Introduction-to-Computers/C2/Getting-to-know-computers/Kannada
From Script | Spoken-Tutorial
Revision as of 10:58, 14 December 2015 by Vasudeva ahitanal (Talk | contribs)
Time | Narration |
Getting to know computers ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ (Spoken Tutorial) ನಿಮಗೆ ಸ್ವಾಗತ. | |
ಈ ಟ್ಯುಟೋರಿಯಲ್ ನಲ್ಲಿ, ನಾವು | |
ಕಂಪ್ಯೂಟರ್ ನ ವಿವಿಧ ಘಟಕಗಳ ಬಗ್ಗೆ ಕಲಿಯುವೆವು. | |
ನಾವು ವಿವಿಧ ಘಟಕಗಳನ್ನು ಸೇರಿಸಲು ಸಹ ಕಲಿಯುವೆವು. | |
ಸಾಮಾನ್ಯವಾಗಿ, ಕಂಪ್ಯೂಟರ್ಗಳಲ್ಲಿ ಎರಡು ವಿಧಗಳಿವೆ - | |
‘ಡೆಸ್ಕ್ಟಾಪ್’ ಅಥವಾ 'ಪರ್ಸನಲ್ ಕಂಪ್ಯೂಟರ್' ಮತ್ತು 'ಲ್ಯಾಪ್ಟಾಪ್'. | |
ಇತ್ತೀಚಿನ ದಿನಗಳಲ್ಲಿ, ‘ಚಿಕ್ಕದಾಗಿ 'ಟ್ಯಾಬ್ಸ್' ಎಂದು ಕರೆಯಲ್ಪಡುವ ಟ್ಯಾಬ್ಲೆಟ್ PC’ ಗಳು ಸಹ ಸಾಕಷ್ಟು ಜನಪ್ರಿಯವಾಗಿವೆ. | |
ಕಂಪ್ಯೂಟರ್ ನ ಕಾರ್ಯಗಳು - | |
'ಕಂಪ್ಯೂಟರ್', ಅದರ ಗಾತ್ರವನ್ನು ಲೆಕ್ಕಿಸದೆ ಐದು ಮುಖ್ಯ ಕಾರ್ಯಗಳನ್ನು ಮಾಡುತ್ತದೆ - | |
* ಅದು 'ಡೇಟಾ' ಅಥವಾ 'ಇನ್ಸ್ಟ್ರಕ್ಶನ್'ಗಳನ್ನು 'ಇನ್ಪುಟ್' ಮುಖಾಂತರ ತೆಗೆದುಕೊಳ್ಳುತ್ತದೆ. | |
* 'ಡೇಟಾ'ವನ್ನು ಬಳಕೆದಾರನಿಗೆ (ಯೂಸರ್) ಬೇಕಾದಂತೆ ಪರಿಷ್ಕರಿಸುತ್ತದೆ. | |
* ಅದನ್ನು ಸಂಗ್ರಹಿಸುತ್ತದೆ. | |
* 'ಔಟ್ಪುಟ್'ನ ರೂಪದಲ್ಲಿ ಫಲಿತಾಂಶವನ್ನು ಕೊಡುತ್ತದೆ. | |
* 'ಕಂಪ್ಯೂಟರ್'ನ ಒಳಗಿನ ಎಲ್ಲ ಕಾರ್ಯಾಚರಣೆಯನ್ನು ನಿಯಂತ್ರಿಸುತ್ತದೆ. | |
'ಕಂಪ್ಯೂಟರ್'ನ ಮೂಲಭೂತ ಸಂಘಟನೆಯು, ಈ ‘ಬ್ಲಾಕ್ ಡೈಗ್ರಾಂ’ನಲ್ಲಿ ತೋರಿಸಿದಂತೆ ಇರುತ್ತದೆ. | |
'Input unit', | |
'Central Processing unit' ಹಾಗೂ | |
'Output unit'. | |
'ಇನ್ಪುಟ್ ಯುನಿಟ್', | |
'ಡೇಟಾ' ಮತ್ತು ಪ್ರೊಗ್ರಾಂಗಳನ್ನು 'ಕಂಪ್ಯೂಟರ್' ಸಿಸ್ಟಂನಲ್ಲಿ ಒಂದು ವ್ಯವಸ್ಥಿತ ರೀತಿಯಲ್ಲಿ ನಮೂದಿಸಲು (enter) ಸಹಾಯ ಮಾಡುತ್ತದೆ. | |
