Introduction-to-Computers/C2/Google-Drive-Options/Kannada

From Script | Spoken-Tutorial
Revision as of 15:59, 18 December 2015 by Vasudeva ahitanal (Talk | contribs)

Jump to: navigation, search
Time
Narration
00:01 Google Drive options ಎಂಬ ‘ಸ್ಪೋಕನ್ ಟ್ಯುಟೋರಿಯಲ್’ ಗೆ (Spoken Tutorial) ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, 'Google Drive' ನಲ್ಲಿ ಲಭ್ಯವಿರುವ ಈ ಕೆಳಗಿನ ಆಯ್ಕೆಗಳ ಬಗ್ಗೆ ಕಲಿಯುವೆವು:
00:12 * ‘ಡಾಕ್ಯೂಮೆಂಟ್’, ಸ್ಪ್ರೆಡ್ ಶೀಟ್ ಮತ್ತು ‘ಪ್ರೆಸೆಂಟೇಶನ್’ ಗಳನ್ನು ಕ್ರಿಯೇಟ್ ಮಾಡುವುದು,
00:17 * ಫೈಲ್ ಹಾಗೂ ಫೋಲ್ಡರ್ ಗಳನ್ನು ಅಪ್ಲೋಡ್ ಮಾಡುವುದು ಹಾಗೂ
00:20 * ‘ಶೇರ್’ ಮಾಡಲು ಆಯ್ಕೆಗಳು.
00:22 ಈ ಟ್ಯುಟೋರಿಯಲ್ ಗಾಗಿ, ನಿಮಗೆ ‘ಇಂಟರ್ನೆಟ್’ನ ಸಂಪರ್ಕ ಮತ್ತು ಯಾವುದೇ ಒಂದು ‘ವೆಬ್ ಬ್ರೌಸರ್’ ಬೇಕಾಗುವುದು.
00:29 ನಾನು ‘Firefox’ (ಫೈರ್ಫಾಕ್ಸ್) ‘ವೆಬ್ ಬ್ರೌಸರ್’ಅನ್ನು ಬಳಸುತ್ತಿದ್ದೇನೆ.
00:33 ಇದಕ್ಕೂ ಮುನ್ನ ನಿಮಗೆ 'Gmail'ನ (ಜಿ ಮೇಲ್) ಬಗ್ಗೆ ತಿಳಿದಿರಬೇಕು.
00:38 ಇಲ್ಲದಿದ್ದರೆ, ದಯವಿಟ್ಟು 'Gmail' ಗೆ ಸಂಬಂಧಿತ ಟ್ಯುಟೋರಿಯಲ್ ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ನೋಡಿ.
00:43 ನಾವೀಗ ಪ್ರಾರಂಭಿಸೋಣ.
00:45 ವೆಬ್-ಬ್ರೌಸರ್ ಅನ್ನು ಓಪನ್ ಮಾಡಿ ಮತ್ತು ನಿಮ್ಮ 'gmail' ಅಕೌಂಟ್ ನಲ್ಲಿ ಲಾಗ್-ಇನ್ ಮಾಡಿ.
00:49 ನಾನು ಈಗಾಗಲೇ ಲಾಗಿನ್ ಮಾಡಿದ್ದೇನೆ.
00:51 ಮೇಲ್ಗಡೆ ಬಲಭಾಗದಲ್ಲಿ, ನಮ್ಮ ಹೆಸರಿನ ಬದಿಯಲ್ಲಿ, ನಾವು ಒಂದು 'grid' ಐಕಾನನ್ನು ನೋಡಬಹುದು.
00:56 ನಾವು ‘ಮೌಸ್’ಅನ್ನು ಇದರ ಮೇಲೆ ಕೊಂಡೊಯ್ದಾದಾಗ, 'Apps' ಎಂಬ ಟೆಕ್ಸ್ಟ್ ಕಾಣುತ್ತದೆ. ಇದರ ಮೇಲೆ ಮೇಲೆ ಕ್ಲಿಕ್ ಮಾಡಿ.
01:02 ಇದು, ಕೆಳಗೆ ಹೇಳಿದಂತಹ ಕೆಲವು 'google apps' ಗಳನ್ನು ನಮಗೆ ತೋರಿಸುವುದು:
  • 'google plus'
  • 'Search'
  • 'YouTube'
  • 'Maps'
  • 'PlayStore'
  • 'News'
  • 'Mail'
  • 'Drive'
  • 'Calendar' ಮತ್ತು
  • 'More'.
01:18 ನಾವು ಇವುಗಳ ಮೇಲೆ ಕ್ಲಿಕ್ ಮಾಡಿದರೆ, ನಮ್ಮನ್ನು ಆ ನಿರ್ದಿಷ್ಟ 'google app'ಗೆ ಕೊಂಡೊಯ್ಯಲಾಗುವುದು.
01:24 ನಮ್ಮ ಆದ್ಯತೆಗೆ ಅನುಗುಣವಾಗಿ, 'apps' ಐಕಾನ್ ಗಳನ್ನು ಅತ್ತಿತ್ತ ಎಳೆಯುವುದರ ಮೂಲಕ ನಾವು ಈ ಸೂಚಿಯನ್ನು ಮರು ವ್ಯವಸ್ಥೆ ಸಹ ಮಾಡಬಹುದು.
01:32 ಈ ಟ್ಯುಟೋರಿಯಲ್ ನಲ್ಲಿ, ವಿಶೇಷವಾಗಿ ನಾವು 'Drive' ನ ಬಗ್ಗೆ ಕಲಿಯುವೆವು.
01:35 ಹೀಗಾಗಿ, ನಾನು 'Drive' ನ ಮೇಲೆ ಕ್ಲಿಕ್ ಮಾಡುತ್ತೇನೆ.
01:39 ಇದು, 'Google Drive' ಪೇಜನ್ನು ಒಂದು ಹೊಸ ಟ್ಯಾಬ್ ನಲ್ಲಿ ಓಪನ್ ಮಾಡುವುದು.
01:43 ‘ಪೇಜ್’ನ ಮೇಲ್ಗಡೆಯಲ್ಲಿ, ನಾವು ಒಂದು ‘ಸರ್ಚ್ ಬಾರ್’ಅನ್ನು ನೋಡಬಹುದು.
01:47 ಎಡಗಡೆಗೆ ಕೆಲವು ಮೆನ್ಯೂ ಗಳಿವೆ.
01:51 ಮತ್ತು ಮೇಲ್ಗಡೆ ಬಲಭಾಗದಲ್ಲಿ ಕೆಲವು ಐಕಾನ್ ಗಳಿರುತ್ತವೆ.
01:55 ಮಧ್ಯದಲ್ಲಿ ನಾವು ಎರಡು ‘ಫೈಲ್’ಗಳನ್ನು ನೋಡಬಹುದು.
