Inkscape/C2/Overview-of-Inkscape/Kannada
From Script | Spoken-Tutorial
Revision as of 11:37, 3 February 2016 by Sandhya.np14 (Talk | contribs)
Time | Narration |
00:01 | ಸ್ಪೋಕನ್ ಟ್ಯುಟೋರಿಯಲ್ ನ ಇಂಕ್-ಸ್ಕೇಪ್ ನ ಸರಣಿ ಗೆ ಸ್ವಾಗತ. |
00:05 | ಈ ಸರಣಿಯಲ್ಲಿ, ನಾವು ಇಂಕ್-ಸ್ಕೇಪ್ ಮತ್ತು ಅದರ ವೈಶಿಷ್ಟ್ಯಗಳನ್ನು ಪರಿಚಯ ಮಾಡಿಕೊಳ್ಳೋಣ. |
00:11 | ಇಲ್ಲಿ ನಾವು ಕಲಿಯುವ ಅಂಶಗಳು:* ವಿವಿಧ ಪೂರ್ವನಿರ್ಧಾರಿತ ಆಕಾರಗಳನ್ನು ರಚಿಸುವುದು ಮತ್ತು ಬದಲಾಯಿಸುವುದು |
00:21 | * ಕಲರ್-ವೀಲ್ ಅನ್ನು ಉಪಯೋಗಿಸುವುದು |
00:26 | * ಬೇಝಿಯರ್ ಟೂಲ್ ಅನ್ನು ಬಳಸುವುದು |
00:33 | * ಟೆಕ್ಸ್ಟ್ ಅನ್ನು ಅವಶ್ಯಕತೆಗೆ ತಕ್ಕಂತೆ ಉಪಯೋಗಿಸುವುದು ಮತ್ತು ಬದಲಾಯಿಸುವುದು |
00:37 | ಉದಾಹರಣೆಗೆ: ಸೂಪರ್-ಸ್ಕ್ರಿಪ್ಟ್ ಮತ್ತು ಸಬ್-ಸ್ಕ್ರಿಪ್ಟ್ |
00:42 | ಚಿತ್ರವನ್ನು ಪಠ್ಯದ ಮೇಲೆ ಬರುವಂತೆ ಮಾಡುವುದು. |
00:47 | ಈ ಸರಣಿಯಲ್ಲಿ, ನಾವು, ವಿವಿಧ ಆಕಾರಗಳನ್ನು ಬಳಸಿಕೊಂಡು ಒಂದು ಟೈಲ್ ಮಾದರಿಯನ್ನು ರಚಿಸಲು ಕೂಡಾ ಕಲಿಯುತ್ತೇವೆ. |
00:54 | ಗ್ರಾಫಿಕ್ಸ್, ಉದಾಹರಣೆಗೆ ಹೂವು, |
00:58 | ಕೈಪಿಡಿ ಮತ್ತು ಫ್ಲೈಯರ್ ಗಳು, |
01:02 | ಪೋಸ್ಟರ್ ಮತ್ತು ಬ್ಯಾನರ್ಗಳು, |
01:06 | ಸಿ.ಡಿ. ಲೇಬಲ್ ಗಳು, |
01:10 | ವಿಸಿಟಿಂಗ್ ಕಾರ್ಡ್ ಗಳು, |
01:13 | ಲೋಗೋಗಳು ಇತ್ಯಾದಿ. |
01:17 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿ ಮತ್ತು ವಿಂಡೋಸ್ ಸೆವೆನ್ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ. |
01:28 | ಇಂಕ್ ಸ್ಕೇಪ್ ಎಂಬುದು ಒಂದು ಓಪನ್ ಸೋರ್ಸ್ ವೆಕ್ಟರ್ ಗ್ರಾಫಿಕ್ಸ್ ಎಡಿಟರ್ ಆಗಿದೆ. |
01:31 | ಇದು, ಲಿನಕ್ಸ್, ಮ್ಯಾಕ್ ಒ.ಎಸ್. ಎಕ್ಸ್ ಮತ್ತು ವಿಂಡೋಸ್ ನಲ್ಲಿ ಕೆಲಸ ಮಾಡುತ್ತದೆ. |
