Drupal/C2/Creating-Dummy-Content/Kannada
From Script | Spoken-Tutorial
Revision as of 21:28, 4 September 2016 by Vasudeva ahitanal (Talk | contribs)
Time | Narration |
00:01 | ಡಮ್ಮಿ ಕಂಟೆಂಟ್ ಗಳನ್ನು ಉತ್ಪಾದಿಸುವ ಬಗೆಗಿನ ಈ ಸ್ಪೊಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ಅಲ್ಲಿ ನಾವು “ಡೆವಿಲ್ ಮೋಡ್ಯುಲ್” ಅನ್ನು ಬಳಸಿ ನಕಲಿ ವಿಷಯಗಳನ್ನು(ಡಮ್ಮಿ ಕಂಟೆಂಟ್)ಗಳನ್ನು ರಚಿಸುವುದನ್ನು ಕಲಿಯೋಣ. |
00:12 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು :
ನೀವು ನಿಮ್ಮ ಅನುಕೂಲತೆಗೆ ತಕ್ಕಂತೆ ಯಾವುದೇ ವೆಬ್ ಬ್ರೌಸರ್ ಅನ್ನು ಬಳಸಬಹುದು. |
00:25 | ನಾವು ಡ್ರುಪಲ್ ಸೈಟ್ ಅನ್ನು ರಚಿಸಬೇಕಾದರೆ ನಮಗೆ ಸಾಕಷ್ಟು ವಿಷಯಗಳು (ಕಂಟೆಂಟ್ ಗಳು) ಅನಿವಾರ್ಯವಾಗಿವೆ. ಇದು ನಮಗೆ ಲೇಯೌಟ್, ವ್ಯೂವ್ಸ್ ಮತ್ತು ಡಿಸೈನ್ಸ್ ಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. |
00:36 | ಆದರೆ ಇಲ್ಲಿ ನಾವು ರಿಯಲ್ ಕಂಟೆಂಟ್ ಬಳಸಬಾರದು. ನಾವು ಕಂಟೆಂಟ್ ಟೈಪ್ ಅನ್ನು ಅಥವಾ ಒಂದು ಫೀಲ್ಡ್ ಅನ್ನು ಬದಲಿಸಬೇಕೆಂದು ಇಟ್ಟುಕೊಳ್ಳೋಣ. |
00:44 | ಆಗ ನಾವು ಪುನಃ ಒಳ ಹೋಗಿ ರಿಯಲ್ ಕಂಟೆಂಟ್ ಅನ್ನು ಬದಲಿಸಬೇಕಾದೀತು. ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುವುದು. |
00:50 | ಆದರೆ ಮುಖ್ಯವಾಗಿ ನಾವು ನಮ್ಮ ಕಂಟೆಂಟ್ ಟೈಪ್ ಅನ್ನು ಪರೀಕ್ಷಿಸಿ, ಅವುಗಳು ನಮ್ಮ ಅಪೇಕ್ಷೆಗೆ ತಕ್ಕಂತೆ ಕಾರ್ಯನಿವಹಿಸುತ್ತಿವೆಯೇ ಎಂದು ದೃಢಪಡಿಸಿಕೊಳ್ಳಬೇಕು. |