01:59 ಮೊದಲನೆಯದು, ಅಕೌಂಟ್ ಅನ್ನು ಕ್ರಿಯೇಟ್ ಮಾಡುವಾಗ, ‘Google’ ತಂಡದವರು ನಮ್ಮ ಜೊತೆಗೆ ಹಂಚಿಕೊಂಡ ಫೈಲ್ ಹಾಗೂ
02:05 ಎರಡನೆಯದು, ಈ ಮೊದಲು ನಾವೇ ಅಪ್ಲೋಡ್ ಮಾಡಿದ ಫೈಲ್ ಆಗಿದೆ.
02:10 ಈಗ, ನಾವು ಎಡಭಾಗದಲ್ಲಿರುವ ಮೆನ್ಯೂಗಳತ್ತ ಒಮ್ಮೆ ನೋಡೋಣ.
02:14 ನಾವು ಈ ಕೆಳಗಿನ ಮೆನ್ಯೂಗಳನ್ನು ಪಡೆದಿದ್ದೇವೆ:
  • 'New'
  • 'My Drive'
  • 'Shared with me'
  • 'Google Photos'
  • 'Recent'
  • 'Starred' ಮತ್ತು
  • 'Trash'.
02:27 ಡೀಫಾಲ್ಟ್ ಆಗಿ, “My Drive” ಎಂಬ ಮೆನ್ಯೂ ಆಯ್ಕೆಯಾಗುವುದು ಮತ್ತು ಅದರಲ್ಲಿರುವುದನ್ನು ಮಧ್ಯದಲ್ಲಿ ತೋರಿಸಲಾಗುವುದು.
02:34 ಮಧ್ಯಭಾಗದಲ್ಲಿ, ಎಲ್ಲ ಫೈಲ್ ಮತ್ತು ಫೋಲ್ಡರ್ ಗಳನ್ನು ತೋರಿಸಲಾಗುವುದು.
02:38 ಹೀಗಾಗಿ, ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಅಪ್ಲೋಡ್ ಮಾಡಿದ 'PDF' ಮತ್ತು 'ZIP' ಫೈಲ್ ಗಳನ್ನು ಇಲ್ಲಿ ನೋಡಬಹುದು.
02:47 ನಮ್ಮಿಂದ ಕ್ರಿಯೇಟ್ ಮಾಡಲಾದ ಅಥವಾ ಅಪ್ಲೋಡ್ ಮಾಡಲಾದ ಫೈಲ್ ಗಳನ್ನು “My Drive” ನ ಅಡಿಯಲ್ಲಿ ಸ್ಟೋರ್ ಮಾಡಲಾಗುವುದು.
02:53 “Shared with me” ಎಂಬುದು ಮುಂದಿನ ಮೆನ್ಯೂ ಆಗಿದೆ. ನಾನು ಇದರ ಮೇಲೆ ಕ್ಲಿಕ್ ಮಾಡುತ್ತೇನೆ.
02:58 ಯಾರಾದರೂ ಒಬ್ಬರು ಒಂದು ಫೈಲ್ ಅಥವಾ ಡಾಕ್ಯೂಮೆಂಟ್ ಅನ್ನು ನನ್ನೊಂದಿಗೆ ಹಂಚಿಕೊಂಡರೆ, ಅದನ್ನು ಈ ಮೆನ್ಯೂನಡಿಯಲ್ಲಿ ತೋರಿಸಲಾಗುವುದು.
03:03 ಸಧ್ಯಕ್ಕೆ, ಯಾರೂ ಯಾವ ಫೈಲ್ ಅನ್ನು ನನ್ನೊಂದಿಗೆ ‘ಶೇರ್’ ಮಾಡಿಲ್ಲ. ಹೀಗಾಗಿ, ಇದು ಬರಿದಾಗಿದೆ.
03:09 ಇತ್ತೀಚೆಗೆ ಗೂಗಲ್, 'Drive' ನ ಒಳಗಿನ 'Google Photos'ಅನ್ನು ಆಕ್ಸೆಸ್ ಮಾಡಲು, ಒಂದು ‘ಶಾರ್ಟ್ಕಟ್ ಲಿಂಕ್’ಅನ್ನು ಕ್ರಿಯೇಟ್ ಮಾಡಿದೆ.
03:15 ನಾವು ಈ ಟ್ಯುಟೊರಿಯಲ್ ನಲ್ಲಿ, ಈ ಆಯ್ಕೆಯನ್ನು ಬಿಟ್ಟುಬಿಡೋಣ.
03:19 “Recent” ಎಂಬ ಮೆನ್ಯೂ, ಇತ್ತೀಚೆಗೆ ಓಪನ್ ಮಾಡಿದ ಫೈಲ್ ಗಳ ಅಥವಾ ಡಾಕ್ಯೂಮೆಂಟ್ ಗಳ ಲಿಸ್ಟ್ ಅನ್ನು ತೋರಿಸುವುದು.
03:25 ಇದು, “My Drive” ಮತ್ತು “Shared with me” ಇವೆರಡರಲ್ಲಿಯೂ ಇರುವುದನ್ನು ತೋರಿಸುವುದು.
03:30 ಹೀಗಾಗಿ, ಇಲ್ಲಿ ನಾವು 'pdf' ಮತ್ತು 'zip' ಫೈಲ್ ಗಳನ್ನು ನೋಡಬಹುದು. ಏಕೆಂದರೆ, ನಾವು ಅವುಗಳನ್ನು ಈ ಮೊದಲು ಓಪನ್ ಮಾಡಿದ್ದೆವು.
03:37 'Starred' ಎಂಬ ಮೆನ್ಯೂ ನ ಅಡಿಯಲ್ಲಿ, ನಾವು 'Important' ಎಂದು ಗುರುತಿಸಿದ ಫೈಲ್ ಅಥವಾ ಡಾಕ್ಯೂಮೆಂಟ್ ಅನ್ನು ತೋರಿಸಲಾಗುವುದು.
03:45 ನಾವು 'My Drive' ಮೆನ್ಯೂಗೆ ಹಿಂದಿರುಗೋಣ ಮತ್ತು ನಮ್ಮ'pdf' ಫೈಲ್ ನ ಮೇಲೆ ರೈಟ್-ಕ್ಲಿಕ್ ಮಾಡೋಣ.
03:51 ಈಗ, 'Add Star' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
03:55 ಆಮೇಲೆ, 'Starred' ಎಂಬ ಮೆನ್ಯೂ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಮ್ಮ ಫೈಲ್ ಇದೆ.
04:00 ನಾನು ಈ ಫೈಲ್ ನ ಒಂದು ನಕಲನ್ನು (copy) ಮಾಡುತ್ತೇನೆ.