01:36 | ಇಂಕ್ ಸ್ಕೇಪ್ ಅನ್ನು ಎಲ್ಲ ರೀತಿಯ ಟು.ಡಿ.(2D) ಗ್ರಾಫಿಕ್ ಡಿಸೈನ್ ಗಾಗಿ ಬಳಸಬಹುದು, ಉದಾಹರಣೆಗೆ : |
01:41 | * ದೃಷ್ಟಾಂತಗಳು ಮತ್ತು ಚಿತ್ರ ಅಥವಾ ಕಾರ್ಟೂನ್ ಗಳನ್ನು ಚಿತ್ರಿಸಲು |
01:46 | * ವರ್ಣರಂಜಿತ ವಿನ್ಯಾಸ / ಹಿನ್ನೆಲೆ ರಚಿಸಲು |
01:50 | * ವೆಬ್ ಪುಟ ವಿನ್ಯಾಸವನ್ನು ರಚಿಸಲು |
01:53 | * ಚಿತ್ರಗಳನ್ನು ಟ್ರೇಸ್ ಮಾಡಲು |
01:56 | * ವೆಬ್ ಆಧಾರಿತ ಗುಂಡಿಗಳು ಮತ್ತು ಐಕಾನ್ಗಳನ್ನು ರಚಿಸಲು |
02:00 | *ವೆಬ್ ಗಾಗಿ ಚಿತ್ರಗಳನ್ನು ಬದಲಾಯಿಸಲು. |
02:05 | ಇಂಕ್ ಸ್ಕೇಪ್ ಅನ್ನು ಉಬುಂಟು ಲಿನಕ್ಸ್ ನಲ್ಲಿ ’ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ಅನ್ನು ಬಳಸಿ ಇಂಸ್ಟಾಲ್ ಮಾಡಬಹುದು. |
02:11 | ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಬಗೆಗೆ ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನಲ್ಲಿ Linux tutorials ಅನ್ನು ನೋಡಿ. |
02:17 | ಡ್ಯಾಶ್-ಹೋಮ್ ಗೆ ಹೋಗಿ, "Inkscape" ಎಂದು ಟೈಪ್ ಮಾಡಿ. |
02:20 | ಲೋಗೋ ದ ಮೇಲೆ ಡಬಲ್-ಕ್ಲಿಕ್ ಮಾಡಿ, ಇಂಕ್ ಸ್ಕೇಪ್ ಅನ್ನು ಓಪನ್ ಮಾಡಬಹುದು. |
02:23 | ಈಗ ನಾವು ಇಂಕ್-ಸ್ಕೇಪ್ ಅನ್ನು ವಿಂಡೋಸ್ ನಲ್ಲಿ ಇಂಸ್ಟಾಲ್ ಮಾಡುವುದನ್ನು ಕಲಿಯೋಣ. |
02:28 | ನಿಮ್ಮ ಬ್ರೌಸರ್ ಅನ್ನು ಓಪನ್ ಮಾಡಿ, 'inkscape.org' ಹೋಗಿ. |
02:33 | 'Download' ಬಟನ್ ಅನ್ನು ಒತ್ತಿ. ವಿಂಡೋಸ್ ಗೆ ಅನುಗುಣವಾಗಿರುವ, ಇಂಸ್ಟಾಲರ್ ಆಪ್ಷನ್ ಅನ್ನು ಆಯ್ಕೆ ಮಾಡಿ. |
02:40 | ಅಲ್ಲಿ, ಡೌನ್ ಲೋಡ್ ಇಂಕ್ ಸ್ಕೇಪ್ ಎಂಬ ವಾಕ್ಯವನ್ನು ಈ ಆವೃತ್ತಿಯೊಂದಿಗೆ ನೋಡಬಹುದು. ಅದನ್ನು ಒತ್ತಿ. |
02:46 | ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ, ಅದರಲ್ಲಿ ಸೇವ್ ಅನ್ನು ಒತ್ತಿ. |
02:51 | ಇಂಸ್ಟಾಲರ್ ಫೈಲ್, ನಿಮ್ಮ ಯಂತ್ರಕ್ಕೆ ಡೌನ್ ಲೋಡ್ ಆಗುತ್ತದೆ. ಡೌನ್ ಲೋಡ್ಸ್ ಎಂಬ ಫೋಲ್ಡರ್ ಗೆ ಹೋಗಿ. |
02:58 | ಇಂಕ್ ಸ್ಕೇಪ್ ಅನ್ನು ಇಂಸ್ಟಾಲ್ ಮಾಡಲು, ಇ ಎಕ್ಸ್ ಇ ಫೈಲ್ ನ ಮೇಲೆ ಡಬಲ್ ಕ್ಲಿಕ್ ಮಾಡಿ. |
03:02 | ಡಿಫಾಲ್ಟ್ ಭಾಷೆ ಇಂಗ್ಲೀಷ್. ಈಗ ನೆಕ್ಸ್ಟ್ ಮೇಲೆ ಒತ್ತಿ. |
03:07 | ಪುನಃ ನೆಕ್ಸ್ಟ್ ಮೇಲೆ ಒತ್ತಿ. |
03:09 | ಪುನಃ ನೆಕ್ಸ್ಟ್ ಮೇಲೆ ಒತ್ತಿ. |
03:11 | ಡೆಸ್ಟಿನೇಶನ್ ಫೋಲ್ಡರ್ ಎಂಬ ಡೈಲಾಗ್ ಬಾಕ್ಸ್ ಬರುತ್ತದೆ. ಪೂರ್ವನಿಯೋಜಿತವಾಗಿ, ಪ್ರೋಗ್ರಾಮ್ ಫೈಲ್ಸ್ ಎಂಬ ಫೋಲ್ಡರ್ ಅಲ್ಲಿ ಇಂಕ್ಸ್ಕೇಪ್, ಸೇವ್ ಆಗುತ್ತದೆ. ಈಗ ಇಂಸ್ಟಾಲ್ ಮೇಲೆ ಕ್ಲಿಕ್ ಮಾಡಿ. |
03:20 | ಇಂಕ್ ಸ್ಕೇಪ್ ಇಂಸ್ಟಾಲ್ ಆಗುತ್ತಿದೆ. ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು. |
03:25 | ನೆಕ್ಸ್ಟ್ ಮೇಲೆ ಒತ್ತಿ. ಇಂಸ್ಟಲೇಶನ್ ಅನ್ನು ಸಂಪೂರ್ಣಗೊಳಿಸಲು, ಫಿನಿಶ್ ಮೇಲೆ ಒತ್ತಿ. |
03:30 | ಈಗ ಇಂಕ್ ಸ್ಕೇಪ್ ಸಾಫ್ಟ್ ವೇರ್ ತಾನಾಗಿಯೇ ಓಪನ್ ಆಗುವುದು. |
03:34 | ಇಲ್ಲದಿದ್ದಲ್ಲಿ, ಇದನ್ನು ಓಪನ್ ಮಾಡಲು, ಡೆಸ್ಕ್ ಟಾಪ್ ಮೇಲೆ ಒಂದು ಷಾರ್ಟ್ ಕಟ್ ಇರುವುದನ್ನು ಗಮನಿಸಿ, ಅದನ್ನು ಡಬಲ್ ಕ್ಲಿಕ್ ಮಾಡಿ. |
03:42 | ಈ ಎರಡೂ ವಿಧಾನಗಳೂ, ಇಂಕ್ ಸ್ಕೇಪ್ ಅನ್ನು ಓಪನ್ ಮಾಡಲು ವಿಫಲವಾದರೆ, ಸ್ಟಾರ್ಟ್ ಮೆನು ವಿನಲ್ಲಿ ಆಲ್ ಪ್ರೊಗ್ರಾಮ್ಸ್ ಮತ್ತು ಅದರಲ್ಲಿ, ಇಂಕ್ ಸ್ಕೇಪ್ ಅನ್ನು ಕ್ಲಿಕ್ ಮಾಡಿ. |
03:50 | ಈಗ ಇಂಕ್ ಸ್ಕೇಪ್ ಇಂಟರ್ ಫೇಸ್ ಓಪನ್ ಆಗುತ್ತದೆ. |
03:54 | ಈಗ, ಈ ಪ್ರದರ್ಶನವನ್ನು ಪೂರ್ಣಗೊಳಿಸಲು ನಾನು ಲಿನಕ್ಸ್ ಗೆ ಹಿಂತಿರುಗುತ್ತೇನೆ. |
03:58 | ಆದರೆ, ಇಲ್ಲಿ ತೋರಿಸಲಾದ ಕ್ರಮಗಳು, ಯಾವುದೇ ಓ ಎಸ್ ನ ಇಂಕ್ ಸ್ಕೇಪ್ ನಲ್ಲದರೂ ಕಾರ್ಯನಿರ್ವಹಿಸುತ್ತವೆ. |
04:04 | ಚಿತ್ರಿಸುವ ಮುಖ್ಯ ಭಾಗವನ್ನು ಕ್ಯಾನ್ವಾಸ್ ಎನ್ನುತ್ತಾರೆ. ಇಲ್ಲಿಯೇ ನಾವು ಎಲ್ಲ ಗ್ರಾಫಿಕ್ ಗಳನ್ನು ಚಿತ್ರಿಸುವುದು. |
04:10 | ಇಂಕ್ ಸ್ಕೇಪ್ ನಲ್ಲಿ ವಿವಿಧ ಮೆನುಗಳು ಮತ್ತು ಟೂಲ್ ಗಳೂ ಇವೆ. ಇವುಗಳನ್ನು ವಿವರವಾಗಿ ಈ ಸರಣಿಯಲ್ಲಿ ಕಲಿಯುತ್ತೇವೆ. |
04:17 | ಈಗ, ಇಂಕ್ ಸ್ಕೇಪ್ ಅನ್ನು ಹೇಗೆ ಉಪಯೋಗಿಸುವುದು ಎಂಬುದನ್ನು ಕಲಿಯೋಣ. |
04:21 | ನಾವು ರೆಕ್ಟ್ಯಾಂಗಲ್ ಟೂಲ್ ಅನ್ನು ಬಳಸಿ, ಆಯತವನ್ನು ರಚಿಸೋಣ. |
04:25 | ಆಯತ ಆಕಾರವನ್ನು ರಚಿಸಲು, ಕ್ಯಾನ್ವಾಸ್ ನ ಮೇಲೆ ಕ್ಲಿಕ್ ಮಾಡಿ, ಎಳೆಯಿರಿ. |
04:29 | ನಮ್ಮ ಆಯತ ಇಲ್ಲಿದೆ. |
04:32 | ಈ ಇಂಕ್ ಸ್ಕೇಪ್ ಚಿತ್ರವನ್ನು ಸೇವ್ ಮಾಡುತ್ತೇನೆ. |
04:34 | ಫೈಲ್ ಮೆನು ಗೆ ಹೋಗಿ, ಸೇವ್ ಮೇಲೆ ಕ್ಲಿಕ್ ಮಾಡಿ. |
04:38 | ನಾನು ಇದನ್ನು, ಡ್ರಾಯಿಂಗ್ ಅಂಡರ್ಸ್ಕೋರ್ ಒನ್ ಡಾಟ್ ಎಸ್ ವಿ ಜಿ (drawing_1.svg) ಎಂದು ಹೆಸರಿಸಿ, ನನ್ನ ಡಾಕ್ಯುಮೆಂಟ್ಸ್ ಫೋಲ್ಡರ್ ನಲ್ಲಿ ಸೇವ್ ಮಾಡುತ್ತೇನೆ. |
04:45 | ಇಲ್ಲಿ, ಎಸ್ ವಿ ಜಿ ಎಂಬುದು ಡೀಫಾಲ್ಟ್ ಇಂಕ್ಸ್ಕೇಪ್ ಫೈಲ್ ಎಕ್ಸ್ಟೆಂಶನ್ ಅನ್ನು ಸೂಚಿಸುತ್ತದೆ. |
04:49 | ನಾವು ಮುಂಬರುವ ಟ್ಯುಟೋರಿಯಲ್ ಗಳಲ್ಲಿ ಇಂಕ್ಸ್ಕೇಪ್ ಮತ್ತು ಅದರ ವೈಶಿಷ್ಟ್ಯಗಳ ಬಗೆಗೆ ಇನ್ನಷ್ಟು ಕಲಿಯೋಣ. |
04:55 | ನಾನು ಈಗಾಗಲೇ ಈ ಟ್ಯುಟೋರಿಯಲ್ ಗಳ ಸರಣಿಯಲ್ಲಿನ ನೋಟವನ್ನು ತೋರಿಸಿರುವೆ. |
05:00 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
05:06 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
05:13 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
05:15 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
05:21 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
05:25 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
05:27 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |