LibreOffice-Suite-Draw/C2/Common-editing-and-print-functions/Kannada
From Script | Spoken-Tutorial
Revision as of 13:55, 18 March 2016 by Vasudeva ahitanal (Talk | contribs)
Time | Narration |
00:01 | LibreOffice Draw ನಲ್ಲಿ Common Editing and Printing Functions ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ, ನೀವು: |
00:10 | * 'Draw' ಪೇಜ್ ನಲ್ಲಿ ಮಾರ್ಜಿನ್ ಗಳನ್ನು ಸೆಟ್ ಮಾಡುವುದನ್ನು |
00:13 | * ಪುಟಸಂಖ್ಯೆ, ದಿನಾಂಕ ಮತ್ತು ಸಮಯಗಳನ್ನು ಸೇರಿಸುವುದನ್ನು |
00:16 | * ಕಾರ್ಯಗಳನ್ನು 'Undo' ಮತ್ತು 'Redo' ಮಾಡುವುದನ್ನು |
00:18 | * 'page' ಅನ್ನು ರೀನೇಮ್ ಮಾಡುವುದನ್ನು ಮತ್ತು |
00:20 | * ಪೇಜ್ ಅನ್ನು ಪ್ರಿಂಟ್ ಮಾಡುವುದನ್ನು ಕಲಿಯಲಿದ್ದೀರಿ. |
00:22 | ಇಲ್ಲಿ ನಾವು:
|
00:33 | 'WaterCycle' ಫೈಲನ್ನು ತೆರೆಯೋಣ ಮತ್ತು 'WaterCycle' ರೇಖಾಚಿತ್ರವನ್ನು ಹೊಂದಿದ ಪೇಜನ್ನು ಆಯ್ಕೆ ಮಾಡೋಣ. |
00:40 | ಈ ಚಿತ್ರಕ್ಕೆ ನಾವು 'Page Margins' ಗಳನ್ನು ಸೆಟ್ ಮಾಡೋಣ. |
00:44 | 'Page Margin'ಗಳು ಏಕೆ ಅವಶ್ಯಕ? |
00:46 | 'Page Margin' ಗಳು ಪೇಜ್ ನಲ್ಲಿ ಆಬ್ಜೆಕ್ಟ್ ಗಳನ್ನು ಇರಿಸಲು ಬೇಕಾದ ಸ್ಥಳವನ್ನು ನಿರ್ಧರಿಸುತ್ತವೆ. |
00:53 | ಉದಾಹರಣೆಗೆ, ನಮಗೆ ಚಿತ್ರವನ್ನು ಪ್ರಿಂಟ್ ಮಾಡಿ ಫೈಲ್ ಮಾಡಬೇಕಾಗಬಹುದು. |
00:57 | ಪೇಜ್ ನ ಬದಿಗಳಲ್ಲಿ ಸಾಕಷ್ಟು ಸ್ಥಳವಿದೆ ಎಂಬುದನ್ನು ಮಾರ್ಜಿನ್ ಗಳು ಖಚಿತಪಡಿಸುತ್ತವೆ. |
01:01 | ಇದರಿಂದ ನಾವು ಇದನ್ನು ಪ್ರಿಂಟ್ ಮಾಡಿದಾಗ, ಚಿತ್ರದ ಒಂದು ಭಾಗ ಕತ್ತರಿಸಿಗೊಳ್ಳುವುದಾಗಲೀ ಮರೆಯಾಗುವುದಾಗಲೀ ಆಗುವುದಿಲ್ಲ. |
01:07 | ನಾವು 'Page Margin' ಗಳನ್ನು ಸೆಟ್ ಮಾಡೋಣ ಮತ್ತು ಅನಂತರ 'WaterCycle' ಚಿತ್ರವನ್ನು ಪ್ರಿಂಟ್ ಮಾಡೋಣ. |
01:11 | ಈ ಚಿತ್ರವನ್ನು ಪ್ರಿಂಟ್ ಮಾಡಲು ನಾವು ಬಳಸುವ ಕಾಗದದ ಗಾತ್ರ ಸ್ಟ್ಯಾಂಡರ್ಡ್ ಗಾತ್ರವಾಗಿಲ್ಲ ಎಂದು ಭಾವಿಸೋಣ. |
01:18 | ಇದು 20 cms ಅಗಲವನ್ನು ಮತ್ತು 20 cms ಉದ್ದವನ್ನು ಹೊಂದಿದೆ. |
01:23 | ಇದಕ್ಕೆ 1.5 cms 'Bottom' ಮಾರ್ಜಿನ್ ನ ಅವಶ್ಯಕತೆಯಿದೆ. |