04:03 ಆದ್ದರಿಂದ, ಮತ್ತೊಮ್ಮೆ ಫೈಲ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ' Make a copy' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
04:10 ಈಗ ನಮ್ಮ ಹತ್ತಿರ ಎರಡು ಫೈಲ್ ಗಳಿವೆ.
04:13 ಅವುಗಳಲ್ಲಿ ಒಂದನ್ನು ನಾವು ತೆಗೆದುಹಾಕೋಣ (ಡಿಲೀಟ್). ಫೈಲ್ ಅನ್ನು ಆಯ್ಕೆಮಾಡಿ ಮತ್ತು ಕೀಬೋರ್ಡ್ ಮೇಲಿನ ‘Delete’ ಕೀಯನ್ನು ಒತ್ತಿ.
04:20 ತೆಗೆದುಹಾಕಲಾದ ಫೈಲ್ ಅಥವಾ ಡಾಕ್ಯೂಮೆಂಟ್ ಗಳನ್ನು 'Trash' ಮೆನ್ಯೂ ನ ಅಡಿಯಲ್ಲಿ ತೋರಿಸಲಾಗುವುದು.
04:25 ಆದರೆ, ಈ ತೆಗೆದುಹಾಕುವಿಕೆ ತಾತ್ಕಾಲಿಕವಾಗಿದೆ.
04:28 “Empty Trash” ಆಯ್ಕೆಯನ್ನು ಆರಿಸಿಕೊಳ್ಳುವುದರ ಮೂಲಕ 'Trash' ಮೆನ್ಯೂದಿಂದ ನಾವು ಎಲ್ಲ ಫೈಲ್ ಗಳನ್ನು ಶಾಶ್ವತವಾಗಿ ತೆಗೆದುಹಾಕಬಹುದು.
04:36 “Trash” ಮೆನ್ಯೂನಲ್ಲಿನ ಎಲ್ಲ ಫೈಲ್ ಗಳು, 30 ದಿನಗಳ ನಂತರ 'ಗೂಗಲ್ ಸರ್ವರ್' ನಿಂದ ತಮ್ಮಷ್ಟಕ್ಕೆ ತಾವೇ ಶಾಶ್ವತವಾಗಿ ತೆಗೆದುಹಾಕಲ್ಪಡುತ್ತವೆ.
04:44 ಈಗ, ಫೈಲ್ ಮತ್ತು ಫೋಲ್ಡರ್ ಗಳನ್ನು ಹೇಗೆ 'ಕ್ರಿಯೇಟ್' ಮತ್ತು 'ಅಪ್ಲೋಡ್' ಮಾಡುವುದೆಂದು ನಾವು ಕಲಿಯೋಣ.
04:49 ಇದನ್ನು ಮಾಡಲು ನಾಲ್ಕು ವಿಧಾನಗಳಿವೆ:
  • ಮೊದಲನೆಯದು - ಎಡಭಾಗದಲ್ಲಿರುವ ಕೆಂಪು ಬಣ್ಣದ ‘New’ ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡುವುದು.
04:56 * ಎರಡನೆಯ ವಿಧಾನ: ‘My Drive’ ಎಂಬ ಆಯ್ಕೆಯ ಮೇಲೆ ರೈಟ್-ಕ್ಲಿಕ್ ಮಾಡುವುದು.
05:00 ಈಗ, ನಾವು 'My Drive' ಗೆ ಹಿಂದಿರುಗೋಣ.
  • ಮೂರನೇಯದು, ‘My Drive’ ಎಂಬ ಆಯ್ಕೆಯ ಮಧ್ಯಭಾಗದಲ್ಲಿ ನಾವು ರೈಟ್-ಕ್ಲಿಕ್ ಮಾಡಬಹುದು.
05:09 * ಕೊನೆಯದಾಗಿ, ಮೇಲ್ಗಡೆ ಇರುವ ‘My Drive ಡ್ರಾಪ್-ಡೌನ್’ ಮೆನ್ಯೂದ ಮೇಲೆ ಕ್ಲಿಕ್ ಮಾಡುವುದು.
05:14 ನಾವು 'New' ಎಂಬ ಆಯ್ಕೆಯನ್ನು ತಿಳಿದುಕೊಳ್ಳೋಣ.

'New' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.

05:19 ಇದು,
  • 'Folder'
  • 'File upload'
  • 'Google Docs, Sheets, Slides' ಮತ್ತು 'More' ಗಳಂತಹ ಕೆಲವು ಆಯ್ಕೆಗಳನ್ನು ತೋರಿಸುವುದು.
05:28 ನಾವು ಪ್ರತಿಯೊಂದು ಆಯ್ಕೆಯನ್ನು ಒಂದೊಂದಾಗಿ ನೋಡುವೆವು.
05:31 ನಾವು 'Folder' ಆಯ್ಕೆಯನ್ನು ಬಳಸಿ ಒಂದು ಫೋಲ್ಡರ್ ಅನ್ನು ಕ್ರಿಯೇಟ್ ಮಾಡಬಹುದು.
05:34 ಇದರ ಮೇಲೆ ಕ್ಲಿಕ್ ಮಾಡಿ. ತಕ್ಷಣ ಇದು ನಮಗೆ ಒಂದು ಹೆಸರಿಗಾಗಿ ಸೂಚಿಸುವುದು.
05:40 ನಾವು ಈ ಫೋಲ್ಡರ್ ಅನ್ನು 'Spoken Tutorial' ಎಂದು ಹೆಸರಿಸಿ, 'Create 'ಬಟನ್ ನ ಮೇಲೆ ಕ್ಲಿಕ್ ಮಾಡೋಣ.
05:48 ಡೀಫಾಲ್ಟ್ ಆಗಿ, ಈ ಫೋಲ್ಡರ್, 'My drive' ನ ಅಡಿಯಲ್ಲಿ ಕಾಣಿಸಿಕೊಳ್ಳುವುದು.
05:52 ಇಲ್ಲಿ, ಮಧ್ಯಭಾಗದಲ್ಲಿ, ಇದನ್ನು ನಾವು ನೋಡಬಹುದು.
05:56 ಫೋಲ್ಡರ್ ಗಳು, ನಮ್ಮ ಫೈಲ್ ಗಳನ್ನು ವ್ಯವಸ್ಥಿತವಾಗಿಡಲು ನಮಗೆ ಸಹಾಯಮಾಡುತ್ತವೆ.
06:00 ಆದ್ದರಿಂದ, ನಾವು ಪ್ರತ್ಯೇಕ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಬಹುದು. ಉದಾ - 'personal, work' ಇತ್ಯಾದಿ.
06:07 ಯಾವುದೇ ಫೈಲ್ ಅನ್ನು 'ಅಪ್ಲೋಡ್' ಮಾಡಲು - ಮೊದಲು ‘New’ ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. ಆಮೇಲೆ ‘ File upload’ನ ಮೇಲೆ ಕ್ಲಿಕ್ ಮಾಡಿ.
06:13 ಇದು ಒಂದು ‘ಫೈಲ್ ಬ್ರೌಸರ್ ವಿಂಡೋ’ಅನ್ನು ಓಪನ್ ಮಾಡುವುದು.
06:16 ನಿಮಗೆ ಅಪ್ಲೋಡ್ ಮಾಡಬೇಕಾಗಿರುವ ಫೈಲ್ ಅನ್ನು ಬ್ರೌಸ್ ಮಾಡಿ ಮತ್ತು ಆಯ್ಕೆಮಾಡಿ.
06:19 ನಾನು “xyz.odt” ಎಂಬ ಫೈಲ್ ಅನ್ನು 'Desktop' ನಿಂದ ಆಯ್ಕೆಮಾಡಿ, 'Open' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
06:26 ಕೆಳತುದಿಯ ಬಲಭಾಗದಲ್ಲಿ, ಅಪ್ಲೋಡ್ ಆಗುತ್ತಿರುವುದರ ಪ್ರಗತಿಯನ್ನು (progress) ನಾವು ನೋಡಬಹುದು.
06:30 ಫೈಲ್ ನ ಸೈಜ್ ಗೆ ಮತ್ತು ಇಂಟರ್ನೆಟ್ ನ ವೇಗಕ್ಕೆ ಅನುಗುಣವಾಗಿ ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು.
06:35 ಒಮ್ಮೆ ಪೂರ್ತಿಗೊಂಡರೆ, ಅಪ್ಲೋಡ್ ಮಾಡಿದ ಫೈಲ್ ಅನ್ನು ಮಧ್ಯಭಾಗದಲ್ಲಿ ತೋರಿಸಲಾಗುವುದು.
06:41 ಈಗ, ಕೆಳಗಿರುವ 'ಪ್ರೊಗ್ರೆಸ್ ವಿಂಡೋ'ಅನ್ನು ಕ್ಲೋಸ್ ಮಾಡಿ.
06:45 ಇದೇ ರೀತಿ, ನಾವು 'Folder upload' ಆಯ್ಕೆಯನ್ನು ಬಳಸಿ, ‘Drive’ನಲ್ಲಿ ಫೋಲ್ಡರ್ ಅನ್ನು ಅಪ್ಲೋಡ್ ಮಾಡಬಹುದು.
06:52 ಈ ವೈಶಿಷ್ಟ್ಯವು ಕೆಲವು ಬ್ರೌಸರ್ ಗಳಲ್ಲಿ ಮಾತ್ರ ಲಭ್ಯವಿರಬಹುದು. ಉದಾ: 'Google Chrome'.
06:59 ನಾವು ನಮ್ಮ ಅಪ್ಲೋಡ್ ಮಾಡಿದ ಫೈಲ್ ಅನ್ನು, ನಮ್ಮ ‘Spoken Tutorial’ ಫೋಲ್ಡರ್ ನ ಒಳಗೆ ಹೇಗೆ ಹಾಕಬಹುದು?
07:04 ಸರಳವಾಗಿ ಫೈಲ್ ಅನ್ನು ಹೀಗೆ ಎಳೆದು ತನ್ನಿ ಮತ್ತು ಫೋಲ್ಡರ್ ನಲ್ಲಿ ಹಾಕಿ (ಡ್ರ್ಯಾಗ್ ಆಂಡ್ ಡ್ರಾಪ್).
07:09 ಈಗ, ಎಡಭಾಗದಲ್ಲಿ, ‘My Drive’ ಆಯ್ಕೆಯತ್ತ ಹತ್ತಿರದಿಂದ ನೋಡಿ.
07:14 ಅದರ ಎಡಭಾಗದಲ್ಲಿ ಒಂದು ಚಿಕ್ಕ ತ್ರಿಕೋನವನ್ನು ಗಮನಿಸಿ.
07:18 ಇದರ ಮೇಲೆ ಕ್ಲಿಕ್ ಮಾಡಿದರೆ, ‘My Drive’ ನ ಅಡಿಯಲ್ಲಿ ಸಬ್-ಫೋಲ್ಡರ್ ಗಳನ್ನು ತೋರಿಸುವುದು.
07:22 ನೋಡಿ, ಇಲ್ಲಿ ನಮ್ಮ ‘Spoken Tutorial’ ಫೋಲ್ಡರ್ ಇದೆ ಮತ್ತು ಇಲ್ಲಿ ಒಳಗಡೆ ಫೈಲ್ 'xyz.odt' ಇದೆ.
07:31 ನಮ್ಮ ದಿನನಿತ್ಯದ ಕೆಲಸಕ್ಕಾಗಿ, ನಾವು ಡಾಕ್ಯೂಮೆಂಟ್ ಗಳನ್ನು, ಸ್ಪ್ರೆಡ್ಶೀಟ್ ಗಳನ್ನು ಮತ್ತು ಪ್ರೆಸೆಂಟೇಶನ್ ಗಳನ್ನು ಬಳಸುತ್ತೇವೆ.
07:36 ಇವುಗಳನ್ನು 'Drive' ನ ಮೇಲೆ ಕ್ರಿಯೇಟ್ ಮಾಡಲು ಮತ್ತು ನಿಭಾಯಿಸಲು ಸಾಧ್ಯವಿದೆಯೋ ಹೇಗೆ?
07:39 ಹೌದು, ಇದು ಸಾಧ್ಯವಿದೆ. ‘ಗೂಗಲ್ ಡ್ರೈವ್’ (Google Drive) ನಲ್ಲಿ, ನಾವು ಡಾಕ್ಯೂಮೆಂಟ್ ಗಳನ್ನು, ಸ್ಪ್ರೆಡ್ಶೀಟ್ ಗಳನ್ನು ಮತ್ತು ಪ್ರೆಸೆಂಟೇಶನ್ ಗಳನ್ನು ಯಾವುದೇ ‘Office Suite’ ನಲ್ಲಿ ಮಾಡುವಂತೆಯೇ ಕ್ರಿಯೇಟ್ ಮಾಡಬಹುದು.
07:50 ಹೀಗಾಗಿ, ಡಾಕ್ಯೂಮೆಂಟ್ ಗಳನ್ನು ಕ್ರಿಯೇಟ್ ಮಾಡಲು 'Google Docs' ಅನ್ನು (ಗೂಗಲ್ ಡಾಕ್ಸ್),
07:54 ಸ್ಪ್ರೆಡ್ಶೀಟ್ ಗಳನ್ನು ಕ್ರಿಯೇಟ್ ಮಾಡಲು, 'Google Sheets' ಅನ್ನು (ಗೂಗಲ್ ಶೀಟ್ಸ್)
07:57 ಮತ್ತು ಪ್ರೆಸೆಂಟೇಶನ್ ಗಳನ್ನು ಕ್ರಿಯೇಟ್ ಮಾಡಲು, 'Google Slides' (ಗೂಗಲ್ ಸ್ಲೈಡ್ಸ್) ಗಳನ್ನು ನಾವು ಪಡೆದಿದ್ದೇವೆ.
08:01 ಇಲ್ಲಿ, 'Google Docs' ಬಳಸಿ ಒಂದು ಡಾಕ್ಯೂಮೆಂಟ್ ಅನ್ನು ಕ್ರಿಯೇಟ್ ಮಾಡುವುದನ್ನು ಮಾತ್ರ ನಾನು ಮಾಡಿ ತೋರಿಸುವೆನು.
08:08 ಒಂದು ಹೊಸ ಡಾಕ್ಯೂಮೆಂಟ್ ಅನ್ನು ಕ್ರಿಯೇಟ್ ಮಾಡಲು, 'New' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ ಮತ್ತು 'Google Docs' ಅನ್ನು ಆಯ್ಕೆಮಾಡಿ.
08:14 ಇದು, ಹೊಸ ಟ್ಯಾಬ್ ನಲ್ಲಿ ಒಂದು ಖಾಲಿ ಡಾಕ್ಯೂಮೆಂಟ್ ಅನ್ನು ಓಪನ್ ಮಾಡುವುದು.
08:19 ಮೆನ್ಯೂಗಳು ಮತ್ತು ಟೆಕ್ಸ್ಟ್ ಫಾರ್ಮ್ಯಾಟಿಂಗ್ ಆಯ್ಕೆಗಳು, 'Office Suite' ನಲ್ಲಿ ಇರುವಂತೆಯೇ ಆಗಿವೆ ಎಂಬುದನ್ನು ನಾವು ನೋಡಬಹುದು.
08:26 ಮೇಲ್ಗಡೆಯಲ್ಲಿ, ಡಾಕ್ಯೂಮೆಂಟ್ ನ ಶೀರ್ಷಿಕೆಯು 'Untitled document’ ಆಗಿದೆ ಎಂಬುದನ್ನು ಗಮನಿಸಿ.
08:31 ಈ ಟೈಟಲ್ ಅನ್ನು ಎಡಿಟ್ ಮಾಡಬಹುದು. ಟೈಟಲ್ ಅನ್ನು 'ರಿ-ನೇಮ್' (rename) ಮಾಡಲು, ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡಿ.
08:38 'Rename document' ವಿಂಡೋ ತೆರೆದುಕೊಳ್ಳುತ್ತದೆ.
08:41 ಇಲ್ಲಿ, ನಾವು ನಮ್ಮ ಡಾಕ್ಯೂಮೆಂಟ್ ಗೆ ಸೂಕ್ತವಾದ ಶೀರ್ಷಿಕೆಯನ್ನು ಟೈಪ್ ಮಾಡಬಹುದು.
08:46 ನಾನು 'My first google doc' ಎಂದು ಟೈಪ್ ಮಾಡುತ್ತೇನೆ ಮತ್ತು 'OK'ಯ ಮೇಲೆ ಕ್ಲಿಕ್ ಮಾಡುತ್ತೇನೆ.
08:53 ಟೈಟಲ್ ನಲ್ಲಿನ ಬದಲಾವಣೆಯನ್ನು ಗಮನಿಸಿ.
08:56 ನಂತರ, ನಾನು ಇಲ್ಲಿ “Welcome to Google Docs” ಎಂದು ಟೈಪ್ ಮಾಡುತ್ತೇನೆ.
09:02 ಈ ಡಾಕ್ಯೂಮೆಂಟ್ ಗೆ ಸೇರಿಸಿರುವ, ಬದಲಾಯಿಸಿರುವ ಅಥವಾ ತೆಗೆದುಹಾಕಿರುವುದೆಲ್ಲ ತನ್ನಷ್ಟಕ್ಕೆ ತಾನೇ ಸೇವ್ ಆಗುವುದು.
09:08 ಮೇಲ್ಗಡೆ 'Help' ಎಂಬ ಮೆನ್ಯೂವಿನ ಬದಿಯಲ್ಲಿ, “All changes saved in Drive” ಎಂಬ ಮೆಸೇಜ್ ಅನ್ನು ನೋಡಿ.
09:14 ಅದರ ಮೇಲೆ ಕ್ಲಿಕ್ ಮಾಡಿದರೆ, ಬಲಗಡೆಯಲ್ಲಿ 'Revision History' ಎಂಬುದನ್ನು ನಾವು ನೋಡಬಹುದು.
09:19 ಇದು ಕೊನೆಯ ಬದಲಾವಣೆಯ ದಿನಾಂಕ ಮತ್ತು ಸಮಯವನ್ನು ಹೊಂದಿದೆ ಮತ್ತು ಬದಲಾವಣೆಯನ್ನು ಯಾರು ಮಾಡಿದರು ಎಂಬುದನ್ನು ಸಹ ತೋರಿಸುತ್ತದೆ.
09:26 ಸಧ್ಯಕ್ಕೆ, ಈ ಡಾಕ್ಯೂಮೆಂಟ್ ಅನ್ನು ಯಾರ ಜೊತೆಗೂ ‘ಶೇರ್’ ಮಾಡಲಾಗಿಲ್ಲ.
09:30 ಹೀಗಾಗಿ, ನಾವು ದಿನಾಂಕ ಮತ್ತು ಸಮಯಗಳ ಜೊತೆಗೆ ‘Rebecca Raymond’ ಎಂಬ ಒಬ್ಬ ಬಳಕೆದಾರಳನ್ನು (user) ಮಾತ್ರ ನೋಡಬಹುದು.
09:37 ಈ ‘ಗೂಗಲ್ ಡಾಕ್’ಅನ್ನು ಅನೇಕ ಜನರೊಂದಿಗೆ ‘ಶೇರ್’ ಮಾಡಿದರೆ, 'revision history' ಯು, ಬೆರೆ ಬೆರೆ ಬಣ್ಣಗಳಲ್ಲಿ, ಪ್ರತಿಯೊಬ್ಬ ಯೂಸರ್ ನ ವಿವರಗಳನ್ನು, ಅವರಿಂದ ಮಾಡಲ್ಪಟ್ಟ ಎಲ್ಲ ಬದಲಾವಣೆಗಳೊಂದಿಗೆ ಪಟ್ಟಿ ಮಾಡುವುದು.
09:48 ನಾವು ಈ ವೈಶಿಷ್ಟ್ಯವನ್ನು, ಈ ಟ್ಯುಟೋರಿಯಲ್ ನಲ್ಲಿ ಸ್ವಲ್ಪ ಸಮಯದ ನಂತರ ನೋಡುವೆವು.
09:53 'Revision History' ಯನ್ನು ಕ್ಲೋಸ್ ಮಾಡಿ.
09:56 ನಾನು ಈ ಟ್ಯಾಬ್ ಅನ್ನು ಕ್ಲೋಸ್ ಮಾಡುತ್ತೇನೆ. ‘ಗೂಗಲ್ ಡಾಕ್’, ತನ್ನಷ್ಟಕ್ಕೆ ತಾನೇ ಸೇವ್ ಆಗುವುದು.
10:02 ಮತ್ತೊಮ್ಮೆ, ನಾವು ‘My Drive’ ನಲ್ಲಿ ಇದ್ದೇವೆ ಮತ್ತು ಇಲ್ಲಿ ನಮ್ಮ ಫೈಲ್ ಅನ್ನು ನೋಡಬಹುದು.
10:07 ಅದನ್ನು ಓಪನ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
10:10 ಈಗ, ನಾವು “Welcome to Google Docs” ಎಂಬ ಪಂಕ್ತಿಯನ್ನು ಎರಡು ಸಲ ‘ಕಾಪಿ-ಪೇಸ್ಟ್’ ಮಾಡಿ ಆಮೇಲೆ ಟ್ಯಾಬ್ ಅನ್ನು ಕ್ಲೋಸ್ ಮಾಡೋಣ.
10:17 ಫೈಲ್ ಅನ್ನು ಓಪನ್ ಮಾಡಲು, ಅದರ ಮೇಲೆ ಇನ್ನೊಮ್ಮೆ ಡಬಲ್-ಕ್ಲಿಕ್ ಮಾಡಿ.
10:20 ಮತ್ತೊಮ್ಮೆ, “Welcome to Google Docs” ಎಂಬ ಪಂಕ್ತಿಯನ್ನು ‘ಕಾಪಿ-ಪೇಸ್ಟ್’ ಮಾಡಿ.
10:26 ಈಗ, 'Revision History' ಯ ಮೇಲೆ ಕ್ಲಿಕ್ ಮಾಡಿ. ನಾವು ಫೈಲ್ ನ ಎಲ್ಲ ಪರಿಷ್ಕರಣೆಗಳನ್ನು (revision), ‘ಡೇಟ್-ಟೈಮ್’ ಸ್ಟಾಂಪ್ ಮತ್ತು ಯೂಸರ್ ನ ಮಾಹಿತಿಯೊಂದಿಗೆ ನೋಡಬಹುದು.
10:36 ಅನೇಕ ಪರಿಷ್ಕರಣೆಗಳು ಕಾಣಿಸದಿದ್ದರೆ, ಆಗ, ಕೆಳಗೆ ಇರುವ “Show more detailed revisions” ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
10:44 ಈ ಪರಿಷ್ಕರಣೆಗಳು (revisions) ಕಾಲಾನುಕ್ರಮದಲ್ಲಿ ಜೋಡಿಸಲ್ಪಟ್ಟಿರುತ್ತವೆ ಮತ್ತು ಇತ್ತೀಚಿನ ರಿವಿಶನ್ ಎಲ್ಲಕ್ಕಿಂತ ಮೇಲೆ ಇರುತ್ತದೆ.
10:50 ಪ್ರತಿಯೊಂದು ರಿವಿಶನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಈ ವೈಶಿಷ್ಟ್ಯವು ಹೇಗೆ ಕೆಲಸ ಮಾಡುತ್ತದೆ ಎಂದು ಅರ್ಥಮಾಡಿಕೊಳ್ಳಿ.
10:55 ಈಗ ನಾನು ಈ ಡಾಕ್ಯೂಮೆಂಟ್ ಅನ್ನು ಬೇರೆ ಇಬ್ಬರು ಬಳಕೆದಾರರೊಂದಿಗೆ ‘ಶೇರ್’ ಮಾಡುತ್ತೇನೆ.
10:59 ಇದಕ್ಕಾಗಿ, ಮೇಲಕ್ಕೆ ಬಲಗಡೆ ಇರುವ 'Share' ಬಟನ್ ನ ಮೇಲೆ ಕ್ಲಿಕ್ ಮಾಡಿ.
11:03 'Share with others' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
11:07 'People' ಎಂಬ ಟೆಕ್ಸ್ಟ್-ಬಾಕ್ಸ್ ನಲ್ಲಿ, ನಮಗೆ ಯಾರ ಜೊತೆಯಲ್ಲಿ ಈ ಡಾಕ್ಯೂಮೆಂಟ್ಅನ್ನು ಶೇರ್ ಮಾಡಬೇಕಾಗಿದೆಯೋ, ಅವರ ಇಮೇಲ್-id ಗಳನ್ನು ನಾವು ಕೊಡಬೇಕು.
11:15 ಆದ್ದರಿಂದ, ನಾನು ಹೀಗೆ ಟೈಪ್ ಮಾಡುವೆನು: “0808iambecky@gmail.com”.
11:23 ಈ ಮೊದಲು ನಾವು ಯಾರಿಗೆ ಇಮೇಲ್ ಗಳನ್ನು ಕಳಿಸಿದ್ದೆವೋ ಅವರ ಇಮೇಲ್-id ಗಳಿಗಾಗಿ, 'auto-fill' ಎಂಬ ವೈಶಿಷ್ಟ್ಯವು ಇಲ್ಲಿ ಲಭ್ಯವಿರುವುದನ್ನು ಗಮನಿಸಿ.
11:31 ಬೇರೆ ಬಳಕೆದಾರರೊಂದಿಗೆ ನಾವು ಡಾಕ್ಯೂಮೆಂಟ್ ಅನ್ನು, ಇಲ್ಲಿರುವ ಈ ಮೂರು ಮೋಡ್ ಗಳಲ್ಲಿ ‘ಶೇರ್’ ಮಾಡಬಹುದು.
11:36 ಈ ಮೂರು ಮೋಡ್ ಗಳನ್ನು ನೋಡಲು, ಇಲ್ಲಿ ಬಟನ್ ನ ಮೇಲೆ ಕ್ಲಿಕ್ ಮಾಡಿ:
  • 'Can edit'
  • 'Can comment'
  • 'Can view'.
11:44 'Can edit' ಆಯ್ಕೆಯು, ಬೇರೆ ಯೂಸರ್ ಗಳಿಗೆ, ಡಾಕ್ಯೂಮೆಂಟ್ ನಲ್ಲಿ ಬದಲಾವಣೆಗಳನ್ನು ಮಾಡಲು ಅನುಮತಿಯನ್ನು ಕೊಡುತ್ತದೆ.
