Git/C2/Inspection-and-Comparison-of-Git/Kannada
From Script | Spoken-Tutorial
Revision as of 13:32, 12 September 2016 by Sandhya.np14 (Talk | contribs)
|
|
00:01 | 'Inspection and comparison of Git' ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು:
|
00:17 | ಈ ಟ್ಯುಟೋರಿಯಲ್ ಗಾಗಿ, ನಾನು:
|
00:29 | ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು. |
00:33 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಟರ್ಮಿನಲ್ ನ ಮೇಲೆ ಲಿನಕ್ಸ್ ಕಮಾಂಡ್ ಗಳನ್ನು ರನ್ ಮಾಡುವುದನ್ನು ತಿಳಿದಿರಬೇಕು. |
00:40 | ಇಲ್ಲದಿದ್ದರೆ, ಸಂಬಂಧಿತ Linux ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:46 | ನಾವು 'git diff' ಕಮಾಂಡ್ ನೊಂದಿಗೆ ಆರಂಭಿಸೋಣ. |
00:50 | ಈ 'ಕಮಾಂಡ್', ಫೈಲ್ ಗಳ ಈಗಿನ ಸ್ಟ್ಯಾಟಸ್ ನ ಬದಲಾವಣೆಗಳನ್ನು ತೋರಿಸುವುದು. |
00:55 | ಈಗ, ಇದು ಕೆಲಸಮಾಡುವ ಬಗೆಯನ್ನು ನಾನು ನಿಮಗೆ ತೋರಿಸುವೆನು. 'ಟರ್ಮಿನಲ್' ಅನ್ನು ತೆರೆಯಲು 'Ctrl+Alt+T' ಕೀಗಳನ್ನು ಒತ್ತಿ. |
01:03 | ಈಮೊದಲು ಕ್ರಿಯೇಟ್ ಮಾಡಿರುವ ನಮ್ಮ 'mywebpage' ಎಂಬ ‘Git ‘ರಿಪಾಸಿಟರಿ’ ಗೆ ನಾವು ಹೋಗುವೆವು. |
01:09 | ಹೀಗೆ ಟೈಪ್ ಮಾಡಿ: 'cd space mywebpage' ಮತ್ತು ‘Enter’ ಅನ್ನು ಒತ್ತಿ. |
01:15 | ಪ್ರದರ್ಶಿಸಲು, ನಾನು 'html' ಫೈಲ್ ಗಳನ್ನು ಬಳಸುವುದನ್ನು ಮುಂದುವರೆಸುವೆನು. |
01:20 | ನಿಮಗೆ ಇಷ್ಟವಾದ ಯಾವುದೇ ಪ್ರಕಾರದ ಫೈಲ್ ಅನ್ನು ನೀವು ಬಳಸಬಹುದು. |
01:24 | ಪ್ರದರ್ಶಿಸಲಿಕ್ಕಾಗಿ, ಮೊದಲು ನಾನು 'history.html' ಎಂಬ ಒಂದು html ಫೈಲ್ ಅನ್ನು ಕ್ರಿಯೇಟ್ ಮಾಡಿ ಅದನ್ನು 'ಕಮಿಟ್' ಮಾಡುವೆನು. |
01:32 | ಹೀಗೆ ಟೈಪ್ ಮಾಡಿ: 'gedit space history.html space ampersand' ಹಾಗೂ ‘Enter’ ಅನ್ನು ಒತ್ತಿ. |
01:41 | ಮೊದಲು ಸೇವ್ ಮಾಡಿದ್ದ ನನ್ನ 'Writer' ಡಾಕ್ಯೂಮೆಂಟ್ ನಿಂದ, ಸ್ವಲ್ಪ ಕೋಡ್ ಅನ್ನು ಈ ಫೈಲ್ ನಲ್ಲಿ ನಾನು ಕಾಪಿ ಮತ್ತು ಪೇಸ್ಟ್ ಮಾಡುವೆನು. |
01:48 | ನಾವು ಫೈಲ್ ಅನ್ನು ಸೇವ್ ಮಾಡಿ, ಕ್ಲೋಸ್ ಮಾಡೋಣ. |
01:51 | ನಾವು ಫೈಲ್ ಅನ್ನು ಸೇರಿಸಿದಾಗ ಅಥವಾ ತೆಗೆದುಹಾಕಿದಾಗಲೆಲ್ಲ ನಮ್ಮ ಕೆಲಸವನ್ನು 'ಕಮಿಟ್' ಮಾಡಬೇಕು ಎಂಬುದನ್ನು ನೆನಪಿಸಿಕೊಳ್ಳಿ. |
01:58 | ಫೈಲ್ ಅನ್ನು 'ಸ್ಟೇಜಿಂಗ್ ಏರಿಯಾ' ಗೆ ಸೇರಿಸಲು, ಹೀಗೆ ಟೈಪ್ ಮಾಡಿ: 'git space add space history.html' ಹಾಗೂ ‘Enter’ ಅನ್ನು ಒತ್ತಿ. |
02:08 | ನಮ್ಮ ಕೆಲಸವನ್ನು ಕಮಿಟ್ ಮಾಡಲು, ಹೀಗೆ ಟೈಪ್ ಮಾಡಿ: 'git space commit space hyphen m space' ಡಬಲ್ ಕೋಟ್ಸ್ ನಲ್ಲಿ “Added history.html” ಮತ್ತು ‘Enter’ ಅನ್ನು ಒತ್ತಿ. |
02:21 | 'git space log' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ, ನಾವು 'Git log' ಅನ್ನು ನೋಡೋಣ. |
02:28 | ಸಧ್ಯಕ್ಕೆ, ನಮ್ಮ 'ರಿಪಾಸಿಟರಿ' ಯಲ್ಲಿ ಎರಡು 'ಕಮಿಟ್' ಗಳು ಇರುತ್ತವೆ. |
02:33 | 'gedit space mypage.html space history.html space ampersand' ಎಂದು ಟೈಪ್ ಮಾಡಿ, 'mypage.html' ಹಾಗೂ 'history.html' ಈ ಎರಡು ಫೈಲ್ ಗಳನ್ನು ತೆರೆಯಿರಿ. |
02:47 | ಇಲ್ಲಿ, ' mypage.html', ಹಿಂದಿನ ಟ್ಯುಟೊರಿಯಲ್ ನಲ್ಲಿ ನಾವು ಕ್ರಿಯೇಟ್ ಮಾಡಿದ ಫೈಲ್ ಆಗಿದೆ. ಈಗ, ‘Enter’ ಅನ್ನು ಒತ್ತಿ. |
02:56 | ನಾವು ಈ ಫೈಲ್ ಗಳಲ್ಲಿ ಕೆಲವು ಸಾಲುಗಳನ್ನು ಸೇರಿಸೋಣ ಮತ್ತು ತೆಗೆದುಹಾಕೋಣ. |
03:01 | ಆಮೇಲೆ ಫೈಲ್ ಗಳನ್ನು ಸೇವ್ ಮಾಡಿ, ಕ್ಲೋಸ್ ಮಾಡೋಣ. |
03:05 | ಕೆಲವು ಸಂದರ್ಭಗಳಲ್ಲಿ, ನಾವು ನಮ್ಮ ಫೈಲ್ ಗಳಲ್ಲಿ ಮಾಡಿರುವ ಬದಲಾವಣೆಗಳನ್ನು ನೆನಪಿಟ್ಟುಕೊಳ್ಳದೇ ಇರಬಹುದು. |
03:11 | ನಾವು 'git space status' ಎಂದು ಟೈಪ್ ಮಾಡಿ ಹಾಗೂ ‘Enter’ ಅನ್ನು ಒತ್ತಿ 'ಗಿಟ್ ಸ್ಟ್ಯಾಟಸ್' ಅನ್ನು ಪರೀಕ್ಷಿಸೋಣ. |
03:19 | ಅದು, ಮಾರ್ಪಡಿಸಿದ ಫೈಲ್ ಗಳ ಹೆಸರುಗಳನ್ನು ತೋರಿಸುತ್ತದೆ. ಆದರೆ, ನಮಗೆ ಇನ್ನಾವುದೇ ವಿವರಗಳನ್ನು ಪಡೆಯಲು ಸಾಧ್ಯವಿಲ್ಲ. |
03:26 | ನಮಗೆ ಈ ಫೈಲ್ ಗಳಿಗೆ ಮಾಡಲಾದ ನಿಜವಾದ ಬದಲಾವಣೆಗಳನ್ನು ತಿಳಿದುಕೊಳ್ಳಬೇಕಾಗಿದೆ. ಇದನ್ನು ಹೇಗೆ ಮಾಡುವುದೆಂದು ನಾವು ನೋಡೋಣ. |
03:35 | ಹೀಗೆ ಟೈಪ್ ಮಾಡಿ: 'git space diff' ಮತ್ತು ‘Enter’ ಅನ್ನು ಒತ್ತಿ. |
03:40 | ಈ ಕಮಾಂಡ್, ಫೈಲ್ ಗಳ ಈಗಿನ ಸ್ಥಿತಿಯನ್ನು ಇತ್ತೀಚಿನ ಕಮಿಟ್ ನೊಂದಿಗೆ ಹೋಲಿಸುವುದು. |
03:46 | ಇಲ್ಲಿ, 'history.html' ಫೈಲ್ ನ ಎರಡು ಆವೃತ್ತಿಗಳನ್ನು ನೀವು ನೋಡುವಿರಿ. |
03:51 | 'a slash history.html', ಕೊನೆಯ ಕಮಿಟ್ ನ ಆವೃತ್ತಿಯಾಗಿದೆ. ಮತ್ತು, ಇದು ಋಣಾತ್ಮಕ ಚಿಹ್ನೆಯಿಂದ (minus ಚಿಹ್ನೆ) ಸೂಚಿತವಾಗಿದೆ. |
04:00 | 'b slash history.html', ಈಗಿನ ಆವೃತ್ತಿಯಾಗಿದೆ. ಮತ್ತು, ಇದು ಧನಾತ್ಮಕ ಚಿಹ್ನೆಯಿಂದ (plus ಚಿಹ್ನೆ) ಸೂಚಿತವಾಗಿದೆ. |
04:09 | ಹೀಗಾಗಿ, ಇಲ್ಲಿ, ಋಣಾತ್ಮಕ ಚಿಹ್ನೆ ಹೊಂದಿರುವ ಕೆಂಪುಬಣ್ಣದ ಸಾಲು ಹಳೆಯ ಆವೃತ್ತಿಯಾಗಿದೆ. |
04:15 | ಮತ್ತು, ಧನಾತ್ಮಕ ಚಿಹ್ನೆ ಹೊಂದಿರುವ ಹಸಿರುಬಣ್ಣದ ಸಾಲು ಹೊಸ ಆವೃತ್ತಿಯಾಗಿದೆ. |
04:20 | ಇನ್ನೂ ಹೆಚ್ಚು ನೋಡಲು 'ಡೌನ್-ಆರೋ' ಕೀಯನ್ನು ಒತ್ತಿ. |
04:23 | ಇವು ನಾವು ಹೊಸ ಆವೃತ್ತಿಯಲ್ಲಿ ಸೇರಿಸಿದ ಸಾಲುಗಳಾಗಿವೆ. |
04:28 | ಅಲ್ಲದೇ, ನೀವು 'mypage.html' ಫೈಲ್ ನ ಬದಲಾವಣೆಗಳನ್ನು ಸಹ ನೋಡಬಹುದು. 'ಡೌನ್-ಆರೋ' ಕೀಯನ್ನು ಒತ್ತಿ. |
04:35 | ಹೊರಬರಲು 'q' ಕೀಯನ್ನು ಒತ್ತಿ. |
04:38 | ಇಲ್ಲಿ, ಔಟ್ಪುಟ್ ಅನ್ನು ಬಣ್ಣಗಳಲ್ಲಿ ಪ್ರದರ್ಶಿಸಲಾಗಿದೆ. |
04:42 | ನಮಗೆ ಬಣ್ಣಗಳೊಂದಿಗೆ ಸಾಲುಗಳನ್ನು ನೋಡಲು ಸಾಧ್ಯವಿಲ್ಲದಿದ್ದರೆ ಹೀಗೆ ಟೈಪ್ ಮಾಡಿ: 'git space config space hyphen hyphen global space color dot ui space true' ಮತ್ತು ‘Enter’ ಅನ್ನು ಒತ್ತಿ. |
04:57 | ನಿಮಗೆ ಬಣ್ಣಗಳನ್ನು ನೋಡುವುದು ಬೇಡವಾಗಿದ್ದರೆ, ದಯವಿಟ್ಟು ಈ ಕಮಾಂಡ್ ನಲ್ಲಿ 'true' ದ ಬದಲಾಗಿ 'false' ಅನ್ನು ಬಳಸಿ. |
05:03 | 'git space diff' ಎಂದು ಟೈಪ್ ಮಾಡಿ ಹಾಗೂ ‘Enter’ ಅನ್ನು ಒತ್ತಿ. ಈಗ, ಔಟ್ಪುಟ್ ಅನ್ನು ಬಣ್ಣಗಳಿಲ್ಲದೇ ಪ್ರದರ್ಶಿಸಲಾಗಿದೆ. |
05:13 | ಆಮೇಲೆ, ಯಾವುದೇ ಒಂದು ನಿರ್ದಿಷ್ಟ ಫೈಲ್ ನಲ್ಲಿಯ ಬದಲಾವಣೆಗಳನ್ನು ಹೇಗೆ ನೋಡುವುದೆಂದು ನಾನು ನಿಮಗೆ ತೋರಿಸುತ್ತೇನೆ. |
05:18 | ಹೀಗೆ ಟೈಪ್ ಮಾಡಿ: 'git space diff space history.html' ಮತ್ತು ‘Enter’ ಅನ್ನು ಒತ್ತಿ. |
05:25 | ಇಲ್ಲಿ, 'history.html' ಫೈಲ್ ನಲ್ಲಿ ಮಾಡಿದ ಬದಲಾವಣೆಗಳನ್ನು ಮಾತ್ರ ನಾವು ನೋಡಬಹುದು. |
05:31 | ನಾವು ಈಗ ನಮ್ಮ ಫೈಲ್ ಗಳನ್ನು 'ಸ್ಟೇಜಿಂಗ್ ಏರಿಯಾ' ಗೆ ಸೇರಿಸೋಣ. ಹೀಗೆ ಟೈಪ್ ಮಾಡಿ: 'git space add space history.html space mypage.html' ಮತ್ತು ‘Enter’ ಅನ್ನು ಒತ್ತಿ. |
05:44 | ನಾವು 'git space diff' ಎಂದು ಟೈಪ್ ಮಾಡಿ ಹಾಗೂ ‘Enter’ ಅನ್ನು ಒತ್ತಿ ಮತ್ತೊಮ್ಮೆ 'Git diff' ಅನ್ನು ಪರೀಕ್ಷಿಸೋಣ. |
05:52 | ಈಸಲ ನಮಗೆ ಯಾವುದೇ ಔಟ್ಪುಟ್ ಸಿಗುವುದಿಲ್ಲ. ಏಕೆಂದರೆ, ನಮ್ಮ ಫೈಲ್ ಗಳು ಸ್ಟೇಜಿಂಗ್ ಏರಿಯಾ ಗೆ ಸೇರಿಸಲ್ಪಟ್ಟಿವೆ. |
05:59 | ಇಂತಹ ಸಂದರ್ಭದಲ್ಲಿ, ನಾವು ಹೀಗೆ ಟೈಪ್ ಮಾಡಬಹುದು: 'git space diff space hyphen hyphen staged'. ‘Enter’ ಅನ್ನು ಒತ್ತಿ. |
06:08 | ಈಗ, ನಾವು 'git diff' ಕಮಾಂಡ್ ನಲ್ಲಿ ಪಡೆದಂತಹ ಔಟ್ಪುಟ್ ಅನ್ನೇ ನೋಡಬಹುದು. |
06:15 | ಇದೇ ಪರಿಣಾಮವನ್ನು (result) ಪಡೆಯಲು, ನಾವು 'hyphen hyphen staged' ಗೆ ಬದಲಾಗಿ 'hyphen hyphen cached' ಅನ್ನು ಸಹ ಬಳಸಬಹುದು. |
06:23 | ನಾವು ಈಗಿರುವ ಸ್ಥಿತಿಯನ್ನು ಹಿಂದಿನ ಯಾವುದೇ ಕಮಿಟ್ ನೊಂದಿಗೆ ಹೇಗೆ ಹೋಲಿಸಬಹುದು? |
06:28 | ಮೊದಲು, ನಾವು 'git space log space hyphen hyphen oneline' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ 'Git log' ಅನ್ನು ನೋಡುವೆವು. |
06:38 | ಈಗ ನನಗೆ, ನನ್ನ ಸಧ್ಯದ ಸ್ಥಿತಿಯನ್ನು 'Initial commit' ನೊಂದಿಗೆ ಹೋಲಿಸಬೇಕಾಗಿದೆ ಎಂದುಕೊಳ್ಳಿ. |
06:43 | ಆದ್ದರಿಂದ, 'git space diff space' ಎಂದು ಟೈಪ್ ಮಾಡಿ. ಆಮೇಲೆ, 'Initial commit' ನ 'ಕಮಿಟ್ ಹ್ಯಾಶ್' ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ. 'Enter' ಅನ್ನು ಒತ್ತಿ. |
06:52 | ಇಲ್ಲಿ, ನಾವು ವ್ಯತ್ಯಾಸವನ್ನು ನೋಡಬಹುದು. |
06:55 | ಈ ರೀತಿಯಾಗಿ, ನಮ್ಮ ಸಧ್ಯದ ಸ್ಥಿತಿಯನ್ನು ‘ರಿಪಾಸಿಟರಿ’ ಯಲ್ಲಿಯ ಹಿಂದಿನ ಯಾವುದೇ ಕಮಿಟ್ ನೊಂದಿಗೆ ನಾವು ಹೋಲಿಸಬಹುದು. |
07:02 | ಹೀಗೆ, 'git diff' ಕಮಾಂಡ್ ಅನ್ನು ಬಳಸಿ, ಮಾರ್ಪಡಿಸಲಾದ ಫೈಲ್ ಗಳಲ್ಲಿಯ ಎಲ್ಲ ಬದಲಾವಣೆಗಳನ್ನು
ನಾವು ನೋಡಬಹುದು. |
07:09 | ಕಮಿಟ್ ಮಾಡುವ ಮೊದಲು ನಾವು ಏನನ್ನು ಬದಲಾಯಿಸಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದು ನಮಗೆ ಸಹಾಯಮಾಡುವುದು. |
07:15 | ನಾವು ಈ ಘಟ್ಟದಲ್ಲಿ ನಮ್ಮ ಕೆಲಸವನ್ನು ಫ್ರೀಜ್ ಮಾಡೋಣ. |
07:19 | ಕಮಿಟ್ ಮಾಡಲು, ಹೀಗೆ ಟೈಪ್ ಮಾಡಿ: 'git space commit space hyphen m space' ಡಬಲ್ ಕೋಟ್ಸ್ ನಲ್ಲಿ “Added colors” ಮತ್ತು ‘Enter’ ಅನ್ನು ಒತ್ತಿ. |
07:30 | ಆಮೇಲೆ ನಾವು, ಎರಡು ಕಮಿಟ್ ಗಳ ನಡುವಿನ ವ್ಯತ್ಯಾಸವನ್ನು ಹೇಗೆ ನೋಡುವುದೆಂದು ತಿಳಿಯೋಣ. |
07:35 | ನಾವು 'git space log space hyphen hyphen oneline' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ, 'Git log' ಅನ್ನು ನೋಡೋಣ. |
07:44 | 'git space diff space' ಎಂದು ಟೈಪ್ ಮಾಡಿ. ಆಮೇಲೆ, “Initial commit” ನ 'ಕಮಿಟ್ ಹ್ಯಾಶ್' ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ, ಸ್ಪೇಸ್,
ಈಗ, “Added colors” ನ 'ಕಮಿಟ್ ಹ್ಯಾಶ್' ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ ಮತ್ತು ‘Enter’ ಅನ್ನು ಒತ್ತಿ. |
07:58 | ಕೊಟ್ಟಿರುವ ಎರಡು ಕಮಿಟ್ ಗಳ ನಡುವಿನ ವ್ಯತ್ಯಾಸವನ್ನು ಈಗ ನೋಡಬಹುದು. |
08:03 | ನಂತರ, ನಾವು ಕೊನೆಯ ರಿವಿಜನ್ ಅನ್ನು, ಅದರ ಹಿಂದಿನ ರಿವಿಜನ್ ನೊಂದಿಗೆ ಹೋಲಿಸುವೆವು. |
08:08 | ಹೀಗೆ ಟೈಪ್ ಮಾಡಿ: 'git space diff space HEAD space HEAD tilde ' ಮತ್ತು ‘Enter’ ಅನ್ನು ಒತ್ತಿ. |
08:16 | 'HEAD', “Added colors” ಎಂಬ 'ಕಮಿಟ್ ಮೆಸೇಜ್' ಅನ್ನು ಹೊಂದಿರುವ ಕೊನೆಯ ರಿವಿಜನ್ ಅನ್ನು ಸೂಚಿಸುತ್ತದೆ. |
08:22 | 'HEAD tilde' ಕೊನೆಯದರ ಹಿಂದಿನ ರಿವಿಜನ್ ಅನ್ನು ಸೂಚಿಸುತ್ತದೆ. ಇದು, “Added history.html” ಎಂಬ 'ಕಮಿಟ್ ಮೆಸೇಜ್' ಅನ್ನು ಹೊಂದಿರುತ್ತದೆ. |
08:30 | ಇತ್ತೀಚಿನ ರಿವಿಜನ್ ಯಾವಾಗಲೂ 'HEAD' ಆಗಿರುತ್ತದೆ. ಇದರ ಹಿಂದಿನ ರಿವಿಜನ್ ಯಾವಾಗಲೂ 'HEAD tilde' ಇರುತ್ತದೆ. |
08:39 | ಹೀಗೆಯೇ, ಇತ್ತೀಚಿನ ರಿವಿಜನ್ ಗಿಂತ ಹಿಂದೆ ಎರಡನೆಯ ರಿವಿಜನ್ 'HEAD tilde 2', ಹಿಂದಿನ ಮೂರನೆಯ ರಿವಿಜನ್ 'HEAD tilde 3' ಹೀಗೆ. |
08:50 | ಟರ್ಮಿನಲ್ ಗೆ ಹಿಂದಿರುಗಿ. |
08:53 | ಈಗ, ನಾವು 'git show' ಎಂಬ ಕಮಾಂಡ್ ನ ಬಗ್ಗೆ ಕಲಿಯೋಣ. ಇದು ಕಮಿಟ್ ನ ಸಂಪೂರ್ಣ ವಿವರಗಳನ್ನು ನೋಡಲು ಸಹಾಯಮಾಡುತ್ತದೆ. |
09:00 | ಹೀಗೆ ಟೈಪ್ ಮಾಡಿ: 'git space show' ಹಾಗೂ 'Enter' ಅನ್ನು ಒತ್ತಿ. |
09:04 | ಈ ಕಮಾಂಡ್, ‘ರಿಪಾಸಿಟರಿ’ ಯಲ್ಲಿಯ ಇತ್ತೀಚಿನ ಕಮಿಟ್ ನ ವಿವರಗಳನ್ನು ತೋರಿಸುವುದು. |
09:10 | ಕಮಿಟ್ ನ ವಿವರಗಳೊಂದಿಗೆ ಫೈಲ್ ಗಳಿಗೆ ಯಾವ ಬದಲಾವಣೆಗಳನ್ನು ಮಾಡಿದೆ ಎಂದು ಇದು ತೋರಿಸುತ್ತದೆ. |
09:16 | ಈ ವೈಶಿಷ್ಟ್ಯವು ನಾವು ಜತೆಗೂಡಿ ಕೆಲಸಮಾಡುವಾಗ ಉಪಯುಕ್ತವಾಗಿದೆ. |
09:20 | ಈಗ, ನಾವು 'git space log space hyphen hyphen oneline' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ, 'Git log' ಅನ್ನು ನೋಡೋಣ. |
09:30 | 'Initial commit' ನ ವಿವರಗಳನ್ನು ನೋಡಲು, ಹೀಗೆ ಟೈಪ್ ಮಾಡಿ: 'git space show space'. ಆಮೇಲೆ, 'Initial commit' ನ 'ಕಮಿಟ್ ಹ್ಯಾಶ್' ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ ಹಾಗೂ ‘Enter’ ಅನ್ನು ಒತ್ತಿ. |
09:42 | ಇಲ್ಲಿ, 'Initial commit' ನ ವಿವರಗಳನ್ನು ನೀವು ನೋಡಬಹುದು. |
09:46 | ಹೀಗೆ, ನಮ್ಮ ‘ರಿಪಾಸಿಟರಿ’ ಯ ಯಾವುದೇ ಕಮಿಟ್ ನ ವಿವರಗಳನ್ನು ನಾವು ನೋಡಬಹುದು. |
09:51 | ನಂತರ, ಒಂದು ಫೈಲ್ ನ ಸಂಪೂರ್ಣ ಹಿಸ್ಟರಿಯನ್ನು ಹೇಗೆ ನೋಡುವುದೆಂದು ನಾವು ಕಲಿಯೋಣ. |
09:56 | 'mypage.html' ನ ಪೂರ್ಣ ಹಿಸ್ಟರಿಯನ್ನು ನೋಡಲು ಹೀಗೆ ಟೈಪ್ ಮಾಡಿ: 'git space blame space mypage.html' ಮತ್ತು ‘Enter’ ಅನ್ನು ಒತ್ತಿ. |
10:07 | ಇಲ್ಲಿ, 'mypage.html' ಫೈಲ್ ನ ಪೂರ್ಣ ಹಿಸ್ಟರಿಯನ್ನು, ಅರ್ಥಾತ್, ಕ್ರಿಯೇಟ್ ಮಾಡಿದಾಗಿನಿಂದ ಈಗಿನವರೆಗೆ, ನಾವು ನೋಡಬಹುದು. |
10:17 | ಹೀಗೆಯೇ, ನಿಮ್ಮ ‘ರಿಪಾಸಿಟರಿ’ ಯಲ್ಲಿಯ ಯಾವುದೇ ಫೈಲ್ ನ ಪೂರ್ತಿ ವಿವರಗಳನ್ನು ನೀವು ನೋಡಬಹುದು. |
10:22 | ಕೊನೆಯದಾಗಿ, 'Git' ನಿಂದ ಸಹಾಯವನ್ನು (help) ಹೇಗೆ ಪಡೆಯುವುದೆಂದು ನಾವು ನೋಡುವೆವು. |
10:27 | ಸಹಾಯವನ್ನು ಪಡೆಯಲು ಸಿಂಟ್ಯಾಕ್ಸ್ ಹೀಗಿದೆ -
'git help <verb> ' ಅಥವಾ 'git <verb> hyphen hyphen help ' ಅಥವಾ 'man git <verb>' |
10:40 | ಉದಾಹರಣೆಗೆ: 'git help show' |
10:44 | ನಾನು ಇದನ್ನು ಮಾಡಿ ತೋರಿಸುತ್ತೇನೆ. 'ಟರ್ಮಿನಲ್' ಗೆ ಹಿಂದಿರುಗಿ ಮತ್ತು 'git space help space show' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. |
10:55 | ಇಲ್ಲಿ, ನಾವು 'show' ಕಮಾಂಡ್ ನ ಕೈಪಿಡಿಯನ್ನು (manual) ನೋಡಬಹುದು. |
10:59 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
11:03 | ಸಂಕ್ಷಿಪ್ತವಾಗಿ, |
11:04 | ಈ ಟ್ಯುಟೋರಿಯಲ್ ನಲ್ಲಿ, ನಾವು:
|
11:15 | ಒಂದು ಅಸೈನ್ಮೆಂಟ್-
|
11:29 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
11:37 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: contact@spoken-tutorial.org |
11:48 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
11:55 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: |
12:00 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..
ವಂದನೆಗಳು. |