Git/C2/Tagging-in-Git/Kannada

From Script | Spoken-Tutorial
Revision as of 15:33, 12 September 2016 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:01 Tagging in Git (ಟ್ಯಾಗಿಂಗ್ ಇನ್ ಗಿಟ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
  • ಟ್ಯಾಗಿಂಗ್ ಮತ್ತು
  • ಟ್ಯಾಗಿಂಗ್ ನ ಪ್ರಕಾರಗಳ ಬಗ್ಗೆ ಕಲಿಯುವೆವು.
00:12 ಈ ಟ್ಯುಟೋರಿಯಲ್ ಗಾಗಿ, ನಾನು:
  • Ubuntu Linux (ಉಬಂಟು ಲಿನಕ್ಸ್) 14.04
  • Git (ಗಿಟ್) 2.3.2 ಹಾಗೂ
  • gedit Text Editor (ಜಿ-ಎಡಿಟ್ ಟೆಕ್ಸ್ಟ್-ಎಡಿಟರ್) ಇವುಗಳನ್ನು ಬಳಸುತ್ತಿದ್ದೇನೆ.

ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು.

00:28 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಟರ್ಮಿನಲ್ ನ ಮೇಲೆ ಲಿನಕ್ಸ್ ಕಮಾಂಡ್ ಗಳನ್ನು ರನ್ ಮಾಡುವುದನ್ನು ತಿಳಿದಿರಬೇಕು.

ಇಲ್ಲದಿದ್ದರೆ, ಸಂಬಂಧಿತ Linux ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.