'ಕೀ ಬೋರ್ಡ್, ಮೌಸ್, ಕ್ಯಾಮೆರಾ' ಮತ್ತು 'ಸ್ಕ್ಯಾನರ್' ಇವುಗಳು ಕೆಲವು ಇನ್ಪುಟ್ ಸಾಧನಗಳಾಗಿವೆ. | |
'ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್' (Central Processing unit), | |
ಅಂಕಗಣಿತ ಮತ್ತು ಲಾಜಿಕಲ್ ಕ್ರಿಯೆಗಳನ್ನು (operations) ಮಾಡುತ್ತದೆ ಮತ್ತು | |
'ಡೇಟಾ' ಹಾಗೂ 'ಇನ್ಸ್ಟ್ರಕ್ಶನ್'ಗಳನ್ನು ಸಂಗ್ರಹಿಸುತ್ತದೆ (store). | |
ಸಾಮಾನ್ಯವಾಗಿ, 'ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್' ಅಥವಾ 'CPU' ಹೀಗೆ ಕಾಣುತ್ತದೆ. | |
ಯೂನಿಟ್ ನ ಮುಂದೆ ಹಾಗೂ ಹಿಂದೆ ಅನೇಕ 'ಪೋರ್ಟ್'ಗಳಿವೆ. | |
ಶೀಘ್ರದಲ್ಲಿಯೇ ನಾವು ಅವುಗಳ ಬಗ್ಗೆ ಕಲಿಯುವೆವು. | |
ಇದು 'ಡೇಟಾ' ಹಾಗೂ 'ಇನ್ಸ್ಟ್ರಕ್ಶನ್'ಗಳನ್ನು ತೆಗೆದುಕೊಳ್ಳುತ್ತದೆ, ಅವುಗಳನ್ನು ಪರಿಷ್ಕರಿಸುತ್ತದೆ ಮತ್ತು ಔಟ್ಪುಟ್ ಅಥವಾ ಫಲಿತಾಂಶವನ್ನು ಕೊಡುತ್ತದೆ. | |
ಈ ಕಾರ್ಯಾಚರಣೆಗಳನ್ನು (operations) ಮಾಡುವುದನ್ನು ‘ಪ್ರೊಸೆಸಿಂಗ್’ ಎಂದು ಕರೆಯಲಾಗುತ್ತದೆ. | |
ಆಮೇಲೆ ಔಟ್ಪುಟ್ ಅನ್ನು 'ಡೇಟಾ' ಹಾಗೂ 'ಇನ್ಸ್ಟ್ರಕ್ಶನ್'ಗಳ ಜೊತೆಗೆ ‘ಸ್ಟೋರೇಜ್ ಯೂನಿಟ್’ನಲ್ಲಿ ಸಂಗ್ರಹಿಸಲಾಗುತ್ತದೆ. | |
‘ಔಟ್ಪುಟ್ ಯೂನಿಟ್’ ಎಂಬ ಘಟಕವು, ಡೇಟಾದಿಂದ ಫಲಿತಾಂಶಗಳನ್ನು ಉತ್ಪಾದಿಸುವ ಪ್ರಕ್ರಿಯೆಯನ್ನು ಮಾಡುತ್ತದೆ. | |
'ಮಾನಿಟರ್' ಮತ್ತು 'ಪ್ರಿಂಟರ್'ಗಳು ಕೆಲವು ' ಔಟ್ಪುಟ್' ಸಾಧನಗಳಾಗಿವೆ. | |
ಸಾಮಾನ್ಯವಾಗಿ 'ಡೆಸ್ಕ್ಟಾಪ್ ಕಂಪ್ಯೂಟರ್', 4 ಮುಖ್ಯ ಘಟಕಗಳನ್ನು ಹೊಂದಿದೆ: | |
* 'Monitor' (ಮಾನಿಟರ್) | |
* 'CPU' (ಸಿ-ಪಿ-ಯು) | |
* 'Keyboard' (ಕೀ ಬೋರ್ಡ್) ಮತ್ತು | |
* 'ಮೌಸ್ ' (ಮೌಸ್). | |
'ಕ್ಯಾಮೆರಾ, ಪ್ರಿಂಟರ್' ಅಥವಾ 'ಸ್ಕ್ಯಾನರ್' ಗಳನ್ನು ಸಹ ಕಂಪ್ಯೂಟರ್ ಗೆ ಜೋಡಿಸಬಹುದು (connect). | |
ಇದು ಮಾನಿಟರ್ ಅಥವಾ ನಾವು ಕರೆಯುವಂತೆ 'ಕಂಪ್ಯೂಟರ್ ಸ್ಕ್ರೀನ್' ಆಗಿದೆ. | |
ಇದು 'TV ಪರದೆ'ಯ ಹಾಗೆ ಕಾಣುತ್ತದೆ. | |
ಇದು 'ಕಂಪ್ಯೂಟರ್ ನ 'ವಿಜುವಲ್ ಡಿಸ್ಪ್ಲೇ ಯೂನಿಟ್' ಆಗಿದೆ. | |
ಇದು ಕಂಪ್ಯೂಟರ್ ನ 'ಯೂಸರ್ ಇಂಟರ್ಫೇಸ್'ಅನ್ನು ತೋರಿಸುತ್ತದೆ. | |
ನಾವು ಕೀಬೋರ್ಡ್ ಮತ್ತು ಮೌಸ್ ಗಳನ್ನು ಬಳಸಿ, ವಿವಿಧ ಪ್ರೊಗ್ರಾಂಗಳನ್ನು ಓಪನ್ ಮಾಡಬಹುದು ಮತ್ತು ಕಂಪ್ಯೂಟರ್ ನೊಂದಿಗೆ ಪರಸ್ಪರ ವ್ಯವಹಾರ (interact) ಮಾಡಬಹುದು. | |
ಟೆಕ್ಸ್ಟ್, ಅಕ್ಷರಗಳು ಮತ್ತು ಇನ್ನಿತರ ‘ಕಮಾಂಡ್’ಗಳನ್ನು ಕಂಪ್ಯೂಟರ್ ನಲ್ಲಿ ಸೇರಿಸಲು (enter), ಕೀಬೋರ್ಡ್ ಅನ್ನು ವಿನ್ಯಾಸ ಮಾಡಲಾಗಿದೆ. | |
ಇದು ಕಂಪ್ಯೂಟರ್ ನ ಮೌಸ್ ಆಗಿದೆ. | |
ಸಾಮಾನ್ಯವಾಗಿ ಇದು, 2 (ಎರಡು) ಕ್ಲಿಕ್ ಮಾಡಬಲ್ಲ ಬಟನ್ ಗಳನ್ನು ಮತ್ತು ಮಧ್ಯದಲ್ಲಿ ಒಂದು ' ಸ್ಕ್ರೋಲ್' ಬಟನ್ ಅನ್ನು ಹೊಂದಿದೆ. | |
'ಲೆಫ್ಟ್ ಮೌಸ್ ಬಟನ್' (‘ಮೌಸ್’ನ ಎಡ ಗುಂಡಿ) ಅನ್ನು ಒತ್ತಿ, ಬಹುಮಟ್ಟಿಗೆ ಎಲ್ಲ ಕ್ರಿಯೆಗಳನ್ನು ಸಕ್ರಿಯಗೊಳಿಸಲಾಗುತ್ತದೆ. | |
'ರೈಟ್ ಮೌಸ್ ಬಟನ್' ಅನ್ನು ಒತ್ತಿ, ‘ಶಾರ್ಟ್ಕಟ್’ (shortcut) ನಂತಹ ಹೆಚ್ಚು ಸ್ಟಾಂಡರ್ಡ್ ಅಲ್ಲದ ಕ್ರಿಯೆಗಳನ್ನು ಸಕ್ರಿಯಗೊಳಿಸಲಾಗುತ್ತದೆ. | |
' ಸ್ಕ್ರೋಲ್ ಬಟನ್' ಅನ್ನು ಉರುಳಿಸಿ ಮೇಲೆ ಕೆಳಗೆ ಸ್ಕ್ರೋಲ್ ಮಾಡಲು 'ಮೌಸ್ ವ್ಹೀಲ್'ಅನ್ನು ಬಳಸಲಾಗುತ್ತದೆ. | |
ಕೀಬೋರ್ಡ್ ನ ಹೊರತಾಗಿ, 'ಕಂಪ್ಯೂಟರ್'ನೊಂದಿಗೆ ವ್ಯವಹರಿಸಲು 'ಕಂಪ್ಯೂಟರ್ ಮೌಸ್', ಒಂದು ಪರ್ಯಾಯವಾದ ವಿಧಾನವಾಗಿದೆ. | |
ಈಗ, 'CPU' ನ ವಿವಿಧ ಭಾಗಗಳನ್ನು ನಾವು ನೋಡೋಣ. | |
ಇಲ್ಲಿ, 'CPU' ನ ಮುಂಭಾಗದಲ್ಲಿ, ಒಂದು ಪ್ರಮುಖವಾದ ಬಟನ್ ಇದೆ. ಇದು 'POWER ON' (ಪಾವರ್ ಆನ್) ಸ್ವಿಚ್ ಆಗಿದೆ. | |
'ಕಂಪ್ಯೂಟರ್'ಅನ್ನು ‘ಆನ್’ (ON) ಮಾಡಲು , ಈ ಸ್ವಿಚ್ ಅನ್ನು ಒತ್ತುವುದು ಅವಶ್ಯವಾಗಿದೆ. | |
ಇಲ್ಲಿ ಒಂದು 'reset' (ರಿ-ಸೆಟ್) ಬಟನ್ ಸಹ ಇದೆ. ಅಗತ್ಯವಿದ್ದಾಗ, 'ಕಂಪ್ಯೂಟರ್'ಅನ್ನು 'ರಿ-ಸ್ಟಾರ್ಟ್' (restart) ಮಾಡಲು ಇದು ನಮಗೆ ಸಹಾಯ ಮಾಡುತ್ತದೆ. | |
ಅಲ್ಲದೇ, ಮುಂಭಾಗದಲ್ಲಿ, ಎರಡು ಅಥವಾ ಅದಕ್ಕಿಂತ ಹೆಚ್ಚು 'USB ಪೋರ್ಟ್'ಗಳನ್ನು ಮತ್ತು ಒಂದು 'DVD/CD-ROM ರೀಡರ್-ರೈಟರ್'ಅನ್ನು ನೀವು ನೋಡುವಿರಿ. | |
'ಪೆನ್-ಡ್ರೈವ್’ಗಳನ್ನು ಕಂಪ್ಯೂಟರ್ ಗೆ ಜೋಡಿಸಲು 'USB ಪೋರ್ಟ್'ಗಳನ್ನು ಬಳಸಲಾಗುತ್ತದೆ. | |
ಮತ್ತು 'CD' ಅಥವಾ 'DVD'ಯನ್ನು, ‘ರೀಡ್’ (ಓದಲು) ಅಥವಾ ‘ರೈಟ್’ ಮಾಡಲು (ಬರೆಯಲು) 'DVD/CD-ROM ರೀಡರ್-ರೈಟರ್'ಅನ್ನು ಬಳಸಲಾಗುತ್ತದೆ. | |
ಈಗ ನಾವು ಕಂಪ್ಯೂಟರ್ ನ ಹಿಂಭಾಗವನ್ನು ನೋಡೋಣ. | |
'CPU' ಅನ್ನು ಕಂಪ್ಯೂಟರ್ ನ ಇತರ ಸಾಧನಗಳಿಗೆ ಜೋಡಿಸಲು, ಹಿಂಭಾಗದಲ್ಲಿಯ ಪೋರ್ಟ್ ಗಳು ಬಳಸಲ್ಪಡುತ್ತವೆ. | |
'ಕೇಬಲ್’ಗಳನ್ನು ಬಳಸಿ ಇದನ್ನು ಮಾಡಲಾಗುತ್ತದೆ. | |
'CPU'ನ ಒಳಗಡೆ ಅನೇಕ ಘಟಕಗಳಿವೆ (components). | |
ಕಂಪ್ಯೂಟರ್ ON ಇದ್ದಾಗ, ಈ ಎಲ್ಲ ಘಟಕಗಳು ಕೆಲಸ ಮಾಡುತ್ತವೆ ಮತ್ತು ಶಾಖವನ್ನು ಉತ್ಪತ್ತಿ ಮಾಡುತ್ತವೆ. | |
ಹಿಂಭಾಗದಲ್ಲಿನ 'ಫ್ಯಾನ್'ಗಳು, ಘಟಕಗಳನ್ನು ತಂಪಾಗಿಸಲು ಬೇಕಾದ ಗಾಳಿಯ ಸಂಚಾರವನ್ನು ಒದಗಿಸುತ್ತವೆ. | |
ಇಲ್ಲದಿದ್ದರೆ, ಅತಿಯಾದ ತಾಪವು 'CPU' ಗೆ ಹಾನಿಯನ್ನುಂಟುಮಾಡಬಹುದು. ಅನೇಕ ವೇಳೆ ಇದು ಡೇಟಾದ ನಷ್ಟಕ್ಕೆ ಕಾರಣವಾಗಬಹುದು. | |
ಇದು 'ಕೇಸ್ ಕೂಲಿಂಗ್ ಫ್ಯಾನ್' ಆಗಿದೆ. | |
ಇದು 'CPU' ನ ತಾಪಮಾನವನ್ನು ಸಹಜ ಸ್ಥಿತಿಯಲ್ಲಿ ಇಡುತ್ತದೆ ಮತ್ತು ಹೆಚ್ಚು ಬಿಸಿಯಾಗುವುದನ್ನು ತಡೆಗಟ್ಟುತ್ತದೆ. | |
'PSU' ಎಂದು ಸಹ ಕರೆಯಲ್ಪಡುವ 'ಪವರ್ ಸಪ್ಲೈ ಯೂನಿಟ್', ಕಂಪ್ಯೂಟರ್ ಗೆ ವಿದ್ಯುಚ್ಛಕ್ತಿಯನ್ನು ಒದಗಿಸುತ್ತದೆ. | |
ಈಗ, 'CPU' ಗೆ ವಿವಿಧ ಘಟಕಗಳನ್ನು ಹೇಗೆ ಕನೆಕ್ಟ್ ಮಾಡುವುದೆಂದು ನಾವು ತಿಳಿಯೋಣ. | |
ಇಲ್ಲಿ ತೋರಿಸಿದಂತೆ, ಎಲ್ಲ ಕಾಂಪೋನೆಂಟ್ ಗಳನ್ನು ಟೇಬಲ್ ಮೇಲೆ ಇರಿಸಿ. | |
ಹಾಗೆಯೇ, ಎಲ್ಲ ಕೇಬಲ್ ಗಳನ್ನು ಟೇಬಲ್ ಮೇಲೆ ಇರಿಸಿ. | |
ಮೊದಲು, ನಾವು ಮಾನಿಟರ್ ಅನ್ನು 'CPU' ಗೆ ಜೋಡಿಸೋಣ (connect). | |
ಇಲ್ಲಿ ತೋರಿಸಿದಂತೆ, ‘ಪವರ್ ಕೇಬಲ್’ಅನ್ನು ಮಾನಿಟರ್ ಗೆ ಜೋಡಿಸಿ. | |
ಈಗ, ಇನ್ನೊಂದು ತುದಿಯನ್ನು 'ಪವರ್ ಸಪ್ಪ್ಲೈ ಸಾಕೆಟ್ ಗೆ' ಕನೆಕ್ಟ್ ಮಾಡಿ. | |
ಇದು CPU ನ ಪವರ್-ಕೇಬಲ್ ಆಗಿದೆ. | |
ಇಲ್ಲಿ ತೋರಿಸಿದಂತೆ, ಇದನ್ನು 'CPU' ಗೆ ಸೇರಿಸಿ. | |
ಆಮೇಲೆ, ಇದನ್ನು 'ಪವರ್ ಸಪ್ಪ್ಲೈ ಸಾಕೆಟ್ ಗೆ' ಕನೆಕ್ಟ್ ಮಾಡಿ. | |
ನಂತರ ಇಲ್ಲಿ ತೋರಿಸಿದಂತೆ, ಕೀಬೋರ್ಡ್ ಕೇಬಲ್ ಅನ್ನು 'CPU' ಗೆ ಕನೆಕ್ಟ್ ಮಾಡಿ. | |
ಕೀಬೋರ್ಡ್ ಗಾಗಿ ಇರುವ ಪೋರ್ಟ್, ಸಾಮಾನ್ಯವಾಗಿ ನೇರಳೆ (purple) ಬಣ್ಣದ್ದಾಗಿರುತ್ತದೆ. | |
'ಮೌಸ್'ಅನ್ನು ನೀವು ಹಸಿರು (green) ಬಣ್ಣದ ಪೋರ್ಟ್ ಗೆ ಕನೆಕ್ಟ್ ಮಾಡಬಹುದು. | |
ಪರ್ಯಾಯವಾಗಿ, 'USB ಕೀಬೋರ್ಡ್' ಮತ್ತು 'ಮೌಸ್'ಅನ್ನು ನೀವು ಯಾವುದೇ 'USB ಪೋರ್ಟ್'ಗಳಿಗೆ ಕನೆಕ್ಟ್ ಮಾಡಬಹುದು. | |
ಇನ್ನುಳಿದ 'USB ಪೋರ್ಟ್'ಗಳನ್ನು ‘ಪೆನ್ ಡ್ರೈವ್, ಹಾರ್ಡ್ ಡಿಸ್ಕ್’ ಇತ್ಯಾದಿಗಳನ್ನು ಕನೆಕ್ಟ್ ಮಾಡಲು ಬಳಸಬಹುದು. | |
ಇದು ‘LAN ಕೇಬಲ್’ | |
ಮತ್ತು ಇದು LAN ಪೋರ್ಟ್ ಆಗಿದೆ. | |
ಇದು, ಕಂಪ್ಯೂಟರ್ ಅನ್ನು ಒಂದು ನೆಟ್ವರ್ಕ್ ಗೆ ಕನೆಕ್ಟ್ ಮಾಡಲು ಅನುಮತಿಸುವ ಒಂದು ‘ವೈಯರ್ಡ್ ಕನೆಕ್ಷನ್’ (ತಂತಿ ಸಂಪರ್ಕ) ಆಗಿದೆ. | |
‘LAN ಕೇಬಲ್’ನ ಇನ್ನೊಂದು ಕೊನೆಯನ್ನು ‘ಮೊಡೆಮ್’ ಅಥವಾ ‘wi-fi ರೌಟರ್’ಗೆ ಕನೆಕ್ಟ್ ಮಾಡಲಾಗಿದೆ. | |
ನೀವು ‘wi-fi ಕನೆಕ್ಷನ್’ಗಳನ್ನು ಸಂರಚಿಸುವ (configuring) ಬಗ್ಗೆ ಬೇರೊಂದು ಟ್ಯುಟೋರಿಯಲ್ ನಲ್ಲಿ ಕಲಿಯುವಿರಿ. | |
‘LAN ಪೋರ್ಟ್’ ಸಕ್ರಿಯವಾಗಿದ್ದಾಗ ಮತ್ತು ಚಟುವಟಿಕೆಯನ್ನು ಪಡೆಯುತ್ತಿರುವಾಗ ‘LED ಲೈಟ್’ ಮಿನುಗುವುದು. | |
‘CPU’ನ ಮೇಲೆ ಬೇರೆ ‘ಸೀರಿಯಲ್ ಪೋರ್ಟ್’ಗಳಿರುವುದನ್ನು ನೀವು ಗಮನಿಸಬಹುದು. | |
‘PDAಗಳು, ಇವುಗಳನ್ನು ಮೊಡೆಮ್’ ಅಥವಾ ಇತರ ‘ಸೀರಿಯಲ್ ಡಿವೈಸ್’ಗಳನ್ನು ಕನೆಕ್ಟ್ ಮಾಡಲು ಬಳಸಲಾಗುತ್ತದೆ. | |
‘CPU’ನ ಮೇಲೆ, ಕೆಲವು ‘ಪ್ಯಾರಲಲ್ ಪೋರ್ಟ್’ಗಳಿರುವುದನ್ನು ಸಹ ನೀವು ಗಮನಿಸುವಿರಿ. | |
‘ಪ್ರಿಂಟರ್, ಸ್ಕ್ಯಾನರ್’ ಗಳಂತಹ ಸಾಧನಗಳನ್ನು ಕನೆಕ್ಟ್ ಮಾಡಲು ಇವುಗಳನ್ನು ಬಳಸಲಾಗುತ್ತದೆ. | |
ಈಗ, ನಾವು ‘ಆಡಿಯೋ ಜಾಕ್’ಗಳತ್ತ ನೋಡೋಣ. | |
‘ಮೈಕ್ರೋಫೋನ್’ಅನ್ನು ಕನೆಕ್ಟ್ ಮಾಡಲು, ಗುಲಾಬಿ ಬಣ್ಣದಲ್ಲಿರುವ (pink) ಪೋರ್ಟ್ ಅನ್ನು ಬಳಸಲಾಗುತ್ತದೆ. | |
‘ಲೈನ್ ಇನ್’ಅನ್ನು, ಉದಾ - ರೇಡಿಯೋ ಅಥವಾ ಟೇಪ್ ಪ್ಲೇಯರ್ ಅನ್ನು ಕನೆಕ್ಟ್ ಮಾಡಲು, ನೀಲಿ ಬಣ್ಣದಲ್ಲಿರುವ ಪೋರ್ಟ್ ಇರುತ್ತದೆ. | |
‘ಹೆಡ್-ಫೋನ್/ಸ್ಪೀಕರ್’ ಅಥವಾ ‘ಲೈನ್ ಔಟ್’ಅನ್ನು ಕನೆಕ್ಟ್ ಮಾಡಲು, ಹಸಿರು ಬಣ್ಣದಲ್ಲಿರುವ ಪೋರ್ಟ್ ಇರುತ್ತದೆ. | |
ಈಗ ನಾವು ನಮ್ಮ ಎಲ್ಲ ಡಿವೈಸ್ ಗಳನ್ನು ಕನೆಕ್ಟ್ ಮಾಡಿರುವುದರಿಂದ, ಕಂಪ್ಯೂಟರ್ ಅನ್ನು ON (ಆನ್) ಮಾಡೋಣ. | |
ಮೊಟ್ಟ ಮೊದಲು, ಮಾನಿಟರ್ ನ ಮತ್ತು ‘CPU’ನ ‘ಪವರ್ ಸಪ್ಲೈ’ ಬಟನ್ ಗಳನ್ನು ಸ್ವಿಚ್-ಆನ್ ಮಾಡಿ. | |
ಈಗ, ಮಾನಿಟರ್ ನ ಮೇಲಿರುವ ‘POWER ON’ ಬಟನ್ ಅನ್ನು ಒತ್ತಿ. | |
ಆಮೇಲೆ, ‘CPU’ನ ಮುಂಭಾಗದಲ್ಲಿರುವ ‘POWER ON’ ಸ್ವಿಚ್ ಅನ್ನು ಒತ್ತಿ. | |
ಸಾಮಾನ್ಯವಾಗಿ, ನಿಮ್ಮ ಕಂಪ್ಯೂಟರ್, ಮೊದಲನೆಯ ಸಲ ON ಆದಾಗ, ಕಪ್ಪು ಸ್ಕ್ರೀನ್ ನ ಮೇಲೆ ಶಬ್ದಗಳ ಒಂದು ಸ್ಟ್ರಿಂಗ್ ಅನ್ನು ನೀವು ನೋಡುವಿರಿ. | |
ಇದು, ಈ ಕೆಳಗಿನವುಗಳ ಬಗ್ಗೆ ಮಾಹಿತಿಯನ್ನು ತೋರಿಸುವ ‘BIOS ಸಿಸ್ಟಂ’ ಆಗಿದೆ: | |
‘ಕಂಪ್ಯೂಟರ್'ನ ‘ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್’, | |
ಕಂಪ್ಯೂಟರ್, ಎಷ್ಟು ‘ಮೆಮರೀ’ಯನ್ನು ಹೊಂದಿದೆ ಎಂಬುದರ ಬಗ್ಗೆ ಮಾಹಿತಿ | |
ಮತ್ತು ‘ಹಾರ್ಡ್ ಡಿಸ್ಕ್ ಡ್ರೈವ್’ಗಳ ಹಾಗೂ ‘ಫ್ಲಾಪಿ ಡಿಸ್ಕ್ ಡ್ರೈವ್’ಗಳ ಬಗ್ಗೆ ಮಾಹಿತಿ. | |
'BIOS', ಕಂಪ್ಯೂಟರ್ ಅನ್ನು ON ಮಾಡಿದಾಗ, ‘CPU’ಗೆ ಅದರ ಮೊದಲ ‘ಇನ್ಸ್ಟ್ರಕ್ಶನ್’ಗಳನ್ನು (instructions) ಕೊಡುವ ಸಾಫ್ಟ್ವೇರ್ ಆಗಿದೆ. | |
‘ಆಪರೇಟಿಂಗ್ ಸಿಸ್ಟಂ’ ಅನ್ನು ಲೋಡ್ ಮಾಡುವ ಒಟ್ಟಾರೆ ಪ್ರಕ್ರಿಯೆಯನ್ನು ಕಂಪ್ಯೂಟರ್ ನ ‘ಬೂಟಿಂಗ್’ ಎಂದು ಕರೆಯಲಾಗುತ್ತದೆ. | |
ಅವಶ್ಯವಿರುವ ಎಲ್ಲ ತಪಾಸಣೆಗಳನ್ನು ಮಾಡಿದ ಮೇಲೆ, ‘ಆಪರೇಟಿಂಗ್ ಸಿಸ್ಟಂ’ನ ‘ಇಂಟರ್ಫೇಸ್’ಅನ್ನು ನೀವು ನೋಡುವಿರಿ. | |
ನೀವು ‘ಉಬಂಟು ಲಿನಕ್ಸ್’ಅನ್ನು ಬಳಸುತ್ತಿದ್ದರೆ, ಈ ಸ್ಕ್ರೀನ್ ಅನ್ನು ನೋಡುವಿರಿ. | |
ಮತ್ತು ನೀವು ‘ವಿಂಡೋಸ್’ಅನ್ನು ಬಳಸುತ್ತಿದ್ದರೆ, ಈ ಸ್ಕ್ರೀನ್ ಅನ್ನು ನೋಡುವಿರಿ. | |
ಈಗ, ನಾವು ಒಂದು ‘ಲ್ಯಾಪ್ಟಾಪ್’ನತ್ತ ಸ್ವಲ್ಪ ನೋಡೋಣ. | |
‘ಲ್ಯಾಪ್ಟಾಪ್’ಗಳು, ಪೋರ್ಟೇಬಲ್ ಮತ್ತು ಕಾಂಪ್ಯಾಕ್ಟ್ ಕಂಪ್ಯೂಟರ್ ಗಳಾಗಿವೆ. | |
‘ಲ್ಯಾಪ್ಟಾಪ್’, ಚಿಕ್ಕದಾಗಿದ್ದು ಉಪಯೋಗಿಸುವಾಗ ವ್ಯಕ್ತಿಯ ತೊಡೆಯ ಮೇಲೆ ಇಟ್ಟುಕೊಳ್ಳುವಷ್ಟು ಹಗುರವಾಗಿದೆ. | |
ಆದ್ದರಿಂದ ಇದು, ‘ಲ್ಯಾಪ್ಟಾಪ್’ ಎಂದು ಕರೆಯಲ್ಪಡುತ್ತದೆ. | |
ಇದು ಬಹುಮಟ್ಟಿಗೆ ‘ಡೆಸ್ಕ್ಟಾಪ್ ಕಂಪ್ಯೂಟರ್’ ಹೊಂದಿರುವ ಘಟಕಗಳನ್ನೇ ಹೊಂದಿದೆ. | |
ಒಂದು ಡಿಸ್ಪ್ಲೇ, | |
ಒಂದು ಕೀಬೋರ್ಡ್, | |
ಸೂಚಿಸುವ (pointing) ಮತ್ತು ನ್ಯಾವಿಗೇಟ್ ಮಾಡುವ ಸಾಧನವಾಗಿರುವ ಒಂದು ‘ಟಚ್ ಪ್ಯಾಡ್’, | |
‘CD/DVD ರೀಡರ್-ರೈಟರ್’ ಮತ್ತು | |
‘ಮೈಕ್’ ಹಾಗೂ ಸ್ಪೀಕರ್, ಇವುಗಳನ್ನು ಒಂದೇ ಯೂನಿಟ್ ನಲ್ಲಿ ನಿರ್ಮಿಸಲಾಗಿದೆ. | |
ಇದು ಸಹ ‘ಲಾನ್ ಪೋರ್ಟ್’ ಮತ್ತು ‘USB ಪೋರ್ಟ್’ಗಳನ್ನು ಹೊಂದಿದೆ. | |
ಇಲ್ಲಿ ಒಂದು ‘ವೀಡಿಯೊ ಪೋರ್ಟ್’ ಇದೆ. ಇದನ್ನು ಬಳಸಿ ಪ್ರೊಜೆಕ್ಟರ್ ಅನ್ನು ಲ್ಯಾಪ್ಟಾಪ್ ಗೆ ಕನೆಕ್ಟ್ ಮಾಡಬಹುದು. | |
‘ಆಡಿಯೋ ಜಾಕ್’ಗಳನ್ನು ಮಿಕ್ ಹಾಗೂ ‘ಹೆಡ್ ಫೋನ್’ಗಳ ಆಯಾ ಐಕಾನ್ ಗಳಿಂದ ಸುಲಭವಾಗಿ ಗುರುತಿಸಬಹುದು. | |
ಇದು, ಲ್ಯಾಪ್ಟಾಪ್ ನಲ್ಲಿಯ ಇನ್-ಬಿಲ್ಟ್ ‘ಕೂಲಿಂಗ್ ಫ್ಯಾನ್’ ಆಗಿದೆ. | |
ಲ್ಯಾಪ್ಟಾಪ್, ಹೆಚ್ಚು ಬಿಸಿಯಾಗುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ. | |
‘AC ಅಡಾಪ್ಟರ್’ನ ಮೂಲಕ ಲ್ಯಾಪ್ಟಾಪ್ ಗೆ ವಿದ್ಯುಚ್ಛಕ್ತಿಯನ್ನು ಪೂರೈಸಲಾಗುತ್ತದೆ ಮತ್ತು ಇದು ರೀ-ಚಾರ್ಜ್ ಮಾಡಬಹುದಾದ ಬ್ಯಾಟರಿಯನ್ನು ಹೊಂದಿದೆ. | |
ಆದ್ದರಿಂದ,ಇದು ಪೋರ್ಟೇಬಲ್ ಆಗಿದೆ ಮತ್ತು ಇದನ್ನು ವಿದ್ಯುತ್ ಮೂಲದಿಂದ ದೂರದಲ್ಲಿ ಉಪಯೋಗಿಸಬಹುದು. | |
ಸಂಕ್ಷಿಪ್ತವಾಗಿ- ಈ ಟ್ಯುಟೋರಿಯಲ್ ನಲ್ಲಿ, ನಾವು | |
ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್ ಗಳ ವಿವಿಧ ಘಟಕಗಳ ಬಗ್ಗೆ | |
ಮತ್ತು ಡೆಸ್ಕ್ಟಾಪ್ ನ ವಿವಿಧ ಘಟಕಗಳನ್ನು ಜೋಡಿಸುವುದರ ಬಗ್ಗೆ ಕಲಿತಿದ್ದೇವೆ. | |
ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. | |
ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. | |
ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | |
“ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. | |
* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | |
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org | |
"ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದ್ದು | |
ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | |
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. | |
ಈ ಟ್ಯುಟೋರಿಯಲ್ ಗಾಗಿ, ಅನಿಮೇಶನ್ ಮತ್ತು 3D ಮಾಡೆಲಿಂಗ್ ಅನ್ನು Ms. ಆರತಿ ಅವರು ಮಾಡಿದ್ದಾರೆ. | |
IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ . | |
ವಂದನೆಗಳು. |