PERL/C2/while-do-while-loops/Kannada
From Script | Spoken-Tutorial
Revision as of 17:40, 23 September 2015 by Sandhya.np14 (Talk | contribs)
Time | Narration |
00:01 | Perl ನಲ್ಲಿ while and do-while loops ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು - |
00:09 | * Perl ನಲ್ಲಿ ‘while’ ಲೂಪ್ |
00:11 | * ‘Perl ನಲ್ಲಿ do-while' ಲೂಪ್ ಇವುಗಳ ಬಗ್ಗೆ ಕಲಿಯುವೆವು. |
00:12 | ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಬಳಸುತ್ತಿದ್ದೇನೆ. |
00:20 | ನಾನು gedit Text Editor (ಜಿ-ಎಡಿಟ್ ಟೆಕ್ಸ್ಟ್ ಎಡಿಟರ್) ಅನ್ನು ಸಹ ಬಳಸುತ್ತಿರುವೆನು. |
00:24 | ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು. |
00:28 | ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್ಸ್’ ಮತ್ತು ‘ಕಾಮೆಂಟ್ಸ್ ಗಳ’ ಬಗ್ಗೆ ತಿಳಿದಿರುವುದು ಅವಶ್ಯಕ. |
00:33 | ‘ಪರ್ಲ್’ ನಲ್ಲಿ 'for' ಹಾಗೂ 'foreach' ಲೂಪ್ ಗಳ ಬಗ್ಗೆ ತಿಳಿದಿರುವುದು ಹೆಚ್ಚು ಉಪಯುಕ್ತವಾಗಿದೆ. |
00:38 | ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು, ದಯವಿಟ್ಟು spoken tutorial ವೆಬ್ಸೈಟ್ ಮೇಲೆ ನೋಡಿ. |
00:43 | Perl (ಪರ್ಲ್) ನಲ್ಲಿ while ಲೂಪ್: |
00:45 | ‘while ಲೂಪ್’, ‘ಕಂಡಿಶನ್’ True ಇದ್ದಾಗ, ಕೋಡ್ ನ ಒಂದು ಭಾಗವನ್ನು ಎಕ್ಸಿಕ್ಯೂಟ್ ಮಾಡುತ್ತದೆ. |
00:50 | ‘while ಲೂಪ್’ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ. |
00:53 | while ಸ್ಪೇಸ್ ಓಪನ್ ಬ್ರಾಕೆಟ್ ‘ಕಂಡಿಶನ್’ ಕ್ಲೋಸ್ ಬ್ರಾಕೆಟ್ |
00:58 | ಓಪನ್ ಕರ್ಲಿ ಬ್ರಾಕೆಟ್ |
01:00 | ‘ಕಂಡಿಶನ್’ True ಇದ್ದಾಗ ಮಾತ್ರ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್ ನ ಭಾಗ |
01:04 | ಕ್ಲೋಸ್ (ಮುಚ್ಚಿ) ಕರ್ಲಿ ಬ್ರಾಕೆಟ್. |
01:07 | ಹೀಗಾಗಿ, ಆ ‘ಕಂಡಿಶನ್’, ಪೂರೈಸದಿದ್ದರೆ ಏನಾಗುತ್ತದೆ? ಆಗ while ಲೂಪ್, ಒಳಗಿರುವ ಕೋಡನ್ನು ಒಂದು ಬಾರಿಯೂ ಎಕ್ಸಿಕ್ಯೂಟ್ ಮಾಡದೇ ನಿರ್ಗಮಿಸುವುದು. |