00:41 ನಾವು ‘ಟ್ಯಾಗಿಂಗ್’ ಬಗ್ಗೆ ತಿಳಿದುಕೊಳ್ಳೋಣ.
00:44 * ಒಂದು 'ಕಮಿಟ್' ಹಂತವನ್ನು ಮುಖ್ಯವಾದದ್ದು ಎಂದು ಗುರುತಿಸಲು ‘ಟ್ಯಾಗಿಂಗ್’ ಅನ್ನು ಬಳಸಲಾಗುತ್ತದೆ.
00:49 ಭವಿಷ್ಯದಲ್ಲಿ ಒಂದು ಬುಕ್-ಮಾರ್ಕ್ ನಂತೆ ರೆಫರೆನ್ಸ್ ಮಾಡಲು, ನಾವು ‘ಕಮಿಟ್’ ಅನ್ನು 'ಟ್ಯಾಗ್' ಮಾಡಬಹುದು.
00:54 ಸಾಮಾನ್ಯವಾಗಿ v1.0 ನಂತಹ ಪ್ರೊಜೆಕ್ಟ್ ನ ರಿಲೀಸ್ ಪಾಯಿಂಟ್ ಅನ್ನು ಗುರುತಿಸಲು ಇದನ್ನು ಬಳಸಲಾಗುತ್ತದೆ.
01:02 ಇಲ್ಲಿ ಎರಡು ಬಗೆಯ ‘ಟ್ಯಾಗ್’ ಗಳಿರುತ್ತವೆ:
  • 'ಲೈಟ್-ವೇಟ್' (Lightweight) ‘ಟ್ಯಾಗ್’ ಮತ್ತು
  • 'ಅನೋಟೇಟೆಡ್' (Annotated) ‘ಟ್ಯಾಗ್’.
01:09 ಮೊದಲು, 'ಲೈಟ್-ವೇಟ್ ಟ್ಯಾಗ್' ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾನು ತೋರಿಸುವೆನು.
01:15 ನಾವು ಈಮೊದಲು ಕ್ರಿಯೇಟ್ ಮಾಡಿರುವ ನಮ್ಮ 'mywebpage' ಎಂಬ ‘ಗಿಟ್ ರಿಪಾಸಿಟರಿ’ ಗೆ ಹೋಗೋಣ.
01:21 'ಟರ್ಮಿನಲ್' ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ: 'cd space mywebpage' ಮತ್ತು 'Enter' ಅನ್ನು ಒತ್ತಿ.
01:30 ಪ್ರದರ್ಶಿಸುವುದಕ್ಕಾಗಿ ನಾನು 'html' ಫೈಲ್ ಗಳನ್ನು ಬಳಸುವುದನ್ನು ಮುಂದುವರೆಸುವೆನು.
01:34 ನೀವು, ನಿಮಗೆ ಇಷ್ಟವಾದ ಯಾವುದೇ ಪ್ರಕಾರದ ಫೈಲನ್ನು ಬಳಸಬಹುದು.
01:39 ನಾವು 'git space log space hyphen hyphen oneline' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ, 'ಗಿಟ್ ಲಾಗ್' ಅನ್ನು ಪರಿಶೀಲಿಸೋಣ.
01:48 ಪ್ರಸ್ತುತ, ನಮ್ಮ ರಿಪಾಸಿಟರಿಯಲ್ಲಿ, "Added colors, Added history.html" ಹಾಗೂ "Initial commit" ಎಂಬ ಮೂರು ‘ಕಮಿಟ್’ ಗಳನ್ನು ನಾವು ಹೊಂದಿದ್ದೇವೆ.
01:59 ಈಗ ನಾನು, ಇತ್ತೀಚಿನ ‘ಕಮಿಟ್’ ನಲ್ಲಿ “Added colors” ಎಂಬ ಒಂದು 'ಲೈಟ್-ವೇಟ್ ಟ್ಯಾಗ್' ಅನ್ನು ಕ್ರಿಯೇಟ್ ಮಾಡುವೆನು.
02:05 ನಾವು ಒಂದು ‘ಟ್ಯಾಗ್’ ಅನ್ನು ಕ್ರಿಯೇಟ್ ಮಾಡಿದಾಗ, ಡೀಫಾಲ್ಟ್ ಆಗಿ, ಅದನ್ನು ಇತ್ತೀಚಿನ ‘ಕಮಿಟ್’ ನಲ್ಲಿ ಕ್ರಿಯೇಟ್ ಮಾಡಲಾಗುವುದು.
02:12 ಹೀಗೆ ಟೈಪ್ ಮಾಡಿ: ' git space tag space v1.1' ಮತ್ತು ‘Enter’ ಅನ್ನು ಒತ್ತಿ.
02:20 ಇಲ್ಲಿ, ನಾನು ಟ್ಯಾಗ್ ನ ಹೆಸರನ್ನು 'v1.1' ಎಂದು ಕೊಡುವೆನು. ನೀವು ನಿಮಗೆ ಇಷ್ಟವಾದ ಯಾವುದೇ ಹೆಸರನ್ನು ಕೊಡಬಹುದು.
02:29 ನೀವು 'git space tag' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ, ಟ್ಯಾಗ್ ಅನ್ನು ನೋಡಬಹುದು.
02:35 ಈಗ, ನಮ್ಮ ರಿಪಾಸಿಟರಿಯಲ್ಲಿ ಒಂದೇ ಒಂದು ‘ಟ್ಯಾಗ್’ ಇದೆ.
02:39 ಆಮೇಲೆ, ನಾವು 'ಅನೋಟೇಟೆಡ್ ಟ್ಯಾಗ್' ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ಕಲಿಯುವೆವು.
02:44 ಪ್ರದರ್ಶಿಸುವುದಕ್ಕಾಗಿ, ಮೊದಲು ನಾನು 'mypage.html' ಫೈಲ್ ನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವೆನು.
02:52 ಹೀಗೆ ಟೈಪ್ ಮಾಡಿ: 'gedit space mypage.html space ampersand' ಮತ್ತು ‘Enter’ ಅನ್ನು ಒತ್ತಿ. ನಾವು ಫೈಲ್ ನಲ್ಲಿ ಕೆಲವು ಸಾಲುಗಳನ್ನು ಸೇರಿಸೋಣ.
03:04 ಆಮೇಲೆ ಫೈಲನ್ನು ಸೇವ್ ಮಾಡಿ ಮತ್ತು ಕ್ಲೋಸ್ ಮಾಡಿ.
03:07 ಈ ಘಟ್ಟದಲ್ಲಿ ನಾವು ನಮ್ಮ ಕೆಲಸವನ್ನು ‘ಕಮಿಟ್’ ಮಾಡೋಣ.
03:11 ಹೀಗೆ ಟೈಪ್ ಮಾಡಿ: 'git space commit space hyphen a m space' ಡಬಲ್ ಕೋಟ್ಸ್ ಗಳಲ್ಲಿ “Added content in mypage.html” ಮತ್ತು ‘Enter’ ಅನ್ನು ಒತ್ತಿ.
03:25 ಈ ನಿರ್ದಿಷ್ಟ ಸ್ಟೇಜ್, ಪ್ರೊಜೆಕ್ಟ್ ಗಾಗಿ ಬಹಳ ಮುಖ್ಯವಾಗಿದೆ ಎಂದು ನಾವು ಭಾವಿಸೋಣ.
03:31 ಆದ್ದರಿಂದ, ನಾವು ‘ಕಮಿಟ್’ ನ ಈ ಘಟ್ಟದಲ್ಲಿ ಒಂದು ‘ಟ್ಯಾಗ್’ ಅನ್ನು ಕ್ರಿಯೇಟ್ ಮಾಡಬೇಕು.
03:35 ಇಲ್ಲಿ ನಾವು, ಒಂದು 'ಅನೋಟೇಟೆಡ್ ಟ್ಯಾಗ್' ಅನ್ನು ಕ್ರಿಯೇಟ್ ಮಾಡುವೆವು.
03:39 ಹೀಗೆ ಟೈಪ್ ಮಾಡಿ: 'git space tag space hyphen a space v1.2 space hyphen m space' ಡಬಲ್ ಕೋಟ್ಸ್ ನಲ್ಲಿ “My Version 1.2” ಮತ್ತು ‘Enter’ ಅನ್ನು ಒತ್ತಿ.
03:55 ' -m flag' ಅನ್ನು ಬಳಸಿ, ನಿಮಗಿಷ್ಟವಾದ ಯಾವುದೇ ‘ಟ್ಯಾಗ್’ ಮೆಸೇಜನ್ನು ನೀವು ಕೊಡಬಹುದು.
04:01 ಇಲ್ಲಿ, ‘ಟ್ಯಾಗ್ ಮೆಸೇಜ್’ ಐಚ್ಛಿಕ ಆಗಿದೆ.
04:05 ‘ಟ್ಯಾಗ್ ಲಿಸ್ಟ್’ ಅನ್ನು ನೋಡಲು, 'git space tag' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. ಈಗ ನಮ್ಮ ಹತ್ತಿರ ಎರಡು ‘ಟ್ಯಾಗ್’ ಗಳಿವೆ.
04:14 ಇಲ್ಲಿ, 'v1.1, ಲೈಟ್-ವೇಟ್ ಟ್ಯಾಗ್' ಆಗಿದೆ ಮತ್ತು 'v1.2, ಅನೋಟೇಟೆಡ್ ಟ್ಯಾಗ್’ ಆಗಿದೆ.
04:21 ನಾವು ‘ಟ್ಯಾಗ್’ಗಳ ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸುತ್ತೇವೆ?
04:24 'git show' ಕಮಾಂಡ್ ಅನ್ನು ಬಳಸಿ, ನಾವು ಈ ಎರಡು ‘ಟ್ಯಾಗ್’ ಗಳ ನಡುವಿನ ವ್ಯತ್ಯಾಸವನ್ನು ನೋಡಬಹುದು.
04:31 ಹೀಗೆ ಟೈಪ್ ಮಾಡಿ: 'git space show space v1.1' ಮತ್ತು ‘Enter’ ಅನ್ನು ಒತ್ತಿ.
04:38 ಇಲ್ಲಿ ನಾವು, 'ಲೈಟ್-ವೇಟ್ ಟ್ಯಾಗ್ “v1.1”' ನ ಪೂರ್ತಿ ವಿವರಗಳನ್ನು ನೋಡಬಹುದು.
04:44 ಇದು ಕೇವಲ ‘ಕಮಿಟ್’ನ ವಿವರಗಳು ಹಾಗೂ ಫೈಲ್ ನ ಬದಲಾವಣೆಗಳನ್ನು ತೋರಿಸುತ್ತದೆ.
04:50 ಆಮೇಲೆ, ನಾವು 'ಎನೋಟೇಟೆಡ್ ಟ್ಯಾಗ್ v1.2' ದ ವಿವರಗಳನ್ನು ನೋಡುವೆವು. ಹೀಗೆ ಟೈಪ್ ಮಾಡಿ: 'git space show space v1.2' ಮತ್ತು ‘Enter’ ಅನ್ನು ಒತ್ತಿ.
05:03 ಇಲ್ಲಿ ನಾವು:
  • ‘ಟ್ಯಾಗ್’ ನ ಹೆಸರು
  • ‘ಟ್ಯಾಗರ್’ ವಿವರಗಳು
  • ‘ಕಮಿಟ್’ ಅನ್ನು ‘ಟ್ಯಾಗ್’ ಮಾಡಲಾದ ದಿನಾಂಕ
  • ‘ಟ್ಯಾಗ್’ ಮೆಸೇಜ್
  • ‘ಕಮಿಟ್’ ನ ವಿವರಗಳು ಹಾಗೂ
  • ಫೈಲ್ ನ ಬದಲಾವಣೆಗಳನ್ನು ನೋಡಬಹುದು.
05:17 ನೀವು ಜತೆಗೂಡಿ ಕೆಲಸಮಾಡುವಾಗ ಯಾವಾಗಲೂ ಅನೋಟೇಟೆಡ್ ಟ್ಯಾಗ್ ಅನ್ನು ಶಿಫಾರಸು ಮಾಡಲಾಗುತ್ತದೆ.
05:23 ನಮ್ಮ ಹಳೆಯ ‘ಕಮಿಟ್’ ಗಳಲ್ಲಿ ‘ಟ್ಯಾಗ್’ ಅನ್ನು ಹೇಗೆ ಗುರುತಿಸುವುದೆಂದು ಈಗ ನಾವು ಕಲಿಯೋಣ.
05:29 ಮೊದಲು, ನಾವು 'git space log space hyphen hyphen oneline' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ, 'ಗಿಟ್ ಲಾಗ್' ಅನ್ನು ಪರಿಶೀಲಿಸುವೆವು.
05:39 ಈಗ ಉದಾಹರಣೆಗೆ- “Added history.html” ಎಂಬ ನನ್ನ ಎರಡನೆಯ ‘ಕಮಿಟ್’ ನಲ್ಲಿ ನನಗೆ ಒಂದು ‘ಟ್ಯಾಗ್’ ಅನ್ನು ಕ್ರಿಯೇಟ್ ಮಾಡಬೇಕಾಗಿದೆ.
05:47 ಹೀಗೆ ಟೈಪ್ ಮಾಡಿ: 'git space tag space hyphen a space v1.0 space'. ಆಮೇಲೆ, “Added history.html” ನ ‘ಕಮಿಟ್ ಹ್ಯಾಶ್’ ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ. ಸ್ಪೇಸ್.

ಹೀಗೆ ಟೈಪ್ ಮಾಡಿ: 'hyphen m space' ಡಬಲ್ ಕೋಟ್ಸ್ ನಲ್ಲಿ “My Version 1.0” ಮತ್ತು ‘Enter’ ಅನ್ನು ಒತ್ತಿ.

06:09 ನಾವು ಈಗ ಕ್ರಿಯೇಟ್ ಮಾಡಿದ ‘ಟ್ಯಾಗ್’ ಅನ್ನು ನೋಡಲು ನಮಗೆ ಸಾಧ್ಯವಾಗುವುದು. 'git space tag' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ.
06:19 ಇಲ್ಲಿ ಟ್ಯಾಗ್ 'v1.0' ಅನ್ನು ಕ್ರಿಯೇಟ್ ಮಾಡಿರುವುದನ್ನು ನೀವು ನೋಡಬಹುದು.
06:24 ಆಮೇಲೆ ನಾವು, 'Git log' ನೊಂದಿಗೆ ‘ಟ್ಯಾಗ್’ ಗಳನ್ನು ಹೇಗೆ ನೋಡುವುದೆಂದು ಕಲಿಯುವೆವು.
06:29 ಹೀಗೆ ಟೈಪ್ ಮಾಡಿ: 'git space log space hyphen hyphen oneline space hyphen hyphen decorate' ಮತ್ತು ‘Enter’ ಅನ್ನು ಒತ್ತಿ.
06:40 ನೀವು 'Git log' (ಗಿಟ್ ಲಾಗ್) ಅನ್ನು ‘ಟ್ಯಾಗ್’ ಗಳ ಹೆಸರುಗಳೊಂದಿಗೆ ನೋಡಬಹುದು.
06:44 ಈಗ, ನಾವು ಬೇಡವಾದ ‘ಟ್ಯಾಗ್’ ಅನ್ನು ಡಿಲೀಟ್ ಮಾಡಲು ಕಲಿಯುವೆವು.
06:49 ನನಗೆ ಟ್ಯಾಗ್ 'v1.1' ಅನ್ನು ಡಿಲೀಟ್ ಮಾಡಬೇಕಾಗಿದೆ ಎಂದುಕೊಳ್ಳಿ.
06:53 ಹೀಗೆ ಟೈಪ್ ಮಾಡಿ: 'git space tag space hyphen d space v1.1', ‘Enter’ ಅನ್ನು ಒತ್ತಿ.
07:02 ಇದು, “Deleted tag 'v1.1'” ಎಂಬ ಮೆಸೇಜನ್ನು ಮತ್ತು ಅದರ ‘ಕಮಿಟ್ ಹ್ಯಾಶ್’ ಅನ್ನು ತೋರಿಸುತ್ತದೆ.
07:08 ‘ಟ್ಯಾಗ್’ ಅನ್ನು ಡಿಲೀಟ್ ಮಾಡಲಾಗಿದೆಯೇ, ಇಲ್ಲವೇ ಎಂದು ನಾವು ಪರೀಕ್ಷಿಸುವೆವು.
07:14 'git space tag' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ.
07:19 ಇದನ್ನು ಯಶಸ್ವಿಯಾಗಿ ತೆಗೆದುಹಾಕಿದ್ದರಿಂದ, ಈಗ ನಾವು 'tag v1.1' ಅನ್ನು ನೋಡಲು ಸಾಧ್ಯವಿಲ್ಲ.
07:25 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
07:29 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
  • ‘ಟ್ಯಾಗಿಂಗ್’ ಹಾಗೂ
  • ‘ಟ್ಯಾಗಿಂಗ್’ನ ವಿಧಗಳ ಬಗ್ಗೆ ಕಲಿತಿದ್ದೇವೆ.
07:38 ಒಂದು ಅಸೈನ್ಮೆಂಟ್-

ಒಂದು 'ಲೈಟ್-ವೇಟ್ ಟ್ಯಾಗ್' ಮತ್ತು ಒಂದು 'ಅನೋಟೇಟೆಡ್ ಟ್ಯಾಗ್' ಗಳನ್ನು ಕ್ರಿಯೇಟ್ ಮಾಡಿ ಹಾಗೂ ಈ ಎರಡೂ ‘ಟ್ಯಾಗ್’ ಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಿ.

07:47 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.

ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.

07:56 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:03 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

08:08 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: [1]

08:20 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..

ವಂದನೆಗಳು.

Contributors and Content Editors

Sandhya.np14