PERL/C2/Overview-and-Installation-of-PERL/Kannada
From Script | Spoken-Tutorial
Revision as of 14:18, 11 March 2016 by Sandhya.np14 (Talk | contribs)
Time | Narration |
00:01 | PERL Overview and Installation of Perl (ಪರ್ಲ್ ಓವರ್-ವ್ಯೂ ಆಂಡ್ ಇನ್ಸ್ಟಾಲ್ಲೇಶನ್ ಆಫ್ ಪರ್ಲ್) ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:10 | Ubuntu-Linux (ಉಬಂಟು-ಲಿನಕ್ಸ್) ಹಾಗೂ Windows ಆಪರೇಟಿಂಗ್ ಸಿಸ್ಟಂ ಗಳ ಮೇಲೆ PERL (ಪರ್ಲ್) ಅನ್ನು ಇನ್ಸ್ಟಾಲ್ ಮಾಡುವ ಹಂತಗಳ ಜೊತೆಗೆ PERL ಬಗ್ಗೆ ಒಂದು ಅವಲೋಕನವನ್ನು ಮಾಡುವೆವು. |
00:20 | ಈ ಟ್ಯುಟೋರಿಯಲ್ ಗಾಗಿ, |
00:21 | * ನೀವು ಇಂಟರ್ನೆಟ್ ಸಂಪರ್ಕವನ್ನು ಪಡೆದಿರಬೇಕು. |
00:25 | * ನೀವು Ubuntu Linux (ಉಬಂಟು ಲಿನಕ್ಸ್) ಮತ್ತು Windows ಆಪರೇಟಿಂಗ್ ಸಿಸ್ಟಂ ಗಳನ್ನು ಹೊಂದಿರಬೇಕು. |
00:30 | ಇದನ್ನು ಮಾಡಿ ತೋರಿಸುವುದಕ್ಕಾಗಿ, ನಾನು Ubuntu Linux 12.04 ಮತ್ತು Windows 7 ಆಪರೇಟಿಂಗ್ ಸಿಸ್ಟಂ ಗಳನ್ನು ಬಳಸುವವನಿದ್ದೇನೆ. |
00:39 | Ubuntu Linux ಅನ್ನು ಇನ್ಸ್ಟಾಲ್ ಮಾಡಲು, ನಿಮ್ಮ ಸಿಸ್ಟಂನಲ್ಲಿ ನೀವು Synaptic Package Manager ಆನ್ನು (ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್) ಇನ್ಸ್ಟಾಲ್ ಮಾಡಿರಬೇಕು. |
00:47 | ನಿಮಗೆ ‘ಅಡ್ಮಿನಿಸ್ಟ್ರೇಟಿವ್ ರೈಟ್ಸ್’ (ನಿರ್ವಾಹಕ ಹಕ್ಕುಗಳು) ಇರಬೇಕು. |
00:50 | ಅಲ್ಲದೇ, ನಿಮಗೆ Ubuntu ನಲ್ಲಿ Terminal ಹಾಗೂ Synaptic Package Manager ಗಳ ಬಳಕೆಯ ಬಗ್ಗೆ ತಿಳಿದಿರಬೇಕು. |
00:57 | ಇಲ್ಲದಿದ್ದಲ್ಲಿ, “ಸ್ಪೋಕನ್ ಟ್ಯುಟೋರಿಯಲ್” ವೆಬ್ಸೈಟ್ ಮೇಲೆ ಲಭ್ಯವಿರುವ Linux ಸರಣಿಯನ್ನು ದಯವಿಟ್ಟು ನೋಡಿ. |
01:03 | ನಾನು PERL ಭಾಷೆಯ ಮೇಲ್ನೋಟವನ್ನು ನಿಮಗೆ ಕೊಡುತ್ತೇನೆ. |
01:07 | PERL, “Practical Extraction and Reporting Language” ಎನ್ನುವುದರ ಪ್ರಥಮಾಕ್ಷರಿ (acronym) ಯಾಗಿದೆ. |
01:14 | ಇದು ಸಾಮಾನ್ಯ ಉದ್ದೇಶಿತ ಪ್ರೊಗ್ರಾಂ ಮಾಡುವ ಭಾಷೆಯಾಗಿದೆ. |
01:18 | ಮೂಲತಃ ಇದನ್ನು ‘ಟೆಕ್ಸ್ಟ್ ಮ್ಯಾನಿಪುಲೇಶನ್’ ಗಾಗಿ ಅಭಿವೃದ್ಧಿ (develop) ಮಾಡಲಾಗಿತ್ತು. |
01:23 | ಈಗ, ಇದನ್ನು ವೆಬ್ ಡೆವಲಪ್ ಮಾಡುವುದು, ನೆಟ್ವರ್ಕ್ ಪ್ರೊಗ್ರಾಮಿಂಗ್, GUI ಡೆವಲಪ್ ಮಾಡುವುದು ಇತ್ಯಾದಿಗಳಿಗೆ ಬಳಸಲಾಗುತ್ತಿದೆ. |
01:31 | ಇದು ಸರಳವಾಗಿದ್ದು ತಿಳಿದುಕೊಳ್ಳಲು ಸುಲಭವಾಗಿದೆ. |
01:35 | C ಅಥವಾ JAVA ಗಳಲ್ಲಿರುವಂತೆ ಜಟಿಲವಾದ ‘ಡೇಟಾ ಸ್ಟ್ರಕ್ಚರ್’ಗಳನ್ನು ಇದು ಹೊಂದಿಲ್ಲ. |
01:41 | ಇದು ‘ಪ್ಯಾಟರ್ನ್ ಮ್ಯಾಚಿಂಗ್’ಗೆ ಹೆಸರುವಾಸಿಯಾಗಿದೆ. |
01:45 | ಎಲ್ಲಕ್ಕಿಂತ ಮುಖ್ಯವಾಗಿ, PERL, ಒಂದು ‘ಓಪನ್ ಸೋರ್ಸ್’ ಭಾಷೆಯಾಗಿದೆ. |
01:49 | PERL, Ubuntu Linux 12.04 OS ನಲ್ಲಿ ‘ಪ್ರಿ-ಲೋಡ್’ ಆಗಿ ಬರುತ್ತದೆ. |
01:56 | ಇದನ್ನು ಇನ್ಸ್ಟಾಲ್ ಮಾಡಲು ಯಾವುದೇ ವಿಶೇಷವಾದ ಕ್ರಮವನ್ನು ಅನುಸರಿಸಬೇಕಾಗಿಲ್ಲ. |
02:01 | Ubuntu 12.04 ರ ಮೇಲೆ ಇನ್ಸ್ಟಾಲ್ ಮಾಡಲಾದ ಪರ್ಲ್ ನ (PERL) ಆವೃತ್ತಿಯನ್ನು ನಾವು ಪರಿಶೀಲಿಸೋಣ. |
02:07 | ಕೀಬೋರ್ಡ್ ನ ಮೇಲೆ ‘Ctrl + Alt + t’ ಕೀಗಳನ್ನು ಒಟ್ಟಿಗೇ ಒತ್ತುವುದರ ಮೂಲಕ ಟರ್ಮಿನಲ್ ಅನ್ನು ‘ಓಪನ್’ ಮಾಡಿ. |
02:15 | ಆಮೇಲೆ, 'perl hyphen v' ಎಂದು ಟೈಪ್ ಮಾಡಿ |
02:18 | ಮತ್ತು ಆಮೇಲೆ Enter ಅನ್ನು ಒತ್ತಿ. |
02:21 | ಇಲ್ಲಿ, ಟರ್ಮಿನಲ್ ನ ಮೇಲೆ ತೋರಿಸಿದ ಔಟ್ಪುಟ್, ನಿಮಗೆ ಸಿಗುವುದು. |
02:26 | ಈ ‘ಔಟ್ಪುಟ್’, ಸಧ್ಯಕ್ಕೆ ಇನ್ಸ್ಟಾಲ್ ಮಾಡಲಾದ PERL ನ ಆವೃತ್ತಿಯನ್ನು ನಮಗೆ ತೋರಿಸುತ್ತದೆ. |
02:31 | ನನ್ನದು PERL 5.14.2 ಎಂದು ಆಗಿದೆ. |
02:36 | Ubuntu 12.04 ನಲ್ಲಿ ಲಭ್ಯವಿರುವ ‘ಡೀಫಾಲ್ಟ್ ಪರ್ಲ್ ಪ್ಯಾಕೇಜ್’ಗಳನ್ನು ನಾವು ಪರಿಶೀಲಿಸೋಣ. |
02:43 | ನಾವು ‘ಲಾಂಚರ್ ಬಾರ್’ಗೆ ಹೋಗಿ Dash Home ನ ಮೇಲೆ ಕ್ಲಿಕ್ ಮಾಡೋಣ. |
02:48 | ‘ಸರ್ಚ್ ಬಾರ್’ನಲ್ಲಿ "Synaptic" ಎಂದು ಟೈಪ್ ಮಾಡಿ. |
02:51 | Synaptic Package Manager ಎನ್ನುವ ಐಕಾನ್ ಕಾಣಿಸುವುದು. |
02:55 | ಅದರ ಮೇಲೆ ಕ್ಲಿಕ್ ಮಾಡಿ. |
02:57 | ‘ಅಥೆಂಟಿಕೇಶನ್’ ಉದ್ದೇಶಕ್ಕಾಗಿ, ನಿಮ್ಮ ‘ಅಡ್ಮಿನ್ ಪಾಸ್ವರ್ಡ್’ (admin password) ಗಾಗಿ ನಿಮಗೆ ಸೂಚನೆ ಸಿಗುತ್ತದೆ. |
03:03 | ನಿಮ್ಮ admin ಪಾಸ್ವರ್ಡ್ ಅನ್ನು ನಮೂದಿಸಿ, Authenticate ನ ಮೇಲೆ ಕ್ಲಿಕ್ ಮಾಡಿ. |
03:08 | ತಕ್ಷಣ ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’, ‘ಪ್ಯಾಕೇಜ್ ಲಿಸ್ಟ್’ ಅನ್ನು ‘ಲೋಡ್’ ಮಾಡುವುದು. |
03:13 | ನಿಮ್ಮ ಇಂಟರ್ನೆಟ್ ಹಾಗೂ ಸಿಸ್ಟಂ ನ ವೇಗಕ್ಕೆ ಅನುಗುಣವಾಗಿ ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. |
03:18 | ‘ಲೋಡ್’ ಆದಮೇಲೆ Quick Filter ನಲ್ಲಿ ‘Perl’ ಎಂದು ಟೈಪ್ ಮಾಡಿ. |
03:22 | ನೀವು ‘ಪ್ಯಾಕೇಜ್’ಗಳ ಒಂದು ‘ಲಿಸ್ಟ್’ ಅನ್ನು ನೋಡುವಿರಿ. |
03:25 | ‘perl Package’ನ ಹಿಂದೆ ಇರುವ ಹಸಿರು ಬಣ್ಣ ತುಂಬಿದ ಚೆಕ್-ಬಾಕ್ಸ್, ಅದು ಈಗಾಗಲೇ ಇನ್ಸ್ಟಾಲ್ ಆಗಿದೆ ಎಂದು ಸೂಚಿಸುತ್ತದೆ. |
03:33 | ಆದರೆ ನಕ್ಷತ್ರದ ಗುರುತು ಇರುವ ಚೆಕ್-ಬಾಕ್ಸ್ ಗಳು, ನಿಮಗೆ ಈ ‘ಪ್ಯಾಕೇಜ್’ಗಳು ಸಹ ಬೇಕಾಗಬಹುದೆಂದು ಸೂಚಿಸುತ್ತವೆ. |
03:41 | ದಾಖಲೆಯನ್ನು ತಯಾರಿಸಲು (documentation) ಅಥವಾ PERL ಸ್ಕ್ರಿಪ್ಟನ್ನು ‘ಡೀಬಗ್’ (debug) ಮಾಡಲು ಇವುಗಳು ನಿಮಗೆ ಸಹಾಯ ಮಾಡುತ್ತವೆ. |
03:47 | ಮುಂದೆ ನೀವು ಬಳಸಬಹುದಾದ PERL ಗೆ ಅನುಗುಣವಾಗಿ, ಬಿಟ್ಟುಹೋಗಿರುವ ‘ಪ್ಯಾಕೇಜ್’ಗಳನ್ನು ಇನ್ಸ್ಟಾಲ್ ಮಾಡಿ. |
03:54 | ಈಗ ನಾವು ‘Windows ಆಪರೇಟಿಂಗ್ ಸಿಸ್ಟಂ’ನ ಮೇಲೆ PERL ಅನ್ನು ಇನ್ಸ್ಟಾಲ್ ಮಾಡುವ ಹಂತಗಳನ್ನು ನೋಡೋಣ. |
04:00 | PERL ಟ್ಯುಟೋರಿಯಲ್ ಗಳನ್ನು ರೆಕಾರ್ಡ್ ಮಾಡುವ ಸಮಯದಲ್ಲಿ 5.14.2 ನೇ ಆವೃತ್ತಿಯು Windows ನಲ್ಲಿ ಲಭ್ಯವಿತ್ತು. |
04:08 | ಈಗ PERL ನ ಹೊಸ ಆವೃತ್ತಿಯು ಲಭ್ಯವಿದೆ. |
04:12 | PERL ನ ಹೊಸ ಆವೃತ್ತಿಯಾದ 5.16.3 ಅನ್ನು ಬಳಸಿ ನಾನು ಇನ್ಸ್ಟಾಲ್ ಮಾಡಿ ತೋರಿಸುತ್ತಿರುವೆನು. |
04:19 | ಟ್ಯುಟೋರಿಯಲ್ ನಲ್ಲಿ ತೋರಿಸಿದ ಎಲ್ಲ PERL ಕಮಾಂಡ್ ಗಳು, ಹೊಸ ಆವೃತ್ತಿಯಲ್ಲಿ ಸಹ ಸರಿಯಾಗಿ ಕೆಲಸ ಮಾಡುವುವು. |
04:26 | ‘Windows ಆಪರೇಟಿಂಗ್ ಸಿಸ್ಟಂ’ ನಲ್ಲಿ ಬ್ರೌಸರನ್ನು ಓಪನ್ ಮಾಡಿ |
04:30 | ಮತ್ತು ‘ಅಡ್ರೆಸ್ ಬಾರ್’ನಲ್ಲಿ, ಇಲ್ಲಿ ತೋರಿಸಿದಂತೆ URL ಅನ್ನು ಟೈಪ್ ಮಾಡಿ. |
04:35 | PERL ನ ‘ಡೌನ್ಲೋಡ್’ ಪೇಜ್ ಗೆ ಹೋಗಲು ನಿಮಗೆ ನಿರ್ದೇಶಿಸಲಾಗುವುದು. |
04:39 | ನಿಮ್ಮ ‘ಸಿಸ್ಟಂ ಸ್ಪೆಸಿಫಿಕೇಶನ್’ಗಳಿಗೆ ಅನುಸಾರವಾಗಿ ‘ಡೌನ್ಲೋಡ್ ವರ್ಷನ್’ ಅನ್ನು ಆಯ್ಕೆಮಾಡಿ. |
04:44 | ನನ್ನದು PERL ನ ‘32 bit ' ಆವೃತ್ತಿಯಾಗಿರುವುದು. |
04:49 | 'Perl msi' ಫೈಲನ್ನು, ನಿಮ್ಮ ಕಂಪ್ಯೂಟರ್ ನ ಮೇಲೆ, ನಿಮಗೆ ಬೇಕಾದ ಲೊಕೇಶನ್ ನಲ್ಲಿ ಸೇವ್ ಮಾಡಿ. |
04:56 | ನಾನು ನನ್ನ ಮಷಿನ್ ನ ಮೇಲೆ ಈಗಾಗಲೇ ಸೇವ್ ಮಾಡಿದ್ದೇನೆ. |
05:00 | 'Perl msi' ಫೈಲನ್ನು ಡೌನ್ಲೋಡ್ ಮಾಡಿರುವ ಫೋಲ್ಡರನ್ನು ಓಪನ್ ಮಾಡಿ, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. |
05:07 | ಆಮೇಲೆ, ‘ಪಾಪ್-ಅಪ್’ ವಿಂಡೋದಲ್ಲಿ Run ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
05:11 | Setup Wizard ವಿಂಡೋದಲ್ಲಿ Next ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
05:15 | ಸೂಚಿಸಿದಾಗ License Agreement (ಲೈಸೆನ್ಸ್ ಅಗ್ರೀಮೆಂಟ್) ಅನ್ನು ಅಂಗೀಕರಿಸಿ. ನಂತರ Next ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
05:21 | ಈಗ, Custom Setup ವಿಂಡೋ ಕಾಣಿಸಿಕೊಳ್ಳುವುದು. |
05:25 | ಈ ವಿಂಡೋ, ಇನ್ಸ್ಟಾಲ್ ಆಗುತ್ತಿರುವ ಎಲ್ಲ PERL ನ ವೈಶಿಷ್ಟ್ಯಗಳ ಪಟ್ಟಿಯನ್ನು ತೋರಿಸುತ್ತದೆ. |
05:31 | ಇವುಗಳು ಕೆಳಗಿನಂತಿವೆ: |
05:32 | * Perl (ಪರ್ಲ್) |
05:33 | * PPM (ಪಿ-ಪಿ-ಎಮ್ ಯೂಟಿಲಿಟಿ), Windows ನ ಮೇಲೆ ‘ಪರ್ಲ್ ಮೊಡ್ಯೂಲ್’ ಗಳನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಲು ಇದನ್ನು ಬಳಸಲಾಗುತ್ತದೆ. |
05:39 | * Documentation (ಡಾಕ್ಯುಮೆಂಟೇಶನ್), ಇದು ‘ಪರ್ಲ್ ಮೊಡ್ಯೂಲ್’ಗಳಿಗಾಗಿ ಸಾಕ್ಷ್ಯ ಸಂಕಲನವನ್ನು ಒದಗಿಸುತ್ತದೆ ಮತ್ತು |
05:44 | * Examples (Perl ನ ಉದಾಹರಣೆಗಳು). |
05:47 | ಈ ಎಲ್ಲ ಡೀಫಾಲ್ಟ್ ವೈಶಿಷ್ಟ್ಯಗಳನ್ನು ಇಟ್ಟು Next ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
05:52 | ‘environment variable’ ಮತ್ತು ‘file extension’ ಗಳನ್ನು ಸೆಟ್ ಮಾಡಲು, ಒಂದು ‘ಪಾಪ್-ಅಪ್’ ವಿಂಡೋ ಕಾಣಿಸಿಕೊಳ್ಳುವುದು. |
05:59 | ಚೆಕ್-ಬಾಕ್ಸ್ ಅನ್ನು ಇಲ್ಲಿ ತೋರಿಸಿದಂತೆ ಚೆಕ್ ಮಾಡಿ ಇರಿಸಿ. |
06:03 | ಕ್ರಮವಾಗಿ Next ಹಾಗೂ Install ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
06:07 | ಇದು PERL ಅನ್ನು ‘ಇನ್ಸ್ಟಾಲ್’ ಮಾಡಲು ಆರಂಭಿಸುವುದು. |
06:11 | ನಿಮ್ಮ ಇಂಟರ್ನೆಟ್ ನ ವೇಗಕ್ಕೆ ಅನುಗುಣವಾಗಿ ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. |
06:16 | ಇದು ಮುಗಿದ ನಂತರ, Display release note ಎನ್ನುವ ಚೆಕ್-ಬಾಕ್ಸನ್ನು ಅನ್-ಚೆಕ್ ಮಾಡಿ. ನಂತರ Finish ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
06:23 | ಇಲ್ಲಿಗೆ, Windows ನಲ್ಲಿ PERL ಅನ್ನು ಇನ್ಸ್ಟಾಲ್ ಮಾಡುವುದು ಮುಗಿಯುತ್ತದೆ. |
06:27 | ಈಗ ನಾವು ಇನ್ಸ್ಟಾಲ್ ಮಾಡಿರುವುದನ್ನು ಪರೀಕ್ಷಿಸೋಣ. |
06:32 | ‘ಕಮಾಂಡ್ ಪ್ರಾಂಪ್ಟ್’ಅನ್ನು ಓಪನ್ ಮಾಡಲು, Start ಮೆನುಗೆ ಹೋಗಿ, cmd ಎಂದು ಟೈಪ್ ಮಾಡಿ. |
06:39 | ‘ಕಮಾಂಡ್ ಪ್ರಾಂಪ್ಟ್’ನಲ್ಲಿ ಹೀಗೆ ಟೈಪ್ ಮಾಡಿ: perl space hyphen v |
06:44 | ಮತ್ತು Enter ಅನ್ನು ಒತ್ತಿ. |
06:46 | ಇನ್ಸ್ಟಾಲ್ ಆಗಿರುವ PERL ನ ಆವೃತ್ತಿಯನ್ನು ನೀವು ನೋಡುವಿರಿ. |
06:50 | ಅದು ಆವೃತ್ತಿಯನ್ನು ತೋರಿಸದಿದ್ದರೆ, ಮೇಲೆ ಹೇಳಿದ ಇನ್ಸ್ಟಾಲ್ ಮಾಡುವ ಹಂತಗಳನ್ನು ಮತ್ತೊಮ್ಮೆ ಪುನರಾವರ್ತಿಸಿ. |
06:57 | ಈಗ ನಾವು ಸರಳವಾದ, “Hello Perl” ಎನ್ನುವ ಒಂದು ಪ್ರೊಗ್ರಾಮನ್ನು ಎಕ್ಸಿಕ್ಯೂಟ್ (execute) ಮಾಡೋಣ. |
07:02 | ನಿಮಗೆ ಈ ಫೈಲನ್ನು, ಪ್ಲೇಯರ್ ನ ಕೆಳಗಡೆ “Code Files” ಎನ್ನುವ ಲಿಂಕ್ ನಲ್ಲಿ, ಈ ಟ್ಯುಟೋರಿಯಲ್ ನೊಂದಿಗೆ ಒದಗಿಸಲಾಗಿದೆ. |
07:11 | ದಯವಿಟ್ಟು ಈ ಫೈಲನ್ನು ಡೌನ್ಲೋಡ್ ಮಾಡಿ ಉಪಯೋಗಿಸಿ. |
07:14 | ನನ್ನ ಸಿಸ್ಟಂನಲ್ಲಿ, users\Amol ಎನ್ನುವ ಡಿರೆಕ್ಟರಿಯಲ್ಲಿ ನಾನು ಈ ಫೈಲನ್ನು ಸೇವ್ ಮಾಡಿದ್ದೆ. |
07:21 | ಹೀಗಾಗಿ, ನಾವು ಅಲ್ಲಿಗೆ ಹೋಗೋಣ. |
07:23 | ಆಮೇಲೆ, ಹೀಗೆ ಟೈಪ್ ಮಾಡಿ: ‘perl sampleProgram.pl’ (ಪರ್ಲ್ ಸ್ಯಾಂಪಲ್ ಪ್ರೊಗ್ರಾಂ ಡಾಟ್ ಪಿ-ಎಲ್). |
07:28 | ಮತ್ತು Enter ಅನ್ನು ಒತ್ತಿ. |
07:30 | ಇಲ್ಲಿ ತೋರಿಸಿದಂತೆ, ‘ಕಮಾಂಡ್ ಪ್ರಾಂಪ್ಟ್’ನ ಮೇಲೆ “Hello Perl” ಎಂದು ಪ್ರಿಂಟ್ ಆಗುವುದು. |
07:35 | ಸಂಕ್ಷಿಪ್ತವಾಗಿ, |
07:37 | ಈ ಟ್ಯುಟೋರಿಯಲ್ ನಲ್ಲಿ ನಾವು: |
07:40 | * PERL ನ ಬಗ್ಗೆ ಒಂದು ಸ್ಥೂಲ ಸಮೀಕ್ಷೆ ಮತ್ತು |
07:43 | * Ubuntu Linux 12.04 ಮತ್ತು Windows 7 ಗಳಿಗಾಗಿ PERL ಅನ್ನು ಇನ್ಸ್ಟಾಲ್ ಮಾಡಲು ಇರುವ ಸೂಚನೆಗಳ ಬಗ್ಗೆ ತಿಳಿದಿದ್ದೇವೆ. |
07:50 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
07:54 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
07:58 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:03 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
08:06 | ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:10 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:15 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. |
08:18 | contact at spoken hyphen tutorial dot org |
08:23 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
08:29 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
08:38 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. spoken hyphen tutorial dot org slash NMEICT hyphen Intro. |
08:50 | ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. |
08:53 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ. |
08:56 | ಧನ್ಯವಾದಗಳು. |