PERL/C2/More-Conditional-statements/Kannada

From Script | Spoken-Tutorial
Revision as of 15:47, 31 July 2016 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 Perlನಲ್ಲಿ ‘if-elsif-else’ and ‘switch' conditional statements ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, Perl ನ
00:10 'if-elsif-else' ಮತ್ತು ‘switch' ಎಂಬ ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿಯುವೆವು.
00:15 ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಬಳಸುತ್ತಿದ್ದೇನೆ.
00:22 gedit ಎಂಬ ‘ಟೆಕ್ಸ್ಟ್ ಎಡಿಟರ್’ಅನ್ನು ಸಹ ಬಳಸುತ್ತಿರುವೆನು.
00:25 ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು.
00:29 ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್ಸ್’ ಮತ್ತು ‘ಕಾಮೆಂಟ್’ ಗಳ ಬಗ್ಗೆ ತಿಳಿದಿರಬೇಕು.
00:34 ‘for, foreach, while’ ಹಾಗೂ 'do-while'ಲೂಪ್ ಗಳ ಮತ್ತು
00:38 ‘if’ ಹಾಗೂ ‘if-else’ ಸ್ಟೇಟ್ಮೆಂಟ್ ಗಳ ಬಗ್ಗೆ ತಿಳಿದಿರುವುದು ಇನ್ನೂ ಹೆಚ್ಚು ಲಾಭಕರ.
00:43 ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು spoken tutorial ವೆಬ್ಸೈಟ್ ಮೇಲೆ ನೋಡಿ.
00:48 Perl (ಪರ್ಲ್) ನಲ್ಲಿ,
00:52 ಅನೇಕ ಕಂಡಿಶನ್ ಗಳನ್ನು ಪರೀಕ್ಷಿಸಲು ‘if-elsif-else' ಸ್ಟೇಟ್ಮೆಂಟ್ ಅನ್ನು ಉಪಯೋಗಿಸಬಹುದು
00:54 ಮತ್ತು ಎಲ್ಲ ಕಂಡಿಶನ್ ಗಳು ವಿಫಲವಾದಾಗ ಅದು ಡೀಫಾಲ್ಟ್ ‘else’ ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
00:59 ‘if-elsif-else' ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ.
01:04 if ಸ್ಪೇಸ್ ಓಪನ್ ಬ್ರಾಕೆಟ್ condition 1 ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್, Enter ಅನ್ನು ಒತ್ತಿ.
01:13 ಕಂಡೀಶನ್ true ಇದ್ದಾಗ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್ ನ ಭಾಗ, ಸೆಮಿಕೋಲನ್
01:18 Enter ಅನ್ನು ಒತ್ತಿ.
01:20 ಕ್ಲೋಸ್ ಕರ್ಲಿ ಬ್ರಾಕೆಟ್ ಸ್ಪೇಸ್ elsif ಸ್ಪೇಸ್ ಓಪನ್ ಬ್ರಾಕೆಟ್ condition 2 ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್
01:30 Enter ಅನ್ನು ಒತ್ತಿ.
01:31 ಕೋಡ್ ನ ಇನ್ನೊಂದು ಭಾಗ, ಸೆಮಿಕೋಲನ್
01:33 ಇದು elsif ಕಂಡೀಶನ್ 'true' ಇದ್ದಾಗ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್
01:37 Enter ಅನ್ನು ಒತ್ತಿ.
01:39 ಕ್ಲೋಸ್ ಕರ್ಲಿ ಬ್ರಾಕೆಟ್ ಸ್ಪೇಸ್ else ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್
01:44 Enter.
01:45 ಮೇಲಿನ ಎರಡೂ ಕಂಡೀಶನ್ ಗಳು false ಇದ್ದಾಗ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್, ಸೆಮಿಕೋಲನ್
01:51 Enter ಅನ್ನು ಒತ್ತಿ.
01:52 ಕ್ಲೋಸ್ ಕರ್ಲಿ ಬ್ರಾಕೆಟ್.
01:55 ಮೊದಲು ‘if’ ಕಂಡೀಶನ್ ಅನ್ನು ಪರೀಕ್ಷಿಸಲಾಗುತ್ತದೆ ಮತ್ತು ‘condition 1’, ‘true’ ಇದೆ ಎಂದಾದರೆ ಎಕ್ಸಿಕ್ಯೂಟ್ ಮಾಡಲಾಗುತ್ತದೆ.
02:01 ಇಲ್ಲದಿದ್ದರೆ, ಆಗ ‘else if’ ಕಂಡೀಶನ್ ಅನ್ನು ಪರೀಕ್ಷಿಸಲಾಗುತ್ತದೆ ಮತ್ತು ಅದು ‘true’ ಇದೆ ಎಂದಾದರೆ ಎಕ್ಸಿಕ್ಯೂಟ್ ಮಾಡಲಾಗುತ್ತದೆ.
02:06 ಇಲ್ಲವಾದರೆ, ‘else’ ಬ್ಲಾಕ್ ನ ಒಳಗೆ ಇರುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ.
02:11 ಈಗ ನಾವು 'if-elsif-else' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯನ್ನು ನೋಡೋಣ.
02:16 ‘ಟರ್ಮಿನಲ್’ ಅನ್ನು ಓಪನ್ ಮಾಡಿ, ಹೀಗೆ ಟೈಪ್ ಮಾಡಿ:
02:19 gedit conditionalBlocks ಡಾಟ್ pl ಸ್ಪೇಸ್ ಆಂಪರ್ಸಂಡ್
02:26 ಮತ್ತು Enter ಅನ್ನು ಒತ್ತಿ.
02:28 ಇದು gedit ನಲ್ಲಿ, "conditionalBlocks.pl" ಎಂಬ ಫೈಲನ್ನು ಓಪನ್ ಮಾಡುವುದು.
02:33 ಈ ಕೆಳಗಿನ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ.
02:38 ನಾವು 'language' ಎಂಬ ವೇರಿಯೆಬಲ್ ಗೆ, 'Perl' ಎಂಬ ವ್ಯಾಲ್ಯೂ ಅನ್ನು ಅಸೈನ್ ಮಾಡಿದ್ದೇವೆ.
02:44 ‘eq’, ‘ಸ್ಟ್ರಿಂಗ್ ಕಂಪ್ಯಾರಿಸನ್ ಆಪರೇಟರ್’ ಆಗಿದೆ ಎಂದು ಗಮನಿಸಿ.
02:49 ನಂತರ, ನಾವು ಪರೀಕ್ಷಿಸಬೇಕಾಗಿರುವ ವಿವಿಧ ಕಂಡಿಶನ್ ಗಳು ಇರುತ್ತವೆ.
02:55 ಈಗ, ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ.
02:58 ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ನೇರವಾಗಿ ಫೈಲನ್ನು ಎಕ್ಸಿಕ್ಯೂಟ್ ಮಾಡಿ.
03:02 ಹೀಗೆ ಟೈಪ್ ಮಾಡಿ: 'perl conditionalBlocks dot pl'
03:09 ನಾನು ಕಂಪೈಲೇಶನ್ ಹಂತವನ್ನು ಮಾಡದೇ ಮುಂದುವರಿಯುತ್ತಿದ್ದೇನೆ ಎಂದು ಗಮನಿಸಿ. ಪರ್ಲ್ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಲು ಇದು ಕಡ್ಡಾಯವಾದ ಹಂತವೇನೂ ಅಲ್ಲ.
03:16 ಇಲ್ಲಿ ಕಂಪೈಲೇಶನ್ ಎರರ್ ಏನಾದರೂ ಇದ್ದರೆ
03:18 ಎಕ್ಸಿಕ್ಯೂಶನ್, ಎರರ್ ಅನ್ನು ತೋರಿಸುವುದು ಮತ್ತು ಸ್ಕ್ರಿಪ್ಟ್ ನ ಎಕ್ಸಿಕ್ಯೂಶನ್ ಅನ್ನು ನಿಲ್ಲಿಸುವುದು.
03:23 ಈಗ Enter ಅನ್ನು ಒತ್ತಿ.
03:25 ‘ಟರ್ಮಿನಲ್’ನ ಮೇಲೆ ತೋರಿಸಲಾದ ಔಟ್ಪುಟ್ ಹೀಗಿದೆ.
03:27 "Hi, I am Perl"
03:29 ಈಗ, ನಾವು ನಮ್ಮ ಮುಂದಿನ ಉದಾಹರಣೆಯನ್ನು ನೋಡೋಣ.
03:31 'gedit' ಗೆ ಬದಲಾಯಿಸಿ.
03:33 ಇಲ್ಲಿ ತೋರಿಸಿದಂತೆ 'language' ಎಂಬ ವೇರಿಯೆಬಲ್ ಗೆ "Java" ಎಂದು ಅಸೈನ್ ಮಾಡಿ.
03:37 ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ.
03:40 ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಫೈಲನ್ನು ಎಕ್ಸಿಕ್ಯೂಟ್ ಮಾಡಿ.
03:43 ಹೀಗೆ ಟೈಪ್ ಮಾಡಿ: 'perl conditionalBlocks dot pl'
03:50 ಮತ್ತು Enter ಅನ್ನು ಒತ್ತಿ.
03:53 ‘ಟರ್ಮಿನಲ್’ನ ಮೇಲೆ ತೋರಿಸಲಾದ ಔಟ್ಪುಟ್ ಹೀಗಿದೆ: "Hi, I am Java".
03:59 ಮತ್ತೆ ನಾವು gedit ಗೆ ಮರಳೋಣ.
04:03 ಈಗ, ನಾವು 'language' ಎಂಬ ವೇರಿಯೆಬಲ್ ಗೆ "English" ಎಂದು ಅಸೈನ್ ಮಾಡೋಣ.
04:07 ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ.
04:09 ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಫೈಲನ್ನು ಎಕ್ಸಿಕ್ಯೂಟ್ ಮಾಡಿ.
04:13 ಹೀಗೆ ಟೈಪ್ ಮಾಡಿ: 'perl conditionalBlocks dot pl'
04:18 ಮತ್ತು Enter ಅನ್ನು ಒತ್ತಿ.
04:19 ‘ಟರ್ಮಿನಲ್’ನ ಮೇಲೆ ತೋರಿಸಲಾದ ಔಟ್ಪುಟ್ ಹೀಗಿದೆ:
04:22 "I am not a computer language".
04:27 ‘ಕಂಡಿಶನ್’ಅನ್ನು ಪೂರೈಸುವ ಒಂದೇ ಒಂದು 'if' ಬ್ಲಾಕ್ ಅನ್ನು ಮಾತ್ರ ಎಕ್ಸಿಕ್ಯೂಟ್ ಮಾಡಲಾಗುವುದು ಎಂಬುದನ್ನು ಈ ಮೂರು ಸಂದರ್ಭಗಳು ಸೂಚಿಸುತ್ತವೆ.
04:35 ಇಲ್ಲದಿದ್ದರೆ, ಡೀಫಾಲ್ಟ್ 'else' ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುವುದು.
04:39 ಇಲ್ಲಿ ತೋರಿಸಿದಂತೆ, ನಮ್ಮ ಅವಶ್ಯಕತೆಗೆ ಅನುಸಾರವಾಗಿ ನಾವು ಅನೇಕ 'elsif' ಕಂಡಿಶನ್ ಗಳನ್ನು ಬಳಸಬಹುದು.
04:46 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
04:48 ಈ ಕೆಳಗೆ ತೋರಿಸಿದಂತೆ ಪ್ರಿಂಟ್ ಮಾಡಲು, ಒಂದು 'if-elsif-else' ಸ್ಟೇಟ್ಮೆಂಟ್ ಅನ್ನು ಬರೆಯಿರಿ.
04:51 * 'stream', 'science' ಆಗಿದ್ದರೆ: “I am a Science graduate”
04:55 * 'stream', 'commerce' ಆಗಿದ್ದರೆ: “I am a Commerce graduate”
04:59 * 'stream', 'science' ಅಥವಾ 'commerce' ಎರಡೂ ಆಗಿಲ್ಲ ಎಂದಾದರೆ: “I am an Arts graduate”.
05:06 ಈಗ ನಾವು 'switch' ಸ್ಟೇಟ್ಮೆಂಟ್ ನ ಬಗ್ಗೆ ತಿಳಿಯೋಣ.
05:10 Perl 5.8 ನ ವರೆಗೆ Perl ನಲ್ಲಿ 'switch' ಸ್ಟೇಟ್ಮೆಂಟ್ ಇರಲಿಲ್ಲ.
05:14 ಆನಂತರ,
05:18 ‘Switch’ ಸ್ಟೇಟ್ಮೆಂಟ್ ನ ಕಾರ್ಯವನ್ನು ಒದಗಿಸಿದ ‘Switch’ ಎಂಬ ಘಟಕವನ್ನು (module) ಪರಿಚಯಿಸಲಾಯಿತು.
05:22 ಸೂಚನೆ: 'Perl' ನಲ್ಲಿ, 'Modules' ಎಂಬುದನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗುವುದು.
05:27 ‘switch’ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ.
05:30 use Switch semicolon
05:32 Enter ಅನ್ನು ಒತ್ತಿ.
05:34 switch ಸ್ಪೇಸ್ ಓಪನ್ ಬ್ರಾಕೆಟ್ $ (ಡಾಲರ್) value ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್
05:42 Enter ಅನ್ನು ಒತ್ತಿ.
05:44 case ಸ್ಪೇಸ್ 1 ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ ಡಾಲರ್ value ಇಕ್ವಲ್ ಟು 1 ಇದ್ದಾಗ ಎಕ್ಸಿಕ್ಯೂಟ್ ಮಾಡುವ ಕೋಡ್ ನ ಭಾಗ ಕ್ಲೋಸ್ ಕರ್ಲಿ ಬ್ರಾಕೆಟ್.
05:53 Enter ಅನ್ನು ಒತ್ತಿ.
05:55 case ಸ್ಪೇಸ್ ಸಿಂಗಲ್ ಕೋಟ್ a ಸಿಂಗಲ್ ಕೋಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ ಡಾಲರ್ value ಇಕ್ವಲ್ ಟು ‘a’ ಇದ್ದಾಗ ಎಕ್ಸಿಕ್ಯೂಟ್ ಮಾಡುವ ಕೋಡ್ ನ ಭಾಗ ಕ್ಲೋಸ್ ಕರ್ಲಿ ಬ್ರಾಕೆಟ್
06:09 Enter ಅನ್ನು ಒತ್ತಿ.
06:10 else ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ ಡಾಲರ್ value ಯಾವುದೇ case ಗೆ ಸರಿಹೊಂದದಿದ್ದಾಗ ಎಕ್ಸಿಕ್ಯೂಟ್ ಮಾಡುವ ಕೋಡ್ ನ ಭಾಗ.
06:18 ಕ್ಲೋಸ್ ಕರ್ಲಿ ಬ್ರಾಕೆಟ್
06:19 Enter ಅನ್ನು ಒತ್ತಿ.
06:20 ಕ್ಲೋಸ್ ಕರ್ಲಿ ಬ್ರಾಕೆಟ್.
06:22 ನಾವು ಉದಾಹರಣೆಗಾಗಿ ಒಂದು ಪ್ರೊಗ್ರಾಂಅನ್ನು ಬಳಸಿ 'switch' ನ ಬಗ್ಗೆ ತಿಳಿಯೋಣ.
06:26 ‘ಟರ್ಮಿನಲ್’ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ:
06:29 'gedit sampleSwitch dot pl space ampersand'
06:36 ಮತ್ತು Enter ಅನ್ನು ಒತ್ತಿ.
06:38 ಈಗ, ಮಾದರಿಯ (sample) ಪ್ರೊಗ್ರಾಂ ಅನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ.
06:43 'switch' ಸ್ಟೇಟ್ಮೆಂಟ್, ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ತಿಳಿಯೋಣ.
06:46 'Perl' ಕೋಡ್ ನಲ್ಲಿ, 'use Switch' ಸ್ಟೇಟ್ಮೆಂಟ್, 'Switch' ಘಟಕವನ್ನು (ಮೊಡ್ಯೂಲ್) ಒಳಗೊಂಡಿದೆ.
06:54 ಸೂಚನೆ: 'use' ಕೀವರ್ಡ್ ನ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ವಿವರವಾಗಿ ಕಲಿಯುವೆವು.
07:00 ಈಗ, ನಾವು ವಿಭಿನ್ನ ‘case’ ಗಳನ್ನು ಪರೀಕ್ಷಿಸುವೆವು.
07:03 ನಾವು ವೇರಿಯೆಬಲ್ '$var' ಗೆ, 'Perl' ಎಂದು ಅಸೈನ್ ಮಾಡಿದ್ದೇವೆ.
07:08 'switch' ಸ್ಟೇಟ್ಮೆಂಟ್ ನಲ್ಲಿ, ವೇರಿಯೆಬಲ್ '$var' ನಲ್ಲಿರುವ ವ್ಯಾಲ್ಯೂಅನ್ನು ಪರೀಕ್ಷಿಸಲಾಗುತ್ತದೆ.
07:14 ಮೊದಲನೆಯ ಸಂದರ್ಭದಲ್ಲಿ, ಅದು case 'Perl' ಗೆ ತಾಳೆಯಾಗುತ್ತದೆ.
07:19 ಹೀಗಾಗಿ, ಈ case ಗಾಗಿ ಬರೆದ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುವುದು.
07:24 ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ.
07:27 ಈಗ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ.
07:31 “perl sampleSwitch.pl”
07:36 Enter ಅನ್ನು ಒತ್ತಿ.
07:38 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು.
07:41 "I am Perl"
07:43 'gedit' ನಲ್ಲಿ, 'sampleSwitch.pl' ಗೆ ಹಿಂದಿರುಗಿ.
07:48 ಈಗ, ನಾವು ವೇರಿಯೆಬಲ್ '$var' ಗೆ, 'Linux' ಎಂದು ಅಸೈನ್ ಮಾಡೋಣ.
07:52 ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ.
07:57 ಮತ್ತೊಮ್ಮೆ, ವೇರಿಯೆಬಲ್ '$var' ನ ವ್ಯಾಲ್ಯೂಅನ್ನು 'switch' ನಲ್ಲಿ ಪರೀಕ್ಷಿಸಲಾಗುವುದು.
08:03 ಅದು case 'Linux' ಗೆ ತಾಳೆಯಾಗುತ್ತದೆ.
08:05 ಹೀಗಾಗಿ, ಈ case ಗಾಗಿ ಬರೆದ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುವುದು.
08:10 ಈಗ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ.
08:15 perl sampleSwitch.pl
08:19 Enter ಅನ್ನು ಒತ್ತಿ.
08:21 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು.
08:24 "I am Linux"
08:26 'gedit' ನಲ್ಲಿಯ 'sampleSwitch.pl' ಗೆ ಬದಲಾಯಿಸಿ.
08:30 ಹೀಗೆಯೇ, ವೇರಿಯೆಬಲ್ '$var', 'Java' ಎಂಬ ವ್ಯಾಲ್ಯೂಅನ್ನು ಹೊಂದಿದ್ದರೆ ಆಗ ಎರಡನೆಯ 'case' ಅನ್ನು ಪರೀಕ್ಷಿಸಲಾಗುವುದು.
08:38 ಈಗ ನಾವು, ವೇರಿಯೆಬಲ್ '$var' ಗೆ, 'English' ಎಂದು ಅಸೈನ್ ಮಾಡೋಣ.
08:42 ಮತ್ತೊಮ್ಮೆ, ವೇರಿಯೆಬಲ್ '$var' ನ ವ್ಯಾಲ್ಯೂಅನ್ನು 'switch' ನಲ್ಲಿ ಪರೀಕ್ಷಿಸಲಾಗುವುದು.
08:47 ಇದು ಯಾವುದೇ 'case' ಸ್ಟೇಟ್ಮೆಂಟ್ ನೊಂದಿಗೆ ತಾಳೆಯಾಗುವುದಿಲ್ಲ.
08:50 ಹೀಗಾಗಿ, 'else' ಸ್ಟೇಟ್ಮೆಂಟ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುವುದು.
08:54 ಈಗ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ.
09:00 perl sampleSwitch.pl
09:07 ಮತ್ತು Enter ಅನ್ನು ಒತ್ತಿ.
09:09 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು.
09:12 "I am not a computer language"
09:17 ಎಕ್ಸ್ಪ್ರೆಶನ್ ನ (expression) ವ್ಯಾಲ್ಯೂ, ಎಕ್ಸಿಕ್ಯೂಟ್ ಮಾಡಬೇಕಾದ 'case' ಅನ್ನು ನಿರ್ಧರಿಸುತ್ತದೆ ಎಂದು ಈ ಮೂರು ಸಂದರ್ಭಗಳಿಂದ ತಿಳಿಯುತ್ತದೆ.
09:25 ಸೂಕ್ತವಾದ 'case' ಮಾತ್ರ ಎಕ್ಸಿಕ್ಯೂಟ್ ಮಾಡಲ್ಪಡುವುದು
09:28 ಮತ್ತು ಸೂಕ್ತವಾದ 'case' ಇಲ್ಲದಿದ್ದಾಗ, ಡೀಫಾಲ್ಟ್ 'else' 'case'ಅನ್ನು ಎಕ್ಸಿಕ್ಯೂಟ್ ಮಾಡಲಾಗುವುದು.
09:35 'else case’ ಅನ್ನು ಬರೆಯುಬೇಕೆಂಬ ಕಡ್ಡಾಯವೇನೂ ಇಲ್ಲ.
09:39 ಇಂತಹ ಸಂದರ್ಭದಲ್ಲಿ,
09:41 ಯಾವುದೇ ‘case’ ಸರಿಹೊಂದದಿದ್ದರೆ
09:44 ಆಗ ‘switch’ ಸ್ಟೇಟ್ಮೆಂಟ್ ನಿಂದ ಔಟ್ಪುಟ್ ಏನೂ ಇರುವುದಿಲ್ಲ.
09:48 ಇಲ್ಲಿ ನಿಮಗಾಗಿ ಮತ್ತೊಂದು ಅಸೈನ್ಮೆಂಟ್ ಇದೆ.
09:50 ಈ ಟ್ಯುಟೋರಿಯಲ್ ನಲ್ಲಿ, ಈ ಮೊದಲು ಕೊಟ್ಟಿರುವ ಅಸೈನ್ಮೆಂಟ್ ಅನ್ನು
09:53 ‘switch' ಸ್ಟೇಟ್ಮೆಂಟ್ ಅನ್ನು ಬಳಸಿ ಮತ್ತೆ ಬರೆಯಿರಿ.
09:57 ಸಂಕ್ಷಿಪ್ತವಾಗಿ,
09:59 ಈ ಟ್ಯುಟೋರಿಯಲ್ ನಲ್ಲಿ ನಾವು, ಮಾದರಿಯ ಪ್ರೊಗ್ರಾಂಗಳನ್ನು ಬಳಸಿ 'Perl' ನ
10:01 'if-elsif-else' ಸ್ಟೇಟ್ಮೆಂಟ್ ಮತ್ತು
10:04 ‘switch' ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿತಿದ್ದೇವೆ.
10:08 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:12 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:15 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:20 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:

‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.

10:25 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:30 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

10:36 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:40 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:47 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

10:58 ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ.
11:00 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.
11:03 ವಂದನೆಗಳು.

Contributors and Content Editors

Sandhya.np14, Vasudeva ahitanal