01:16 | ಈಗ ನಾವು ‘while ಲೂಪ್’ ನ ಒಂದು ಉದಾಹರಣೆಯನ್ನು ನೋಡೋಣ. |
01:19 | ‘ಟರ್ಮಿನಲ್’ ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ: |
01:22 | gedit whileLoop ಡಾಟ್ pl ಸ್ಪೇಸ್ ಆಂಪರ್ಸಂಡ್ |
01:29 | ಮತ್ತು Enter ಅನ್ನು ಒತ್ತಿ. |
01:31 | ಇದು 'gedit’ ನಲ್ಲಿ, 'whileLoop.pl' ಎಂಬ ಫೈಲನ್ನು ಓಪನ್ ಮಾಡುವುದು. |
01:34 | ಈಗ, ಈ ಕೆಳಗಿನ ಕೋಡನ್ನು ಟೈಪ್ ಮಾಡಿ: |
01:37 | ಹ್ಯಾಶ್ ಎಕ್ಸ್ಕ್ಲಮೇಶನ್ ಮಾರ್ಕ್ ಸ್ಲ್ಯಾಶ್ u s r ಸ್ಲ್ಯಾಶ್ bin ಸ್ಲ್ಯಾಶ್ perl. |
01:45 | Enter ಅನ್ನು ಒತ್ತಿ. |
01:47 | ಡಾಲರ್ ‘i’ ($i) ಇಕ್ವಲ್ ಟು ಝೀರೊ ಸೆಮಿಕೋಲನ್ |
01:52 | Enter ಅನ್ನು ಒತ್ತಿ. |
01:54 | while ಓಪನ್ ಬ್ರಾಕೆಟ್ ಡಾಲರ್ ‘i’ ಲೆಸ್ ದ್ಯಾನ್ ಆರ್ ಇಕ್ವಲ್ ಟು ಫೋರ್ ಕ್ಲೋಸ್ ಬ್ರಾಕೆಟ್ ಸ್ಪೇಸ್ |
02:04 | ಓಪನ್ ಕರ್ಲಿ ಬ್ರಾಕೆಟ್ Enter ಅನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ. |
02:08 | print ಸ್ಪೇಸ್ ಡಬಲ್ ಕೋಟ್ಸ್ Value of i ಕೋಲನ್ ಡಾಲರ್ i ಬ್ಯಾಕ್-ಸ್ಲ್ಯಾಶ್ n ಡಬಲ್ ಕೋಟ್ಸ್ ಕಂಪ್ಲೀಟ್ ಸೆಮಿಕೋಲನ್. |
02:20 | Enter ಅನ್ನು ಒತ್ತಿ. |
02:22 | ಡಾಲರ್ ‘i’ ಪ್ಲಸ್ ಪ್ಲಸ್ ಸೆಮಿಕೋಲನ್ |
02:27 | Enter ಅನ್ನು ಒತ್ತಿ ಮತ್ತು |
02:28 | ಕರ್ಲಿ ಬ್ರಾಕೆಟ್ ಅನ್ನು ಮುಚ್ಚಿ. |
02:31 | ‘while' ಲೂಪನ್ನು ನಾನು ವಿಸ್ತಾರವಾಗಿ ವಿವರಿಸುತ್ತೇನೆ. |
02:33 | ನಾವು ವೇರಿಯೆಬಲ್ 'i' ಅನ್ನು ಸೊನ್ನೆಯಿಂದ ಆರಂಭಿಸುತ್ತೇವೆ. |
02:38 | ಈಗ, ನಾವು ‘while ಲೂಪ್’ ಗಾಗಿ ‘$i <= 4’ (ಡಾಲರ್ i ಲೆಸ್ ದ್ಯಾನ್ ಆರ್ ಇಕ್ವಲ್ ಟು 4) ಎಂದು ಕಂಡಿಶನ್ ಅನ್ನು ನಿಗದಿಪಡಿಸಿದ್ದೇವೆ. |
02:46 | ಒಂದುವೇಳೆ ಕಂಡಿಶನ್ true ಆಗಿದ್ದರೆ, ‘while ಲೂಪ್’ ನ ಒಳಗೆ ಇರುವ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ. |
02:52 | ಎಂದರೆ, ಮೊದಲನೆಯ ಸಲ ನಮ್ಮ ‘while ಲೂಪ್’, ‘ಟರ್ಮಿನಲ್’ನ ಮೇಲೆ “Value of i: 0” ಎಂದು ಪ್ರಿಂಟ್ ಮಾಡುವುದು. |
03:01 | ಆಮೇಲೆ ‘$i++’, ವೇರಿಯೆಬಲ್ ‘i’ ದ ವ್ಯಾಲ್ಯು ಅನ್ನು ಒಂದರಿಂದ ಹೆಚ್ಚಿಸುವುದು. |
