Java-Business-Application/C2/Servlet-Methods/Kannada
From Script | Spoken-Tutorial
Revision as of 15:41, 19 November 2015 by Vasudeva ahitanal (Talk | contribs)
Time | Narration |
00:01 | Servlet Methods ಎನ್ನುವ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು - |
00:08 | * JSP ಯನ್ನು ಬಳಸಿ, ಸರಳವಾದ ಒಂದು ‘ಲಾಗ್-ಇನ್’ ಫಾರ್ಮ್ ಅನ್ನು ತಯಾರಿಸಲು, |
00:13 | * ‘doGet ಮೆಥಡ್’ಅನ್ನು ಬಳಸಿ ಪ್ಯಾರಾಮೀಟರ್ ಗಳನ್ನು ರವಾನಿಸಲು (pass), |
00:16 | * ‘doPost ಮೆಥಡ್’ಅನ್ನು ಬಳಸಿ ಪ್ಯಾರಾಮೀಟರ್ ಗಳನ್ನು ರವಾನಿಸಲು (pass) ಮತ್ತು |
00:20 | * doGet ಹಾಗೂ doPost ಮೆಥಡ್ ಗಳ ನಡುವಿನ ವ್ಯತ್ಯಾಸಗಳನ್ನು ಕಲಿಯುವೆವು. |
00:25 | ಇಲ್ಲಿ, ನಾವು - |
00:26 | * Ubuntu (ಉಬಂಟು) ಆವೃತ್ತಿ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು), |
00:30 | * Netbeans IDE 7.3 (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು), |
00:33 | * JDK 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ |
00:36 | * Firefox ವೆಬ್ ಬ್ರೌಸರ್ 21.0 ಇವುಗಳನ್ನು ಬಳಸುತ್ತಿದ್ದೇವೆ. |
00:39 | ನೀವು, ನಿಮಗೆ ಇಷ್ಟವಾದ ಯಾವುದೇ ವೆಬ್-ಬ್ರೌಸರ್ ಅನ್ನು ಉಪಯೋಗಿಸಬಹುದು. |
00:43 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ - |
00:46 | * Netbeans IDE ಯ ಮೂಲಕ Core Java ದ ಪ್ರಯೋಗ, |
00:49 | * HTML ಹಾಗೂ |
00:51 | * 'Java ಸರ್ವ್ಲೆಟ್' ಮತ್ತು 'JSP’ಗಳ ಪರಿಚಯವಿರಬೇಕು. |
00:56 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
01:00 | ನಾವು, ‘Library Management System’ ಎಂಬ ನಮ್ಮ ‘ವೆಬ್-ಅಪ್ಲಿಕೇಶನ್’ ಅನ್ನು ತಯಾರಿಸುವುದರ ಮೂಲಕ ಆರಂಭಿಸುವೆವು. |
01:06 | ಮೊದಲು, ನಾವು ‘ಹೋಮ್- ಪೇಜ್’ ಅನ್ನು ತಯಾರಿಸುವೆವು. |
01:09 | ‘ಹೋಮ್- ಪೇಜ್’, ಸರಳವಾದ ಒಂದು ‘ಲಾಗ್-ಇನ್’ ಫಾರ್ಮ್ ಅನ್ನು ಒಳಗೊಂಡಿರುವುದು. |
01:14 | ಪ್ರಮಾಣೀಕೃತ ಬಳಕೆದಾರರು (ಯೂಸರ್), Library Management System ಗೆ ‘ಲಾಗ್-ಇನ್’ ಮಾಡಲು ಇದು ಅನುಮತಿಸುವುದು. |
01:20 | ಈಗ, ನಾವು Netbeans IDE ಗೆ ಬದಲಾಯಿಸೋಣ. |
01:23 | ಈ ಮೊದಲೇ ನಾವು ಮಾರ್ಪಡಿಸಿದ, 'index ಡಾಟ್ jsp' ಪೇಜ್ ಗೆ ಹೋಗೋಣ. |
01:30 | ನಮ್ಮ ‘ಹೋಮ್ ಪೇಜ’ನ್ನು ತಯಾರಿಸಲು ನಾನು ಈ ಪೇಜನ್ನು ಮಾರ್ಪಡಿಸಿದ್ದೇನೆ. |
01:35 | ನಾವು title (ಟೈಟಲ್) ಅನ್ನು, Home Page (ಹೋಮ್ ಪೇಜ್) ಎಂದು ಇಡೋಣ. |
01:38 | ‘body’ ಯ ಒಳಗಡೆ, border =(ಈಕ್ವಲ್ ಟು) 1 ಇರುವ ಒಂದು ‘table’ ಇದೆ. |
01:44 | ಇಲ್ಲಿ, ನೀವು ಕೋಡನ್ನು ನೋಡಬಹುದು. |
01:47 | table ನ ಒಳಗಡೆ, ನಾವು 'Welcome to Library Management System’ ಎಂಬ ಹೆಡ್ಡಿಂಗ್ ಅನ್ನು ಸೇರಿಸಿದ್ದೇವೆ. |
01:54 | ನಂತರ, ‘This is the home page for Library Management System’ ಎಂಬುದನ್ನು ಒಳಗೊಂಡಿರುವ ಒಂದು ‘ಪ್ಯಾರಾಗ್ರಾಫ್ ಟ್ಯಾಗ್’ ಇದೆ. |
02:03 | ಆಮೇಲೆ, 'visitorHomePage . jsp’ (ವಿಜಿಟರ್ ಹೋಮ್ ಪೇಜ್ ಡಾಟ್ ಜೆ-ಎಸ್-ಪಿ) ಎಂಬ ಪೇಜ್ ಗೆ ಲಿಂಕ್ ಮಾಡುವ ಒಂದು ‘ಹೈಪರ್ ಲಿಂಕ್’ ಇದೆ. |
02:11 | ನಾವು ಈ ಪೇಜನ್ನು ನಂತರ ತಯಾರಿಸುವೆವು. |
02:13 | ನಂತರ, ಬಹಳ ಸರಳವಾದ ಒಂದು ‘ಲಾಗ್-ಇನ್’ ಫಾರ್ಮ್ ಇದೆ. |
02:18 | ಈ ಫಾರ್ಮ್, ರಜಿಸ್ಟರ್ ಮಾಡಿದ ‘ಯೂಸರ್’ (ಬಳಕೆದಾರ) ನಿಗೆ ‘ಲಾಗ್-ಇನ್’ ಮಾಡಲು ಅನುಮತಿಸುತ್ತದೆ. |
02:22 | ಈ ಫಾರ್ಮನ್ನು ತಯಾರಿಸುವ ಮೊದಲು, ನೀವು ‘GreetingServlet’ ಎಂಬ ಹೆಸರಿನ ಒಂದು ಸರ್ವ್ಲೆಟ್ ಅನ್ನು ತಯಾರಿಸಬೇಕು. |
02:28 | ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ಹಿಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಿದಂತೆ ಒಂದು ಹೊಸ ಸರ್ವ್ಲೆಟ್ ಅನ್ನು ತಯಾರಿಸಿ. |
02:35 | ಸರ್ವ್ಲೆಟ್ ನ ಹೆಸರು, ‘GreetingServlet’ ಎಂದು ಇರುವುದನ್ನು ಗಮನಿಸಿ. |
02:39 | URL ಪ್ಯಾಟರ್ನ್, GreetingServletPath ಎಂದು ಆಗಿರಬೇಕು. |
02:44 | ಈ ಫಾರ್ಮ್, ಎರಡು ‘input ಎಲಿಮೆಂಟ್’ಗಳನ್ನು ಹೊಂದಿದೆ - Username ಹಾಗೂ Password. |
02:50 | ಇದು, ‘Sign In’ ಎಂದು ಹೇಳುವ ಒಂದು Submit ಬಟನ್ ಅನ್ನು ಸಹ ಹೊಂದಿದೆ. |
02:55 | ನಂತರ, 'addUser.jsp’ ಗೆ ಲಿಂಕ್ ಹೊಂದಿರುವ ಒಂದು ‘ಪ್ಯಾರಾಗ್ರಾಫ್ ಟ್ಯಾಗ್’ ಇದೆ. |
03:03 | ಇನ್ನೂ ರಿಜಿಸ್ಟರ್ (ನೋಂದಣಿ) ಮಾಡದೇ ಇರುವ ‘ಯೂಸರ್’ಗಳಿಗಾಗಿ, ಇದು ‘ರಿಜಿಸ್ಟ್ರೇಶನ್ ಪೇಜ್’ ಆಗಿದೆ. |
03:09 | ನಾವು ಈಗ, ನಮ್ಮ GreetingServlet.java ಗೆ ಹೋಗೋಣ. |
03:14 | ‘org.spokentutorial’ ಎಂಬ ಪ್ಯಾಕೇಜ್ ನಲ್ಲಿಯೇ ‘GreetingServlet.java’, ತಯಾರಿಸಲ್ಪಟ್ಟಿದೆ ಎಂಬುದನ್ನು ಗಮನಿಸಿ. |
03:23 | ಈಗ ಈ ಸರ್ವ್ಲೆಟ್ ಗೆ, request ಆಬ್ಜೆಕ್ಟ್ ನಿಂದ, ಫಾರ್ಮ್ ಡೇಟಾವನ್ನು ‘ಆಕ್ಸೆಸ್’ ಮಾಡಲು (ಬಳಸಲು) ಸಾಧ್ಯವಾಗುವುದು. |
03:30 | ಈ ಸರ್ವ್ಲೆಟ್, ‘ಕಂಟ್ರೋಲರ್’ನ ಹಾಗೆ ಕೆಲಸ ಮಾಡುವುದು. |
03:33 | ಈ ಮೊದಲು, ನಾವು ‘ಕಂಟ್ರೋಲರ್’ ಅನ್ನು ನೋಡಿದ್ದೇವೆ ಎನ್ನುವುದು ನಿಮಗೆ ನೆನಪಿದೆಯೇ? |
03:38 | ಈಗ, ಸರ್ವ್ಲೆಟ್, ‘ಕಂಟ್ರೋಲರ್’ನಂತೆ ಏನು ಮಾಡುತ್ತದೆ ಎನ್ನುವುದನ್ನು ನಾವು ನೋಡುವೆವು. |
03:42 | ‘ಫಾರ್ಮ್ ಡೇಟಾ’, request ಆಬ್ಜೆಕ್ಟ್ ನಲ್ಲಿ ನೆಲೆಸಿರುವುದು. |
03:46 | ‘ಫಾರ್ಮ್ ಡೇಟಾ’ ಪ್ಯಾರಾಮೀಟರ್ ಗಳನ್ನು ಪಡೆದುಕೊಳ್ಳುವುದು ಮೊದಲನೆಯ ಕೆಲಸವಾಗಿದೆ. |
03:51 | request ಎಂಬ ಆಬ್ಜೆಕ್ಟ್ ನ ಮೇಲೆ, getParameter ಮೆಥಡ್ ಅನ್ನು ಬಳಸಿ ಇದನ್ನು ಮಾಡಲಾಗುತ್ತದೆ. |
03:57 | ಆದ್ದರಿಂದ, ನಾವು ‘Netbeans IDE’ ಗೆ ಬದಲಾಯಿಸೋಣ. |
04:02 | ‘doGet’ ಮೆಥಡ್ ನ ಒಳಗಡೆ ಹೀಗೆ ಟೈಪ್ ಮಾಡಿ: |
04:04 | PrintWriter ಸ್ಪೇಸ್ out ಇಕ್ವಲ್ ಟು response ಡಾಟ್ getWriter(); |
04:14 | ನಂತರ, ನಾವು ‘ಫಾರ್ಮ್ ಡೇಟಾ’ ಪ್ಯಾರಾಮೀಟರ್ ಗಳನ್ನು ಪಡೆದುಕೊಳ್ಳುವೆವು. |
04:18 | ಆದ್ದರಿಂದ, ಮುಂದಿನ ಸಾಲಿನಲ್ಲಿ ಹೀಗೆ ಟೈಪ್ ಮಾಡಿ: |
04:20 | String ಸ್ಪೇಸ್ username ಇಕ್ವಲ್ ಟು request ಡಾಟ್ getParameter ಬ್ರಾಕೆಟ್ಸ್ ಒಳಗಡೆ ಮತ್ತು ಡಬಲ್ ಕೋಟ್ಸ್ ನಲ್ಲಿ userName ಮತ್ತು ಸೆಮಿಕೋಲನ್. |
04:35 | ಈ username, ನಾವು ‘ಫಾರ್ಮ್ ಟ್ಯಾಗ್’ ನಲ್ಲಿ User Name ಗಾಗಿ ಸೇರಿಸಿದ ಹೆಸರು ಆಗಿದೆ ಎನ್ನುವುದನ್ನು ಗಮನಿಸಿ. |
04:43 | ಹೀಗೆಯೇ, ನಾವು password ಅನ್ನು ಸಹ ಪಡೆದುಕೊಳ್ಳುವೆವು. |
04:48 | ಆದ್ದರಿಂದ, ಮುಂದಿನ ಸಾಲಿನಲ್ಲಿ ಹೀಗೆ ಟೈಪ್ ಮಾಡಿ: String ಸ್ಪೇಸ್ password ಇಕ್ವಲ್ ಟು request ಡಾಟ್ getParameter ಬ್ರಾಕೆಟ್ಸ್ ಒಳಗಡೆ ಮತ್ತು ಡಬಲ್ ಕೋಟ್ಸ್ ನಲ್ಲಿ password ಸೆಮಿಕೋಲನ್. |
05:03 | ನಂತರ, ನಾವು ಔಟ್ಪುಟ್ ನಲ್ಲಿ User Name ಅನ್ನು ಪ್ರಿಂಟ್ ಮಾಡುವೆವು. |
05:08 | ಆದ್ದರಿಂದ, ಮುಂದಿನ ಸಾಲಿನಲ್ಲಿ ಹೀಗೆ ಟೈಪ್ ಮಾಡಿ: |
05:10 | out ಡಾಟ್ println ಬ್ರಾಕೆಟ್ಸ್ ಒಳಗಡೆ ಮತ್ತು ಡಬಲ್ ಕೋಟ್ಸ್ ನಲ್ಲಿ Hello from GET Method ಪ್ಲಸ್ username; |
05:21 | ಈಗ, ಈ ಪ್ರೊಜೆಕ್ಟ್ ಅನ್ನು ‘ರನ್’ ಮಾಡಲು, MyFirstProject ನ ಮೇಲೆ ರೈಟ್-ಕ್ಲಿಕ್ ಮಾಡಿ. |
05:27 | ‘Clean and Build’ ನ ಮೇಲೆ ಕ್ಲಿಕ್ ಮಾಡಿ. |
05:29 | ಮತ್ತೊಮ್ಮೆ ‘MyFirstProject’ ನ ಮೇಲೆ ರೈಟ್-ಕ್ಲಿಕ್ ಮಾಡಿ, ‘Run’ ನ ಮೇಲೆ ಕ್ಲಿಕ್ ಮಾಡಿ. |
05:35 | ಹೀಗೆ, ಸರ್ವರ್ ಈಗ ‘ರನ್’ ಆಗುತ್ತಿದೆ. |
05:38 | ಅದು MyFirstProject ಅನ್ನು ಅಳವಡಿಸಿದೆ. |
05:41 | ಬ್ರೌಸರ್ ನಲ್ಲಿ ನಮ್ಮ ‘ಹೋಮ್ ಪೇಜ’ನ್ನು ಪ್ರದರ್ಶಿಸಲಾಗಿದೆ. |
05:45 | ಪೇಜ್ ನ ಟೈಟಲ್ (ಶೀರ್ಷಿಕೆ), ‘Home Page’ ಎಂದು ಇರುವುದನ್ನು ಗಮನಿಸಿ. |
05:50 | ಇಲ್ಲಿ ನಾವು, ಬಹಳ ಸರಳವಾದ ಒಂದು ‘ಲಾಗ್-ಇನ್’ ಫಾರ್ಮನ್ನು ನೋಡಬಹುದು. |
05:54 | ನಾನು Username ಹಾಗೂ Password ಗಳನ್ನು ನಮೂದಿಸುತ್ತೇನೆ (enter). |
05:58 | ನಾನು Username ಅನ್ನು “arya” ಎಂದು |
06:02 | ಮತ್ತು Password ಅನ್ನು “arya*123” ( ಆರ್ಯಾ ಸ್ಟಾರ್ ವನ್-ಟು-ಥ್ರೀ) ಎಂದು ಟೈಪ್ ಮಾಡುವೆನು. |
06.06 | ಆಮೇಲೆ ‘Sign In’ ನ ಮೇಲೆ ಕ್ಲಿಕ್ ಮಾಡಿ. |
06:09 | ನಮಗೆ “Hello from GET Method arya” ಎಂಬ ಔಟ್ಪುಟ್ ಸಿಕ್ಕಿರುವುದನ್ನು ನಾವು ನೋಡಬಹುದು. |
06:15 | ಈಗ, ಯೂಸರ್ ನಿಗೆ ಇಲ್ಲಿ ‘ಲಾಗ್-ಇನ್’ ಮಾಡಲು ಸಾಧ್ಯವಾಯಿತು; ಏಕೆಂದರೆ ನಾವು ಕೋಡ್ ನಲ್ಲಿ ಯಾವುದೇ ‘ವ್ಯಾಲಿಡೇಶನ್’ಅನ್ನು ಸೇರಿಸಿರಲಿಲ್ಲ. |
06:24 | ನಾವು ಇದನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ಮಾಡುವೆವು. |
06:28 | ಈಗ, ಇಲ್ಲಿ URL ನತ್ತ ಒಮ್ಮೆ ನೋಡಿ. |
06:31 | ಇದು ಹೀಗಿದೆ: localhost ಕೋಲನ್ 8080 ಸ್ಲ್ಯಾಶ್ MyFirstProject ಸ್ಲ್ಯಾಶ್ GreetingServletPath ಪ್ರಶ್ನಾರ್ಥಕ ಚಿಹ್ನೆ userName ಇಕ್ವಲ್ ಟು arya ಮತ್ತು password ಇಕ್ವಲ್ ಟು arya *123. |
06:49 | ಈಗ, ‘ಫಾರ್ಮ್ ಡೇಟಾ’ ಹಾಗೂ ‘ಪೇಜ್ನ ಮಾಹಿತಿ’ಗಳನ್ನು ಪ್ರಶ್ನಾರ್ಥಕ ಚಿಹ್ನೆಯಿಂದ ಬೇರ್ಪಡಿಸಲಾಗಿದೆ. |
06:56 | ಫಾರ್ಮ್ ನಲ್ಲಿ ನಾವು ನಮೂದಿಸಿದ username ಮತ್ತು password ಗಳು, URL ನಲ್ಲಿ ಸಹ ಇರುವುದನ್ನು ನಾವು ನೋಡಬಹುದು. |
07:05 | ಈಗ, ‘POST’ ಮೆಥಡ್ ಅನ್ನು ಬಳಸಿ ಇದನ್ನೇ ಮಾಡಲು ಪ್ರಯತ್ನಿಸೋಣ. |
07:10 | ಆದ್ದರಿಂದ, ‘IDE’ ಗೆ ಹಿಂದಿರುಗಿ. |
07:12 | ‘doGet’ ಮೆಥಡ್ ಗಾಗಿ ನಾವು ಬರೆದ ಕೋಡನ್ನು ಕಾಪಿ ಮಾಡಿ ಮತ್ತು ಇದನ್ನು ‘doPost’ ಮೆಥಡ್ ನಲ್ಲಿ ಪೇಸ್ಟ್ ಮಾಡಿ. |
07:20 | ಈಗ, ‘println ಸ್ಟೇಟ್ಮೆಂಟ್’ ಅನ್ನು “Hello from POST Method” ಎಂದು ಬದಲಾಯಿಸಿ. |
07:27 | ಈಗ, ನಾವು ‘index ಡಾಟ್ jsp’ ಯನ್ನು ತೆರೆಯೋಣ (open). |
07:31 | ಇಲ್ಲಿ, ‘form’ ಟ್ಯಾಗ್ ನ ‘method’ ಅಟ್ರಿಬ್ಯೂಟ್ ಅನ್ನು, ‘POST’ ಎಂದು ನಾವು ಬದಲಾಯಿಸಲೇಬೇಕು. |
07:37 | ನೀವು ಈಗ ಈ ಕೋಡನ್ನು ನೋಡಬಹುದು. |
07:42 | ಇದು, ‘form action’ ಇಕ್ವಲ್ ಟು ‘GreetingServletPath’ ‘method ಇಕ್ವಲ್ ಟು POST’ ಎಂದು ಇರುತ್ತದೆ. |
07:49 | ಈಗ, ನಾವು ಈ ಪ್ರೊಜೆಕ್ಟ್ ಅನ್ನು ಮತ್ತೊಮ್ಮೆ ರನ್ ಮಾಡುವೆವು. |
07:53 | ಆದ್ದರಿಂದ, MyFirstProject ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ‘Run’ ನ ಮೇಲೆ ಕ್ಲಿಕ್ ಮಾಡಿ. |
07:58 | ‘GET’ ಮೆಥಡ್ ಅನ್ನು ಬಳಸಿದಾಗ ನಮಗೆ ಸಿಕ್ಕಂತಹ ಔಟ್ಪುಟ್ ಅನ್ನು ನಾವು ಪಡೆದಿದ್ದೇವೆ. |
08:04 | ಆದ್ದರಿಂದ, ನಾವು Username ಹಾಗೂ Password ಗಳನ್ನು ಇನ್ನೊಮ್ಮೆ ಟೈಪ್ ಮಾಡೋಣ. |
08:08 | ಆಮೇಲೆ ‘Sign In’ ನ ಮೇಲೆ ಕ್ಲಿಕ್ ಮಾಡಿ. |
08:12 | ನಮಗೆ “Hello from POST Method arya” ಎಂದು ಸಿಕ್ಕಿರುವುದನ್ನು ಗಮನಿಸಿ. |
08:17 | ಈಗ ಒಮ್ಮೆ URL ನತ್ತ ನೋಡಿ. |
08:19 | ಇದು, 'localhost ಕೋಲನ್ 8080 ಸ್ಲ್ಯಾಶ್ MyFirstProject ಸ್ಲ್ಯಾಶ್ GreetingServlet Path ' ಎಂದು ಆಗಿದೆ. |
08:25 | ಇಲ್ಲಿ, request ನ URL ನಲ್ಲಿ, ನಮಗೆ ಫಾರ್ಮ್ ಡೇಟಾ ಕಂಡುಬರುವುದಿಲ್ಲ. |
08:30 | ಇದು, doGet ಹಾಗೂ doPost ಮೆಥಡ್ ಗಳ ನಡುವಿನ ಮುಖ್ಯ ವ್ಯತ್ಯಾಸವಾಗಿದೆ. |
08:35 | ಈಗ ನಾವು, ‘GET’ ಮೆಥಡ್ ಅನ್ನು ಯಾವಾಗ ಮತ್ತು POST ಮೆಥಡ್ ಅನ್ನು ಯಾವಾಗ ಬಳಸುವುದೆಂದು ತಿಳಿಯೋಣ. |
08:42 | ‘GET’ ಮೆಥಡ್ ಅನ್ನು - |
08:44 | ‘ಫಾರ್ಮ್’ ಚಿಕ್ಕದಾಗಿದ್ದು, ಈ ಕಾರಣದಿಂದ ಡೇಟಾ ಕಡಿಮೆ ಇದ್ದಾಗ ಅಥವಾ |
08:48 | ‘ಯೂಸರ್’ನಿಗೆ, ಡೇಟಾದಲ್ಲಿ ಇರುವುದನ್ನು URL ನಲ್ಲಿ ತೋರಿಸಬೇಕಾದ ಸಂದರ್ಭಗಳಲ್ಲಿ ಬಳಸಲಾಗುವುದು. |
08:53 | ‘POST’ ಮೆಥಡ್ ಅನ್ನು - |
08:55 | ‘ಫಾರ್ಮ್’ ದೊಡ್ಡದಾಗಿದ್ದು ಈ ಕಾರಣದಿಂದ ಡೇಟಾ ಹೆಚ್ಚು ಇದ್ದಾಗ ಮತ್ತು |
09:00 | * ಯೂಸರ್ ನಿಗೆ, ಡೇಟಾದಲ್ಲಿ ಇರುವುದನ್ನು URL ನಲ್ಲಿ ತೋರಿಸುವುದು ಬೇಡವಾಗಿದ್ದರೆ ಇಂತಹ ಸಂದರ್ಭಗಳಲ್ಲಿ ಬಳಸಲಾಗುವುದು. |
09:06 | ಉದಾ: ಪಾಸ್ವರ್ಡ್ಸ್. |
09:08 | ಸಂಕ್ಷಿಪ್ತವಾಗಿ, |
09:10 | ಈ‘ಟ್ಯುಟೋರಿಯಲ್’ನಲ್ಲಿ ನಾವು - |
09:12 | * ‘JSP’ ಯನ್ನು ಬಳಸಿ ಒಂದು ಸರಳವಾದ ‘ಲಾಗ್-ಇನ್ ಫಾರ್ಮ್’ ಅನ್ನು ತಯಾರಿಸಲು, |
09:16 | * ‘doGet’ ಮೆಥಡ್ ಅನ್ನು ಬಳಸಿ ಪ್ಯಾರಾಮೀಟರ್ ಗಳನ್ನು ರವಾನಿಸಲು (‘ಪಾಸ್’ ಮಾಡಲು), |
09:19 | * ‘doPost’ ಮೆಥಡ್ ಅನ್ನು ಬಳಸಿ ಪ್ಯಾರಾಮೀಟರ್ ಗಳನ್ನು ರವಾನಿಸಲು (‘ಪಾಸ್’ ಮಾಡಲು) ಮತ್ತು |
09:22 | * doGet ಹಾಗೂ doPost ಮೆಥಡ್ ಗಳ ನಡುವಿನ ವ್ಯತ್ಯಾಸ ಇತ್ಯಾದಿಗಳನ್ನು ಕಲಿತಿದ್ದೇವೆ. |
09:26 | ಇನ್ನಷ್ಟು ಮುಂದುವರಿಯುವ ಮೊದಲು ನೀವು ಈ ಟ್ಯುಟೋರಿಯಲ್ ಅನ್ನು ಪೂರ್ಣಗೊಳಿಸಿರುವುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. |
09:32 | ಈ ಕೆಳಗಿನ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
09:35 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
09:38 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:42 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: |
09:45 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:48 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:52 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
contact@spoken-tutorial.org |
09:58 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
10:02 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
10:09 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
10:19 | ಒಂದು ಪ್ರಮುಖ ಸಾಫ್ಟ್ವೇರ್ MNC, ತಮ್ಮ Corporate Social Responsibility programme ನ ಮೂಲಕ ಈ Library Management System ಅನ್ನು ಕೊಡುಗೆಯಾಗಿ ನೀಡಿದ್ದಾರೆ. |
10:28 | ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ ಅವರು ವಿಷಯವನ್ನು ಸಹ ಮೌಲ್ಯಾಂಕಿತಗೊಳಿಸಿದ್ದಾರೆ (validated). |
10:32 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ
ವಂದನೆಗಳು. |