00:57 | ಇದುವರೆಗೆ ನಾವು ಕೆಲವು ಫೈಲ್ ಫೀಲ್ಡ್ ಗಳನ್ನು ಮಾತ್ರ ಗಮನಿಸಿದ್ದೇವೆ. |
01:01 | ನಮ್ಮ ಸಿನ್ಸಿನಾಟಿ ನೋಡ್ ಅನ್ನು ತೆಗೆದುಕೊಳ್ಳೋಣ. ಸಿನ್ಸಿನ್ನಾಟಿ (Cincinnati)ಸಮೂಹ ತಮ್ಮ ಸಭೆಗೆ ಇಂತಿಷ್ಟು ಶುಲ್ಕವನ್ನು ನಿಗದಿಪಡಿಸಲು ಬಯಸುತ್ತದೆ. |
01:07 | ಮತ್ತು ಇದನ್ನು ಅವರು ತಮ್ಮ “ಸೈಟ್” ನಲ್ಲಿ ತೋರ್ಪಡಿಸಲು ಬಯಸುತ್ತಾರೆ. |
01:10 | ಶುಲ್ಕವನ್ನು ನಾವು ದಶಾಂಶ ಅಥವಾ ಪೂರ್ಣಾಂಕ ಪದ್ಧತಿಯಲ್ಲಿ ತೋರ್ಪಡಿಸಬಹುದು. |
01:15 | ಅವರು ೧೦ ಡಾಲರ್ ಅನ್ನು ಶುಲ್ಕವಾಗಿ ನಿಗದಿಪಡಿಸಿರುವಾಗ, ನೀವು ಪೂರ್ಣಾಂಕಪದ್ಧತಿಯನ್ನು ಆಯ್ಕೆ ಮಾಡುವಿರಿ. ಆದರೆ ನಂತರದಲ್ಲಿಅವರು ಶುಲ್ಕವನ್ನು 10.99 ಡಾಲರ್ಸ್ ಎಂದು ಬದಲಿಸುತ್ತಾರೆ. |
01:24 | ಈಗ , ನಾವು ಸಂಕಷ್ಟದಲ್ಲಿ ಸಿಲುಕಿಕೊಂಡೆವು. |
01:26 | ಪೂರ್ಣಾಂಕವನ್ನು ದಂಶಾಂಶಸಂಖ್ಯಯಾಗಿಸಲು ಸಾಧ್ಯವಿಲ್ಲ. ವಿಶೇಷವಾಗಿ ವಿಷಯಗಳನ್ನು(ಕಂಟೆಂಟ್)ಸೇರಿಸಿದ ನಂತರದಲ್ಲಿ ಅದು ಅಸಾಧ್ಯ. |
01:32 | ಹಾಗಾಗಿ ಈ ಎಲ್ಲಾ ಸಂಗತಿಗಳ ಬಗ್ಗೆ ಮೊದಲೇ ಯೋಜನೆಯನ್ನು ಮಾಡಿಕೊಳ್ಳುವುದು ಅನಿವಾರ್ಯ. |
01:37 | ಈ ಎಲ್ಲಾ ಸಂಗತಿಗಳನ್ನು ನಕಲಿ ವಿಷಯಗಳನ್ನು(ಕಂಟೆಂಟ್ ಗಳನ್ನು)ಬಳಸಿ ಪರೀಕ್ಷಿಸಬಹುದು. ನಮ್ಮ ಪರೀಕ್ಷೆ ಸಮಾಪ್ತಿಯಾದಾಗ ಇವುಗಳನ್ನು ಸುಲಭವಾಗಿ ಸೇರಿಸಬಹುದು ಮತ್ತು ಅಳಿಸಬಹುದಾಗಿದೆ. |
01:48 | ನಮಗೆ ಪರೀಕ್ಷೆಗಾಗಿ ನೂರಾರು ನಿಜವಾದ ವಿಷಯಗಳ (ಕಂಟೆಂಟ್ ಗಳ) ಅಗತ್ಯವಿಲ್ಲ, ಕೆಲವೇ ನಕಲಿ ವಿಷಯಗಳು ಸಾಕಾಗುತ್ತವೆ. |
01:54 | ಈ ಸಮಸ್ಯೆಗೆ ಪರಿಹಾರವೆಂದರೆ ಡೆವಿಲ್ ಮೋಡ್ಯುಲ್ . drupal.org/project/devel. ಯನ್ನು ಪ್ರವೇಶಿಸಿರಿ. |
02:02 | ಇಲ್ಲಿಯವರೆಗೆ ನಾವು ಮೋಡ್ಯುಲ್ಸ್ ಗಳ ಬಗ್ಗೆ ಚರ್ಚಿಸಲಿಲ್ಲ ಅಥವಾ ನಮ್ಮ ಡ್ರುಪಲ್ ವೆಬ್ ಸೈಟ್ ಗಳನ್ನು ವಿಸ್ತರಿಸಲೂ ಇಲ್ಲ. ಆ ವಿಷಯವನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ತಿಳಿಯೋಣ. |
02:11 | ಆದರೆ ನಾವಿಲ್ಲಿ “ಡೆವೆಲ್ ಮೋಡ್ಯೂಲ್” ಗಳನ್ನು ಇನ್ ಸ್ಟಾಲ್ ಮಾಡುವುದನ್ನು ಮತ್ತು ಬಳಸುವುದನ್ನು ತಿಳಿಯೋಣ. ಇದರಿಂದ ಡ್ರುಪೆಲ್ ಮೋಡ್ಯೂಲ್ಸ್ ನಮಗೆ ನೀಡಬಹುದಾದ ಅವಕಾಶಗಳ ಬಗ್ಗೆ ತಿಳಿಯಬಹುದಾಗಿದೆ, |
02:21 | ನಿಮ್ಮ ಸ್ಕ್ರೀನ್ ನ ಕೆಳಭಾಗದಲ್ಲಿನ ಡೌನ್ ಲೋಡ್ ವಿಭಾಗವನ್ನು ಗಮನಿಸಿ, ಇದು ನಿಮಗೆ ವಿಭಿನ್ನವಾಗಿ ಕಾಣಬಹುದು. |
02:28 | ಡ್ರುಪಲ್ 8 ಡಾಟ್ ಎಕ್ಸ್ (Drupal 8 dot x) ಎನ್ನುವುದು ಮೇಲಿನ ಹಸಿರು ವಲಯದಲ್ಲಿ ಇರಬೇಕು. ಅಲ್ಲಿ ಅದು ಕಂಡರೆ ಅದನ್ನು ಕ್ಲಿಕ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. |
02:34 | ಇಲ್ಲವಾದಲ್ಲಿ ಡೆವಲಪ್ ಮೆಂಟ್ ರಿಲೀಸ್ ಅನ್ನು ಕ್ಲಿಕ್ ಮಾಡಿ. |
02:38 | ಈಗ , ಇದನ್ನು ಎರಡು ರೀತಿಯಲ್ಲಿ ಮಾಡಬಹುದಾಗಿದೆ. ಇದನ್ನು ನಾವು ಡೌನ್ ಲೋಡ್ ಮಾಡಬಹುದು, ಆದರೆ ಇದರಿಂದ ನಮ್ಮ ಡೆಸ್ಕ್ ಟಾಪ್ ಗೆ ಅನಗತ್ಯ ಫೈಲ್ಗಳು ಬಂದು ಸೇರುತ್ತವೆ. |
02:44 | ಅಥವಾ ರೈಟ್ ಕ್ಲಿಕ್ ಮಾಡಬಹುದು. ಅಲ್ಲಿ ನಮ್ಮ ಬ್ರೌಸರ್ ಗೆ ಅನುಗುಣವಾಗಿ ಕಾಪಿ ಲಿಂಕ್' ಅಥವಾ ಕಾಪಿ ಲಿಂಕ್ ಲೊಕೇಶನ್ ಆಯ್ಕೆಗಳನ್ನು ಗಮನಿಸಬಹುದು. |
02:53 | ಯಾವುದಾದರೊಂದು ರೀತಿಯಲ್ಲಿ ಟಾರ್(.tar) ಫೈಲ್ ಅಥವಾ ಝಿಪ್(.zip) ಫೈಲ್ ಗಳನ್ನು ಕ್ಲಿಕ್ ಮಾಡಿ. ಆದರೆ
ಡೆವ್( dev) ಫೈಲ್ ಅನ್ನು ಕ್ಲಿಕ್ ಮಾಡಬೇಡಿ. ಅದು ಕಾರ್ಯ ನಿರ್ವಹಿಸುವುದಿಲ್ಲ. |
03:01 | ನಿಜವಾದ ಫೈಲ್ ಗಳಿಗೆ ಇವುಗಳು ಲಿಂಕ್ ಗಳಾಗಿವೆ. |
03:04 | ಅದನ್ನು ಪಡೆದ ಮೇಲೆ ನಮ್ಮಸೈಟ್ ಗೆ ವಾಪಾಸ್ ಬಂದು ಎಕ್ಸ್ ಟೆಂಡ್(Extend) ಅನ್ನು ಕ್ಲಿಕ್ಕಿಸಿ, ನಂತರ ಇನ್ ಸ್ಟಾಲ್ ನ್ಯೂ ಮೋಡ್ಯೂಲ್(Install new module) ಅನ್ನು ಕ್ಲಿಕ್ ಮಾಡಿ. |
03:11 | ಈಗ Install from a URL ಕ್ಷೇತ್ರದಲ್ಲಿ ಯು ಆರ್ ಎಲ್ (URL) ಆನು ಪೇಸ್ಟ್ ಮಾಡಿ. ನಿಮಲ್ಲಿ ಉತ್ತಮ ಅಂತರ್ಜಾಲ ಸಂಪರ್ಕವಿದ್ದರೆ ಯು ಅರ್ ಎಲ್ (URL) ನಿಂದೆಲೇ ಇನ್ ಸ್ಟಾಲ್ ಮಾಡಬಹುದು. |
03:22 | ಅಥವಾ, ನಿಮ್ಮ ಅನುಕೂಲಕ್ಕಾಗಿ ಕೋಡ್ ಫೈಲ್ ಲಿಂಕ್ ಗಳ ಮೂಲಕ ಡೆವೆಲ್ ಪ್ಯಾಕೇಜ್ ಅನ್ನು ಈ ಪೇಜ್ ನಲ್ಲಿ ನೀಡಲಾಗಿ. |
03:31 | ದಯವಿಟ್ಟು ಅದನ್ನು ಡೌನ್ ಲೋಡ್ ಮಾಡಿರಿ ಮತ್ತುಇಲ್ಲಿರುವ Choose File ಆಯ್ಕೆಯಲ್ಲಿ ಅದನ್ನು ಅಪ್ ಲೋಡ್ ಮಾಡಿರಿ. ಕೊನೆಯದಾಗಿ, Install ಅನ್ನು ಕ್ಲಿಕ್ ಮಾಡಿ |
03:41 | ಈಗ, Enable newly added modules ಅನ್ನು ಕ್ಲಿಕ್ ಮಾಡಿ. |
03:45 | ಮಿನಿಮೈಸ್ ಮಾಡಲು ಕೋರ್(CORE) ಎಂಬ ಶಬ್ದದ ಮೇಲೆ ಕ್ಲಿಕ್ ಮಾಡಿ. ಪರೆದೆಯನ್ನು ಕೆಳಗೆ ಸರಿಸಿ. |
03:50 | ಡೆವೆಲಪ್ ಮೆಂಟ್(DEVELOPMENT) ವಿಭಾಗದ ಕೆಳಗೆ, ನಾವು ಡೆವೆಲ್(Devel) ಮತ್ತು ಡೆವೆಲ್ ಜೆನರೇಟ್(Devel generate) ಗಳನ್ನು ಕಾಣಬಹುದು. ಸಧ್ಯಕ್ಕೆ ಉಳಿದವುಗಳನ್ನು ಪರಿಗಣಿಸದಿರಿ. |
03:57 | ಡೆವೆಲ್(Devel) ಮತ್ತುಡೆವೆಲ್ ಜೆನೆರೇಟ್(Devel generate) ಗಳನ್ನು ಗುರುತಿಸಿರಿ(ಚೆಕ್ ಮಾರ್ಕ್). ಪರದೆಯ ಕೆಳಭಾಗಕ್ಕೆ ಹೋಗಿಇನ್ ಸ್ಟಾಲ್(Install) ಅನ್ನು ಕ್ಲಿಕ್ ಮಾಡಿ. |
04:05 | ಡ್ರುಪೆಲ್ ನಲ್ಲಿ ಸದಾ ಸೇವ್, ಇನ್ ಸ್ಟಾಲ್ ಮುಂತಾದವುಗಳನ್ನು ಕ್ಲಿಕ್ ಮಾಡುವುದನ್ನು ಮರೆಯದಿರಿ. |
04:12 | 2 ಮೋಡ್ಯುಲ್ಸ್ ಹ್ಯಾವ್ ಬೀನ್ ಎನೇಬಲ್ಡ್ (2 modules have been enabled) ಎನ್ನುವ ಸಂದೇಶ ಇಲ್ಲಿ ಹಸಿರು ಬಣ್ಣದಲ್ಲಿ ನಮಗೆ ಕಾಣಬೇಕು. |
04:17 | ಕೆಂಪು ಬಣ್ಣದಲ್ಲಿ ಕಾಣುವ ಎಚ್ಚರಿಕೆ ಸಂದೇಶ ಗಂಭೀರವಾಗಿರದಿದ್ದರೆ, ಅದರ ಬಗ್ಗೆ ಚಿಂತಿಸದಿರಿ. |
04:23 | ಈ ಎಲ್ಲಾ ವಿಷಯಗಳ ಸಮೂಹಕ್ಕೆ ಚಾಲನೆ ಕೊಡಲು ಕಾನ್ಫಿಗರೇಶನ್(Configuration) ಅನ್ನು ಕ್ಲಿಕ್ ಮಾಡಿ. ನಂತರ ಎಡ ಪಾರ್ಶ್ವದಲ್ಲಿ ಕಾಣುವ ಜೆನರೇಟ್ ಕಂಟೆಂಟ್ (Generate content) ಲಿಂಕ್ ಅನ್ನು ಕ್ಲಿಕ್ ಮಾಡಿ. |
04:34 | ಈಗ, ನಾವು ನಮ್ಮ ಪರೀಕ್ಷೆಗೆ ಬೇಕಾದಷ್ಟು ವಿಷಯಗಳನ್ನು(ಕಂಟೆಂಟ್) ಉತ್ಪಾದಿಸಿಕೊಳ್ಳಬಹುದು. |
04:41 | ಈವೆಂಟ್ಸ್(Events) ಮತ್ತುಯೂಸರ್ ಗ್ರೂಪ್(User Groups) ಗಳನ್ನು ಆಯ್ಕೆ ಮಾಡಿ. ಯಾಕೆಂದರೆ ಇವುಗಳು ನಾವು ಪರೀಕ್ಷಿಸಬೇಕಾದ ಎರಡುವಿಷಯದ ಮಾದರಿಗಳು(ಕಂಟೆಂಟ್ ಟೈಪ್ಸ್). |
04:47 | "ಡಿಲೀಟ್ ಆಲ್ ಕಂಟೆಂಟ್ ಇನ್ ದೀಸ್ ಕಂಟೆಂಟ್ ಟೈಪ್ಸ್ ಬಿಫೋರ್ ಜೆನರೇಟಿಂಗ್ ನ್ಯೂ ಕಂಟೆಂಟ್(Delete all content in these content types before generating new content)" ಎನ್ನುವುದನ್ನು ಇಲ್ಲಿ ಕಾಣಬಹುದು. ಇದರ ಮೂಲಕ ನಕಲಿ ವಿಷಯಗಳನ್ನು ಡಿಲೀಟ್ ಮಾಡಬಹುದಾಗಿದೆ. |
04:56 | ಅದನ್ನು ಗುರುತಿಸಿರಿ(ಚೆಕ್ ಮಾರ್ಕ್) ಹಾಗು 0 (ಸೊನ್ನೆ) ನೋಡ್ ಗಳು ಎಂದು ಆಯ್ಕೆ ಮಾಡಿ. ಈ ಪ್ರಕ್ರಿಯೆ ಎಲ್ಲಾಈವೆಂಟ್ಸ್ ಮತ್ತುಯೂಸರ್ ಗ್ರೂಪ್ಸ್ ಗಳನ್ನು ಡಿಲೀಟ್ ಮಾಡುತ್ತದೆ. |
05:05 | ಅದರಲ್ಲಿ ನಾವು ಹಿಂದೆ ರಚಿಸಿರುವವುಗಳು ಕೂಡ ಒಳಗೊಳ್ಳುತ್ತವೆ. ಉದಾಹರಣೆಗಾಗಿ- ನಮ್ಮ ಸಿನ್ಸಿನಾಟಿ ಯೂಸರ್ ಗ್ರೂಪ್ ಕೂಡ ಇದರಿಂದ ಡಿಲೀಟ್ ಆಗುವುದು. |
05:15 | ಹಾಗಾಗಿ,ಅದನ್ನು ಗುರುತಿಸದಿರಿ(ಅನ್ ಚೆಕ್ ಮಾಡಿ). ಈಗ 50 ನೋಡ್ಸ್ ಗಳನ್ನು ಸೃಷ್ಟಿಸೋಣ. |
05:20 | ಒಂದುವರ್ಷದಷ್ಟು(ಒನ್ ಇಯರ್) ಹಿಂದೆ ತೆರಳಿರಿ. |
05:22 | ನಮ್ಮ ನೋಡ್ಸ್ ಗಳಲ್ಲಿ ಯಾವ ಕಮೆಂಟ್ಸ್(comments) ಗಳು ಕೂಡ ಇಲ್ಲ. |
05:25 | ಮ್ಯಾಕ್ಸಿಮಮ್ ನಮ್ಬರ್ ಆಫ್ ವರ್ಡ್ಸ್ ಇನ್ ಟೈಟಲ್ಸ್(Maximum number of words in titles) ಕ್ಷೇತ್ರವನ್ನು 2 ಕ್ಕೆ ಬದಲಿಸಿ. ಇದನ್ನು ಮಾಡದಿದ್ದಲ್ಲಿ ಇದು ಸಾಕಷ್ಟುಲಾರೆಮ್ ಇಪ್ಸಿಮ್(Lorem Ipsum) ಸಾಲುಗಳನ್ನು ಉತ್ಪಾದಿಸುತ್ತದೆ. |
05:35 | ಜೆನರೇಟ್(Generate) ಅನ್ನು ಕ್ಲಿಕ್ ಮಾಡಿ. ಕೂಡಲೇ, ನಮಗೆ ಯಶಸ್ವಿಯಾಗಿದೆ ಎನ್ನುವ ಸಂದೇಶ ಕಾಣುವುದು. ಇದು ಕಾರ್ಯನಿರ್ವಹಿಸಿರುವುದನ್ನು ಪರೀಕ್ಷಿಸಿಲುಕಂಟೆಂಟ್ ಅನ್ನು ಕ್ಲಿಕ್ ಮಾಡಿ. |
05:44 | ಇಲ್ಲಿ ನಮಗೆ ಹೊಸ 50 ನೋಡ್ ಗಳು ಕಾಣಸಿಗುತ್ತವೆ – ಅವುಗಳಲ್ಲಿ ಅರ್ಧದಷ್ಟು ಈವೆಂಟ್ಸ್(Events) , ಮತ್ತುಅರ್ಧದಷ್ಟು ಯೂಸರ್ ಗ್ರೂಪ್ಸ್(User groups). |
05:50 | ಇದರಲ್ಲಿ ಯಾವದನ್ನಾದರು ಕ್ಲಿಕ್ ಮಾಡಿದರೆ, ಡೆವೆಲ್(Devel) ಉತ್ಪಾದಿಸಿರುವ ಸಾಕಷ್ಟುವಿವರಣೆ(ಡಿಸ್ ಕ್ರಿಪ್ಷನ್), ಒಂದು ಈವೆಂಟ್ ಲೋಗೊ(Event Logo), |
05:57 | ಒಂದು ನಕಲಿಈವೆಂಟ್ ವೆಬ್ ಸೈಟ್ ,ಒಂದುದಿನಾಂಕ(ಡೇಟ್) ಹಾಗು ಯಾವುದಾದರೊಂದುಯೂಸರ್ ಗ್ರೂಪ್ಸ್ ಅನ್ನು ಪ್ರಾಯೋಕರು(ಸ್ಪೋನ್ಸರ್) ಎಂದು ಆಯ್ಕೆ ಮಾಡಿರುವುದು ಮತ್ತು ಕೆಲವು ಕಾರ್ಯಕ್ರಮದ ವಿಷಯಗಳನ್ನು(ಈವೆಂಟ್ ಟಾಪಿಕ್ಸ್) ಕೂಡ ಕಾಣಬಹುದು. |
06:08 | ಈಗ ನಾವು ನಮ್ಮ' ಲೇಯೋಟ್ಸ್, ನಮ್ಮ ವೀವ್ಸ್ ಮತ್ತು ಇನ್ನಿತರ ನಮಗಿಷ್ಟವಾದ ಸಂಗತಿಗಳನ್ನು , ನಮ್ಮಸೈಟ್ ಗೆ ಸಂಬಧಿಸಿದ ಹಾಗೆ ಮಾಡಬಹುದು. |
06:15 | ಡೆವೆಲ್ ನಕಲಿ ವಿಷಯಗಳನ್ನು ಉತ್ಪಾದಿಸುವ ಮೂಲಕ ನಮ್ಮ ಸಾಕಷ್ಟು ಸಮಯವನ್ನು ಉಳಿಸುವುದರಲ್ಲಿ ಸಹಕಾರಿಯಾಗಿದೆ. |
06:20 | ಇದು drupal.org. ಇಂದ ಡೌನ್ ಲೋಡ್ ಮಾಡಬಹುದಾದ “ಮೋಡ್ಯೂಲ್” ನಿಂದ ದೊರಕುವ “ಡ್ರುಪೆಲ್” ನ ಶ್ರೇಷ್ಠ ವಿಶೇಷತೆಗಳು. ಇವುಗಳಿಗೆಕಾಂಟ್ರಿಬ್ಯೂಟೆಡ್ ಮೋಡ್ಯೂಲ್ಸ್ ಎಂದು ಕರೆಯುವರು. ಇದರ ಬಗ್ಗೆ ಮುಂದೆ ನಾವು ಕಲಿಯೋಣ. |
06:32 | ಇದರೊಂದಿಗೆ ಈ ಟ್ಯುಟೋರಿಯಲ್ ಅಂತ್ಯವಾಗಿದೆ. |
06:35 | ಈ ಟ್ಯುಟೋರಿಯಲ್ ನಲ್ಲಿ ನಾವು ಡೆವೆಲ್ ಮೋಡ್ಯೂಲ್ ಗಳನ್ನು ಬಳಸಿ ನಕಲಿ ವಿಷಯಗಳನ್ನು ರಚಿಸುವುದನ್ನು ಕಲಿತಿದ್ದೇವೆ. |
06:48 | ಈ ವೀಡಿಯೋ Acquia (ಆಕ್ವಿಯಾ) ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ. |
06:57 | ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ. |
07:03 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೊಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ. |
07:11 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು:
|
07:23 | ಈ ಟ್ಯುಟೋರಿಯಲ್ ನ ಅನುವಾದಕ ಮಂಗಳೂರಿನಿಂದ ಪ್ರಜ್ವಲ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |