Git/C3/Hosting-Git-Repositories/Kannada
From Script | Spoken-Tutorial
Revision as of 10:48, 27 August 2016 by Sandhya.np14 (Talk | contribs)
|
| |||
00:01 | Hosting Git Repositories (ಹೋಸ್ಟಿಂಗ್ ಗಿಟ್ ರಿಪಾಸಿಟರೀಸ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. | |||
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: * 'ಗಿಟ್ ರಿಪಾಸಿಟರಿ ಹೋಸ್ಟಿಂಗ್ ಸರ್ವೀಸಸ್' | |||
00:11 | * 'ಗಿಟ್ ಹಬ್' ಅಕೌಂಟ್ ಅನ್ನು ಕ್ರಿಯೇಟ್ ಮಾಡುವುದು | |||
00:14 | * 'ಗಿಟ್ ಹಬ್'ನಲ್ಲಿ ರಿಪಾಸಿಟರಿಯನ್ನು ಕ್ರಿಯೇಟ್ ಮಾಡುವುದು ಹಾಗೂ * ರಿಪಾಸಿಟರಿಯಲ್ಲಿ ಟ್ಯಾಗ್ ಅನ್ನು ಕ್ರಿಯೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು. | |||
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu Linux 14.04 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ. | |||
00:29 | ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು. | |||
00:32 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಇಂಟರ್ನೆಟ್ ಕನೆಕ್ಷನ್ ಇರಬೇಕು. | |||
00:37 | ನಿಮಗೆ 'ಗಿಟ್ ಕಮಾಂಡ್' ಗಳ ಪರಿಚಯ ಇರಬೇಕು. | |||
00:42 | ಇಲ್ಲದಿದ್ದರೆ, ಸಂಬಂಧಿತ Git ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಇಲ್ಲಿ ತೋರಿಸಿದ ಲಿಂಕ್ ಅನ್ನು ನೋಡಿ. | |||
00:47 | ಮೊದಲು ನಾವು, 'ಗಿಟ್ ರಿಪಾಸಿಟರಿ ಹೋಸ್ಟಿಂಗ್ ಸರ್ವೀಸಸ್' ಬಗ್ಗೆ ತಿಳಿದುಕೊಳ್ಳೋಣ. | |||
00:52 | 'Bitbucket (ಬಿಟ್ ಬಕೆಟ್), CloudForge (ಕ್ಲೌಡ್ ಫೋರ್ಜ್)' ಹಾಗೂ 'GitHub (ಗಿಟ್ ಹಬ್)' ಗಳಂತಹ ಅನೇಕ ವೆಬ್ ಆಧಾರಿತ ಆಯೋಜಕ ಸೇವೆಗಳು ಲಭ್ಯವಿರುತ್ತವೆ. | |||
01:00 | ಇಲ್ಲಿ ನಿಮ್ಮ 'ಗಿಟ್ ರಿಪಾಸಿಟರಿ' ಗಳನ್ನು ನೀವು ಉಚಿತವಾಗಿ ಇಂಪೋರ್ಟ್ ಮಾಡಿಕೊಳ್ಳಬಹುದು. | |||
01:05 | ನಿಮ್ಮ ರಿಪಾಸಿಟರಿಯನ್ನು ಹಂಚಿಕೊಳ್ಳಲು ಒಂದು ಕೇಂದ್ರೀಕೃತ ಸ್ಥಳವನ್ನು ಅವುಗಳು ಒದಗಿಸುತ್ತವೆ. ಇದರಿಂದ ಅನೇಕ ಜನರು ಸುಲಭವಾಗಿ ಒಂದು ಪ್ರೊಜೆಕ್ಟ್ ನಲ್ಲಿ ಒಟ್ಟಿಗೆ ಕೆಲಸಮಾಡಬಹುದು. | 01:14 | ಬೇರೆಯವರ ಪ್ರೊಜೆಕ್ಟ್ ಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಅಭ್ಯಸಿಸಲು ಅವುಗಳು ನಿಮಗೆ ಅನುಮತಿಸುತ್ತವೆ. | |
01:19 | 'ಗಿಟ್ ಹಬ್' ಅನ್ನು ಏಕೆ ಬಳಸಬೇಕು? ಇದನ್ನು ನಾವು ನಂತರ ನೋಡುವೆವು. | |||
01:23 | 'ಓಪನ್ ಸೋರ್ಸ್ ಸಾಫ್ಟ್ವೇರ್' ಅನ್ನು ಇಟ್ಟುಕೊಳ್ಳಲು 'ಗಿಟ್ ಹಬ್', ಅತ್ಯಂತ ಜನಪ್ರಿಯ ವೆಬ್ಸೈಟ್ ಆಗಿದೆ. | |||
01:28 | 'ಗಿಟ್ ಹಬ್' ನಲ್ಲಿ, ನೀವು ನಿಮ್ಮ ತಂಡದವರ ಜೊತೆಗೆ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ವೀಕ್ಷಿಸಬಹುದು, ಚರ್ಚಿಸಬಹುದು ಹಾಗೂ ವಿಮರ್ಶೆ (ರಿವ್ಯೂ) ಮಾಡಬಹುದು. | |||
01:35 | 'ಗಿಟ್ ಹಬ್ ' ನಲ್ಲಿ ಬಳಸಲಾದ ವಿಧಾನವು ಬೇರೆ ಉಚಿತ 'ಗಿಟ್ ಹೋಸ್ಟಿಂಗ್' ವೆಬ್ಸೈಟ್ ಗಳಲ್ಲಿ ಇರುವುದನ್ನೇ ಹೋಲುತ್ತದೆ. | |||
01:42 | ಅವುಗಳನ್ನು ಆಮೇಲೆ ನಿಮ್ಮಷ್ಟಕ್ಕೆ ನೀವೇ ಕಲಿತುಕೊಳ್ಳಬಹುದು. | |||
01:45 | ಆಮೇಲೆ, 'ಗಿಟ್ ಹಬ್' ನಲ್ಲಿ ಅಕೌಂಟ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ಕಲಿಯುವೆವು. | |||
01:49 | ನಿಮ್ಮ ವೆಬ್ ಬ್ರೌಸರ್ ಅನ್ನು ಓಪನ್ ಮಾಡಿ, 'www.github.com' ಗೆ ಹೋಗಿ. | |||
01:56 | ಇಲ್ಲಿ, ಹೋಮ್-ಪೇಜ್ ನಲ್ಲಿ, ನೀವು ರಜಿಸ್ಟ್ರೇಶನ್ ಗಾಗಿ ನಿಮ್ಮ ವಿವರಗಳನ್ನು ಕೊಡಬೇಕು. | |||
02:01 | ನಾನು "priya-spoken" ಅನ್ನು ಯೂಸರ್ ನೇಮ್ ಎಂದು ಹಾಗೂ | |||
02:07 | "priyaspoken@gmail.com" ಅನ್ನು ಇಮೇಲ್-ಐ ಡಿ ಎಂದು (email-id) ಟೈಪ್ ಮಾಡುವೆನು. | |||
02:11 | ದಯವಿಟ್ಟು ನಿಮಗೆ ಇಷ್ಟವಾದ ಯೂಸರ್-ನೇಮ್ ಹಾಗೂ ಸರಿಯಾದ ಇಮೇಲ್ id ಯನ್ನು ಟೈಪ್ ಮಾಡಿ. | |||
02:16 | ಆಮೇಲೆ, ನಾನು ನನ್ನ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು. | |||
02:19 | ನೀವು ನಿಮ್ಮ ಆಯ್ಕೆಯ ಯಾವುದೇ ಪಾಸ್ವರ್ಡ್ ಅನ್ನು ಕೊಡಬಹುದು. | |||
02:23 | ಈಗ, ಕೆಳತುದಿಯ ಬಲಗಡೆಯಲ್ಲಿ 'Sign up for GitHub' ಬಟನ್ ನ ಮೇಲೆ ಕ್ಲಿಕ್ ಮಾಡಿ. | |||
02:28 | ಆಮೇಲೆ, 'Step 2' ನಲ್ಲಿ, ನಾವು ನಮ್ಮ ಯೋಜನೆಯನ್ನು (plan) ಅರಿಸಿಕೊಳ್ಳಬೇಕು. | |||
02:32 | ನನಗೆ ಉಚಿತ ಸೇವೆಯನ್ನು ಬಳಸಿಕೊಳ್ಳಬೇಕಾಗಿದೆ. ಆದ್ದರಿಂದ ನಾನು 'Free' ಪ್ಲಾನ್ ಅನ್ನು ಆರಿಸಿಕೊಳ್ಳುವೆನು. | |||
02:37 | ಈಗ, 'Finish sign up' ಬಟನ್ ನ ಮೇಲೆ ಕ್ಲಿಕ್ ಮಾಡಿ. | |||
02:40 | ಆಮೇಲೆ, ನಾವು 'ಗಿಟ್ ಹಬ್' ನಲ್ಲಿ ಒಂದು ರಿಪಾಸಿಟರಿಯನ್ನು ಕ್ರಿಯೇಟ್ ಮಾಡುವೆವು. | |||
02:44 | ಬಲಬದಿಯ ಬಾಕ್ಸ್ ನಲ್ಲಿ 'New repository' ಎಂಬ ಒಂದು ಬಟನ್ ಅನ್ನು ನೀವು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ. | |||
02:51 | ಇದು “Please verify your email address” ಎಂಬ ಒಂದು ಮೆಸೇಜನ್ನು ತೋರಿಸುತ್ತದೆ. | |||
02:55 | 'ಗಿಟ್ ಹಬ್', ನಮ್ಮ ರಜಿಸ್ಟರ್ ಮಾಡಲಾದ ಇಮೇಲ್- id ಗೆ ಒಂದು ವೆರಿಫಿಕೇಶನ್ ಮೇಲ್ ಅನ್ನು ಕಳಿಸುತ್ತದೆ. | |||
02:59 | ಹೀಗಾಗಿ, ನಾವು ನಮ್ಮ ಇಮೇಲ್-ಅಕೌಂಟ್ ಅನ್ನು ತೆರೆದು, 'ಗಿಟ್ ಹಬ್'ನಿಂದ ಕಳಿಸಲಾದ ಇಮೇಲ್ ನ ಮೇಲೆ ಕ್ಲಿಕ್ ಮಾಡುತ್ತೇವೆ. | |||
03:06 | ನಾನು 'ಗಿಟ್ ಹಬ್' ನೊಂದಿಗೆ ರಜಿಸ್ಟರ್ ಮಾಡಲಾದ ನನ್ನ ಇಮೇಲ್- id ಗೆ ಈಗಾಗಲೇ ಸೈನ್-ಇನ್ ಮಾಡಿದ್ದೇನೆ. | |||
03:11 | ನಾನು ಇದನ್ನು ತೆರೆಯುತ್ತೇನೆ. | |||
03:13 | ನನಗೆ 'ಗಿಟ್ ಹಬ್ ' ನಿಂದ ಒಂದು ಇಮೇಲ್ ಬಂದಿದೆ. | |||
03:16 | ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ. | |||
03:18 | 'subject' ಲೈನ್, “Please verify your email address”ಎಂದು ಹೇಳುತ್ತದೆ. | |||
03:23 | ನಿಮ್ಮ 'Inbox' ನಲ್ಲಿ ಮೇಲ್ ಸಿಗದಿದ್ದರೆ, 'Spam' ನಲ್ಲಿ ಅಥವಾ 'Junk' ಫೋಲ್ಡರ್ ಗಳಲ್ಲಿ ಹುಡುಕಿ. | |||
03:29 | ಈಗ, ' Verify email address' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | |||
03:32 | ಮತ್ತೆ ನಮ್ಮನ್ನು 'ಗಿಟ್ ಹಬ್ ಹೋಮ್ ಪೇಜ್'ಗೆ ಕಳಿಸಲಾಗುತ್ತದೆ. | |||
03:36 | 'ಗಿಟ್ ಹಬ್' ನಲ್ಲಿ ನಾವು ಯಶಸ್ವಿಯಾಗಿ ನಮ್ಮ ಅಕೌಂಟ್ ಅನ್ನು ಕ್ರಿಯೇಟ್ ಮಾಡಿದ್ದೇವೆ ಎಂದು ಇದು ಸೂಚಿಸುತ್ತದೆ. | |||
03:42 | ನಾವು 'ಗಿಟ್ ಹಬ್' ನಲ್ಲಿ ಒಂದು 'ರಿಪಾಸಿಟರಿಯನ್ನು ಕ್ರಿಯೇಟ್ ಮಾಡಲು ಪ್ರಯತ್ನಿಸುವೆವು. | |||
03:45 | ಈಗ, ಬಲಬದಿಯ ಬಾಕ್ಸ್ ನಲ್ಲಿ 'New repository' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | |||
03:50 | ಈಗ ನಮಗೆ ರಿಪಾಸಿಟರಿಯನ್ನು ಕ್ರಿಯೇಟ್ ಮಾಡಲು ಸಾಧ್ಯವಾಗಿದೆ ಎಂದು ನೀವು ನೋಡಬಹುದು. | |||
03:54 | ನಾವು 'Repository Name' ಅನ್ನು “stories” ಎಂದು ಟೈಪ್ ಮಾಡೋಣ. | |||
03:58 | ನಿಮಗೆ ರಿಪಾಸಿಟರಿಯ ಬಗ್ಗೆ ಯಾವುದೇ ವಿವರಣೆಯನ್ನು ಕೊಡಬೇಕಾಗಿದ್ದರೆ, ಇಲ್ಲಿ ನಾವು ಅದನ್ನು ಮಾಡಬಹುದು. | |||
04:04 | ಆಮೇಲೆ, ನಾನು ನಿಃಶುಲ್ಕವಾಗಿರುವ 'Public' ಎಂಬ ಆಯ್ಕೆಯನ್ನು ಆರಿಸಿಕೊಳ್ಳುವೆನು. | |||
04:09 | ನಾವು 'Private' ಎಂಬ ಆಯ್ಕೆಯನ್ನು ಆರಿಸಿಕೊಂಡರೆ, ರಿಪಾಸಿಟರಿಯನ್ನು ಖಾಸಗಿಯಾಗಿ ಇಡಲು ನಾವು ಸ್ವಲ್ಪ ಶುಲ್ಕವನ್ನು ಕೊಡಬೇಕಾಗುವುದು. | |||
04:16 | ಇದರ ಅರ್ಥ, ಬೇರೆ ಯೂಸರ್ ಗಳು ನಮ್ಮ ರಿಪಾಸಿಟರಿಯನ್ನು ಹುಡುಕಲು ಮತ್ತು ಡೌನ್ಲೋಡ್ ಮಾಡಲು ಸಾಧ್ಯವಿಲ್ಲ. | |||
04:21 | ನಾನು 'Public ' ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡುತ್ತೇನೆ. | |||
04:24 | “Initialize this repository with a README” ಎಂಬ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. | |||
04:28 | ಇದು ಒಂದು 'readme' ಫೈಲನ್ನು ಕ್ರಿಯೇಟ್ ಮಾಡುವುದು. | |||
04:31 | ಈ ಫೈಲ್ ನಲ್ಲಿ, ನೀವು ಕೋಡ್ ನ ಬಳಕೆ ಅಥವಾ ಇನ್ಸ್ಟಾಲ್ ಮಾಡಲು ಬೇಕಾದ ಸೂಚನೆಗಳ ಬಗ್ಗೆ ಮಾಹಿತಿಯನ್ನು ಬರೆಯಬಹುದು. | |||
04:37 | ಇದು ಎಲ್ಲ ಸಹಭಾಗಿಗಳಿಗೆ ಉಪಯುಕ್ತವಾಗಿರುವುದು. | |||
04:42 | ಆದಾಗ್ಯೂ, ನಾವು ಅಸ್ತಿತ್ವದಲ್ಲಿರುವ ಒಂದು ರಿಪಾಸಿಟರಿಯನ್ನು ಇಂಪೋರ್ಟ್ ಮಾಡಿಕೊಳ್ಳುತ್ತಿದ್ದರೆ, ಆಗ ಈ ಬಾಕ್ಸ್ ಅನ್ನು ಅನ್-ಚೆಕ್ ಮಾಡಬೇಕು. | |||
04:48 | ಈಗ, 'Create repository' ಬಟನ್ ನ ಮೇಲೆ ಕ್ಲಿಕ್ ಮಾಡಿ. | |||
04:52 | ರಿಪಾಸಿಟರಿಯ ಹೆಸರನ್ನು ನಿಮ್ಮ ಯೂಸರ್ ನೇಮ್ ನೊಂದಿಗೆ ಯಶಸ್ವಿಯಾಗಿ ಕ್ರಿಯೇಟ್ ಮಾಡಲಾಗಿದೆ ಎಂದು ನೀವು ನೋಡಬಹುದು. | |||
04:58 | ರಿಪಾಸಿಟರಿಯನ್ನು ಒಂದುಸಲ ಕ್ರಿಯೇಟ್ ಮಾಡಿದರೆ, ಎಡಭಾಗದ ಕೆಳತುದಿಯಲ್ಲಿ ನೀವು 'readme' ಫೈಲ್ ಲೇಬಲ್ ಅನ್ನು ನೋಡಬಹುದು. | |||
05:05 | ಈ ಫೈಲ್ನಲ್ಲಿ ಸ್ವಲ್ಪ ಮಾಹಿತಿಯನ್ನು ನಾವು ಆಮೇಲೆ ಬರೆಯುವೆವು. | |||
05:09 | ಡೀಫಾಲ್ಟ್ ಆಗಿ, ಒಂದು 'ಕಮಿಟ್' ಅನ್ನು, ಎಂದರೆ 'Initial commit' ಅನ್ನು, ಒಂದು ಬ್ರಾಂಚ್ ಅರ್ಥಾತ್ 'master' ಬ್ರಾಂಚ್ ಅನ್ನು ಹಾಗೂ ಒಂದು 'ಕಾಂಟ್ರಿಬ್ಯೂಟರ್' ಅನ್ನು (contributor) ನಾವು ನೋಡಬಹುದು. | |||
05:18 | ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ, ನೀವು ಪ್ರತಿಯೊಂದು ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅವುಗಳನ್ನು ಕಲಿತುಕೊಳ್ಳಬಹುದು. | |||
05:23 | ಈಗ, ನಾವು ಈ ರಿಪಾಸಿಟರಿಯಲ್ಲಿ ಕೆಲಸ ಮಾಡಲು ಆರಂಭಿಸೋಣ. | |||
05:27 | ನಮ್ಮ ರಿಪಾಸಿಟರಿಗೆ ಒಂದು ಫೈಲನ್ನು ಸೇರಿಸುವುದರ ಮೂಲಕ ನಾವು ಆರಂಭಿಸುವೆವು. | |||
05:31 | ಮಧ್ಯದ ಪ್ಯಾನೆಲ್ ನಲ್ಲಿ 'New file' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | |||
05:34 | ಫೈಲನ್ನು ಕ್ರಿಯೇಟ್ ಮಾಡಲು, ಒಂದು ಹೊಸ ಫಾರ್ಮ್ ತೆರೆದುಕೊಳ್ಳುತ್ತದೆ. | |||
05:38 | ಇಲ್ಲಿ, ನಾನು ಫೈಲ್ ನ ಹೆಸರನ್ನು “kids-story.html” ಎಂದು ಕೊಡುವೆನು. | |||
05:44 | ನಾನು ಮೊದಲೇ ಸೇವ್ ಮಾಡಿದ್ದ ನನ್ನ 'Writer' ಡಾಕ್ಯೂಮೆಂಟ್ ನಿಂದ ಸ್ವಲ್ಪ ಕೋಡ್ ಅನ್ನು ಈ ಫೈಲ್ ನಲ್ಲಿ, ಕಾಪಿ ಮತ್ತು ಪೇಸ್ಟ್ ಮಾಡುವೆನು. | |||
05:51 | ಹೀಗೆಯೇ, ನೀವು ನಿಮ್ಮ ಫೈಲ್ ನಲ್ಲಿ ಏನನ್ನಾದರೂ ಸೇರಿಸಬಹುದು. | |||
05:55 | ನಾವು ಈಗ ಈ ಹೊಸ ಫೈಲನ್ನು 'ಕಮಿಟ್' ಮಾಡೋಣ. | |||
05:58 | ಕಮಿಟ್ ಮೆಸೇಜನ್ನು ಕೊಡಲು ಪೇಜನ್ನು ಕೆಳಗೆ ಸ್ಕ್ರೋಲ್ ಮಾಡಿ. | |||
06:01 | ಇಲ್ಲಿ, 'ಕಮಿಟ್ ಮೆಸೇಜ್' ಫೀಲ್ಡ್ ನಲ್ಲಿ, ನೀವು “Create kids-story.html” ಎಂಬ ಡೀಫಾಲ್ಟ್ ಮೆಸೇಜನ್ನು ನೋಡಬಹುದು. | |||
06:09 | ನೀವು ಡೀಫಾಲ್ಟ್ ಮೆಸೇಜನ್ನು ಇಡಬಹುದು ಅಥವಾ ಒಂದು ಹೊಸ ಮೆಸೇಜನ್ನು ಟೈಪ್ ಮಾಡಬಹುದು. | |||
06:13 | ನಾನು ಡೀಫಾಲ್ಟ್ ಮೆಸೇಜನ್ನು ಇಡುವೆನು. | |||
06:16 | ಇಲ್ಲಿ, ಮುಂದಿನ ಫೀಲ್ಡ್ ನಲ್ಲಿ, ನೀವು 'ಕಮಿಟ್'ನ ವಿಸ್ತೃತ ವಿವರಣೆಯನ್ನು ಸಹ ಕೊಡಬಹುದು. | |||
06:22 | ಆದ್ದರಿಂದ ಇಲ್ಲಿ ನಾನು, “Added first file of the repository” ಎಂದು ಟೈಪ್ ಮಾಡುವೆನು. | |||
06:27 | ಡೀಫಾಲ್ಟ್ ಆಗಿ, ನಾವು 'master ' ಬ್ರಾಂಚ್ ಗೆ 'ಕಮಿಟ್' ಮಾಡುತ್ತೇವೆ. | |||
06:31 | ಈಗ ' Commit new file' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | |||
06:34 | “kids-story.html” ಎಂಬ ನಮ್ಮ ಹೊಸ ಫೈಲ್ ಅನ್ನು ರಿಪಾಸಿಟರಿಗೆ ಸೇರಿಸಲಾಗಿದೆ. | |||
06:39 | ಈಗ 'commist ' ಸಂಖ್ಯೆಯು ಎರಡಕ್ಕೆ ಏರಿರುವುದನ್ನು ಗಮನಿಸಿ. | |||
06:43 | ನಾವು ಅದರ ಮೇಲೆ ಕ್ಲಿಕ್ ಮಾಡೋಣ. | |||
06:45 | ಇಲ್ಲಿ, 'ಕಮಿಟ್ ಮೆಸೇಜ್' ನ ಬದಿಯಲ್ಲಿ ನೀವು ಮೂರು ಚುಕ್ಕೆಗಳನ್ನುನೋಡಬಹುದು. | |||
06:49 | ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ. | |||
06:51 | ಅದು 'ಕಮಿಟ್' ನ ವಿವರಣೆಯನ್ನು ತೋರಿಸುತ್ತದೆ. | |||
06:54 | 'ಕಮಿಟ್' ನಲ್ಲಿ ನಾವು ಏನು ಮಾಡಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು, ಆ ಒಂದು ನಿರ್ದಿಷ್ಟ 'ಕಮಿಟ್ ಮೆಸೇಜ್' ನ ಮೇಲೆ ಕ್ಲಿಕ್ ಮಾಡಿ. | |||
07:00 | ಆ 'ಕಮಿಟ್' ನ ವಿವರಗಳನ್ನು ಈಗ ನೀವು ನೋಡಬಹುದು. | |||
07:03 | ನಾವು 'ಕಮಿಟ್ ಲಿಸ್ಟ್' ಗೆ ಹಿಂದಿರುಗೋಣ. | |||
07:06 | ಇದಕ್ಕಾಗಿ, ಬ್ರೌಸರ್ ನ ಮೇಲ್ಗಡೆ ಎಡಮೂಲೆಯಲ್ಲಿರುವ ಲೆಫ್ಟ್-ಆರೋ (left arrow) ಬಟನ್ ಮೇಲೆ ಕ್ಲಿಕ್ ಮಾಡಿ. | |||
07:11 | ಬಲಭಾಗದಲ್ಲಿ, 'ಕಮಿಟ್' ನ 'ಹ್ಯಾಶ್ ವ್ಯಾಲ್ಯೂ' ಅನ್ನು ನೀವು ನೋಡಬಹುದು. | |||
07:15 | ರಿಪಾಸಿಟರಿಗೆ ಹಿಂದಿರುಗಲು, ಮೇಲ್ಗಡೆ ಎಡಮೂಲೆಯಲ್ಲಿರುವ 'Code' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. | |||
07:21 | ಆಮೇಲೆ, 'ಗಿಟ್ ಹಬ್ ' ನಲ್ಲಿ ಒಂದು ಹೊಸ ಬ್ರಾಂಚ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾನು ಮಾಡಿತೋರಿಸುತ್ತೇನೆ. | |||
07:26 | ಎಡಭಾಗದಲ್ಲಿ, 'Branch' ಎಂಬ ಹೆಸರಿನ ಒಂದು ಡ್ರಾಪ್-ಡೌನ್ ಲಿಸ್ಟ್ ಅನ್ನು ನೀವು ನೋಡಬಹುದು. | |||
07:31 | ಒಂದು ಹೊಸ ಬ್ರಾಂಚ್ ಅನ್ನು ಕ್ರಿಯೇಟ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ. | |||
07:34 | ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುವುದನ್ನು ನೀವು ನೋಡಬಹುದು. | |||
07:38 | ಪಾಪ್-ಅಪ್ ವಿಂಡೋದಲ್ಲಿ, “Find or create a branch” ಎಂಬ ಫೀಲ್ಡನ್ನು ನೀವು ನೋಡಬಹುದು. | |||
07:43 | ನಾನು ಹೊಸ ಬ್ರಾಂಚ್ ನ ಹೆಸರನ್ನು “new-chapter” ಎಂದು ಟೈಪ್ ಮಾಡಿ, 'Enter' ಅನ್ನು ಒತ್ತುವೆನು. | |||
07:49 | “new-chapter” ಬ್ರಾಂಚ್ ಅನ್ನು ಕ್ರಿಯೇಟ್ ಮಾಡಲಾಗಿದೆ ಮತ್ತು ಇದು ನಮ್ಮ ಈಗಿನ ಬ್ರಾಂಚ್ ಆಗಿದೆ ಎಂದು ನೀವು ನೋಡಬಹುದು. | |||
07:55 | ಆಮೇಲೆ, 'ಬ್ರಾಂಚಿಂಗ್ ಪ್ರೊಸೆಸ್' ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, “new-chapter” ಬ್ರಾಂಚ್ ನಲ್ಲಿ ನಾವು ಒಂದು 'ಕಮಿಟ್' ಅನ್ನು ಮಾಡುವೆವು. | |||
08:02 | ಪ್ರದರ್ಶನದ ಉದ್ದೇಶದಿಂದ, 'kids-story.html' ಫೈಲ್ನಲ್ಲಿ ನಾವು ಕೆಲವು ಬದಲಾವಣೆಗಳನ್ನು ಮಾಡೋಣ. | |||
08:09 | ರಿಪಾಸಿಟರಿಯಲ್ಲಿ 'kids-story.html' ಫೈಲನ್ನು ತೆರೆಯಲು, ಅದರ ಮೇಲೆ ಕ್ಲಿಕ್ ಮಾಡಿ. | |||
08:14 | ಎಡಿಟರ್ ಪ್ಯಾನೆಲ್ ನ ಮೇಲ್ಗಡೆ ಬಲಮೂಲೆಯಲ್ಲಿ, ಒಂದು 'edit' ಐಕಾನ್ ಅನ್ನು ನೀವು ನೋಡಬಹುದು. | |||
08:19 | ಅದರ ಮೇಲೆ ಕ್ಲಿಕ್ ಮಾಡಿ ಈ ಫೈಲನ್ನು ಎಡಿಟ್ ಮಾಡಲು. | |||
08:22 | ನನ್ನ 'Writer' ಡಾಕ್ಯೂಮೆಂಟ್ ನಿಂದ ಕಾಪಿ ಮಾಡಿದ ಕೆಲವು ಸಾಲುಗಳನ್ನು, ನಾನು ಇಲ್ಲಿ ಸೇರಿಸುವೆನು. | |||
08:27 | ನೀವು ಹೀಗೆಯೇ ಮಾಡಬಹುದು. | |||
08:30 | ಈಗ, ಈ ಬದಲಾವಣೆಯನ್ನು ನಾವು 'ಕಮಿಟ್' ಮಾಡುವೆವು. | |||
08:33 | ನಾನು ಡೀಫಾಲ್ಟ್ ಕಮಿಟ್ ಮೆಸೇಜನ್ನು ಇದ್ದಂತೆಯೇ ಇಡುವೆನು. | |||
08:37 | ಇಲ್ಲಿ, ಈ ಕಮಿಟ್ ಅನ್ನು ಮಾಡಿರುವಲ್ಲಿ, ನೀವು 'new-chapter' ಎಂಬ ಬ್ರಾಂಚ್ ನ ಹೆಸರನ್ನು ನೋಡಬಹುದು. | |||
08:43 | 'ಕಮಿಟ್' ಮಾಡಲು, ' Commit changes' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | |||
08:46 | ನಮ್ಮ ರಿಪಾಸಿಟರಿಗೆ ಹಿಂದಿರುಗಲು, ನಾವು 'Code' ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ. | |||
08:50 | ಆಮೇಲೆ, ' master' ಹಾಗೂ 'new-chapter' ಬ್ರಾಂಚ್ ಗಳ ಕಮಿಟ್ ಗಳನ್ನು ನಾವು ಪರಿಶೀಲಿಸೋಣ. | |||
08:56 | ' commits ' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. | |||
08:59 | ಇಲ್ಲಿ, 'Branch' ಡ್ರಾಪ್-ಡೌನ್ ನಲ್ಲಿ, ನಮಗೆ ನೋಡಬೇಕಾಗಿರುವ ಬ್ರಾಂಚ್ ನ ಹೆಸರನ್ನು ನಾವು ಆಯ್ಕೆಮಾಡಬಹುದು. | |||
09:04 | ಲಿಸ್ಟ್ ನಲ್ಲಿ, ನಾನು 'master' ಬ್ರಾಂಚ್ ಅನ್ನು ಆಯ್ಕೆಮಾಡುವೆನು. | |||
09:08 | ಒಮ್ಮೆ ಇದನ್ನು ಆಯ್ಕೆಮಾಡಿದಮೇಲೆ 'master' ಬ್ರಾಂಚ್ ನ ಕಮಿಟ್ ಗಳನ್ನು ಪಟ್ಟಿಮಾಡಲಾಗುವುದು. | |||
09:13 | 'ನ್ಯೂ-ಚಾಪ್ಟರ್' ಬ್ರಾಂಚ್ ನ ಕಮಿಟ್ ಗಳನ್ನು ನೋಡಲು, 'Branch' ಡ್ರಾಪ್-ಡೌನ್ ನಲ್ಲಿ 'new-chapter'ಅನ್ನು ನಾವು ಆಯ್ಕೆಮಾಡುವೆವು. | |||
09:19 | ಈಗ, 'new-chapter' ಬ್ರಾಂಚ್ ನ ಕಮಿಟ್ ಗಳನ್ನು ನೀವು ನೋಡಬಹುದು. | |||
09:24 | ನಮ್ಮ ರಿಪಾಸಿಟರಿಗೆ ಹಿಂದಿರುಗಲು, ನಾವು 'Code' ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ. | |||
09:28 | ಆಮೇಲೆ, 'ಗಿಟ್ ಹಬ್ 'ನಲ್ಲಿ ಟ್ಯಾಗ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ನೋಡೋಣ. | |||
09:32 | ಒಂದು ' ಕಮಿಟ್ ಸ್ಟೇಜ್' ಅನ್ನು ಮುಖ್ಯವೆಂದು ಗುರುತಿಸಲು ಟ್ಯಾಗಿಂಗ್ ಅನ್ನು ಬಳಸಲಾಗುತ್ತದೆ ಎಂದು ನಮಗೆ ಈಗಾಗಲೇ ತಿಳಿದಿದೆ. | |||
09:38 | ಉದಾಹರಣೆಗೆ, 'kids-story.html' ಫೈಲನ್ನು ಸೇರಿಸಿದ ಬಳಿಕ, ನನಗೆ 'ಮಾಸ್ಟರ್' ಬ್ರಾಂಚ್ ನಲ್ಲಿ ಒಂದು ಟ್ಯಾಗ್ ಅನ್ನು ಕ್ರಿಯೇಟ್ ಮಾಡಬೇಕಾಗಿದೆ ಎಂದುಕೊಳ್ಳಿ. | |||
09:46 | ಒಂದು ಟ್ಯಾಗ್ ಅನ್ನು ಕ್ರಿಯೇಟ್ ಮಾಡಲು, ಮೊದಲು 'releases' ಲಿಂಕ್ ನ ಮೇಲೆ ಕ್ಲಿಕ್ ಮಾಡಿ. | |||
09:50 | 'Create a new release' ಬಟನ್ ನ ಮೇಲೆ ಕ್ಲಿಕ್ ಮಾಡಿ. | |||
09:54 | ಒಂದು ಹೊಸ ಫಾರ್ಮ್ ತೆರೆದುಕೊಳ್ಳುತ್ತದೆ. | |||
09:56 | 'Tag Version' ಬಾಕ್ಸ್ ನಲ್ಲಿ, “V1.0” ಎಂದು ಟೈಪ್ ಮಾಡಿ. | |||
10:01 | 'Release title' ಬಾಕ್ಸ್ ನಲ್ಲಿ, “Version one” ಎಂದು ಟೈಪ್ ಮಾಡಿ. | |||
10:05 | 'Write' ಬಾಕ್ಸ್ ನಲ್ಲಿ, ನಮ್ಮ ಟ್ಯಾಗ್ ನ ಬಗ್ಗೆ ವಿವರಣೆಯನ್ನು ನಾವು ಕೊಡಬಹುದು. | |||
10:10 | ನಾನು “This is the version one” ಎಂದು ಟೈಪ್ ಮಾಡುವೆನು. | |||
10:13 | ಈಗ, 'Publish release' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | |||
10:18 | ಇಲ್ಲಿ, ಎಡಭಾಗದಲ್ಲಿ, ಇತ್ತೀಚಿನ ಕಮಿಟ್ ನ 'ಹ್ಯಾಶ್ ವ್ಯಾಲ್ಯೂ' ಅನ್ನು ನೀವು ನೋಡಬಹುದು. | |||
10:24 | ಡೀಫಾಲ್ಟ್ ಆಗಿ, 'ಟ್ಯಾಗ್' ಅನ್ನು ಇತ್ತೀಚಿನ ಕಮಿಟ್ ನಲ್ಲಿ ಕ್ರಿಯೇಟ್ ಮಾಡಲಾಗುವುದು ಎಂದು ನಮಗೆ ಈಗಾಗಲೇ ತಿಳಿದಿದೆ. | |||
10:30 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | |||
10:33 | ಸಂಕ್ಷಿಪ್ತವಾಗಿ, | |||
10:35 | ಈ ಟ್ಯುಟೋರಿಯಲ್ ನಲ್ಲಿ ನಾವು: | |||
10:38 | * ಆನ್ ಲೈನ್ 'ಗಿಟ್ ಹೋಸ್ಟಿಂಗ್ ಸರ್ವೀಸಸ್' ಗಳ ಮಹತ್ವ | |||
10:42 | * 'ಗಿಟ್ ಹಬ್ ಅಕೌಂಟ್' ಕ್ರಿಯೇಟ್ ಮಾಡುವುದು | |||
10:44 | * 'ಗಿಟ್ ಹಬ್' ನಲ್ಲಿ ರಿಪಾಸಿಟರಿಯನ್ನು ಕ್ರಿಯೇಟ್ ಮಾಡುವುದು ಹಾಗೂ * ರಿಪಾಸಿಟರಿಯಲ್ಲಿ ಟ್ಯಾಗ್ ಅನ್ನು ಕ್ರಿಯೇಟ್ ಮಾಡುವುದು ಇವುಗಳ ಬಗ್ಗೆ ನಾವು ಕಲಿತಿದ್ದೇವೆ. | |||
10:50 | ಒಂದು ಅಸೈನ್ಮೆಂಟ್- | |||
10:52 | ಗಿಟ್-ಹಬ್ ನಲ್ಲಿ ಒಂದು ರಿಪಾಸಿಟರಿಯನ್ನು ಕ್ರಿಯೇಟ್ ಮಾಡಿ. | |||
10:54 | ರಿಪಾಸಿಟರಿಗೆ ಕೆಲವು ಫೈಲ್ ಗಳನ್ನು ಸೇರಿಸಿ. | |||
10:57 | ಫೈಲ್ ಗಳನ್ನು ಎಡಿಟ್ ಮಾಡಿ ಮತ್ತು ಕೆಲವು ಕಮಿಟ್ ಗಳನ್ನು ಮಾಡಿ. ರಿಪಾಸಿಟರಿಯಲ್ಲಿ ಬ್ರಾಂಚ್ ಗಳು ಹಾಗೂ ಟ್ಯಾಗ್ ಗಳನ್ನು ಕ್ರಿಯೇಟ್ ಮಾಡಲು ಪ್ರಯತ್ನಿಸಿ. | |||
11:05 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. | |||
11:10 | ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. | |||
11:12 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | |||
11:20 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org | |||
11:23 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. | |||
11:29 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: | |||
11:34 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..
ವಂದನೆಗಳು. |