Java-Business-Application/C2/Database-and-validation/Kannada
From Script | Spoken-Tutorial
Revision as of 17:48, 20 November 2015 by Vasudeva ahitanal (Talk | contribs)
Time | Narration |
00:01 | Database and validation ಎನ್ನುವ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು - |
00:08 | * ಡೇಟಾ-ಬೇಸ್ ನೊಂದಿಗೆ ವ್ಯವಹರಿಸಲು ಮತ್ತು |
00:10 | * ಫೀಲ್ಡ್ ಗಳನ್ನು ವ್ಯಾಲಿಡೇಟ್ ಮಾಡಲು ಕಲಿಯುವೆವು. |
00:12 | ಇಲ್ಲಿ, ನಾವು |
00:13 | Ubuntu (ಉಬಂಟು) 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು), |
00:15 | Netbeans IDE 7.3 (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು), |
00:19 | JDK 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ |
00:21 | ‘Firefox’ (ಫೈರ್ ಫಾಕ್ಸ್) ವೆಬ್ ಬ್ರೌಸರ್ 21.0 ಇವುಗಳನ್ನು ಬಳಸುತ್ತಿದ್ದೇವೆ. |
00:24 | ನೀವು, ನಿಮಗೆ ಇಷ್ಟವಾದ ಯಾವುದೇ ವೆಬ್-ಬ್ರೌಸರ್ ಅನ್ನು ಉಪಯೋಗಿಸಬಹುದು. |
00:28 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು - |
00:31 | * ಜಾವಾ ಸರ್ವ್ಲೆಟ್ಸ್ ಹಾಗೂ JSP ಗಳ ಪರಿಚಯ, |
00:35 | * ‘Netbeans IDE’ ಯಿಂದ MySQL ಡೇಟಾ-ಬೇಸ್ ಗೆ ಸಂಪರ್ಕ ಕಲ್ಪಿಸುವುದು ಮತ್ತು |
00:39 | * ಡೇಟಾ-ಬೇಸ್ ಹಾಗೂ ‘ಟೇಬಲ್’ಗಳನ್ನು ತಯಾರಿಸುವುದು ಇವುಗಳನ್ನು ತಿಳಿದಿರಬೇಕು. |
00:42 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:47 | ಈಗ, ನಾವು Netbeans IDE ಗೆ ಹೋಗೋಣ. |
00:52 | ನಾನು MySQL ಸರ್ವರನ್ನು ಆರಂಭಿಸಿದ್ದೇನೆ. |
00:55 | ಅದರಲ್ಲಿ ನಾನು ‘library’ ಎಂಬ ಹೆಸರಿನ ಡೇಟಾಬೇಸನ್ನು ‘ಕ್ರಿಯೇಟ್’ ಮಾಡಿದ್ದೇನೆ. |
01:00 | ನಾನು ಅದರಲ್ಲಿ ‘Users’ ಎಂಬ ಹೆಸರಿನ ‘ಟೇಬಲ್’ಅನ್ನು ತಯಾರಿಸಿದ್ದೇನೆ. |
01:04 | ನಾನು ಈ ಟೇಬಲ್ ನಲ್ಲಿ ಕೆಲವು ವ್ಯಾಲ್ಯೂಗಳನ್ನು ಈಗಾಗಲೇ ಸೇರಿಸಿದ್ದೇನೆ. |
01:08 | ಈಗ ಅವುಗಳನ್ನು ತೋರಿಸುವೆನು. |
01:10 | ಅದಕ್ಕಾಗಿ, ‘Users’ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು View Data ದ ಮೇಲೆ ಕ್ಲಿಕ್ ಮಾಡಿ. |
01:15 | ಕೆಳತುದಿಯಲ್ಲಿರುವ Output ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:19 | ಇಲ್ಲಿ, 15 ‘ಯೂಸರ್’ಗಳು (ಬಳಕೆದಾರರು) ಇರುವುದನ್ನು ನಾವು ನೋಡಬಹುದು. |
01:23 | FirstName, Surname, Age, Gender, email, Username ಹಾಗೂ Password ಗಳನ್ನು ನಾವು ನೋಡಬಹುದು. |
01:31 | ಈಗ, ನಾವು JDBC Driver ಅನ್ನು ಎಂದರೆ “Java Database Connectivity Driver” ಅನ್ನು ಲೋಡ್ ಮಾಡೋಣ. |
01:39 | ಅದಕ್ಕಾಗಿ, ‘Projects’ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
01:42 | ‘Libraries’ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ‘Add Library’ ಯ ಮೇಲೆ ಕ್ಲಿಕ್ ಮಾಡಿ. |
01:46 | ನಂತರ ‘MySQL JDBC Driver’ ನ ಮೇಲೆ ಕ್ಲಿಕ್ ಮಾಡಿ |
01:50 | ಮತ್ತು ‘Add Library’ ಯ ಮೇಲೆ ಕ್ಲಿಕ್ ಮಾಡಿ. |
01:53 | ಇದು ‘JDBC Driver’ ಅನ್ನು ಲೋಡ್ ಮಾಡುವುದು. |
01:56 | ನಾವು ಈ ಮೊದಲು ಮಾಡಿದಂತೆ, ‘Project’ ಅನ್ನು ‘ರನ್’ ಮಾಡೋಣ. |
02:00 | ಈಗ, ‘User Name’ ಅನ್ನು “arya” ಎಂದು ಮತ್ತು ‘Password’ ಅನ್ನು “arya123*” (ಆರ್ಯಾ 1-2-3 ಸ್ಟಾರ್) ಎಂದು ಟೈಪ್ ಮಾಡಿ. |
02:06 | ನಂತರ ‘Sign In’ ನ ಮೇಲೆ ಕ್ಲಿಕ್ ಮಾಡಿ. |
02:08 | ನಾವು ‘Success Greeting Page’ ಅನ್ನು ನೋಡಬಹುದು. |
02:12 | ‘ಲಾಗ್-ಔಟ್’ ಮಾಡಲು, “here” ನ ಮೇಲೆ ಕ್ಲಿಕ್ ಮಾಡಿ. |
02:15 | ಈಗ, ನಾವು IDE ಗೆ ಹಿಂದಿರುಗೋಣ. |
02:17 | ನಾವು ‘GreetingServlet ಡಾಟ್ java’ ಗೆ ಹೋಗುವೆವು. |
02:21 | ‘doPost’ ಮೆಥಡ್ ಗೆ ಬನ್ನಿ. |
02:23 | ಮೊದಲು, ನಾವು ‘getParameter()’ ಮೆಥಡ್ ಅನ್ನು ಬಳಸಿ, ‘request’ ನಿಂದ ‘username’ ಹಾಗೂ ‘password’ ಗಳನ್ನು ಪಡೆಯುತ್ತೇವೆ. |
02:31 | ನಂತರ, ನಾವು ‘JDBC ಕನೆಕ್ಷನ್’ಗಾಗಿ, ‘ಕೋಡ್’ಅನ್ನು ನೋಡುವೆವು. |
02:35 | ನಾವು Connection ಆಬ್ಜೆಕ್ಟ್, PreparedStatement ಆಬ್ಜೆಕ್ಟ್ ಮತ್ತು ResultSet ಆಬ್ಜೆಕ್ಟ್ ಗಳನ್ನು ‘null’ ಎಂದು ‘ಇನಿಶಿಯಲೈಸ್’ ಮಾಡಿದ್ದೇವೆ. |
02:44 | ಆಮೇಲೆ ನಾವು, ನಮ್ಮ ಪ್ರೊಗ್ರಾಂನಲ್ಲಿ ‘ಡ್ರೈವರ್’ಅನ್ನು ರಿಜಿಸ್ಟರ್ ಮಾಡುತ್ತೇವೆ. |
02:48 | ನಂತರ ನಾವು ಡೇಟಾಬೇಸ್ ಗೆ ಕನೆಕ್ಷನ್ ಅನ್ನು ಕ್ರಿಯೇಟ್ ಮಾಡುತ್ತೇವೆ. |
02:52 | ನಂತರ, ನಾವು ‘Connection’ ಆಬ್ಜೆಕ್ಟ್ ನ ಮೇಲೆ ‘prepareStatement() ಮೆಥಡ್’ ಅನ್ನು ಎಕ್ಸಿಕ್ಯೂಟ್ ಮಾಡುತ್ತೇವೆ. |
02:58 | ‘Users ಟೇಬಲ್’ ನಿಂದ, ‘ಯೂಸರ್’ನ ವಿವರಗಳನ್ನು ಪಡೆಯಲು ನಾವು ‘ಕ್ವೆರಿ’ಯನ್ನು ಕೊಡುತ್ತೇವೆ. |
03:03 | ‘username’ ಹಾಗೂ ‘password’ ಗಳು, ಫಾರ್ಮ್ ನಲ್ಲಿ ನಮೂದಿಸದಂತೆಯೇ ಇವೆಯೋ ಎನ್ನುವುದನ್ನು ನಾವು ಪರೀಕ್ಷಿಸುತ್ತೇವೆ. |
03:09 | ಇಲ್ಲಿ, ಪ್ರಶ್ನಾರ್ಥಕ ಚಿಹ್ನೆಯು, ಡೇಟಾಬೇಸ್ ನಲ್ಲಿಯ ಪ್ರತಿಯೊಂದು ಫೀಲ್ಡ್ ಅನ್ನು ಸೂಚಿಸುತ್ತದೆ. |
03:15 | ಪ್ರಶ್ನಾರ್ಥಕ ಚಿಹ್ನೆಯ ಸ್ಥಾನದಲ್ಲಿ ವ್ಯಾಲ್ಯೂಗಳನ್ನು ಒದಗಿಸಲು, ನಾವು setString() ಮೆಥಡ್ ಅನ್ನು ಎಕ್ಸಿಕ್ಯೂಟ್ ಮಾಡುತ್ತೇವೆ. |
03:22 | ನಾವು ‘PreparedStatement’ ಆಬ್ಜೆಕ್ಟ್ ಅನ್ನು ಬಳಸಿ ಇದನ್ನು ಮಾಡುತ್ತೇವೆ. |
03:26 | ಆಮೇಲೆ, ನಾವು PreparedStatement ಆಬ್ಜೆಕ್ಟ್ ನ ಮೇಲೆ, executeQuery() ಮೆಥಡ್ ಅನ್ನು ಎಕ್ಸಿಕ್ಯೂಟ್ ಮಾಡುತ್ತೇವೆ. |
03:33 | ನಾವು ಫಲಿತಾಂಶವನ್ನು ‘Resultset’ ಆಬ್ಜೆಕ್ಟ್ ನಲ್ಲಿ ಸ್ಟೋರ್ ಮಾಡುತ್ತೇವೆ. |
03:37 | ಯಶಸ್ವಿಯಾದ ‘ಲಾಗ್-ಇನ್’ಗಾಗಿ, ನಾವು ‘successGreeting’ ಪೇಜನ್ನು ಪ್ರದರ್ಶಿಸುತ್ತೇವೆ. |
03:43 | ನಾವು ಇದಕ್ಕಾಗಿ, ‘RequestDispatcher’ ಇಂಟರ್ಫೇಸ್ ಅನ್ನು ಬಳಸುತ್ತೇವೆ. |
03:48 | ನಾವು ‘RequestDispatcher’ ಆಬ್ಜೆಕ್ಟ್ ಅನ್ನು ಪಡೆಯಲು, ‘request’ ನ ಮೇಲೆ ‘getRequestDispatcher()’ ಮೆಥಡ್ ಅನ್ನು ಬಳಸುತ್ತೇವೆ. |
03:56 | ಆಮೇಲೆ ನಾವು, ‘RequestDispatcher’ ಆಬ್ಜೆಕ್ಟ್ ನ ಮೇಲೆ, forward() ಮೆಥಡ್ ಅನ್ನು ಇನ್ವೋಕ್ ಮಾಡುತ್ತೇವೆ (ಬೇಡುತ್ತೇವೆ). |
04:02 | ಈ ರೀತಿಯಲ್ಲಿ, ನಾವು 'successGreeting ಡಾಟ್ jsp’ಗೆ ಫಾರ್ವರ್ಡ್ ಮಾಡುತ್ತೇವೆ. |
04:07 | ಈಗ ಸ್ಲೈಡ್ ಗಳಿಗೆ ಹಿಂತಿರುಗಿ. |
04:10 | ನಾವು ‘RequestDispatcher Interface’ ನ (ರಿಕ್ವೆಸ್ಟ್ ಡಿಸ್ಪ್ಯಾಚರ್ ಇಂಟರ್ಫೇಸ್) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. |
04:15 | ಈ ಇಂಟರ್ಫೇಸ್, ‘request’ ಅನ್ನು ಇನ್ನೊಂದು ರಿಸೋರ್ಸ್ ಗೆ ಕಳಿಸುವ ಸೌಲಭ್ಯವನ್ನು ಒದಗಿಸುತ್ತದೆ. |
04:22 | ಈ ರಿಸೋರ್ಸ್, html, ಸರ್ವ್ಲೆಟ್ ಅಥವಾ JSP (ಜೆ-ಎಸ್-ಪಿ) ಆಗಿರಬಹುದು. |
04:26 | ಈಗ, ನಾವು IDE ಗೆ ಹಿಂದಿರುಗೋಣ. |
04:29 | ನಾವು 'successGreeting ಡಾಟ್ jsp’ ಗೆ ಬರೋಣ. |
04:33 | ಇಲ್ಲಿ, “You have successfully logged in” ಎಂಬ ‘ಸಕ್ಸೆಸ್ ಮೆಸೇಜ’ನ್ನು ನಾವು ತೋರಿಸುತ್ತಿದ್ದೇವೆ. |
04:38 | ಈಗ, ಬ್ರೌಸರ್ ಗೆ ಹಿಂದಿರುಗಿ. |
04:41 | ಡೇಟಾಬೇಸ್ ನಲ್ಲಿ ನಾವು ಸೇರಿಸದೇ ಇರುವ username ಮತ್ತು password ಗಳನ್ನು ಟೈಪ್ ಮಾಡಿ. |
04:47 | ಹಾಗಾಗಿ, ನಾನು username ಅನ್ನು “abc” ಮತ್ತು password ಅನ್ನು “abc123*” (a-b-c-1-2-3-ಸ್ಟಾರ್) ಎಂದು ಟೈಪ್ ಮಾಡುತ್ತೇನೆ. |
04:56 | ನಂತರ, ‘Sign In’ ನ ಮೇಲೆ ಕ್ಲಿಕ್ ಮಾಡಿ. |
04:59 | ನಾವು ‘ಎರರ್ ಮೆಸೇಜ’ನ್ನು ಅದೇ ಪೇಜ್ ನ ಮೇಲೆ ಪಡೆಯುತ್ತೇವೆ ಎಂಬುದನ್ನು ನೋಡಬಹುದು. |
05:03 | “Please correct the following errors!!! Invalid username or password.” |
05:09 | ಈಗ, ನಾವು ಇದಕ್ಕಾಗಿ ‘ಕೋಡ್’ಅನ್ನು ನೋಡೋಣ. |
05:12 | ಆದ್ದರಿಂದ, IDE ಗೆ ಹಿಂದಿರುಗಿ. |
05:14 | ‘GreetingServlet ಡಾಟ್ java’ ಗೆ ಹೋಗಿ. |
05:17 | ಒಂದುವೇಳೆ, ವ್ಯಾಲಿಡೇಶನ್ ವಿಫಲವಾದರೆ, ಆಗ ನಾವು ‘ಎರರ್ ಮೆಸೇಜ’ನ್ನು ತೋರಿಸಬೇಕು. |
05:22 | ಮೊದಲು, ನಾವು errorMsgs ನ ಒಂದು ಲಿಸ್ಟನ್ನು ‘ಇನಿಶಿಯಲೈಸ್’ ಮಾಡಿದ್ದೇವೆ. |
05:27 | ನಾವು setAttribute() ಮೆಥಡ್ ಅನ್ನು ಬಳಸಿ, request ನ ಸ್ಕೋಪ್ ನಲ್ಲಿ ‘errorMsgs’ ಎಂಬ ವೇರಿಯೆಬಲ್ ಅನ್ನು ಸೆಟ್ ಮಾಡುತ್ತೇವೆ. |
05:35 | ಇಲ್ಲಿ, errorMsgs ಎನ್ನುವುದು ‘ಅಟ್ರಿಬ್ಯೂಟ್’ ನ ಹೆಸರು ಆಗಿದೆ. |
05:39 | ನಾವು ‘id’ ಎನ್ನುವ ಸ್ಟ್ರಿಂಗ್ ವೇರಿಯೆಬಲ್ ಅನ್ನು, ‘null’ ಗೆ ಇನಿಶಿಯಲೈಸ್ ಮಾಡಿದ್ದೇವೆ. |
05:44 | ಆಮೇಲೆ, ಡೇಟಾಬೇಸ್ ನಲ್ಲಿ ಯೂಸರ್,ಇರುವನೇ ಎಂದು ನಾವು ಪರಿಶೀಲಿಸುತ್ತೇವೆ. |
05:48 | ಒಂದುವೇಳೆ ಇದ್ದರೆ, ನಾವು ವ್ಯಾಲ್ಯೂವನ್ನು ‘id’ ಎಂಬ ವೇರಿಯೆಬಲ್ ನಲ್ಲಿ ಸ್ಟೋರ್ ಮಾಡುತ್ತೇವೆ. |
05:53 | ಇಲ್ಲದಿದ್ದರೆ, “Invalid username or password” ಎನ್ನುವ ‘ಎರರ್’ ಅನ್ನು, ‘errorMsgs ಲಿಸ್ಟ್’ ಗೆ ನಾವು ಸೇರಿಸುತ್ತೇವೆ. |
06:00 | ಒಂದುವೇಳೆ ‘errorMsgs’ ಲಿಸ್ಟ್, ಖಾಲಿ ಇಲ್ಲದಿದ್ದರೆ, ನಾವು ‘ಎರರ್-ಮೆಸೇಜ್’ ಗಳನ್ನು 'index ಡಾಟ್ jsp’ ಯ ಮೇಲೆ ತೋರಿಸುತ್ತೇವೆ. |
06:09 | ಆದ್ದರಿಂದ, ನಾವು 'index ಡಾಟ್ jsp’ಗೆ ರಿ-ಡೈರೆಕ್ಟ್ ಮಾಡಬೇಕು. |
06:13 | ‘RequestDispatcher’ ಅನ್ನು (ರಿಕ್ವೆಸ್ಟ್-ಡಿಸ್ಪ್ಯಾಚರ್) ಬಳಸಿ, ಬೇರೊಂದು ಪೇಜ್ ಗೆ ಹೇಗೆ ರಿಡೈರೆಕ್ಟ್ ಮಾಡುವುದೆಂದು ನಾವು ಈಗಾಗಲೇ ನೋಡಿದ್ದೇವೆ. |
06:20 | ‘exception’ ನ ಸನ್ನಿವೇಶಗಳನ್ನು ನಿಭಾಯಿಸಲು, ಈ ಕೋಡನ್ನು ನಾವು ‘try catch’ (ಟ್ರೈ-ಕ್ಯಾಚ್) ಬ್ಲಾಕ್ ನ ಒಳಗೆ ಸೇರಿಸಿದ್ದೇವೆ ಎಂದು ಗಮನಿಸಿ. |
06:27 | ಈಗ 'index ಡಾಟ್ jsp’ಯಲ್ಲಿ, ‘errorMsgs’ ಎಂಬ ವೇರಿಯೆಬಲ್ ಅನ್ನು ಹೇಗೆ ತರುವುದೆಂದು ನಾವು ನೋಡುವೆವು. |
06:34 | ಮೊದಲು, ನಾವು errorMsgs ಎನ್ನುವ ಅಟ್ರಿಬ್ಯೂಟ್ ನ ವ್ಯಾಲ್ಯೂವನ್ನು ಪಡೆದುಕೊಳ್ಳುತ್ತೇವೆ. |
06:38 | ‘request’ ನ ಮೇಲೆ, ‘getAttribute() ಮೆಥಡ್’ ಅನ್ನು ಬಳಸಿ ಇದನ್ನು ಮಾಡಲಾಗುವುದು. |
06:44 | ನಾವು, ‘ಓಪನಿಂಗ್ ಟ್ಯಾಗ್’- ‘ಲೆಸ್ ದ್ಯಾನ್’ ಚಿಹ್ನೆ ಪರ್ಸೆಂಟೇಜ್ ಚಿಹ್ನೆ (<%) ಮತ್ತು ‘ಕ್ಲೋಸಿಂಗ್ ಟ್ಯಾಗ್’- ಪರ್ಸೆಂಟೇಜ್ ಚಿಹ್ನೆ ‘ಗ್ರೇಟರ್ ದ್ಯಾನ್’ ಚಿಹ್ನೆ (%>), ಇವುಗಳ ಒಳಗಡೆ ಜಾವಾ (Java) ಕೋಡನ್ನು ಸೇರಿಸಿದ್ದೇವೆ ಎನ್ನುವುದನ್ನು ಗಮನಿಸಿ. |
06:57 | ‘ಕೋಡ್’ನ ಈ ಬ್ಲಾಕ್ ಅನ್ನು ‘ಸ್ಕ್ರಿಪ್ಟ್ಲೆಟ್’ (scriptlet) ಎಂದು ಕರೆಯುತ್ತಾರೆ. |
07:02 | ಇದು ಜಾವಾ ಕೋಡನ್ನು ಒಳಗೊಂಡಿದೆ ಹಾಗೂ ಪ್ರತಿಯೊಂದು ಬಾರಿ JSP ಯನ್ನು ಇನ್ವೋಕ್ ಮಾಡಿದಾಗ, ಇದನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. |
07:08 | ‘errorMsgs’ ನ ವ್ಯಾಲ್ಯೂ, null ಆಗಿರದಿದ್ದರೆ ಆಗ ನಾವು ಈ ಮೆಸೇಜನ್ನು ಪ್ರದರ್ಶಿಸುತ್ತೇವೆ. |
07:15 | “Please correct the following errors!!!!” |
07:18 | ನಂತರ errorMsgs ಲಿಸ್ಟ್ ನ ಮೂಲಕ ನಾವು ‘ಇಟರೇಟ್’ ಮಾಡುತ್ತೇವೆ. |
07:23 | ಆಮೇಲೆ ನಾವು ‘ಎರರ್-ಮೆಸೇಜ್’ ಗಳನ್ನು ಒಂದು ಲಿಸ್ಟ್ ನಂತೆ ತೋರಿಸುತ್ತೇವೆ. |
07:27 | 'index ಡಾಟ್ jsp’ಯ ಮೇಲೆ, ‘ಎರರ್-ಮೆಸೇಜ್’ಗಳನ್ನು ನಾವು ಈ ರೀತಿಯಾಗಿ ತೋರಿಸುತ್ತೇವೆ. |
07:32 | ಡೇಟಾಬೇಸ್ ನಲ್ಲಿ ‘ಯೂಸರ್’ ಅನ್ನು ಹೇಗೆ ಸೇರಿಸುವುದೆಂದು ಈಗ ನಾವು ನೋಡೋಣ. |
07:37 | ಡೇಟಾಬೇಸ್ ನಲ್ಲಿ ಒಂದು ‘ಯೂಸರ್’ಅನ್ನು ಸೇರಿಸುವ ಮೊದಲು, ನಾವು ‘User table’ ಗಾಗಿ ಒಂದು ಮಾಡೆಲ್ ಅನ್ನು ತಯಾರಿಸಬೇಕು. |
07:44 | ಈಗ ನಾವು ‘ಮಾಡೆಲ್’ ಎಂದರೆ ಏನು ಎನ್ನುವುದನ್ನು ನೋಡೋಣ. |
07:48 | ‘ಮಾಡೆಲ್’ (model): |
07:49 | * ‘ಸಾಫ್ಟ್ವೇರ್ ಅಪ್ಲಿಕೇಶನ್’ನಲ್ಲಿ ಆಧಾರವಾಗಿರುವ ಡೇಟಾದ ‘ಲಾಜಿಕಲ್ ಸ್ಟ್ರಕ್ಚರ್’ ಅನ್ನು ಮತ್ತು |
07:55 | * ‘ಅಟ್ರಿಬ್ಯೂಟ್ಸ್’ ಗಳೊಂದಿಗೆ ‘ಜಾವಾ ಕ್ಲಾಸ್’ ಅನ್ನು ಹಾಗೂ ಅವುಗಳಿಗಾಗಿ getters (ಗೆಟ್ಟರ್ಸ್) ಮತ್ತು setters (ಸೆಟ್ಟರ್ಸ್) ಗಳನ್ನು ಪ್ರತಿನಿಧಿಸುತ್ತದೆ. |
08:00 | ಈ ರೀತಿಯಲ್ಲಿ, ಪ್ರತ್ಯೇಕ ಅಟ್ರಿಬ್ಯೂಟ್ ಗೆ ಬದಲಾಗಿ, ‘ಮಾಡೆಲ್’ಅನ್ನು ನಾವು ಪೂರ್ತಿಯಾಗಿ ಪರಿಗಣಿಸಬಹುದು. |
08:07 | ಈಗ, ‘Netbeans IDE’ ಗೆ ಹಿಂದಿರುಗಿ. |
08:11 | 'User ಡಾಟ್ java’ ಎಂಬ ಮಾಡೆಲ್ ಅನ್ನು ನಾನು ಈಗಾಗಲೇ ತಯಾರಿಸಿದ್ದೇನೆ. |
08:16 | ನಾವು ಈ ‘ಜಾವಾ class’ ಅನ್ನು, “org ಡಾಟ್ spokentutorial ಡಾಟ್ model” ಎಂಬ ಪ್ಯಾಕೇಜ್ ನ ಒಳಗೆ ಕ್ರಿಯೇಟ್ ಮಾಡಿದ್ದೇವೆ ಎಂಬುದನ್ನು ಗಮನಿಸಿ. |
08:24 | ನಾವು firstName, surname, age, gender, email, username, password ಎಂಬ ‘ಅಟ್ರಿಬ್ಯೂಟ್’ ಗಳನ್ನು ಹೊಂದಿದ್ದೇವೆ. |
08:33 | ನಾವು ಅವುಗಳನ್ನು ಖಾಲಿ ವ್ಯಾಲ್ಯೂಗಳಿಗೆ ‘ಇನಿಶಿಯಲೈಜ್’ (initialize) ಮಾಡಿದ್ದೇವೆ. |
08:37 | ಆಮೇಲೆ, ನಾವು ‘ಪ್ಯಾರಾಮೀಟರೈಜ್ಡ್ ಕನ್ಸ್ಟ್ರಕ್ಟರ್’ ಅನ್ನು (parameterized constructor) ಹೊಂದಿದ್ದೇವೆ. |
08:41 | ನಾವು ‘ಡೀಫಾಲ್ಟ್ ಕನ್ಸ್ಟ್ರಕ್ಟರ್’ ಅನ್ನು ಸಹ ಹೊಂದಿದ್ದೇವೆ. |
08:44 | ‘getFirstName()’ ಎಂಬ ಮೆಥಡ್ ಅನ್ನು ನಾವು ವ್ಯಾಖ್ಯಾನಿಸುತ್ತೇವೆ (define). |
08:47 | ‘setFirstName()’ ಎಂಬ ಮೆಥಡ್ ಅನ್ನು ಸಹ ನಾವು ವ್ಯಾಖ್ಯಾನಿಸುತ್ತೇವೆ. |
08:51 | ಹೀಗೆಯೇ, ನಾವು ಪ್ರತಿಯೊಂದು ಅಟ್ರಿಬ್ಯೂಟ್ ಗಾಗಿ ‘set’ ಮತ್ತು ‘get’ ಮೆಥಡ್ ಗಳನ್ನು ವ್ಯಾಖ್ಯಾನಿಸುತ್ತೇವೆ. |
08:57 | ಬ್ರೌಸರ್ ಗೆ ಹಿಂದಿರುಗಿ. |
08:59 | ಈಗ, ರಿಜಿಸ್ಟರ್ ಮಾಡಲು, ‘here’ ಎಂಬ ಲಿಂಕ್ ನ ಮೇಲೆ ನಾವು ಕ್ಲಿಕ್ ಮಾಡೋಣ. |
09:03 | ‘ರಿಜಿಸ್ಟ್ರೇಶನ್ ಪೇಜ್’ನಲ್ಲಿ, ಎಲ್ಲ ಫೀಲ್ಡ್ ಗಳಲ್ಲಿ ಟೈಪ್ ಮಾಡಿ. |
09:07 | ಆಮೇಲೆ ‘Add User’ ನ ಮೇಲೆ ಕ್ಲಿಕ್ ಮಾಡಿ. |
09:10 | ನಾವು ‘Add User Success’ ಎಂಬ ಪೇಜನ್ನು ಪಡೆಯುತ್ತೇವೆ. |
09:14 | ನಮಗೆ “Your request to add harshita was successful” ಎಂಬ ಮೆಸೇಜ್ (ಸಂದೇಶ) ಸಿಗುತ್ತದೆ. |
09:20 | ಇಲ್ಲಿ, “harshita” ಎನ್ನುವುದು ನಾವು ಕೊಟ್ಟಿರುವ username ಆಗಿತ್ತು. |
09:24 | ನಾವು ಈಗ ಇದನ್ನು ಹೇಗೆ ಮಾಡಲಾಗಿದೆ ಎನ್ನುವುದನ್ನು ನೋಡೋಣ. |
09:28 | ಆದ್ದರಿಂದ, IDE ಗೆ ಬದಲಾಯಿಸಿ. |
09:30 | ‘AddUserServlet.Java’ ಗೆ (ಆಡ್ ಯೂಸರ್ ಸರ್ವ್ಲೆಟ್ ಡಾಟ್ ಜಾವಾ) ಹೋಗಿ. |
09:35 | ಈ ಹಂತಗಳು, 'GreetingServlet ಡಾಟ್java'ದಲ್ಲಿ ನಾವು ಅನುಸರಿಸಿದಂತೆಯೇ ಆಗಿವೆ. |
09:40 | ಮೊದಲು, ನಾವು ‘getParameter()’ ಮೆಥಡ್ ಅನ್ನು ಬಳಸಿ ಫಾರ್ಮ್ ನ (form) ಪ್ಯಾರಾಮೀಟರ್ ಗಳನ್ನು ಪಡೆಯುತ್ತೇವೆ. |
09:46 | User ಮಾಡೆಲ್ ನ ‘ಇನ್ಸ್ಟನ್ಸ್’ (ಉದಾಹರಣೆ) ಎಂದು, ಪ್ರತ್ಯೇಕ ಅಟ್ರಿಬ್ಯೂಟ್ ಗಳೊಂದಿಗೆ ವೇರಿಯೆಬಲ್ user ಅನ್ನು ನಾವು ಇನಿಶಿಯಲೈಜ್ ಮಾಡುತ್ತೇವೆ. |
09:53 | ನಾವು setAttribute() ಮೆಥಡ್ ಅನ್ನು ಬಳಸಿ, ವೇರಿಯೆಬಲ್ user ಅನ್ನು, request ನ ಸ್ಕೋಪ್ ನಲ್ಲಿ, ಸೆಟ್ ಮಾಡುತ್ತೇವೆ. |
10:01 | ಫಾರ್ಮನ್ನು ತುಂಬುವಾಗ ‘ಎರರ್’ಗಳು ಇರದಿದ್ದರೆ, Users ಎಂಬ ಟೇಬಲ್ ನಲ್ಲಿ ವ್ಯಾಲ್ಯೂಗಳನ್ನು ಸೇರಿಸಲು, ನಾವು ಕ್ವೆರಿಯನ್ನು ಎಕ್ಸಿಕ್ಯೂಟ್ ಮಾಡುತ್ತೇವೆ. |
10:10 | ಆಮೇಲೆ ನಾವು ‘successUser’ ಪೇಜ್ ಗೆ ಕಳಿಸುತ್ತೇವೆ (ಫಾರ್ವರ್ಡ್). |
10:15 | ಈಗ, ನಾವು ‘successUser ಡಾಟ್ jsp’ಗೆ ಬರೋಣ. |
10:19 | ಮೊದಲು, ನಾವು ‘User ಡಾಟ್ java’ ಅನ್ನು ಇಂಪೋರ್ಟ್ ಮಾಡಿದ್ದೇವೆ. |
10:24 | ‘JSP’ ಯಲ್ಲಿ, ಕೋಡ್ ನ ಈ ಸಾಲನ್ನು ‘ಡೈರೆಕ್ಟಿವ್’ ಎಂದು ಕರೆಯುತ್ತಾರೆ. |
10:28 | ‘JSP ಡೈರೆಕ್ಟಿವ್’, ಓಪನಿಂಗ್ ಟ್ಯಾಗ್ ನೊಂದಿಗೆ- ‘ಲೆಸ್ ದ್ಯಾನ್ ಚಿಹ್ನೆ (<) ಶೇಕಡಾ ಚಿಹ್ನೆ (%) ಹಾಗೂ ಆಟ್-ದ- ರೇಟ್ ಚಿಹ್ನೆ (@)’ ಆರಂಭವಾಗುತ್ತದೆ ಮತ್ತು ಕ್ಲೋಸಿಂಗ್ ಟ್ಯಾಗ್ ನೊಂದಿಗೆ – ‘ಶೇಕಡಾ ಚಿಹ್ನೆ (%) ಹಾಗೂ ಗ್ರೇಟರ್ ದ್ಯಾನ್ ಚಿಹ್ನೆ (>)’ ಕೊನೆಗೊಳ್ಳುತ್ತದೆ. |
10:42 | ಇದು, ‘ಪೇಜ್ ಡಿರೆಕ್ಟಿವ್’ ಆಗಿದೆ. |
10:45 | ಈ ‘ಪೇಜ್ ಡಿರೆಕ್ಟಿವ್’, ಇಂಪೋರ್ಟ್ ಮಾಡಿಕೊಂಡ ಎಲ್ಲ ಪ್ಯಾಕೇಜ್ ಗಳ ಲಿಸ್ಟನ್ನು ಒಳಗೊಂಡಿದೆ. |
10:50 | ‘user’ ಎಂಬ ಅಟ್ರಿಬ್ಯೂಟ್ ನ ವ್ಯಾಲ್ಯೂವನ್ನು ನಾವು ಪಡೆಯುತ್ತೇವೆ ಮತ್ತು ಅದನ್ನು User ಆಬ್ಜೆಕ್ಟ್ ಎಂದು ಸ್ಟೋರ್ ಮಾಡುತ್ತೇವೆ. |
10:57 | ಆಮೇಲೆ, ಇಲ್ಲಿ ‘ಸಕ್ಸೆಸ್ ಮೆಸೇಜ್’ ಇದೆ. |
11:00 | ಇಲ್ಲಿ, ನಾವು Username ಅನ್ನು ಪಡೆದುಕೊಂಡಿದ್ದೇವೆ. |
11:04 | ನಾವು request ಆಬ್ಜೆಕ್ಟ್ ನ ಮೇಲೆ, getUsername() ಮೆಥಡ್ ಅನ್ನು ಉಪಯೋಗಿಸಿದ್ದೇವೆ. |
11:09 | ‘ಸ್ಕ್ರಿಪ್ಟ್ಲೆಟ್ ಟ್ಯಾಗ್’ ಗಳನ್ನು ಬಳಸಿ ನಾವು ಇದನ್ನು ಮಾಡಿದ್ದೇವೆ. |
11:12 | ಈಗ, ನಾವು ಬ್ರೌಸರ್ ಗೆ ಹಿಂತಿರುಗೋಣ. |
11:15 | ಡೇಟಾಬೇಸ್ ನಲ್ಲಿ ಈಗಾಗಲೇ ಇರುವ ಯೂಸರನ್ನು ಸೇರಿಸಲು ನಾವು ಪ್ರಯತ್ನಿಸೋಣ. |
11:20 | ಆದ್ದರಿಂದ, ನಾನು ಇನ್ನೊಮ್ಮೆ harshita ಳನ್ನು ಸೇರಿಸಲು ಪ್ರಯತ್ನಿಸುವೆನು. |
11:24 | ನಮಗೆ “Please correct the following errors!!!! Duplicate entry 'harshita' for key ‘UserName’ ” ಎಂಬ ಎರರ್ ಮೆಸೇಜ್ ಸಿಗುವುದನ್ನು ನಾವು ನೋಡಬಹುದು. |
11:33 | ಒಂದು ಯೂಸರ್ ಗಾಗಿ ನಾವು ಈಗ ಮತ್ತೊಮ್ಮೆ ರಿಜಿಸ್ಟರ್ ಮಾಡೋಣ. |
11:37 | ಇಲ್ಲಿ, ಈಗ ನಾನು ಫಾರ್ಮನ್ನು ತುಂಬಿದ್ದೇನೆ. |
11:40 | Age ಫೀಲ್ಡ್ ನಲ್ಲಿ ನಾನು ಒಂದು ತಪ್ಪನ್ನು ಸೃಷ್ಟಿಸಿದ್ದೇನೆ. |
11:44 | ಸರಿಯಾದ ಸಂಖ್ಯೆಗೆ ಬದಲಾಗಿ ನಾನು ‘ab’ ಎಂದು ಟೈಪ್ ಮಾಡಿದ್ದೇನೆ. |
11:48 | ಈಗ, ‘Add User’ ನ ಮೇಲೆ ಕ್ಲಿಕ್ ಮಾಡಿ. |
11:51 | ನಮಗೆ “The age must be a positive integer” ಎಂಬ ಎರರ್-ಮೆಸೇಜ್ ಸಿಗುವುದನ್ನು ನಾವು ನೋಡುತ್ತೇವೆ. |
11:57 | ಈಗ, ಇದನ್ನು ಹೇಗೆ ಮಾಡಲಾಗಿದೆ ಎನ್ನುವುದನ್ನು ನಾವು ನೋಡೋಣ. |
12:00 | IDE ಗೆ ಬದಲಾಯಿಸಿ. |
12:03 | ‘AddUserServlet ಡಾಟ್ java’ (ಆಡ್ ಯೂಸರ್ ಸರ್ವ್ಲೆಟ್ ಡಾಟ್ ಜಾವಾ) ಅನ್ನು ಓಪನ್ ಮಾಡಿ. |
12:08 | ಇಲ್ಲಿಯೂ ಸಹ, ‘errorMsgs’ ಗಾಗಿ ನಾವು ಒಂದು ಲಿಸ್ಟ್ ಅನ್ನು ತಯಾರಿಸಿದ್ದೇವೆ. |
12:11 | ಆಮೇಲೆ, ನಾವು setAttribute() ಮೆಥಡ್ ಅನ್ನು ಬಳಸಿ, request ನ ಸ್ಕೋಪ್ ನಲ್ಲಿ errorMsgs ಎಂಬ ವೇರಿಯೆಬಲ್ ಅನ್ನು ಸೆಟ್ ಮಾಡುತ್ತೇವೆ. |
12:18 | ನಂತರ, ನಾವು integer ಟೈಪ್ ನ ‘ageUser’ ಅನ್ನು ಡಿಕ್ಲೇರ್ ಮಾಡಿ, ಅದನ್ನು -1 ಗೆ ‘ಇನಿಶಿಯಲೈಸ್’ ಮಾಡಿದ್ದೇವೆ. |
12:26 | ‘try catch’ ಬ್ಲಾಕ್ ನ ಒಳಗಡೆ, ನಾವು parseInt() (ಪಾರ್ಸ್ ಇಂಟ್) ಮೆಥಡ್ ಅನ್ನು ಬಳಸಿದ್ದೇವೆ. |
12:31 | ಒಂದು ಸಂಖ್ಯೆಯನ್ನು ಸ್ಟ್ರಿಂಗ್ ನ ರೂಪದಲ್ಲಿ ಇನ್ಪುಟ್ ಎಂದು ಕೊಟ್ಟಾಗ, ಇದು ಇಂಟಿಜರ್ ಅನ್ನು (ಪೂರ್ಣಸಂಖ್ಯೆ) ಹಿಂದಿರುಗಿಸುವುದು. |
12:37 | ಹೀಗಾಗಿ, age ಫೀಲ್ಡ್, ಸರಿಯಾದ ಪೂರ್ಣಸಂಖ್ಯೆಯನ್ನು ಹೊಂದಿರುವಂತೆ ಇಲ್ಲಿ ನಾವು ವ್ಯಾಲಿಡೇಟ್ ಮಾಡುತ್ತೇವೆ. |
12:44 | ಒಂದುವೇಳೆ ವ್ಯಾಲಿಡೇಶನ್ ವಿಫಲವಾದರೆ, ಆಗ ನಾವು errorMsgs ಲಿಸ್ಟ್ ಗೆ ‘ಎರರ್ ಮೆಸೇಜ’ನ್ನು ಸೇರಿಸುತ್ತೇವೆ. |
12:51 | “The age must be a positive integer”. |
12:54 | ಹೀಗೆಯೇ, ಉಳಿದೆಲ್ಲ ಫೀಲ್ಡ್ ಗಳು ಸಹ ಸರಿಯಾದ ಡೇಟಾ ಅನ್ನು ಹೊಂದಿರುವಂತೆ ನಾವು ವ್ಯಾಲಿಡೇಟ್ ಮಾಡಬೇಕು. |
13:01 | ಒಂದುವೇಳೆ ‘errorMsgs ಲಿಸ್ಟ್’ ಖಾಲಿ ಇರದಿದ್ದರೆ, ಆಗ ನಾವು errorMsgs ಅನ್ನು ‘addUser ಡಾಟ್ jsp’ಯ ಮೇಲೆಯೇ ತೋರಿಸುತ್ತೇವೆ. |
13:09 | RequestDispatcher ಅನ್ನು ಬಳಸಿ, ಇದನ್ನು ಹೇಗೆ ಮಾಡುವುದೆಂದು ನಾವು ಈಗಾಗಲೇ ನೋಡಿದ್ದೇವೆ. |
13:15 | ಈಗ, ನಾವು ‘addUser ಡಾಟ್ jsp’ ಗೆ ಬರೋಣ. |
13:19 | ಇಲ್ಲಿ ಸಹ, ಮೊದಲು ನಾವು ‘User ಡಾಟ್ java’ ಅನ್ನು ಇಂಪೋರ್ಟ್ ಮಾಡಿದ್ದೇವೆ. |
13:24 | ‘ಸ್ಕ್ರಿಪ್ಟ್ಲೆಟ್ ಟ್ಯಾಗ್’ಗಳ ಒಳಗಡೆ, User ಟೈಪ್ ನ ಒಂದು ಆಬ್ಜೆಕ್ಟ್ ಅನ್ನು ನಾವು ಕ್ರಿಯೇಟ್ ಮಾಡಿದ್ದೇವೆ. |
13:31 | ನಂತರ, ನಾವು getAttribute() ಮೆಥಡ್ ಅನ್ನು ಬಳಸಿ, errorMsgs ಎಂಬ ಅಟ್ರಿಬ್ಯೂಟ್ ನ ವ್ಯಾಲ್ಯೂವನ್ನು ಪಡೆಯುತ್ತೇವೆ. |
13:38 | ಈ ವ್ಯಾಲ್ಯೂ, ‘null’ ಆಗಿದೆಯೇ ಎಂದು ನಾವು ಪರೀಕ್ಷಿಸುತ್ತೇವೆ. |
13:43 | ಅದು ‘null’ (ನಲ್) ಆಗಿರದಿದ್ದರೆ, ಆಗ ನಾವು ‘index ಡಾಟ್ jsp’ಗೆ ಮಾಡಿದಂತೆಯೇ ‘ಎರರ್ ಮೆಸೇಜ್’ಅನ್ನು ತೋರಿಸುತ್ತೇವೆ. |
13:51 | ಇಲ್ಲದಿದ್ದರೆ, ನಾವು ‘User ಮಾಡೆಲ್’ಅನ್ನು ಬಳಸಿ, ‘request’ ನಿಂದ ‘user’ ಎಂಬ ಅಟ್ರಿಬ್ಯೂಟ್ ನ ವ್ಯಾಲ್ಯೂವನ್ನು ಪಡೆಯುವೆವು. |
13:59 | ಆಮೇಲೆ, ಇಲ್ಲಿ ‘ಫಾರ್ಮ್’ ಇದೆ. |
14:01 | ಈ ಫಾರ್ಮ್ ಟ್ಯಾಗ್, action ಅನ್ನು AddUserServlet ಎಂದು ಹಾಗೂ method ಅನ್ನು POST ಎಂದು ಹೊಂದಿದೆ. |
14:07 | ಮೊದಲನೆಯ ಫೀಲ್ಡ್, First Name ಆಗಿದ್ದು ‘input type’ಅನ್ನು “text” ಎಂದು, ‘name’,ಅನ್ನು “firstName” ಎಂದು ಮತ್ತು ‘value’ಅನ್ನು “user ಡಾಟ್ getFirstName” ಎಂದು ಪಡೆದಿದೆ. |
14:18 | ಇಲ್ಲಿ, ನಾವು ‘firstName’ ನ ವ್ಯಾಲ್ಯೂವನ್ನು ಖಾಲಿ ಸ್ಟ್ರಿಂಗ್ ಗೆ ‘ಇನಿಶಿಯಲೈಸ್’ ಮಾಡುತ್ತಿದ್ದೇವೆ. |
14:24 | ಹೀಗೆಯೇ, ಉಳಿದ ಫೀಲ್ಡ್ ಗಳಿಗಾಗಿ ನೀವು ಮಾಡಬೇಕು. |
14:28 | ನಾವು ಒಂದು ‘submit ಬಟನ್’ಅನ್ನು ಸಹ ಹೊಂದಿದ್ದೇವೆ ಮತ್ತು ಇದರ ವ್ಯಾಲ್ಯೂ ‘Add User’ ಎಂದು ಇರುತ್ತದೆ. |
14:33 | ‘addUser.jsp’ ಯಲ್ಲಿನ ಫೀಲ್ಡ್ ಗಳನ್ನು ನಾವು ಈ ರೀತಿಯಾಗಿ ವ್ಯಾಲಿಡೇಟ್ ಮಾಡುತ್ತೇವೆ. |
14:38 | ‘addUser’ ಪೇಜ್ ನ ಮೇಲೆ ನೀವು ವಿವಿಧ ‘ಎರರ್’ಗಳನ್ನು ಪ್ರಯತ್ನಿಸಬಹುದು. |
14:42 | ಈಗ, ಯೂಸರ್ “harshita”ಳನ್ನು ಡೇಟಾಬೇಸ್ ಗೆ ಸೇರಿಸಲಾಗಿದೆಯೇ ಎನ್ನುವುದನ್ನು ನಾವು ನೋಡೋಣ. |
14:49 | ಆದ್ದರಿಂದ Users ಟೇಬಲ್ ಗೆ ಹಿಂತಿರುಗಿ. ‘harshita’ ಳನ್ನು ಡೇಟಾಬೇಸ್ ಗೆ ಸೇರಿಸಲಾಗಿದೆ ಎಂದು ನಾವು ನೋಡಬಹುದು. |
14:56 | ಈ ಟ್ಯುಟೋರಿಯಲ್ ನಲ್ಲಿ, ನಾವು - |
14:58 | ‘ಡೇಟಾಬೇಸ್ ಕನೆಕ್ಟಿವಿಟೀ’ ಮತ್ತು |
15:00 | ‘ಫೀಲ್ಡ್ ವ್ಯಾಲಿಡೇಶನ್’ಗಳನ್ನು ಕಲಿತಿದ್ದೇವೆ. |
15:02 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. |
15:07 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
15:11 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
15:15 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: |
15:17 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
15:20 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
15:23 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
contact@spoken-tutorial.org |
15:29 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
15:32 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
15:38 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
15:48 | ಒಂದು ಪ್ರಮುಖ ಸಾಫ್ಟ್ವೇರ್ MNC, ತಮ್ಮ Corporate Social Responsibility programme ನ ಮೂಲಕ ಈ Library Management System ಅನ್ನು ಕೊಡುಗೆಯಾಗಿ ನೀಡಿದ್ದಾರೆ. |
15:57 | ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ ಅವರು ವಿಷಯವನ್ನು ಸಹ ಊರ್ಜಿತಗೊಳಿಸಿದ್ದಾರೆ (validated). |
16:02 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .
ವಂದನೆಗಳು. |