Jmol-Application/C2/Introduction-to-Jmol-Application/Kannada

From Script | Spoken-Tutorial
Revision as of 15:18, 4 April 2016 by Sandhya.np14 (Talk | contribs)

Jump to: navigation, search
Time Narration
00:01 ನಮಸ್ಕಾರ.
00:02 Introduction to Jmol Application (ಇಂಟ್ರೊಡಕ್ಶನ್ ಟು ಜೆಮೋಲ್ ಅಪ್ಲಿಕೇಶನ್) ಎನ್ನುವ ಈ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾನು,
00:11 Jmol (‘ಜೆಮೋಲ್’) ಅಪ್ಲಿಕೇಶನ್ ವಿಂಡೋ ಮತ್ತು ಕೆಲವು ಮುಖ್ಯ ಆಪರೇಶನ್ ಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ.
00:16 ನಾವು,
00:18 ಮೆನ್ಯೂ ಬಾರ್ , ಟೂಲ್ ಬಾರ್ ಮತ್ತು ಜೆಮೋಲ್ ಪ್ಯಾನೆಲ್
00:22 * ಜೆಮೋಲ್ ಪ್ಯಾನೆಲ್ ನ ಗಾತ್ರವನ್ನು ಹೇಗೆ ಬದಲಾಯಿಸುವುದು
00:25 * ಸರಳ ಸಾವಯವ ಅಣುಗಳ ಮಾದರಿಗಳನ್ನು ರಚನೆ ಮಾಡುವುದು
00:28 * ಹೈಡ್ರೋಜೆನ್ ಗೆ ಬದಲಾಗಿ Methyl (ಮಿಥೈಲ್) ಗುಂಪನ್ನು ಸೇರಿಸಿ ಅಣುಗಳನ್ನು ರಚಿಸುವುದರ ಬಗ್ಗೆ ತಿಳಿಯುವೆವು.
00:34 ನಾವು
00:36 * ಸ್ಟೇಬಲ್ ಕನ್ಫರ್ಮೇಷನ್ ಗಾಗಿ ಎನರ್ಜಿಯನ್ನು ಕನಿಷ್ಠಗೊಳಿಸುವುದು ಮತ್ತು
00:41 * ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡುವುದನ್ನೂ ಸಹ ಕಲಿಯುವೆವು.
00:45 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ:
00:49 * ಮಾಧ್ಯಮಿಕ ಶಾಲೆಯ ರಸಾಯನಶಾಸ್ತ್ರದ ಮತ್ತು
00:50 * ಮೂಲ ಸಾವಯವ ರಸಾಯನಶಾಸ್ತ್ರದ ಪರಿಚಯ ಇರಬೇಕು.
00:53 ಈ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡಲು, ನಾನು:
00:56 * Ubuntu (ಉಬಂಟು) ಆಪರೇಟಿಂಗ್ ಸಿಸ್ಟೆಮ್ ನ ೧೨.೦೪ ನೇ ಆವೃತ್ತಿ
01:00 * Jmol ನ ೧೨.೨.೨ ನೇ ಆವೃತ್ತಿ
01:03 ಮತ್ತು * Java ೭ ನ್ನು ಬಳಸುತ್ತಿದ್ದೇನೆ.
01:06 ದಯವಿಟ್ಟು ಗಮನಿಸಿ-
01:07 'ಜೆಮೋಲ್ ಅಪ್ಲಿಕೇಶನ್' ಸುಗಮವಾಗಿ ನಡೆಯಲು, ನಿಮ್ಮ ಸಿಸ್ಟಮ್ ನಲ್ಲಿ “ಜಾವಾ” ಇನ್ಸ್ಟಾಲ್ ಆಗಿರಬೇಕು.
01:14 Jmol Application (ಜೆಮೋಲ್ ಅಪ್ಲಿಕೇಶನ್) ನ ಬಗೆಗೆ:
01:17 * ಇದೊಂದು ಉಚಿತ ಮತ್ತು ಓಪನ್ ಸೋರ್ಸ್ ಮೊಲೆಕ್ಯುಲರ್-ವ್ಯೂಅರ್ (Molecular Viewer) ಆಗಿದೆ.
01:21 * ರಾಸಾಯನಿಕ ರಚನೆಗಳ 3D ಮಾದರಿಗಳನ್ನು ರಚಿಸಲು ಮತ್ತು ವೀಕ್ಷಿಸಲು ಉಪಯೋಗಿಸಲಾಗುತ್ತದೆ.
01:27 ಮತ್ತು * ಪ್ರೋಟೀನ್ ಹಾಗೂ ಮ್ಯಾಕ್ರೋಮೊಲೆಕ್ಯುಲ್ ಗಳ ಸೆಕೆಂಡರಿ ರಚನೆಗಳನ್ನು ವೀಕ್ಷಿಸಲು ಬಳಸಲಾಗುತ್ತದೆ.
01:33 ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗೆಗೆ ಮಾಹಿತಿ-
01:37 ಉಬಂಟು OS ನಲ್ಲಿ, Jmol ನ ಇನ್ಸ್ಟಾಲ್ಲೇಶನ್ ಅನ್ನು Ubuntu Software Center (ಉಬಂಟು ಸಾಫ್ಟ್ವೇರ್ ಸೆಂಟರ್) ಅನ್ನು ಉಪಯೋಗಿಸಿ ಮಾಡಲಾಗುವುದು.
01:45 ಈ ಟ್ಯುಟೋರಿಯಲ್ ಅನ್ನು, ದಯವಿಟ್ಟು ನಮ್ಮ ವೆಬ್ಸೈಟ್ www.spoken-tutorial.orgLinux ಸರಣಿಯಲ್ಲಿ ನೋಡಿ.
01:56 ವಿಂಡೋಸ್, ಮ್ಯಾಕ್ OS ಮತ್ತು ಆಂಡ್ರಾಯ್ಡ್ (Android) ಸಾಧನಗಳಲ್ಲಿ ಇನ್ಸ್ಟಾಲ್ ಮಾಡಲು, ದಯವಿಟ್ಟು www.jmol.sourceforge.net ಅನ್ನು ನೋಡಿ
02:08 ಮತ್ತು ಇನ್ಸ್ಟಾಲ್ ಮಾಡಲು ವೆಬ್-ಪೇಜ್ ನ ಮೇಲೆ ಕೊಟ್ಟ ಸೂಚನೆಗಳನ್ನು ಅನುಸರಿಸಿ.
02:13 Ubuntu Software Center (ಉಬಂಟು ಸಾಫ್ಟವೇರ್ ಸೆಂಟರ್) ಅನ್ನು ಬಳಸಿ, ನಾನು ಈಗಾಗಲೇ ‘ಜೆಮೋಲ್ ಅಪ್ಲಿಕೇಶನ್’ ಅನ್ನು ನನ್ನ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ.
02:20 ‘ಜೆಮೋಲ್ ಅಪ್ಲಿಕೇಶನ್’ಅನ್ನು ಒಪನ್ ಮಾಡಲು, 'Dash Home' (ಡ್ಯಾಶ್ ಹೋಮ್) ನ ಮೇಲೆ ಕ್ಲಿಕ್ ಮಾಡಿ.
02:24 ‘ಸರ್ಚ್ ಬಾಕ್ಸ್’ನಲ್ಲಿ "Jmol" ಎಂದು ಟೈಪ್ ಮಾಡಿ.
02:27 ಸ್ಕ್ರೀನ್ ನ ಮೇಲೆ Jmol ಐಕಾನ್ ಕಾಣುತ್ತದೆ.
02:30 ‘ಜೆಮೋಲ್ ಅಪ್ಲಿಕೇಶನ್ ವಿಂಡೋ’ವನ್ನು ಓಪನ್ ಮಾಡಲು, Jmol ಐಕಾನ್ ಮೇಲೆ ಕ್ಲಿಕ್ ಮಾಡಿ.
02:35 ‘ಜೆಮೋಲ್ ಅಪ್ಲಿಕೇಶನ್'ವಿಂಡೊ, ಮೇಲ್ತುದಿಯಲ್ಲಿ ಒಂದು ಮೆನ್ಯೂ ಬಾರ್ ಅನ್ನು ಹೊಂದಿದೆ.
02:40 'ಮೆನ್ಯೂ ಬಾರ್’ನ ಕೆಳಗೆ ಒಂದು 'ಟೂಲ್ ಬಾರ್' ಇದೆ.
02:43 ಇಲ್ಲಿ, 'ಜೆಮೋಲ್ ಪ್ಯಾನೆಲ್' ಎಂದು ಕರೆಯಲ್ಪಡುವ 'ಡಿಸ್ಪ್ಲೇ ಎರಿಯಾ' ಇದೆ.
02:48 ಮೆನ್ಯು ಬಾರ್ ನಲ್ಲಿ- File, Edit, Display ಗಳಂತಹ ವಿವಿಧ ಆಯ್ಕೆಗಳಿವೆ.
02:56 ಇವುಗಳಲ್ಲಿ ಪ್ರತಿಯೊಂದಕ್ಕೂ ಉಪ-ಆಯ್ಕೆಗಳಿವೆ.
03:00 ‘ಟೂಲ್ಸ್’ ಮೆನ್ಯುನಲ್ಲಿ, ಇತರ ಆಯ್ಕೆಗಳಲ್ಲದೆ ಪರಮಾಣುಗಳ ಮಧ್ಯದ ದೂರವನ್ನು ಅಳೆಯುವ ಟೂಲ್ ಗಳಿವೆ.
03:07 ನಾವು ಈ ಆಯ್ಕೆಗಳನ್ನು ಮುಂದಿನ ‘ಟ್ಯುಟೋರಿಯಲ್’ಗಳಲ್ಲಿ ಕಲಿಯುವೆವು.
03:12 ‘Help’ (ಹೆಲ್ಪ್) ಮೆನುನಲ್ಲಿ, ‘ಜೆಮೋಲ್ ಅಪ್ಲಿಕೇಶನ್’ನ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿ ಇದೆ.
03:18 ಇದು, ‘ಡಾಕ್ಯುಮೆಂಟೇಷನ್’ಅನ್ನು ಒಳಗೊಂಡಿರುವ ‘ಯುಸರ್ ಗೈಡ್’ನ್ನು ಸಹ ಹೊಂದಿದೆ.
03:23 ಟೂಲ್-ಬಾರ್, ಹಲವಾರು ‘ಮೆನ್ಯು ಐಕಾನ್’ಗಳನ್ನು ಹೊಂದಿದೆ.
03:27 ‘ಮೆನ್ಯು ಐಕಾನ್’ಗಳು ‘ಒಪನ್’, ‘ಸೇವ್’, ‘ಎಕ್ಸಪೊರ್ಟ್’ ಮತ್ತು ‘ಪ್ರಿಂಟ್’ ಮುಂತಾದ ಫಂಕ್ಷನ್ (ಕ್ರಿಯೆ) ಗಳನ್ನು ಶೀಘ್ರವಾಗಿ ಮಾಡುತ್ತವೆ.
03:37 ಇಲ್ಲಿ, ತಿರುಗಿಸಲು, ಪರಮಾಣುಗಳ ‘ಸೆಟ್’ಅನ್ನು ಆಯ್ಕೆ ಮಾಡಲು, ದೂರಗಳನ್ನು ಅಳೆಯಲು ‘ಐಕಾನ್’ಗಳ ಒಂದು ಸೆಟ್ ಇದೆ.
03:47 ಅಣುಗಳ ಮಾದರಿಗಳನ್ನು ರಚಿಸಲು ಮತ್ತು ‘ಎಡಿಟ್’ ಮಾಡಲು ‘modelkit’ ಐಕಾನ್ ಅನ್ನು ಉಪಯೋಗಿಸಲಾಗುತ್ತದೆ.
03:53 'ಜೆಮೋಲ್ ಪ್ಯಾನೆಲ್'ಅನ್ನು ನಮ್ಮ ಅವಶ್ಯಕತೆಗೆ ಬೇಕಾದಂತೆ ‘ರಿ-ಸೈಜ್’ ಮಾಡಬಹುದು.
