PERL/C2/Hash-in-Perl/Kannada

From Script | Spoken-Tutorial
Revision as of 15:49, 31 July 2016 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Perl ನಲ್ಲಿ Hash (ಹ್ಯಾಶ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು,
00:09 ಪರ್ಲ್ ನಲ್ಲಿ Hash ಮತ್ತು
00:11 ಹ್ಯಾಶ್ ನ (Hash) ಎಲಿಮೆಂಟ್ ಅನ್ನು ಅಕ್ಸೆಸ್ ಮಾಡುವುದರ ಬಗ್ಗೆ ಕಲಿಯುವೆವು.
00:14 ಈ ಟ್ಯುಟೋರಿಯಲ್ ಗಾಗಿ ನಾನು,
00:16 * Ubuntu Linux 12.04 ಆಪರೇಟಿಂಗ್ ಸಿಸ್ಟಂ
00:21 * Perl 5.14.2 ಹಾಗೂ
00:24 * gedit ‘ಟೆಕ್ಸ್ಟ್ ಎಡಿಟರ್’ ಇವುಗಳನ್ನು ಬಳಸುತ್ತಿದ್ದೇನೆ.
00:26 ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು.
00:30 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ Perl (ಪರ್ಲ್) ನಲ್ಲಿ ವೇರಿಯೆಬಲ್ಸ್ ಮತ್ತು ಡೇಟಾ ಸ್ಟ್ರಕ್ಚರ್ ಗಳ ಬಗ್ಗೆ ತಿಳಿದಿರಬೇಕು.
00:38 ‘ಕಾಮೆಂಟ್’ ಗಳು, ‘ಲೂಪ್’ ಗಳು, ‘ಕಂಡಿಶನಲ್ ಸ್ಟೇಟ್ಮೆಂಟ್’ ಗಳು ಮತ್ತು ‘ಅರೇ’ಗಳ ಬಗ್ಗೆ ತಿಳಿದಿರುವುದು ಇನ್ನೂ ಹೆಚ್ಚು ಲಾಭಕರ.
00:46 ದಯವಿಟ್ಟು ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು Spoken Tutorial ವೆಬ್ಸೈಟ್ ಮೇಲೆ ನೋಡಿ.
00:52 ಹ್ಯಾಶ್, ಡೇಟಾದ ಒಂದು ಅವ್ಯವಸ್ಥಿತ ಸಂಗ್ರಹವಾಗಿದೆ.
00:56 ಇದು ಒಂದು 'ಕೀ/ವ್ಯಾಲ್ಯೂ' ಜೋಡಿಯ ಡೇಟಾ-ಸ್ಟ್ರಕ್ಚರ್ ಆಗಿದೆ.
00:59 'ಹ್ಯಾಶ್ ಕೀ’ಗಳು ಏಕಮಾತ್ರ ಆಗಿರುತ್ತವೆ.
01:01 ಆದಾಗ್ಯೂ, 'ಹ್ಯಾಶ್', ನಕಲು ವ್ಯಾಲ್ಯೂಗಳನ್ನು ಹೊಂದಿರಬಹುದು.
01:05 ಇದು 'ಹ್ಯಾಶ್' ನ ಡಿಕ್ಲೆರೇಶನ್ ಆಗಿದೆ.
01:08 'ಕೀ'ಯ ವ್ಯಾಲ್ಯೂಅನ್ನು ಹ್ಯಾಶ್ ನಿಂದ ಹೇಗೆ ಪಡೆಯುವುದೆಂದು ಈಗ ನಾವು ನೋಡೋಣ.
01:12 'ಕೀ'ಯ ವ್ಯಾಲ್ಯೂಅನ್ನು ಆಕ್ಸೆಸ್ ಮಾಡುವ ಸಿಂಟ್ಯಾಕ್ಸ್ ಹೀಗಿದೆ.
01:17 'dollar hashName open curly bracket single quote keyName single quote close curly bracket'.
01:26 ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ಹ್ಯಾಶ್ ಅನ್ನು ನಾವು ತಿಳಿದುಕೊಳ್ಳೋಣ.
01:31 'gedit' ನಲ್ಲಿ, 'perlHash dot pl' ಎಂಬ ಫೈಲ್ ನಲ್ಲಿ ನಾನು ಈಗಾಗಲೇ ಕೋಡ್ ಅನ್ನು ಟೈಪ್ ಮಾಡಿದ್ದೇನೆ.
01:37 ನಿಮ್ಮ 'perlHash dot pl' ಫೈಲ್ ನಲ್ಲಿ ತೋರಿಸಿದಂತೆ ಕೋಡ್ ಅನ್ನು ಟೈಪ್ ಮಾಡಿ.
01:42 ಪರ್ಲ್ ನಲ್ಲಿ ಹ್ಯಾಶ್ ಅನ್ನು ಪರ್ಸೆಂಟೇಜ್ (%) ಚಿಹ್ನೆಯೊಂದಿಗೆ ಡಿಕ್ಲೇರ್ ಮಾಡಲಾಗುತ್ತದೆ.
01:47 ಇವು ಹ್ಯಾಶ್ ನ ಕೀಗಳಾಗಿವೆ
01:49 ಮತ್ತು ಇವು ಹ್ಯಾಶ್ ನ ವ್ಯಾಲ್ಯೂಗಳಾಗಿವೆ.
01:53 ಸೂಚನೆ: ಹ್ಯಾಶ್ ನ ‘ಕೀ’ ಯನ್ನು ಅಕ್ಸೆಸ್ ಮಾಡಲು, ಡಾಲರ್ ಚಿಹ್ನೆಯನ್ನು ಬಳಸಬೇಕಾಗುತ್ತದೆ.
01:59 ಫೈಲನ್ನು ಸೇವ್ ಮಾಡಲು ‘Ctrl + S’ ಒತ್ತಿ.
02:02 ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು Perl ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. ಹೀಗೆ ಟೈಪ್ ಮಾಡಿ:
02:08 'perl perlHash dot pl'
02:11 ಮತ್ತು Enter ಅನ್ನು ಒತ್ತಿ.
02:14 ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುತ್ತದೆ.
02:19 ಈಗ ನಾವು, ಹ್ಯಾಶ್ ಗೆ ‘ಕೀ’ಗಳನ್ನು ಸೇರಿಸುವುದು (add) ಮತ್ತು ತೆಗೆದುಹಾಕುವುದನ್ನು (delete) ನೋಡೋಣ.
02:24 ಇವುಗಳ ಸಿಂಟ್ಯಾಕ್ಸ್ ಹೀಗಿದೆ:
02:26 * ಕೀ ಯನ್ನು ಸೇರಿಸಲು: 'dollar hashName open curly bracket
02:30 single quote KeyName single quote
02:34 close curly bracket equal to $value semicolon'.
02:40 * ಕೀಯನ್ನು ತೆಗೆದುಹಾಕಲು: 'delete dollar hashName open curly bracket
02:46 single quote KeyName single quote close curly bracket semicolon.
02:53 ಈಗ, ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ಇದನ್ನು ನಾವು ತಿಳಿಯೋಣ.
02:58 ನಾನು ಈಗಾಗಲೇ 'hashKeyOperations dot pl' ಎಂಬ ಫೈಲ್ ನಲ್ಲಿ, ಕೋಡ್ ಅನ್ನು ಟೈಪ್ ಮಾಡಿದ್ದೇನೆ.
03:05 ಇದು ಹ್ಯಾಶ್ ನ ಡಿಕ್ಲೇರೇಶನ್ ಆಗಿದೆ.
03:08 ನಾವು ಈ ಹ್ಯಾಶ್ ಗೆ 'ಕೀ'ಗಳನ್ನು ಸೇರಿಸುತ್ತಿದ್ದೇವೆ ಮತ್ತು ತೆಗೆದುಹಾಕುತ್ತಿದ್ದೇವೆ.
03:13 ಇಲ್ಲಿ ನಾವು, ಈಗಾಗಲೇ ಕ್ರಿಯೇಟ್ ಮಾಡಲಾದ 'ಹ್ಯಾಶ್ ಗೆ ಒಂದು 'ಕೀ'ಯನ್ನು ಸೇರಿಸುತ್ತಿದ್ದೇವೆ.
03:18 ಇದು, ಒಂದು ವೇರಿಯೆಬಲ್ ಗೆ ವ್ಯಾಲ್ಯೂಅನ್ನು ಅಸೈನ್ ಮಾಡಿದಂತೆ.
03:23 'ಕೀ'ಯನ್ನು ತೆಗೆದುಹಾಕಲು, 'delete' ಕೀವರ್ಡ್ ಅನ್ನು ಬಳಸಲಾಗುತ್ತದೆ.
03:27 'ಕೀ'ಯನ್ನು ತೆಗೆದುಹಾಕಲು, ನಮಗೆ ಅದನ್ನು ರವಾನಿಸಬೇಕಾಗುತ್ತದೆ (pass).
03:31 ಫೈಲನ್ನು ಸೇವ್ ಮಾಡಲು ‘Ctrl + S’ ಒತ್ತಿ.
03:35 ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು Perl ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ.
03:40 ' perl hashKeyOperations dot pl'
03:44 ಮತ್ತು Enter ಅನ್ನು ಒತ್ತಿ.
03:47 ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುವುದು.
03:52 ಹ್ಯಾಶ್ ‘ಕೀ’ಗಳು ಮತ್ತು ‘ವ್ಯಾಲ್ಯೂ’ಗಳನ್ನು ‘ಸಾರ್ಟ್’ (sort) ಮಾಡುವುದನ್ನು ನಾವು ನೋಡೋಣ.
03:57 'ಕೀ'ಗಳನ್ನು ‘ಸಾರ್ಟ್’ ಮಾಡಲು, ಸಿಂಟ್ಯಾಕ್ಸ್ ಹೀಗಿದೆ:
04:00 'sort open bracket keys percentage hashName close bracket semicolon'.
04:07 ಹೀಗೆಯೇ, ನಾವು ಹ್ಯಾಶ್ ನ ವ್ಯಾಲ್ಯೂಗಳನ್ನು ಈ ರೀತಿ ‘ಸಾರ್ಟ್’ ಮಾಡಬಹುದು:
04:11 'sort open bracket values percentage hashName close bracket semicolon'.
04:18 ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ, ‘ಸಾರ್ಟ್’ (sort) ಮಾಡುವ ಕ್ರಮವನ್ನು ನಾವು ತಿಳಿದುಕೊಳ್ಳೋಣ.
04:24 ನಾನು 'gedit' ನಲ್ಲಿ, 'sortHash dot pl' ಗೆ ಬದಲಾಯಿಸುತ್ತೇನೆ.
04:30 ಸ್ಕ್ರೀನ್ ಮೇಲೆ ತೋರಿಸಿದಂತೆ ನಿಮ್ಮ 'sortHash dot pl' ಫೈಲ್ ನಲ್ಲಿ ಕೋಡನ್ನು ಟೈಪ್ ಮಾಡಿ.
04:36 ಇಲ್ಲಿ, ನಾವು 'address'ನ 'ಹ್ಯಾಶ್'ಅನ್ನು ಡಿಕ್ಲೇರ್ ಮಾಡಿದ್ದೇವೆ.
04:41 ಇಲ್ಲಿ, 'ಕೀ'ಗಳನ್ನು ‘ಸಾರ್ಟ್’ (sort) ಮಾಡಲು, ನಾವು 'sort' ಎಂಬ ಇನ್-ಬಿಲ್ಟ್ ಫಂಕ್ಷನ್ ಜೊತೆಗೆ 'keys' ಎಂಬ ಫಂಕ್ಷನ್ ಅನ್ನು ಬಳಸಿದ್ದೇವೆ.
04:49 ಇದು ಹ್ಯಾಶ್ ಕೀಗಳನ್ನು ವರ್ಣಮಾಲೆಯ ಕ್ರಮದಲ್ಲಿ ‘ಸಾರ್ಟ್’ ಮಾಡುವುದು.
04:54 ಹೀಗೆಯೇ, ನಾವು 'sort' ಫಂಕ್ಷನ್ ಅನ್ನು ಹ್ಯಾಶ್ ನ 'ವ್ಯಾಲ್ಯೂ'ಗಳ ಮೇಲೆ ಬಳಸಬಹುದು.
04:59 ’sort’ ಕ್ರಿಯೆಯನ್ನು ನ್ಯೂಮೆರಿಕ್(ಸಂಖ್ಯಾ) ಕೀಗಳ ಮತ್ತು/ಅಥವಾ ವ್ಯಾಲ್ಯೂಗಳ ಮೇಲೆ ಸಹ ಮಾಡಬಹುದು.
05:05 ಫೈಲನ್ನು ಸೇವ್ ಮಾಡಿ ಮತ್ತು ‘ಟರ್ಮಿನಲ್’ಗೆ ಬದಲಾಯಿಸಿ.
05:09 ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ: 'perl sortHash dot pl' ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
05:17 ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುವುದು.
05:22 ಈಗ, ಹ್ಯಾಶ್ ನ ಎಲ್ಲ 'ಕೀ'ಗಳು ಮತ್ತು ವ್ಯಾಲ್ಯೂಗಳನ್ನು ಹೇಗೆ ಪಡೆಯುವುದೆಂದು ನಾವು ನೋಡೋಣ.
05:27 ಎಲ್ಲ 'ಹ್ಯಾಶ್ ಕೀ'ಗಳು ಮತ್ತು 'ವ್ಯಾಲ್ಯೂ'ಗಳನ್ನು ಪಡೆಯಲು, PERL, ಇನ್-ಬಿಲ್ಟ್ ಫಂಕ್ಷನ್ ಅನ್ನು ಒದಗಿಸುತ್ತದೆ.
05:34 'ಹ್ಯಾಶ್'ನ ಎಲ್ಲ ‘ಕೀ’ಗಳನ್ನು ಪುನಃ ಪಡೆದುಕೊಳ್ಳಲು, 'keys()' ಎಂಬ ಫಂಕ್ಷನ್ ಅನ್ನು ಬಳಸಲಾಗುತ್ತದೆ.
05:40 'values()' ಎಂಬ ಫಂಕ್ಷನ್, ಎಲ್ಲ 'ಕೀ'ಗಳ 'ವ್ಯಾಲ್ಯೂ'ಗಳನ್ನು ಹಿಂದಿರುಗಿಸುತ್ತದೆ ಆದರೆ
05:46 'each()' ಎಂಬ ಫಂಕ್ಷನ್, 'ಹ್ಯಾಶ್'ನಲ್ಲಿ ಇಟರೇಟ್ ಮಾಡುತ್ತದೆ ಮತ್ತು 'ಹ್ಯಾಶ್'ನಿಂದ 'ಕೀ/ವ್ಯಾಲ್ಯೂ' ಜೋಡಿಯನ್ನು ಹಿಂದಿರುಗಿಸುತ್ತದೆ.
05:53 ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ನಾವು ಇವುಗಳನ್ನು ತಿಳಿದುಕೊಳ್ಳೋಣ.
05:57 ಇದಕ್ಕಾಗಿ, ನಾವು ಈ ಟ್ಯುಟೋರಿಯಲ್ ನಲ್ಲಿ, ಈ ಮೊದಲು ಕ್ರಿಯೇಟ್ ಮಾಡಿದ 'perlHash dot pl' ಸ್ಕ್ರಿಪ್ಟ್ ಅನ್ನು ಬಳಸುವೆವು.
06:07 ಈ ಕೆಳಗಿನ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ.
06:12 ಈಗ ನಾವು ಕೋಡನ್ನು ತಿಳಿದುಕೊಳ್ಳೋಣ.
06:15 ಹ್ಯಾಶ್ ನ ಮೇಲೆ 'keys()' ಫಂಕ್ಷನ್, 'ಹ್ಯಾಶ್' ನ ಎಲ್ಲ 'ಕೀ'ಗಳನ್ನು ಒಳಗೊಂಡಿರುವ ಒಂದು ‘ಅರೇ’ಯನ್ನು ಹಿಂದಿರುಗಿಸುತ್ತದೆ.
06:22 ಹ್ಯಾಶ್ ನ ಮೇಲೆ 'values()' ಫಂಕ್ಷನ್, ಹ್ಯಾಶ್ ನ ಎಲ್ಲ 'ಕೀ'ಗಳಿಗಾಗಿ, ವ್ಯಾಲ್ಯೂಗಳ ಒಂದು ‘ಅರೇ’ಯನ್ನು ಹಿಂದಿರುಗಿಸುತ್ತದೆ.
06:30 'each()' ಎಂಬ ಫಂಕ್ಷನ್, ' ಕೀ/ವ್ಯಾಲ್ಯೂ' ಜೋಡಿಯನ್ನು ಹಿಂದಿರುಗಿಸುತ್ತದೆ.
06:34 ಇಲ್ಲಿ, ನಾವು 'while' ಲೂಪನ್ನು ಬಳಸಿದ್ದೇವೆ.
06:36 'each()' ಫಂಕ್ಷನ್ ನಿಂದ ಹಿಂದಿರುಗಿಸಲ್ಪಟ್ಟ ಹ್ಯಾಶ್ ನ ಪ್ರತಿಯೊಂದು 'ಕೀ/ವ್ಯಾಲ್ಯೂ' ಜೋಡಿಯ ಮೇಲೆ ಇದು ಇಟರೇಟ್ ಮಾಡುವುದು.
06:43 ಫೈಲನ್ನು ಸೇವ್ ಮಾಡಲು ‘Ctrl + S’ ಒತ್ತಿ.
06:48 ಈಗ, ‘ಟರ್ಮಿನಲ್’ನ ಮೇಲೆ ನಾವು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಇದಕ್ಕಾಗಿ ಹೀಗೆ ಟೈಪ್ ಮಾಡಿ:
06:53 'perl perlHash dot pl'
06:58 ಮತ್ತು Enter ಅನ್ನು ಒತ್ತಿ.
07:01 ಈ ಕೆಳಗಿನ ಔಟ್ಪುಟ್, ಟರ್ಮಿನಲ್ ನ ಮೇಲೆ ಕಾಣಿಸಿಕೊಳ್ಳುವುದು.
07:05 ಈಗ, ಹ್ಯಾಶ್ ನ ಮೇಲೆ ಲೂಪಿಂಗ್ ಮಾಡುವ ಬೇರೆ ಕೆಲವು ವಿಧಾನಗಳನ್ನು ನಾವು ನೋಡೋಣ.
07:10 ನಾವು 'foreach' ಲೂಪ್ ಅನ್ನು, ಹ್ಯಾಶ್ ನ ಪ್ರತಿಯೊಂದು 'ಕೀ' ಯ ಮೇಲೆ ಇಟರೇಟ್ ಮಾಡಲು,
07:15 ಆಮೇಲೆ ಕೀ ಯ ವ್ಯಾಲ್ಯೂ ದ ಮೇಲೆ ಹಲವು ಕ್ರಿಯೆಗಳನ್ನು ಮಾಡಲು ಬಳಸಬಹುದು.
07:20 ಸಿಂಟ್ಯಾಕ್ಸ್, ಸ್ಕ್ರೀನ್ ಮೇಲೆ ತೋರಿಸಿದಂತೆ ಇದೆ.
07:24 ಇಲ್ಲಿ, 'foreach' ಲೂಪ್ ನ ಪ್ರತಿಯೊಂದು ಇಟರೇಶನ್, ಹ್ಯಾಶ್ ನಿಂದ '$variable' ಗೆ 'ಕೀ'ಯನ್ನು ಅಸೈನ್ ಮಾಡುವುದು.
07:32 ಆಮೇಲೆ, ಅದು ಆ '$variable' ಅನ್ನು ವ್ಯಾಲ್ಯೂಅನ್ನು ಪಡೆಯಲು ಅಥವಾ ಕೆಲವು ಕ್ರಿಯೆಗಳನ್ನು ಮಾಡಲು ಬಳಸುವುದು.
07:40 ಹೀಗೆಯೇ ನಾವು, ಸ್ಕ್ರೀನ್ ಮೇಲೆ ತೋರಿಸಿದಂತೆ ಹ್ಯಾಶ್ ವ್ಯಾಲ್ಯೂಗಳ ಮೇಲೆ ಲೂಪ್ ಮಾಡಬಹುದು.
07:47 ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ನಾವು ನೋಡುವೆವು.
07:49 ಆದ್ದರಿಂದ, ನಾನು 'gedit' ನಲ್ಲಿ 'loopingOverHash dot pl' ಗೆ ಬದಲಾಯಿಸುತ್ತೇನೆ.
07:55 ಈ ಕೆಳಗಿನ ಕೋಡ್ ನ ಭಾಗವನ್ನು, ಇಲ್ಲಿ ತೋರಿಸಿದಂತೆ ನಿಮ್ಮ 'loopingOverHash dot pl' ನಲ್ಲಿ ಟೈಪ್ ಮಾಡಿ.
08:02 ಕೋಡ್ ನ ಈ ಭಾಗವು ಹ್ಯಾಶ್ ನ ಒಂದೇ ಒಂದು 'ಕೀ'ಯನ್ನು ರಿಟರ್ನ್ ಮಾಡುತ್ತದೆ.
08:07 ಇಲ್ಲಿ, ಈ ಸಂದರ್ಭದಲ್ಲಿ -
08:09 ಮೊದಲ ಸಲ 'ಡಾಲರ್ key' ($key), 'Department' ಅನ್ನು ಕೀ ಎಂದು ಒಳಗೊಂಡಿರುತ್ತದೆ.
08:15 'foreach' ನ ಮುಂದಿನ ಇಟರೇಶನ್ ನಲ್ಲಿ, 'Name' ಎಂಬ ಕೀ ಯನ್ನು ಹಿಂದಿರುಗಿಸಲಾಗುವುದು (ರಿಟರ್ನ್).
08:21 ಸೂಚನೆ: ಹ್ಯಾಶ್, ಡೇಟಾದ ಒಂದು ಅವ್ಯವಸ್ಥಿತ ಸಂಗ್ರಹ ಆಗಿದೆ.
08:26 ಹೀಗಾಗಿ, ರಿಟರ್ನ್ ಮಾಡಲಾದ 'ಕೀ'ಗಳು, ಹ್ಯಾಶ್ ಅನ್ನು ಕ್ರಿಯೇಟ್ ಮಾಡುವಾಗ ಡಿಫೈನ್ ಮಾಡಿದ ಅನುಕ್ರಮದಲ್ಲಿ ಇರುವದಿಲ್ಲ.
08:33 ವ್ಯಾಲ್ಯೂಗಳ ಮೇಲೆ ಲೂಪ್, ಇದೇ ರೀತಿ ಕೆಲಸ ಮಾಡುತ್ತದೆ.
08:38 ಫೈಲನ್ನು ಸೇವ್ ಮಾಡಲು ‘Ctrl + S’ ಒತ್ತಿ.
08:41 ಆಮೇಲೆ, ಟರ್ಮಿನಲ್’ಗೆ ಬದಲಾಯಿಸಿ ಮತ್ತು ಪರ್ಲ್ ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ.
08:46 ' perl loopingOverHash dot pl'
08:50 ಮತ್ತು Enter ಅನ್ನು ಒತ್ತಿ.
08:53 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು.
08:58 ಸಂಕ್ಷಿಪ್ತವಾಗಿ,
08:59 ಈ ಟ್ಯುಟೋರಿಯಲ್ ನಲ್ಲಿ, ಸ್ಯಾಂಪಲ್ ಪ್ರೊಗ್ರಾಂಗಳನ್ನು ಬಳಸಿ,
09:01 PERL ನಲ್ಲಿ ಹ್ಯಾಶ್ ಮತ್ತು
09:03 'ಹ್ಯಾಶ್'ನ ಎಲಿಮೆಂಟ್ ಗಳನ್ನು ಆಕ್ಸೆಸ್ ಮಾಡುವುದನ್ನು
09:05 ನಾವು ಕಲಿತಿದ್ದೇವೆ.
09:08 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
09:11 ‘student name’ ಅನ್ನು 'ಕೀ' ಎಂದು
09:15 ಮತ್ತು ಅವನ/ಅವಳ ‘percentage’ ಅನ್ನು (ಶೇಕಡಾ ಅಂಕಗಳನ್ನು) 'ವ್ಯಾಲ್ಯೂ' ಎಂದು ಹೊಂದಿರುವ ಹ್ಯಾಶ್ ಒಂದನ್ನು ಡಿಕ್ಲೇರ್ ಮಾಡಿ.
09:18 'ಹ್ಯಾಶ್'ನಲ್ಲಿ ‘keys()’, ‘values()’ ಮತ್ತು 'each()' ಫಂಕ್ಷನ್ ಗಳನ್ನು ಬಳಸಿಕೊಂಡು ಲೂಪ್ ಗಳನ್ನು ಪ್ರಯೋಗಿಸಿ.
09:24 ಆಮೇಲೆ ಪ್ರತಿಯೊಬ್ಬ ‘student’ ನ ‘percentage’ ಅನ್ನು ಪ್ರಿಂಟ್ ಮಾಡಿ.
09:29 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
09:32 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
09:37 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:42 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:49 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:53 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.

contact@spoken-tutorial.org

10:02 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:06 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:15 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

10:26 ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ.
10:30 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .
10:33 ವಂದನೆಗಳು.

Contributors and Content Editors

Sandhya.np14, Vasudeva ahitanal