಹಳ ಮಹತ್ವಪೂರ್ಣವಾದ ಬೆಳವಣಿಗೆಯಾಗಿದೆ. |
03:21 | ಈ ಪೇಜ್ ನಲ್ಲಿ ನಮಗೆ ಈಮೈಲ್ ಅಡ್ರೆಸ್ಸ್ ಕೂಡಾ ಇದೆ. ತಂತಾನೇ ಕಳುಹಿಸಲ್ಪಡುವ ಈಮೈಲ್ ಗಳು ಇದರ ಮೂಲಕವೇ ಹೋಗುತ್ತದೆ. |
03:29 | ನಾವು ವಿವಿಧ ಮುಖಪುಟಗಳನ್ನು ಹಾಗೂ ಡೀಫಾಲ್ಟ್ 403 ಮತ್ತು 404 ಪೇಜ್ ಗಳನ್ನು ಆಯ್ಕೆ ಮಾಡಬಹುದು. |
03:37 | ಡ್ರುಪಲ್ ನಲ್ಲಿ ಪ್ರತಿಯೊಂದು ಪೇಜ್ ಕೂಡಾ ಒಂದು ವೆಬ್ ರೂಪವಾಗಿದೆ ಎಂಬುದನ್ನು ಮರೆಯದಿರಿ. |
03:41 | ಹಾಗಾಗಿ, ಪ್ರತಿ ಬಾರಿಯೂ ನಮ್ಮ ಡ್ರುಪಲ್ ಪೇಜ್ ನಲ್ಲಿ ಬದಲಾಣೆಯನ್ನು ಮಾಡಿದಾಗ ನಾವು Submit ಅಥವಾ Save' ಅನ್ನು ಒತ್ತಲೇ ಬೇಕು. |
03:49 | ನಾವೀಗ ಕೆಳಗಿರುವ Save configuration ಎಂಬ ಬಟನ್ ಅನ್ನು ಒತ್ತೋಣ. |
03:54 | ನಂತರ, Back to site ನ ಮೇಲೆ ಕ್ಲಿಕ್ ಮಾಡಿ. |
03:58 | ಗಮನಿಸಿ, ನಮ್ಮ ಸೈಟ್ ನ ಹೆಸರು ಈಗ "Drupalville" ಎಂದಾಗಿದೆ ಹಾಗೂ ನಾವು ಸೈಟ್ ನ ಪ್ರತಿಯೊಂದು ಪೇಜ್ ನಲ್ಲೂ ಸ್ಲೋಗನ್ ಅನ್ನು ಹೊಂದಿದ್ದೇವೆ. |
04:06 | ಮುಂದಿನ ಟ್ಯುಟೋರಿಯಲ್ ಗಳಲ್ಲಿ Configuration ಮೆನ್ಯುವಿನ ಬಗ್ಗೆ ವಿಸ್ತಾರವಾಗಿ ತಿಳಿಯೋಣ. |
04:12 | ನಾವೀಗ Administration ಟೂಲ್ ಬಾರ್ ನಲ್ಲಿ People ಎನ್ನುವುದರ ಮೇಲೆ ಕ್ಲಿಕ್ ಮಾಡೋಣ. |
04:16 | ಇದರಿಂದ ಡ್ರುಪಲ್ ನ ಸೈಟ್ ನ People ಎಂಬ ಪೇಜ್ ಒಪನ್ ಆಗುತ್ತದೆ. |
04:20 | ನೀವಿಲ್ಲಿ List, Permissions ಹಾಗೂ Roles ಎಂಬ ಟ್ಯಾಬ್ ಗಳನ್ನು ನೋಡಬಹುದು. |
04:26 | ಇದು ಕೇವಲ ಪರಿಚಯವಾಗಿದ್ದು ವಿಸ್ತಾರವಾಗಿ ಮುಂದಿನ ಟ್ಯುಟೋರಿಯಲ್ ಗಳಲ್ಲಿ ತಿಳಿಯೋಣ. |
04:32 | Roles ಎಂಬ ವಿಭಾಗದಲ್ಲಿ ನಾವು ಯೂಸರ್ ಅಕೌಂಟ್ ಗಳನ್ನು ರಚಿಸಬಹುದು ಹಾಗೂ ಸೈಟ್ ನಲ್ಲಿ ಜನರು ಏನನ್ನು ನೋಡಬಹುದು ಹಾಗೂ ಏನನ್ನು ಮಾಡಬಹುದು ಎಂಬುದರ ನಿರ್ವಹಣೆಯನ್ನೂ ಮಾಡಬಹುದು. |
04:44 | "admin" ಎಂಬ ಯೂಸರ್ ನೇಮ್ ಇಲ್ಲಿದೆ. |
04:47 | ನಾವು Edit ಎಂಬಲ್ಲಿ ಕ್ಲಿಕ್ ಮಾಡಿದರೆ ನಮ್ಮ ಅಕೌಂಟ್ ನ ಎಲ್ಲಾ ಮಾಹಿತಿಯನ್ನು ನೋಡಬಹುದು. |
04:54 | ನಾವು ನಮ್ಮ ಪಾಸ್ವರ್ಡ್ ಅನ್ನೂ ಬದಲಿಸಬಹುದು. |
04:59 | ನಮ್ಮ ಪಾಸ್ವರ್ಡ್ ಗೊತ್ತಿಲ್ಲದಿದ್ದರೆ ಅದನ್ನು reset ಮಾಡಬಹುದು. ಇಲ್ಲಿ ನಮಗೆ ನಮ್ಮದು Administrator ರೋಲ್ ಎಂಬುದನ್ನು ಹೇಳುತ್ತಿದೆ. |
05:09 | ನನ್ನ status, Active ಆಗಿದೆ ಹಾಗೂ ನಮ್ಮಲ್ಲಿ ನಮ್ಮದೇ ಆದ Personal contact form ಹಾಗೂ ನಮ್ಮ LOCATION SETTINGS ಇವೆ. |
05:21 | Picture ನ ಕೆಳಗಿರುವ Browse ಬಟನ್ ಅನ್ನು ಒತ್ತುವುದರ ಮೂಲಕ ನಾವು ನಮ್ಮದೇ ಆದ ಚಿತ್ರಗಳನ್ನು ಅಪ್ಡೇಟ್ ಮಾಡಬಹುದು ಹಾಗೂ ಸೇರಿಸಬಹುದು. |
05:29 | ಹೀಗಿರುವಾಗ, ಸಾಮಾನ್ಯವಾಗಿ ನಮ್ಮ ಪ್ರೊಫೈಲ್ ಅನ್ನು ನಾವೇ ನಿರ್ವಹಿಸಿಕೊಳ್ಳಬಹುದಾಗಿದೆ. ಈಗ Save ಎಂಬುದರ ಮೇಲೆ ಕ್ಲಿಕ್ ಮಾಡಿ. |
05:37 | ಸಂಕ್ಷೇಪವಾಗಿ ಹೇಳುವುದಾದರೆ - Roles ಟ್ಯಾಬ್ ನ ಮೂಲಕ ನಾವು ವಿವಿಧ ರೋಲ್ ಗಳನ್ನು ಸೇರಿಸಬಹುದು. |
05:42 | Permissions ಟ್ಯಾಬ್ ನ ಮೂಲಕ ನಾವು ಆ ರೋಲ್ ಗಳಿಗೆ ನಿರ್ದಿಷ್ಟವಾದ ಅನುಮತಿಗಳನ್ನು ಕೊಡಬಹುದು. |
05:48 | ಹಾಗೂ, List ಟ್ಯಾಬ್ ನ ಮೂಲಕ ನಾವು ಆ ರೋಲ್ ಗಳಿಗೆ ಯೂಸರ್ ಗಳನ್ನು ಕೊಡಬಹುದು. |
05:54 | ಅವರು ನಿರ್ದಿಷ್ಟ ಅನುಮತಿಗಳನ್ನು ಪಡೆಯುತ್ತಾರೆ, ಅದರಿಂದಾಗಿ ಅವರು ನಮ್ಮ ಡ್ರುಪಲ್ ಸೈಟ್ ನಲ್ಲಿ ನಿರ್ದಿಷ್ಟ ಕೆಲಸಗಳನ್ನು ಮಾಡುತ್ತಾರೆ ಹಾಗೂ ನಿರ್ದಿಷ್ಟ ಅಂಶಗಳನ್ನು ನೋಡುತ್ತಾರೆ. |
06:04 | ನಮ್ಮ ಡ್ರುಪಲ್ ಸೈಟ್ ನಲ್ಲಿನ ಎಲ್ಲಾ ಯೂಸರ್ ಗಳನ್ನು ನಾವು People ನ ಮೂಲಕ ನಿರ್ವಹಿಸುತ್ತೇವೆ. |
06:10 | Administration ಟೂಲ್ ಬಾರ್ ನಲ್ಲಿ ಕೊನೆಯಲ್ಲಿ ಸಿಗುವ ಅಂಶವೆಂದರೆ Reports. |
06:16 | Reports ಮೇಲೆ ಕ್ಲಿಕ್ ಮಾಡಿ. |
06:18 | ಇದು ನಮ್ಮ ಡ್ರುಪಲ್ ಸೈಟ್ ನ ಬಗ್ಗೆ ತಿಳಿಯಲೇ ಬೇಕಾದ ಕೆಲವು ಮುಖ್ಯವಾದ ಅಂಶಗಳ ಸೂಚಿಯನ್ನು ತೋರಿಸುತ್ತದೆ. |
06:25 | ಉದಾಹರಣೆಗಾಗಿ – ಏನಾದರೂ ಅಪ್ಡೇಟ್ ಗಳಿದ್ದಾವೆಯೇ? |
06:28 | Recent log message ಗಳು, |
06:31 | ಎಲ್ಲಾ field ಗಳ ಹಾಗೂ ಎಲ್ಲಾ entity type ಗಳ ಸೂಚಿ, |
06:36 | Status reports, |
06:37 | ಮುಖ್ಯವಾದ “access denied” ಹಾಗೂ "Page not found” errors, |
06:42 | Top search phrases ಹಾಗೂ ಕೆಲವು ಉಪಯುಕ್ತ plugin ಗಳು. |
06:49 | Available updates ನ ಮೇಲೆ ಕ್ಲಿಕ್ ಮಾಡಿ. ಇಲ್ಲಿ, ಯಾವೆಲ್ಲಾ ಅಂಶಗಳು ಅಪ್ಡೇಟ್ ಆಗಬೇಕಿವೆಯೋ ಅವುಗಳ ಸೂಚಿಯು ಕಾಣಸಿಗುತ್ತದೆ. |
06:58 | ಇಲ್ಲಿ ನಾವು ಕೊನೆಯ ಅಪ್ಡೇಟ್ 48 ನಿಮಿಷಗಳ ಹಿಂದೆ ಆಗಿತ್ತೆಂದೂ ನೋಡಬಹುದು. |
07:04 | ಇದನ್ನು Cron ಎಂಬುದು ನಿರ್ವಹಿಸುತ್ತದೆ ಹಾಗೂ ಇದನ್ನು ನಮ್ಮ ಸರ್ವರ್ ನಲ್ಲಿ ಸೆಟ್ ಅಪ್ ಮಾಡಬೇಕಾಗುತ್ತದೆ. |
07:10 | ಸದ್ಯಕ್ಕೆ, Check manually ಎಂಬಲ್ಲಿ ಕ್ಲಿಕ್ ಮಾಡಿ. |
07:15 | 'ದ್ರುಪಲ್' ಎಂಬುದು ಈಗ ನಾವು ಇನ್ಸ್ಟಾಲ್ ಮಾಡಿದ ಎಲ್ಲಾ ಅಂಶಗಳನ್ನೂ ಪರಿಶೀಲಿಸಿ ನಾವು ಅಪ್ಡೆಟ್ ಇದ್ದೇವೆಯೇ ಇಲ್ಲವೇ ಎಂಬುದನ್ನು ತಿಳಿಸುತ್ತದೆ. |
07:24 | ನಾವೆಲ್ಲಾದರೂ ನಮ್ಮ ಸೈಟ್ ಗೆ ಇನ್ನೂ ಹೆಚ್ಚು Module ಗಳನ್ನು ಅಥವಾ ವೈಶಿಷ್ಟ್ಯಗಳನ್ನು ಸೇರಿಸಿದ್ದರೆ ಸೂಚಿಯು ಇನ್ನೂ ದೊಡ್ಡದಾಗಿರುತ್ತಿತ್ತು. |
07:32 | ಮುಂದುವರೆದಂತೆ ನಾವು ಇದನ್ನು ಪುನಃ ಪರಿಶೀಲಿಸೋಣ. |
07:37 | ನಮ್ಮ ಸೈಟ್ ನ Status report ಅನ್ನು ಪಡೆಯಲು Reports ನ ಮೇಲೆ ಕ್ಲಿಕ್ ಮಾಡಿ. |
07:42 | ಉದಾಹರಣೆಗಾಗಿ, ನಾವು ಡ್ರುಪಲ್ ನ ಯಾವ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ, Cron ಎಂಬುದು ಕೊನೆಯ ಬಾರಿ ಯಾವಾಗ run ಆಗಿತ್ತು...., |
07:49 | ನಮ್ಮ Database system, Database version ಇತ್ಯಾದಿಗಳು. |
07:55 | ಇಲ್ಲಿ ನಾವು Cron ಅನ್ನು ಹೊರಗಿನಿಂದ ರನ್ ಮಾಡಲು ಬೇಕಾದ ಲಿಂಕ್ ಅನ್ನು ನೋಡಬಹುದು. |
08:00 | ಯಾವಾಗಲೂ ನೀವು ನಿಮ್ಮ ಸೈಟ್ ನ Reports ವಿಭಾಗದ ಮೇಲೆ ಹದ್ದುಗಣ್ಣನ್ನು ಇಟ್ಟಿರಬೇಕು. |
08:05 | ವಿಶೇಷವಾಗಿ, ಡ್ರುಪಲ್ ನ ಹಾಗೂ ಡೌನ್ಲೋಡ್ ಮಾಡಿದ ಮೋಡ್ಯೂಲ್ ಗಳ ಅಪ್ಡೇಟ್ ನ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗಿದ್ದಾಗ. |
08:14 | ಕೊನೆಯಲ್ಲಿ ಕಾಣುವುದು Help ಹಾಗೂ ಇಲ್ಲಿ ನಮಗೆ ನಮ್ಮ ಸೈಟ್ ನ help page ನ ಲಿಂಕ್ ಸಿಗುತ್ತದೆ. |
08:22 | ಇವಿಷ್ಟು ನಮ್ಮ Administration Toolbar ನ ವಿವರಣೆ. |
08:26 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗ ಬಂದಿದ್ದೇವೆ. ಒಟ್ಟಿನಲ್ಲಿ, |
08:32 | ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಮೆನ್ಯು ಅಂಶಗಳನ್ನು ಕಲಿತೆವು - Extend, Configuration,People ಹಾಗೂ Report. |
08:52 | ಈ ವೀಡಿಯೋ Acquia (ಆಕ್ವಿಯಾ) ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ. |
09:03 | ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ. |
09:11 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ. |
09:19 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ, NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ. |
09:32 | ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು. |