03:58 ‘ಕರ್ಸರ್’,‘ಆರೋ ಇಂಡಿಕೇಟರ್’ ಆಗಿ ಬದಲಾಗುವವರೆಗೆ ಅದನ್ನು ‘ವಿಂಡೋ’ದ ಯಾವುದೇ ಮೂಲೆಗೆ ತೆಗೆದುಕೊಂಡು ಹೋಗಿ.
04:04 ಈಗ, ವಿಂಡೊವನ್ನು ಓರೆಯಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಎಳೆದು ‘ರಿ-ಸೈಜ್’ ಮಾಡಿ.
04:10 ‘ಪ್ಯಾನಲ್’ನ ಸೈಜ್ ಅನ್ನು ಬದಲಾಯಿಸಲು, 'ಮೆನ್ಯು ಬಾರ್'ನಲ್ಲಿಯ 'Display' ಮೆನ್ಯುವನ್ನು ಸಹ ಉಪಯೋಗಿಸಬಹುದು.
04:16 ಮೆನ್ಯೂಬಾರ್ ನಲ್ಲಿಯ 'Display' ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ ಮತ್ತು ‘Resize’ ಆಯ್ಕೆಯನ್ನು ‘ಸೆಲೆಕ್ಟ್’ ಮಾಡಿ.
04:20 ‘ಪಿಕ್ಸೆಲ್’ಗಳಲ್ಲಿ ಅಗಲ ಮತ್ತು ಎತ್ತರಗಳನ್ನುನಮೂದಿಸಬಹುದಾದ ಒಂದು ‘ಡಾಯಲಾಗ್ ಬಾಕ್ಸ್’, ತೆರೆದುಕೊಳ್ಳುತ್ತದೆ.
04:27 ನನಗೆ ‘೮೦೦ ಬೈ ೬೦೦’ ಪಿಕ್ಸೆಲ್ ಗಳ ‘ಸೈಜ್’ ನ ವಿಂಡೋ ಬೇಕು.
04:32 ಆದ್ದರಿಂದ ನಾನು ‘೮೦೦ ಸ್ಪೇಸ್ ೬೦೦’ ಎಂದು ಟೈಪ್ ಮಾಡಿ, ‘OK’ ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ.
04:41 ಈಗ ‘ಜೆಮೋಲ್ ಪ್ಯಾನೆಲ್’ “೮೦೦ ಬೈ ೬೦೦” ಕ್ಕೆ ‘ರಿ-ಸೈಜ್’ ಆಗುತ್ತದೆ.
04:47 ಈಗ ಮುಂದುವರೆದು ನಾವು ಕೆಲವು ಸರಳ ಸಾವಯವ ಪರಮಾಣುಗಳ ಮಾದರಿಗಳನ್ನು ರಚನೆ ಮಾಡೋಣ.
04:53 Modelkit ನಮಗೆ ಕನಿಷ್ಠ ಎನರ್ಜಿಯಿಂದ ಮಾದರಿಗಳನ್ನು ಕಟ್ಟಲು ಮತ್ತು ಮಾರ್ಪಡಿಸಲು ಅನುಮತಿಸುತ್ತದೆ.
05:00 ಟೂಲ್ ಬಾರ್ ನಲ್ಲಿಯ modelkit (ಮಾಡೆಲ್-ಕಿಟ್) ಐಕಾನ್ ಮೇಲೆ ಕ್ಲಿಕ್ ಮಾಡಿ.
05:04 Methane (ಮಿಥೇನ್) ನ ಮಾದರಿಯು ಪ್ಯಾನೆಲ್ನ ಮೇಲೆ ಕಾಣಿಸಿಕೊಳ್ಳುತ್ತದೆ.
05:07 ‘ಜೆಮೋಲ್ ಪ್ಯಾನೆಲ್’ ನ್ ಮೇಲಿನ-ಎಡ ಮೂಲೆಯಲ್ಲಿ ಒಂದು ‘ಮೆನ್ಯು’ ಕಾಣುತ್ತದೆ.
05:12 ಈ ‘ಮೆನ್ಯು’ ಸರಳವಾಗಿ ಅಣುಗಳನ್ನು ಕೂಡಿಸುವ, ‘ಡಿಲೀಟ್’ ಮತ್ತು ‘ಡ್ರಾಗ್’ ಮಾಡುವ ಸಮರ್ಥ ಲಕ್ಷಣಗಳನ್ನು ಹೊಂದಿದೆ.
05:19 * ‘ಫಂಕ್ಶನಲ್ ಗ್ರೂಪ್’ಗಳನ್ನು ಕೂಡಿಸಿ.
05:21 * ಬಾಂಡ್ಸ್ ಗಳನ್ನು ‘ಡಿಲಿಟ್’, ‘ಆಡ್’ ಮತ್ತು ‘ರೊಟೆಟ್’ ಮಾಡಿ.
05:25 * ‘ಹೈಡ್ರೊಜೆನ್’ ಗಳನ್ನು ಕೂಡಿಸಿ, ‘ಫೈಲ್’ ಗಳನ್ನು ಮಿನಿಮೈಜ್ ಮತ್ತು ಸೇವ್ ಮಾಡಿ.
05:30 ಮೆನ್ಯೂವಿನ ಮೇಲೆ ನಿರ್ದಿಷ್ಟ ಲಕ್ಷಣವನ್ನು ಉಪಯೋಗಿಸಲು, ಒದಗಿಸಿದ ‘ಚೆಕ್- ಬಾಕ್ಸ್’ ನ ಮೇಲೆ ಕ್ಲಿಕ್ ಮಾಡಿ.
05:35 Modelkit ಕಾರ್ಯವು ನಮಗೆ Methyl group (ಮಿಥೈಲ್ ಗುಂಪಿ)ಗೆ ಬದಲಾಗಿ Hydrogen atom (ಹೈಡ್ರೋಜೆನ್ ಪರಮಾಣುವನ್ನು) ಅನ್ನು ಬಳಸಲು ಅನುಮತಿಸುತ್ತದೆ.
05:41 ನೀವು ಬದಲಿಸಬೇಕೆಂದಿರುವ ಹೈಡ್ರೋಜೆನ್ ಪರಮಾಣುವಿಗೆ (Hydrogen atomಗೆ) ಕರ್ಸರ್ ತನ್ನಿ.
05:46 ಆ Hydrogen atom (ಹೈಡ್ರೊಜೆನ್ ಅಣು) ನ ಮೇಲೆ ಒಂದು ಕೆಂಪು ರಿಂಗ್ ಕಾಣುತ್ತದೆ.
05:50 ಅಣುವಿನ ಮೇಲೆ ಕ್ಲಿಕ್ ಮಾಡಿ.
05:52 Methyl (ಮಿಥೈಲ್) ಗುಂಪು ಜೋಡಿಸಿದ್ದನ್ನು ತಾವು ಗಮನಿಸಬಹುದು.
05:56 Methane molecule (ಮಿಥೇನ್ ಮೊಲೆಕ್ಯುಲ್) ಈಗ Ethane (ಈಥೇನ್) ಆಗಿ ಪರಿವರ್ತನೆ ಆಯಿತು.
06:00 ಅದೇ ಹಂತವನ್ನು ಪುನರಾವರ್ತಿಸಿ.
06:03 Propane ನ ಮಾದರಿಯನ್ನು ಪಡೆಯಲು hydrogen atom (ಹೈಡ್ರೋಜನ್ ಆಟಂ) ಮೇಲೆ ಕ್ಲಿಕ್ ಮಾಡಿ.
06:07 ಈ ಪರಮಾಣುವಿನ ಮೇಲಿನ ಕನಿಷ್ಠ ಎನರ್ಜಿ (Energy minimization) ನಮಗೆ ಹೆಚ್ಚು ಸ್ಠಿರ ಕನ್ಫರ್ಮೇಷನ್ ಅನ್ನು ಕೊಡುತ್ತದೆ.
06:13 Energy minimization (ಎನರ್ಜಿ ಕನಿಷ್ಠ) ಮಾಡಲು:
06:15 Modelkit ಮೆನುವಿನ ಆಯ್ಕೆಗಳನ್ನು ಕೆಳಗೆ ಸ್ಕ್ರೊಲ್ ಮಾಡಿ.
06:19 ‘minimize’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:22 ಈಗ ಅತೀ ಹೆಚ್ಚು ಸ್ಥಿರ ಕನ್ಫರ್ಮೇಷನ್ ಆದ ಪ್ರೋಪೇನ್ ಪರಮಾಣುವಿನ (Propane molecule) ನ ಮಾದರಿ ನಮಲ್ಲಿ ಇದೆ.
06:28 ಇದನ್ನು '.mol' ಫೈಲ್ ಎಂದು ಸೇವ್ ಮಾಡಲು Modelkit menu ವನ್ನು ತೆರೆಯಿರಿ.
06:33 'menu' ವನ್ನು ಕೆಳಗೆ ಸ್ಕ್ರೊಲ್ ಮಾಡಿ ಮತ್ತು 'save file' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:37 ಸ್ಕ್ರೀನ್ ಮೇಲೆ 'Save' ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
06:41 ನಿಮ್ಮ ಫೈಲ್ ನ್ನು ಸೇವ್ ಮಾಡಬೇಕಾದಲ್ಲಿ ಆ ಫೋಲ್ಡರ್ ಮೇಲೆ ಕ್ಲಿಕ್ ಮಾಡಿ.
06:45 ನಾನು ನನ್ನ ಫೈಲನ್ನು ಸೇವ್ ಮಾಡಲು Desktop ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.
06:50 ಆದ್ದರಿಂದ 'Desktop’ ಅನ್ನು ಆಯ್ಕೆ ಮಾಡಿ ಮತ್ತು'Open' ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
06:54 'File Name ' ಗೆ ಹೋಗಿ ಮತ್ತು text box (ಟೆಕ್ಸ್ಟ್ ಬಾಕ್ಸ್) ನಲ್ಲಿ 'Propane' ಎಂದು ಟೈಪ್ ಮಾಡಿ.
06:59 ‘Files of Type' ನ ಮೇಲೆ ಕ್ಲಿಕ್ ಮಾಡಿ ಮತ್ತು ‘MOL’ ಆಪ್ಶನ್ ಅನ್ನು ಆಯ್ಕೆ ಮಾಡಿ.
07:03 ಈಗ ಡೈಲಾಗ್ ಬಾಕ್ಸ್ ನ ಕೆಳ-ಬಲ ಭಾಗದಲ್ಲಿರುವ 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ.
07:08 Propane ನ 3D ಮಾದರಿಯು Desktop ನ ಮೇಲೆ '.mol' ಫೈಲ್ ಎಂದು ಸೇವ್ ಆಗುತ್ತದೆ.
07:14 ಜೆಮೋಲ್ ನಿಂದ ನಿರ್ಗಮಿಸಲು File ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರೊಗ್ರಾಮನಿಂದ ನಿರ್ಗಮಿಸಲು Exit ಆಯ್ಕೆಯನ್ನು ಆರಿಸಿಕೊಳ್ಳಿ.
07:21 ನಾವು ಈಗ ಸಂಕ್ಷೇಪಿಸೋಣ.
07:22 ನಾವು ಈ ಟ್ಯುಟೋರಿಯಲ್ ನಲ್ಲಿ:
07:25 * ಜೆಮೋಲ್ ಅಪ್ಲಿಕೇಷನ್ ವಿಂಡೋನ ಬಗೆಗೆ
07:27 * ಜೆಮೋಲ್ ಪ್ಯಾನೆಲ್ ಅನ್ನು ರಿ-ಸೈಜ್ ಮಾಡುವುದು,
07:29 * Methane, Ethane ಹಾಗೂ Propane ಮುಂತಾದ ಸರಳ ಸಾವಯವ ಪರಮಾಣುಗಳ 3D ಮಾಡೆಲ್ ಗಳ ರಚನೆಗಾಗಿ ಟೂಲ್ ಬಾರ್ ನ Modelkit ಫಂಕ್ಶ್ ನ್ ಅನ್ನು ಬಳಸುವುದು,
07:40 * ಮಿಥೈಲ್ ಗ್ರುಪ್’ನೊಂದಿಗೆ ‘ಹೈಡ್ರೋಜೆನ್’ಅನ್ನು ಪರ್ಯಾಯವಾಗಿ ಸೇರಿಸುವದರ ಮೂಲಕ ಪರಮಾಣುಗಳನ್ನು ರಚಿಸುವುದು,
07:45 * ಸ್ಠಿರ ಕನ್ಫರ್ಮೇಷನ್ ಗಾಗಿ ಎನರ್ಜಿ ಯನ್ನು ಕನಿಷ್ಠಗೊಳಿಸುವುದು.
07:48 * ಮತ್ತು ಇಮೇಜ್ ಅನ್ನು .mol ಫೈಲ್ ಎಂದು ಸೇವ್ ಮಾಡುವುದರ ಬಗೆಗೆ ಕಲಿತೆವು.
07:52 Jmol Modelkit ಫಂಕ್ಶ್ ನ್ ಅನ್ನು ಬಳಸಿ ಈ ಕೆಳಗಿನ ಪರಮಾಣುಗಳ ಮಾದರಿಗಳನ್ನು ಮಾಡಿ.
07:58 * 2-4 Dimethyl Pentane (2-4 ಡೈಮಿಥೈಲ್ ಪೆಂಟೇನ್) ಮತ್ತು 3-Ethyl (3-ಈಥೈಲ್), 5-Methyl Heptane (5-ಮಿಥೈಲ್ ಹೆಪ್ಟೇನ್).
08:03 * ಸ್ಠಿರ ಕನ್ಫರ್ಮೇಷನ್ ಗಾಗಿ ಎನರ್ಜಿ ಯನ್ನು ಕನಿಷ್ಠ ಮಾಡಿ.
08:07 * ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡಿ.
08:11 * ಟೂಲ್ ಬಾರ್ ನಲ್ಲಿಯ ‘rotate molecule’ ನ್ನು ಉಪಯೋಗಿಸಿ ಮಾಡೆಲ್ ಅನ್ನು ತಿರುಗಿಸಿ.
08:15 ನಿಮ್ಮ ಪೂರ್ಣವಾದ ಅಸೈನ್ಮೆಂಟ್ ಈ ಕೆಳಗಿನಂತೆ ಕಾಣಬೇಕು.
08:19 ಈ ಕೆಳಗಿನ ಲಿಂಕ್ ನಿಂದ ವಿಡಿಯೋ ನೋಡಿ.

http://spoken-tutorial.org/What http://spoken-tutorial.org/What_is_a_Spoken_Tutorial

08:22 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
08:26 ನಿಮ್ಮಲ್ಲಿ ಸರಿಯಾದ್ ಬ್ಯಾಂಡ್ವಿಡ್ಥ್ ಇಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿ.
08:30 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟೀಮ್’, ಕಾರ್ಯಶಾಲೆಗಳನ್ನು ನಡೆಸುತ್ತದೆ.
08:36 ‘ಆನ್ ಲೈನ್ ಟೆಸ್ಟ್’ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಕೊಡಲಾಗುತ್ತದೆ.
08:40 ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: contact@spoken-tutorial.org
08:47 ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’ ಎನ್ನುವುದು ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ ಎನ್ನುವುದರ ಭಾಗವಾಗಿದೆ.
08:52 ಇದು National Mission on Education through ICT, MHRD, Government of India ದಿಂದ ಬೆಂಬಲಿಸಲ್ಪಟ್ಟಿದೆ.
08:59 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
09:04 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ರವಿಕಲಾ ಹಾಗೂ ಪ್ರವಾಚಕ…..

ವಂದನೆಗಳು.

Contributors and Content Editors

Pratik kamble, Ravikala, Sandhya.np14