PERL/C2/Arrays/Kannada

From Script | Spoken-Tutorial
Jump to: navigation, search
Time Narration
00:01 Perl ನಲ್ಲಿ Arrays ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:09 * ‘ಆರೇ’ಯ ಇಂಡೆಕ್ಸ್
00:11 * ‘ಆರೇ’ಯ ಉದ್ದ
00:13 * ‘ಆರೇ’ಯ ಎಲಿಮೆಂಟ್ ಗಳನ್ನು ಅಕ್ಸೆಸ್ ಮಾಡುವುದು
00:16 * ‘ಆರೇ’ಯಲ್ಲಿ ಲೂಪ್ ಗಳು
00:18 * ‘ಸಿಕ್ವೆನ್ಶಿಯಲ್ ಆರೇ’ (Sequential Array) ಮತ್ತು
00:20 * ‘ಆರೇ ಸ್ಲೈಸಿಂಗ್’ (Array Slicing) ಇವುಗಳ ಬಗ್ಗೆ ಕಲಿಯುವೆವು.
00:22 ಇಲ್ಲಿ, ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಬಳಸುತ್ತಿದ್ದೇನೆ.
00:30 gedit ‘ಟೆಕ್ಸ್ಟ್ ಎಡಿಟರ್’ ಅನ್ನು ಸಹ ಬಳಸುತ್ತಿರುವೆನು.
00:34 ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು.
00:37 ನಿಮಗೆ Perl (ಪರ್ಲ್) ನಲ್ಲಿ ವೇರಿಯೆಬಲ್ಸ್, ಕಾಮೆಂಟ್ಸ್ ಮತ್ತು ಡೇಟಾ-ಸ್ಟ್ರಕ್ಚರ್ ಗಳ ಬಗ್ಗೆ ತಿಳಿದಿರುವುದು ಅವಶ್ಯಕ.
00:43 ಲೂಪ್ಸ್ ಮತ್ತು ಕಂಡಿಶನಲ್ ಸ್ಟೇಟ್ಮೆಂಟ್ಸ್ ಬಗ್ಗೆ ತಿಳಿದಿದ್ದರೆ ಹೆಚ್ಚು ಲಾಭವಾಗುವುದು.
00:48 ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು spoken tutorial ವೆಬ್ಸೈಟ್ ಮೇಲೆ ನೋಡಿ.
00:54 ‘ಆರೇ’, ಒಂದು ಸರಳವಾದ ‘ಡೇಟಾ ಸ್ಟ್ರಕ್ಚರ್’ ಆಗಿದೆ. ಇದು ಯಾವುದೇ ‘ಡೇಟಾ ಟೈಪ್’ ನ ಎಲಿಮೆಂಟ್ ಗಳನ್ನು ಒಳಗೊಂಡಿರುತ್ತದೆ.
00:59 ‘ಆರೇ ಇಂಡೆಕ್ಸ್’ (array index) ಯಾವಾಗಲೂ ಸೊನ್ನೆಯಿಂದ ಆರಂಭವಾಗುತ್ತದೆ.
01:03 Perl ನಲ್ಲಿ, ‘ಆರೇ’ಯ ಉದ್ದವನ್ನು ಡಿಕ್ಲೇರ್ ಮಾಡುವ ಅವಶ್ಯಕತೆಯಿಲ್ಲ.
01:08 ಎಲಿಮೆಂಟ್ ಗಳನ್ನು ‘ಆರೇ’ಗೆ ಸೇರಿಸಿದಾಗ ಅಥವಾ ಅದರಿಂದ ತೆಗೆದುಹಾಕಿದಾಗ ‘ಆರೇ’ಯ ಉದ್ದವು ಹಿಗ್ಗುತ್ತದೆ ಅಥವಾ ಕುಗ್ಗುತ್ತದೆ.
01:15 ‘ಆರೇ’ಯನ್ನು ಡಿಕ್ಲೇರ್ ಮಾಡಲು, ಸಿಂಟ್ಯಾಕ್ಸ್ ಹೀಗಿದೆ:
01:18 @myArray ಇಕ್ವಲ್ ಟು ಓಪನ್ ಬ್ರಾಕೆಟ್ 1 ಕಾಮಾ 2 ಕಾಮಾ 3 ಕಾಮಾ ಸಿಂಗಲ್ ಕೋಟ್ abc ಸಿಂಗಲ್ ಕೋಟ್ ಕಾಮಾ 10.3 ಕ್ಲೋಸ್ ಬ್ರಾಕೆಟ್ ಸೆಮಿಕೋಲನ್
01:31 ಒಂದು ‘ಅರೇ’ಯ ಕೊನೆಯ ಇಂಡೆಕ್ಸ್ ಅನ್ನು ಈ ಕಮಾಂಡ್ ನಿಂದ ಕಂಡುಹಿಡಿಯಬಹುದು.
01:35 $#myArray (ಡಾಲರ್ ಹ್ಯಾಶ್ myArray)
01:38 ಮಾದರಿಯ ಒಂದು ಪ್ರೊಗ್ರಾಂಅನ್ನು ಬಳಸಿ ಇದನ್ನು ನಾವು ತಿಳಿದುಕೊಳ್ಳೋಣ.
01:42 ‘ಟರ್ಮಿನಲ್’ಅನ್ನು ಓಪನ್ ಮಾಡಿ, ಹೀಗೆ ಟೈಪ್ ಮಾಡಿ:
01:44 ‘gedit arrayIndex dot pl space ampersand’
01:50 ಮತ್ತು Enter ಅನ್ನು ಒತ್ತಿ.
01:52 ಇದು, 'geditor'ನಲ್ಲಿ 'arrayIndex dot pl' ಎಂಬ ಫೈಲನ್ನು ಓಪನ್ ಮಾಡುವುದು.
01:57 ಸ್ಕ್ರೀನ್ ಮೇಲೆ ತೋರಿಸಲಾದ ಕೋಡ್ ನ ಭಾಗವನ್ನು ಟೈಪ್ ಮಾಡಿ.
02:02 ಇಲ್ಲಿ, 5 (ಐದು) ಎಲಿಮೆಂಟ್ ಗಳನ್ನು ಹೊಂದಿರುವ ಒಂದು ‘ಅರೇ’ಯನ್ನು ನಾವು ಡಿಕ್ಲೇರ್ ಹಾಗೂ ಡಿಫೈನ್ ಮಾಡಿದ್ದೇವೆ.
02:07 ‘ಆರೇ ಇಂಡೆಕ್ಸ್’, ಸೊನ್ನೆಯಿಂದ ಆರಂಭವಾಗುವುದರಿಂದ ಕೊನೆಯ ಇಂಡೆಕ್ಸ್ ನ ವ್ಯಾಲ್ಯೂ 4 ಆಗುವುದು.
02:14 ಎಂದರೆ, ಎಲಿಮೆಂಟ್ ಗಳ ಸಂಖ್ಯೆ 5 ರಲ್ಲಿ ಒಂದು ಕಡಿಮೆ.
02:18 ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ.
02:22 ಈಗ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು Perl ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ.
02:26 ಟೈಪ್ ಮಾಡಿ: 'perl arrayIndex dot pl'
02:30 ಮತ್ತು Enter ಅನ್ನು ಒತ್ತಿ.
02:32 ಔಟ್ಪುಟ್, ‘ಟರ್ಮಿನಲ್’ನ ಮೇಲೆ ತೋರಿಸಿದ ಹಾಗೆ ಇರುವುದು.
02:37 ಈಗ ನಾವು ಪರ್ಲ್ ನಲ್ಲಿ ‘ಅರೇ’ಯ ಉದ್ದ (ಸೈಜ್)ವನ್ನು ಹೇಗೆ ಪಡೆಯುವುದೆಂದು ನೋಡೋಣ.
02:41 ‘ಅರೇ’ಯ ಉದ್ದವನ್ನು ನಾವು ಅನೇಕ ವಿಧಾನಗಳಿಂದ ಕಂಡುಹಿಡಿಯಬಹುದು.
02:46 * ‘ಅರೇ ಇಂಡೆಕ್ಸ್’ ಪ್ಲಸ್ 1, ಅಂದರೆ, '$#array + 1'.
02:53 * Perl ನ ಇನ್-ಬಿಲ್ಟ್ ಸ್ಕೇಲರ್ ಫಂಕ್ಷನ್ ಬಳಸಿ, ಅಂದರೆ, scalar open bracket @array close bracket.
03:02 * ಸ್ಕೇಲರ್ ವೇರಿಯೆಬಲ್ ಗೆ ‘ಅರೇ’ ಯನ್ನು ಅಸೈನ್ ಮಾಡಿ, ಅಂದರೆ, $arrayLength = @array.
03:09 ಮಾದರಿ ಪ್ರೊಗ್ರಾಂಅನ್ನು ಬಳಸಿ, ನಾವು ‘ಅರೇ’ಯ ಉದ್ದಳತೆಯ ಒಂದು ದೃಷ್ಟಾಂತವನ್ನು ನೋಡೋಣ.
03:14 ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
03:18 'gedit arrayLength dot pl space ampersand'
03:24 ಮತ್ತು Enter ಅನ್ನು ಒತ್ತಿ.
03:27 ಈ ಕೆಳಗಿನ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ.
03:32 ಇಲ್ಲಿ, 5 (ಐದು) ಎಲಿಮೆಂಟ್ ಗಳನ್ನು ಹೊಂದಿರುವ ಒಂದು ‘ಅರೇ’ಯನ್ನು ನಾವು ಡಿಕ್ಲೇರ್ ಹಾಗೂ ಡಿಫೈನ್ ಮಾಡಿದ್ದೇವೆ.
03:38 ಹೀಗಾಗಿ ಔಟ್ಪುಟ್, 5 (ಐದು) ಎಂದು ತೋರಿಸುತ್ತದೆ.
03:41 ಇಲ್ಲಿ ಹೈಲೈಟ್ ಮಾಡಿರುವುದು, ಪರ್ಲ್ ನಲ್ಲಿ ‘ಅರೇ’ಯ ಉದ್ದವನ್ನು ಕಂಡುಹಿಡಿಯುವ ವಿವಿಧ ರೀತಿಗಳಾಗಿವೆ.
03:47 ದಯವಿಟ್ಟು ಗಮನಿಸಿ: ನಾವು ಪ್ರಿಂಟ್ ಸ್ಟೇಟ್ಮೆಂಟ್ ನಲ್ಲಿ, ಕಾಮಾ (comma) ಬಳಸಿ ಔಟ್ಪುಟ್ ಅನ್ನು concatenate (ಕೊಂಕ್ಯಾಟಿನೇಟ್)ಮಾಡಿದ್ದೇವೆ.
03:53 ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ.
03:57 ಈಗ, ನಾವು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
03:59 ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
04:02 'perl arrayLength dot pl' ಮತ್ತು Enter ಅನ್ನು ಒತ್ತಿ.
04:07 ಔಟ್ಪುಟ್, ‘ಟರ್ಮಿನಲ್’ನ ಮೇಲೆ ತೋರಿಸಿದ ಹಾಗೆ ಇರುವುದು.
04:12 ಈಗ, ‘ಆರೇ’ಯಲ್ಲಿ ಪ್ರತ್ಯೇಕ ಎಲಿಮೆಂಟ್ ಗಳನ್ನು ಹೇಗೆ ಅಕ್ಸೆಸ್ ಮಾಡುವುದೆಂದು ನಾವು ತಿಳಿಯೋಣ.
04:18 ‘ಆರೇ’ಯ ಎಲಿಮೆಂಟ್ ಗಳನ್ನು ಅಕ್ಸೆಸ್ ಮಾಡಲು ‘ಇಂಡೆಕ್ಸಿಂಗ್’ಅನ್ನು ಬಳಸಲಾಗುತ್ತದೆ.
04:22 ‘ಆರೇ’ಯ ಎಲಿಮೆಂಟ್ ಗಳನ್ನು ಈ ಕೆಳಗಿನ ಸ್ಠಾನಗಳಲ್ಲಿ ಅಕ್ಸೆಸ್ ಮಾಡಲು, ನಾವು ಒಂದು ಉದಾಹರಣೆಯನ್ನು ನೋಡೋಣ.
04:27 * ಮೊದಲನೆಯ ಸ್ಥಾನ
04:28 * ಕೊನೆಯ ಸ್ಥಾನ
04:29 * ಯಾವುದೇ ಸ್ಥಾನ
04:32 ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
04:35 'gedit perlArray dot pl space ampersand'
04:42 ಮತ್ತು Enter ಅನ್ನು ಒತ್ತಿ.
04:45 ಈ ಕೆಳಗಿನ ಕೋಡ್ ನ ಭಾಗವನ್ನು ಇಲ್ಲಿ ತೋರಿಸಿದಂತೆ ಟೈಪ್ ಮಾಡಿ.
04:49 ದಯವಿಟ್ಟು ಗಮನಿಸಿ:
04:50 'myArray' ಯನ್ನು '@' (ಆಟ್ ದ ರೇಟ್) ಚಿಹ್ನೆಯೊಂದಿಗೆ ಡಿಕ್ಲೇರ್ ಮಾಡಲಾಗಿದೆ.
04:54 ಆದರೆ ‘ಆರೇ’ಯ ಎಲಿಮೆಂಟ್ ಅನ್ನು ಅಕ್ಸೆಸ್ ಮಾಡಲು, ನಾವು '$' (dollar) ಚಿಹ್ನೆಯನ್ನು ಬಳಸುವುದು ಅವಶ್ಯಕ.
04:59 ಎಲಿಮೆಂಟ್ ಅನ್ನು ಯಾವುದೇ ಸ್ಥಾನದಲ್ಲಿ ಅಕ್ಸೆಸ್ ಮಾಡಲು, ನಾವು ಇಂಡೆಕ್ಸ್ ಅನ್ನು ‘ಅರೇ’ಗೆ ‘ಪಾಸ್’ ಮಾಡುವುದು ಅವಶ್ಯಕ.
05:07 ಇಲ್ಲಿ, 'myArray' ಯ ಮೊದಲನೆಯ ಎಲಿಮೆಂಟ್ ಅನ್ನು ಅಕ್ಸೆಸ್ ಮಾಡಲು,
05:11 ಸೊನ್ನೆಯನ್ನು ಇಂಡೆಕ್ಸ್ ಎಂದು ‘ಪಾಸ್’ ಮಾಡಲಾಗಿದೆ (ರವಾನಿಸಲಾಗಿದೆ).
05:16 'myArray' ಯ ಕೊನೆಯ ಎಲಿಮೆಂಟ್ ಅನ್ನು ಅಕ್ಸೆಸ್ ಮಾಡಲು, ನಾವು 'myArray' ಯ ಕೊನೆಯ ಇಂಡೆಕ್ಸ್ ಅನ್ನು ‘ಪಾಸ್’ ಮಾಡಿದ್ದೇವೆ.
05:24 ನಾವು ಇದರ ಬಗ್ಗೆ ಈ ಮೊದಲು ಕಲಿತಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ.
05:28 ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ.
05:30 ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ.
05:36 'perl perlArray dot pl'
05:41 ಮತ್ತು Enter ಅನ್ನು ಒತ್ತಿ.
05:43 ಔಟ್ಪುಟ್, ‘ಟರ್ಮಿನಲ್’ನ ಮೇಲೆ ತೋರಿಸಿದ ಹಾಗೆ ಇರುವುದು.
05:47 ಈಗ, ‘ಆರೇ’ಯ ಪ್ರತಿಯೊಂದು ಎಲಿಮೆಂಟ್ ನ ಮೇಲೆ ‘ಲೂಪ್’ ಮಾಡುವುದನ್ನು ನಾವು ತಿಳಿಯೋಣ.
05:52 ‘ಆರೇ’ಯಲ್ಲಿ ಲೂಪಿಂಗ್ ಮಾಡಲು ಎರಡು ವಿಧಾನಗಳನ್ನು ಬಳಸಲಾಗುತ್ತದೆ:
05:56 * 'for ಲೂಪ್'
05:58 * 'foreach ಲೂಪ್'.
06:01 ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ, ‘ಅರೇ’ಯಲ್ಲಿ ಇಟರೇಟ್ ಮಾಡಲು ಈ ಲೂಪ್ ಗಳನ್ನು ಹೇಗೆ ಬಳಸುವುದು ಎಂಬುದನ್ನು ನಾವು ತಿಳಿಯೋಣ.
06:07 ಇದಕ್ಕಾಗಿ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
06:11 'gedit loopingOverArray dot pl space ampersand'
06:17 ಮತ್ತು Enter ಅನ್ನು ಒತ್ತಿ.
06:20 ಈ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ.
06:24 ಇಲ್ಲಿ, ನಾವು ಇಂಡೆಕ್ಸ್ ಅನ್ನು ಇಟರೇಟ್ ಮಾಡುವುದರ ಮೂಲಕ ‘ಆರೇ’ಯ ಪ್ರತಿಯೊಂದು ಎಲಿಮೆಂಟ್ ಅನ್ನು ಪ್ರಿಂಟ್ ಮಾಡುತ್ತಿದ್ದೇವೆ.
06:31 ವೇರಿಯೆಬಲ್ ‘i’ ದ ವ್ಯಾಲ್ಯೂ, ‘ಅರೇ’ಯ ಕೊನೆಯ ಇಂಡೆಕ್ಸ್ ಅನ್ನು ತಲುಪುವವರೆಗೆ ‘for ಲೂಪ್’ ಎಕ್ಸಿಕ್ಯೂಟ್ ಆಗುವುದು.
06:38 ಇಲ್ಲಿ, 'foreach ಲೂಪ್'ಅನ್ನು ‘ಅರೇ’ಯ ಪ್ರತಿಯೊಂದು ಎಲಿಮೆಂಟ್ ಗಾಗಿ ಎಕ್ಸಿಕ್ಯೂಟ್ ಮಾಡಲಾಗುವುದು.
06:46 ‘ಅರೇ’, ಒಮ್ಮೆ ತನ್ನ ಕೊನೆಯ ಎಲಿಮೆಂಟ್ ಅನ್ನು ಮುಟ್ಟಿತೆಂದರೆ, ಆಗ ಅದು 'foreach ಲೂಪ್' ನಿಂದ ನಿರ್ಗಮಿಸುವುದು.
06:53 ದಯವಿಟ್ಟು ಗಮನಿಸಿ: ನಿಮಗೆ 'for' ಮತ್ತು 'foreach' ಲೂಪ್ ಗಳ ಬಗ್ಗೆ ತಿಳಿದಿರದಿದ್ದರೆ,
06:58 ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು spoken tutorial ವೆಬ್ಸೈಟ್ ಮೇಲೆ ನೋಡಿ.
07:04 ಈಗ, ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ.
07:07 ನಂತರ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ.
07:12 'perl loopingOverArray dot pl'
07:15 ಮತ್ತು Enter ಅನ್ನು ಒತ್ತಿ.
07:19 ಔಟ್ಪುಟ್, ‘ಟರ್ಮಿನಲ್’ನ ಮೇಲೆ ತೋರಿಸಿದ ಹಾಗೆ ಇರುವುದು.
07:24 ಪರ್ಲ್ ನಲ್ಲಿ, ‘ಸಿಕ್ವೆನ್ಶಿಯಲ್ ಆರೇ’ಯನ್ನು ನಾವು ಹೀಗೆ ಡಿಕ್ಲೇರ್ ಮಾಡಬಹುದು:
07:28 '@alphaArray = open bracket a dot dot d close bracket semicolon’
07:37 ಎಂದರೆ, 'alphaArray', 'a', 'b', 'c' ಮತ್ತು 'd' ಎಲಿಮೆಂಟ್ ಗಳನ್ನು ಒಳಗೊಂಡಿರುವುದು.
07:44 ಹೀಗೆಯೇ, @numericArray equal to open bracket 1 dot dot 5 close bracket semicolon ಮತ್ತು

@numericArray equal to open bracket 1 comma 2 comma 3 comma 4 comma 5 ಎರಡೂ ಒಂದೇ ಆಗಿವೆ.

08:03 'Perl', ‘ಆರೇ ಸ್ಲೈಸಿಂಗ್’ಅನ್ನು (array slicing) ಸಹ ಒದಗಿಸುತ್ತದೆ.
08:06 ಇದು ‘ಅರೇ’ಯ ಒಂದು ಭಾಗವನ್ನು ತೆಗೆದುಕೊಂಡು ಅದನ್ನು ಇನ್ನೊಂದು ಹೊಸ ‘ಅರೇ’ಯಲ್ಲಿ ಹಾಕಿದಂತೆ ಇರುತ್ತದೆ.
08:13 @array = 19 comma 23 comma 56 comma 45 comma 87 comma 89 close bracket semicolon
08:27 @newArray = @array open square bracket 1 comma 4 close square bracket semicolon.
08:38 ಸ್ಲೈಸಿಂಗ್ ನ ನಂತರ, 'newArray' ಹೀಗೆ ಕಾಣುವುದು:
08:42 @newArray = open bracket 23 comma 87 close bracket semicolon.
08:51 ಸಂಕ್ಷಿಪ್ತವಾಗಿ,
08:52 ಈ ಟ್ಯುಟೋರಿಯಲ್ ನಲ್ಲಿ ನಾವು, ಸ್ಯಾಂಪಲ್ ಪ್ರೊಗ್ರಾಂ ಗಳನ್ನು ಬಳಸಿ -
08:55 * ‘ಆರೇ’ಯ ಇಂಡೆಕ್ಸ್ ಅನ್ನು ಕಂಡುಹಿಡಿಯಲು
08:57 * ‘ಆರೇ’ಯ ಉದ್ದವನ್ನು ಕಂಡುಹಿಡಿಯಲು
08:59 * ‘ಆರೇ’ಯ ಎಲಿಮೆಂಟ್ ಗಳನ್ನು ಅಕ್ಸೆಸ್ ಮಾಡಲು
09:01 * ‘ಆರೇ’ಯಲ್ಲಿ ಲೂಪಿಂಗ್ ಮಾಡಲು
09:03 * ‘ಸಿಕ್ವೆನ್ಶಿಯಲ್ ಆರೇ’ ಮತ್ತು
09:05 * ‘ಆರೇ ಸ್ಲೈಸಿಂಗ್’ ಇವುಗಳನ್ನು ಕಲಿತಿದ್ದೇವೆ.
09:07 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
09:10 ಮಳೆಬಿಲ್ಲಿನ ಬಣ್ಣಗಳ ಒಂದು ಅರೇಯನ್ನು ಡಿಕ್ಲೇರ್ ಮಾಡಿ.
09:13 ಈ ‘ಅರೇ’ಯ ನಾಲ್ಕನೆಯ ಎಲಿಮೆಂಟ್ ಅನ್ನು ಪ್ರಿಂಟ್ ಮಾಡಿ.
09:16 ಈ ‘ಅರೇ’ಯ ಉದ್ದ ಹಾಗೂ ಕೊನೆಯ ಇಂಡೆಕ್ಸ್ ಅನ್ನು ಪ್ರಿಂಟ್ ಮಾಡಿ.
09:19 'for' ಮತ್ತು 'foreach' ಲೂಪ್ ಗಳನ್ನು ಬಳಸಿ, ‘ಆರೇ’ಯ ಪ್ರತಿಯೊಂದು ಎಲಿಮೆಂಟ್ ನ ಮೇಲೆ ‘ಲೂಪಿಂಗ್’ ಮಾಡಿ.
09:25 ‘ಅರೇ’ಯನ್ನು ಹೀಗೆ ಡಿಕ್ಲೇರ್ ಮಾಡಿ:

@myArray = open bracket 1..9 close bracket semicolon. ಆಮೇಲೆ, ಮೇಲಿನ ಈ ‘ಅರೇ’ಯಿಂದ, ‘ಅರೇ ಸ್ಲೈಸಿಂಗ್’ ಅನ್ನು ಬಳಸಿ ಬೆಸ ಸಂಖ್ಯೆಗಳ ಒಂದು ‘ಅರೇ’ಯನ್ನು ಕ್ರಿಯೇಟ್ ಮಾಡಿ.

09:41 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
09:44 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
09:48 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:53 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:58 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:02 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

10:09 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:13 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:20 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

10:31 ನಿಮಗೆ ಈ Perl ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ.
10:35 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
10:37 ವಂದನೆಗಳು.

Contributors and Content Editors

Sandhya.np14, Vasudeva ahitanal