Digital-Divide/C2/First-Aid-on-Fever/Kannada

From Script | Spoken-Tutorial
Revision as of 12:58, 4 April 2016 by Sandhya.np14 (Talk | contribs)

Jump to: navigation, search
Time Narration
00:05 ಹಳ್ಳಿಯ ಹುಡುಗಿ ಮೀನಾ ಶಾಲೆಯಿಂದ ಮರಳಿ ಬಂದಳು. ಅವಳು ಚಳಿಯಿಂದ ನಡುಗುತ್ತಿದ್ದಳು ಮತ್ತು ದಣಿದಂತೆ ಕಾಣುತ್ತಿದ್ದಳು.
00:13 ಮೈ ಕೈ ನೋವು ಹಾಗೂ ತಲೆನೋವಿನ ಬಗ್ಗೆ ಸಹ ಅವಳು ದೂರುತ್ತಿದ್ದಳು.
00:17 ಆತಂಕದಿಂದ ಹತ್ತಿರ ಬಂದ ತಾಯಿಯು ಅವಳಿಗೆ ಜ್ವರ ಬಂದಿರುವುದನ್ನು ಗಮನಿಸಿದಳು.
00:24 First aid in case of fever ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:30 ಇಲ್ಲಿ ನಾವು:
  • ಜ್ವರದ ರೋಗಲಕ್ಷಣಗಳು
  • ಪ್ರಾಥಮಿಕ ಚಿಕಿತ್ಸೆ ಹಾಗೂ
  • ವೈದ್ಯರನ್ನು ಸಂಪರ್ಕಿಸುವುದು, ಇವುಗಳ ಬಗ್ಗೆ ಚರ್ಚೆ ಮಾಡುವೆವು.
00:37 ಯಾವುದೇ ವ್ಯಕ್ತಿಯ ಶರೀರದ ತಾಪಮಾನವು ಸಾಮಾನ್ಯ ತಾಪಮಾನಕ್ಕಿಂತ, ಎಂದರೆ 96.8 ರಿಂದ 100.4º ಫ್ಯಾರನ್ಹೈಟ್ ಗಿಂತ ಹೆಚ್ಚಾದರೆ, ಅವನಿಗೆ/ಅವಳಿಗೆ ಜ್ವರ ಬಂದಿದೆ ಎಂದರ್ಥ.
00:51 ಜ್ವರದ ರೋಗಲಕ್ಷಣಗಳೇನು ಎಂಬುದನ್ನು ನಾವು ನೋಡೋಣ.
00:54 * ಶರೀರದ ತಾಪಮಾನದಲ್ಲಿ ಏರಿಕೆ
00:57 * ಮೈ ಕೈ ನೋವು
01:00 * ಚಳಿ ಮತ್ತು ನಡುಕ
01:02 * ತೀವ್ರವಾದ ತಲೆನೋವು ಮತ್ತು
01:04 * ಗಂಟಲು ಕೆರೆತ/ನೋವು.
01:06 ಮಗುವಿನ ನಡುಕವನ್ನು ನೋಡಿದ ತಾಯಿಯು ಮಗುವನ್ನು ಬೆಚ್ಚಗಿಡಲು ಕಂಬಳಿಯನ್ನು ಹೊದಿಸಿದಳು.
01:14 ಜ್ವರ ಬಂದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ನಾವು ನೋಡೋಣ.
01:19 ರೋಗಿಗೆ ಬೆಚ್ಚಗಿನ ನೀರಿನಲ್ಲಿ ಸ್ಪಾಂಜ್-ಬಾಥ್ ಅನ್ನು ಮಾಡಿಸಿ.
01:24 ಅವನಿಗೆ/ಅವಳಿಗೆ ಕುಡಿಯಲು ಸಾಕಷ್ಟು ನೀರು ಕೊಡಿ.
01:27 ರೋಗಿಗೆ ಕಂಬಳಿ ಅಥವಾ ದಪ್ಪಗಿನ ಬಟ್ಟೆಯನ್ನು ಹೊದಿಸಬೇಡಿ.
01:32 ನಿಮ್ಮಷ್ಟ್ಟಕ್ಕೆ ನೀವೇ ಔಷಧಿಯನ್ನು ಕೊಡಬೇಡಿ.
01:35 ಯಾವಾಗಲೂ ವೈದ್ಯರ ಸಲಹೆಯಂತೆ ಔಷಧಿಯನ್ನು ಕೊಡಿ.
01:40 ಶುದ್ಧವಾದ ಗಾಳಿಯ ಸಂಚಾರವನ್ನು ತಡೆಗಟ್ಟಬೇಡಿ.
01:43 ವಾಸ್ತವದಲ್ಲಿ, ತಾಜಾ ಗಾಳಿಯು ಜ್ವರವನ್ನು ಕಡಿಮೆಮಾಡಲು ಸಹಾಯಮಾಡುತ್ತದೆ.
01:47 ರೋಗಿಯಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರ ಸಹಾಯವನ್ನು ಪಡೆಯಿರಿ:
01:53 * ಅನಿಯಮಿತ ಉಸಿರಾಟ
01:55 * ಕತ್ತುನೋವು
01:57 * ನಿರಂತರವಾದ ಗಂಟಲು ನೋವು/ಕೆರೆತ
01:59 * ದದ್ದುಗಳು
02:02 * ವಾಂತಿಯಾಗುವುದು
02:03 * ನೋವಿನಿಂದ ಕೂಡಿದ ಮೂತ್ರವಿಸರ್ಜನೆ ಮತ್ತು ಅತಿಸಾರ.
02:07 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
02:11 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
02:14 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
02:17 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
02:22 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
02:27 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
02:31 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org
02:37 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
02:42 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
02:49 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

02:59 ಈ ಸ್ಕ್ರಿಪ್ಟ್, ಅಶ್ವಿನಿ ಪಾಟೀಲ್ ಅವರ ಕೊಡುಗೆಯಾಗಿದೆ. ಅನಿಮೇಶನ್ ಆರತಿ ಅವರದು ಹಾಗೂ
03:05 ಚಿತ್ರಗಳು ಸೌರಭ್ ಗಾಡ್ಗಿಲ್ ಅವರದ್ದು.
03:07 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
03:11 ಧನ್ಯವಾದಗಳು.

Contributors and Content Editors

Sandhya.np14