11:51 'Can comment' ಆಯ್ಕೆಯು, ಬೇರೆ ಯೂಸರ್ ಗಳಿಗೆ, ಬದಲಾವಣೆಗಳನ್ನು ಸೂಚಿಸಲು ಅನುಮತಿಯನ್ನು ಕೊಡುತ್ತದೆ.
11:56 'Can view' ಆಯ್ಕೆಯು, ಬೇರೆ ಯೂಸರ್ ಗಳಿಗೆ, ನೋಡಲು ಮಾತ್ರ ಅನುಮತಿಯನ್ನು ಕೊಡುತ್ತದೆ.
12:00 ಅವರು ಬದಲಾವಣೆಗಳನ್ನು ಮಾಡಲು ಅಥವಾ ಸೂಚಿಸಲು ಸಾಧ್ಯವಿಲ್ಲ.
12:04 ನಾವು 'Can edit' ಆಯ್ಕೆಯನ್ನು '0808iambecky' ಗೆ ಕೊಡೋಣ.
12:09 ನಾನು 'stlibreoffice@gmail.com' ಅನ್ನು ಸಹ ಸೇರಿಸುವೆನು.
12:16 ಎರಡು ಇಮೇಲ್-id ಗಳ ನಡುವೆ, ಅಲ್ಪವಿರಾಮ ಚಿಹ್ನೆಯನ್ನು (comma) ಉಪಯೋಗಿಸುವುದನ್ನು ನೆನಪಿಡಿ.
12:21 ಇಮೇಲ್-id ಗಳನ್ನು ಸೇರಿಸಿದ ಕೂಡಲೆ, ಈ ವಿಂಡೋದಲ್ಲಿ ಬದಲಾವಣೆ ಆಗುವುದು.
12:25 ನಮಗೆ ‘Add a note’ ಎಂಬ ‘ಟೆಕ್ಸ್ಟ್ ಏರಿಯಾ’ ಸಿಗುವುದು.
12:28 ನಮಗೆ, ಈ ಡಾಕ್ಯೂಮೆಂಟ್ ನ ಬಗ್ಗೆ ಸ್ವಲ್ಪ ಮಾಹಿತಿಯನ್ನು ಬೇರೆ ಯೂಸರ್ ಗಳಿಗೆ ಕಳಿಸಬೇಕಾಗಿದ್ದರೆ ನಾವು ಅದನ್ನು ಇಲ್ಲಿ ಟೈಪ್ ಮಾಡಬಹುದು.
12:36 ನಾನು ಹೀಗೆ ಟೈಪ್ ಮಾಡುವೆನು: “Please find attached document for testing purpose. Kindly modify or suggest, as per the permission given to you.

Thanks Ray.Becky”

12:47 ಕೊನೆಯದಾಗಿ, ‘ಶೇರ್’ ಮಾಡುವ (sharing) ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು, 'Send' ಬಟನ್ ನ ಮೇಲೆ ಕ್ಲಿಕ್ ಮಾಡಿ.
12:52 ಇದು, ಬೇರೆ ಯೂಸರ್ ಗಳಿಗೆ ನಮ್ಮ ಮೆಸೇಜ್ ಮತ್ತು ‘ಶೇರ್’ ಮಾಡಲ್ಪಟ್ಟ ಡಾಕ್ಯೂಮೆಂಟ್ ಅನ್ನು ಒಂದು 'ಲಿಂಕ್' ನೊಂದಿಗೆ, ಇಮೇಲ್-ನ ಮುಖಾಂತರ (email notification) ಕಳಿಸುವುದು.
12:59 ಮತ್ತೊಮ್ಮೆ, 'Share' ಬಟನ್ ನ ಮೇಲೆ ಕ್ಲಿಕ್ ಮಾಡಿ.
13:02 ಆಮೇಲೆ 'Advanced' ನ ಮೇಲೆ ಕ್ಲಿಕ್ ಮಾಡಿ.
13:05 ಈಗ, ನಾವು 'stlibreoffice' ಎಂಬ ಯೂಸರ್ ಗಾಗಿ, ‘ಶೇರ್’ ಮಾಡುವ ಮೋಡ್ ಅನ್ನು 'Can comment' ಗೆ ಬದಲಾಯಿಸುವೆವು.
13:12 ಕೊನೆಯದಾಗಿ, 'Save changes' ಬಟನ್ ಮೇಲೆ, ಆಮೇಲೆ 'Done' ಬಟನ್ ನ ಮೇಲೆ ಕ್ಲಿಕ್ ಮಾಡಿ
13:18 ಮತ್ತು ಈ ಡಾಕ್ಯೂಮೆಂಟ್ ಅನ್ನು ಕ್ಲೋಸ್ ಮಾಡಿ (ಮುಚ್ಚಿಬಿಡಿ).
13:21 ಈಗ, ಇಬ್ಬರೂ ಯೂಸರ್ ಗಳು, ‘ಶೇರ್’ ಮಾಡಿದ ಡಾಕ್ಯೂಮೆಂಟ್ ನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದಾರೆ ಎಂದು ಊಹಿಸಿಕೊಳ್ಳಿ.
13:27 ಕೆಲವು ಸಮಯದ ನಂತರ ಡಾಕ್ಯೂಮೆಂಟ್ ಅನ್ನು ಮತ್ತೆ ಓಪನ್ ಮಾಡಿದಾಗ, ‘ಶೇರ್’ ಮಾಡಲ್ಪಟ್ಟ ಯೂಸರ್ ಗಳು ಮಾಡಿರುವ ಎಡಿಟ್ ಗಳನ್ನು ನಾವು ನೋಡಬಹುದು.
13:34 'stlibreoffice@gmail.com', ಕೇವಲ ಸೂಚಿಸುವ ಅನುಮತಿಯನ್ನು (‘suggest’ permission) ಪಡೆದಿದ್ದರಿಂದ, ಆ ಯೂಸರ್ ನಿಂದ ಕೊಡಲ್ಪಟ್ಟ ಸೂಚನೆಗಳನ್ನು ನಾವು ನೋಡಬಹುದು.
13:43 ನಿಮ್ಮ ಮೌಸ್ ಅನ್ನು, ‘ಸಜೆಶನ್ ಬಾಕ್ಸ್’ನ 'ಚೆಕ್' ಮತ್ತು 'ಕ್ರಾಸ್' ಗುರುತುಗಳ ಮೇಲೆ ಕೊಂಡೊಯ್ಯಿರಿ.
13:49 'ಚೆಕ್' ಗುರುತು, 'Accept suggestion' ಮತ್ತು 'ಕ್ರಾಸ್' ಗುರುತು 'Reject suggestion' ಎಂದು ಹೇಳುತ್ತದೆ.
13:56 ನಾನು ಒಂದು ಸೂಚನೆಯನ್ನು ಸ್ವೀಕರಿಸುತ್ತೇನೆ ಮತ್ತು ಇನ್ನೊಂದನ್ನು ತ್ಯಜಿಸುತ್ತೇನೆ.
14:02 ಇಲ್ಲಿ, ನಾವು '0808iambecky' ಯಿಂದ ಒಂದು ಕಾಮೆಂಟ್ ಅನ್ನು ನೋಡಬಹುದು
14:07 ಮತ್ತು ಇಲ್ಲಿ, 'Resolve' ಬಟನ್ ಅನ್ನು ನಾವು ನೋಡಬಹುದು.
14:11 'Can edit' ಆಯ್ಕೆಯನ್ನು ಪಡೆದ ಯೂಸರ್ ಗಳು, ಆ ಕಾಮೆಂಟ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ಕಾಮೆಂಟ್ ಗೆ ಉತ್ತರಿಸಬಹುದು.
14:18 ‘ಕಾಮೆಂಟ್ ಥ್ರೆಡ್’ (ಎಳೆ) ಅನ್ನು ತೆಗೆದುಹಾಕಲು, 'Resolve ' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
14:22 '0808iambecky' ಯಿಂದ, ಡಾಕ್ಯೂಮೆಂಟ್ ನಲ್ಲಿ ಮಾಡಲ್ಪಟ್ಟ ಯಾವುದೇ ಬದಲಾವಣೆಗಳನ್ನು ನಾವು ನೋಡಲು ಸಾಧ್ಯವಿಲ್ಲ.
14:29 ಈ ಯೂಸರ್, ಡಾಕ್ಯೂಮೆಂಟ್ ನಲ್ಲಿ ‘'edit' ಪರ್ಮಿಶನ್’ ಅನ್ನು ಪಡೆದಿದ್ದ ಎಂಬುದನ್ನು ನೆನಪಿಸಿಕೊಳ್ಳಿ.
14:34 ಹೀಗಾಗಿ, ಆ ಯೂಸರ್ ನಿಂದ ಯಾವ ಬದಲಾವಣೆಗಳು ಮಾಡಲ್ಪಟ್ಟಿವೆ ಎಂಬುದನ್ನು ನಾವು ಹೇಗೆ ಕಂಡುಹಿಡಿಯಬಹುದು?
14:39 ಅದಕ್ಕಾಗಿ, ನಾವು ನಮ್ಮ 'Revision History' ಯನ್ನು ತಪಾಸಣೆ (ಚೆಕ್) ಮಾಡಬಹುದು.
14:43 ಅದನ್ನು ಓಪನ್ ಮಾಡಲು, 'File' ನ ಮೇಲೆ, ಆನಂತರ 'See revision history' ಯ ಮೇಲೆ ಕ್ಲಿಕ್ ಮಾಡುವೆವು.
14:50 '0808iambecky', ಕೆಲವು ಬದಲಾವಣೆಗಳನ್ನು ಮಾಡಿದ್ದಾಳೆ ಎಂಬುದನ್ನು ನಾವು ನೋಡಬಹುದು ಮತ್ತು ಇದು ಬೇರೆ ಬಣ್ಣದಲ್ಲಿ ಕಾಣುತ್ತದೆ.
14:58 'stlibreoffice@gmail.com' ಯಿಂದ ಕೊಡಲ್ಪಟ್ಟ ಸೂಚನೆಗಳನ್ನು ಸಹ ನಾವು ಬೇರೆ ಬಣ್ಣದಲ್ಲಿ ನೋಡಬಹುದು.
15:05 ಅಷ್ಟೇ ಏಕೆ, ನಾವೇ ‘ಓನರ್’ (ಮಾಲೀಕ) ಆಗಿರುವುದರಿಂದ, ನಾವು ನಮ್ಮದೇ ಕೆಲಸವನ್ನು ಬೇರೆ ಬಣ್ಣದಲ್ಲಿ ನೋಡುವೆವು.
15:11 ನಾವು ಈಗ 'Revision History' ವಿಂಡೋಅನ್ನು ಕ್ಲೋಸ್ ಮಾಡೋಣ.
15:14 ಇಲ್ಲಿ, ಡಾಕ್ಯೂಮೆಂಟ್ ಅನ್ನು ‘ಶೇರ್’ ಮಾಡಲು ಬೇರೊಂದು ವಿಧಾನವಿದೆ. 'Share' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
15:20 ‘Share with others’ ಎಂಬ ವಿಂಡೋದಲ್ಲಿ, ಮೇಲಿನ ಬಲಭಾಗದಲ್ಲಿ, ‘Get shareable link’ ಎಂಬ ಟೆಕ್ಸ್ಟ್ ಅನ್ನು ನಾವು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ.
15:29 ಇದು “Anyone with the link can view” ಎಂದು ಹೇಳುತ್ತದೆ.
15:32 ಇದು, ಈ ಡಾಕ್ಯೂಮೆಂಟ್ ನ ಒಂದು ಲಿಂಕನ್ನು ಕ್ರಿಯೇಟ್ ಮಾಡುವುದು.
15:35 ಈಗ, ನಾವು ಯಾವುದೇ ಇಮೇಲ್-id ಗೆ ಈ ಲಿಂಕನ್ನು ಕಳಿಸಬಹುದು. ಎಂದರೆ, ಈ ಲಿಂಕನ್ನು ಹೊಂದಿದ ಯಾರೇ ಆದರೂ ಈ ಡಾಕ್ಯೂಮೆಂಟ್ ಅನ್ನು ನೋಡಬಹುದು.
15:44 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
15:47 ಸಂಕ್ಷಿಪ್ತವಾಗಿ,
15:49 ಈ ಟ್ಯುಟೋರಿಯಲ್ ನಲ್ಲಿ, ನಾವು:
  • ‘Google Drive’ ಅನ್ನು ಆಕ್ಸೆಸ್ ಮಾಡಲು,
  • ಫೈಲ್ ಗಳನ್ನು ಕ್ರಿಯೇಟ್ ಮತ್ತು ಅಪ್ಲೋಡ್ ಮಾಡಲು,
  • Google Docs ಕ್ರಿಯೇಟ್ ಮಾಡಲು ಮತ್ತು,
  • ‘ಶೇರ್’ ಮಾಡುವ ಆಯ್ಕೆಗಳನ್ನು ಬಳಸಲು ಕಲಿತಿದ್ದೇವೆ.
16:00 ಈ ಲಿಂಕ್ ನಲ್ಲಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
16:07 ನಾವು ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ನಮ್ಮ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
16:16 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
16:27 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .

ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal