Drupal/C2/Creating-Dummy-Content/Kannada

From Script | Spoken-Tutorial
Revision as of 11:38, 28 September 2016 by Sandhya.np14 (Talk | contribs)

Jump to: navigation, search
Time Narration
00:01 'ಡಮ್ಮಿ ಕಂಟೆಂಟ್' ಗಳನ್ನು ಉತ್ಪಾದಿಸುವ ಬಗೆಗಿನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು “ಡೆವಿಲ್ ಮೋಡ್ಯುಲ್” ಅನ್ನು ಬಳಸಿ ನಕಲಿ ವಿಷಯಗಳನ್ನು (ಡಮ್ಮಿ ಕಂಟೆಂಟ್ ಗಳನ್ನು) ರಚಿಸುವುದನ್ನು ಕಲಿಯೋಣ.
00:12 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
  • ಉಬಂಟು ಆಪರೇಟಿಂಗ್ ಸಿಸ್ಟಮ್
  • ಡ್ರುಪಲ್ 8 ಮತ್ತು
  • ಫೈರ್ ಫಾಕ್ಸ್ ವೆಬ್ ಬ್ರೌಸರ್ ಅನ್ನು ಬಳಸುತಿದ್ದೇನೆ.

ನೀವು ನಿಮ್ಮ ಅನುಕೂಲತೆಗೆ ತಕ್ಕಂತೆ ಯಾವುದೇ ವೆಬ್ ಬ್ರೌಸರ್ ಅನ್ನು ಬಳಸಬಹುದು.

00:25 ನಾವು ಡ್ರುಪಲ್ ಸೈಟ್ ಅನ್ನು ರಚಿಸಬೇಕಾದರೆ ನಮಗೆ ಸಾಕಷ್ಟು ವಿಷಯಗಳು (ಕಂಟೆಂಟ್ ಗಳು) ಅನಿವಾರ್ಯವಾಗಿವೆ. ಇದು ನಮಗೆ 'ಲೇಯೌಟ್, ವ್ಯೂ' ಮತ್ತು 'ಡಿಸೈನ್' ಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
00:36 ಆದರೆ ಇಲ್ಲಿ ನಾವು ರಿಯಲ್ ಕಂಟೆಂಟ್ ಅನ್ನು ಬಳಸಬಾರದು. ನಾವು ಕಂಟೆಂಟ್ ಟೈಪ್ ಅನ್ನು ಅಥವಾ ಒಂದು ಫೀಲ್ಡ್ ಅನ್ನು ಬದಲಿಸಬೇಕೆಂದು ಇಟ್ಟುಕೊಳ್ಳೋಣ.
00:44 ಆಗ ನಾವು ಪುನಃ ಒಳ ಹೋಗಿ ರಿಯಲ್ ಕಂಟೆಂಟ್ ಅನ್ನು ಬದಲಿಸಬೇಕಾದೀತು. ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುವುದು.
00:50 ಆದರೆ ಮುಖ್ಯವಾಗಿ ನಾವು ನಮ್ಮ ಕಂಟೆಂಟ್ ಟೈಪ್ ಅನ್ನು ಪರೀಕ್ಷಿಸಿ, ಅವುಗಳು ನಮ್ಮ ಅಪೇಕ್ಷೆಗೆ ತಕ್ಕಂತೆ ಕಾರ್ಯನಿವಹಿಸುತ್ತಿವೆಯೇ ಎಂದು ದೃಢಪಡಿಸಿಕೊಳ್ಳಬೇಕು.
00:57 ಇದುವರೆಗೆ ನಾವು ಕೆಲವು ಫೈಲ್ ಫೀಲ್ಡ್ ಗಳನ್ನು ಮಾತ್ರ ಗಮನಿಸಿದ್ದೇವೆ.
01:01 ನಮ್ಮ 'Cincinnati node' ಅನ್ನು ತೆಗೆದುಕೊಳ್ಳೋಣ. 'Cincinnati group' ತಮ್ಮ ಸಭೆಗೆ ಇಂತಿಷ್ಟು ಶುಲ್ಕವನ್ನು ನಿಗದಿಪಡಿಸಲು ಬಯಸುತ್ತದೆ
01:07 ಮತ್ತು ಇದನ್ನು ಅವರು ತಮ್ಮ “ಸೈಟ್” ನಲ್ಲಿ ತೋರ್ಪಡಿಸಲು ಬಯಸುತ್ತಾರೆ.
01:10 ಶುಲ್ಕವನ್ನು ನಾವು ದಶಾಂಶ ಅಥವಾ ಪೂರ್ಣಾಂಕ ಪದ್ಧತಿಯಲ್ಲಿ ತೋರ್ಪಡಿಸಬಹುದು.
01:15 ಅವರು ೧೦ ಡಾಲರ್ ಅನ್ನು ಶುಲ್ಕವಾಗಿ ನಿಗದಿಪಡಿಸಿರುವಾಗ, ನೀವು ಪೂರ್ಣಾಂಕ ಪದ್ಧತಿಯನ್ನು ಆಯ್ಕೆ ಮಾಡುವಿರಿ. ಆದರೆ ನಂತರದಲ್ಲಿ ಅವರು ಶುಲ್ಕವನ್ನು 10.99 ಡಾಲರ್ಸ್ ಎಂದು ಬದಲಿಸುತ್ತಾರೆ.
01:24 ಈಗ, ನಾವು ಸಂಕಷ್ಟದಲ್ಲಿ ಸಿಲುಕಿಕೊಂಡೆವು.
01:26 ಪೂರ್ಣಾಂಕವನ್ನು ದಶಾಂಶ ಸಂಖ್ಯೆಯನ್ನಾಗಿಸಲು ಸಾಧ್ಯವಿಲ್ಲ. ವಿಶೇಷವಾಗಿ ವಿಷಯಗಳನ್ನು (ಕಂಟೆಂಟ್) ಸೇರಿಸಿದ ನಂತರದಲ್ಲಿ ಅದು ಅಸಾಧ್ಯ.
01:32 ಹಾಗಾಗಿ ಈ ಎಲ್ಲಾ ಸಂಗತಿಗಳ ಬಗ್ಗೆ ಮೊದಲೇ ಯೋಜನೆಯನ್ನು ಮಾಡಿಕೊಳ್ಳುವುದು ಅನಿವಾರ್ಯ.
01:37 ಈ ಎಲ್ಲಾ ಸಂಗತಿಗಳನ್ನು ನಾವು ನಕಲಿ ವಿಷಯಗಳನ್ನು (ಕಂಟೆಂಟ್ ಗಳನ್ನು) ಬಳಸಿ ಪರೀಕ್ಷಿಸಬಹುದು. ನಮ್ಮ ಪರೀಕ್ಷೆ ಸಮಾಪ್ತಿಯಾದಾಗ ಇವುಗಳನ್ನು ಸುಲಭವಾಗಿ ಸೇರಿಸಬಹುದು ಮತ್ತು ಅಳಿಸಬಹುದಾಗಿದೆ.
01:48 ನಮಗೆ ಪರೀಕ್ಷೆಗಾಗಿ ನೂರಾರು ನಿಜವಾದ ವಿಷಯಗಳ (ಕಂಟೆಂಟ್ ಗಳ) ಅಗತ್ಯವಿಲ್ಲ, ಕೆಲವೇ ನಕಲಿ ವಿಷಯಗಳು ಸಾಕಾಗುತ್ತವೆ.
01:54 ಈ ಸಮಸ್ಯೆಗೆ ಪರಿಹಾರವೆಂದರೆ 'ಡೆವಿಲ್ ಮೊಡ್ಯುಲ್'. ' drupal.org/project/devel' ಯನ್ನು ಪ್ರವೇಶಿಸಿರಿ.
02:02 ಇಲ್ಲಿಯವರೆಗೆ ನಾವು ಮೊಡ್ಯುಲ್ಸ್ ಗಳ ಬಗ್ಗೆ ಚರ್ಚಿಸಲಿಲ್ಲ ಅಥವಾ ನಮ್ಮ ಡ್ರುಪಲ್ ವೆಬ್ ಸೈಟ್ ಗಳನ್ನು ವಿಸ್ತರಿಸಲೂ ಇಲ್ಲ. ಆ ವಿಷಯವನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ತಿಳಿಯೋಣ.
02:11 ಆದರೆ ನಾವಿಲ್ಲಿ “ಡೆವೆಲ್ ಮೋಡ್ಯೂಲ್” ಗಳನ್ನು ಇನ್ಸ್ಟಾಲ್ ಮಾಡುವುದನ್ನು ಮತ್ತು ಬಳಸುವುದನ್ನು ತಿಳಿಯೋಣ. ಇದರಿಂದ ಡ್ರುಪೆಲ್ ಮೊಡ್ಯೂಲ್ಸ್ ನಮಗೆ ನೀಡಬಹುದಾದ ಅವಕಾಶಗಳ ಬಗ್ಗೆ ತಿಳಿಯಬಹುದಾಗಿದೆ.
02:21 ನಿಮ್ಮ ಸ್ಕ್ರೀನ್ ನ ಕೆಳಭಾಗದಲ್ಲಿನ Download ವಿಭಾಗವನ್ನು ಗುರುತಿಸಿ. ಇದು ನಿಮಗೆ ವಿಭಿನ್ನವಾಗಿ ಕಾಣಬಹುದು.
02:28 'Drupal 8 dot x' ಎನ್ನುವುದು ಮೇಲಿನ ಹಸಿರು ವಲಯದಲ್ಲಿ ಇರಬಹುದು. ಅದನ್ನು ಕ್ಲಿಕ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.
02:34 ಇಲ್ಲವಾದಲ್ಲಿ, 'Development releases' ಅನ್ನು ಕ್ಲಿಕ್ ಮಾಡಿ.
02:38 ಈಗ, ಇದನ್ನು ಎರಡು ರೀತಿಯಲ್ಲಿ ಮಾಡಬಹುದಾಗಿದೆ. ಇದನ್ನು ನಾವು ಡೌನ್ಲೋಡ್ ಮಾಡಬಹುದು. ಆದರೆ, ಇದರಿಂದ ನಮ್ಮ ಡೆಸ್ಕ್ಟಾಪ್ ಗೆ ಅನಗತ್ಯ ಫೈಲ್ಗಳು ಬಂದು ಸೇರುತ್ತವೆ.
02:44 ಅಥವಾ, ರೈಟ್ ಕ್ಲಿಕ್ ಮಾಡಬಹುದು. ಅಲ್ಲಿ ನಮ್ಮ ಬ್ರೌಸರ್ ಗೆ ಅನುಗುಣವಾಗಿ 'Copy Link' ಅಥವಾ 'Copy Link Location' ಆಯ್ಕೆಗಳನ್ನು ಗಮನಿಸಬಹುದು.
02:53 ಯಾವುದಾದರೊಂದು ರೀತಿಯಲ್ಲಿ ಟಾರ್(.tar) ಫೈಲ್ ಅಥವಾ ಝಿಪ್(.zip) ಫೈಲ್ ಗಳನ್ನು ಕ್ಲಿಕ್ ಮಾಡಿ. ಆದರೆ

'dev' ಫೈಲ್ ಅನ್ನು ಕ್ಲಿಕ್ ಮಾಡಬೇಡಿ. ಅದು ಕಾರ್ಯ ನಿರ್ವಹಿಸುವುದಿಲ್ಲ.

03:01 ನಿಜವಾದ ಫೈಲ್ ಗಳಿಗೆ ಇವುಗಳು ಲಿಂಕ್ ಗಳಾಗಿವೆ.
03:04 ಅದನ್ನು ಪಡೆದ ಮೇಲೆ ನಮ್ಮ ಸೈಟ್ ಗೆ ವಾಪಸ್ ಬಂದು 'Extend' ಅನ್ನು ಕ್ಲಿಕ್ಕಿಸಿ, ನಂತರ 'Install new module' ಅನ್ನು ಕ್ಲಿಕ್ ಮಾಡಿ.
03:11 ಈಗ 'Install from a URL' ಕ್ಷೇತ್ರದಲ್ಲಿ URL ಅನ್ನು ಪೇಸ್ಟ್ ಮಾಡಿ. ನಿಮ್ಮಲ್ಲಿ ಉತ್ತಮ ಅಂತರ್ಜಾಲ ಸಂಪರ್ಕವಿದ್ದರೆ URL ನಿಂದಲೇ ಇನ್ಸ್ಟಾಲ್ ಮಾಡಬಹುದು.
03:22 ನಿಮ್ಮ ಅನುಕೂಲಕ್ಕಾಗಿ 'Code Files' ಲಿಂಕ್ ಗಳ ಮೂಲಕ 'ಡೆವೆಲ್' ಪ್ಯಾಕೇಜ್ ಅನ್ನು ಈ ಪೇಜ್ ನಲ್ಲಿ ನೀಡಲಾಗಿದೆ.
03:31 ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿರಿ ಮತ್ ತುಇಲ್ಲಿರುವ 'Choose File' ಆಯ್ಕೆಯಲ್ಲಿ ಅದನ್ನು ಅಪ್ಲೋಡ್ ಮಾಡಿರಿ. ಕೊನೆಯದಾಗಿ, 'Install' ಅನ್ನು ಕ್ಲಿಕ್ ಮಾಡಿ.
03:41 ಈಗ, 'Enable newly added modules' ಅನ್ನು ಕ್ಲಿಕ್ ಮಾಡಿ.
03:45 ಮಿನಿಮೈಸ್ ಮಾಡಲು 'CORE' ಎಂಬ ಶಬ್ದದ ಮೇಲೆ ಕ್ಲಿಕ್ ಮಾಡಿ. ಪರದೆಯನ್ನು ಕೆಳಗೆ ಸರಿಸಿ.
03:50 'DEVELOPMENT' ವಿಭಾಗದ ಕೆಳಗೆ, ನಾವು 'Devel' ಮತ್ತು ' Devel generate' ಗಳನ್ನು ಕಾಣಬಹುದು. ಸಧ್ಯಕ್ಕೆ ಉಳಿದವುಗಳನ್ನು ಪರಿಗಣಿಸದಿರಿ.
03:57 'Devel' ಮತ್ತು 'Devel generate' ಗಳನ್ನು ಗುರುತಿಸಿರಿ (ಚೆಕ್ ಮಾರ್ಕ್). ಪರದೆಯ ಕೆಳಭಾಗಕ್ಕೆ ಹೋಗಿ 'Install' ಅನ್ನು ಕ್ಲಿಕ್ ಮಾಡಿ.
04:05 'ಡ್ರುಪೆಲ್' ನಲ್ಲಿ ಸದಾ 'Save, Install' ಮುಂತಾದವುಗಳನ್ನು ಕ್ಲಿಕ್ ಮಾಡುವುದನ್ನು ಮರೆಯದಿರಿ.
04:12 "2 modules have been enabled" ಎನ್ನುವ ಸಂದೇಶ ಇಲ್ಲಿ ಹಸಿರು ಬಣ್ಣದಲ್ಲಿ ನಮಗೆ ಕಾಣಬೇಕು.
04:17 ಕೆಂಪು ಬಣ್ಣದಲ್ಲಿ ಕಾಣುವ ಎಚ್ಚರಿಕೆ ಸಂದೇಶ ಗಂಭೀರವಾಗಿರದಿದ್ದರೆ, ಅದರ ಬಗ್ಗೆ ಚಿಂತಿಸದಿರಿ.
04:23 ಈ ಎಲ್ಲಾ ವಿಷಯಗಳ ಸಮೂಹಕ್ಕೆ ಚಾಲನೆ ಕೊಡಲು ' Configuration' ಅನ್ನು ಕ್ಲಿಕ್ ಮಾಡಿ. ನಂತರ ಎಡ ಪಾರ್ಶ್ವದಲ್ಲಿ ಕಾಣುವ 'Generate content' ಲಿಂಕ್ ಅನ್ನು ಕ್ಲಿಕ್ ಮಾಡಿ.
04:34 ಈಗ, ನಾವು ನಮ್ಮ ಪರೀಕ್ಷೆಗೆ ಬೇಕಾದಷ್ಟು ವಿಷಯಗಳನ್ನು (ಕಂಟೆಂಟ್) ಉತ್ಪಾದಿಸಿಕೊಳ್ಳಬಹುದು.
04:41 'Events' ಮತ್ತು 'User Groups' ಗಳನ್ನು ಆಯ್ಕೆ ಮಾಡಿ. ಯಾಕೆಂದರೆ ಇವುಗಳು ನಾವು ಪರೀಕ್ಷಿಸಬೇಕಾದ ಎರಡು ವಿಷಯದ ಮಾದರಿಗಳು (ಕಂಟೆಂಟ್ ಟೈಪ್ಸ್).
04:47 "Delete all content in these content types before generating new content" ಎನ್ನುವುದನ್ನು ಇಲ್ಲಿ ಕಾಣಬಹುದು. ಇದರ ಮೂಲಕ ನಕಲಿ ವಿಷಯಗಳನ್ನು ಡಿಲೀಟ್ ಮಾಡಬಹುದಾಗಿದೆ.
04:56 ಅದನ್ನು ಗುರುತಿಸಿರಿ (ಚೆಕ್ ಮಾರ್ಕ್) ಹಾಗು 0 (ಸೊನ್ನೆ) ನೋಡ್ ಗಳು ಎಂದು ಆಯ್ಕೆ ಮಾಡಿ. ಈ ಪ್ರಕ್ರಿಯೆ ಎಲ್ಲಾ 'ಈವೆಂಟ್ಸ್' ಮತ್ತು 'ಯೂಸರ್ ಗ್ರೂಪ್ಸ್' ಗಳನ್ನು ಡಿಲೀಟ್ ಮಾಡುತ್ತದೆ.
05:05 ಅದರಲ್ಲಿ ನಾವು ಹಿಂದೆ ರಚಿಸಿರುವವುಗಳು ಕೂಡ ಒಳಗೊಳ್ಳುತ್ತವೆ. ಉದಾಹರಣೆಗಾಗಿ- ನಮ್ಮ 'Cincinnati User Group' ಕೂಡ ಇದರಿಂದ ಡಿಲೀಟ್ ಆಗುವುದು.
05:15 ಹಾಗಾಗಿ, ಅದನ್ನು ಗುರುತಿಸದಿರಿ(ಅನ್ ಚೆಕ್ ಮಾಡಿ). ಈಗ 50 ನೋಡ್ಸ್ ಗಳನ್ನು ಸೃಷ್ಟಿಸೋಣ.
05:20 ಒಂದುವರ್ಷದಷ್ಟು(ಒನ್ ಇಯರ್) ಹಿಂದೆ ತೆರಳಿರಿ.
05:22 ನಮ್ಮ ನೋಡ್ಸ್ ಗಳಲ್ಲಿ ಯಾವ 'ಕಮೆಂಟ್ಸ್(comments)' ಗಳು ಕೂಡ ಇಲ್ಲ.
05:25 'Maximum number of words in titles' ಕ್ಷೇತ್ರವನ್ನು 2 ಕ್ಕೆ ಬದಲಿಸಿ. ಇದನ್ನು ಮಾಡದಿದ್ದಲ್ಲಿ, ಇದು ಸಾಕಷ್ಟು 'ಲಾರೆಮ್ ಇಪ್ಸಿಮ್ (Lorem Ipsum)' ಸಾಲುಗಳನ್ನು ಉತ್ಪಾದಿಸುತ್ತದೆ.
05:35 'Generate' ಅನ್ನು ಕ್ಲಿಕ್ ಮಾಡಿ. ಕೂಡಲೇ, ನಮಗೆ ಯಶಸ್ವಿಯಾಗಿದೆ ಎನ್ನುವ ಸಂದೇಶ ಕಾಣುವುದು. ಇದು ಕಾರ್ಯನಿರ್ವಹಿಸಿರುವುದನ್ನು ಪರೀಕ್ಷಿಸಿಲು ' Content' ಅನ್ನು ಕ್ಲಿಕ್ ಮಾಡಿ.
05:44 ಇಲ್ಲಿ ನಮಗೆ ಹೊಸ 50 ನೋಡ್ ಗಳು ಕಾಣಸಿಗುತ್ತವೆ – ಅವುಗಳಲ್ಲಿ ಅರ್ಧದಷ್ಟು 'Events' ಮತ್ತು ಅರ್ಧದಷ್ಟು 'User groups)'.
05:50 ಇದರಲ್ಲಿ ಯಾವದನ್ನಾದರು ಕ್ಲಿಕ್ ಮಾಡಿದರೆ, ಡೆವೆಲ್ (Devel) ಉತ್ಪಾದಿಸಿರುವ ಸಾಕಷ್ಟು ವಿವರಣೆ (ಡಿಸ್ಕ್ರಿಪ್ಷನ್), ಒಂದು ಈವೆಂಟ್ ಲೋಗೊ (Event Logo),
05:57 ಒಂದು ನಕಲಿ ಈವೆಂಟ್ ವೆಬ್ ಸೈಟ್ ,ಒಂದು ದಿನಾಂಕ(ಡೇಟ್) ಹಾಗು ಯಾವುದಾದರೊಂದು ಯೂಸರ್ ಗ್ರೂಪ್ಸ್ ಅನ್ನು ಪ್ರಾಯೋಕರು(ಸ್ಪೋನ್ಸರ್) ಎಂದು ಆಯ್ಕೆ ಮಾಡಿರುವುದು ಮತ್ತು ಕೆಲವು ಕಾರ್ಯಕ್ರಮದ ವಿಷಯಗಳನ್ನು (ಈವೆಂಟ್ ಟಾಪಿಕ್ಸ್) ಕೂಡ ಕಾಣಬಹುದು.
06:08 ಈಗ ನಾವು ನಮ್ಮ ' ಲೇಔಟ್ಸ್', ನಮ್ಮ 'ವ್ಯೂಸ್' ಮತ್ತು ಇನ್ನಿತರ ನಮಗಿಷ್ಟವಾದ ಸಂಗತಿಗಳನ್ನು, ನಮ್ಮ ಸೈಟ್ ಗೆ ಸಂಬಧಿಸಿದ ಹಾಗೆ ಮಾಡಬಹುದು.
06:15 'ಡೆವೆಲ್', ನಕಲಿ ವಿಷಯಗಳನ್ನು ಉತ್ಪಾದಿಸುವ ಮೂಲಕ ಸಾಕಷ್ಟು ನಮ್ಮ ಸಮಯವನ್ನು ಉಳಿಸುವುದರಲ್ಲಿ ಸಹಕಾರಿಯಾಗಿದೆ.
06:20 ಇದು drupal.org. ಇಂದ ಡೌನ್ಲೋಡ್ ಮಾಡಬಹುದಾದ “ಮೋಡ್ಯೂಲ್” ನಿಂದ ದೊರಕುವ “ಡ್ರುಪೆಲ್” ನ ಶ್ರೇಷ್ಠ ವಿಶೇಷತೆಗಳು. ಇವುಗಳಿಗೆ 'ಕಾಂಟ್ರಿಬ್ಯೂಟೆಡ್ ಮೋಡ್ಯೂಲ್ಸ್' ಎಂದು ಕರೆಯುವರು. ಇದರ ಬಗ್ಗೆ ಮುಂದೆ ನಾವು ಕಲಿಯೋಣ.
06:32 ಇದರೊಂದಿಗೆ ಈ ಟ್ಯುಟೋರಿಯಲ್ ಅಂತ್ಯವಾಗಿದೆ.
06:35 ಈ ಟ್ಯುಟೋರಿಯಲ್ ನಲ್ಲಿ ನಾವು ಡೆವೆಲ್ ಮೋಡ್ಯೂಲ್ ಗಳನ್ನು ಬಳಸಿ ನಕಲಿ ವಿಷಯಗಳನ್ನು ರಚಿಸುವುದನ್ನು ಕಲಿತಿದ್ದೇವೆ.
06:48 ಈ ವೀಡಿಯೋ Acquia (ಆಕ್ವಿಯಾ) ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ.
06:57 ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ.
07:03 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
07:11 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು:
  • NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ
  • NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
07:23 ಈ ಟ್ಯುಟೋರಿಯಲ್ ನ ಅನುವಾದಕ ಮಂಗಳೂರಿನಿಂದ ಪ್ರಜ್ವಲ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Pratik kamble, Sandhya.np14, Vasudeva ahitanal