LibreOffice-Suite-Draw/C2/Common-editing-and-print-functions/Kannada
From Script | Spoken-Tutorial
Time | Narration |
00:01 | LibreOffice Drawನಲ್ಲಿ Common Editing and Printing Functions ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್-ನಲ್ಲಿ, ನೀವು: |
00:10 | * Draw ಪೇಜ್ ನಲ್ಲಿ ಮಾರ್ಜಿನ್ ಗಳನ್ನು ಸೆಟ್ ಮಾಡುವುದನ್ನು, |
00:13 | * ಪುಟಸಂಖ್ಯೆ, ದಿನಾಂಕ ಮತ್ತು ಸಮಯಗಳನ್ನು ಸೇರಿಸುವುದನ್ನು, |
00:16 | * ಕಾರ್ಯಗಳನ್ನು Undo ಮತ್ತು Redo ಮಾಡುವುದನ್ನು, |
00:18 | * page ಅನ್ನು ರೀನೇಮ್ ಮಾಡುವುದನ್ನು ಮತ್ತು |
00:20 | * ಪೇಜ್ ಅನ್ನು ಪ್ರಿಂಟ್ ಮಾಡುವುದನ್ನು ಕಲಿಯಲಿದ್ದೀರಿ. |
00:22 | ಇಲ್ಲಿ ನಾವು:
|
00:33 | 'WaterCycle' ಫೈಲನ್ನು ತೆರೆಯೋಣ ಮತ್ತು 'WaterCycle' ರೇಖಾಚಿತ್ರವನ್ನು ಹೊಂದಿದ ಪೇಜನ್ನು ಆಯ್ಕೆ ಮಾಡೋಣ. |
00:40 | ಈ ಚಿತ್ರಕ್ಕೆ ನಾವು Page Marginsಗಳನ್ನು ಸೆಟ್ ಮಾಡೋಣ. |
00:44 | Page Marginಗಳು ಏಕೆ ಅವಶ್ಯಕ? |
00:46 | Page Marginಗಳು ಪೇಜ್ ನಲ್ಲಿ object ಗಳನ್ನು ಇರಿಸಲು ಬೇಕಾದ ಸ್ಥಳವನ್ನು ನಿರ್ಧರಿಸುತ್ತವೆ. |
00:53 | ಉದಾಹರಣೆಗೆ, ನಮಗೆ ಚಿತ್ರವನ್ನು ಪ್ರಿಂಟ್ ಮಾಡಿ ಫೈಲ್ ಮಾಡಬೇಕಾಗಬಹುದು. |
00:57 | ಪೇಜ್ ನ ಬದಿಗಳಲ್ಲಿ ಸಾಕಷ್ಟು ಸ್ಥಳವಿದೆ ಎಂಬುದನ್ನು ಮಾರ್ಜಿನ್ ಗಳು ಖಚಿತಪಡಿಸುತ್ತವೆ. |
01:01 | ಇದರಿಂದ ನಾವು ಇದನ್ನು ಪ್ರಿಂಟ್ ಮಾಡಿದಾಗ, ಚಿತ್ರದ ಒಂದು ಭಾಗ ಕತ್ತರಿಗೊಳ್ಳುವುದಾಗಲೀ ಮರೆಯಾಗುವುದಾಗಲೀ ಆಗುವುದಿಲ್ಲ. |
01:07 | ನಾವು Page Marginಗಳನ್ನು ಸೆಟ್ ಮಾಡೋಣ ಮತ್ತು ಅನಂತರ WaterCycle ಚಿತ್ರವನ್ನು ಪ್ರಿಂಟ್ ಮಾಡೋಣ. |
01:11 | ಈ ಚಿತ್ರವನ್ನು ಪ್ರಿಂಟ್ ಮಾಡಲು ನಾವು ಬಳಸುವ ಕಾಗದದ ಗಾತ್ರ ಸ್ಟ್ಯಾಂಡರ್ಡ್ ಗಾತ್ರವಾಗಿಲ್ಲ ಎಂದು ಭಾವಿಸೋಣ. |
01:18 | ಇದು 20 cms ಅಗಲವನ್ನು ಮತ್ತು 20 cms ಉದ್ದವನ್ನು ಹೊಂದಿದೆ. |
01:23 | ಇದಕ್ಕೆ 1.5 cms Bottom ಮಾರ್ಜಿನ್ ನ ಅವಶ್ಯಕತೆಯಿದೆ. |
