C-and-Cpp/C3/String-Library-Functions/Kannada

From Script | Spoken-Tutorial
Jump to: navigation, search
Time Narration
00:01 c ಯಲ್ಲಿ ಸ್ಟ್ರಿಂಗ್ ಲೈಬ್ರರಿ ಫಂಕ್ಷನ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ಸ್ಟ್ರಿಂಗ್ ಲೈಬ್ರರಿ ಫಂಕ್ಷನ್ ಗಳ ಬಗ್ಗೆ ತಿಳಿಯುವೆವು.
00:11 ಇದನ್ನು ನಾವು ಕೆಲವು ಉದಾಹರಣೆಯೊಂದಿಗೆ ಮಾಡೋಣ.
00:15 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.
00:27 ಸ್ಟ್ರಿಂಗ್ ಲೈಬ್ರರಿ ಫಂಕ್ಷನ್ ಗಳನ್ನು ಪೀಠಿಕೆಯೊಂದಿಗೆ ಆರಂಭಿಸೋಣ.
00:31 ಇದು, ಸ್ಟ್ರಿಂಗ್ ಗಳನ್ನುಪಯೋಗಿಸಿ ಕಾರ್ಯ ಸಾಧಿಸಲು ಇರುವ ಫಂಕ್ಷನ್ ಗಳ ಸಮೂಹ.
00:36 ಹಲವಾರು ಸಾಮಾನ್ಯ ಕಾರ್ಯಗಳಾದ, ನಕಲು(copying), ಪೋಣಿಸುವಿಕೆ(concatenation), ಹುಡುಕುವುದು(searching) ಮುಂತಾದವುಗಳನ್ನು ಮಾಡಬಹುದು.
00:44 ಕೆಲವು ಸ್ಟ್ರಿಂಗ್ ಲೈಬ್ರರಿ ಫಂಕ್ಷನ್ ಗಳನ್ನು ನೋಡೋಣ.
00:48 ಇಲ್ಲಿ ನಾವು ಎಸ್ ಟಿ ಆರ್ ಎನ್ ಸಿ ಪಿ ವೈ(strncpy) ಫಂಕ್ಷನ್ ಅನ್ನು ನೋಡೋಣ.
00:52 ಇದರ ಸಿಂಟ್ಯಾಕ್ಸ್ ಹೀಗಿದೆ : strncpy ಕೇರ್(char) ಎಸ್ ಟಿ ಆರ್ ಒನ್(str1) char str2 ಮತ್ತು ಇಂಟ್(int) n
01:02 ಇದು str2 ನ ಮೊದಲ n ಅಕ್ಷರಗಳನ್ನು str1 ಗೆ ನಕಲು ಮಾಡುತ್ತದೆ.
01:09 ಉದಾಹರಣೆಗೆ, char strncpy char ಹಲೋ(hello) char ವರ್ಲ್ಡ್(world) ಕೊಮ ಎರಡು(2)
01:16 ಇದರ ಔಟ್ ಪುಟ್ ಡಬ್ಲು ಒ ಎಲ್ ಎಲ್ ಒ.
01:21 ಇಲ್ಲಿ, ಡಬ್ಲು ಒ ಎಂಬುದು ಸ್ಟ್ರಿಂಗ್ ಟು ಇಂದ ಮತ್ತು ಉಳಿದ ಅಕ್ಷರಗಳು ಸ್ಟ್ರಿಂಗ್ ಒನ್ ಇಂದ ಇವೆ.
01:29 ಈಗ ನಾವು, ಎಸ್ ಟಿ ಆರ್ ಎನ್ ಸಿ ಎಮ್ ಪಿ(strncmp) ಫಂಕ್ಷನ್ ಅನ್ನು ನೋಡೋಣ. ಇದರ ಸಿಂಟ್ಯಾಕ್ಸ್ ಹೀಗಿದೆ, strncmp, char str1, char str2 ಮತ್ತು int n.
01:42 ಇದು, ಸ್ಟ್ರಿಂಗ್ ಟು ವಿನ ಮೊದಲ ಎನ್ ಕ್ಯಾರೆಕ್ಟರ್ ಗಳನ್ನು ಸ್ಟ್ರಿಂಗ್ ಒನ್ ನೊಂದಿಗೆ ಹೋಲಿಸುತ್ತದೆ.
01:48 ಉದಾಹರಣೆಗೆ, int strncmp, char ಐಸ್(ice), char ಐಸ್ಕ್ರೀಮ್ (icecream), ಮತ್ತು ಎರಡು.
01:55 ಇದರ ಔಟ್ ಪುಟ್ ಸೊನ್ನೆ.
01:58 ಈಗ ನಾವು, ಈ ಲೈಬ್ರರಿ ಫಂಕ್ಷನ್ ಗಳನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ.
02:02 ನಾನೀಗ, ಕೆಲವು ಸಾಮಾನ್ಯವಾಗಿ ಉಪಯೋಗಿಸುವ ಸ್ಟ್ರಿಂಗ್ ಫಂಕ್ಷನ್ ಗಳನ್ನು ತೋರಿಸುತ್ತೇನೆ.
02:07 ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ.
02:10 ಅದನ್ನು ಒಪನ್ ಮಾಡುತ್ತೇನೆ.
02:12 ಇಲ್ಲಿ ಸ್ಟ್ರಿಂಗ್ ನ ಉದ್ದವನ್ನು ಕಂಡುಹಿಡಿಯಲು ಫಂಕ್ಷನ್ ಅನ್ನು ನೋಡೋಣ.
02:15 ನಮ್ಮ ಫೈಲ್ ನ ಹೆಸರು ಎಸ್ ಟಿ ಆರ್ ಎಲ್ ಇ ಎನ್ ಡಾಟ್ ಸಿ (strlen.c) ಎಂಬುದನ್ನು ಗಮನದಲ್ಲಿಡಿ.
02:20 ಇಲ್ಲಿ, ನಾವು ಸ್ಟ್ರಿಂಗ್ ನ ಉದ್ದವನ್ನು ಕಂಡುಹಿಡಿಯೋಣ.
02:23 ಎಸ್ ಟಿ ಡಿ ಐ ಒ ಡಾಟ್ ಹೆಚ್ ಮತ್ತು ಸ್ಟ್ರಿಂಗ್ ಡಾಟ್ ಹೆಚ್, ಇವು ನಮ್ಮ ಹೆಡರ್ ಫೈಲ್ ಗಳು.
02:29 ಇದು ನಮ್ಮ ಮೈನ್ ಫಂಕ್ಷನ್.
02:31 ಇಲ್ಲಿ ಎ ಆರ್ ಆರ್ (arr) ಎಂದು, ಒಂದು ಕ್ಯಾರೆಕ್ಟರ್ ವೇರಿಯೇಬಲ್ ಇದೆ.
02:35 ಇದು ಅಶ್ವಿನಿ ಎಂದು ಮೌಲ್ಯವನ್ನು ಹೊಂದಿದೆ.
02:38 ಲೆನ್ ಒನ್ ಎಂದು ಒಂದು ಇಂಟಿಜರ್ ವೇರಿಯೇಬಲ್ ಇದೆ.
02:42 ಇಲ್ಲಿ, ಸ್ಟ್ರಿಂಗ್ ನ ಉದ್ದವನ್ನು strlen ಎಂಬ ಫಂಕ್ಷನ್ ಇಂದ ಪಡೆಯಬಹುದು.
02:48 ಇದರ ಫಲಿತಾಂಶವು ಲೆನ್ ಒನ್ (len1) ನಲ್ಲಿ ಇರುತ್ತದೆ.
02:52 ನಂತರ, ನಾವು ಸ್ಟ್ರಿಂಗ್ ಅನ್ನು ಮತ್ತು ಅದರ ಉದ್ದವನ್ನು ಪ್ರಿಂಟ್ ಮಾಡುತ್ತೇವೆ,
02:56 ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
02:59 ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
03:01 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
03:09 ಕಂಪೈಲ್ ಮಾಡಲು, gcc ಸ್ಪೇಸ್ strlen.c (ಎಸ್ ಟಿ ಆರ್ ಎಲ್ ಇ ಎನ್ ಡಾಟ್ ಸಿ) ಸ್ಪೇಸ್ –o (ಹೈಫನ್ ಒ) ಸ್ಪೇಸ್ str1(ಎಸ್ ಟಿ ಆರ್ ಒನ್) ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ.
03:19 ./ str1( ಡಾಟ್ ಸ್ಲ್ಯಾಶ್ ಎಸ್ ಟಿ ಆರ್ ಒನ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
03:24 ಔಟ್ ಪುಟ್ ಹೀಗೆ ತೋರಿಸುತ್ತದೆ,
03:26 string = Ashwini Length = 7(ಸ್ಟ್ರಿಂಗ್ ಈಸ್ ಈಕ್ವಲ್ ಟು ಅಶ್ವಿನಿ ಲೆಂತ್ ಈಸ್ ಈಕ್ವಲ್ ಟು ಸೆವೆನ್)
03:30 ಇಲ್ಲಿ ನೀವು ಎಣಿಸಬಹುದು, ಒಂದು, ಎರಡು, ಮೂರು, ನಾಲ್ಕು, ಐದು, ಆರು ಮತ್ತು ಏಳು.
03:37 ಮತ್ತೊಂದು ಸ್ಟ್ರಿಂಗ್ ಫಂಕ್ಷನ್ ಅನ್ನು ನೋಡೋಣ.
03:40 ಇಲ್ಲಿ, ನಾವು ಸ್ಟ್ರಿಂಗ್ ಅನ್ನು ನಕಲು ಮಾಡಲು ಫಂಕ್ಷನ್ ಅನ್ನು ನೋಡೋಣ.
03:43 ನಮ್ಮ ಫೈಲ್ ನ ಹೆಸರು strcpy.c (ಎಸ್ ಟಿ ಆರ್ ಸಿ ಪಿ ವೈ ಡಾಟ್ ಸಿ) ಎಂಬುದನ್ನು ಗಮನದಲ್ಲಿಡಿ.
03:48 ಇಲ್ಲಿ, ನಾವು ಮೂಲ ಸ್ಟ್ರಿಂಗ್ ಅನ್ನು ಉದ್ದೇಶಿತ ಸ್ಟ್ರಿಂಗ್ ಗೆ ನಕಲು ಮಾಡುತ್ತದೆ.
03:53 ಇಲ್ಲಿ, ಸೋರ್ಸ್ ಸ್ಟ್ರಿಂಗ್ ನಲ್ಲಿ ಐಸ್ ಎಂದಿದೆ, ಇದು ಟಾರ್ಗೆಟ್ ಸ್ಟ್ರಿಂಗ್ ಗೆ ನಕಲು ಆಗುತ್ತದೆ.
03:59 ಇದು ನಮ್ಮ ಎಸ್ ಟಿ ಆರ್ ಸಿ ಪಿ ವೈ ಫಂಕ್ಷನ್.
04:02 ಇಲ್ಲಿ ನಾವು ಸೋರ್ಸ್ ಸ್ಟ್ರಿಂಗ್ ಮತ್ತು ಟಾರ್ಗೆಟ್ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುತ್ತೇವೆ.
04:07 ಇದನ್ನು ಎಕ್ಸಿಕ್ಯೂಟ್ ಮಾಡಿ ನೋಡೋಣ.
04:09 ಟರ್ಮಿನಲ್ ಗೆ ಹಿಂದಿರುಗಿ.
04:11 ಕಂಪೈಲ್ ಮಾಡಲು, gcc ಸ್ಪೇಸ್ strcpy.c(ಎಸ್ ಟಿ ಆರ್ ಸಿ ಪಿ ವೈ ಡಾಟ್ ಸಿ) ಸ್ಪೇಸ್ –o(ಹೈಫನ್ ಒ) ಸ್ಪೇಸ್ str2(ಎಸ್ ಟಿ ಆರ್ ಟು)ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
04:20 (ಡಾಟ್ ಸ್ಲ್ಯಾಶ್) ./ str2 ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
04:24 ಈ ರೀತಿಯಲ್ಲಿ ಔಟ್ ಪುಟ್ ತೋರುತ್ತದೆ,
04:26 source string = Ice (ಸೋರ್ಸ್ ಸ್ಟ್ರಿಂಗ್ ಈಸ್ ಈಕ್ವಲ್ ಟು ಐಸ್)
04:29 target string = Ice (ಟಾರ್ಗೆಟ್ ಸ್ಟ್ರಿಂಗ್ ಈಸ್ ಈಕ್ವಲ್ ಟು ಐಸ್)
04:32 ಈಗ ಮತ್ತೊಂದು ಸ್ಟ್ರಿಂಗ್ ಫಂಕ್ಷನ್ ಅನ್ನು ನೋಡೋಣ.
04:34 ಈಗ ನಾವು ಸ್ಟ್ರಿಂಗ್ ಅನ್ನು ಹೋಲಿಸುವ ಫಂಕ್ಷನ್ ಅನ್ನು ನೋಡೋಣ.
04:37 ನಮ್ಮ ಫೈಲ್ ನ ಹೆಸರು strcmp.c (ಎಸ್ ಟಿ ಆರ್ ಸಿ ಎಮ್ ಪಿ ಡಾಟ್ ಸಿ) ಎಂದು ಗಮನದಲ್ಲಿಡಿ.
04:42 ಇಲ್ಲಿ, ನಾವು ಎರಡು ಸ್ಟ್ರಿಂಗ್ ಗಳನ್ನು ಹೋಲಿಸುತ್ತೇವೆ.
04:46 ಇಲ್ಲಿ, str1 ಮತ್ತು str2 ಎಂದು ಎರಡು ಕ್ಯಾರೆಕ್ಟರ್ ವೇರಿಯೇಬಲ್ ಗಳಿವೆ.
04:52 str1 ನಲ್ಲಿ ಐಸ್ ಎಂದು ಮೌಲ್ಯವಿದೆ, ಮತ್ತು str2 ನಲ್ಲಿ ಕ್ರೀಮ್ ಎಂದಿದೆ.
04:58 ಇಲ್ಲಿ, i ಮತ್ತು j ಎಂದು ಇಂಟಿಜರ್ ವೇರಿಯೇಬಲ್ ಗಳಿವೆ.
05:03 ಇಲ್ಲಿ, ನಾವು strcmp ಎಂಬ ಫಂಕ್ಷನ್ ಉಪಯೋಗಿಸಿ, ಸ್ಟ್ರಿಂಗ್ ಗಳನ್ನು ಹೋಲಿಸುತ್ತೇವೆ.
05:08 ಇಲ್ಲಿ, str1 ಅನ್ನು ಅಂದರೆ ice ಅನ್ನು cream(ಕ್ರೀಮ್) ನೊಂದಿಗೆ ಹೋಲಿಸುತ್ತಿದ್ದೇವೆ.
05:14 ಇದರ ಫಲಿತಾಂಶವನ್ನು i ನಲ್ಲಿ ಇಡುತ್ತೇವೆ.
05:16 ಇಲ್ಲಿ, ಸ್ಟ್ರಿಂಗ್ ಟು ಅನ್ನು ಅಂದರೆ, ಕ್ರೀಮ್ ಅನ್ನು ಕ್ರೀಮ್ ನೊಂದಿಗೆ, ಹೋಲಿಸುತ್ತೇವೆ.
05:23 ಇದರ ಫಲಿತಾಂಶವನ್ನು, j ಯಲ್ಲಿಡುತ್ತೇವೆ.
05:25 ನಂತರ ನಾವು ಎರಡೂ ಫಲಿತಾಂಶವನ್ನು ಪ್ರಿಂಟ್ ಮಾಡುತ್ತೇವೆ,
05:28 ಮತ್ತು, ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
05:31 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
05:33 ನಮ್ಮ ಟರ್ಮಿನಲ್ ಗೆ ಹಿಂದಿರುಗಿ.
05:35 ಕಂಪೈಲ್ ಮಾಡಲು, gcc ಸ್ಪೇಸ್ strcmp.c ಸ್ಪೇಸ್ ಹೈಫನ್ ಒ(-o) ಸ್ಪೇಸ್ str3 ಎಂದು ಟೈಪ್ ಮಾಡಿ.
05:46 Enter ಕೀಯನ್ನು ಒತ್ತಿ.
05:47 (ಡಾಟ್ ಸ್ಲ್ಯಾಶ್) ./ str3 ಟೈಪ್ ಮಾಡಿ.
05:50 1,0 ಎಂದು ಔಟ್ ಪುಟ್ ತೋರಿಸುತ್ತದೆ.
05:54 ಪ್ರೊಗ್ರಾಮ್ ಗೆ ಹಿಂತಿರುಗಿ.
05:56 ಇಲ್ಲಿ ಒಂದು ಮತ್ತು ಇಲ್ಲಿ ಸೊನ್ನೆ ಎಂದು ಪಡೆಯುತ್ತೇವೆ.
06:01 ನಮ್ಮ ಸ್ಲೈಡ್ ಗೆ ಹಿಂತಿರುಗೋಣ.
06:04 ಸಾರಾಂಶ ತಿಳಿಯೋಣ.
06:06 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು :
06:07 ಸ್ಟ್ರಿಂಗ್ ಲೈಬ್ರರಿ ಫಂಕ್ಷನ್ ಗಳು
06:09 strlen(ಎಸ್ ಟಿ ಆರ್ ಎಲ್ ಇ ಎನ್)
06:11 strcpy(ಎಸ್ ಟಿ ಆರ್ ಸಿ ಪಿ ವೈ)
06:13 strcmp(ಎಸ್ ಟಿ ಆರ್ ಸಿ ಎಮ್ ಪಿ)
06:14 strncpy(ಎಸ್ ಟಿ ಆರ್ ಎನ್ ಸಿ ಪಿ ವೈ)
06:16 ಮತ್ತು strncmp(ಎಸ್ ಟಿ ಆರ್ ಎನ್ ಸಿ ಎಮ್ ಪಿ)
06:19 ಸ್ಟ್ರಿಂಗ್ ಬೆಸ್ಟ್(best) ಅನ್ನು ಸ್ಟ್ರಿಂಗ್ ಬಸ್(bus) ಜೊತೆಗೆ ಜೋಡಿಸಲು ಒಂದು ಸಿ ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ.
06:25 ಸಲಹೆ: strcat (ಎಸ್ ಟಿ ಆರ್ ಸಿ ಎ ಟಿ )char str1(ಕ್ಯಾರ್ ಎಸ್ ಟಿ ಆರ್ ಒನ್) char str2(ಕ್ಯಾರ್ ಎಸ್ ಟಿ ಆರ್ ಟು)
06:32 ಮತ್ತು, ಸ್ಟ್ರಿಂಗ್ ಲೈಬ್ರರಿ ಯ ಇನ್ನಿತರ ಫಂಕ್ಷನ್ ಗಳನ್ನು ಉಪಯೋಗಿಸಲು ಪ್ರಯತ್ನಿಸಿ.
06:36 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
06:39 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
06:42 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
06:46 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
06:52 ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
06:56 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
07:03 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
07:08 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
07:15 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
07:20 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
07:24 ಧನ್ಯವಾದಗಳು.

Contributors and Content Editors

Chetana, PoojaMoolya, Vasudeva ahitanal