03:08 | ಈಗ ಮತ್ತೊಮ್ಮೆ, ಲೂಪ್ ಕಂಡಿಶನ್ $i<=4 ಪರೀಕ್ಷಿಸಲ್ಪಡುವುದು. |
03:16 | ಮತ್ತು ‘i’ ದ ವ್ಯಾಲ್ಯು 5 (ಐದು) ಆದ ತಕ್ಷಣ ಲೂಪ್ ನಿರ್ಗಮಿಸುವುದು. |
03:22 | ಈ ಸಂದರ್ಭದಲ್ಲಿ, ‘i’ = 0, 1, 2, 3 ಮತ್ತು 4 ಇದ್ದಾಗ ‘while ಲೂಪ್’, ಎಕ್ಸಿಕ್ಯೂಟ್ ಮಾಡಲ್ಪಡುವುದು. |
03:32 | ಫೈಲನ್ನು ಸೇವ್ ಮಾಡಲು 'Ctrl+s' ಅನ್ನು ಒತ್ತಿ. |
03:35 | ಈಗ ‘ಟರ್ಮಿನಲ್’ಗೆ ಬದಲಾಯಿಸಿ. |
03:37 | ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಗಳಿಗಾಗಿ ಪರೀಕ್ಷಿಸಲು ಹೀಗೆ ಟೈಪ್ ಮಾಡಿ: |
03:42 | “perl ಹೈಫನ್ c whileLoop ಡಾಟ್ pl” |
03:47 | ಮತ್ತು Enter ಅನ್ನು ಒತ್ತಿ. |
03:49 | ‘ಟರ್ಮಿನಲ್’ ನ ಮೇಲೆ ಈ ಕೆಳಗಿನ ಸಾಲು ಪ್ರದರ್ಶಿಸಲ್ಪಡುವುದು. |
03:52 | whileLoop.pl syntax OK |
03:56 | ಇಲ್ಲಿ, ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಇಲ್ಲದೇ ಇರುವುದರಿಂದ, ನಾವು Perl ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡುವೆವು. ಇದಕ್ಕಾಗಿ, ಹೀಗೆ ಟೈಪ್ ಮಾಡಿ: |
04:02 | “perl whileLoop ಡಾಟ್ pl” |
04:06 | ಮತ್ತು Enter ಅನ್ನು ಒತ್ತಿ. |
04:09 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು. |
04:14 | ಈಗ, ನಾವು ‘do-while loop’ ಅನ್ನು ನೋಡೋಣ. |
04:20 | ಯಾವಾಗಲೂ ‘do..while’ ಸ್ಟೇಟ್ಮೆಂಟ್, ಕೋಡ್ ನ ಭಾಗವನ್ನು ಒಂದುಸಲವಾದರೂ ಎಕ್ಸಿಕ್ಯೂಟ್ ಮಾಡುವುದು. |
04:25 | ನಂತರ ಅದು ಕಂಡಿಶನ್ ಅನ್ನು ಪರೀಕ್ಷಿಸುವುದು ಮತ್ತು ಕಂಡಿಶನ್ ನಿಜವಾಗಿದ್ದಾಗ ಲೂಪನ್ನು ಪುನರಾವರ್ತಿಸುವುದು. |
04:30 | ‘do-while’ ಲೂಪ್ ಗಾಗಿ ಸಿಂಟ್ಯಾಕ್ಸ್, ಈ ಕೆಳಗಿನಂತಿದೆ. |
04:34 | ‘do’ ಸ್ಪೇಸ್ |
04:36 | ಓಪನ್ ಕರ್ಲಿ ಬ್ರಾಕೆಟ್ |
04:38 | ಕಂಡಿಶನ್ true ಇದ್ದಾಗ, ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್ ನ ಭಾಗ |
04:42 | ಕ್ಲೋಸ್ ಕರ್ಲಿ ಬ್ರಾಕೆಟ್ ಆಮೇಲೆ ಸ್ಪೇಸ್ |
04:45 | while ಸ್ಪೇಸ್ ಬ್ರಾಕೆಟ್ಸ್ ನ ಒಳಗೆ ‘ಕಂಡಿಶನ್’ ಮತ್ತು ನಂತರ ಸೆಮಿಕೋಲನ್. |
04:50 | ‘ಟರ್ಮಿನಲ್’ಅನ್ನು ಒಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: |
04:54 | ‘gedit doWhileLoop ಡಾಟ್ pl ಸ್ಪೇಸ್ ampersand’ |
05:03 | ಮತ್ತು ಆಮೇಲೆ Enter ಅನ್ನು ಒತ್ತಿ. |
05:05 | ಇದು gedit ನಲ್ಲಿ ‘doWhileLoop.pl’ ಎಂಬ ಫೈಲನ್ನು ಓಪನ್ ಮಾಡುವುದು. |
05:09 | ಈ ಕೆಳಗಿನ ಕೋಡ್ ನ ಭಾಗವನ್ನು ಟೈಪ್ ಮಾಡಿ. |
05:11 | ’ಹ್ಯಾಶ್ ಎಕ್ಸ್ಕ್ಲಾಮೇಶನ್ ಮಾರ್ಕ್ ಸ್ಲ್ಯಾಶ್ u s r ಸ್ಲ್ಯಾಶ್ bin ಸ್ಲ್ಯಾಶ್ perl’. Enter ಅನ್ನು ಒತ್ತಿ. |
05:21 | 'ಡಾಲರ್ i ಇಕ್ವಲ್ ಟು ಝೀರೋ' ಸೆಮಿಕೋಲನ್. Enter ಅನ್ನು ಒತ್ತಿ. |
05:27 | 'do' ಸ್ಪೇಸ್ |
05:29 | ಓಪನ್ ಕರ್ಲಿ ಬ್ರಾಕೆಟ್ Enter ಒತ್ತಿ ಹೀಗೆ ಟೈಪ್ ಮಾಡಿ: |
05:33 | ‘print ಸ್ಪೇಸ್ ಡಬಲ್ ಕೋಟ್ಸ್ Value of i ಕೋಲನ್ < ಸ್ಪೇಸ್ > ಡಾಲರ್ i ಬ್ಯಾಕ್-ಸ್ಲ್ಯಾಶ್ n' ಡಬಲ್ ಕೋಟ್ಸ್ ಕಂಪ್ಲೀಟ್ ಸೆಮಿಕೋಲನ್. |
05:46 | Enter ಅನ್ನು ಒತ್ತಿ. |
05:48 | ಡಾಲರ್ i ಪ್ಲಸ್ ಪ್ಲಸ್ ಸೆಮಿಕೋಲನ್. |
05:52 | Enter ಅನ್ನು ಒತ್ತಿ. |
05:54 | ಕ್ಲೋಸ್ ಕರ್ಲಿ ಬ್ರಾಕೆಟ್ |
05:56 | ಸ್ಪೇಸ್ while ಸ್ಪೇಸ್ ಓಪನ್ ಬ್ರಾಕೆಟ್ ಡಾಲರ್ i ಲೆಸ್ ದ್ಯಾನ್ ಆರ್ ಇಕ್ವಲ್ ಟು ಫೋರ್ ($i<=4) |
06:06 | ಕ್ಲೋಸ್ ಬ್ರಾಕೆಟ್ ಸೆಮಿಕೋಲನ್. |
06:10 | ಇಲ್ಲಿ, 'do-while' ಲೂಪ್ ನ ವಿಸ್ತಾರವಾದ ವಿವರಣೆ ಹೀಗಿದೆ. |
06:13 | ನಾವು ವೇರಿಯೆಬಲ್ ‘i’ ಅನ್ನು ಸೊನ್ನೆಯಿಂದ ಆರಂಭಿಸುತ್ತೇವೆ. |
06:18 | ಮೊದಲನೆಯ ಬಾರಿ ‘do-while’ ಲೂಪ್, ‘ಕಂಡಿಶನ್’ಗಾಗಿ ಪರೀಕ್ಷಿಸದೇ ‘ಟರ್ಮಿನಲ್’ನ ಮೇಲೆ ಔಟ್ಪುಟ್ ಅನ್ನು 'Value of i ಕೋಲನ್ 0' ಎಂದು ಪ್ರಿಂಟ್ ಮಾಡುವುದು. |
06:28 | ಪ್ರತಿಯೊಂದು ಬಾರಿ ಲೂಪ್ ಅನ್ನು ಎಕ್ಸಿಕ್ಯೂಟ್ ಮಾಡಿದಾಗ, ‘$i++’ (ಡಾಲರ್ i ಪ್ಲಸ್ ಪ್ಲಸ್), ವೇರಿಯೆಬಲ್ ‘i’ ನ ವ್ಯಾಲ್ಯೂ ಅನ್ನು ಒಂದರಿಂದ ಹೆಚ್ಚಿಸುವುದು. |
06:36 | ಎರಡನೆಯ ಬಾರಿ, ಕಂಡಿಶನ್ ‘ಡಾಲರ್ i ಲೆಸ್ ದ್ಯಾನ್ ಆರ್ ಇಕ್ವಲ್ ಟು ಫೋರ್’ ಅನ್ನು ($i<=4) ಪರೀಕ್ಷಿಸಲಾಗುವುದು. |
06:43 | ಒಂದುವೇಳೆ ‘ಕಂಡಿಶನ್’ True ಆಗಿದ್ದರೆ, ಲೂಪ್ ಅನ್ನು ಮತ್ತೊಮ್ಮೆ ಎಕ್ಸಿಕ್ಯೂಟ್ ಮಾಡಲಾಗುವುದು. |
06:48 | ಈ ಸಂದರ್ಭದಲ್ಲಿ, ಎರಡನೆಯ ಬಾರಿ ‘ಟರ್ಮಿನಲ್’ನ ಮೇಲೆ ತೋರಿಸಲಾದ ಔಟ್ಪುಟ್, 'Value of i ಕೋಲನ್ 1' ಎಂದು ಆಗಿರುವುದು. |
06:57 | ‘ಕಂಡಿಶನ್’ False ಆಗುವವರೆಗೆ, ಎಂದರೆ 'i' = 5 ಆಗುವವರೆಗೆ ಲೂಪ್, ಎಕ್ಸಿಕ್ಯೂಟ್ ಮಾಡಲ್ಪಡುವುದು. |
07:05 | ಫೈಲನ್ನು ಸೇವ್ ಮಾಡಲು 'Ctrl+s' ಒತ್ತಿ. |
07:09 | ಈಗ ‘ಟರ್ಮಿನಲ್’ ಗೆ ಬದಲಾಯಿಸಿ. ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಗಳು ಇರುವುದನ್ನು ಪರೀಕ್ಷಿಸಲು ಹೀಗೆ ಟೈಪ್ ಮಾಡಿ. |
07:16 | 'perl ಹೈಫನ್ c doWhileLoop ಡಾಟ್ pl' |
07:21 | ಮತ್ತು Enter ಅನ್ನು ಒತ್ತಿ. |
07:23 | ‘ಟರ್ಮಿನಲ್’ ನ ಮೇಲೆ, ಈ ಕೆಳಗಿನ ಸಾಲನ್ನು ಪ್ರದರ್ಶಿಸಲಾಗುವುದು: |
07:26 | “doWhileLoop.pl syntax OK” |
07:30 | ಇಲ್ಲಿ ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಇಲ್ಲದೇ ಇರುವುದರಿಂದ, ಈಗ ನಾವು Perl ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡುವೆವು. |
07:36 | ಹೀಗೆ ಟೈಪ್ ಮಾಡಿ: ‘perl doWhileLoop ಡಾಟ್ pl’ |
07:41 | ಮತ್ತು Enter ಅನ್ನು ಒತ್ತಿ. |
07:43 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು. |
07:48 | ಈಗ, ‘while’ ಹಾಗೂ ‘do-while’ ಲೂಪ್ ಗಳ ನಡುವಿನ ನಿಜವಾದ ವ್ಯತ್ಯಾಸವನ್ನು ನಾವು ನೋಡೋಣ. |
07:53 | ‘ಟರ್ಮಿನಲ್’ನ ಮೇಲೆ ಹೀಗೆ ಟೈಪ್ ಮಾಡಿ. |
07:55 | 'gedit loop ಡಾಟ್ pl ಸ್ಪೇಸ್ ಆಂಪರ್ಸಂಡ್' |
08:01 | ಮತ್ತು Enter ಅನ್ನು ಒತ್ತಿ. |
08:03 | ಇದು, 'gedit' ನಲ್ಲಿ 'loop ಡಾಟ್ pl' ಎಂಬ ಫೈಲನ್ನು ಓಪನ್ ಮಾಡುವುದು. |
08:07 | ಈಗ, ಇಲ್ಲಿ ತೋರಿಸಿದ ಕೋಡ್ ನ ಭಾಗವನ್ನು ಟೈಪ್ ಮಾಡಿ. |
08:12 | ನಾವು ‘count’ ಎಂಬ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ ಅದನ್ನು ಸೊನ್ನೆಗೆ ಇನಿಶಿಯಲೈಸ್ ಮಾಡಿದ್ದೇವೆ (ಸೊನ್ನೆಯಿಂದ ಅರಂಭಿಸುತ್ತೇವೆ). |
08:19 | ‘while’ ಲೂಪ್ ನ ಕಂಡಿಶನ್ ನಲ್ಲಿ, ‘count’ ಎಂಬ ವೇರಿಯೆಬಲ್, ಸೊನ್ನೆಗಿಂತ ಹೆಚ್ಚಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸುತ್ತಿದ್ದೇವೆ. |
08:29 | ಕಂಡಿಶನ್, TRUE ಆಗಿಲ್ಲ. ಹೀಗಾಗಿ, ‘while’ ಲೂಪ್ ನ ಕೋಡ್ಅನ್ನು ಒಂದುಸಲವೂ ಎಕ್ಸಿಕ್ಯೂಟ್ ಮಾಡಲಾಗುವುದಿಲ್ಲ. |
08:36 | ‘do...while’ ಲೂಪ್ ನಲ್ಲಿ, ನಾವು ಮೊದಲು ಕೋಡನ್ನು ಎಕ್ಸಿಕ್ಯೂಟ್ ಮಾಡುತ್ತಿದ್ದೇವೆ ಮತ್ತು ಆನಂತರ ಕಂಡಿಶನ್ ಅನ್ನು ಪರೀಕ್ಷಿಸುತ್ತಿದ್ದೇವೆ. |
08:44 | ಹೀಗಾಗಿ, ಕೋಡ್, ಒಮ್ಮೆಯಾದರೂ ಎಕ್ಸಿಕ್ಯೂಟ್ ಮಾಡಲ್ಪಡುವುದು. |
08:49 | ಆಮೇಲೆ, count ಎಂಬ ವೇರಿಯೇಬಲ್, ಸೊನ್ನೆಗಿಂತ ದೊಡ್ಡದಾಗಿದೆಯೇ ಎಂಬ ಕಂಡಿಶನ್ ಅನ್ನು ಪರೀಕ್ಷಿಸಲಾಗುತ್ತದೆ. |
08:57 | ಕಂಡಿಶನ್ True ಆಗಿಲ್ಲ. ಹೀಗಾಗಿ, ಲೂಪ್ ನಿರ್ಗಮಿಸುವುದು. |
09:02 | ಈಗ, ಫೈಲನ್ನು ಸೇವ್ ಮಾಡಲು 'Ctrl+s' ಒತ್ತಿ. |
09:05 | ಈಗ, ‘ಟರ್ಮಿನಲ್’ ಗೆ ಬದಲಾಯಿಸಿ ಮತ್ತು ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಗಳು ಇರುವುದನ್ನು ಪರೀಕ್ಷಿಸಲು ಹೀಗೆ ಟೈಪ್ ಮಾಡಿ. |
09:12 | 'perl ಹೈಫನ್ c loop ಡಾಟ್ pl' |
09:16 | ಮತ್ತು Enter ಅನ್ನು ಒತ್ತಿ. |
09:19 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಸಾಲನ್ನು ತೋರಿಸಲಾಗುವುದು. |
09:22 | “loop ಡಾಟ್ pl syntax OK” |
09:26 | ಇಲ್ಲಿ, ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಇಲ್ಲದೇ ಇರುವುದರಿಂದ, ನಾವು Perl ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
09:31 | ಹೀಗೆ ಟೈಪ್ ಮಾಡಿ: 'perl loop ಡಾಟ್ pl' |
09:36 | ಮತ್ತು Enter ಅನ್ನು ಒತ್ತಿ. |
09:38 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು. |
09:43 | “I am in do-while loop” |
09:46 | ಇಲ್ಲಿ, 'I am in while loop' ಎಂದು ತೋರಿಸುವ ಔಟ್ಪುಟ್ ಮೆಸೇಜ್ ಇಲ್ಲದಿರುವುದನ್ನು ನಾವು ನೋಡಬಹುದು. |
09:52 | ನಾವು ‘while’ ಲೂಪ್ ನಲ್ಲಿ ಈ ಮೆಸೇಜ್ಅನ್ನು ಪ್ರಿಂಟ್ ಮಾಡಿದ್ದೆವು. |
09:59 | ಇದರಿಂದ ತಿಳಿಯುವುದು ಏನೆಂದರೆ, |
10:01 | ‘do-while’ ಲೂಪ್, ಕಂಡಿಶನ್ ಅನ್ನು ಪರೀಕ್ಷಿಸುವ ಮೊದಲು ಒಮ್ಮೆಯಾದರೂ ಎಕ್ಸಿಕ್ಯೂಟ್ ಮಾಡುತ್ತದೆ. |
10:07 | ಆದರೆ, ನಿಗದಿಪಡಿಸಿದ ಕಂಡಿಶನ್ False ಎಂದು ಇದ್ದಾಗ, ‘while’ ಲೂಪ್, ಒಂದು ಸಲವೂ ಎಕ್ಸಿಕ್ಯೂಟ್ ಮಾಡಲ್ಪಡುವದಿಲ್ಲ. |
10:15 | ಈಗ ನಿಮಗೆ ಈ ವ್ಯತ್ಯಾಸವು ತಿಳಿದಿದೆ ಎಂದು ಆಶಿಸುತ್ತೇನೆ. |
10:18 | ಇದು ‘while’ ಹಾಗೂ ‘do-while’ ಲೂಪ್ ಗಳ ಕುರಿತು ಆಗಿತ್ತು. |
10:22 | ಸಂಕ್ಷಿಪ್ತವಾಗಿ - |
10:24 | ಈ ಟ್ಯುಟೋರಿಯಲ್ ನಲ್ಲಿ ನಾವು, |
10:26 | ಮಾದರಿ ಪ್ರೊಗ್ರಾಂಗಳನ್ನು ಬಳಸಿ, Perl ನಲ್ಲಿ ‘while’ ಲೂಪ್ ಹಾಗೂ ‘do-while’ ಲೂಪ್ ಗಳನ್ನು ಕಲಿತಿದ್ದೇವೆ. |
10:31 | ಇಲ್ಲಿ, ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. |
10:33 | ‘while’ ಹಾಗೂ ‘do-while’ ಲೂಪ್ ಗಳನ್ನು ಬಳಸಿ, ವೇರಿಯೇಬಲ್ ನ ಎಣಿಕೆ 10 (ಹತ್ತು) ಆಗುವವರೆಗೆ 'Hello Perl' ಎಂದು ಪ್ರಿಂಟ್ ಮಾಡಿ. |
10:41 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
10:45 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
10:49 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:53 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
10:56 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
11:00 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
11:04 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
contact@spoken-tutorial.org |
11:12 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
11:17 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
11:24 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
spoken hyphen tutorial dot org slash NMEICT hyphen Intro. |
11:36 | ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. |
11:38 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . |
11:40 | ವಂದನೆಗಳು. |