01:29 | ಈ ಅಳತೆಗಳನ್ನು ಸೆಟ್ ಮಾಡಲು, Main ಮೆನುವಿನಿಂದ, Format ಆಯ್ಕೆ ಮಾಡಿ ಮತ್ತು Page ಕ್ಲಿಕ್ ಮಾಡಿ. |
01:35 | Page Setup ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
01:38 | Page ಟ್ಯಾಬ್ ಅನ್ನು ಆಯ್ಕೆ ಮಾಡಿ. |
01:41 | Width ಫೀಲ್ಡ್ ನಲ್ಲಿ, ವ್ಯಾಲ್ಯೂ “20”ನ್ನು ಮತ್ತು Height ಫೀಲ್ಡ್ ನಲ್ಲಿ “20”ನ್ನು ಎಂಟರ್ ಮಾಡಿ. |
01:47 | Marginsನ ಕೆಳಗೆ, Bottom ಫೀಲ್ಡ್ ನಲ್ಲಿ '1.5'ನ್ನು ಎಂಟರ್ ಮಾಡಿ. |
01:54 | ಬಲಭಾಗಕ್ಕೆ, ನೀವು Draw pageನ preview ಅನ್ನು ನೋಡುವಿರಿ. |
01:58 | ಈ ಪ್ರಿವ್ಯೂ ಡ್ರಾ ಪೇಜ್ ನಲ್ಲಿ ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ. |
02:02 | OK ಕ್ಲಿಕ್ ಮಾಡಿ. |
02;04 | ಚಿತ್ರ ಹೇಗೆ ಕಾಣಿಸುತ್ತಿದೆ? |
02:06 | ಇದು ಪೇಜ್ ನಿಂದ ಹೊರಗೆ ಹರಡಿದೆ! |
02:08 | ಇದರ ಅರ್ಥವೇನೆಂದರೆ ಪ್ರಿಂಟ್ ಮಾಡಿದಾಗ ಚಿತ್ರದ ಒಂದು ಭಾಗ ಕಾಣೆಯಾಗುತ್ತದೆ. |
02:14 | ನೀವು ಇವನ್ನು ದೃಢಪಡಿಸಿಕೊಳ್ಳಬೇಕು: |
02:15 | * ಚಿತ್ರಗಳು ಯಾವಾಗಲೂ ಮಾರ್ಜಿನ್ ನ ಒಳಗೆ ಇರುತ್ತವೆ. |
02:18 | * ನೀವು ಚಿತ್ರ ರಚಿಸಿದಾಗ, ಚಿತ್ರದ ಯಾವುದೇ ಭಾಗ ಮಾರ್ಜಿನ್ ನಿಂದ ಹೊರ ಹೋಗುವುದಿಲ್ಲ. |
02:23 | ಇದರಿಂದಾಗಿ, ನೀವು ಚಿತ್ರವನ್ನು ರಚಿಸುವ ಮೊದಲು ಪೇಜ್ ಮಾರ್ಜಿನ್ ಗಳನ್ನು ಸೆಟ್ ಮಾಡುವುದು ಉತ್ತಮ ಅಭ್ಯಾಸ. |
02:29 | Main ಮೆನುವಿನಿಂದ, ಮತ್ತೆ, Format ಅನ್ನು ಆಯ್ಕೆ ಮಾಡಿ ಮತ್ತು Page ಅನ್ನು ಕ್ಲಿಕ್ ಮಾಡಿ. |
02:35 | Page Setup ಡೈಲಾಗ್ ಬಾಕ್ಸ್ ಕಾಣಸಿಗುತ್ತದೆ. |
02:38 | Page ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
02:40 | Format ಡ್ರಾಪ್ ಡೌನ್ ಪಟ್ಟಿಯನ್ನು ಕ್ಲಿಕ್ ಮಾಡಿ ಮತ್ತು 'A4' ಅನ್ನು ಆಯ್ಕೆ ಮಾಡಿ. |
02:45 | ಇದು ನಾವು ಸೆಟ್ ಮಾಡಿದ್ದ ಮೂಲ ಮಾರ್ಜಿನ್. |
02:48 | OK ಕ್ಲಿಕ್ ಮಾಡಿ. |
02:52 | ಚಿತ್ರವು ಈಗ ಮಾರ್ಜಿನ್ ಗಳ ಒಳಗೆ ಇರಿಸಲ್ಪಟ್ಟಿತು. |
02:55 | Page setup ಡೈಲಾಗ್ ಬಾಕ್ಸನ್ನು Draw pageನಿಂದ ಕೂಡ ನೀವು ಪ್ರವೇಶಿಸಬಹುದು. |
03:00 | ಇದು, ಪೇಜ್ ನ ಮೇಲೆ ರೈಟ್ ಕ್ಲಿಕ್ ಮಾಡಿ Context ಮೆನುವನ್ನು ಉಪಯೋಗಿಸುವುದರಿಂದ ಸಾಧ್ಯವಾಗುತ್ತದೆ. |
03:05 | Cancel ಕ್ಲಿಕ್ ಮಾಡೋಣ ಮತ್ತು ಡೈಲಾಗ್ ಬಾಕ್ಸ್ ನಿಂದ ಹೊರಬರೋಣ. |
03:09 | ಈಗ, ನಾವು ಪುಟಸಂಖ್ಯೆ, ದಿನಾಂಕ, ಸಮಯ ಮತ್ತು ಲೇಖಕನ ಹೆಸರುಗಳನ್ನು ಸೇರಿಸೋಣ. |
03:15 | WaterCycle ರೇಖಾಚಿತ್ರವನ್ನು ಹೊಂದಿದ ಪುಟವನ್ನು ಆಯ್ಕೆ ಮಾಡೋಣ ಮತ್ತು ಪುಟಸಂಖ್ಯೆಯನ್ನು ಸೇರಿಸೋಣ. |
03:21 | Main ಮೆನುಗೆ ಹೋಗಿ ಮತ್ತು Insert ಅನ್ನು ಆಯ್ಕೆ ಮಾಡಿ ಮತ್ತು Fields ಅನ್ನು ಕ್ಲಿಕ್ ಮಾಡಿ. |
03:27 | ಫೀಲ್ಡ್ ಗಳ ಪಟ್ಟಿ ತೆರೆದುಕೊಳ್ಳುತ್ತದೆ. |
03:31 | Draw ದಿಂದ ಸ್ವಯಂ ಸೃಷ್ಟಿಯಾದ ಮೂಲ್ಯಗಳು ಫೀಲ್ಡ್ ಗಳಲ್ಲಿರುತ್ತವೆ. |
03:35 | ನಾವು ಕೇವಲ ಒಂದು ಫೀಲ್ಡ್ ಅನ್ನು ಮತ್ತು Drawದಿಂದ ಸೃಷ್ಟಿಯಾದ ಮೂಲ್ಯವನ್ನು ಸೇರಿಸಬೇಕು. |
03:41 | Page number ಅನ್ನು ಕ್ಲಿಕ್ ಮಾಡೋಣ. |
03:43 | Draw pageನ ಮೇಲೆ ಸಂಖ್ಯೆ '1'ನ್ನು ಹೊಂದಿದ ಒಂದು ಟೆಕ್ಸ್ಟ್ ಬಾಕ್ಸ್ ಸೇರ್ಪಡೆಗೊಂಡಿತು. |
03:48 | ನಾವು ಈ ಟೆಕ್ಸ್ಟ್-ಬಾಕ್ಸ್ ನ ಗಾತ್ರವನ್ನು ಸರಿಪಡಿಸೋಣ ಮತ್ತು ಇದನ್ನು ಸ್ವಲ್ಪ ಸಣ್ಣದಾಗಿಸೋಣ. |
03:55 | ಈಗ, ನಾವು ಬಾಕ್ಸ್ ಅನ್ನು ಎಳೆಯೋಣ ಮತ್ತು ಇದನ್ನು ಪುಟದ ಕೆಳಗಿನ ಬಲ ಮೂಲೆಯಲ್ಲಿ ಇಡೋಣ. |
04:01 | ನಂಬರ್ ಬಾಕ್ಸ್ ಅನ್ನು ಸರಾಗವಾಗಿ ಮೂವ್ ಮಾಡಲು, ನಂಬರ್ ಬಾಕ್ಸ್ ಅನ್ನು ಆಯ್ಕೆ ಮಾಡಿ ಮತ್ತು Shift ಕೀಯನ್ನು ಒತ್ತಿ. |
04:07 | ಈಗ, ನಾವು ಇದನ್ನು ಇನ್ನೂ ಕೆಳಗೆ ಮೂವ್ ಮಾಡೋಣ. |
04:11 | ಈ Draw ಫೈಲ್ ನ ಎರಡನೆಯ ಪುಟದಲ್ಲಿ ಮುಂದಿನ ಸಂಖ್ಯೆ ಸೇರ್ಪಡೆಯಾಗಿದೆಯೇ ಎಂಬುದನ್ನು ನಾವು ಪರಿಶೀಲಿಸೋಣ. |
04:17 | ಇಲ್ಲಿ ಪುಟಸಂಖ್ಯೆ ಇಲ್ಲ! |
04:20 | ನಾವು ಫೀಲ್ಡ್ ಅನ್ನು ಸೇರಿಸಿದ ಪೇಜ್ ನಲ್ಲಿ ಮಾತ್ರ ಪುಟಸಂಖ್ಯೆ ಸೇರ್ಪಡೆಯಾಗಿದೆ! |
04:26 | ಈಗ, ನಾವು ಪೇಜ್ ನಂಬರ್ ಫಾರ್ಮ್ಯಾಟ್ ಅನ್ನು ಹೇಗೆ ಬದಲಾಯಿಸುವುದು ಎಂಬುದನ್ನು ಕಲಿಯೋಣ. |
04:30 | Main ಮೆನುವಿನಿಂದ, Format ಅನ್ನು ಕ್ಲಿಕ್ ಮಾಡಿ ಮತ್ತು Page ಅನ್ನು ಆಯ್ಕೆ ಮಾಡಿ. |
04:36 | Page Setup ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
04:39 | Page ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
04:41 | Layout settings ನ ಕೆಳಗೆ, Formatಅನ್ನು ಆಯ್ಕೆ ಮಾಡಿ. |
04:45 | ಡ್ರಾಪ್ ಡೌನ್ ಲಿಸ್ಟ್ ನಿಂದ, a, b, cಯನ್ನು ಆಯ್ಕೆ ಮಾಡಿ. |
04:49 | OK ಕ್ಲಿಕ್ ಮಾಡಿ. |
04:52 | ಪುಟ ಸಂಖ್ಯೆಯು 1, 2, 3ರಿಂದ a, b, c ಆಗಿ ಮಾರ್ಪಟ್ಟಿದೆ. |
04:58 | ಇದೇ ರೀತಿ, ನೀವು ಇದನ್ನು ಯಾವುದೇ ಫಾರ್ಮ್ಯಾಟ್ ಗೆ ಬದಲಾಯಿಸಬಹುದು. |
05:01 | ಈಗ ನಾವು Date ಮತ್ತು Time ಫೀಲ್ಡ್ ಗಳನ್ನು ಸೇರಿಸುವುದನ್ನು ಕಲಿಯೋಣ. |
05:05 | ನಿಮ್ಮ Draw ಪೇಜ್ ನ ಮೇಲೆ Date ಮತ್ತು Time stampಗಳನ್ನು ಕೂಡ ನೀವು ಸೇರಿಸಬಹುದು. |
05:10 | ಇದನ್ನು ನೀವು Insert ಮತ್ತು Fields ನ ಮೇಲೆ ಕ್ಲಿಕ್ ಮಾಡುವುದರಿಂದ ಸಾಧಿಸಬಹುದು. |
05:14 | ಮೊದಲನೆಯದು Date(fixed) ಮತ್ತು Time(fixed). |
05:18 | ಇನ್ನೊಂದು Date(variable) ಮತ್ತು Time(variable) |
05:23 | Date(fixed) ಮತ್ತು Time(fixed) ಆಯ್ಕೆಗಳು ಪ್ರಕೃತ ದಿನಾಂಕ ಮತ್ತು ಸಮಯವನ್ನು ಸೇರಿಸುತ್ತವೆ. |
05:29 | ಈ ದಿನಾಂಕ ಮತ್ತು ಸಮಯದ ಮೂಲ್ಯಗಳು ಅಪ್ ಡೇಟ್ ಆಗಿರುವುದಿಲ್ಲ. |
05:33 | ಮತ್ತೊಂದೆಡೆ Date (variable) ಮತ್ತು Time (variable) ಆಯ್ಕೆಗಳು, |
05:37 | ನೀವು ಫೈಲನ್ನು ತೆರೆದಾಗ ಸ್ವಯಂ ಅಪ್ ಡೇಟ್ ಆಗುತ್ತವೆ. |
05:42 | ನಾವು ಇಲ್ಲಿ Time (variable)ಅನ್ನು ಸೇರಿಸೋಣ. |
05:46 | ಈಗ, ನಾವು ಬಾಕ್ಸನ್ನು ಎಳೆದು ಅದನ್ನು ಕೆಳಗಿನ ಬಲಮೂಲೆಯಲ್ಲಿ ಪುಟಸಂಖ್ಯೆಯ ಮೇಲುಗಡೆ ಇರಿಸೋಣ. |
05:56 | ಸೇರಿಸಿದ ಸಮಯವು ಪ್ರತಿ ಸಲ ನೀವು Draw ಪೇಜ್ ಅನ್ನು ತೆರೆದಾಗ ಪ್ರಕೃತ ಸಮಯವಾಗಿ ಅಪ್ ಡೇಟ್ ಆಗುತ್ತದೆ. |
06:03 | ಈಗ ನಾವು ಈ ಫೈಲನ್ನು ರಚಿಸಿದ ಲೇಖಕನ ಹೆಸರನ್ನು ಬರೆಯೋಣ. |
06:08 | ಇಲ್ಲಿ, ನಾವು ಮೊದಲನೆಯ ಪೇಜ್ ನಲ್ಲಿ ಲೇಖಕನ ಹೆಸರನ್ನು “Teacher. A. B.” ಎಂದು ಸೆಟ್ ಮಾಡೋಣ. |
06:17 | ಅದಕ್ಕಾಗಿ, ನಾವು Page one ಗೆ ಹೋಗೋಣ. |
06:19 | Main ಮೆನುಗೆ ಹೋಗಿ, Tools ಅನ್ನು ಆರಿಸಿ ಮತ್ತು Options ಮೇಲೆ ಕ್ಲಿಕ್ ಮಾಡಿ. |
06:24 | Options ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
06:27 | Options ಡೈಲಾಗ್ ಬಾಕ್ಸ್ ನಲ್ಲಿ, LibreOffice ಮೇಲೆ ಕ್ಲಿಕ್ ಮಾಡಿ ಮತ್ತು User Data ಮೇಲೆ ಕ್ಲಿಕ್ ಮಾಡಿ. |
06:34 | ಡೈಲಾಗ್ ಬಾಕ್ಸ್ ನ ಬಲ ಬದಿಗೆ, ನೀವು ಯೂಸರ್ ಡೇಟಾದ ಮಾಹಿತಿಯನ್ನು ಬರೆಯಬಹುದು. |
06:40 | ಇಲ್ಲಿ ನೀವು ನಿಮ್ಮ ಅವಶ್ಯಕತೆಗನುಸಾರವಾಗಿ ವಿವರಗಳನ್ನು ಬರೆಯಬಹುದು. |
06:44 | "First/Last Name/Initials"ನಲ್ಲಿ, ಅನುಕ್ರಮವಾಗಿ "Teacher", 'A', ಮತ್ತು 'B' ಎಂಬ ಪಠ್ಯವನ್ನು ಎಂಟರ್ ಮಾಡಿ. |
06:53 | OK ಕ್ಲಿಕ್ ಮಾಡಿ. |
06:55 | ಈಗ, Main ಮೆನುವಿನಿಂದ, Insert ಕ್ಲಿಕ್ ಮಾಡಿ, Fieldsಅನ್ನು ಆರಿಸಿ ಮತ್ತು Author ಅನ್ನು ಕ್ಲಿಕ್ ಮಾಡಿ. |
07:02 | Teacher A B ಎಂಬ ಹೆಸರು ಒಂದು ಟೆಕ್ಸ್ಟ್ ಬಾಕ್ಸ್ ನಲ್ಲಿ ಸೇರ್ಪಡೆಯಾಯಿತು. |
07:07 | ನಾವು ಈ ಬಾಕ್ಸನ್ನು ಎಳೆದು Draw ಪೇಜ್ ನ ಕೆಳ ಬಲ ಮೂಲೆಯಲ್ಲಿ Time ಫೀಲ್ಡ್ ನ ಸ್ವಲ್ಪ ಮೇಲೆ ಇರಿಸೋಣ. |
07:15 | ಈಗ, ನಾವು Draw ಪೇಜ್ ನಲ್ಲಿ ಸೇರಿಸಿದ ಫೀಲ್ಡ್ ಗಳನ್ನು ತೆಗೆದು ಹಾಕಲಿಚ್ಛಿಸಿದರೆ, ಅದು ಹೇಗೆ? |
07:21 | ಕೇವಲ ಟೆಕ್ಸ್ಟ್ ಬಾಕ್ಸನ್ನು ಆಯ್ಕೆ ಮಾಡಿ ಮತ್ತು Delete ಕೀಯನ್ನು ಒತ್ತಿ. |
07:25 | Author Name ಫೀಲ್ಡನ್ನು ನಾವು ಡಿಲೀಟ್ ಮಾಡೋಣ. |
07:28 | ಮತ್ತು ಈ ಕಾರ್ಯವನ್ನು undo ಮಾಡುವುದು ಹೇಗೆ? |
07:31 | ಸುಲಭ!.. ನೀವು Ctrl ಮತ್ತು Z ಕೀಗಳನ್ನು ಒಂದೇ ಸಲ ಒತ್ತಿ ಯಾವುದೇ ಕಾರ್ಯವನ್ನು undo ಮಾಡಬಹುದು. |
07:38 | ಕೊನೆಯ ಬಾರಿ ಮಾಡಿದ ಕಾರ್ಯ, ಅಂದರೆ, Author ಫೀಲ್ಡ್ ಅನ್ನು ಡಿಲೀಟ್ ಮಾಡುವುದು undoಗೊಂಡಿತು. |
07:45 | ಫೀಲ್ಡ್ ಮತ್ತೆ ಕಾಣಿಸುತ್ತಿದೆ. |
07:48 | ನಾವು Main ಮೆನುವಿನಿಂದ ಕೂಡ undo ಅಥವಾ redo ಮಾಡಬಹುದು. |
07:53 | Main ಮೆನುವಿನಿಂದ, Edit ಆಯ್ಕೆ ಮಾಡಿ ಮತ್ತು Redo ಕ್ಲಿಕ್ ಮಾಡಿ. |
07:57 | ಲೇಖಕರ ಹೆಸರು ಈಗ ಕಾಣಿಸುತ್ತಿಲ್ಲ! |
08:00 | Ctrl+Z ಕೀಗಳನ್ನು ಒತ್ತಿ ನಾವು ಮಾಡಿದ ಎಲ್ಲಾ ಫೀಲ್ಡ್ ಗಳ ಸೇರ್ಪಡೆಯನ್ನೂ undo ಮಾಡೋಣ. |
08:06 | undo ಮತ್ತು redo ಆಜ್ಞೆಗಳಿಗೆ ನೀವು ಕೀ ಬೋರ್ಡ್ನಿಂದ ಶಾರ್ಟ್ ಕಟ್ ಕೀಗಳನ್ನು ಕೂಡ ಉಪಯೋಗಿಸಬಹುದು. |
08:13 | ಯಾವುದೇ ಕಾರ್ಯವನ್ನು undo ಮಾಡಲು Ctrl ಮತ್ತು Z ಕೀಗಳನ್ನು ಜೊತೆಯಾಗಿ ಒತ್ತಿ. |
08:18 | ಯಾವುದೇ ಕಾರ್ಯವನ್ನು redo ಮಾಡಲು Ctrl ಮತ್ತು Y ಕೀಗಳನ್ನು ಜೊತೆಯಾಗಿ ಒತ್ತಿ. |
08:23 | ಈ ಟ್ಯುಟೋರಿಯಲ್ ಅನ್ನು ಒಮ್ಮೆ ನಿಲ್ಲಿಸಿ ಮತ್ತು ಈ ಅಸೈನ್ ಮೆಂಟನ್ನು ಮಾಡಿ. |
08:26 | ಲೇಖಕರ ಹೆಸರನ್ನು ಬದಲಾಯಿಸಿ ಮತ್ತು ಅದನ್ನು ಸೇವ್ ಮಾಡಿ. |
08:29 | ಈಗ, pageಗೆ ಇನ್ನೂ ಎರಡು arrowಗಳನ್ನು ಸೇರಿಸಿ. |
08:33 | ಎರಡನೇ ಪುಟದಲ್ಲಿ ಪುಟಸಂಖ್ಯೆ ಮತ್ತು ದಿನಾಂಕವನ್ನು ಸೇರಿಸಿ. |
08:38 | ಈಗ, ಕೊನೆಯ ಐದು ಕಾರ್ಯಗಳನ್ನು undo ಮತ್ತು redo ಮಾಡಿ. |
08:42 | undo ಮತ್ತು redo ಆಯ್ಕೆಗಳು ಎಲ್ಲಾ ಕಾರ್ಯಗಳನ್ನು undo ಮಾಡಬಲ್ಲವೇ ಅಥವಾ ಕೆಲವು ಕಾರ್ಯಗಳನ್ನು undo ಮಾಡಲಾಗದೇ ಎಂದು ಪರಿಶೀಲಿಸಿ. |
08:51 | ಈ ಪುಟವನ್ನು “WaterCycleSlide” ಎಂದು ಹೆಸರಿಸೋಣ. |
08:54 | Pages ಪೇನ್ ನಲ್ಲಿಯ ಸ್ಲೈಡ್ ಅನ್ನು ಆಯ್ಕೆ ಮಾಡಿ, ರೈಟ್ ಕ್ಲಿಕ್ ಮಾಡಿ ಮತ್ತು Rename Page ಅನ್ನು ಆಯ್ಕೆ ಮಾಡಿ. |
09:00 | Rename Page ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
09:03 | Name ಫೀಲ್ಡ್ ನಲ್ಲಿ, ನಾವು "WaterCycleSlide" ಎಂಬ ಹೆಸರನ್ನು ಎಂಟರ್ ಮಾಡೋಣ. |
09:08 | OK ಕ್ಲಿಕ್ ಮಾಡಿ. |
09:10 | ಈಗ, ನಾವು ಈ ಪೇಜ್ ನ ಮೇಲೆ ಕರ್ಸರ್ ಅನ್ನು ಇರಿಸೋಣ. |
09:14 | “WaterCycleSlide” ಎಂಬ ಹೆಸರು ಇಲ್ಲಿ ಪ್ರದರ್ಶಿತವಾಗಿರುವುದನ್ನು ನೀವು ಕಾಣಬಲ್ಲಿರಾ? |
09:18 | ಪುಟಕ್ಕೆ ಅನುಗುಣವಾದ ಹೆಸರನ್ನು ಕೊಡುವುದು ಒಳ್ಳೆಯ ಅಭ್ಯಾಸ. |
09:23 | WaterCycle ರೇಖಾಚಿತ್ರಕ್ಕೆ ಈಗ ನಾವು ಪ್ರಿಂಟಿಂಗ್ ಆಯ್ಕೆಗಳನ್ನು ಸೆಟ್ ಮಾಡೋಣ. |
09:28 | Main ಮೆನುವಿನಲ್ಲಿ, File ಕ್ಲಿಕ್ ಮಾಡಿ ನಂತರ Print ಅನ್ನು ಕ್ಲಿಕ್ ಮಾಡಿ. |
09:33 | ಪ್ರಿಂಟ್ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
09:36 | General ಮತ್ತು Options ಟ್ಯಾಬ್ ಗಳಲ್ಲಿನ ಸೆಟ್ಟಿಂಗ್ ಗಳನ್ನು (ಸಂಯೋಜನೆಗಳನ್ನು) ತಿಳಿದುಕೊಳ್ಳಲು, |
09:41 | LibreOffice Writer ಸೀರೀಸ್ ನಲ್ಲಿಯ Viewing and printing Documents ಎಂಬುದರ ಬಗೆಗಿನ ಟ್ಯುಟೋರಿಯಲ್ ಅನ್ನು ದಯವಿಟ್ಟು ನೋಡಿ. |
09:48 | ಎಡ ಭಾಗಕ್ಕೆ ನೀವು page preview ಏರಿಯಾವನ್ನು ಕಾಣುವಿರಿ. |
09:53 | Print ಡೈಲಾಗ್ ಬಾಕ್ಸ್ ನಲ್ಲಿಯ ಬಲ ಭಾಗ ನಾಲ್ಕು ಟ್ಯಾಬ್ ಗಳನ್ನು ಹೊಂದಿದೆ. |
09:58 | * General, LibreOffice Draw, Page Layout, Options. |
10:04 | ನಾವು 'LibreOffice Draw'ಗೆ ನಿರ್ದಿಷ್ಟವಾದ ಆಯ್ಕೆಗಳನ್ನು ನೋಡೋಣ. |
10:09 | LibreOffice Draw ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
10:13 | ನಾವು Page name ಮತ್ತು Date and Time ಬಾಕ್ಸ್ ಗಳನ್ನು ‘ಚೆಕ್’ ಮಾಡೋಣ. |
10:17 | ಇದು, ಚಿತ್ರದೊಂದಿಗೆ, ಪುಟದ ಹೆಸರು, ದಿನಾಂಕ ಮತ್ತು ಸಮಯವನ್ನು ಪ್ರಿಂಟ್ ಮಾಡುತ್ತದೆ. |
10:23 | ನಾವು ಚಿತ್ರವನ್ನು ಪ್ರಿಂಟ್ ಮಾಡಲು Original colors ಮತ್ತು Fit to printable page ಗಳನ್ನು ಆಯ್ಕೆ ಮಾಡೋಣ. |
10:29 | ನಿಮ್ಮ ಕಂಪ್ಯೂಟರ್ ನಲ್ಲಿಯ 'WaterCycle' ಚಿತ್ರವನ್ನು ಪ್ರಿಂಟ್ ಮಾಡಲು Print ಮೇಲೆ ಕ್ಲಿಕ್ ಮಾಡಿ. |
10:34 | ನೀವು ನಿಮ್ಮ ಪ್ರಿಂಟರ್ ಅನ್ನು ಸರಿಯಾಗಿ ಕಾನ್ ಫಿಗರ್ ಮಾಡಿದ್ದರೆ, ನಿಮ್ಮ ಚಿತ್ರವು ಈಗಾಗಲೇ ಪ್ರಿಂಟ್ ಆಗಲು ಶುರುವಾಗಿರಬೇಕು. |
10:40 | ಈ ರೀತಿ, ನಾವು LibreOffice Drawನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
10:45 | ಈ ಟ್ಯುಟೋರಿಯಲ್ ನಲ್ಲಿ, ನೀವು : |
10:48 | * Draw ಪೇಜ್ ಗೆ ಮಾರ್ಜಿನ್ ಗಳನ್ನು ಸೆಟ್ ಮಾಡುವುದನ್ನು, |
10:50 | * ಮತ್ತು ಪುಟ ಸಂಖ್ಯೆ, ದಿನಾಂಕ ಮತ್ತು ಸಮಯಗಳನ್ನು ಹೇಗೆ ಸೇರಿಸುವುದು ಎಂಬುದನ್ನು, |
10:54 | *ಕಾರ್ಯಗಳನ್ನು Undo ಮತ್ತು Redo ಮಾಡುವುದನ್ನು, |
10:57 | * ಪುಟದ ಹೆಸರನ್ನು ಮಾರ್ಪಡಿಸುವುದನ್ನು ಮತ್ತು |
10:58 | *ಒಂದು pageಅನ್ನು ಪ್ರಿಂಟ್ ಮಾಡುವುದನ್ನು ಕಲಿತಿದ್ದೀರಿ. |
11:01 | ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಇದೆ. |
11:03 | ಇನ್ನೂ ಎರಡು ಪುಟಗಳನ್ನು ಸೇರಿಸಿ. |
11:06 | ಹಿಂದಿನ ಟ್ಯುಟೋರಿಯಲ್ ನಲ್ಲಿ ನೀವು ರಚಿಸಿದ ಲೇಬಲ್ ಮತ್ತು ಆಮಂತ್ರಣದ ಪ್ರತಿಯೊಂದು ಪುಟಕ್ಕೆ ಬೇರೆ ಬೇರೆ ಮಾರ್ಜಿನ್ ಗಳನ್ನು ಸೆಟ್ ಮಾಡಿ ಮತ್ತು ಪ್ರಿಂಟ್ ಮಾಡಿ. |
11:14 | ಈ ಪ್ರತಿಯೊಂದು ಪುಟಗಳಲ್ಲೂ Page count ಫೀಲ್ಡ್ ಅನ್ನು ಸೇರಿಸಿ ಮತ್ತು ಏನಾಗುತ್ತದೆ ಎಂಬುದನ್ನು ಗಮನಿಸಿ. |
11:21 | ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. |
11:24 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
11:28 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
11:32 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |
11:34 | * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
11:37 | *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
11:41 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
11:47 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. |
11:52 | ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
11:59 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]. |
12:10 | ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ.
ಧನ್ಯವಾದಗಳು. |