PERL/C2/Array-functions/Kannada
From Script | Spoken-Tutorial
Revision as of 15:49, 31 July 2016 by Vasudeva ahitanal (Talk | contribs)
Time | Narration |
00:01 | Perl ನಲ್ಲಿ Array Functions ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, ಈ ಕೆಳಗೆ ಹೇಳಿದ Perl ನ ‘ಅರೇ ಫಂಕ್ಷನ್’ಗಳ ಬಗ್ಗೆ ಕಲಿಯುವೆವು. |
00:11 | * ‘push’ (ಪುಶ್) |
00:11 | * ‘pop’ (ಪಾಪ್) |
00:12 | * ‘shift’ (ಶಿಫ್ಟ್) |
00:14 | * ‘unshift’ (ಅನ್ ಶಿಫ್ಟ್) |
00:15 | * ‘split’ (ಸ್ಪ್ಲಿಟ್) |
00:16 | * ‘splice’ (ಸ್ಪ್ಲೈಸ್) |
00:17 | * ‘join’ (ಜಾಇನ್) |
00:18 | * ‘sort’ (ಸಾರ್ಟ್) ಮತ್ತು |
00:19 | * ‘qw’. |
00:20 | ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಬಳಸುತ್ತಿದ್ದೇನೆ. |
00:28 | 'gedit' ‘ಟೆಕ್ಸ್ಟ್ ಎಡಿಟರ್’ಅನ್ನು ಸಹ ಬಳಸುತ್ತಿರುವೆನು. |
00:32 | ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು. |
00:36 | ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್ಸ್, ಡೇಟಾ ಸ್ಟ್ರಕ್ಚರ್ಸ್’ ಮತ್ತು ‘ಆರೇ’ಗಳ ಬಗ್ಗೆ ತಿಳಿದಿರುವುದು ಅವಶ್ಯಕ. |
00:43 | ‘ಕಾಮೆಂಟ್ಸ್, ಲೂಪ್ಸ್’ ಮತ್ತು ‘ಕಂಡಿಶನಲ್ ಸ್ಟೇಟ್ಮೆಂಟ್ಸ್’ಗಳನ್ನು ತಿಳಿದಿರುವುದು ಹೆಚ್ಚು ಲಾಭಕಾರಿ. |
00:48 | ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು ’spoken tutorial’ ವೆಬ್ಸೈಟ್ ಮೇಲೆ ನೋಡಿ. |
00:54 | 'Perl', ಕೆಲವು ಇನ್-ಬಿಲ್ಟ್ ಫಂಕ್ಷನ್ ಗಳನ್ನು ಒದಗಿಸುತ್ತದೆ. |
00:57 | ಈ ಫಂಕ್ಷನ್ ಗಳು, ‘ಆರೇ’ಯ ಮೇಲೆ ವಿವಿಧ ಆಪರೇಶನ್ ಗಳನ್ನು ಮಾಡಲು ಸಾಧ್ಯವಿದೆ. |
01:02 | ಮೊದಲು, ‘ಅರೇ’ಯ ಕೊನೆಯ ಸ್ಥಾನದಲ್ಲಿ ಎಲಿಮೆಂಟ್ ಗಳನ್ನು ಹೇಗೆ ಸೇರಿಸುವುದು ಮತ್ತು ತೆಗೆದುಹಾಕುವುದು ಎಂಬುದನ್ನು ನಾವು ತಿಳಿಯೋಣ. |
01:08 | ಇದನ್ನು 'push' ಎಂಬ ಫಂಕ್ಷನ್ ಅನ್ನು ಬಳಸಿ ಮಾಡಬಹುದು. |
01:10 | ಇದು ‘ಎಲಿಮೆಂಟ್’ಅನ್ನು ‘ಅರೇ’ಯ ಕೊನೆಯ ಸ್ಥಾನದಲ್ಲಿ ಸೇರಿಸುವುದು |
01:15 | ಮತ್ತು 'pop' ಫಂಕ್ಷನ್, ‘ಎಲಿಮೆಂಟ್’ಅನ್ನು ‘ಅರೇ’ಯ ಕೊನೆಯ ಸ್ಥಾನದಿಂದ ತೆಗೆದುಹಾಕುವುದು. |
01:21 | ನಾವು ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ 'push' ಮತ್ತು 'pop' ಫಂಕ್ಷನ್ ಗಳನ್ನು ತಿಳಿದುಕೊಳ್ಳೋಣ. |
01:26 | ‘ಟರ್ಮಿನಲ್’ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ:
‘gedit perlArray dot pl space ampersand’ |
01:33 | ಮತ್ತು Enter ಅನ್ನು ಒತ್ತಿ. |
01:36 | ಇದು, 'gedit' ನಲ್ಲಿ 'perlArray dot pl' ಎಂಬ ಫೈಲನ್ನು ಓಪನ್ ಮಾಡುವುದು. |
01:41 | ಸ್ಕ್ರೀನ್ ಮೇಲೆ ತೋರಿಸಿದಂತೆ ಕೋಡನ್ನು ಟೈಪ್ ಮಾಡಿ. |
01:45 | ಇಲ್ಲಿ, ಉದ್ದವು (array length) 3 ಆಗಿರುವ ಒಂದು ‘ಅರೇ’ಯನ್ನು ನಾವು ಡಿಕ್ಲೇರ್ ಮಾಡಿದ್ದೇವೆ. |
01:50 | 'push' ಫಂಕ್ಷನ್, ಈ ‘ಅರೇ’ಯ ಕೊನೆಯ ಸ್ಥಾನದಲ್ಲಿ, ಎಂದರೆ 3 ರ ನಂತರ, ಒಂದು ಎಲಿಮೆಂಟ್ ಅನ್ನು ಸೇರಿಸುವುದು. |
01:57 | ಆದರೆ 'pop' ಫಂಕ್ಷನ್, ‘ಅರೇ’ಯ ಕೊನೆಯ ಸ್ಥಾನದಿಂದ ಒಂದು ಎಲಿಮೆಂಟ್ ಅನ್ನು ತೆಗೆದುಹಾಕುವುದು. |
02:04 | ಈ ಸಂದರ್ಭದಲ್ಲಿ, 4 ಅನ್ನು ‘ಅರೇ’ಯಿಂದ ತೆಗದುಹಾಕಲಾಗುವುದು. |
02:08 | ಫೈಲನ್ನು ಸೇವ್ ಮಾಡಲು 'Ctrl + S' ಒತ್ತಿ. |
02:11 | 'push' ಫಂಕ್ಷನ್, 2 (ಎರಡು) ಆರ್ಗ್ಯೂಮೆಂಟ್ ಗಳನ್ನು ತೆಗೆದುಕೊಳ್ಳುತ್ತದೆ. |
02:14 | 'push' ಫಂಕ್ಷನ್ ನ ಮೊದಲನೆಯ ಆರ್ಗ್ಯೂಮೆಂಟ್, ಎಲಿಮೆಂಟ್ ಅನ್ನು ಸೇರಿಸಿಕೊಳ್ಳುವ ‘ಅರೇ’ ಆಗಿರುತ್ತದೆ. |
02:20 | ‘ಅರೇ’ಯಲ್ಲಿ ಸೇರಿಸಬೇಕಾದ ಎಲಿಮೆಂಟ್, ಎರಡನೆಯ ಆರ್ಗ್ಯೂಮೆಂಟ್ ಆಗಿದೆ. |
02:25 | 'pop' ಫಂಕ್ಷನ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ: |
02:29 | 'pop' ಫಂಕ್ಷನ್, ಒಂದೇ ಒಂದು ಆರ್ಗ್ಯೂಮೆಂಟ್ ಅನ್ನು ತೆಗೆದುಕೊಳ್ಳುತ್ತದೆ. |
02:32 | ಇದು, ಎಲಿಮೆಂಟ್ ನ್ನು ತೆಗೆದುಹಾಕಬೇಕಾಗಿರುವ ‘ಅರೇ’ ಆಗಿದೆ. |
02:36 | ಸೂಚನೆ: ಈ ಎರಡೂ ಫಂಕ್ಷನ್ ಗಳು ‘ಅರೇ’ಯ ಕೊನೆಯ ಸ್ಥಾನದಲ್ಲಿ ಕೆಲಸ ಮಾಡುತ್ತವೆ. |
02:41 | 'pop' ಫಂಕ್ಷನ್ ನಿಂದ ತೆಗೆದುಹಾಕಲ್ಪಟ್ಟ ಎಲಿಮೆಂಟ್ ಅನ್ನು ಬೇರೊಂದು ವೇರಿಯೆಬಲ್ ನಲ್ಲಿ ಇರಿಸಬಹುದು. |
02:46 | ಇದಕ್ಕಾಗಿ ಸಿಂಟ್ಯಾಕ್ಸ್ ಹೀಗಿದೆ:
$variable space = space pop open bracket @myArray close bracket |
02:57 | ಈಗ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಪರ್ಲ್ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. |
03:01 | ಹೀಗೆ ಟೈಪ್ ಮಾಡಿ: ‘perl perlArray dot pl’ ಮತ್ತು Enter ಅನ್ನು ಒತ್ತಿ. |
03:07 | ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುತ್ತದೆ. |
03:11 | ಈಗ, ಒಂದು ‘ಅರೇ’ಯ 1ನೇ ಸ್ಥಾನದಿಂದ ಎಲಿಮೆಂಟ್ ಅನ್ನು ಹೇಗೆ ಸೇರಿಸುವುದು/ತೆಗೆದುಹಾಕುವುದು ಎಂಬುದನ್ನು ನಾವು ನೋಡೋಣ. |
03:18 | ಈ ಕೆಳಗಿನ ಫಂಕ್ಷನ್ ಗಳನ್ನು ಬಳಸಿ ಇದನ್ನು ಮಾಡಬಹುದು - |
03:20 | ‘unshift’ ಫಂಕ್ಷನ್: ಇದು, ಒಂದು ಎಲಿಮೆಂಟ್ ಅನ್ನು ‘ಅರೇ’ಯ ಮೊದಲನೇ ಸ್ಥಾನಕ್ಕೆ ಸೇರಿಸುತ್ತದೆ. |
03:25 | ‘shift’ ಫಂಕ್ಷನ್: ಇದು, ‘ಅರೇ’ಯಿಂದ ಮೊದಲನೇ ಎಲಿಮೆಂಟ್ ಅನ್ನು ತೆಗೆದುಹಾಕುತ್ತದೆ. |
03:31 | ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ಇದನ್ನು ನಾವು ತಿಳಿದುಕೊಳ್ಳೋಣ. |
03:35 | ಈಗಾಗಲೆ ನಾನು ಕ್ರಿಯೇಟ್ ಮಾಡಿದ 'perlArray dot pl' ಎಂಬ ಫೈಲನ್ನು ನಾನು ಓಪನ್ ಮಾಡುವೆನು. |
03:39 | ಈ ಕೆಳಗಿನ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
03:43 | 'unshift' ಫಂಕ್ಷನ್, ಎಲಿಮೆಂಟ್ ಅನ್ನು ಮೊದಲನೆಯ ಸ್ಥಾನದಲ್ಲಿ, ಎಂದರೆ 1 ರ ಮೊದಲು, ಸೇರಿಸುವುದು. |
03:52 | 'shift' ಫಂಕ್ಷನ್, ಎಲಿಮೆಂಟ್ ಅನ್ನು ಮೊದಲನೆಯ ಸ್ಥಾನದಿಂದ ತೆಗೆದುಹಾಕುವುದು. |
03:57 | ಈ ಸಂದರ್ಭದಲ್ಲಿ, 0 (ಸೊನ್ನೆ) ಯನ್ನು ತೆಗೆದುಹಾಕಲಾಗುವುದು. |
04:00 | ಫೈಲನ್ನು ಸೇವ್ ಮಾಡಲು 'Ctrl + S' ಒತ್ತಿ. |
04:03 | 'unshift' ಫಂಕ್ಷನ್, ಎರಡು ಆರ್ಗ್ಯೂಮೆಂಟ್ ಗಳನ್ನು ತೆಗೆದುಕೊಳ್ಳುತ್ತದೆ - |
04:06 | ಎಲಿಮೆಂಟ್ ಅನ್ನು ಸೇರಿಸಿಕೊಳ್ಳುವ ‘ಅರೇ’, 1ನೇ ಆರ್ಗ್ಯೂಮೆಂಟ್ ಆಗಿದೆ. |
04:10 | ‘ಅರೇ’ಯಲ್ಲಿ ಸೇರಿಸಬೇಕಾದ ಎಲಿಮೆಂಟ್, 2ನೇ ಆರ್ಗ್ಯೂಮೆಂಟ್ ಆಗಿದೆ. |
04:15 | 'shift' ಫಂಕ್ಷನ್, ಒಂದೇ ಒಂದು ಆರ್ಗ್ಯೂಮೆಂಟ್ ಅನ್ನು ತೆಗೆದುಕೊಳ್ಳುತ್ತದೆ. |
04:18 | ಇದು ಎಲಿಮೆಂಟ್ ನ್ನು ತೆಗೆದುಹಾಕಬೇಕಾಗಿರುವ ‘ಅರೇ’ ಆಗಿದೆ. |
04:22 | ಸೂಚನೆ: ಈ ಎರಡೂ ಫಂಕ್ಷನ್ ಗಳು ‘ಅರೇ’ಯ ಮೊದಲನೆಯ ಸ್ಥಾನದಲ್ಲಿ ಕೆಲಸ ಮಾಡುತ್ತವೆ. |
04:27 | 'shift' ಫಂಕ್ಷನ್ ನಿಂದ ತೆಗೆದುಹಾಕಲ್ಪಟ್ಟ ಎಲಿಮೆಂಟ್ ಅನ್ನು, ಬೇರೆ ವೇರಿಯೆಬಲ್ ನಲ್ಲಿ ನಾವು ಇಡಬಹುದು. |
04:33 | ಇದಕ್ಕಾಗಿ ಸಿಂಟ್ಯಾಕ್ಸ್ ಹೀಗಿದೆ:
$variable space = space shift open bracket @myArray close bracket |
04:44 | ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು 'Perl' ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. |
04:48 | ಹೀಗೆ ಟೈಪ್ ಮಾಡಿ: 'perl perlArray dot pl' ಮತ್ತು Enter ಅನ್ನು ಒತ್ತಿ. |
04:54 | ಟರ್ಮಿನಲ್ ನ ಮೇಲೆ ತೋರಿಸಿದ ಔಟ್ಪುಟ್ ಅನ್ನು ಹೈಲೈಟ್ ಮಾಡಲಾಗಿದೆ. |
04:59 | ಈಗ, ‘ಅರೇ’ಯ ಒಂದು ನಿರ್ದಿಷ್ಟ ಸ್ಥಾನದಿಂದ ಎಲಿಮೆಂಟ್ ಅನ್ನು ಹೇಗೆ ತೆಗೆದುಹಾಕುವುದು ಎಂಬುದನ್ನು ನಾವು ನೋಡೋಣ. |
05:05 | 'splice' (ಸ್ಪ್ಲೈಸ್) ಫಂಕ್ಷನ್, ‘ಅರೇ’ಯ ಒಂದು ನಿರ್ದಿಷ್ಟ ಸ್ಥಾನದಿಂದ ಎಲಿಮೆಂಟ್ ಅನ್ನು ತೆಗೆದುಹಾಕುವುದು. |
05:11 | ಈ ಫಂಕ್ಷನ್ ನ ರಿಟರ್ನ್ ವ್ಯಾಲ್ಯೂ, ತೆಗೆದುಹಾಕಿದ ಎಲಿಮೆಂಟ್ ಗಳ ಒಂದು ‘ಅರೇ’ ಆಗಿದೆ. |
05:17 | ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ, ಇದನ್ನು ನಾವು ತಿಳಿದುಕೊಳ್ಳೋಣ. |
05:21 | ಈ ಮೊದಲೇ ನಾವು ಕ್ರಿಯೇಟ್ ಮಾಡಿದ 'perlArray dot pl' ಎಂಬ ಫೈಲ್ ಗೆ ಹೋಗಿ. |
05:26 | ಕೋಡ್ ನ ಈ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
05:30 | ‘ಅರೇ’ಯಲ್ಲಿ, ಎಲ್ಲಿಂದ ನಮಗೆ ಎಲಿಮೆಂಟ್ ಗಳನ್ನು ತೆಗೆದುಹಾಕಬೇಕಾಗಿದೆಯೋ ಆ ಇಂಡೆಕ್ಸ್ ಅನ್ನು ಮತ್ತು |
05:35 | ಎಲ್ಲಿಯವರೆಗೆ ಎಲಿಮೆಂಟ್ ಗಳನ್ನು ತೆಗೆದುಹಾಕಬೇಕಾಗಿದೆಯೋ ಆ ಆಫ್ಸೆಟ್ (offset) ಅನ್ನು ನಾವು ಒದಗಿಸುವುದು ಅವಶ್ಯವಾಗಿದೆ. |
05:39 | ಈ ಸಂದರ್ಭದಲ್ಲಿ, 5 ಮತ್ತು 6, ಈ ಎಲಿಮೆಂಟ್ ಗಳನ್ನು ತೆಗೆದುಹಾಕಲಾಗುವುದು. |
05:44 | ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಪರ್ಲ್ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ: |
05:49 | 'perl perlArray dot pl' ಮತ್ತು Enter ಅನ್ನು ಒತ್ತಿ. |
05:55 | ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುತ್ತದೆ. |
05:59 | ಈಗ ನಾವು, ‘ಅರೇ’ಯ ಇನ್ನೂ ಕೆಲವು ಇನ್-ಬಿಲ್ಟ್ ಫಂಕ್ಷನ್ ಗಳನ್ನು ನೋಡೋಣ. |
06:04 | ಒಂದು ಸ್ಟ್ರಿಂಗ್ ಅನ್ನು, ಒಂದು ನಿಗದಿತ ಡಿ-ಲಿಮಿಟರ್ ನಲ್ಲಿ ವಿಭಾಗಿಸಲು 'split' ಫಂಕ್ಷನ್ ಅನ್ನು ಬಳಸಲಾಗುತ್ತದೆ. |
06:10 | ಈ ಫಂಕ್ಷನ್ ನ ರಿಟರ್ನ್ ವ್ಯಾಲ್ಯೂ, ಒಂದು ‘ಅರೇ’ ಆಗಿರುತ್ತದೆ. |
06:14 | ಈ ‘ಅರೇ’ಯ ಎಲಿಮೆಂಟ್ ಗಳು, ಸ್ಟ್ರಿಂಗ್ ನ ಬೇರ್ಪಡಿಸಲಾದ ಭಾಗಗಳಾಗಿವೆ. |
06:19 | 'join' ಫಂಕ್ಷನ್, ನಿಗದಿತ ಡಿ-ಲಿಮಿಟರ್ ಅನ್ನು ಬಳಸಿ ಅರೇ’ಯ ಎಲಿಮೆಂಟ್ ಗಳನ್ನು ಜೋಡಿಸುತ್ತದೆ. |
06:25 | ಇದು, ಜೋಡಿಸಲ್ಪಟ್ಟ ಎಲಿಮೆಂಟ್ ಗಳ ಒಂದು ಸ್ಟ್ರಿಂಗ್ ಅನ್ನು ರಿಟರ್ನ್ ಮಾಡುತ್ತದೆ. |
06:28 | 'sort' ಫಂಕ್ಷನ್, ಒಂದು ‘ಅರೇ’ಯನ್ನು ವರ್ಣಮಾಲೆಯ/ಸಂಖ್ಯಾತ್ಮಕ ಕ್ರಮದಲ್ಲಿ ‘ಸಾರ್ಟ್’ ಮಾಡುತ್ತದೆ. |
06:34 | 'qw' ಫಂಕ್ಷನ್, ಬಿಳಿ ಸ್ಪೇಸ್ ನಿಂದ ಬೇರ್ಪಡಿಸಲ್ಪಟ್ಟ ಶಬ್ದಗಳ ಒಂದು ‘ಅರೇ’ಯನ್ನು ರಿಟರ್ನ್ ಮಾಡುತ್ತದೆ. |
06:40 | ಈಗ, ನಾವು ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ಈ ಎಲ್ಲ ಫಂಕ್ಷನ್ ಗಳನ್ನು ತಿಳಿದುಕೊಳ್ಳೋಣ. |
06:45 | ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
06:48 | 'gedit arrayFunctions dot pl space ampersand' ಮತ್ತು Enter ಅನ್ನು ಒತ್ತಿ. |
06:55 | ಈ ಕೆಳಗಿನ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
07:00 | ಈ ಸಂದರ್ಭದಲ್ಲಿ, ವೇರಿಯೆಬಲ್ ‘string’ ನ ಪ್ರತಿಯೊಂದು ಶಬ್ದವು, ‘ಅರೇ’ಯಲ್ಲಿ ಒಂದು ಎಲಿಮೆಂಟ್ ಆಗುವುದು. |
07:07 | ಇಲ್ಲಿ, 'newArray' ಯ ಪ್ರತಿಯೊಂದು ಎಲಿಮೆಂಟ್ ಅನ್ನು ಕಾಮಾ (comma) ದಿಂದ ಜೋಡಿಸಲಾಗುವುದು. |
07:12 | 'sort' ಫಂಕ್ಷನ್, ‘ಅರೇ’ಯ ಎಲಿಮೆಂಟ್ ಗಳನ್ನು ವರ್ಣಮಾಲೆಯ ಕ್ರಮದಲ್ಲಿ ಸಾರ್ಟ್ ಮಾಡುವುದು. |
07:19 | 'qw' ಫಂಕ್ಷನ್, ಸ್ಪೇಸ್ ನಿಂದ ಬೇರ್ಪಡಿಸಲ್ಪಟ್ಟ ಶಬ್ದಗಳ ಒಂದು ‘ಅರೇ’ಯನ್ನು ಕ್ರಿಯೇಟ್ ಮಾಡುತ್ತದೆ. |
07:25 | ನಾವು, ಪ್ರತಿಯೊಂದು ಫಂಕ್ಷನ್ ಅನ್ನು ತಿಳಿದುಕೊಳ್ಳೋಣ. |
07:28 | 'split' ಫಂಕ್ಷನ್, ಎರಡು ಆರ್ಗ್ಯೂಮೆಂಟ್ ಗಳನ್ನು ತೆಗೆದುಕೊಳ್ಳುತ್ತದೆ. |
07:31 | 1ನೇ ಆರ್ಗ್ಯೂಮೆಂಟ್, ಸ್ಟ್ರಿಂಗ್ ಅನ್ನು ಸ್ಪ್ಲಿಟ್ ಮಾಡಲು ಅಗತ್ಯವಿರುವ ಡಿ-ಲಿಮಿಟರ್ ಆಗಿದೆ. |
07:36 | ಎರಡನೆಯದು, ಸ್ಪ್ಲಿಟ್ ಆಗಬೇಕಾಗಿರುವ ಸ್ಟ್ರಿಂಗ್ ಆಗಿದೆ. |
07:39 | ಡಿ-ಲಿಮಿಟರ್ ಗಳನ್ನು ಫಾರ್ವರ್ಡ್ ಸ್ಲ್ಯಾಶ್, ಸಿಂಗಲ್ ಅಥವಾ ಡಬಲ್ ಕೋಟ್ಸ್ ನಲ್ಲಿ ಸೂಚಿಸಬಹುದು. |
07:45 | 'join' ಫಂಕ್ಷನ್, ಎರಡು ಆರ್ಗ್ಯೂಮೆಂಟ್ ಗಳನ್ನು ತೆಗೆದುಕೊಳ್ಳುತ್ತದೆ. |
07:48 | ಮೊದಲನೆಯದು, ‘ಅರೇ’ ಎಲಿಮೆಂಟ್ ಗಳನ್ನು ಜೋಡಿಸಲು ಅಗತ್ಯವಿರುವ ಡಿ-ಲಿಮಿಟರ್ ಆಗಿದೆ. |
07:53 | ಎರಡನೆಯದು ‘ಅರೇ’ ಆಗಿದೆ. |
07:55 | ಡಿ-ಲಿಮಿಟರ್ ಗಳನ್ನು ಸಿಂಗಲ್ ಅಥವಾ ಡಬಲ್ ಕೋಟ್ಸ್ ನಲ್ಲಿ ಸೂಚಿಸಬಹುದು. |
07:58 | 'sort' ಫಂಕ್ಷನ್, ಒಂದು ಆರ್ಗ್ಯೂಮೆಂಟ್ ಅನ್ನು ಮಾತ್ರ ತೆಗೆದುಕೊಳ್ಳುತ್ತದೆ ಮತ್ತು ಇದು, ಸಾರ್ಟ್(sort) ಮಾಡಬೇಕಾಗಿರುವ ‘ಅರೇ’ ಆಗಿದೆ. |
08:05 | 'qw' ಫಂಕ್ಷನ್, ಸ್ಪೇಸ್ ನಿಂದ ಬೇರ್ಪಡಿಸಲ್ಪಟ್ಟ ಶಬ್ದಗಳ ಒಂದು ‘ಅರೇ’ಯನ್ನು ರಿಟರ್ನ್ ಮಾಡುತ್ತದೆ. |
08:11 | ‘qw’ ಅನ್ನು ಬಳಸಿ ಶಬ್ದವನ್ನು ಬರೆದರೆ, ಅದನ್ನು ಕೋಟ್ಸ್ ನಲ್ಲಿ ನಿರ್ದಿಷ್ಟ ಪಡಿಸುವ ಅವಶ್ಯಕತೆ ಇಲ್ಲ. |
08:17 | ನಂತರ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು 'Perl' ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ: |
08:23 | 'perl arrayFunctions dot pl' |
08:26 | ಮತ್ತು Enter ಅನ್ನು ಒತ್ತಿ. |
08:29 | ಈ ಕೆಳಗಿನ ಔಟ್ಪುಟ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸಲಾಗಿದೆ. |
08:33 | ಸಂಕ್ಷಿಪ್ತವಾಗಿ, |
08:34 | ಈ ಟ್ಯುಟೋರಿಯಲ್ ನಲ್ಲಿ ನಾವು, ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ |
08:36 | * ಒಂದು ‘ಅರೇ’ಯಲ್ಲಿ ಎಲಿಮೆಂಟ್ ಗಳನ್ನು ಸೇರಿಸುವುದು/ತೆಗೆದುಹಾಕುವುದು ಮತ್ತು |
08:40 | * ‘ಅರೇ’ಯ ಮೇಲೆ ಪ್ರಯೋಗಿಸಬಹುದಾದ ಪ್ರಮುಖ ಫಂಕ್ಷನ್ ಗಳ ಬಗ್ಗೆ ಕಲಿತಿದ್ದೇವೆ. |
08:46 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. |
08:48 | 'script.spoken-tutorial.org/index.php/Perl' |
08:54 | ಮೇಲಿನ ಸ್ಟ್ರಿಂಗ್ ಅನ್ನು '/ ' (forward slash) ಡಿ-ಲಿಮಿಟರ್ ಇರುವಲ್ಲಿ ಸ್ಪ್ಲಿಟ್ ಮಾಡಿ. |
08:59 | ಹೊಸದಾಗಿ ಕ್ರಿಯೇಟ್ ಮಾಡಿದ ‘ಅರೇ’ಯ ಆರಂಭದಲ್ಲಿ 'https:// ' ಯನ್ನು ಸೇರಿಸಿ. |
09:06 | “Perl” ಎಂಬ ಎಲಿಮೆಂಟ್ ನ್ನು ‘ಅರೇ’ಯಿಂದ ತೆಗೆದುಹಾಕಿ. |
09:09 | ಒಂದು ‘ನಂಬರ್ ಅರೇ’ಯನ್ನು ಡಿಕ್ಲೇರ್ ಮಾಡಿ ಮತ್ತು ಅದನ್ನು ‘ಸಾರ್ಟ್’ (sort) ಮಾಡಿ. |
09:12 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
09:15 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
09:19 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:24 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:30 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:34 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
09:40 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
09:44 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
09:51 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
10:02 | ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. |
10:04 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ . |
10:06 | ವಂದನೆಗಳು. |