01:29 | ಈ ಅಳತೆಗಳನ್ನು ಸೆಟ್ ಮಾಡಲು, 'Main' ಮೆನುವಿನಿಂದ, 'Format'ಅನ್ನು ಆಯ್ಕೆ ಮಾಡಿ ಮತ್ತು 'Page'ಅನ್ನು ಕ್ಲಿಕ್ ಮಾಡಿ. |
01:35 | 'Page Setup' ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
01:38 | 'Page' ಎಂಬ ಟ್ಯಾಬ್ ಅನ್ನು ಆಯ್ಕೆ ಮಾಡಿ. |
01:41 | 'Width' ಫೀಲ್ಡ್ ನಲ್ಲಿ ವ್ಯಾಲ್ಯೂ “20”ನ್ನು ಮತ್ತು 'Height' ಫೀಲ್ಡ್ ನಲ್ಲಿ “20”ನ್ನು ಕೊಡಿ. |
01:47 | 'Margins' ನ ಕೆಳಗೆ, 'Bottom' ಎಂಬ ಫೀಲ್ಡ್ ನಲ್ಲಿ '1.5'ನ್ನು ನಮೂದಿಸಿ. |
01:54 | ಬಲಭಾಗಕ್ಕೆ, ನೀವು 'Draw page' ನ 'preview' ಅನ್ನು ನೋಡುವಿರಿ. |
01:58 | ಈ ಪ್ರಿವ್ಯೂ, 'ಡ್ರಾ ಪೇಜ್' ನಲ್ಲಿ ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ. |
02:02 | 'OK'ಯನ್ನು ಕ್ಲಿಕ್ ಮಾಡಿ. |
02;04 | ಚಿತ್ರ ಹೇಗೆ ಕಾಣಿಸುತ್ತಿದೆ? |
02:06 | ಇದು ಪೇಜ್ ನಿಂದ ಹೊರಗೆ ಹರಡಿದೆ! |
02:08 | ಇದರ ಅರ್ಥವೇನೆಂದರೆ ಪ್ರಿಂಟ್ ಮಾಡಿದಾಗ ಚಿತ್ರದ ಒಂದು ಭಾಗ ಕಾಣೆಯಾಗುತ್ತದೆ. |
02:14 | ನೀವು ಈ ಕೆಳಗಿನವುಗಳನ್ನು ದೃಢಪಡಿಸಿಕೊಳ್ಳಬೇಕು: |
02:15 | * ಚಿತ್ರಗಳು ಯಾವಾಗಲೂ ಮಾರ್ಜಿನ್ ನ ಒಳಗೆ ಇರುತ್ತವೆ. |
02:18 | * ನೀವು ಚಿತ್ರ ರಚಿಸಿದಾಗ, ಚಿತ್ರದ ಯಾವುದೇ ಭಾಗ ಮಾರ್ಜಿನ್ ನಿಂದ ಹೊರ ಹೋಗುವುದಿಲ್ಲ. |
02:23 | ಹಾಗಾಗಿ, ನೀವು ಚಿತ್ರವನ್ನು ರಚಿಸುವ ಮೊದಲು ಪೇಜ್ ಮಾರ್ಜಿನ್ ಗಳನ್ನು ಸೆಟ್ ಮಾಡುವುದು ಉತ್ತಮ ಅಭ್ಯಾಸ. |
02:29 | 'Main' ಮೆನುವಿನಿಂದ ಮತ್ತೆ 'Format' ಅನ್ನು ಆಯ್ಕೆ ಮಾಡಿ ಮತ್ತು 'Page' ಅನ್ನು ಕ್ಲಿಕ್ ಮಾಡಿ. |
02:35 | 'Page Setup' ಡೈಲಾಗ್-ಬಾಕ್ಸ್ ಕಾಣಸಿಗುತ್ತದೆ. |
02:38 | 'Page' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
02:40 | 'Format' ಡ್ರಾಪ್-ಡೌನ್ ಪಟ್ಟಿಯನ್ನು ಕ್ಲಿಕ್ ಮಾಡಿ ಮತ್ತು 'A4' ಅನ್ನು ಆಯ್ಕೆ ಮಾಡಿ. |
02:45 | ಇದು ನಾವು ಸೆಟ್ ಮಾಡಿದ್ದ ಮೂಲ ಮಾರ್ಜಿನ್ ಆಗಿದೆ. |
02:48 | 'OK' ಯನ್ನು ಕ್ಲಿಕ್ ಮಾಡಿ. |
02:52 | ಚಿತ್ರವು ಈಗ ಮಾರ್ಜಿನ್ ಗಳ ಒಳಗೆ ಇರಿಸಲ್ಪಟ್ಟಿದೆ. |
02:55 | 'Page setup' ಎಂಬ ಡೈಲಾಗ್-ಬಾಕ್ಸನ್ನು 'Draw page' ನಿಂದ ಕೂಡ ನೀವು ಪ್ರವೇಶಿಸಬಹುದು. |
03:00 | ಇದು, ಪೇಜ್ ನ ಮೇಲೆ ರೈಟ್ ಕ್ಲಿಕ್ ಮಾಡಿ 'ಕಾಂಟೆಕ್ಸ್ಟ್ ಮೆನು' ವನ್ನು ಉಪಯೋಗಿಸುವುದರಿಂದ ಸಾಧ್ಯವಾಗುತ್ತದೆ. |
03:05 | 'Cancel'ಅನ್ನು ಕ್ಲಿಕ್ ಮಾಡೋಣ ಮತ್ತು ಡೈಲಾಗ್-ಬಾಕ್ಸ್ ನಿಂದ ಹೊರಬರೋಣ. |
03:09 | ಈಗ, ನಾವು ಪುಟಸಂಖ್ಯೆ, ದಿನಾಂಕ, ಸಮಯ ಮತ್ತು ಲೇಖಕನ ಹೆಸರುಗಳನ್ನು ಸೇರಿಸೋಣ. |
03:15 | 'WaterCycle' ರೇಖಾಚಿತ್ರವನ್ನು ಹೊಂದಿದ ಪುಟವನ್ನು ಆಯ್ಕೆ ಮಾಡೋಣ ಮತ್ತು ಪುಟಸಂಖ್ಯೆಯನ್ನು ಸೇರಿಸೋಣ. |
03:21 | 'Main' ಮೆನುಗೆ ಹೋಗಿ ಮತ್ತು 'Insert' ಅನ್ನು ಆಯ್ಕೆ ಮಾಡಿ, 'Fields' ಅನ್ನು ಕ್ಲಿಕ್ ಮಾಡಿ. |
03:27 | ಫೀಲ್ಡ್ ಗಳ ಪಟ್ಟಿ (list)ತೆರೆದುಕೊಳ್ಳುತ್ತದೆ. |
03:31 | 'Draw' ದಿಂದ ತಾವೇ ಉತ್ಪತ್ತಿಯಾದ ಮೂಲ್ಯಗಳು (values) ಈ ಫೀಲ್ಡ್ ಗಳಲ್ಲಿರುತ್ತವೆ. |
03:35 | ನಾವು ಕೇವಲ ಒಂದು ಫೀಲ್ಡ್ ಅನ್ನು ಮತ್ತು 'Draw' ದಿಂದ ಉತ್ಪತ್ತಿಯಾದ ಮೂಲ್ಯವನ್ನು ಸೇರಿಸಬೇಕು. |
03:41 | 'Page number' ಅನ್ನು ಕ್ಲಿಕ್ ಮಾಡೋಣ. |
03:43 | 'Draw page' ನ ಮೇಲೆ, ಸಂಖ್ಯೆ '1'ನ್ನು ಹೊಂದಿದ ಒಂದು ಟೆಕ್ಸ್ಟ್-ಬಾಕ್ಸ್ ಸೇರ್ಪಡೆಗೊಂಡಿತು. |
03:48 | ನಾವು ಈ ಟೆಕ್ಸ್ಟ್-ಬಾಕ್ಸ್ ನ ಗಾತ್ರವನ್ನು ಸರಿಪಡಿಸೋಣ ಮತ್ತು ಇದನ್ನು ಸ್ವಲ್ಪ ಸಣ್ಣದಾಗಿಸೋಣ. |
03:55 | ಈಗ, ಬಾಕ್ಸ್ ಅನ್ನು ಎಳೆಯೋಣ ಮತ್ತು ಇದನ್ನು ಪುಟದ ಕೆಳಗಿನ ಬಲ ಮೂಲೆಯಲ್ಲಿ ಇಡೋಣ. |
04:01 | ನಂಬರ್ ಬಾಕ್ಸ್ ಅನ್ನು ಸರಾಗವಾಗಿ ಸರಿಸಲು, ನಂಬರ್ ಬಾಕ್ಸ್ ಅನ್ನು ಆಯ್ಕೆ ಮಾಡಿ ಮತ್ತು 'Shift' ಕೀಯನ್ನು ಒತ್ತಿ. |
04:07 | ಈಗ, ನಾವು ಇದನ್ನು ಇನ್ನೂ ಕೆಳಗೆ ಸರಿಸೋಣ. |
04:11 | ಈ 'Draw' ಫೈಲ್ ನ ಎರಡನೆಯ ಪುಟದಲ್ಲಿ, ಮುಂದಿನ ಸಂಖ್ಯೆಯನ್ನು ಸೇರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸೋಣ. |
04:17 | ಇಲ್ಲಿ ಪುಟಸಂಖ್ಯೆ ಇಲ್ಲ! |
04:20 | ನಾವು ಫೀಲ್ಡ್ ಅನ್ನು ಸೇರಿಸಿದ ಪೇಜ್ ನಲ್ಲಿ ಮಾತ್ರ ಪುಟಸಂಖ್ಯೆ ಸೇರ್ಪಡೆಯಾಗಿದೆ! |
04:26 | ಈಗ, ನಾವು ಪೇಜ್ ನಂಬರ್ ಫಾರ್ಮ್ಯಾಟ್ ಅನ್ನು ಹೇಗೆ ಬದಲಾಯಿಸುವುದು ಎಂಬುದನ್ನು ಕಲಿಯೋಣ. |
04:30 | 'Main' ಮೆನುವಿನಿಂದ, 'Format' ಅನ್ನು ಕ್ಲಿಕ್ ಮಾಡಿ ಮತ್ತು 'Page' ಅನ್ನು ಆಯ್ಕೆ ಮಾಡಿ. |
04:36 | 'Page Setup' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
04:39 | 'Page' ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
04:41 | 'Layout settings' ನ ಕೆಳಗೆ, 'Format'ಅನ್ನು ಆಯ್ಕೆ ಮಾಡಿ. |
04:45 | ಡ್ರಾಪ್-ಡೌನ್ ಲಿಸ್ಟ್ ನಿಂದ, 'a, b, c' ಯನ್ನು ಆಯ್ಕೆ ಮಾಡಿ. |
04:49 | 'OK' ಯನ್ನು ಕ್ಲಿಕ್ ಮಾಡಿ. |
04:52 | ಪುಟ ಸಂಖ್ಯೆಯು 1, 2, 3 ರಿಂದ a, b, c ಆಗಿ ಮಾರ್ಪಟ್ಟಿದೆ. |
04:58 | ಇದೇ ರೀತಿ, ನೀವು ಇದನ್ನು ಯಾವುದೇ ಫಾರ್ಮ್ಯಾಟ್ ಗೆ ಬದಲಾಯಿಸಬಹುದು. |
05:01 | ಈಗ ನಾವು 'Date' ಮತ್ತು 'Time' ಫೀಲ್ಡ್ ಗಳನ್ನು ಸೇರಿಸುವುದನ್ನು ಕಲಿಯೋಣ. |
05:05 | ನಿಮ್ಮ 'Draw' ಪೇಜ್ ನ ಮೇಲೆ 'Date' ಮತ್ತು 'Time' ಸ್ಟಾಂಪ್ ಗಳನ್ನು ಕೂಡ ನೀವು ಸೇರಿಸಬಹುದು. |
05:10 | ಇದನ್ನು ನೀವು 'Insert ' ಮತ್ತು 'Fields' ನ ಮೇಲೆ ಕ್ಲಿಕ್ ಮಾಡುವುದರಿಂದ ಸಾಧಿಸಬಹುದು. |
05:14 | ಮೊದಲನೆಯದು, 'Date(fixed)' ಮತ್ತು 'Time(fixed)'. |
05:18 | ಇನ್ನೊಂದು, 'Date(variable)' ಮತ್ತು 'Time(variable)'. |
05:23 | 'Date(fixed)' ಮತ್ತು 'Time(fixed)' ಆಯ್ಕೆಗಳು ಪ್ರಕೃತ ದಿನಾಂಕ ಮತ್ತು ಸಮಯವನ್ನು ಸೇರಿಸುತ್ತವೆ. |
05:29 | ಈ ದಿನಾಂಕ ಮತ್ತು ಸಮಯದ ಮೂಲ್ಯಗಳು ಅಪ್-ಡೇಟ್ ಆಗಿರುವುದಿಲ್ಲ. |
05:33 | ಮತ್ತೊಂದೆಡೆ 'Date (variable)' ಮತ್ತು 'Time (variable)' ಆಯ್ಕೆಗಳು, |
05:37 | ನೀವು ಫೈಲನ್ನು ತೆರೆದಾಗ ಸ್ವಯಂ ಅಪ್-ಡೇಟ್ ಆಗುತ್ತವೆ. |
05:42 | ನಾವು ಇಲ್ಲಿ 'Time (variable)' ಅನ್ನು ಸೇರಿಸೋಣ. |
05:46 | ಈಗ, ನಾವು ಬಾಕ್ಸನ್ನು ಎಳೆದು ಅದನ್ನು ಕೆಳಗಿನ ಬಲಮೂಲೆಯಲ್ಲಿ ಪುಟಸಂಖ್ಯೆಯ ಮೇಲುಗಡೆ ಇರಿಸೋಣ. |
05:56 | ಪ್ರತಿ ಸಲ ನೀವು 'Draw' ಪೇಜ್ ಅನ್ನು ತೆರೆದಾಗ, ಸೇರಿಸಿದ ಸಮಯವು, ಪ್ರಸ್ತುತ ಸಮಯವಾಗಿ ಅಪ್-ಡೇಟ್ ಆಗುತ್ತದೆ. |
06:03 | ಈಗ ನಾವು ಈ ಫೈಲನ್ನು ರಚಿಸಿದ ಲೇಖಕನ ಹೆಸರನ್ನು ನಮೂದಿಸೋಣ. |
06:08 | ಇಲ್ಲಿ, ನಾವು ಮೊದಲನೆಯ ಪೇಜ್ ನಲ್ಲಿ ಲೇಖಕನ ಹೆಸರನ್ನು “Teacher. A. B.” ಎಂದು ಸೆಟ್ ಮಾಡೋಣ. |
06:17 | ಅದಕ್ಕಾಗಿ, ನಾವು 'Page one' ಗೆ ಹೋಗೋಣ. |
06:19 | 'Main' ಮೆನುಗೆ ಹೋಗಿ, 'Tools' ಅನ್ನು ಆರಿಸಿ ಮತ್ತು 'Options' ಮೇಲೆ ಕ್ಲಿಕ್ ಮಾಡಿ. |
06:24 | 'Options' ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
06:27 | 'Options' ಡೈಲಾಗ್-ಬಾಕ್ಸ್ ನಲ್ಲಿ, 'LibreOffice'ನ ಮೇಲೆ ಕ್ಲಿಕ್ ಮಾಡಿ ಮತ್ತು 'User Data'ದ ಮೇಲೆ ಕ್ಲಿಕ್ ಮಾಡಿ. |
06:34 | ಡೈಲಾಗ್-ಬಾಕ್ಸ್ ನ ಬಲ ಬದಿಗೆ, ನೀವು ಯೂಸರ್ ಡೇಟಾದ ಮಾಹಿತಿಯನ್ನು ಬರೆಯಬಹುದು. |
06:40 | ಇಲ್ಲಿ ನೀವು ನಿಮ್ಮ ಅವಶ್ಯಕತೆಗನುಸಾರವಾಗಿ ವಿವರಗಳನ್ನು ಬರೆಯಬಹುದು. |
06:44 | "First/Last Name/Initials" ನಲ್ಲಿ, ಅನುಕ್ರಮವಾಗಿ "Teacher", 'A', ಮತ್ತು 'B' ಎಂಬ ಪಠ್ಯವನ್ನು ಎಂಟರ್ ಮಾಡಿ. |
06:53 | 'OK'ಯನ್ನು ಕ್ಲಿಕ್ ಮಾಡಿ. |
06:55 | ಈಗ, 'Main ' ಮೆನುವಿನಲ್ಲಿ, 'Insert'ಅನ್ನು ಕ್ಲಿಕ್ ಮಾಡಿ. 'Fields' ಅನ್ನು ಆರಿಸಿ ಮತ್ತು 'Author' ಅನ್ನು ಕ್ಲಿಕ್ ಮಾಡಿ. |
07:02 | 'Teacher A B ' ಎಂಬ ಹೆಸರು ಒಂದು ಟೆಕ್ಸ್ಟ್-ಬಾಕ್ಸ್ ನಲ್ಲಿ ಸೇರ್ಪಡೆಯಾಯಿತು. |
07:07 | ನಾವು ಈ ಬಾಕ್ಸನ್ನು ಎಳೆದು 'Draw' ಪೇಜ್ ನ ಕೆಳಗಿನ ಬಲ ಮೂಲೆಯಲ್ಲಿ, 'Time' ಫೀಲ್ಡ್ ನ ಸ್ವಲ್ಪ ಮೇಲೆ ಇರಿಸೋಣ. |
07:15 | ಈಗ, ನಾವು 'Draw' ಪೇಜ್ ನಲ್ಲಿ ಸೇರಿಸಿದ ಫೀಲ್ಡ್ ಗಳನ್ನು ತೆಗೆಯಲಿಚ್ಛಿಸಿದರೆ, |
07:21 | ಕೇವಲ ಟೆಕ್ಸ್ಟ್-ಬಾಕ್ಸನ್ನು ಆಯ್ಕೆ ಮಾಡಿ ಮತ್ತು 'Delete' ಕೀಯನ್ನು ಒತ್ತಿ. |
07:25 | 'Author Name' ಫೀಲ್ಡನ್ನು ನಾವು ಡಿಲೀಟ್ ಮಾಡೋಣ |
07:28 | ಮತ್ತು ಈ ಕಾರ್ಯವನ್ನು 'undo' ಮಾಡುವುದು ಹೇಗೆ? |
07:31 | ಇದು ಸುಲಭ!.. ನೀವು 'Ctrl' ಮತ್ತು 'Z' ಕೀಗಳನ್ನು ಒಂದೇ ಸಲ ಒತ್ತಿ, ಯಾವುದೇ ಕಾರ್ಯವನ್ನು 'undo' ಮಾಡಬಹುದು. |
07:38 | ಕೊನೆಯ ಬಾರಿ ಮಾಡಿದ ಕಾರ್ಯ, ಎಂದರೆ, 'Author' ಫೀಲ್ಡ್ ಅನ್ನು ಡಿಲೀಟ್ ಮಾಡುವುದು 'undo' ಆಗಿದೆ. |
07:45 | ಫೀಲ್ಡ್ ಮತ್ತೆ ಕಾಣಿಸುತ್ತಿದೆ. |
07:48 | ನಾವು 'Main' ಮೆನುವಿನಿಂದ ಕೂಡ 'undo' ಅಥವಾ 'redo' ಮಾಡಬಹುದು. |
07:53 | 'Main' ಮೆನುವಿನಿಂದ, 'Edit' ಅನ್ನು ಆಯ್ಕೆ ಮಾಡಿ ಮತ್ತು 'Redo'ಅನ್ನು ಕ್ಲಿಕ್ ಮಾಡಿ. |
07:57 | ಲೇಖಕರ ಹೆಸರು ಈಗ ಕಾಣಿಸುತ್ತಿಲ್ಲ! |
08:00 | 'Ctrl+Z' ಕೀಗಳನ್ನು ಒತ್ತಿ, ನಾವು ಮಾಡಿದ ಎಲ್ಲಾ ಫೀಲ್ಡ್ ಗಳ ಸೇರ್ಪಡೆಯನ್ನೂ 'undo' ಮಾಡೋಣ. |
08:06 | 'undo' ಮತ್ತು 'redo' ಆಜ್ಞೆಗಳಿಗೆ ನೀವು ಕೀ ಬೋರ್ಡ್ನಿಂದ ಶಾರ್ಟ್-ಕಟ್ ಕೀಗಳನ್ನು ಕೂಡ ಉಪಯೋಗಿಸಬಹುದು. |
08:13 | ಯಾವುದೇ ಕಾರ್ಯವನ್ನು 'undo' ಮಾಡಲು, 'Ctrl' ಮತ್ತು 'Z' ಕೀಗಳನ್ನು ಜೊತೆಯಾಗಿ ಒತ್ತಿ. |
08:18 | ಯಾವುದೇ ಕಾರ್ಯವನ್ನು 'redo' ಮಾಡಲು 'Ctrl' ಮತ್ತು 'Y ' ಕೀಗಳನ್ನು ಜೊತೆಯಾಗಿ ಒತ್ತಿ. |
08:23 | ಈ ಟ್ಯುಟೋರಿಯಲ್ ಅನ್ನು ಒಮ್ಮೆ ನಿಲ್ಲಿಸಿ ಮತ್ತು ಈ ಅಸೈನ್ಮೆಂಟನ್ನು ಮಾಡಿ. |
08:26 | ಲೇಖಕರ ಹೆಸರನ್ನು ಬದಲಾಯಿಸಿ ಮತ್ತು ಅದನ್ನು ಸೇವ್ ಮಾಡಿ. |
08:29 | ಈಗ, 'page'ಗೆ ಇನ್ನೂ ಎರಡು 'ಆರೋ'ಗಳನ್ನು ಸೇರಿಸಿ. |
08:33 | ಎರಡನೇ ಪುಟದಲ್ಲಿ ಪುಟಸಂಖ್ಯೆ ಮತ್ತು ದಿನಾಂಕವನ್ನು ಸೇರಿಸಿ. |
08:38 | ಈಗ, ಕೊನೆಯ ಐದು ಕಾರ್ಯಗಳನ್ನು 'undo' ಮತ್ತು 'redo' ಮಾಡಿ. |
08:42 | 'undo' ಮತ್ತು 'redo' ಆಯ್ಕೆಗಳು ಎಲ್ಲಾ ಕಾರ್ಯಗಳನ್ನು 'undo' ಮಾಡಬಲ್ಲವೇ ಅಥವಾ ಕೆಲವು ಕಾರ್ಯಗಳನ್ನು 'undo' ಮಾಡಲಾಗದೇ ಎಂದು ಪರಿಶೀಲಿಸಿ. |
08:51 | ಈ ಪುಟವನ್ನು “WaterCycleSlide” ಎಂದು ಹೆಸರಿಸೋಣ. |
08:54 | 'Pages' ಪೇನ್ ನಲ್ಲಿಯ ಸ್ಲೈಡ್ ಅನ್ನು ಆಯ್ಕೆ ಮಾಡಿ, ರೈಟ್-ಕ್ಲಿಕ್ ಮಾಡಿ ಮತ್ತು 'Rename Page' ಅನ್ನು ಆಯ್ಕೆ ಮಾಡಿ. |
09:00 | 'Rename Page' ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
09:03 | 'Name' ಫೀಲ್ಡ್ ನಲ್ಲಿ, ನಾವು "WaterCycleSlide" ಎಂಬ ಹೆಸರನ್ನು ಎಂಟರ್ ಮಾಡೋಣ. |
09:08 | 'OK'ಯನ್ನು ಕ್ಲಿಕ್ ಮಾಡಿ. |
09:10 | ಈಗ, ನಾವು ಈ ಪೇಜ್ ನ ಮೇಲೆ ಕರ್ಸರ್ ಅನ್ನು ಇರಿಸೋಣ. |
09:14 | “WaterCycleSlide” ಎಂಬ ಹೆಸರು ಇಲ್ಲಿ ಪ್ರದರ್ಶಿತವಾಗಿರುವುದನ್ನು ನೀವು ಕಾಣಬಲ್ಲಿರಾ? |
09:18 | ಪುಟಕ್ಕೆ ಅನುಗುಣವಾದ ಹೆಸರನ್ನು ಕೊಡುವುದು ಒಳ್ಳೆಯ ಅಭ್ಯಾಸ. |
09:23 | 'WaterCycle' ರೇಖಾಚಿತ್ರಕ್ಕೆ ಈಗ ನಾವು ಪ್ರಿಂಟಿಂಗ್ ಆಯ್ಕೆಗಳನ್ನು ಸೆಟ್ ಮಾಡೋಣ. |
09:28 | 'Main ' ಮೆನುವಿನಲ್ಲಿ, 'File 'ಅನ್ನು ಕ್ಲಿಕ್ ಮಾಡಿ ನಂತರ 'Print' ಅನ್ನು ಕ್ಲಿಕ್ ಮಾಡಿ. |
09:33 | 'Print' ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
09:36 | 'General' ಮತ್ತು 'Options' ಟ್ಯಾಬ್ ಗಳಲ್ಲಿನ ಸೆಟ್ಟಿಂಗ್ ಗಳನ್ನು (ಸಂಯೋಜನೆಗಳನ್ನು) ತಿಳಿದುಕೊಳ್ಳಲು, |
09:41 | LibreOffice Writer ಸರಣಿಯಲ್ಲಿಯ Viewing and printing Documents ಎಂಬ ಟ್ಯುಟೋರಿಯಲ್ ಅನ್ನು ದಯವಿಟ್ಟು ನೋಡಿ. |
09:48 | ಎಡಭಾಗದಲ್ಲಿ, ನೀವು 'ಪೇಜ್ ಪ್ರಿವ್ಯೂ' ಏರಿಯಾವನ್ನು ಕಾಣುವಿರಿ. |
09:53 | 'Print' ಎಂಬ ಡೈಲಾಗ್-ಬಾಕ್ಸ್ ನ ಬಲ ಭಾಗವು ಈ ನಾಲ್ಕು ಟ್ಯಾಬ್ ಗಳನ್ನು ಹೊಂದಿದೆ- |
09:58 | 'General, LibreOffice Draw, Page Layout, Options'. |
10:04 | ನಾವು 'LibreOffice Draw'ಗೆ ನಿರ್ದಿಷ್ಟವಾದ ಆಯ್ಕೆಗಳನ್ನು ನೋಡೋಣ. |
10:09 | 'LibreOffice Draw' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
10:13 | ನಾವು 'Page name' ಮತ್ತು 'Date and Time' ಬಾಕ್ಸ್ ಗಳನ್ನು ‘ಚೆಕ್’ ಮಾಡೋಣ. |
10:17 | ಇದು, ಚಿತ್ರದೊಂದಿಗೆ ಪುಟದ ಹೆಸರು, ದಿನಾಂಕ ಮತ್ತು ಸಮಯವನ್ನು ಪ್ರಿಂಟ್ ಮಾಡುತ್ತದೆ. |
10:23 | ನಾವು ಚಿತ್ರವನ್ನು ಪ್ರಿಂಟ್ ಮಾಡಲು, 'Original colors' ಮತ್ತು 'Fit to printable page' ಇವುಗಳನ್ನು ಆಯ್ಕೆ ಮಾಡೋಣ. |
10:29 | ನಿಮ್ಮ ಕಂಪ್ಯೂಟರ್ ನಲ್ಲಿಯ 'WaterCycle' ಚಿತ್ರವನ್ನು ಪ್ರಿಂಟ್ ಮಾಡಲು, 'Print'ನ ಮೇಲೆ ಕ್ಲಿಕ್ ಮಾಡಿ. |
10:34 | ನೀವು ನಿಮ್ಮ ಪ್ರಿಂಟರ್ ಅನ್ನು ಸರಿಯಾಗಿ ಕಾನ್ಫಿಗರ್ ಮಾಡಿದ್ದರೆ, ನಿಮ್ಮ ಚಿತ್ರವು ಈಗಾಗಲೇ ಪ್ರಿಂಟ್ ಆಗಲು ಶುರುವಾಗಿರಬೇಕು. |
10:40 | ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
10:45 | ಈ ಟ್ಯುಟೋರಿಯಲ್ ನಲ್ಲಿ, ನೀವು: |
10:48 | * 'Draw' ಪೇಜ್ ಗೆ ಮಾರ್ಜಿನ್ ಗಳನ್ನು ಸೆಟ್ ಮಾಡುವುದನ್ನು |
10:50 | * ಮತ್ತು ಪುಟ ಸಂಖ್ಯೆ, ದಿನಾಂಕ ಮತ್ತು ಸಮಯಗಳನ್ನು ಹೇಗೆ ಸೇರಿಸುವುದು ಎಂಬುದನ್ನು |
10:54 | * ಕಾರ್ಯಗಳನ್ನು 'Undo' ಮತ್ತು 'Redo' ಮಾಡುವುದನ್ನು |
10:57 | * ಪುಟದ ಹೆಸರನ್ನು ಮಾರ್ಪಡಿಸುವುದನ್ನು ಮತ್ತು |
10:58 | * ಒಂದು 'page' ಅನ್ನು ಪ್ರಿಂಟ್ ಮಾಡುವುದನ್ನು ಕಲಿತಿದ್ದೀರಿ. |
11:01 | ಇಲ್ಲಿ ನಿಮಗೊಂದು ಅಸೈನ್ಮೆಂಟ್ ಇದೆ. |
11:03 | ಇನ್ನೂ ಎರಡು ಪುಟಗಳನ್ನು ಸೇರಿಸಿ. |
11:06 | ಹಿಂದಿನ ಟ್ಯುಟೋರಿಯಲ್ ನಲ್ಲಿ ನೀವು ರಚಿಸಿದ ಲೇಬಲ್ ಮತ್ತು ಆಮಂತ್ರಣದ ಪ್ರತಿಯೊಂದು ಪುಟಕ್ಕೆ ಬೇರೆ ಬೇರೆ ಮಾರ್ಜಿನ್ ಗಳನ್ನು ಸೆಟ್ ಮಾಡಿ ಮತ್ತು ಪ್ರಿಂಟ್ ಮಾಡಿ. |
11:14 | ಈ ಪ್ರತಿಯೊಂದು ಪುಟಗಳಲ್ಲೂ 'Page count' ಎಂಬ ಫೀಲ್ಡ್ ಅನ್ನು ಸೇರಿಸಿ ಮತ್ತು ಏನಾಗುತ್ತದೆ ಎಂಬುದನ್ನು ಗಮನಿಸಿ. |
11:21 | ಈ URL ನಲ್ಲಿ ಸಿಗುವ ವಿಡಿಯೋ ಅನ್ನು ನೋಡಿ. |
11:24 | ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
11:28 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
11:32 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್: |
11:34 | * ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
11:37 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
11:41 | ಹೆಚ್ಚಿನ ವಿವರಗಳಿಗಾಗಿ, contact@spoken-tutorial.org ಗೆ ಬರೆಯಿರಿ. |
11:47 | 'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್, 'ಟಾಕ್ ಟು ಎ ಟೀಚರ್' ಎಂಬ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
11:52 | ಇದು ಭಾರತ ಸರ್ಕಾರದ MHRD ಯ ICT ಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್ ನಿಂದ ಸಮರ್ಥಿತವಾಗಿದೆ. |
11:59 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ: http://spoken-tutorial.org/NMEICT-Intro. |
12:10 | ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೊ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಧನ್ಯವಾದಗಳು. |