PERL/C2/Comments-in-Perl/Kannada
From Script | Spoken-Tutorial
Revision as of 16:03, 11 March 2016 by Sandhya.np14 (Talk | contribs)
Time | Narration |
---|---|
00:00 | Comments in Perl (ಕಾಮೆಂಟ್ಸ್ ಇನ್ ಪರ್ಲ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ, ನಾವು |
00:08 | Perl ನಲ್ಲಿಯ ‘ಕಾಮೆಂಟ್’ಗಳ ಬಗ್ಗೆ ಕಲಿಯುವೆವು. |
00:10 | ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ |
00:18 | Perl 5.14.2 ಅರ್ಥಾತ್ Perl ರಿವಿಜನ್ 5, ಆವೃತ್ತಿ 14 ಮತ್ತು ಉಪ-ಆವೃತ್ತಿ 2 ಇವುಗಳನ್ನು ಬಳಸುತ್ತಿದ್ದೇನೆ. |
00:23 | ನಾನು gedit Text Editorಅನ್ನು ಸಹ ಬಳಸುತ್ತಿರುವೆನು. |
00:27 | ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು. |
00:31 | ನಿಮಗೆ ಪರ್ಲ್ ನಲ್ಲಿ ಕಂಪೈಲ್ ಹಾಗೂ ಎಕ್ಸಿಕ್ಯೂಟ್ ಮಾಡುವ ಬಗೆ ಮತ್ತು ವೇರಿಯೆಬಲ್ ಗಳ ಬಗ್ಗೆ ತಿಳಿದಿರಬೇಕು. |
00:37 | ಇಲ್ಲದಿದ್ದರೆ, ದಯವಿಟ್ಟು spoken tutorial ವೆಬ್ಸೈಟ್ ಮೇಲಿನ, ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ನೋಡಿ. |
00:43 | ಪರ್ಲ್ ನಲ್ಲಿ, ಕೋಡ್ ನ ಒಂದು ಭಾಗವನ್ನು ಎರಡು ವಿಧದಲ್ಲಿ ಕಾಮೆಂಟ್ ಮಾಡಬಹುದು. |
00:47 | * ಸಿಂಗಲ್-ಲೈನ್ |
00:48 | * ಮಲ್ಟಿ-ಲೈನ್ |
00:49 | ಬಳಕೆದಾರನಿಗೆ (user) ಕೋಡ್ ನ ಒಂದೇ ಸಾಲನ್ನು (line) ಕಾಮೆಂಟ್ ಮಾಡಬೇಕಾದಾಗ ಅಥವಾ |
00:55 | ಕೋಡ್ ನ ಒಂದು ಭಾಗದ ಕಾರ್ಯವನ್ನು ವಿವರಿಸಲು, ಒಂದು ಸಾಲಿನ ಟೆಕ್ಸ್ಟ್ ಅನ್ನು ಸೇರಿಸುವಾಗ ಈ ವಿಧದ ಕಾಮೆಂಟ್ ಅನ್ನು ಬಳಸಲಾಗುವುದು. |
01:01 | ಈ ವಿಧದ ಕಾಮೆಂಟ್, ಹ್ಯಾಶ್ (#) ಚಿಹ್ನೆಯೊಂದಿಗೆ ಆರಂಭವಾಗುತ್ತದೆ. |
01:05 | ಇಲ್ಲಿ, ಇದನ್ನು ಮಾಡಿತೋರಿಸಲಾಗಿದೆ. ‘ಟೆಕ್ಸ್ಟ್ ಎಡಿಟರ್’ನಲ್ಲಿ ನಾವು ಒಂದು ಹೊಸ ಫೈಲನ್ನು ತೆರೆಯೋಣ (open). |
01:11 | Terminal (ಟರ್ಮಿನಲ್) ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ: gedit comments.pl & (ಜಿ-ಎಡಿಟ್ ಕಾಮೆಂಟ್ಸ್ ಡಾಟ್ ಪಿ-ಎಲ್ ಸ್ಪೇಸ್ ಆಂಪರ್ಸಂಡ್). |
01:19 | ಆಂಪರ್ಸಂಡ್(&), ‘ಟರ್ಮಿನಲ್’ನಲ್ಲಿ ‘ಕಮಾಂಡ್ ಪ್ರಾಂಪ್ಟ್’ಅನ್ನು ಮುಕ್ತಗೊಳಿಸುತ್ತದೆ ಎನ್ನುವುದನ್ನು ನಿಮಗೆ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ಈಗ Enter ಅನ್ನು ಒತ್ತಿ. |
01:27 | ಈಗ, ಈ ಕೆಳಗಿನ ಕಮಾಂಡ್ ಗಳನ್ನು ಟೈಪ್ ಮಾಡಿ. |
01:29 | # Declaring count variable (ಹ್ಯಾಶ್ ಡಿಕ್ಲೇರಿಂಗ್ ಕೌಂಟ್ ವೇರಿಯೆಬಲ್). Enter ಅನ್ನು ಒತ್ತಿ. |
01:37 | ಡಾಲರ್ count ಸ್ಪೇಸ್ ಇಕ್ವಲ್ ಟು ಸ್ಪೇಸ್ 1 ಸೆಮಿಕೋಲನ್, Enter ಅನ್ನು ಒತ್ತಿ. |
01:45 | print ಸ್ಪೇಸ್ ಡಬಲ್ ಕೋಟ್ಸ್ Count is ಡಾಲರ್ ($) count ಬ್ಯಾಕ್-ಸ್ಲ್ಯಾಶ್ n ಡಬಲ್ ಕೋಟ್ಸ್ ಕಂಪ್ಲೀಟ್ ಸೆಮಿಕೋಲನ್ ಸ್ಪೇಸ್ ಹ್ಯಾಶ್(#) Prints Count is 1 |
02:03 | ಈಗ ‘Ctrl, S’ ಒತ್ತಿ ಈ ಫೈಲನ್ನು ಸೇವ್ ಮಾಡಿ ಮತ್ತು ಪರ್ಲ್ ಸ್ಕ್ರಿಪ್ಟನ್ನು ಎಕ್ಸಿಕ್ಯೂಟ್ ಮಾಡಿ. |
02:08 | ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: perl ಹೈಫನ್ c comments ಡಾಟ್ pl ಮತ್ತು Enter ಅನ್ನು ಒತ್ತಿ. |
02:18 | ಇಲ್ಲಿ ‘ಸಿಂಟ್ಯಾಕ್ಸ್ ಎರರ್’ ಇಲ್ಲವೆಂದು ಇದು ನಮಗೆ ಹೇಳುತ್ತದೆ. |
02:21 | ಈಗ ಹೀಗೆ ಟೈಪ್ ಮಾಡಿ: perl comments ಡಾಟ್ pl ಮತ್ತು Enter ಅನ್ನು ಒತ್ತಿ. |
02:28 | ಇದು ಈ ಕೆಳಗಿನ ಔಟ್ಪುಟ್ ಅನ್ನು ತೋರಿಸುವುದು : “Count is 1” |
02:33 | ನಾವು gedit ಗೆ ಹಿಂತಿರುಗೋಣ. |
02:36 | gedit ನಲ್ಲಿ, ಮೊದಲನೆಯ ಸಾಲಿಗೆ ಹೋಗಿ ಮತ್ತು Enter ಅನ್ನು ಒತ್ತಿ. |
02:40 | ಮೊದಲನೆಯ ಸಾಲಿಗೆ ಮರಳಿಹೋಗಿ ಮತ್ತು ಈ ಕೆಳಗಿನ ಕಮಾಂಡನ್ನು ಟೈಪ್ ಮಾಡಿ: |
02:44 | ಹ್ಯಾಶ್ ಎಕ್ಸ್ಕ್ಲಮೇಶನ್ ಮಾರ್ಕ್ (exclamation mark) ಸ್ಲ್ಯಾಶ್ usr ಸ್ಲ್ಯಾಶ್ bin ಸ್ಲ್ಯಾಶ್ perl |
02:52 | ಪರ್ಲ್ ನಲ್ಲಿ, ಈ ಸಾಲನ್ನು ‘ಶೆಬಾಂಗ್ ಲೈನ್’ ಎಂದು ಕರೆಯುತ್ತಾರೆ ಮತ್ತು ಇದು Perl ಪ್ರೊಗ್ರಾಂನಲ್ಲಿ ಮೊದಲನೆಯ ಸಾಲು ಆಗಿದೆ. |
02:59 | ‘ಪರ್ಲ್ ಇಂಟರ್ಪ್ರಿಟರ್’ಅನ್ನು ಎಲ್ಲಿ ಹುಡುಕಬೇಕೆಂದು ಇದು ಹೇಳುತ್ತದೆ. |
03:03 | ಗಮನಿಸಿ: ಈ ಸಾಲು ಹ್ಯಾಶ್ ಚಿಹ್ನೆಯೊಂದಿಗೆ ಆರಂಭವಾಗುತ್ತಿದ್ದರೂ ಪರ್ಲ್, ಇದನ್ನು ‘ಸಿಂಗಲ್ ಲೈನ್ ಕಾಮೆಂಟ್’ ಎಂದು ಪರಿಗಣಿಸುವುದಿಲ್ಲ. |
03:11 | ಈಗ ನಾವು ‘ಮಲ್ಟಿ ಲೈನ್ ಕಾಮೆಂಟ್’ಗಳತ್ತ ನೋಡೋಣ. |
03:13 | ‘ಮಲ್ಟಿ ಲೈನ್’: |
03:17 | ಬಳಕೆದಾರನು (user) ಕೋಡ್ ನ ಒಂದು ಭಾಗವನ್ನು ಕಾಮೆಂಟ್ ಮಾಡಲು ಅಥವಾ ಅದರ ವಿವರಣೆ/ಬಳಕೆಯನ್ನು ಸೇರಿಸಲು ಬಯಸಿದಾಗ ಈ ವಿಧದ ಕಾಮೆಂಟ್ಅನ್ನು ಬಳಸಲಾಗುತ್ತದೆ. |
03:25 | ಈ ವಿಧದ ಕಾಮೆಂಟ್, ‘ಇಕ್ವಲ್ ಟು (=) head’ ಚಿಹ್ನೆಯೊಂದಿಗೆ ಆರಂಭವಾಗುತ್ತದೆ ಮತ್ತು ‘ಇಕ್ವಲ್ ಟು cut’ ಚಿಹ್ನೆಯೊಂದಿಗೆ ಕೊನೆಗೊಳುತ್ತದೆ. |
03:33 | ನಾವು 'gedit'ಗೆ ಹಿಂದಿರುಗಿ, 'comments ಡಾಟ್ pl' ಎನ್ನುವ ಫೈಲ್ನಲ್ಲಿ ಕೆಳಗೆ ಹೇಳಿರುವುದನ್ನು ಟೈಪ್ ಮಾಡೋಣ. |
03:39 | ಫೈಲ್ ನ ಕೊನೆಯಲ್ಲಿ ಹೀಗೆ ಟೈಪ್ ಮಾಡಿ: ‘= head’ (ಇಕ್ವಲ್ ಟು ಹೆಡ್), Enter ಅನ್ನು ಒತ್ತಿ. |
03:45 | print ಸ್ಪೇಸ್ ಡಬಲ್ ಕೋಟ್ಸ್ count variable is used for counting purpose ಡಬಲ್ ಕೋಟ್ಸ್ ಕಂಪ್ಲೀಟ್, Enter ಅನ್ನು ಒತ್ತಿ. |
03:59 | =cut (ಇಕ್ವಲ್ ಟು ಕಟ್) |
04:01 | ಫೈಲನ್ನು ಸೇವ್ ಮಾಡಿ ಅದನ್ನು ಮುಚ್ಚಿ (close) ಮತ್ತು ಪರ್ಲ್ ಸ್ಕ್ರಿಪ್ಟನ್ನು ಎಕ್ಸಿಕ್ಯೂಟ್ ಮಾಡಿ. |
04:05 | ‘ಟರ್ಮಿನಲ್’ ನ ಮೇಲೆ ಹೀಗೆ ಟೈಪ್ ಮಾಡಿ: perl ಹೈಫನ್ c comments ಡಾಟ್ pl ಮತ್ತು Enter ಅನ್ನು ಒತ್ತಿ. |
04:13 | ಇಲ್ಲಿ ‘ಸಿಂಟ್ಯಾಕ್ಸ್ ಎರರ್’ ಇಲ್ಲ. |
04:15 | ಆದ್ದರಿಂದ ಇದನ್ನು ನಾವು ಎಕ್ಸಿಕ್ಯೂಟ್ ಮಾಡೋಣ, perl comments ಡಾಟ್ pl |
04:21 | ಇದು ಮೊದಲು ತೋರಿಸಿದ್ದ ‘ಔಟ್ಪುಟ್’ ಅನ್ನು ಮತ್ತೆ ತೋರಿಸುವುದು. “Count is 1” |
04:27 | ಇದು, “count variable is used for counting purpose” ಎನ್ನುವ ವಾಕ್ಯವನ್ನು ಪ್ರಿಂಟ್ ಮಾಡುತ್ತಿಲ್ಲ. |
04:32 | ಏಕೆಂದರೆ, ‘ಇಕ್ವಲ್ ಟು ಹೆಡ್’ ಮತ್ತು ‘ಇಕ್ವಲ್ ಟು ಕಟ್’ ಗಳನ್ನು ಬಳಸಿ ನಾವು ಈ ಭಾಗವನ್ನು ಕಾಮೆಂಟ್ ಮಾಡಿದ್ದೇವೆ. |
04:40 | ನೀವು '=head, =cut' ಅನ್ನು ಅಥವಾ '=begin, =end'ಅನ್ನು ಬಳಸಬಹುದು. |
04:48 | ಇವುಗಳು, ಪರ್ಲ್, ಬಳಸುವ ವಿಶೇಷ ಕೀವರ್ಡ್ಸ್ ಗಳಲ್ಲ . |
04:52 | ದಯವಿಟ್ಟು ಗಮನಿಸಿ: ‘=’ ಚಿಹ್ನೆಯ ಹಿಂದೆ ಮತ್ತು ಮುಂದೆ ಹಾಗೂ 'head', 'cut', 'begin' ಅಥವಾ 'end' ಶಬ್ದಗಳ ನಂತರ ಸ್ಪೇಸ್ ಇರಬಾರದು. |
05:02 | ಮತ್ತೊಮ್ಮೆ ‘ಟರ್ಮಿನಲ್’ಅನ್ನು ಓಪನ್ ಮಾಡಿ. |
05:05 | ಮತ್ತು ಹೀಗೆ ಟೈಪ್ ಮಾಡಿ: gedit commentsExample ಡಾಟ್ pl ಸ್ಪೇಸ್ ಆಂಪರ್ಸಂಡ್ (&) ಮತ್ತು Enter ಅನ್ನು ಒತ್ತಿ. |
05:15 | ಸ್ಕ್ರೀನ್ ನ ಮೇಲೆ ತೋರಿಸಿದ ಹಾಗೆ ಈ ಕೆಳಗಿನ ಕಮಾಂಡ್ ಗಳನ್ನು ಟೈಪ್ ಮಾಡಿ. |
05:19 | ಇಲ್ಲಿ ನಾನು, firstNum ಹಾಗೂ secondNum ಎಂಬ ಎರಡು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡಿ, ಅವುಗಳಿಗೆ ಕೆಲವು ವ್ಯಾಲ್ಯೂಗಳನ್ನು ನಿಗದಿಪಡಿಸುತ್ತಿದ್ದೇನೆ (assign). |
05:28 | ನಂತರ, ಈ ಭಾಗವನ್ನು ಇಲ್ಲಿ ಕಾಮೆಂಟ್ ಮಾಡಿದ್ದೇನೆ. |
05:32 | ಈಗ ನಾನು ಈ ಎರಡು ನಂಬರ್ ಗಳನ್ನು ಕೂಡಿಸಿ ಅದರ ಮೊತ್ತವನ್ನು addition ಎಂಬ ಮೂರನೆಯ ವೇರಿಯೆಬಲ್ ಗೆ ಅಸೈನ್ ಮಾಡಿದ್ದೇನೆ. |
05:39 | ಆಮೇಲೆ, print ಕಮಾಂಡ್ ಅನ್ನು ಬಳಸಿ ನನಗೆ ವ್ಯಾಲ್ಯೂವನ್ನು ಪ್ರಿಂಟ್ ಮಾಡಬೇಕಾಗಿದೆ. |
05:44 | ಫೈಲನ್ನು ಸೇವ್ ಮಾಡಿ ಮತ್ತು ‘ಟರ್ಮಿನಲ್’ನ ಮೇಲೆ, ಪರ್ಲ್-ಸ್ಕ್ರಿಪ್ಟನ್ನು ಎಕ್ಸಿಕ್ಯೂಟ್ ಮಾಡಿ. |
05:49 | ‘ಟರ್ಮಿನಲ್’ನ ಮೇಲೆ ಹೀಗೆ ಟೈಪ್ ಮಾಡಿ: perl ಹೈಫನ್ c commentsExample ಡಾಟ್ pl, Enter ಅನ್ನು ಒತ್ತಿ. |
05:57 | ಇಲ್ಲಿ ‘ಸಿಂಟ್ಯಾಕ್ಸ್ ಎರರ್’ ಇಲ್ಲ. |
05:59 | ಆದ್ದರಿಂದ, ಹೀಗೆ ಟೈಪ್ ಮಾಡಿ ಸ್ಕ್ರಿಪ್ಟನ್ನು ಎಕ್ಸಿಕ್ಯೂಟ್ ಮಾಡಿ. |
06:01 | perl commentsExample ಡಾಟ್ pl. Enter ಅನ್ನು ಒತ್ತಿ. |
06:07 | ಇದು ಈ ಕೆಳಗಿನಂತೆ ಔಟ್ಪುಟ್ ತೋರಿಸುವುದು. “Addition is 30”. |
06:12 | ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಕೊನೆಗೆ ತರುತ್ತದೆ. |
06:16 | ಇಲ್ಲಿ, ನಾವು ಪರ್ಲ್ ನಲ್ಲಿ ಕಾಮೆಂಟ್ ಗಳನ್ನು ಸೇರಿಸಲು ಕಲಿತೆವು. |
06:19 | ಒಂದು ನಂಬರ್ ನ ವರ್ಗವನ್ನು (square) ಕಂಡುಹಿಡಿಯಲು ಪರ್ಲ್-ಸ್ಕ್ರಿಪ್ಟನ್ನು ಬರೆಯಿರಿ. |
06:23 | ‘ಸಿಂಗಲ್ ಲೈನ್ ಕಾಮೆಂಟ್’ ಹಾಗೂ ‘ಮಲ್ಟಿಲೈನ್ ಕಾಮೆಂಟ್’ಗಳನ್ನು ಬಳಸಿ ಕೋಡ್ ನ ಕಾರ್ಯವನ್ನು ವಿವರಿಸಿ. |
06:30 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
06:34 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
06:37 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
06:42 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
06:44 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
06:48 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
06:51 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
06:58 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
07:03 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
07:11 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. spoken hyphen tutorial dot org slash NMEICT hyphen Intro. |
07:15 | ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
ವಂದನೆಗಳು. |